ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ
ಇದೀಗ ಸುದ್ದಿಯಲ್ಲಿದೆ:
ಭಾರತದ 53 ನಗರಗಳ ಪೈಕಿ, ಬೆಂಗಳೂರು 30.3% ಅಪಘಾತಗಳ ಹೆಚ್ಚಳದೊಂದಿಗೆ, ರಾಂಚಿ (50.3%), ವಾರಾಣಸಿ (46.3%) ಮತ್ತು ಪುಣೆ (35%) ನಗರಗಳ ನಂತರ ಅಗ್ರ ಐದು ನಗರಗಳಲ್ಲಿ ಸ್ಥಾನ ಪಡೆದಿದೆ.
ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರದ ಉಪಕ್ರಮಗಳು:
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರ ಕಾಯ್ದೆ, 2017:- ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಮತ್ತು ಮೀಸಲಾದ ರಸ್ತೆ ಸುರಕ್ಷತಾ ನಿಧಿಯನ್ನು ನಿರ್ವಹಿಸಲು ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಿತು.
ಸೇವ್‌ಲೈಫ್ ಫೌಂಡೇಶನ್‌ನೊಂದಿಗೆ ಪಾಲುದಾರಿಕೆ ಹೊಂದಲು ತಿಳಿವಳಿಕೆ ಒಪ್ಪಂದಕ್ಕೇ ಸಹಿ ಹಾಕಲಾಗಿದೆ:-
ಹೆಚ್ಚಿನ ಸಾವಿನ ಪ್ರಮಾಣವಿರುವ ಜಿಲ್ಲೆಗಳಲ್ಲಿ “ಶೂನ್ಯ ಮರಣ ಜಿಲ್ಲೆ” (ZFD) ಕಾರ್ಯಕ್ರಮ ಸೇರಿದಂತೆ ದತ್ತಾಂಶ ಆಧಾರಿತ ಮಧ್ಯಸ್ಥಿಕೆಗಳನ್ನು ಕಾರ್ಯಗತಗೊಳಿಸಲು. ಈ ಸಹಯೋಗವು ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ದಿಷ್ಟ ಎಂಜಿನಿಯರಿಂಗ್ ಮತ್ತು ಜಾರಿ ಕ್ರಮಗಳ ಮೂಲಕ ಸಾವುನೋವುಗಳಲ್ಲಿ ಗಮನಾರ್ಹ ಕಡಿತಕ್ಕೆ ಕೊಡುಗೆ ನೀಡಿದೆ.
“ನಮ್ಮ ರಸ್ತೆ ನಮ್ಮ ಸುರಕ್ಷಿತೆ” ಸೇಫ್-ಎ-ಥಾನ್:-
ಜೀವ ಉಳಿಸುವ ಅಭ್ಯಾಸಗಳು ಮತ್ತು ಸಾಮಾನ್ಯ ರಸ್ತೆ ಸುರಕ್ಷತಾ ಜಾಗೃತಿಯನ್ನು ಉತ್ತೇಜಿಸಲು ಸಾರಿಗೆ ಇಲಾಖೆಯು ವಾಕಥಾನ್‌ಗಳು, ಮ್ಯಾರಥಾನ್‌ಗಳು ಮತ್ತು ಸೈಕ್ಲೋಥಾನ್‌ಗಳಂತಹ ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
“ಕ್ಯಾಚ್ ದಿ ಯೂತ್” ಕಾರ್ಯಕ್ರಮ:-ಟ್ರಾಫಿಕ್ ವಾರ್ಡನ್ ಸಂಸ್ಥೆಯು ರಸ್ತೆ ಸುರಕ್ಷತೆ ಕುರಿತು ಯುವಕರಿಗೆ ಶಿಕ್ಷಣ ನೀಡಲು ಮತ್ತು ಅತಿವೇಗ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವಂತಹ ಉದ್ದೇಶಪೂರ್ವಕ ನಿಯಮ ಉಲ್ಲಂಘನೆಗಳನ್ನು ತಡೆಯಲು ಕಾಲೇಜುಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.
ಕೋಬ್ರಾ ಗಸ್ತು ವಾಹನಗಳು:-ಬೆಂಗಳೂರು ಸಂಚಾರಿ ಪೊಲೀಸರು 24/7 ಗಸ್ತು ತಿರುಗಲು ಮತ್ತು ಅಪಘಾತಗಳು, ಸಂಚಾರ ಸ್ಥಗಿತಗಳು ಮತ್ತು ಇತರ ಸಂಚಾರ ಸಮಸ್ಯೆಗಳಿಗೆ ಮೊದಲ ಪ್ರತಿಕ್ರಿಯೆ ನೀಡಲು ಮೋಟಾರ್‌ಬೈಕ್‌ಗಳನ್ನು ನಿಯೋಜಿಸಿದೆ, ಇದನ್ನು ನಿಯಂತ್ರಣ ಕೊಠಡಿಯ ಮೂಲಕ ಸಂಯೋಜಿಸಲಾಗುತ್ತದೆ.
ಪದ್ಮವಿಭೂಷಣ ಪಂಡಿತ ಚನ್ನುಲಾಲ್ ಮಿಶ್ರಾ ಜಿ ಅವರ ನಿಧನದಿಂದ ಪ್ರಧಾನಮಂತ್ರಿ ಅವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ .
ಪಂಡಿತ ಚನ್ನುಲಾಲ್ ಮಿಶ್ರಾ (1936–2025) ಅವರ ಕುರಿತು:
ಜನನ: ಆಗಸ್ಟ್ 3, 1936 ರಂದು ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಜನಿಸಿದರು.
ಅವರು ಪ್ರಸಿದ್ಧ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರು.
ಖಯಾಲ್, ಕಿರಾಣಾ ಘರಾನಾ, ಥುಮ್ರಿ, ದಾದ್ರಾ ಮತ್ತು ಭಜನೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
ಪ್ರಮುಖ ಗೌರವಗಳು: ಪದ್ಮಭೂಷಣ (2010), ಪದ್ಮವಿಭೂಷಣ (2020), ಸಂಗೀತ ನಾಟಕ ಅಕಾಡೆಮಿ ಶಿಷ್ಯವೇತನ (ಫೆಲೋಶಿಪ್).
ಪರಂಪರೆ: ಅವರು ರಿಯಾಜ್‌ನಲ್ಲಿ ಕಠಿಣ ಶಿಸ್ತು ಮತ್ತು ನಿಖರತೆಗೆ ಆಳವಾದ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS)
ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಇತ್ತೀಚೆಗೆ, ಪೋಲೆಂಡ್ €4.7 ಬಿಲಿಯನ್ ಯುರೋ ಹೂಡಿಕೆಯೊಂದಿಗೆ ನ್ಯಾಟೋದ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS) ಗೆ ಸೇರುವ ಯೋಜನೆಯನ್ನು ಘೋಷಿಸಿತು.
ನ್ಯಾಟೋದ ನಳಿಕೆ ಮಾರ್ಗ ವ್ಯವಸ್ಥೆ/ NATO Pipeline System (NPS):
ಉದ್ದೇಶ:- ಇದನ್ನು ಶೀತಲ ಸಮರದ ಸಮಯದಲ್ಲಿ ಸ್ಥಾಪಿಸಲಾಯಿತು. ಇದು ಆಧುನಿಕ ನಮ್ಯತೆಯೊಂದಿಗೆ ನ್ಯಾಟೋ ಪಡೆಗಳಿಗೆ ಇಂಧನ ಮತ್ತು ಜಿಗಿಯ ಎಣ್ಣೆ (ಲೂಬ್ರಿಕಂಟ್) ಗಳನ್ನುಪೂರೈಸುತ್ತದೆ.
12 ದೇಶಗಳಲ್ಲಿ ಸುಮಾರು 10,000 ಕಿ.ಮೀ.ಗಳಷ್ಟು ವ್ಯಾಪಿಸಿದೆ, 4.1 ಮಿಲಿಯನ್ ಘನ ಮೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಮತ್ತು ಡಿಪೋಗಳು, ವಾಯುನೆಲೆಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾಗಾರಗಳು ಮತ್ತು ಸಾರಿಗೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ಬಗ್ಗೆ:
ಉತ್ತರ ಅಟ್ಲಾಂಟಿಕ್ ಮೈತ್ರಿ, ಎಂತಲು ಕರೆಯಲ್ಪಡುವ ನ್ಯಾಟೋ, ಒಂದು ಅಂತರಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
ಪ್ರಧಾನ ಕಚೇರಿ:- ಬ್ರಸೆಲ್ಸ್, ಬೆಲ್ಜಿಯಂ
ಹಿನ್ನೆಲೆ:- ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ದಾಳಿಯ ವಿರುದ್ಧ ಸಾಮೂಹಿಕ ಭದ್ರತೆಯನ್ನು ಒದಗಿಸಲು 1949 ರಲ್ಲಿ ವಾಷಿಂಗ್ಟನ್, ಡಿಸಿಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ (ವಾಷಿಂಗ್ಟನ್ ಒಪ್ಪಂದ) ಸಹಿ ಹಾಕುವ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕದ 12 ದೇಶಗಳು ಇದನ್ನು ಸ್ಥಾಪಿಸಿದವು.
ಸಾಮೂಹಿಕ ರಕ್ಷಣೆ:- ವಿಧಿ 5 ರ ಪ್ರಕಾರ, ನ್ಯಾಟೋ ಸಂಸ್ಥೆ ಸಾಮೂಹಿಕ ರಕ್ಷಣೆಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಇಲ್ಲಿ ಯಾವುದೇ ನ್ಯಾಟೋ ಸದಸ್ಯರ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ, 2001 ರಲ್ಲಿ ಅಮೇರಿಕಾದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆಯಾಗಿ ವಿಧಿ 5 ಅನ್ನು ಒಮ್ಮೆ ಮಾತ್ರ ಬಳಸಲಾಗಿದೆ.
ಸದಸ್ಯ ರಾಷ್ಟ್ರಗಳು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸ್ವೀಡನ್ 32 ನೇ ಸದಸ್ಯ ರಾಷ್ಟ್ರವಾಯಿತು.
ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳು
ಸಾಮಾನ್ಯ ಅಧ್ಯಯನ-3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಿಸಿತು.
ಉತ್ತರ ಪ್ರದೇಶ 12 ಜಿಲ್ಲೆಗಳೊಂದಿಗೆ ಮೂoಚೂಣೆಯಲ್ಲಿದ್ದರೆ, ಮಹಾರಾಷ್ಟ್ರ (9), ಮಧ್ಯಪ್ರದೇಶ ಮತ್ತು ರಾಜಸ್ಥಾನ (ತಲಾ 8) ಮತ್ತು ಬಿಹಾರ (7) ನಂತರದ ಸ್ಥಾನಗಳಲ್ಲಿವೆ.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ಬಗ್ಗೆ:
ಈ ಯೋಜನೆಯನ್ನು 2025 ರಲ್ಲಿ ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಯಿತು.
ಪ್ರಮುಖ ಗಮನಾರ್ಹ ಕ್ಷೇತ್ರಗಳು:
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸುವುದು.
ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆಯನ್ನು ವಿಸ್ತರಿಸುವುದು.
ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು.
ದೀರ್ಘಾವಧಿ ಮತ್ತು ಅಲ್ಪಾವಧಿಯ ಕೃಷಿ ಸಾಲವನ್ನು ಸುಗಮಗೊಳಿಸುವುದು.
ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮವನ್ನು ನಿರ್ಮಿಸುವುದು:
ಉದ್ದೇಶ:- ಕೃಷಿಯಲ್ಲಿನ ಕಡಿಮೆ ಉದ್ಯೋಗವನ್ನು ಪರಿಹರಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ.
ಪ್ರಮುಖ ಗಮನಾರ್ಹ ಕ್ಷೇತ್ರಗಳು:- ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಕೌಶಲ್ಯ, ಹೂಡಿಕೆ ಮತ್ತು ತಂತ್ರಜ್ಞಾನ. ಸುಧಾರಿತ ಉತ್ಪಾದಕತೆ ಮತ್ತು ಗೋದಾಮಿನೊಂದಿಗೆ ಕೃಷಿಯನ್ನು ಆಧುನೀಕರಿಸುವುದು.
ಗುರುತು ಪಡಿಸಿದ ಫಲಾನುಭವಿಗಳು : ಗ್ರಾಮೀಣ ಮಹಿಳೆಯರು, ಯುವ ರೈತರು, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಭೂಹೀನ ಕುಟುಂಬಗಳು.
ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (ADP) ದ ಬಗ್ಗೆ:
ಇದನ್ನು, 2018 ರಲ್ಲಿ ಪ್ರಾರಂಭಿಸಲಾಯಿತು.
ಉದ್ದೇಶ:- ಇದು ದೇಶದ 112 ಸಾಮಾಜಿಕ-ಆರ್ಥಿಕವಾಗಿ ಅಭಿವೃದ್ಧಿಯಾಗದ ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
ಅನುಷ್ಠಾನ ಸಂಸ್ಥೆ:- ನೀತಿ ಆಯೋಗ
H125 ಹೆಲಿಕಾಪ್ಟರ್‌ಗಳು
ಸಾಮಾನ್ಯ ಅಧ್ಯಯನ -3 / ರಕ್ಷಣಾ ವ್ಯವಸ್ಥೆ
ಸಂದರ್ಭ:
ಭಾರತದಲ್ಲಿ ನಿರ್ಮಿಸಲಾದ H125 ಯುಟಿಲಿಟಿ (ಉಪಯುಕ್ತತೆ) ಹೆಲಿಕಾಪ್ಟರ್‌ಗಾಗಿ ಅಂತಿಮ ಜೋಡಣೆ ಮಾರ್ಗವನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜೊತೆ ಪಾಲುದಾರಿಕೆಯಲ್ಲಿ ಏರ್‌ಬಸ್ ಹೆಲಿಕಾಪ್ಟರ್ಗಳುಕರ್ನಾಟಕದ ವೇಮಗಲ್‌ನಲ್ಲಿ ಸ್ಥಾಪಿಸಲಾಗುತ್ತಿದೆ.
H125 ಹೆಲಿಕಾಪ್ಟರ್‌ಗಳ ಬಗ್ಗೆ:
ಏರ್‌ಬಸ್ H125 ಒಂದು ಹಗುರವಾದ, ಏಕ-ಎಂಜಿನ್ ಹೊಂದಿರುವ ಉಪಯುಕ್ತತಾ ಹೆಲಿಕಾಪ್ಟರ್ ಆಗಿದೆ.
ಹೆಚ್ಚಿನ ಎತ್ತರ ಮತ್ತು ಹೆಚ್ಚಿನ ತಾಪಮಾನದ ಪರಿಸ್ಥಿತಿಗಳಲ್ಲಿ ಬಹುಮುಖತೆ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ .
H125 ಅನ್ನು ಹಿಂದೆ ಯೂರೋಕಾಪ್ಟರ್ AS350 ಎಂದು ಕರೆಯಲಾಗುತ್ತಿತ್ತು.
ತುರ್ತು ವೈದ್ಯಕೀಯ ಸೇವೆಗಳು, ಪ್ರವಾಸೋದ್ಯಮ, ವಿಪತ್ತು ನಿರ್ವಹಣೆ ಮತ್ತು ಕಾನೂನು ಜಾರಿ ಮುಂತಾದ ನಾಗರಿಕ ಅಗತ್ಯಗಳನ್ನು ಪೂರೈಸುತ್ತದೆ ,
ಇದರ ಸೇನಾ ಆವೃತ್ತಿ (H125M) ಭಾರತದ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದೆ.
ಲಡಾಖ್ ನ ಪ್ರತಿನಿಧಿಗಳು 371 ನೇ ವಿಧಿಯ ನಿಯಮಗಳನ್ನು ನೀಡಿದರು
ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ
ಸಂದರ್ಭ:
ಲಡಾಖ್‌ನ ಎರಡು ಪ್ರಮುಖ ಸಾಮಾಜಿಕ-ರಾಜಕೀಯ ಸಂಘ/ಸಂಸ್ಥೆಗಳಾದ ಲೆಹ್ ಸರ್ವೋಚ್ಚ ಸಂಸ್ಥೆ (LAB) ಮತ್ತು ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿ (KDA) ಗಳು ಪೂರ್ಣ ರಾಜ್ಯದ ಸ್ಥಾನಮಾನ ಮತ್ತು ಆರನೇ ಅನುಸೂಚಿಯ ಕುರಿತು ಗೃಹ ವ್ಯವಹಾರಗಳ ಸಚಿವಾಲಯ (MHA) ದ ಜೊತೆ ಮಾತುಕತೆಗಳನ್ನು ಪುನರಾರಂಭಿಸಲು ನಿರ್ಧರಿಸಿದವು.
ಆರನೇ ಅನುಸೂಚಿಯ ಸ್ಥಾನಮಾನಕ್ಕೆ ಸಂಭಾವ್ಯ ಪರ್ಯಾಯವಾಗಿ ಸಂವಿಧಾನದ 371 ನೇ ವಿಧಿಯ ಅಡಿಯಲ್ಲಿ ವಿಶೇಷ ನಿಬಂಧನೆಗಳನ್ನು ಕೇಂದ್ರವು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.
ಹಿನ್ನೆಲೆ:
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಲಡಾಖ್ ವಿಧಾನ ಸಭೆಯಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಉಳಿದಿದೆ.
ಲಡಾಖ್‌ನ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ಲಡಾಖ್‌ನ ಹಲವಾರು ರಾಜಕೀಯ ಗುಂಪುಗಳು ಲಡಾಖ್‌ನ ಭೂಮಿ, ಉದ್ಯೋಗ ಮತ್ತು ಸಾಂಸ್ಕೃತಿಕ ಗುರುತನ್ನು ಆರನೇ ಅನುಸೂಚಿಯ ಅಡಿಯಲ್ಲಿ ರಕ್ಷಿಸಬೇಕೆಂದು ಒತ್ತಾಯಿಸುತ್ತಿವೆ.
2019 ರಲ್ಲಿ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವುಲಡಾಖ್ ಅನ್ನು ಆರನೇ ಅನುಸೂಚಿಯ ಅಡಿಯಲ್ಲಿ ಸೇರಿಸಲು ಶಿಫಾರಸು ಮಾಡಿತು.
ಸಂವಿಧಾನದ ಆರನೇ ಅನುಸೂಚಿಯ ಬಗ್ಗೆ:
ಸಂವಿಧಾನದ ವಿಧಿ 244 ರ ಅಡಿಯಲ್ಲಿ ಆರನೇ ಅನುಸೂಚಿಯು ಸ್ವಾಯತ್ತ ಆಡಳಿತ ವಿಭಾಗಗಳ ರಚನೆಗೆ ಅವಕಾಶ ನೀಡುತ್ತದೆ – ಸ್ವಾಯತ್ತ ಜಿಲ್ಲಾ ಮಂಡಳಿಗಳು (ADCs), ಇವುಗಳಿಗೆ ರಾಜ್ಯದೊಳಗೆ ಕೆಲವು ಶಾಸಕಾಂಗ, ನ್ಯಾಯಾಂಗ ಮತ್ತು ಆಡಳಿತಾತ್ಮಕಸ್ವಾಯತ್ತತೆಯನ್ನು ನೀಡುತ್ತವೆ.
ಈ ಅನುಸೂಚಿಯು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ.
ಈ ಅನುಸೂಚಿಯು ಸ್ವಾಯತ್ತ ಪ್ರಾದೇಶಿಕ ಮಂಡಳಿ (ARC) ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿ (ADC) ಗಳಿಗೆ ಭೂ ಕಂದಾಯವನ್ನು ಸಂಗ್ರಹಿಸುವ, ತೆರಿಗೆಗಳನ್ನು ವಿಧಿಸುವ, ಹಣ ಸಾಲ ಮತ್ತು ವ್ಯಾಪಾರವನ್ನು ನಿಯಂತ್ರಿಸುವ, ತಮ್ಮ ಪ್ರದೇಶಗಳಲ್ಲಿ ಖನಿಜಗಳನ್ನು ಹೊರತೆಗೆಯಲು ಪರವಾನಗಿಗಳು ಅಥವಾ ಗುತ್ತಿಗೆಗಳಿಂದ ರಾಯಧನವನ್ನು ಸಂಗ್ರಹಿಸುವ ಮತ್ತು ಶಾಲೆಗಳು, ಮಾರುಕಟ್ಟೆಗಳು ಮತ್ತು ರಸ್ತೆಗಳಂತಹ ಸಾರ್ವಜನಿಕ ಸೌಲಭ್ಯಗಳನ್ನು ಸ್ಥಾಪಿಸುವ ಅಧಿಕಾರವನ್ನು ನೀಡುತ್ತದೆ.
ಸಂವಿಧಾನದ ವಿಧಿ 371 ನೇ ಅಡಿಯಲ್ಲಿ ನೀಡಲಾಗುವ ಸಂರಕ್ಷಣೆಗಳು:
ಸಂವಿಧಾನದ ವಿಧಿ 371 ಮತ್ತು 371-A ಯಿಂದ 371-J ವರೆಗಿನ ವಿಧಿಗಳು ನಿರ್ದಿಷ್ಟ ರಾಜ್ಯಗಳಿಗೆ “ವಿಶೇಷ ನಿಬಂಧನೆಗಳನ್ನು” ಒದಗಿಸುತ್ತವೆ, ಆಗಾಗ್ಗೆ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳಿಗೆ ಪ್ರಾತಿನಿಧ್ಯವನ್ನು ನೀಡುತ್ತವೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಸ್ತಕ್ಷೇಪವಿಲ್ಲದೆ ಈ ಗುಂಪುಗಳು ತಮ್ಮ ವ್ಯವಹಾರಗಳ ಮೇಲೆ ಸ್ವಾಯತ್ತತೆಯನ್ನು ಚಲಾಯಿಸಲು ಅನುವು ಮಾಡಿಕೊಡುತ್ತವೆ.
371 ನೇ ವಿಧಿಯ ಅಡಿಯಲ್ಲಿನ ವಿಶೇಷ ನಿಬಂಧನೆಗಳು ಲಡಾಖ್‌ನ ಸ್ಥಳೀಯ ಜನರಿಗೆ ಸಂರಕ್ಷಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.
ಕೇಂದ್ರ ಲೋಕಸೇವಾ ಆಯೋಗ (UPSC) ಕ್ಕೇ 100 ವರ್ಷಗಳು: ಅರ್ಹತಾಪ್ರಧಾನತೆಯ ರಕ್ಷಕ (ಕಾವಲುಗಾರ)
ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ
ಸಂದರ್ಭ:
ಕೇಂದ್ರ ಲೋಕಸೇವಾ ಆಯೋಗ (UPSC) ವು ಅಕ್ಟೋಬರ್ 1 ರಂದು ಸ್ಥಾಪನೆಯಾಗಿ ಶತಮಾನ ಪೂರೈಸುತ್ತಿದೆ.
ಕೇಂದ್ರ ಲೋಕಸೇವಾ ಆಯೋಗ (UPSC) ದ ಬಗ್ಗೆ:
ಸ್ಥಾಪನೆ:- 1919 ರ ಭಾರತ ಸರ್ಕಾರ ಕಾಯ್ದೆಯು ಮೊದಲು ಅಂತಹ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು ಮತ್ತು 1924 ರ ಲೀ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಅಕ್ಟೋಬರ್ 1926 ರಲ್ಲಿ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಯಿತು.
ನಂತರ 1937 ರಲ್ಲಿ “ಸಂಘೀಯ (ಫೆಡರಲ್) ಲೋಕಸೇವಾ ಆಯೋಗ” ಎಂದು ಹೆಸರಿಸಲಾಯಿತು, ಇದನ್ನು ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಕೇಂದ್ರ ಲೋಕ ಸೇವಾ ಆಯೋಗ ಎಂದು ಮರುನಾಮಕರಣ ಮಾಡಲಾಯಿತು.
ಕಾರ್ಯಗಳು:- ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ.
ಸದಸ್ಯರ ಸಂಖ್ಯೆ:- ಅಧ್ಯಕ್ಷರ ಹೊರತಾಗಿ, ಇದು ಗರಿಷ್ಠ 10 ಸದಸ್ಯರನ್ನು ಹೊಂದಿರಬಹುದು.
ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರನ್ನು ಆರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ ನೇಮಿಸಲಾಗುತ್ತದೆ, ಎಲ್ಲಾ ಸದಸ್ಯರಿಗೂ ಒಂದೇ ಅವಧಿ ಇರುತ್ತದೆ.
ಮರು ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ, ಆದರೆ ಎಲ್ಲಾ ಸದಸ್ಯರು ಯುಪಿಎಸ್‌ಸಿ ಅಥವಾ ಯಾವುದೇ ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಮರು ನೇಮಕಾತಿಗೆ ಅರ್ಹರಾಗಿರುತ್ತಾರೆ.
ತೆಗೆದುಹಾಕುವಿಕೆ (ವಿಧಿ 317): ರಾಷ್ಟ್ರಪತಿಗಳಿಂದ ಈ ಕೆಳಕಂಡ ಕಾರಣಗಳಿಗೆ ತೆಗೆದುಹಾಕಬಹುದು:
ದುರ್ವರ್ತನೆಯ ಆಧಾರದ ಮೇಲೆ.
ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಉಲ್ಲೇಖ ಮಾಡುತ್ತಾರೆ.
ದುರ್ವರ್ತನೆ ದೃಢೀಕರಿಸುವ ವರದಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು.
ಯಾವಾಗ ಸುಪ್ರೀಂ ಕೋರ್ಟ್ ವಿಚಾರಣೆಯಿಲ್ಲದೆ ಸದಸ್ಯರನ್ನು ತೆಗೆದುಹಾಕಬಹುದು:– ದಿವಾಳಿ ಎಂದು ತೀರ್ಪು ನೀಡಿದ್ದರೆ, ಕಚೇರಿ ಕರ್ತವ್ಯಗಳ ಹೊರಗೆ ಸಂಬಳ ಪಡೆಯುವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ, ಮಾನಸಿಕ ಅಥವಾ ದೈಹಿಕ ದೌರ್ಬಲ್ಯದಿಂದಾಗಿ ಅನರ್ಹನಾಗಿದ್ದರೆ.
ನಾಗರಿಕ ಸೇವಾ ದಿನದ ಬಗ್ಗೆ:
ಪ್ರತಿ ವರ್ಷ ಏಪ್ರಿಲ್ 21 ರಂದು ನಾಗರಿಕ ಸೇವಾ ದಿನವನ್ನು ಆಚರಿಸಲಾಗುತ್ತದೆ.
ಕಾರಣ:- 1947 ರಲ್ಲಿ ನವದೆಹಲಿಯ ಮೆಟ್‌ಕಾಲ್ಫ್ ಹೌಸ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮೊದಲ ಬ್ಯಾಚ್ ನಾಗರಿಕ ಸೇವಕರನ್ನುದ್ದೇಶಿಸಿ ಮಾತನಾಡಿದ ದಿನದ ಸ್ಮರಣಾರ್ಥ.
ನಾಗರಿಕ ಸೇವಕರನ್ನು “ಭಾರತದ ಉಕ್ಕಿನ ಚೌಕಟ್ಟು” ಎಂದು ಕರೆದ ಅವರು, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು.
ರಾಜ್ಯ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಉಪಕ್ರಮವಾದ ಶಕ್ತಿ ಯೋಜನೆಯು ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕ – ವಿಶ್ವ ಶ್ರೇಷ್ಠತೆಯ ದಾಖಲೆಯನ್ನು ಪ್ರವೇಶಿಸುವ ಮೂಲಕ ಮತ್ತೊಂದು ಜಾಗತಿಕ ಮೈಲಿಗಲ್ಲು ಸಾಧಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಈ ಯೋಜನೆ ಆರಂಭವಾದಾಗಿನಿಂದ 500 ಕೋಟಿಗೂ ಹೆಚ್ಚು ಉಚಿತ ಟಿಕೆಟ್‌ಗಳನ್ನು ನೀಡಲಾಗಿದೆ.
ಶಕ್ತಿ ಯೋಜನೆಯ ಬಗ್ಗೆ:
ಈ ಯೋಜನೆಯನ್ನು ಜೂನ್ 11, 2023 ರಂದು ಮೊದಲು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು.
ಇದು ಕರ್ನಾಟಕದ ಎಲ್ಲಾ ಮಹಿಳಾ ಮತ್ತು ತೃತೀಯ ಲಿಂಗಿ ಮಹಿಳಾ ನಿವಾಸಿಗಳಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಒಂದು ಯೋಜನೆಯಾಗಿದೆ.
ಉದ್ದೇಶ: ಸಾರ್ವಜನಿಕ ಸಾರಿಗೆಯ ಪ್ರವೇಶವನ್ನು ಸುಧಾರಿಸುವ ಮೂಲಕ, ಕೆಲಸದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಆರ್ಥಿಕ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು.
ಉದ್ದೇಶಿತ ಫಲಾನುಭವಿಗಳು:- ಮಹಿಳಾ ವಿದ್ಯಾರ್ಥಿಗಳು ಮತ್ತು ತೃತೀಯ ಲಿಂಗಿ ಮಹಿಳೆಯರು ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲಾ ಮಹಿಳೆಯರು ಅರ್ಹರು.
ಗಮನಿಸಿ:- ಉಚಿತ ಪ್ರಯಾಣವು KSRTC, BMTC, NWKRTC, ಮತ್ತು KKRTC ನಿರ್ವಹಿಸುವ ಪ್ರೀಮಿಯಂ ಅಲ್ಲದ ಬಸ್‌ಗಳಲ್ಲಿ ಮತ್ತು ರಾಜ್ಯದೊಳಗೆ ಮಾತ್ರ ಮಾನ್ಯವಾಗಿರುತ್ತದೆ.
ಭಾರತದ ಜೈವಿಕ ವೈದ್ಯಕೀಯ ಸಂಶೋಧನಾ ಪರಿಸರ ವ್ಯವಸ್ಥೆ ಮತ್ತು ಜಾಗತಿಕ ಪ್ರಭಾವವನ್ನು ಗಮನಾರ್ಹವಾಗಿ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮದ (BRCP) ಹಂತ-III (2025-26 ರಿಂದ 2030-31) ಅನ್ನು ಅನುಮೋದಿಸಿತು.
ಜೈವಿಕ ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮ (BRCP) ದ ಬಗ್ಗೆ:
ಉದ್ದೇಶ:- ಈ ಕಾರ್ಯಕ್ರಮವು ಸಂಶೋಧನಾ ವ್ಯವಸ್ಥೆಗಳನ್ನು ಬಲಪಡಿಸುವುದು, ವೈಜ್ಞಾನಿಕ ಸಾಮರ್ಥ್ಯಗಳಲ್ಲಿನ ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು ಮತ್ತು ವಿಶ್ವ ದರ್ಜೆಯ ಜೈವಿಕ ವೈದ್ಯಕೀಯ ಸಂಶೋಧನಾ ಸಾಮರ್ಥ್ಯವನ್ನು ಸ್ಥಾಪಿಸುವುದು.
BRCP ಅನ್ನು ಅನುಷ್ಠಾನಗೊಳಿಸಲಾಗುತ್ತದೆ:
ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ (DBT).
ಯುನೈಟೆಡ್ ಕಿಂಗ್‌ಡಮ್‌ನ ವೆಲ್‌ಕಮ್ ಟ್ರಸ್ಟ್ (WT).
ಇಂಡಿಯಾ ಅಲೈಯನ್ಸ್, ಈ ಉಪಕ್ರಮಕ್ಕಾಗಿ ರಚಿಸಲಾದ ವಿಶೇಷ ಉದ್ದೇಶದ ವಾಹನ.
ಅಮೇರಿಕಾದ ಟೊಮಾಹಾಕ್ ಕ್ಷಿಪಣಿಗಳು
ಸಾಮಾನ್ಯ ಅಧ್ಯಯನ – 3 / ರಕ್ಷಣಾ ವ್ಯವಸ್ಥೆ
ಸಂದರ್ಭ:
ಉಕ್ರೇನ್ ದೇಶವು ಅಮೆರಿಕದಿಂದ ದೀರ್ಘ-ವ್ಯಾಪ್ತಿಯ ಟೊಮಾಹಾಕ್ ಕ್ರೂಸ್ (ನಿರಂತರ ನಿಯಂತ್ರಿತ ದಾರಿ ಮೂಲಕ ಹಾರುವ) ಕ್ಷಿಪಣಿಗಳನ್ನು ಕೇಳಿಕೊಂಡಿದೆ.
ಟೊಮಾಹಾಕ್ ಕ್ಷಿಪಣಿಗಳ ಬಗ್ಗೆ:
ಟೊಮಾಹಾಕ್‌ಗಳು ದೀರ್ಘ-ವ್ಯಾಪ್ತಿಯ ಸಬ್‌ಸಾನಿಕ್ (ಶಬ್ದವೇಗಕ್ಕಿಂತ ಕಡಿಮೆ ವೇಗದ) ಕ್ರೂಸ್ ಕ್ಷಿಪಣಿಗಳಾಗಿದ್ದು, ಇವುಗಳನ್ನು ಹಡಗು, ಜಲಾಂತರ್ಗಾಮಿ ಅಥವಾ ನೆಲದ ಪ್ರಕ್ಷೇಪಕಗಳ ಮೂಲಕ ಉಡಾಯಿಸಬಹುದಾಗಿದೆ.
ಅವು ದೀರ್ಘ-ವ್ಯಾಪ್ತಿಯ, ಆಳವಾದ ದಾಳಿಯ ಸಾಮರ್ಥ್ಯಗಳನ್ನು ಹೊಂದಿವೆ ಮತ್ತು 1,250 ಕಿಮೀ – 2,500 ಕಿಮೀ ದೂರದ ಗುರಿಗಳನ್ನು ಹೊಡೆಯಬಲ್ಲವು.
ಸೇನಾ ಬಂಕರ್‌ಗಳಂತಹ ಗಟ್ಟಿಯಾದ ಗುರಿಗಳನ್ನು ಭೇದಿಸುವಂತೆ ವಿನ್ಯಾಸಗೊಳಿಸಲಾದ ಹೆಚ್ಚಿನ ಸ್ಫೋಟಕ ಸಿಡಿತಲೆಗಳನ್ನು ಅವು ಹೊತ್ತೊಯ್ಯುಬಲ್ಲವು.
ಇವು ಕಡಿಮೆ ಎತ್ತರವನ್ನು ಕಾಯ್ದುಕೊಳ್ಳುವಾಗ ಹೆಚ್ಚಿನ ಸಬ್‌ಸಾನಿಕ್ ವೇಗದಲ್ಲಿ ಹಾರುವ ಮೂಲಕ ರಾಡಾರ್ ಪತ್ತೆಯನ್ನು ತಪ್ಪಿಸುತ್ತವೆ.
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹೈನುಗಾರಿಕೆ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ
ಸಾಮಾನ್ಯ ಅಧ್ಯಯನ-3/ ಕೃಷಿ
ಸಂದರ್ಭ:
ಕಳೆದ 11 ವರ್ಷಗಳಲ್ಲಿ ಭಾರತದ ಹೈನುಗಾರಿಕಾ ವಲಯವು ಶೇ. 70 ರಷ್ಟು ವಿಸ್ತರಿಸಿದೆ, ಹಾಲಿನ ಉತ್ಪಾದನೆಯು 2014-15 ರಲ್ಲಿ 146 ಮಿಲಿಯನ್ ಟನ್‌ಗಳಿಂದ 2023-24 ರಲ್ಲಿ 239 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ.
ಭಾರತದ ಹೈನುಗಾರಿಕೆ ವಲಯದ ಬಗ್ಗೆ:
ಜಾಗತಿಕ ನಾಯಕತ್ವ:– ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇ. 24.76 ರಷ್ಟು ಕೊಡುಗೆ ನೀಡುತ್ತದೆ.
ಆರ್ಥಿಕ ಕೊಡುಗೆ: ಹೈನುಗಾರಿಕೆಯು ಭಾರತದ ಏಕೈಕ ಅತಿದೊಡ್ಡ ಕೃಷಿ ಸರಕು, ಇದು ಜಿಡಿಪಿ ಗೆ 5% ಕೊಡುಗೆ ನೀಡುತ್ತದೆ ಮತ್ತು 8 ಕೋಟಿಗೂ ಹೆಚ್ಚು ರೈತರಿಗೆ ಉದ್ಯೋಗ ನೀಡುತ್ತದೆ.
ತಲಾ ಲಭ್ಯತೆ: 2023–24ರಲ್ಲಿ ಪ್ರತಿ ದಿನಕ್ಕೆ 471 ಗ್ರಾಂಗೆ ಏರಿಕೆಯಾಗಿದ್ದು, ಇದು ವಿಶ್ವದ ಸರಾಸರಿ 322 ಗ್ರಾಂ ಪ್ರತಿ ದಿನಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ.
ಹೆಚ್ಚು ಉತ್ಪಾದಿಸುವ ರಾಜ್ಯಗಳು: ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ.
ಭಾರತದ ಹೈನುಗಾರಿಕೆ ಯಶಸ್ಸಿಗೆ ಪ್ರಮುಖ ಕಾರಣಗಳು:
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (NDDB):- ಭಾರತದಾದ್ಯಂತ ಅಮುಲ್ ಸಹಕಾರಿ ಮಾದರಿಯನ್ನು ಪುನರಾವರ್ತಿಸಲು ಇದನ್ನು 1965 ರಲ್ಲಿಗುಜರಾತಿನಆನಂದ್ನಲ್ಲಿ ಸ್ಥಾಪಿಸಲಾಯಿತು.
ಆಪರೇಷನ್ ಫ್ಲಡ್ (1970):- ಇದು ಭಾರತವನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಪರಿವರ್ತಿಸಿತು ಮತ್ತು ಸಂಗ್ರಹಣೆ ಮತ್ತು ವಿತರಣೆಗಾಗಿ ರಾಷ್ಟ್ರವ್ಯಾಪಿ ಸಹಕಾರಿ ರಚನೆಯನ್ನು ರಚಿಸಿತು.
ಭಾರತ ಮತ್ತು ರಷ್ಯಾ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತವೆ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಬದಲಾಗುತ್ತಿರುವ ಜಾಗತಿಕ ಸ್ವರೂಪದ ನಡುವೆಯೂ ರಷ್ಯಾ ಮತ್ತು ಭಾರತ ತಮ್ಮ 25 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಮನಾರ್ಹವಾಗಿ ಮುನ್ನಡೆಸಿವೆ.
ಹಿನ್ನೆಲೆ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಯತಂತ್ರದ ಪಾಲುದಾರಿಕೆಯ ಘೋಷಣೆಗೆ 2000ನೇ ಇಸವಿಯಲ್ಲಿ ಸಹಿ ಹಾಕಿದರು, ಇದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು.
ಇದು ಡಿಸೆಂಬರ್ 2010 ರಲ್ಲಿ, ಕಾರ್ಯತಂತ್ರದ ಪಾಲುದಾರಿಕೆಯನ್ನು “ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆ” ಎಂದು ಮೇಲ್ದರ್ಜೆಗೇರಿಸಲಾಯಿತು.
ಅಂತರಸರ್ಕಾರಿ ಆಯೋಗ ಮತ್ತು 2+2 ಸಂವಾದ ಸೇರಿದಂತೆ ಬಹು ಸಾಂಸ್ಥಿಕ ಸಂವಾದಗಳು ರಾಜಕೀಯ, ರಕ್ಷಣೆ, ವ್ಯಾಪಾರ, ವಿಜ್ಞಾನ ಮತ್ತು ಸಂಸ್ಕೃತಿಯಾದ್ಯಂತ ಬಲವಾದ ಸಹಕಾರವನ್ನು ಖಚಿತಪಡಿಸುತ್ತವೆ .
ನಾಯಕತ್ವ ಮಟ್ಟದಲ್ಲಿ ತೊಡಗಿಸಿಕೊಳ್ಳುವಿಕೆಗಳು:
ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯು ಅತ್ಯುನ್ನತ ಸಂವಾದ ಕಾರ್ಯವಿಧಾನವಾಗಿದ್ದು, ಎರಡೂ ದೇಶಗಳಲ್ಲಿ ಪರ್ಯಾಯವಾಗಿ 22 ಸಭೆಗಳನ್ನು ನಡೆಸಲಾಗುತ್ತದೆ.
ಭಾರತದ ಪ್ರಧಾನಿಗೆ ರಷ್ಯಾದ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿ ಲಭಿಸಿದೆ.
ಬಹುಪಕ್ಷೀಯ ಒಪ್ಪಂದಗಳ ಬಗ್ಗೆ:
ವಿಶ್ವಸಂಸ್ಥೆ, ಜಿ20, ಬ್ರಿಕ್ಸ್ ಮತ್ತು ಶಾಂಘೈ ಸಹಕಾರ ಸಂಸ್ಥೆ ಯಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ ಮತ್ತು ರಷ್ಯಾ ನಿಕಟವಾಗಿ ಸಹಕರಿಸುತ್ತವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನವನ್ನು ರಷ್ಯಾ ಬೆಂಬಲಿಸುತ್ತದೆ.
ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಬಗ್ಗೆ:
ಭಾರತ ಮತ್ತು ರಷ್ಯಾ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಬಿಲಿಯನ್ ಡಾಲರ್‌ಗೆ ಮತ್ತು 2025 ರ ವೇಳೆಗೆ ಹೂಡಿಕೆಯನ್ನು 50 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.
2023-24ನೇ ಹಣಕಾಸು ವರ್ಷದಲ್ಲಿ, ವ್ಯಾಪಾರವು ದಾಖಲೆಯ $65.7 ಶತಕೋಟಿಯನ್ನು ತಲುಪಿತು, ಭಾರತವುಔಷಧಗಳು ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡಿತು ಮತ್ತು ರಷ್ಯಾದಿಂದ ತೈಲ, ರಸಗೊಬ್ಬರಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಂಡಿತು.
ರಕ್ಷಣೆ ಮತ್ತು ಭದ್ರತೆಯ ಸಹಕಾರ:
ಜಂಟಿ ಸೇನಾ ಸಮರಾಭ್ಯಾಸಗಳು:- ಇಂದ್ರ, ವೋಸ್ಟಾಕ್ ಮತ್ತು ಜಪಾಡ್.
ರಕ್ಷಣಾ ಯೋಜನೆಗಳು:- S-400 ವ್ಯವಸ್ಥೆಗಳು, T-90 ಟ್ಯಾಂಕ್‌ಗಳು, Su-30 MKI ಜೆಟ್‌ಗಳು, MiG-29 ಮತ್ತು ಕಾಮೋವ್ ಹೆಲಿಕಾಪ್ಟರ್‌ಗಳು, INS ವಿಕ್ರಮಾದಿತ್ಯ, AK-203 ರೈಫಲ್‌ಗಳು ಮತ್ತು ಬ್ರಹ್ಮೋಸ್ ಕ್ಷಿಪಣಿಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ:- ನ್ಯಾನೊತಂತ್ರಜ್ಞಾನ, ಕ್ವಾಂಟಂ ಗಣನೆ (ಕಂಪ್ಯೂಟಿಂಗ್) ಮತ್ತು ಪರಮಾಣು ಶಕ್ತಿ ಸ್ಥಾವರ (ಕುಡಂಕುಲಂ).
ಮಲೈ ಮಹದೇಶ್ವರ ಬೆಟ್ಟಗಳ ವನ್ಯಜೀವಿ ಅಭಯಾರಣ್ಯದ ಹನುರ್ ವ್ಯಾಪ್ತಿಯಲ್ಲಿ ಒಂದು ಹುಲಿಯ ಶವ ಪತ್ತೆಯಾಗಿದೆ. ಇದು ಮತ್ತೊಂದು ವಿಷಪ್ರಯೋಗದಿಂದ ಸಂಭವಿಸಿದ ಪ್ರಕರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮಲೈ ಮಹದೇಶ್ವರ ವನ್ಯಜೀವಿ ಅಭಯಾರಣ್ಯದ ಬಗ್ಗೆ:
ಸ್ಥಳ:- ಇದು ಪಶ್ಚಿಮಘಟ್ಟ ಮತ್ತು ಪೂರ್ವ ಘಟ್ಟಗಳ ಸಂಗಮ ಪ್ರದೇಶದಲ್ಲಿದೆ ಮತ್ತು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿದೆ.
ಇದನ್ನು 2013 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು.
ಇದು ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ (BRT) ಹುಲಿ ಮೀಸಲು ಪ್ರದೇಶ, ಸತ್ಯಮಂಗಲಂ ಹುಲಿ ಮೀಸಲು ಪ್ರದೇಶ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ.
ಇದು ಪ್ರಸಿದ್ಧ ಮಲೆ ಮಹದೇಶ್ವರ ದೇವಾಲಯದ ಸ್ಥಳವಾಗಿದ್ದು, ಇಲ್ಲಿ ಮಹದೇಶ್ವರನೆಂದು ಕರೆಯಲ್ಪಡುವ ಶಿವನಿಗೆ ಸಮರ್ಪಿತವಾಗಿದೆ.”
ಮಲೆ ಮಹದೇಶ್ವರ ಬೆಟ್ಟವು ಈಶಾನ್ಯಕ್ಕೆ ಕಾವೇರಿ ನದಿಯಿಂದ ಮತ್ತು ದಕ್ಷಿಣಕ್ಕೆ ಪಾಲಾರ್ ನದಿಯವರೆಗೆ ಸುತ್ತುವರೆದಿದೆ.
ಸಸ್ಯಸಂಪತ್ತು:- ಇಲ್ಲಿನ ಕಾಡುಗಳು ಒಣ ಎಲೆಯುದುರುವ ಪ್ರಕಾರದ್ದಾಗಿದ್ದು, ತೇವಾಂಶವುಳ್ಳ ಎಲೆಯುದುರುವ, ಅರೆ-ನಿತ್ಯಹರಿದ್ವರ್ಣ, ನಿತ್ಯಹರಿದ್ವರ್ಣ ಮತ್ತು ಶೋಲಾ ಕಾಡುಗಳು ಸಹ ಇಲ್ಲಿ ಕಾಣಬಹುದು.
ಸಸ್ಯವರ್ಗ:- ಅನೋಜಿಸಸ್ ಲ್ಯಾಟಿಫೋಲಿಯಾ, ಬೋಸ್ವೆಲಿಯಾ ಸೆರಾಟಾ, ಹಾರ್ಡ್ವಿಕಿಯಾ ಬಿನಾಟಾ ಮತ್ತು ಕ್ಲೋರಾಕ್ಸಿಲಾನ್ ಸ್ವೀಟೆನಿಯಾ ಇತ್ಯಾದಿ.
ಪ್ರಾಣಿವರ್ಗ:- ಇದು ಆನೆಗಳು, ಹುಲಿಗಳು, ಭಾರತದ ಕಾಡೆಮ್ಮೆ, ಕಾಡು ನಾಯಿಗಳು, ಚಿರತೆಗಳು, ನರಿಗಳು, ಸಾಂಬಾರ್‌ಗಳು, ಚುಕ್ಕೆ ಜಿಂಕೆಗಳು ಮತ್ತು ಅನೇಕ ಪ್ರಭೇದದ ಪಕ್ಷಿಗಳು ಸೇರಿದಂತೆ ಹಲವಾರು ಪ್ರಾಣಿಗಳಿಗೆ ನೆಲೆಯಾಗಿದೆ.
ಇದು ಹೆಚ್ಚುತ್ತಿರುವ ಹುಲಿಗಳ ಸಂಖ್ಯೆಗೆ ಹೆಸರುವಾಸಿಯಾದ ಹುಲಿಗಳ ಆವಾಸಸ್ಥಾನವಾಗಿದೆ.
“ಹಾರುವ ನದಿಗಳು” ಎಂಬ ವಿದ್ಯಮಾನದ ಮೂಲಕ ಅಮೆಜಾನ್ ಮಳೆಕಾಡುಗಳು ದಕ್ಷಿಣ ಅಮೆರಿಕದ ಜಲಚಕ್ರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಹಾರುವ ನದಿಗಳು ಎಂದರೆ:
“ಹಾರುವ ನದಿಗಳು” ಕಣ್ಣಿಗೆ ಕಾಣಿಸದ, ವಾತಾವರಣದಲ್ಲಿ ಸಾಗಿಸಲ್ಪಡುವ ನೀರಿನ ಆವಿಯ ಬೃಹತ್ ಹೊಳೆಗಳಾಗಿವೆ.
ಹಾರುವ ನದಿಗಳು ಪ್ರಕ್ರಿಯೆ:
ತೇವಾಂಶವು ಅಟ್ಲಾಂಟಿಕ್ ಮಹಾಸಾಗರದಿಂದ ಹುಟ್ಟುತ್ತದೆ.
ವ್ಯಾಪಾರ ಮಾರುತಗಳು ಸಮಭಾಜಕ ವೃತ್ತದಾದ್ಯಂತ ತೇವಾಂಶವುಳ್ಳ ಗಾಳಿಯನ್ನು ಪಶ್ಚಿಮಕ್ಕೆ ತಳ್ಳುತ್ತವೆ.
ಅಮೆಜಾನ್ ಮರಗಳು “ಜೈವ ಪಂಪ್”ಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ಮಣ್ಣಿನಿಂದ ನೀರನ್ನು ಹೀರಿಕೊಂಡು, ಅದನ್ನು ವಾತಾವರಣಕ್ಕೆ ವಿಲೇವಾರಿ (ವಾಯುವಿಷರ್ಜನೆ) ಮಾಡುತ್ತವೆ ಮತ್ತು ಅಪಾರ ಪ್ರಮಾಣದ ನೀರಾವಿಯನ್ನು ಬಿಡುಗಡೆ ಮಾಡುತ್ತವೆ.
ಈ ಮರುಬಳಕೆಯ ನೀರು ಮೋಡಗಳನ್ನು ರೂಪಿಸುತ್ತದೆ ಮತ್ತು ಒಳನಾಡಿನೊಳಗೆ ಮಳೆಯಾಗುತ್ತದೆ, ಇದು ಆಂಡಿಸ್ ಮತ್ತು ದಕ್ಷಿಣ ಅಮೆರಿಕದ ದಕ್ಷಿಣದಲ್ಲಿರುವ ಪ್ರದೇಶಗಳಿಗೆ ನೀರನ್ನು ಪೂರೈಸುತ್ತದೆ.
ಸರ್ ಕ್ರೀಕ್
ಸಾಮಾನ್ಯ ಅಧ್ಯಯನ-1/ ಸುದ್ದಿಯಲ್ಲಿರುವ ಸ್ಥಳಗಳು
ಇದೀಗ ಸುದ್ದಿಯಲ್ಲಿದೆ:
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನವನ್ನು ಎಚ್ಚರಿಸಿದ್ದು, ವಿವಾದಾತ್ಮಕ ಸರ್ ಕ್ರೀಕ್ ಪ್ರದೇಶದಲ್ಲಿ ಯಾವುದೇ ಆಕ್ರಮಣ ನಡೆದರೆ ಅದಕ್ಕೆ ಬಲಿಷ್ಠ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸರ್ ಕ್ರೀಕ್ ಪ್ರದೇಶದ ಬಗ್ಗೆ:
ಸರ್ ಕ್ರೀಕ್ ಗುಜರಾತಿನ ರಣ್ ಆಫ್ ಕಛ್ (ಉಪ್ಪುಮಯ ಮರುಭೂಮಿ ಪ್ರದೇಶ) ಮತ್ತು ಪಾಕಿಸ್ತಾನದ ನಡುವಿನ 96 ಕಿಮೀ ಉದ್ದದ ಉಬ್ಬರವಿಳಿತದ ನದೀಮುಖವಾಗಿದೆ.
ರಣ್ ಗುಜರಾತ್ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಡುವಿನ ಗಡಿಯಲ್ಲಿದೆ.
ಸಮುದ್ರ ಗಡಿ ರೇಖೆಗಳ ಬಗ್ಗೆ ಎರಡೂ ಕಡೆಯವರು ವಿಭಿನ್ನ ವ್ಯಾಖ್ಯಾನಗಳನ್ನು ನೀಡುತ್ತಿರುವುದರಿಂದ ಇದನ್ನು ವಿವಾದಿತ ಪ್ರದೇಶವೆಂದು ಪರಿಗಣಿಸಲಾಗಿದೆ.
ಸರ್ ಕ್ರೀಕ್ ಗುಜರಾತ್ ಕರಾವಳಿಯುದ್ದಕ್ಕೂ ಕಾರ್ಯತಂತ್ರದ ಮತ್ತು ಸೂಕ್ಷ್ಮ ವಲಯವಾಗಿದೆ.
ಡಿಜಿಲಾಕರ್
ಸಾಮಾನ್ಯ ಅಧ್ಯಯನ-2 / ಆಡಳಿತ
ಸಂದರ್ಭ:
ಜಾತಿ, ಆದಾಯ ಮತ್ತು ಅಂಗವೈಕಲ್ಯ ಪ್ರಮಾಣಪತ್ರಗಳು ಸೇರಿದಂತೆ ಅಭ್ಯರ್ಥಿಗಳ ದಾಖಲೆಗಳನ್ನು ಈಗ ಡಿಜಿಲಾಕರ್ ಮೂಲಕ ಪರಿಶೀಲಿಸಲಾಗುವುದು ಎಂದು ಕೇಂದ್ರ ಲೋಕಸೇವಾ ಆಯೋಗ (UPSC) ಘೋಷಿಸಿದೆ.
ಡಿಜಿಲಾಕರ್ ನ ಬಗ್ಗೆ:
ಪ್ರಾರಂಭಿಸಿದವರು:- ಇದು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) 2015 ರಲ್ಲಿ ಪ್ರಾರಂಭಿಸಿದ ಪ್ರಮುಖ ಉಪಕ್ರಮವಾಗಿದೆ.
ಉದ್ದೇಶ:- ಇದು ಡಿಜಿಟಲ್ ವೇದಿಕೆ ಮತ್ತು ಕಾಗದರಹಿತ ಪರಿಹಾರವಾಗಿದ್ದು, ಬಳಕೆದಾರರು ತಮ್ಮ ದಾಖಲೆಗಳ ಇತ್ತೀಚಿನ ಮತ್ತು ನವೀಕರಿಸಿದ ಆವೃತ್ತಿಗಳನ್ನು ಆನ್‌ಲೈನ್‌ನಲ್ಲಿ ಬಳಸಬಹುದು ಎಂದು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಮಹತ್ವ:- ಪ್ರತಿಯೊಬ್ಬ ನಾಗರಿಕನಿಗೂ ಡಿಜಿಟಲ್ ವ್ಯಾಲೆಟ್ ಒದಗಿಸುವ ಗುರಿಯನ್ನು ಇದು ಹೊಂದಿದೆ, ಇದರಿಂದಾಗಿ ಶೈಕ್ಷಣಿಕ, ಗುರುತು, ಆರೋಗ್ಯ ದಾಖಲೆಗಳು, ವಿಮಾ ಪಾಲಿಸಿ ಪತ್ರಿಕೆಗಳು, ಪ್ಯಾನ್ ದಾಖಲೆಗಳು, ಚಾಲನಾ ಪರವಾನಗಿಗಳು ಮತ್ತು ಪ್ರಮಾಣಪತ್ರಗಳು ಸೇರಿದಂತೆ ಎಲ್ಲಾ ಜೀವಿತಾವಧಿಯ ದಾಖಲೆಗಳನ್ನು ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲಿ ಪಡೆಯಬಹುದು.
ಗೋಧಿಯ ಕನಿಷ್ಠ ಬೆಂಬಲ ಬೆಲೆ (MSP) ಏರಿಕೆ
ಸಾಮಾನ್ಯ ಅಧ್ಯಯನ-3/ ಕೃಷಿ
ಸಂದರ್ಭ:
2026-27ನೇ ಮಾರುಕಟ್ಟೆ ವರ್ಷಕ್ಕೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು (MSP) ಪ್ರತಿ ಕ್ವಿಂಟಲ್‌ಗೆ 2,585 ರೂ.ಗಳಿಗೆ ಶೇ. 6.59 ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕನಿಷ್ಠ ಬೆಂಬಲ ಬೆಲೆಗಳ (MSP) ಬಗ್ಗೆ:
ವ್ಯಾಖ್ಯಾನ:- ಇದು ಕೃಷಿ ಉತ್ಪಾದಕರಿಗೆ ಕೃಷಿ ಬೆಲೆಗಳಲ್ಲಿನ ಯಾವುದೇ ತೀವ್ರ ಕುಸಿತದ ವಿರುದ್ಧ ವಿಮೆ ಮಾಡಲು ಭಾರತ ಸರ್ಕಾರವು ನಡೆಸುವ ಮಾರುಕಟ್ಟೆ ಹಸ್ತಕ್ಷೇಪದ ಒಂದು ರೂಪವಾಗಿದೆ.
ಶಿಫಾರಸು ಮತ್ತು ಪ್ರಕಟಣೆ/ಘೋಷಣೆ:- ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡು, ಪ್ರತಿ ಬಿತ್ತನೆ ಋತುವಿನ ಆರಂಭದಲ್ಲಿ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (CCEA) ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ.
ಮಹತ್ವ:- ಅತೀ ಹೆಚ್ಚು ಉತ್ಪಾದನಾ ವರ್ಷಗಳಲ್ಲಿ ಸಂಕಷ್ಟದ ಮಾರಾಟದಿಂದ ಉತ್ಪಾದಕ-ರೈತರನ್ನು ರಕ್ಷಿಸುತ್ತದೆ.
ಎಷ್ಟು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ?
ಕೇಂದ್ರ ಸರ್ಕಾರವು 22 ಬೆಳೆಗಳಿಗೆ ಕಡ್ಡಾಯವಾಗಿ ಕನಿಷ್ಠ ಬೆಂಬಲ ಬೆಲೆ (ಕಾನೂನುಬದ್ಧವಾಗಿ ಖಾತರಿಪಡಿಸಲಾಗಿಲ್ಲ) ಮತ್ತು ಕಬ್ಬಿನ ಬೆಳೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಘೋಷಿಸುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (NCRB) ಯ ವರದಿಯ ಪ್ರಕಾರ, ಮಹಾನಗರಗಳಲ್ಲಿ ನಡೆಯುವ ಸೈಬರ್ ಅಪರಾಧಗಳಲ್ಲಿ ಬೆಂಗಳೂರಿನಲ್ಲಿ ಶೇ. 51.92 ರಷ್ಟು ಅಪರಾಧಗಳು ನಡೆಯುತ್ತವೆ.
ವರದಿಯ ಪ್ರಮುಖ ಸಂಶೋಧನೆಗಳು:
ರಾಜ್ಯದಲ್ಲಿ 21,889 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ತೆಲಂಗಾಣದಲ್ಲಿನ 18,236 ಪ್ರಕರಣಕ್ಕಿಂತ 20% ಹೆಚ್ಚಾಗಿ ದಾಖಲಾಗಿವೆ.
2023ರಲ್ಲಿ, ಕರ್ನಾಟಕ ಭಾರತದಲ್ಲಿ ಸೈಬರ್ ಅಪರಾಧಗಳ ರಾಜಧಾನಿಯಾಗಿ ಹೊರಹೊಮ್ಮಿದೆ. ದೇಶದಾದ್ಯಂತ ದಾಖಲಾದ ಸೈಬರ್ ಅಪರಾಧ ಪ್ರಕರಣಗಳಲ್ಲಿ 25.57% ಪ್ರಕರಣಗಳು ಕರ್ನಾಟಕದಲ್ಲೇ ದಾಖಲಾಗಿವೆ.
2023ರಲ್ಲಿ, ಬೆಂಗಳೂರು, ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ಏರಿಕೆಯ ಕೇಂದ್ರಬಿಂದುವಾಗಿದೆ. ಮಾಹಿತಿ ತಂತ್ರಜ್ಞಾನ ಕೇಂದ್ರವೆಂದು ಪ್ರಸಿದ್ಧವಾದ ಬೆಂಗಳೂರಿನಲ್ಲಿ ಮಾತ್ರ 21,889 ಪ್ರಕರಣಗಳಲ್ಲಿ 17,631 ಪ್ರಕರಣಗಳು ದಾಖಲಾಗಿವೆ. ಇದರ ಮೂಲಕ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವ ನಗರವಾಗಿ ಹೊರಹೊಮ್ಮಿದೆ.
ಸೈಬರ್ ಅಪರಾಧ ತಡೆಗಟ್ಟಲು ಕರ್ನಾಟಕ ಸರ್ಕಾರದ ಉಪಕ್ರಮಗಳು:
ಹೊಸ ಸೈಬರ್ ಕಮಾಂಡ್ ಘಟಕ:- ಇದು ರಾಜ್ಯದ ಎಲ್ಲಾ ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು 45 ಪೊಲೀಸ್ ಠಾಣೆಗಳನ್ನು ಒಂದೇ ಘಟಕದಡಿ ಕ್ರೋಢೀಕರಿಸುತ್ತದೆ.
ಕರ್ನಾಟಕ ಸೈಬರ್ ಭದ್ರತಾ ನೀತಿ 2024:- ಈ ನೀತಿಯು ಮೂಲಸೌಕರ್ಯಗಳ ರಕ್ಷಣೆಗೆ, ಸೈಬರ್ ಸುರಕ್ಷತಾ ಜಾಗೃತಿಯನ್ನು ಉತ್ತೇಜಿಸಲು, ಮತ್ತು ಬೆಂಗಳೂರು ನಗರದಲ್ಲಿ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಪ್ರಮುಖವಾಗಿ ಕೇಂದ್ರೀಕರಿಸುತ್ತದೆ.
ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (CCITR):- ಸೈಬರ್ ಅಪರಾಧಗಳನ್ನು ತಡೆಗಟ್ಟಲು ತನಿಖೆ ಮತ್ತು ವಿಚಾರಣೆಯನ್ನು ಸುಧಾರಿಸುವುದು.
ರಾಷ್ಟ್ರೀಯ ಅಪರಾಧ ದಾಖಲೆಗಳ ಕಛೇರಿ (NCRB) ಯ ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ವರದಿ, 2023
ಸಾಮಾನ್ಯ ಅಧ್ಯಯನ-2/ಆಡಳಿತ; ಸರ್ಕಾರದ ನೀತಿ
ಸಂದರ್ಭ:
ಇತ್ತೀಚೆಗೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಕಛೇರಿ (NCRB) ತನ್ನ 2023 ರ ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ವರದಿಯನ್ನು ಬಿಡುಗಡೆ ಮಾಡಿತು, ಇದು ಭಾರತದ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಸ್ವರೂಪವಾಗಿದೆ.
ಈ ವರದಿಯ ಪ್ರಮುಖ ಸಂಶೋಧನೆಗಳು:
ವಯೋಮಾನದವರು:- 30-45 ವರ್ಷ ವಯೋಮಾನದವರ ಸಾವಿನ ಸಂಖ್ಯೆ 1,40,933 (31.7%);18-30 ವರ್ಷ ವಯೋಮಾನದವರ ಸಾವಿನ ಸಂಖ್ಯೆ 1,08,254 (24.4%).
ರಸ್ತೆ ಅಪಘಾತಗಳು:- ಭಾರತವು 2023 ರಲ್ಲಿ ರಸ್ತೆ ಅಪಘಾತಗಳಿಂದ 1.73 ಲಕ್ಷ ಸಾವುಗಳು ಮತ್ತು 4.47 ಲಕ್ಷ ಗಾಯಗಳಿಗೆ ಸಾಕ್ಷಿಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 1.6% ಹೆಚ್ಚಾಗಿದೆ.
ಪ್ರಕೃತಿ ವಿಕೋಪಗಳಿಂದ ಸಂಭವಿಸಿದ ಅಪಘಾತಗಳು:- 6,444 ಸಾವುಗಳು – ಮಿಂಚಿನಿಂದ (39.7% ), ಶಾಖದ ಹೊಡೆತ (12.5%), ಶೀತಕ್ಕೆ (11.4%) ಮತ್ತು ಪ್ರವಾಹಗಳಂತಹ ನೈಸರ್ಗಿಕ ಶಕ್ತಿಗಳಿಂದ ಸಂಭವಿಸಿವೆ.
ಇತರ ಕಾರಣಗಳಿಂದ ಉಂಟಾಗುವ ಅಪಘಾತಗಳು:- ಸಂಚಾರ ಅಪಘಾತಗಳು (45.2%), ಹಠಾತ್ ಸಾವುಗಳು (14.5% ), ಮುಳುಗುವಿಕೆ (8.6%), ಬೀಳುವಿಕೆ (5.7%), ವಿಷಪ್ರಾಶನ ಮತ್ತು ವಿದ್ಯುತ್ ಆಘಾತ (3.2%).
ರೈತರ ಆತ್ಮಹತ್ಯೆಗಳು:- 2023 ರಲ್ಲಿ ಕೃಷಿ ವಲಯವು 10,786 ಆತ್ಮಹತ್ಯೆಗಳನ್ನು ಕಂಡಿತು (2022 ರಿಂದ 10% ರಷ್ಟು ಇಳಿಕೆ), ಇದರಲ್ಲಿ 4,690 ರೈತರು ಮತ್ತು 6,096 ಕೃಷಿ ಕಾರ್ಮಿಕರು ಸೇರಿದ್ದಾರೆ.
ಇದು ಪ್ರತಿದಿನ ಸರಿಸುಮಾರು ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ಇದು ಆಳವಾಗಿ ಬೇರೂರಿರುವ ಕೃಷಿ ಬಿಕ್ಕಟ್ಟನ್ನು ಒತ್ತಿಹೇಳುತ್ತದೆ.
ಮಹಾರಾಷ್ಟ್ರವು 2,518 ರೈತರ ಆತ್ಮಹತ್ಯೆಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ನಂತರದ ಸ್ಥಾನಗಳಲ್ಲಿವೆ.
ಮಾನಸಿಕ ಆರೋಗ್ಯ ಮತ್ತು ಅನಾರೋಗ್ಯ-ಸಂಬಂಧಿತ ಆತ್ಮಹತ್ಯೆಗಳು:– ಅನಾರೋಗ್ಯದಿಂದಾಗಿ ಆತ್ಮಹತ್ಯೆಗಳಲ್ಲಿ ಶೇ. 3.2 ರಷ್ಟು ಏರಿಕೆ ಕಂಡುಬಂದಿದ್ದು, ಸುಮಾರು ಶೇ. 20 ರಷ್ಟು ಪ್ರಕರಣಗಳು ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಗೆ ಸಂಬಂಧಿಸಿವೆ ಎಂದು ವರದಿಯು ಎತ್ತಿ ತೋರಿಸುತ್ತದೆ.
13,978 ಆತ್ಮಹತ್ಯೆಗಳಿಗೆ ಮಾನಸಿಕ ಅಸ್ವಸ್ಥತೆಯೇ ಕಾರಣ.
ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅನಾರೋಗ್ಯಕ್ಕೆ ಸಂಬಂಧಿತ ಆತ್ಮಹತ್ಯೆಗಳು ಅತಿ ಹೆಚ್ಚು ವರದಿಯಾಗಿವೆ.
ಆತಂಕಕಾರಿ ಸಂಗತಿಯೆಂದರೆ, ಕ್ಯಾನ್ಸರ್ ನಿಂದ ಉಂಟಾಗುವ ಆತ್ಮಹತ್ಯೆಗಳು ಶೇ. 14 ರಷ್ಟು ಏರಿಕೆಯಾಗಿವೆ ಮತ್ತು ಗರ್ಭಪಾತಕ್ಕೆ ಸಂಬಂಧಿಸಿದ ಸಾವುಗಳು ಶೇ. 59 ರಷ್ಟು ಏರಿಕೆಯಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಕಛೇರಿ (NCRB) ಯ ಬಗ್ಗೆ:
ಇದು 1986 ರಲ್ಲಿ ಸ್ಥಾಪನೆಯಾಯಿತು.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಉದ್ದೇಶ:- ಅಪರಾಧ ಮತ್ತು ಅಪರಾಧಿಗಳ ಕುರಿತಾದ ಮಾಹಿತಿಯ ಭಂಡಾರವಾಗಿ ಇದು ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ತನಿಖಾಧಿಕಾರಿಗಳಿಗೆ ಅಪರಾಧವನ್ನು ಅಪರಾಧಿಗಳಿಗೆ ಜೋಡಿಸುವಲ್ಲಿ ಸಹಾಯ ಮಾಡುತ್ತದೆ.
ಪ್ರಧಾನ ಕಚೇರಿ:- ನವ ದೆಹಲಿ
ರಾಷ್ಟ್ರೀಯ ಅಪರಾಧ ದಾಖಲೆಗಳ ಕಛೇರಿಯು ಜಾರಿಗೆ ತರುತ್ತಿರುವ ಯೋಜನೆಗಳು:
ಅಂತರ-ಚಾಲಿತ ಅಪರಾಧ ನ್ಯಾಯ ವ್ಯವಸ್ಥೆ (ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್- ICJS) ಯೋಜನೆ.
ಅಪರಾಧ ಮತ್ತು ಅಪರಾಧಿ ಹಾದಿ ಅನುಸರಣೆ ಜಾಲ ಹಾಗೂ ವ್ಯವಸ್ಥೆ (CCTNS).
NCRB ಮೂರು ವಾರ್ಷಿಕ ವರದಿಗಳನ್ನು ಹೊರತರುತ್ತದೆ. ಈ ವರದಿಗಳು ಪೊಲೀಸ್ ಅಧಿಕಾರಿಗಳಿಗೆ, ಸಂಶೋಧಕರಿಗೆ, ಮಾಧ್ಯಮ ಮತ್ತು ನೀತಿ ನಿರೂಪಕರಿಗೆ ಪ್ರಮುಖ ಉಲ್ಲೇಖ ಬಿಂದುಗಳಾಗಿವೆ. ಅವು ಯಾವವೆಂದರೆ:
ಭಾರತದಲ್ಲಿ ಅಪರಾಧ.
ಭಾರತದಲ್ಲಿ ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳು.
ಭಾರತದ ಜೈಲು ಅಂಕಿಅಂಶಗಳು.
ಮಾದರಿ ಯುವ ಗ್ರಾಮ ಸಭೆ ಉಪಕ್ರಮ
ಸಾಮಾನ್ಯ ಅಧ್ಯಯನ-2/ಆಡಳಿತ
ಸಂದರ್ಭ:
ಕೇಂದ್ರ ಸರ್ಕಾರವು ಅಕ್ಟೋಬರ್ 2025 ರಿಂದ ಮಾದರಿ ಯುವ ಗ್ರಾಮ ಸಭೆ (MYGS) ಉಪಕ್ರಮವನ್ನು ಪ್ರಾರಂಭಿಸಲು ಸಜ್ಜಾಗಿದೆ.
ಶಾಲಾ ವಿದ್ಯಾರ್ಥಿಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಮಾದರಿ ವಿಶ್ವಸಂಸ್ಥೆಯ ಚೌಕಟ್ಟಿನಿಂದ ಪ್ರೇರಿತವಾಗಿದೆ.
ಮಾದರಿ ಯುವ ಗ್ರಾಮ ಸಭೆ (MYGS) ಯ ಬಗ್ಗೆ:
ಈ ಉಪಕ್ರಮವು ಗ್ರಾಮೀಣ ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ ತಳಮಟ್ಟದ ಪ್ರಜಾಪ್ರಭುತ್ವದಲ್ಲಿ ತರಬೇತಿ ನೀಡುತ್ತದೆ.
ಗುರಿ:- ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸ್ಥಳೀಯ ಆಡಳಿತವೇ ಕೇಂದ್ರಬಿಂದು ಎಂದು ನೋಡುವ ತಿಳುವಳಿಕೆಯುಳ್ಳ ಮತ್ತು ಜವಾಬ್ದಾರಿಯುತ ನಾಗರಿಕರ ಹೊಸ ಪೀಳಿಗೆಯನ್ನು ಸೃಷ್ಟಿಸುವುದು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಅಣಕು ಗ್ರಾಮ ಸಭೆಗಳಲ್ಲಿ ಭಾಗವಹಿಸುವುದನ್ನು ಒಳಗೊಂಡಿರುತ್ತದೆ, ಅಲ್ಲಿ ಅವರು ಅಧ್ಯಕ್ಷ ಮತ್ತು ವಾರ್ಡ್ ಸದಸ್ಯರಂತೆ ಪಾತ್ರಗಳನ್ನು ವಹಿಸಿಕೊಂಡು ಗ್ರಾಮದ ಸಮಸ್ಯೆಗಳನ್ನು ಚರ್ಚಿಸುತ್ತಾರೆ ಮತ್ತು ನಿರ್ಣಯಗಳನ್ನು ಅಂಗೀಕರಿಸುತ್ತಾರೆ.
ಪ್ರತಿ ಶಾಲೆಯು ಚಟುವಟಿಕೆಯನ್ನು ನಡೆಸಲು ₹20,000 ಆರ್ಥಿಕ ಸಹಾಯವನ್ನು ಪಡೆಯುತ್ತದೆ.
ಅನುಷ್ಠಾನಗೊಳಿಸುವ ಸಚಿವಾಲಯಗಳು:- ಪಂಚಾಯತ್ ರಾಜ್ ಸಚಿವಾಲಯ, ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳ ಸಹಯೋಗದೊಂದಿಗೆ.
ಬತುಕಮ್ಮ ಉತ್ಸವವು ಎರಡು ಗಿನ್ನಿಸ್ ದಾಖಲೆಗಳನ್ನು ಸೃಷ್ಟಿಸಿದೆ
ಸಾಮಾನ್ಯ ಅಧ್ಯಾಯನ 1/ ಸಂಸ್ಕೃತಿ
ಸಂದರ್ಭ:
ಬತುಕಮ್ಮ ಉತ್ಸವವು ಅತಿದೊಡ್ಡ ಹೂವಿನ ಅಲಂಕಾರ ಮತ್ತು ಅತಿ ಹೆಚ್ಚು ಮಹಿಳಾ ನೃತ್ಯಗಾರರು ಭಾಗವಹಿಸಿದ್ದಕ್ಕಾಗಿ, ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿತು.
ಬತುಕಮ್ಮ ಉತ್ಸವದ ಕುರಿತು:
ಬತುಕಮ್ಮ ಉತ್ಸವವನ್ನು ಪ್ರಧಾನವಾಗಿ ತೆಲಂಗಾಣದಲ್ಲಿ ಆಚರಿಸಲಾಗುತ್ತದೆ.
ಬತುಕಮ್ಮ ಎಂಬ ಪದವು “ಮಾತೃ ದೇವತೆ ಜೀವಂತವಾಗಿ ಬಾ” ಎಂದು ಅನುವಾದಿಸುತ್ತದೆ, ಇದು ದೈವಿಕ ಸ್ತ್ರೀಲಿಂಗ ಶಕ್ತಿ ಮತ್ತು ರಕ್ಷಣೆಯನ್ನು ಪ್ರತಿಬಿಂಬಿಸುತ್ತದೆ.
ಜನಪದರು ಈ ಹಬ್ಬವನ್ನು ಗೌರಿ ದೇವಿಯ ದಂತಕಥೆಗಳೊಂದಿಗೆ ಹಾಗೂ ಚೋಳ ರಾಜವಂಶದ ರಾಜ ಧ್ರಮಾಂಗದ ಮತ್ತು ರಾಣಿ ಸತ್ಯವತಿಯ ದಂತಕಥೆಗಳೊಂದಿಗೆ ಸಂಪರ್ಕಿಸುತ್ತದೆ.
ಬತುಕಮ್ಮನ ಕಾಲವು ನವರಾತ್ರಿಯೊಂದಿಗೆ ಹೊಂದಿಕೆಯಾಗುತ್ತದೆ, ಜೀವನ, ಭಕ್ತಿ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಆಚರಿಸುತ್ತದೆ.
ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ (RoDTEP) ಪ್ರೋತ್ಸಾಹಕ ಯೋಜನೆ
ಸಾಮಾನ್ಯ ಅಧ್ಯಯನ-3/ಆರ್ಥಿಕತೆ
ಸಂದರ್ಭ:
ಸರ್ಕಾರವು ರಫ್ತುದಾರರಿಗೆ ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆ ವಿನಾಯಿತಿ (RoDTEP) ಪ್ರೋತ್ಸಾಹಕ ಯೋಜನೆಯನ್ನು ಮಾರ್ಚ್ 31, 2026 ರವರೆಗೆ ವಿಸ್ತರಿಸಿದೆ.
ರಫ್ತು ಮಾಡಿದ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ (RoDTEP) ಪ್ರೋತ್ಸಾಹಕ ಯೋಜನೆಯ ಬಗ್ಗೆ:
ಇದನ್ನು 2021 ರಲ್ಲಿ ಪ್ರಾರಂಭಿಸಲಾಯಿತು.
ಇದು ವಿಶ್ವ ವ್ಯಾಪಾರ ಸಂಸ್ಥೆ (WTO) ಯ ಮಾನದಂಡಗಳಿಗೆ ಅನುಗುಣವಾಗಿರದ ಹಿಂದಿನ ಭಾರತದಿಂದ ಸರಕು ರಫ್ತು ಯೋಜನೆ (MEIS) ಅನ್ನು ಬದಲಾಯಿಸಿತು .
ಉದ್ದೇಶ:- ಇದು ಭಾರತ ಸರ್ಕಾರವು ವಿಧಿಸಿರುವ ವಿವಿಧ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸುಂಕಗಳು ಮತ್ತು ತೆರಿಗೆಗಳನ್ನು ಮರುಪಾವತಿಸಲು ನೀಡುವ ಪ್ರೋತ್ಸಾಹಕ ಯೋಜನೆಯಾಗಿದ್ದು, ಇವುಗಳನ್ನು ಹಿಂದೆ ರಫ್ತುದಾರರಿಗೆ ಮರುಪಾವತಿಸಲಾಗುತ್ತಿರಲಿಲ್ಲ.
ಮಹತ್ವ:- ಈ ವೆಚ್ಚಗಳನ್ನು ತಟಸ್ಥಗೊಳಿಸುವ ಮೂಲಕ, ಈ ಯೋಜನೆಯು ಭಾರತೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುವ ಗುರಿಯನ್ನು ಹೊಂದಿದೆ.
ಭಾರತ-ಯುರೋಪಿನ ಮುಕ್ತ ವ್ಯಾಪಾರ ಸಂಘ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ
ಸಾಮಾನ್ಯ ಅಧ್ಯಯನ- 3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಭಾರತ-ಯುರೋಪಿನ ಮುಕ್ತ ವ್ಯಾಪಾರ ಸಂಘ (EFTA) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (TEPA) ಜಾರಿಗೆ ಬಂದಿತು.
ಯುರೋಪಿನ ಮುಕ್ತ ವ್ಯಾಪಾರ ಸಂಘ (EFTA) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆಯ ಬಗ್ಗೆ:
ಇದು ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗಳ ಅಂತರ ಸರ್ಕಾರಿ ಸಂಸ್ಥೆಯಾಗಿದೆ.
ಇದನ್ನು 1960 ರಲ್ಲಿ ಅಂದಿನ ಏಳು ಸದಸ್ಯ ರಾಷ್ಟ್ರಗಳು ತಮ್ಮ ಸದಸ್ಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಮತ್ತು ಆರ್ಥಿಕ ಏಕೀಕರಣವನ್ನು ಉತ್ತೇಜಿಸಲು ಸ್ಥಾಪಿಸಿದವು .
ಭಾರತ-ಯುರೋಪಿನ ಮುಕ್ತ ವ್ಯಾಪಾರ ಸಂಘ (EFTA) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ ಬಗ್ಗೆ:
ಇದು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಬದ್ಧತೆಯೊಂದಿಗೆ ಭಾರತ ಸಹಿ ಮಾಡಿದ ಆಧುನಿಕ ಮತ್ತು ಮಹತ್ವಾಕಾಂಕ್ಷೆಯ ಒಪ್ಪಂದವಾಗಿದೆ.
ಈ ಒಪ್ಪಂದಕ್ಕೆ ಮಾರ್ಚ್ 2024 ರಲ್ಲಿ ನವದೆಹಲಿಯಲ್ಲಿ ಸಹಿ ಹಾಕಲಾಯಿತು.
ಹವಾಮಾನ ಬದಲಾವಣೆಯು ಅಮೆಜಾನ್ ಮಳೆಕಾಡಿನ ಮರಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ
ಸಾಮಾನ್ಯ ಅಧ್ಯಯನ -1/ ಭೂಗೋಳ, ಸಾಮಾನ್ಯ ಅಧ್ಯಯನ- 3/ ಪರಿಸರ
ಸಂದರ್ಭ:
ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ (CO₂) ಮಟ್ಟ ಏರಿಕೆಯಿಂದಾಗಿ ಅಮೆಜಾನ್ ಮಳೆಕಾಡಿನಲ್ಲಿರುವ ಮರಗಳ ಗಾತ್ರವು ಸ್ಥಿರವಾಗಿ ಹೆಚ್ಚುತ್ತಿದೆ ಎಂದು ನೇಚರ್ ಪ್ಲಾಂಟ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.
ಅಮೆಜಾನ್ ಮಳೆಕಾಡುಗಳ ಬಗ್ಗೆ:
ಸ್ಥಳ:- ಈ ಪ್ರದೇಶವು ದಕ್ಷಿಣ ಅಮೆರಿಕ ಖಂಡದ ಒಂಬತ್ತು ರಾಷ್ಟ್ರಗಳಿಗೆ ಸೇರಿದೆ .
ಸುತ್ತಮುತ್ತಲಿನ ಭಾಗಗಳು:- ಉತ್ತರದಲ್ಲಿ ಗಯಾನಾ ಎತ್ತರದ ಪ್ರದೇಶಗಳು, ಪಶ್ಚಿಮದಲ್ಲಿ ಆಂಡೀಸ್ ಪರ್ವತಗಳು, ದಕ್ಷಿಣದಲ್ಲಿ ಬ್ರೆಜಿಲ್‌ನ ಮಧ್ಯದ ಪ್ರಸ್ಥಭೂಮಿ, ಮತ್ತು ಪೂರ್ವದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಸುತ್ತುವರಿದಿದೆ.
ಆವರಿಸಿರುವ ಪ್ರದೇಶ:- ಅರಣ್ಯದ ಬಹುಪಾಲು, 60% ಬ್ರೆಜಿಲ್‌ನಲ್ಲಿದೆ, ನಂತರ ಪೆರು 13%,ಕೊಲಂಬಿಯಾ 10%, ಮತ್ತು ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಮತ್ತು ವೆನೆಜುವೆಲಾದಲ್ಲಿ ಅಲ್ಪ ಪ್ರಮಾಣದಲ್ಲಿದೆ.
ಹವಾಮಾನ:- ವರ್ಷವಿಡೀ 26-30°C ತಾಪಮಾನದೊಂದಿಗೆ ಬಿಸಿ ಮತ್ತು ಆರ್ದ್ರ ಹವಾಮಾನ. ಯಾವುದೇ ಆವರ್ತಕ ಋತುಗಳಿಲ್ಲ. ವಾರ್ಷಿಕವಾಗಿ 2,000 ಮಿ.ಮೀ ನಿಂದ 10,920 ಮಿ.ಮೀ ವರೆಗೆ ಮಳೆಯಾಗುತ್ತದೆ.
ಬುಡಕಟ್ಟುಗಳು:- ಯಾನೊಮಾಮೊ, ಕಯಾಪೊ, ಅಕುಂಟ್ಸು, ಮಾಟ್ಸೆಸ್, ಟುಪಿ ಇತ್ಯಾದಿ.
ಪ್ರಾಣಿವರ್ಗ:- ಅನಕೊಂಡ, ನೀರಿನ ಮೇಲೆ ಓಡುವ ಹಲ್ಲಿ (ಜೀಸಸ್ ಲಿಜರ್ಡ್), ಅರಚುವ (ಹೌಲರ್) ಕೋತಿ, ಸುವರ್ಣ ಸಿಂಹ ತಾಮರಿನ್ ಕೋತಿ, ಜಾಗ್ವಾರ್, ಮಂದಪ್ರಾಣಿ, ಜೇಡರ ಕೋತಿ, ಅಮೆಜಾನ್ ನದಿ ಡಾಲ್ಫಿನ್, ಟೂಕನ್ ಮತ್ತು ಕಡುಗೆಂಪು ಮಕಾವ್ ಪಕ್ಷಿ, ವಿಷ ಬಾಣ ಕಪ್ಪೆ ಮತ್ತು ಗಾಜಿನ ಕಪ್ಪೆ.
ಸಸ್ಯವರ್ಗ:- ಮರ್ಟಲ್, ಲಾರಲ್, ತಾಳೆ, ಬಾಬುಲ್, ರೋಸ್‌ವುಡ್, ಬ್ರೆಜಿಲ್ ನಟ್, ರಬ್ಬರ್ ಮರ, ಮಹೋಗನಿ ಮತ್ತು ಅಮೆಜೋನಿಯನ್ ಸೀಡರ್‌ಗಳಂತಹ ತೇವಾಂಶವುಳ್ಳ ಅಗಲವಾದ ಎಲೆಗಳ ಉಷ್ಣವಲಯದ ಮಳೆಕಾಡು.
ಅಮೆಜಾನ್ ಮಳೆಕಾಡುಗಳ ಮಹತ್ವ:
ಭೂಮಿಯ ಶ್ವಾಸಕೋಶಗಳು:- ಮಳೆಕಾಡುಗಳು ವಿಶ್ವದ ಆಮ್ಲಜನಕದ ಸುಮಾರು 20% ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಇಲ್ಲಿನ ಮರಗಳು ಮಾಲಿನ್ಯಕಾರಕ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ:- ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಅವು ನಿರ್ಣಾಯಕ ಸಮತೋಲನ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ ಏಕೆಂದರೆ ಅವು ಇಂಗಾಲವನ್ನು ಸಂಗ್ರಹಿಸುವ ಅಗಾಧ ಸಾಮರ್ಥ್ಯವನ್ನು ಹೊಂದಿವೆ.
ಔಷಧೀಯ ಗುಣಗಳು:- ಈ ಸಸ್ಯಗಳಲ್ಲಿ ಹಲವು ಇನ್ನೂ ಗುಣಪಡಿಸಲಾಗದ ಕಾಯಿಲೆಗಳನ್ನು, ವಿಶೇಷವಾಗಿ ಕ್ಯಾನ್ಸರ್ ಅನ್ನು ಗುಣಪಡಿಸುವ ಸಾಮರ್ಥ್ಯವಿರುವ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳನ್ನು ಒಳಗೊಂಡಿರುತ್ತವೆ.
ಕಾಡುಗಳಿಗೆ ಬೆದರಿಕೆಯ ಕಾರಣಗಳು:
ಹವಾಮಾನ ಬದಲಾವಣೆ:- ಹವಾಮಾನ ಬದಲಾವಣೆಯಿಂದಾಗಿ ಕಾಡುಗಳು ಮಳೆಯ ಮಾದರಿಯಲ್ಲಿನ ಬದಲಾವಣೆ, ಮಾಲಿನ್ಯ ಇತ್ಯಾದಿಗಳಂತಹ ವಿವಿಧ ಸವಾಲುಗಳನ್ನು ಎದುರಿಸುತ್ತಿವೆ.
ಅರಣ್ಯನಾಶ:– ವಸಾಹತುಗಾರರು ಮರಮುಟ್ಟುಗಳನ್ನು ಪಡೆಯಲು ಮತ್ತು ಮೇಯಿಸುವ ಹುಲ್ಲುಗಾವಲು ಮತ್ತು ಕೃಷಿಭೂಮಿಯನ್ನು ಸೃಷ್ಟಿಸಲು ಭೂಮಿಯನ್ನು ತೆರವುಗೊಳಿಸಿದ ಪರಿಣಾಮವಾಗಿ ಅಮೆಜಾನ್ ಕಾಡಿನ ಗಾತ್ರವು ಗಣನಿಯವಾಗಿ ಕುಗ್ಗಿತು.
ಕಾಡ್ಗಿಚ್ಚುಗಳು:- ಇದು ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯತೆಯ ಉಳಿವಿಗೆ ಅಪಾಯವನ್ನುಂಟುಮಾಡುತ್ತದೆ. 2019 ರ ಕಾಡಿನ ಬೆಂಕಿಯು ಈ ಪ್ರದೇಶದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ.
ಅಮೆಜಾನ್ ನದಿಯ ಬಗ್ಗೆ:
ಇದು ನೀರಿನ ಪ್ರಮಾಣದಲ್ಲಿ ವಿಶ್ವದ ಅತಿ ದೊಡ್ಡ ನದಿಯಾಗಿದ್ದು, ಆಫ್ರಿಕಾದ ನೈಲ್ ನದಿಯ ನಂತರ ವಿಶ್ವದ ಎರಡನೇ ಅತಿ ಉದ್ದದ ನದಿಯಾಗಿದೆ.
ನದಿಯ ಮೂಲ:- ಪೆರುವಿನ ಆಂಡಿಸ್ ಪರ್ವತದಲ್ಲಿ 5,598 ಮೀಟರ್ ಎತ್ತರದಲ್ಲಿದೆ ಉಗಮವಾಗುತ್ತದೆ.
ಉದ್ದ: 6400 ಕಿ.ಮೀ.
ಜಲಾನಯನ ಪ್ರದೇಶ : ಈ ಜಲಾನಯನ ಪ್ರದೇಶವು ಬ್ರೆಜಿಲ್ ಮತ್ತು ಪೆರುವಿನ ಹೆಚ್ಚಿನ ಭಾಗ, ಕೊಲಂಬಿಯಾ, ಈಕ್ವೆಡಾರ್ ಮತ್ತು ಬೊಲಿವಿಯಾದ ಕೆಲವು ಭಾಗಗಳು ಮತ್ತು ವೆನೆಜುವೆಲಾದ ಒಂದು ಸಣ್ಣ ಪ್ರದೇಶವನ್ನು ಒಳಗೊಂಡಿದೆ.
ಉಪನದಿಗಳು : ಜಪುರ, ಜುರುವಾ, ಮಡೈರಾ, ನೀಗ್ರೋ, ಪುರುಸ್ ಮತ್ತು ಕ್ಸಿಂಗು ನದಿಗಳು.
ನದಿಯ ಮುಖಜ ಭೂಮಿ: ಬ್ರೆಜಿಲ್‌ನ ಈಶಾನ್ಯ ಕರಾವಳಿಯಲ್ಲಿರುವ ಅಟ್ಲಾಂಟಿಕ್ ಮಹಾಸಾಗರ.
ಭಾರತ-ಭೂತಾನ ನಡುವಿನ ಸಂಪರ್ಕವನ್ನು ಪರಿವರ್ತಿಸಲು ಐತಿಹಾಸಿಕ ರೈಲ್ವೆ ಯೋಜನೆಗಳು ಸಜ್ಜಾಗಿವೆ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಸಂದರ್ಭ:
ಭೂತಾನನ್ನು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಗಡಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ಎರಡು ಗಡಿಯಾಚೆಗಿನ ರೈಲ್ವೆ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಗೆಲೆಫು ಮತ್ತು ಸ್ಯಾಮ್ಟ್ಸೆ:
ಗೆಲೆಫು ಮತ್ತು ಸ್ಯಾಮ್ಟ್ಸೆ ಭೂತಾನಿನ ಪ್ರಮುಖ ರಫ್ತು ಮತ್ತು ಆಮದು ಕೇಂದ್ರಗಳಾಗಿದ್ದು, ಇವು 700 ಕಿಮೀ ಉದ್ದದ ಭಾರತ-ಭೂತಾನ ಗಡಿಗೆ ಸೇವೆ ಸಲ್ಲಿಸುತ್ತವೆ.
ಭೂತಾನ ಸರ್ಕಾರವು ಗೆಲೆಫುವನ್ನು “ಮೈಂಡ್‌ಫುಲ್‌ನೆಸ್ ಸಿಟಿ” ಆಗಿ ಮತ್ತು ಸ್ಯಾಮ್ಟ್ಸೆಯನ್ನು ಕೈಗಾರಿಕಾ ಪಟ್ಟಣವಾಗಿ ಅಭಿವೃದ್ಧಿಪಡಿಸುತ್ತಿದೆ.
ರೈಲು ಯೋಜನೆಗಳು:
ಕೊಕ್ರಜಾರ್-ಗೆಲೆಫು ಮಾರ್ಗ:- ಇದು ಭೂತಾನ್‌ನ ಸರ್ಪಾಂಗ್ ಜಿಲ್ಲೆಯನ್ನು, ಅಸ್ಸಾಂನ ಕೊಕ್ರಜಾರ್ ಮತ್ತು ಚಿರಾಂಗ್ ಜಿಲ್ಲೆಗಳೊಂದಿಗೆ ಸಂಪರ್ಕಿಸುತ್ತದೆ .
ಇದು 69 ಕಿ.ಮೀ. ಉದ್ದವಿದ್ದು , 3,456 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬನಾರ್ಹತ್-ಸಮತ್ಸೆ ಮಾರ್ಗ:– ಇದು ಭೂತಾನಿನ ಸಮತ್ಸೆ ಜಿಲ್ಲೆಯನ್ನು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ .
ಇದು 20 ಕಿ.ಮೀ. ಕ್ರಮಿಸಲಿದ್ದು , 577 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ನಕ್ಷತ್ರಾಂತರ ನಕ್ಷೆ ರಚನೆ ಮತ್ತು ವೇಗವರ್ಧನೆ ಸಂವೇದಕ (IMAP)
ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಸೂರ್ಯನ ವಾಯುಮಂಡಲ (ಹೀಲಿಯೋಸ್ಪಿಯರ್) ದ ಗಡಿಯನ್ನು ನಕ್ಷೆ ಮಾಡಲು, ಶಕ್ತಿಯುತ ಕಣಗಳನ್ನು ಪತ್ತೆಹಚ್ಚಲು ಮತ್ತು ಬಾಹ್ಯಾಕಾಶ ಹವಾಮಾನ ಮುನ್ಸೂಚನೆಯನ್ನು ಹೆಚ್ಚಿಸಲು ನಾಸಾ (NASA) ನಕ್ಷತ್ರಾಂತರ ನಕ್ಷೆ ರಚನೆ ಮತ್ತು ವೇಗವರ್ಧನೆ ಸಂವೇದಕ (ಇಂಟರ್‌ಸ್ಟೆಲ್ಲಾರ್ ಮ್ಯಾಪಿಂಗ್ ಮತ್ತು ಆಕ್ಸಿಲರೇಶನ್ ಪ್ರೋಬ್ – IMAP) ಅನ್ನು ಪ್ರಾರಂಭಿಸಿತು.
ನಕ್ಷತ್ರಾಂತರ ನಕ್ಷೆ ರಚನೆ ಮತ್ತು ವೇಗವರ್ಧನೆ ಸಂವೇದಕ (IMAP) ದ ಬಗ್ಗೆ:
ಇದು ಸೌರವ್ಯೂಹದ ಸುತ್ತಲಿನ ಸೂರ್ಯನ ರಕ್ಷಣಾತ್ಮಕ ಗುಳ್ಳೆಯಾದ ಸೂರ್ಯನ ವಾಯುಮಂಡಲ (ಹೀಲಿಯೋಸ್ಪಿಯರ್) ಮತ್ತು ನಕ್ಷತ್ರಾಂತರ ಬಾಹ್ಯಾಕಾಶದೊಂದಿಗಿನ ಪರಸ್ಪರ ಕ್ರಿಯೆಯನ್ನು ಅನ್ವೇಷಿಸಲು ವಿನ್ಯಾಸಗೊಳಿಸಲಾದ ಬಾಹ್ಯಾಕಾಶ ಯಾನವಾಗಿದೆ.
ಇದು ಭೂಮಿ-ಸೂರ್ಯ ರ ನಡುವೆ ಇರುವ ಲ್ಯಾಗ್ರೇಂಜ್ ಪಾಯಿಂಟ್ 1 (L1) ರಲ್ಲಿ ನೆಲೆಗೊಳಿಸಲಾಗಿದೆ.
ಇದು ಸೌರಮಾರುತ, ಶಕ್ತಿಯುತ ಕಣಗಳು, ಕಾಂತೀಯ ಕ್ಷೇತ್ರಗಳು ಮತ್ತು ಕಾಸ್ಮಿಕ್ ಅವಶೇಷಗಳನ್ನು ಅಧ್ಯಯನ ಮಾಡಲು 10 ಉಪಕರಣಗಳನ್ನು ಬಳಸುತ್ತದೆ.
ವೈಶಿಷ್ಟ್ಯಗಳು ಮತ್ತು ಉದ್ದೇಶಗಳು:
ಸೌರ ಕಣಗಳು ಹೇಗೆ ಶಕ್ತಿಯುತವಾಗುತ್ತವೆ ಮತ್ತು ಹೀಲಿಯೋಸ್ಪಿಯರ್ ಭೂಮಿಯನ್ನು ಗ್ಯಾಲಕ್ಸಿಯ ವಿಕಿರಣದಿಂದ ಹೇಗೆ ರಕ್ಷಿಸುತ್ತದೆ ಎಂಬುದನ್ನು ಕಂಡುಹಿಡಿಯುವುದು ಇದರ ಗುರಿಯಾಗಿದೆ.
ಇದು ಗಗನಯಾತ್ರಿಗಳು ಮತ್ತು ತಂತ್ರಜ್ಞಾನವನ್ನು ರಕ್ಷಿಸಲು ನೈಜ-ಸಮಯದ ಬಾಹ್ಯಾಕಾಶ ಹವಾಮಾನ ದತ್ತಾಂಶವನ್ನು ಒದಗಿಸುತ್ತದೆ, ಇದು ಕಾಸ್ಮಿಕ್ ವಸ್ತುಗಳ ಬಗ್ಗೆ ಮತ್ತು ಗ್ರಹ ವ್ಯವಸ್ಥೆಗಳ ವಾಸಯೋಗ್ಯತೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ.
ಪಾಕ್ ಕೊಲ್ಲಿಯಲ್ಲಿರುವ ಭಾರತದ ಮೊದಲ ಕಡಲ ಹಸು (ಡುಗಾಂಗ್) ವಿನ ಸಂರಕ್ಷಣಾ ಮೀಸಲು ಪ್ರದೇಶ
ಸಾಮಾನ್ಯ ಅಧ್ಯಯನ-3/ ಸುದ್ದಿಯಲ್ಲಿರುವ ಪ್ರಭೇದಗಳು
ಇದೀಗ ಸುದ್ದಿಯಲ್ಲಿದೆ:
ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ವು ತನ್ನ 2025 ರ ವಿಶ್ವ ಸಂರಕ್ಷಣಾ ಕಾಂಗ್ರೆಸ್‌ನಲ್ಲಿ ತಮಿಳುನಾಡಿನ ಪಾಕ್ ಕೊಲ್ಲಿಯಲ್ಲಿರುವ ಭಾರತದ ಮೊದಲ ಕಡಲ ಹಸು (ಡುಗಾಂಗ್) ವಿನ ಸಂರಕ್ಷಣಾ ಮೀಸಲು ಪ್ರದೇಶವನ್ನು ಅಧಿಕೃತವಾಗಿ ಗುರುತಿಸಿದೆ.
ಭಾರತದ ಮೊದಲ ಕಡಲ ಹಸು (ಡುಗಾಂಗ್) ವಿನ ಸಂರಕ್ಷಣಾ ಮೀಸಲು ಪ್ರದೇಶದ ಬಗ್ಗೆ:
ಇದನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ತಮಿಳುನಾಡು ಸರ್ಕಾರವು ಸೆಪ್ಟೆಂಬರ್ 2022 ರಲ್ಲಿ ಸ್ಥಾಪಿಸಿತು.
ಇದು ಉತ್ತರ ಪಾಕ್ ಕೊಲ್ಲಿಯಲ್ಲಿ 448.34 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ ಮತ್ತು ಕಡಲ ಹಸುಗಳಿಗೆ (ಡುಗಾಂಗ್ ಡುಗಾನ್) ಪ್ರಮುಖ ಆಹಾರ ತಾಣಗಳಾದ 12,250 ಹೆಕ್ಟೇರ್‌ಗಳಿಗೂ ಹೆಚ್ಚು ಸಮುದ್ರ ಹುಲ್ಲಿನ ಮೈದಾನಗಳಿಗೆ ಹೆಸರುವಾಸಿಯಾಗಿದೆ.
ಕಡಲ ಹಸುಗಳ (ಡುಗಾಂಗ್ ಡುಗಾನ್) ಬಗ್ಗೆ:
ಕಡಲ ಹಸುಗಳು ಪ್ರಾಥಮಿಕವಾಗಿ ಸಸ್ಯಾಹಾರಿಗಳಾಗಿವೆ, ದಿನಕ್ಕೆ 30 ರಿಂದ 40 ಕೆಜಿ ಸಮುದ್ರದ ಹುಲ್ಲನ್ನು ಮೇಯುತ್ತವೆ.
ಇವುಗಳನ್ನು “ಸಮುದ್ರ ಹಸುಗಳು” ಎಂದು ಕರೆಯಲಾಗುತ್ತದೆ ಮತ್ತು ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರಗಳ ಆಳವಿಲ್ಲದ ಕರಾವಳಿ ನೀರಿನಲ್ಲಿ ಸಮುದ್ರದ ಹುಲ್ಲನ್ನು ಮೇಯುತ್ತವೆ.
ಕರಾವಳಿ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಮತ್ತು ಮೀನು ಉತ್ಪಾದನೆಗೆ ಸಹಾಯ ಮಾಡುವಲ್ಲಿ ಇವುಗಳ ಪ್ರಮುಖ ಪಾತ್ರಕ್ಕಾಗಿ ಇವುಗಳನ್ನು ಸಾಮಾನ್ಯವಾಗಿ “ಸಮುದ್ರದ ರೈತರು ಅಥವಾ ತೋಟಗಾರರು” ಎಂದು ಕರೆಯಲಾಗುತ್ತದೆ.
ಭೌಗೋಳಿಕ ವ್ಯಾಪ್ತಿ:- ಈ ಸೌಮ್ಯ ದೈತ್ಯ ಜೀವಿಗಳು ಕರಾವಳಿಯ ಉದ್ದಕ್ಕೂ ಬೆಚ್ಚಗಿನ ನೀರಿನಲ್ಲಿ ಕಂಡುಬರುತ್ತವೆ, ಮುಖ್ಯವಾಗಿ ಕೊಲ್ಲಿಗಳು ಮತ್ತು ಸರೋವರಗಳಂತಹ ಶಾಂತ ಆಶ್ರಯ ಆವಾಸಸ್ಥಾನಗಳಲ್ಲಿ ಕಂಡುಬರುವ ಸಮುದ್ರ ಹುಲ್ಲುಹಾಸಿನ ಹಾಸಿಗೆಗಳಿಗೆ ಸೀಮಿತವಾಗಿವೆ.
ಹಂಚಿಕೆ:- ಅವು ಭಾರತದ ಮನ್ನಾರ್ ಖಾರಿ, ಪಾಕ್ ಕೊಲ್ಲಿ, ಕಛ್ ಖಾರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ.
ಅಪಾಯಗಳು:- ಕಳೆದ ಹಲವಾರು ದಶಕಗಳಲ್ಲಿ ಮಾಂಸಕ್ಕಾಗಿ ಬೇಟೆಯಾಡುವುದು, ಆಕಸ್ಮಿಕವಾಗಿ ಮುಳುಗಲು ಕಾರಣವಾಗುವ ವಾಣಿಜ್ಯ ಮೀನುಗಾರಿಕೆ ಪದ್ಧತಿಗಳು ಮತ್ತು ಆವಾಸಸ್ಥಾನದ ನಾಶ ಸೇರಿದಂತೆ ವಿವಿಧ ಅಂಶಗಳಿಂದಾಗಿ ಅವುಗಳ ಜನಸಂಖ್ಯೆಯು ಕ್ಷೀಣಿಸುತ್ತಿದೆ.
ಸಂರಕ್ಷಣೆ ಸ್ಥಿತಿ:
IUCN ಕೆಂಪು ಪಟ್ಟಿಯಲ್ಲಿ:- ದುರ್ಬಲ (Vu)
ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972:- ಅನುಸೂಚಿ I
ಪಾವತಿ ನಿಯಂತ್ರಣ ಮಂಡಳಿ (PRB)
ಸಾಮಾನ್ಯ ಅಧ್ಯಯನ -3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ದೇಶದ ಪಾವತಿ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಆರು ಸದಸ್ಯರ ಪಾವತಿ ನಿಯಂತ್ರಣ ಮಂಡಳಿಯನ್ನು (PRB) ರಚಿಸಿದೆ.
ಪಾವತಿ ನಿಯಂತ್ರಣ ಮಂಡಳಿ (PRB) ಯ ಬಗ್ಗೆ:
ಇದು ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯ ಸಮಿತಿಯಾದ ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಂಡಳಿ (BPSS)ಅನ್ನು ಬದಲಿಸುತ್ತದೆ.
ಕಾನೂನು ಸ್ಥಿತಿ:- ಹೊಸ ಮಂಡಳಿಯು ತನ್ನ ಅಧಿಕಾರವನ್ನು ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ಕಾಯ್ದೆ, 2007 ರಿಂದ ಪಡೆದುಕೊಂಡಿದೆ.
ಇದನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಪಾವತಿ ಮತ್ತು ನಿವಾರಣಾ ವ್ಯವಸ್ಥೆಗಳ ಇಲಾಖೆ (DPSS) ಬೆಂಬಲಿಸುತ್ತದೆ, ಅದು ನೇರವಾಗಿ ಇದಕ್ಕೆ ವರದಿ ಮಾಡುತ್ತದೆ.
ಪಾವತಿ ನಿಯಂತ್ರಣ ಮಂಡಳಿಯ ಸಂಯೋಜನೆ:
ಅಧ್ಯಕ್ಷತೆ: – ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್
ಇಬ್ಬರು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು:- ಉಪ ಗವರ್ನರ್ ಮತ್ತು ಪಾವತಿ ವ್ಯವಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು.
ಕೇಂದ್ರ ಸರ್ಕಾರದ ಮೂವರು ನಾಮನಿರ್ದೇಶಿತ ಸದಸ್ಯರು.
ಗಮನಿಸಿ:- ಬಹು ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ, ಒಂದು ವೇಳೆ ಮತದಾನ ಸಮಬಲಗೊಂಡರೆ ಅಧ್ಯಕ್ಷರು (ಅಥವಾ ಉಪ ಗವರ್ನರ್ ಅನುಪಸ್ಥಿತಿಯಲ್ಲಿ) ನಿರ್ಣಾಯಕ ಮತ ಚಲಾಯಿಸುತ್ತಾರೆ.
ಮಂಡಳಿಯು ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಭೆ ಸೇರಬೇಕು .
ಕಾರ್ಯಗಳು:
ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಾನಿಕ್ ಅಲ್ಲದ, ದೇಶೀಯ ಮತ್ತು ಗಡಿಯಾಚೆಗಿನ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಪಾವತಿ ವ್ಯವಸ್ಥೆಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಮಂಡಳಿಯು ಜವಾಬ್ದಾರವಾಗಿದೆ.
ಮಹಾ ಬೆಂಗಳೂರು ಪ್ರಾಧಿಕಾರದ (GBA) ಅಡಿಯಲ್ಲಿ ಐದು ಹೊಸ ನಗರ ನಿಗಮಗಳು
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳೊಳಗಿನ ಹೊಸ ವಾರ್ಡ್‌ಗಳ ಕರಡನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ನಗರದಲ್ಲಿ ಒಟ್ಟು ವಾರ್ಡ್‌ಗಳ ಸಂಖ್ಯೆ 198 ರಿಂದ 368 ಕ್ಕೆ ಏರಿಕೆಯಾಗಿದೆ.
ಮಹಾ (ಗ್ರೇಟರ್) ಬೆಂಗಳೂರು ಪ್ರಾಧಿಕಾರದ (GBA) ಬಗ್ಗೆ:
ಇದು ಬೆಂಗಳೂರು ನಗರದ ಹೊಸ ಉನ್ನತ ನಗರ ಆಡಳಿತ ಸಂಸ್ಥೆಯಾಗಿದ್ದು, ಇದು ಮೇ ಮತ್ತು ಸೆಪ್ಟೆಂಬರ್ 2025 ರಲ್ಲಿ ಕಾರ್ಯಾರಂಭಿಸಿತು.
ಇದು ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯನ್ನು ಬದಲಾಯಿಸಿತು.
ಇದು “ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024” ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ .
GBA ದ ಪ್ರಮುಖ ಕಾರ್ಯಗಳು ಮತ್ತು ರಚನೆಯ ಬಗ್ಗೆ:
ಉನ್ನತ ಸಮನ್ವಯ ಸಂಸ್ಥೆ:- ಮಹಾ ಬೆಂಗಳೂರು ಪ್ರಾಧಿಕಾರ (GBA) ದ ಪ್ರಮುಖ ಜವಾಬ್ದಾರಿ ಎಂದರೆ – ಹೊಸದಾಗಿ ರಚಿಸಲಾದ ಐದು ನಗರ ನಿಗಮಗಳ (ಪ್ರಸ್ತುತ: ಪೂರ್ವ, ಪಶ್ಚಿಮ, ಕೇಂದ್ರ, ಉತ್ತರ ಮತ್ತು ದಕ್ಷಿಣ) ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು. ಇದಲ್ಲದೆ, ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮತ್ತು ಬೆಂಗಳೂರು ಜಲಮಂಡಳಿ (BWSSB) ಮುಂತಾದ ಪರಸಂಸ್ಥೆಗಳ ಕಾರ್ಯಗಳನ್ನು ಸಹ ಸಮನ್ವಯಗೊಳಿಸುತ್ತದೆ.
ನಗರ ಯೋಜನೆ: ಇದು ಇಡೀ ಮಹಾ ಬೆಂಗಳೂರು ಪ್ರದೇಶಕ್ಕೆ ಪ್ರಾಥಮಿಕ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
ಜಿಬಿಎ ನಾಯಕತ್ವ:
ಅಧ್ಯಕ್ಷರು:- ಕರ್ನಾಟಕದ ಮುಖ್ಯಮಂತ್ರಿಗಳು.
ಉಪಾಧ್ಯಕ್ಷ:- ಬೆಂಗಳೂರು ನಗರಾಭಿವೃದ್ಧಿ ಸಚಿವರು.
ಸದಸ್ಯ ಕಾರ್ಯದರ್ಶಿ:- ಮುಖ್ಯ ಆಯುಕ್ತರು.
ಸದಸ್ಯತ್ವ: ಪ್ರಾಧಿಕಾರವು ರಾಜ್ಯ ಸಚಿವರು, ಸಂಸತ್ ಸದಸ್ಯರು (ಸಂಸದರು), ಬೆಂಗಳೂರು ಕ್ಷೇತ್ರಗಳ ವಿಧಾನಸಭಾ ಸದಸ್ಯರು (ಶಾಸಕರು), ಐದು ನಗರ ನಿಗಮಗಳ ಮೇಯರ್‌ಗಳು ಮತ್ತು ಪ್ರಮುಖ ನಾಗರಿಕ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಮತದಾನದ ಹಕ್ಕು ಹೊಂದಿರುವ ವ್ಯಾಪಕ ಶ್ರೇಣಿಯ ಪದನಿಮಿತ್ತ ಸದಸ್ಯರನ್ನು ಒಳಗೊಂಡಿದೆ.
ನಗರ ನಿಗಮ – ಏಳು ನಗರ ನಿಗಮಗಳವರೆಗೆ ಅನುಮತಿ ಇದೆ; ಪ್ರಸ್ತುತ ಐದು ಸಕ್ರಿಯವಾಗಿವೆ.