Blog

  • ಭಾರತೀಯ ಕಲ್ಲಿದ್ದಲು ನಿಗಮ ನಿಯಮಿತ (CIL) | ಈಶಾನ್ಯ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (NEST) ಸಮೂಹ | ಅಂತರರಾಷ್ಟ್ರೀಯ ಜೀವಗೋಳ ಮೀಸಲು ದಿನ | ತೋರ್ಖಾಮ್ ಗಡಿ

    ಭಾರತೀಯ ಕಲ್ಲಿದ್ದಲು ನಿಗಮ ನಿಯಮಿತ (CIL)

    ಸಾಮಾನ್ಯ ಅಧ್ಯಾಯನ – 3/ ಇಂಧನ ಮತ್ತು ಮೂಲಸೌಕರ್ಯ

    ಸಂದರ್ಭ:

    • ಭಾರತೀಯ ಕಲ್ಲಿದ್ದಲು ನಿಗಮ ನಿಯಮಿತ ತನ್ನ ಸoಸ್ಥಾಪನೆಯ 50 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ.

    ಭಾರತೀಯ ಕಲ್ಲಿದ್ದಲು ನಿಗಮ ನಿಯಮಿತ (CIL) ದ ಬಗ್ಗೆ:

      • ಇದು ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮವಾಗಿದೆ.
      • ಇದನ್ನು ನವೆಂಬರ್ 1975 ರಲ್ಲಿ ಸ್ಥಾಪಿಸಲಾಯಿತು.
      • ಪ್ರಧಾನ ಕಚೇರಿ: ಕೋಲ್ಕತ್ತಾ.
    • ಉತ್ಪನ್ನಗಳು: ಕೋಕಿಂಗ್ ಕಲ್ಲಿದ್ದಲು, ಅರೆ ಕೋಕಿಂಗ್ ಕಲ್ಲಿದ್ದಲು, ಕೋಕಿಂಗ್ ಅಲ್ಲದ  ಕಲ್ಲಿದ್ದಲು, ತೊಳೆಯಲಾದ ಮತ್ತು ಶುದ್ಧಗೊಳಿಸಲಾದ ಕಲ್ಲಿದ್ದಲು, ಕಲ್ಲಿದ್ದಲು ಪುಡಿ, ಮತ್ತು ಕೋಕ್ ಉತ್ಪಾದಿಸುತ್ತದೆ.
    • ಕಾರ್ಯತಂತ್ರದ ಪ್ರಸ್ತುತತೆ: ಇದು ಒಟ್ಟು ದೇಶೀಯ ಕಲ್ಲಿದ್ದಲು ಉತ್ಪಾದನೆಯ 80% ಮತ್ತು ಒಟ್ಟು ಕಲ್ಲಿದ್ದಲು ಆಧಾರಿತ ಉತ್ಪಾದನೆಯ 75% ಗೆ ಕೊಡುಗೆ ನೀಡುತ್ತದೆ.

    ಸಾರ್ವಜನಿಕ ವಲಯದ ಉದ್ಯಮಗಳ (PSU’s) ಬಗ್ಗೆ:

      • ಇವು ಸರ್ಕಾರಿ ಸ್ವಾಮ್ಯದ ಕಂಪನಿಗಳು ಅಥವಾ ನಿಗಮಗಳಾಗಿದ್ದು, ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರವು ಬಹುಪಾಲನ್ನು ಹೊಂದಿದೆ (51% ಅಥವಾ ಅದಕ್ಕಿಂತ ಹೆಚ್ಚು).
      • ಭಾರತದ ಜಿಡಿಪಿಗೆ ಕೊಡುಗೆ: ಹಣಕಾಸು ಸಚಿವಾಲಯದ ವರದಿಯ ಪ್ರಕಾರ ಸುಮಾರು 13–14% ಕೊಡುಗೆ ನೀಡುತ್ತದೆ.
    • ಉದ್ಯೋಗ ಸೃಷ್ಟಿಯಲ್ಲಿ ಪಾತ್ರ : ಸುಮಾರು 9–10 ಲಕ್ಷ ಜನರಿಗೆ ನೇರ ಉದ್ಯೋಗ ದೊರೆಯುತ್ತದೆ, ಕೇಂದ್ರ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಪರೋಕ್ಷ ಉದ್ಯೋಗದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
    • ಒಟ್ಟು CPSUಗಳು: ಭಾರತವು 250 ಕ್ಕೂ ಹೆಚ್ಚು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ಹೊಂದಿದ್ದು, ಅವುಗಳನ್ನು ಮಹಾರತ್ನ, ನವರತ್ನ ಮತ್ತು ಮಿನಿರತ್ನ ಎಂದು ವರ್ಗೀಕರಿಸಲಾಗಿದೆ.
    • ಪ್ರಮುಖ ವಲಯದ ಪ್ರಾಬಲ್ಯ: ಪಿಎಸ್‌ಯುಗಳು ಇಂಧನ, ಗಣಿಗಾರಿಕೆ, ರಕ್ಷಣೆ ಮತ್ತು ಸಾರಿಗೆಯಲ್ಲಿ ಪ್ರಮುಖ ಪಾತ್ರವನ್ನು ಉಳಿಸಿಕೊಂಡಿವೆ , ಆದರೆ ಖಾಸಗಿ ವಲಯದ ಉಪಸ್ಥಿತಿಯು ಹೆಚ್ಚುತ್ತಿದೆ.

    ಈಶಾನ್ಯ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (NEST) ಸಮೂಹ

    ಸಾಮಾನ್ಯ ಅಧ್ಯಾಯನ – 3/ಮೂಲಸೌಕರ್ಯ

    ಸಂದರ್ಭ:

    • ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಗುವಾಹಟಿಯಲ್ಲಿ ಈಶಾನ್ಯ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (NEST) ದ ಸಮೂಹವನ್ನು, ಕೇಂದ್ರ ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವರು ಉದ್ಘಾಟಿಸಿದರು.

    ಈಶಾನ್ಯ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ (NEST) ಸಮೂಹದ ಬಗ್ಗೆ:

      • ಕಾರ್ಯಾದೇಶ:- ಇದು ಈಶಾನ್ಯ ಭಾರತದ ನಾವೀನ್ಯತೆ ಪರಿಸರದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಸ್ಥಳೀಯ ಬುದ್ಧಿವಂತಿಕೆಯನ್ನು ಜಾಗತಿಕ ಪರಿಹಾರಗಳಾಗಿ ಪರಿವರ್ತಿಸುತ್ತದೆ.
    • ಇದು ನಾಲ್ಕು ಪ್ರಮುಖ ವಿಭಾಗಗಳ ಮೇಲೆ ಕೇಂದ್ರೀಕರಿಸುತ್ತದೆ: 
    1. ಮೂಲಸ್ತರದ ಹೊಸ ನಾವೀನ್ಯತೆ.
    2. ಅರೆವಾಹಕಗಳು ಮತ್ತು ಕೃತಕ ಬುದ್ಧಿಮತ್ತೆ.
    3. ಬಿದಿರು ಆಧಾರಿತ ತಂತ್ರಜ್ಞಾನಗಳು.
    4. ಜೈವಿಕ ವಿಘಟನೀಯ ಪ್ಲಾಸ್ಟಿಕ್‌ಗಳು.

    ಅಂತರರಾಷ್ಟ್ರೀಯ ಜೀವಗೋಳ ಮೀಸಲು ದಿನ

    ಸಾಮಾನ್ಯ ಅಧ್ಯಾಯನ – 3/ಪರಿಸರ ಸಂರಕ್ಷಣೆ

    ಸಂದರ್ಭ:

    • ಅಂತರರಾಷ್ಟ್ರೀಯ ಜೀವಗೋಳ ಮೀಸಲು ದಿನವನ್ನು ನವೆಂಬರ್ 3 ರಂದು ಆಚರಿಸಲಾಯಿತು.

    ಅಂತರರಾಷ್ಟ್ರೀಯ ಜೀವಗೋಳ ಮೀಸಲು ದಿನದ ಬಗ್ಗೆ:

    ಜೀವಗೋಳ ಮೀಸಲುಗಳು

      • ವ್ಯಾಖ್ಯಾನ:- ಅವು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ರಾಷ್ಟ್ರೀಯ ಸರ್ಕಾರಗಳು ಗುರುತಿಸಿದ ಸಂರಕ್ಷಿತ ಪ್ರದೇಶಗಳಾಗಿವೆ.
    • ಇವು ಭೂಮಂಡಲ, ಸಮುದ್ರ ಮತ್ತು ಕರಾವಳಿ ಪರಿಸರ ವ್ಯವಸ್ಥೆಗಳನ್ನು ಒಳಗೊಂಡಿದೆ.
    • ಇವು ರಾಷ್ಟ್ರೀಯ ಸರ್ಕಾರಗಳಿಂದ ನಾಮನಿರ್ದೇಶನಗೊಳ್ಳುತ್ತವೆ ಮತ್ತು ಸಂಭಂದಿಸಿದ ರಾಜ್ಯಗಳ ಸಾರ್ವಭೌಮ ನ್ಯಾಯವ್ಯಾಪ್ತಿಯಲ್ಲಿ ಉಳಿಯುತ್ತವೆ.
    • ಭಾರತದಲ್ಲಿ ಜೀವಗೋಳ ಮೀಸಲುಗಳು – ಭಾರತವು 91,425 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ 18 ಜೀವಗೋಳ ಮೀಸಲುಗಳನ್ನು ಹೊಂದಿದ್ದು, 13 ಯುನೆಸ್ಕೋದಿಂದ ಗುರುತಿಸಲ್ಪಟ್ಟಿದೆ.
    • ಗಮನಿಸಿ- 2025 ರಲ್ಲಿ, ಹಿಮಾಚಲ ಪ್ರದೇಶದ ಶೀತ ಮರುಭೂಮಿ ಜೀವಗೋಳ ಮೀಸಲು ಪ್ರದೇಶವನ್ನು ಯುನೆಸ್ಕೋದ ವಿಶ್ವ ಜೀವಗೋಳ ಮೀಸಲು ಜಾಲದಲ್ಲಿ ಸೇರಿಸಲಾಯಿತು.

    ವಿಶ್ವ ಜೀವಗೋಳ ಮೀಸಲು ಜಾಲ (WNBR) ದ ಬಗ್ಗೆ:

      • ಇದನ್ನು ಯುನೆಸ್ಕೋ 1971 ರಲ್ಲಿ ಸ್ಥಾಪಿಸಿತು.
    • ಇದು ಅಂತರರಾಷ್ಟ್ರೀಯವಾಗಿ ಗೊತ್ತುಪಡಿಸಿದ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿದೆ, ಇದನ್ನು ಜೀವಗೋಳ ಮೀಸಲು ಎಂದು ಕರೆಯಲಾಗುತ್ತದೆ.
    • ಅವುಗಳನ್ನು ಮನುಷ್ಯ ಮತ್ತು ಜೀವಗೋಳ ಕಾರ್ಯಕ್ರಮ (MAB) ದ ಅಡಿಯಲ್ಲಿ ರಚಿಸಲಾಗಿದೆ.
    • ಗುರುತಿಸಲ್ಪಟ್ಟಿದೆ:- ಇವುಗಳನ್ನು ಯುನೆಸ್ಕೋದ ಮನುಷ್ಯ ಮತ್ತು ಜೀವಗೋಳ ಕಾರ್ಯಕ್ರಮ (MAB program) ದ ಅಡಿಯಲ್ಲಿ ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿವೆ. 

     

    ಮನುಷ್ಯ ಮತ್ತು ಜೀವಗೋಳ (MAB) ಕಾರ್ಯಕ್ರಮ:

    • ಪ್ರಾರಂಭ – ಇದು ಜನರು ಮತ್ತು ಅವರ ಪರಿಸರದ ನಡುವಿನ ಸಂಬಂಧವನ್ನು ಹೆಚ್ಚಿಸಿ, ವೈಜ್ಞಾನಿಕ ಆಧಾರವನ್ನು ಹೊಂದಲು  1971 ರಲ್ಲಿ ಯುನೆಸ್ಕೋ ಪ್ರಾರಂಭಿಸಿದ ಅಂತರ ಸರ್ಕಾರಿ ವೈಜ್ಞಾನಿಕ ಕಾರ್ಯಕ್ರಮವಾಗಿದೆ.
    • ವಿಶ್ವ ಜೀವಗೋಳ ಮೀಸಲು ಜಾಲ (WNBR) – ಈ ಕಾರ್ಯಕ್ರಮದಡಿಯಲ್ಲಿ, ಯುನೆಸ್ಕೋ ವಿಶ್ವ ಜೀವಗೋಳ ಮೀಸಲು ಜಾಲವನ್ನು (WNBR) ಸ್ಥಾಪಿಸಿದೆ.
    • ಭಾರತದ 13 ಜೀವಗೋಳ ಮೀಸಲು ಪ್ರದೇಶಗಳು – ಮಾನವ ಮತ್ತು ಜೀವಗೋಳ (MAB) ಮೀಸಲು ಕಾರ್ಯಕ್ರಮದಡಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಭಾರತದ 13 ಜೀವಗೋಳ ಮೀಸಲು ಪ್ರದೇಶಗಳು.

    1) ನೀಲಗಿರಿ

    2) ಮನ್ನಾರ್ ಕೊಲ್ಲಿ

    3) ಸುಂದರಬನ

    4) ನಂದಾ ದೇವಿ

    5) ನೋಕ್ರೇಕ್

    6) ಪಚಮರಿ 

    7) ಸಿಮಿಲಿಪಾಲ್

    8) ಅಚಾನಕ್ಮಾರ್ – ಅಮರಕಂಟಕ್

    9) ಗ್ರೇಟ್ ನಿಕೋಬಾರ್

    10) ಅಗಸ್ತ್ಯಮಾಲೈ 

    11) ಕಾಂಚನಜುಂಗ  (2018)

    12) ಪನ್ನಾ (2020)

    13) ಶೀತ ಮರುಭೂಮಿ, ಹಿಮಾಚಲ ಪ್ರದೇಶ (2025) – ಹೊಸದಾಗಿ ಸೇರಿಸಲಾಗಿದೆ.

    ಜೀವಗೋಳ ಸಂರಕ್ಷಣೆ

    • ಭಾರತ ಸರ್ಕಾರವು 1986 ರಿಂದ ಜೀವಗೋಳ ಮೀಸಲು ಎಂಬ ಯೋಜನೆಯನ್ನು ಜಾರಿಗೆ ತಂದಿದೆ.
    • ರಾಜ್ಯ ಸರ್ಕಾರವು ನಿರ್ವಹಣಾ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ, ಇದನ್ನು ಕೇಂದ್ರ ಮನುಷ್ಯ ಮತ್ತು ಜೀವಗೋಳ ಕಾರ್ಯಕ್ರಮ (MAB) ಸಮಿತಿಯು ಅನುಮೋದಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

    ಭಾರತದಲ್ಲಿನ ಜೀವಗೋಳ ಮೀಸಲುಗಳು

    • ಭಾರತದಲ್ಲಿ ಪ್ರಸ್ತುತ 18 ಜೀವಗೋಳ ಮೀಸಲುಗಳಿವೆ
    1. ಶೀತ ಮರುಭೂಮಿ, ಹಿಮಾಚಲ ಪ್ರದೇಶ
    2. ನಂದಾ ದೇವಿ, ಉತ್ತರಾಖಂಡ
    3. ಕಾಂಚನಜುಂಗ, ಸಿಕ್ಕಿಂ 
    4. ದಿಹಾಂಗ್- ದಿಬಾoಗ, ಅರುಣಾಚಲ ಪ್ರದೇಶ
    5. ಮಾನಸ್, ಅಸ್ಸಾಂ
    6. ದಿಬ್ರು-ಸೈಖೋವಾ, ಅಸ್ಸಾಂ
    7. ನೋಕ್ರೇಕ್, ಮೇಘಾಲಯ
    8. ಪನ್ನಾ, ಮಧ್ಯಪ್ರದೇಶ
    9. ಪಚಮಾರಿ , ಮಧ್ಯಪ್ರದೇಶ
    10. ಅಚಾನಕ್ಮಾರ್-ಅಮರ್ಕಂಟಕ್, ಮಧ್ಯಪ್ರದೇಶ-ಛತ್ತೀಸ್ಗಢ
    11. ಕಚ್ಛ್, ಗುಜರಾತ್ (ಅತ್ಯಂತ ದೊಡ್ಡದಾದ ಪ್ರದೇಶ)
    12. ಸಿಮಿಲಿಪಾಲ್, ಒಡಿಶಾ
    13. ಸುಂದರಬನ, ಪಶ್ಚಿಮ ಬಂಗಾಳ
    14. ಶೇಷಾಚಲಂ, ಆಂಧ್ರಪ್ರದೇಶ
    15. ಅಗಸ್ತ್ಯಮಾಲೈ , ಕರ್ನಾಟಕ-ತಮಿಳುನಾಡು-ಕೇರಳ
    16. ನೀಲಗಿರಿ, ತಮಿಳುನಾಡು-ಕೇರಳ
    17. ಮನ್ನಾರ್ ಕೊಲ್ಲಿ, ತಮಿಳುನಾಡು
    18. ಗ್ರೇಟ್ ನಿಕೋಬಾರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

    ತೋರ್ಖಾಮ್ ಗಡಿ

    ಅಂತರರಾಷ್ಟ್ರೀಯ ಸಂಬಂಧಗಳು

    ಸಂದರ್ಭ:

    • ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ತೋರ್ಖಾಮ್ ಗಡಿ ದಾಟುವ ಸ್ಥಳದಲ್ಲಿ ನಡೆದ ಮಾರಕ ಗಡಿ ಘರ್ಷಣೆಗಳ ನಂತರ ವಾರಗಳ ಕಾಲ ಮುಚ್ಚಲ್ಪಟ್ಟಿದ್ದ ಗಡಿಯು ಇದೀಗ ಪುನಃ ತೆರೆಯಲಾಗಿದೆ.

    ತೋರ್ಖಾಮ್ ಗಡಿಯ ಬಗ್ಗೆ:

    • ಸ್ಥಳ:- ತೋರ್ಖಾಮ್ ಗಡಿಯು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಪ್ರಮುಖ ಗಡಿ ದಾಟುವ ಸ್ಥಳವಾಗಿದ್ದು, ಅಂತರರಾಷ್ಟ್ರೀಯ ಗಡಿಯಲ್ಲಿ ಗ್ರ್ಯಾಂಡ್ ಟ್ರಂಕ್ ರಸ್ತೆಯೂದ್ದಕ್ಕೂ ಇದೆ.
    • ಸಂಪರ್ಕ – ಇದು ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯವನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದೊಂದಿಗೆ ಸಂಪರ್ಕಿಸುತ್ತದೆ.
    • ಇದು ಎರಡೂ ರಾಷ್ಟ್ರಗಳ ನಡುವಿನ ಅತ್ಯಂತ ಜನನಿಬಿಡ ಗಡಿ ದಾಟುವ ಸ್ಥಳವಾಗಿದ್ದು, ಸಾರಿಗೆ, ವ್ಯಾಪಾರ ಮತ್ತು ಲಾಜಿಸ್ಟಿಕ್ಸ್‌ಗೆ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
  • ವಿಶ್ವ ಏಡ್ಸ್ ದಿನ | ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ | ಎಲ್ಲೋರಾ ಗುಹೆಗಳು | ಹಾರ್ನ್‌ಬಿಲ್ ಉತ್ಸವ | ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ | ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) | ಹಂಸ-3 ಎನ್‌ಜಿ ತರಬೇತಿ ವಿಮಾನ | ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

    ವಿಶ್ವ ಏಡ್ಸ್ ದಿನ

    ಸಾಮಾನ್ಯ ಅಧ್ಯಯನ -2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಪ್ರತಿ ವರ್ಷ ಡಿಸೆಂಬರ್ 1 ರಂದು ‘ವಿಶ್ವ ಏಡ್ಸ್ ದಿನ’ವನ್ನು ಆಚರಿಸಲಾಗುತ್ತದೆ.

    ವಿಶ್ವ ಏಡ್ಸ್ ದಿನದ ಮಹತ್ವ:

    • ಎಚ್‌ಐವಿ/ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
    • ಇದನ್ನು ಮೊದಲ ಬಾರಿಗೆ 1988 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿತು.
    • 2025ರ ಧ್ಯೇಯವಾಕ್ಯ: “ಅಡಚಣೆಯನ್ನು ದಾಟಿ (ಮೀರಿ), ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು” 

    ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (AIDS) ನ ಬಗ್ಗೆ:

    • ರೋಗಕಾರಕ:- ಇದು ದೀರ್ಘಕಾಲದ, ಸಂಭಾವ್ಯವಾಗಿ ಪ್ರಾಣಾಪಾಯಕಾರಿ ಆರೋಗ್ಯ ಸ್ಥಿತಿಯಾಗಿದ್ದು, “ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್” (HIV) ನಿಂದ ಉಂಟಾಗುತ್ತದೆ. ಇದು ಮಾನವನ ರೋಗನಿರೋಧಕ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
    • ಹರಡುವಿಕೆ:- ಸೋಂಕಿತ ವ್ಯಕ್ತಿಯ ದೇಹದ ದ್ರವಗಳಾದ ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವ ಅಥವಾ ಎದೆ ಹಾಲಿನ ನೇರ ಸಂಪರ್ಕದ ಮೂಲಕ ಇದು ಹರಡುತ್ತದೆ.
    • ಈ ರೋಗದ ಲಕ್ಷಣಗಳು:
      • ಹಂತ 1: ಜ್ವರದಂತಹ ಅನಾರೋಗ್ಯ (ಜ್ವರ, ಚಳಿ, ದದ್ದುಗಳು, ರಾತ್ರಿ ಬೆವರುವಿಕೆ).
      • ಹಂತ 2: ವೈದ್ಯಕೀಯ ವಿಳಂಬ (ಯಾವುದೇ ನಿರ್ದಿಷ್ಟ ರೋಗ ಲಕ್ಷಣಗಳಿಲ್ಲ).
      • ಹಂತ 3: ಏಡ್ಸ್ (ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುವುದು).
    • ತಡೆಗಟ್ಟುವಿಕೆ:- “ಚಿಕಿತ್ಸೆಗಿಂತ ತಡೆಗಟ್ಟುವಿಕೆ ಲೇಸು”. ರಕ್ಷಣಾತ್ಮಕ ತಂತ್ರಗಳನ್ನು ಬಳಸುವುದು, ಕಲುಷಿತವಾಗದ ಸೂಜಿಗಳನ್ನು ಉಪಯೋಗಿಸುವುದು ಮತ್ತು ತಾಯಿಯಿಂದ ಮಗುವಿಗೆ ಹರಡುವುದನ್ನು ತಡೆಯುವುದು ಅತ್ಯಗತ್ಯವಾಗಿದೆ.
    • ಚಿಕಿತ್ಸೆ:- ಹೆಚ್ಐವಿ ಸೋಂಕಿಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ. ಆದಾಗ್ಯೂ, ಆಂಟಿರೀಟ್ರೋವೈರಲ್ ಔಷಧಿಗಳೊಂದಿಗೆ (ART) ಚಿಕಿತ್ಸೆ ನೀಡಲಾಗುತ್ತದೆ. ಇವು ದೇಹದಲ್ಲಿ ವೈರಸ್ ಸ್ವಪ್ರತೀಕರಣಗೊಳ್ಳುವುದನ್ನು ತಡೆಯುತ್ತವೆ.

    ಗಮನಿಸಿ: ಚಿಕಿತ್ಸೆ ನೀಡದ ಹೆಚ್ಐವಿ, ಏಡ್ಸ್ ಆಗಿ ಪರಿವರ್ತನೆಗೊಳ್ಳಬಹುದು, ಇದು ಸಾಮಾನ್ಯವಾಗಿ ಹಲವು ವರ್ಷಗಳ ನಂತರ ಸಂಭವಿಸುತ್ತದೆ.

    ಭಾರತ ಸರ್ಕಾರ ಕೈಗೊಂಡ ಕ್ರಮಗಳು

    • ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (NACP):- ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
    • ಹೆಚ್ಐವಿ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಹಿಮ್ಮೆಟ್ಟಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 3 (SDG 3) ಭಾರತ ಸಾಧಿಸಿದೆ.
    • ಪಿಪಿಟಿಸಿಟಿ (PPTCT)- ಪೋಷಕರಿಂದ ಮಗುವಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಕಾರ್ಯಕ್ರಮ.
    • ಹೆಚ್ಐವಿ /ಏಡ್ಸ್ ಕಾಯ್ದೆ, 2017: ಹೆಚ್ಐವಿ -ಸೋಂಕಿತ ಜನರ ವಿರುದ್ಧ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
    • UNAIDS- 90:90:90 ಕಾರ್ಯತಂತ್ರ: ಇದು UNAIDS ಸಂಸ್ಥೆ ಅಳವಡಿಸಿಕೊಂಡಿರುವ ಕಾರ್ಯತಂತ್ರವಾಗಿದೆ. {2020 ರ ವೇಳೆಗೆ 90% ರೋಗನಿರ್ಣಯ, 90% ಚಿಕಿತ್ಸೆ (ಆಂಟಿರೀಟ್ರೋವೈರಲ್ ಚಿಕಿತ್ಸೆಯೊಂದಿಗೆ – ART ಮೂಲಕ) ಮತ್ತು 90% ವೈರಾಣು ನಿಗ್ರಹ} ಇದನ್ನು ಈಗ 95-95-95 ಗುರಿಯೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ.
    • “ಪ್ರಾಜೆಕ್ಟ್ ಆಕ್ಸಿಲರೇಟ್” (ACCELERATE): ಇದು ಜಾನ್ ಹಾಕಿನ್ ಮತ್ತು ನ್ಯಾಕೋ (NACO) ಸಂಸ್ಥೆಯ  ಉಪಕ್ರಮವಾಗಿದ್ದು, ‘ಸೇಫ್ ಜಿಂದಗಿ’ ಆನ್‌ಲೈನ್ ಪೋರ್ಟಲ್ ಮೂಲಕ ಹೆಚ್ಐವಿ ಸೇವೆಗಳನ್ನು ಒದಗಿಸುತ್ತದೆ.
    • ಮಿಷನ್ ಸಂಪರ್ಕ್:- ಆಂಟಿರೀಟ್ರೋವೈರಲ್ ಥೆರಪಿಯನ್ನು (ART) ಅರ್ಧಕ್ಕೆ ನಿಲ್ಲಿಸಿದ, ಹೆಚ್ಐವಿ ಯೊಂದಿಗೆ ಬದುಕುತ್ತಿರುವ ಜನರನ್ನು (PLHIV) ಮರಳಿ ಚಿಕಿತ್ಸೆಗೆ ತರುವುದು ಇದರ ಉದ್ದೇಶವಾಗಿತ್ತು.

    ಭಾರತದ ಪರಮಾಣು ವಲಯದಲ್ಲಿ ಖಾಸಗಿ ವಲಯದ ಪ್ರವೇಶ

    ಸಾಮಾನ್ಯ ಅಧ್ಯಯನ -3/ ಇಂಧನ/ಶಕ್ತಿ

    ಇದೀಗ ಸುದ್ದಿಯಲ್ಲಿದೆ:

    • ಪರಮಾಣು ವಲಯವನ್ನು ಖಾಸಗಿ ಪಾಲುದಾರರಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹೆಜ್ಜೆ ಇಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

    ಭಾರತದ ಪರಮಾಣು ವಲಯ: 

    • ನಿರ್ವಹಣೆ:- ಪ್ರಸ್ತುತ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು “ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ” (NPCIL) ಒಡೆತನದಲ್ಲಿದ್ದು, ಸಂಪೂರ್ಣವಾಗಿ ಆ ಸಂಸ್ಥೆಯಿಂದಲೇ ನಿರ್ವಹಿಸಲ್ಪಡುತ್ತವೆ.
    • ಪ್ರಮುಖ ಕಾನೂನುಗಳು:- ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲು, ಸರ್ಕಾರವು ಈ ಕೆಳಗಿನ ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ:
      1. ಪರಮಾಣು ಶಕ್ತಿ ಕಾಯ್ದೆ, 1962: ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣಕ್ಕೆ ಅಗತ್ಯವಿರುವ ಮೂಲ ಚೌಕಟ್ಟನ್ನು ಒದಗಿಸುತ್ತದೆ.
      2. ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010: ಪರಮಾಣು ಅವಘಡಗಳು ಸಂಭವಿಸಿದಾಗ ಪರಿಹಾರ ನೀಡುವ ಕಾರ್ಯವಿಧಾನಗಳನ್ನು ಇದು ಖಾತ್ರಿಪಡಿಸುತ್ತದೆ.

    ಪರಮಾಣು ಶಕ್ತಿಯ ಬಗ್ಗೆ:

    • ವ್ಯಾಖ್ಯಾನ:- ಪರಮಾಣು ಕ್ರಿಯೆಗಳ ಸಮಯದಲ್ಲಿ ಬಿಡುಗಡೆಯಾಗುವ ಶಕ್ತಿಯೇ ‘ಪರಮಾಣು ಶಕ್ತಿ’. ಇದು ವಿದಳನ (ಪರಮಾಣು ನ್ಯೂಕ್ಲಿಯಸ್‌ಗಳ ವಿಭಜನೆ) ಅಥವಾ ಸಮ್ಮಿಲನ (ಪರಮಾಣು ನ್ಯೂಕ್ಲಿಯಸ್‌ಗಳ ವಿಲೀನ) ಪ್ರಕ್ರಿಯೆಯ ಮೂಲಕ ಬಿಡುಗಡೆಯಾಗುತ್ತದೆ.

    ಭಾರತದಲ್ಲಿ ಪರಮಾಣು ವಿದ್ಯುತ್ ಸಾಮರ್ಥ್ಯದ ಸ್ಥಿತಿಗತಿ:

    • ಪ್ರಸ್ತುತ ಸಾಮರ್ಥ್ಯ:- 8,180 ಮೆಗಾವ್ಯಾಟ್ (MW) ಆಗಿದ್ದು, ಇದು 24 ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಹಂಚಿಕೆಯಾಗಿದೆ.
    • ಭವಿಷ್ಯದ ಗುರಿ:- 2047 ರ ವೇಳೆಗೆ 100 GW ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಗುರಿ.
    • ಸಾಮರ್ಥ್ಯ ವಿಸ್ತರಣೆ:- ಗುಜರಾತ್, ರಾಜಸ್ಥಾನ, ತಮಿಳುನಾಡು, ಹರಿಯಾಣ, ಕರ್ನಾಟಕ ಮತ್ತು ಮಧ್ಯಪ್ರದೇಶದಾದ್ಯಂತ 10 ಹೊಸ ಸ್ಥಾವರಗಳು (ಒಟ್ಟು 8 GW ಸಾಮರ್ಥ್ಯ) ನಿರ್ಮಾಣ ಹಂತದಲ್ಲಿವೆ.

    ಭಾರತದ ಪ್ರಮುಖ ಪರಮಾಣು ವಿದ್ಯುತ್ ಸ್ಥಾವರಗಳು:

    ಪರಮಾಣು ವಿದ್ಯುತ್ ಸ್ಥಾವರ 

    ರಾಜ್ಯ

    ಒಟ್ಟು ಸಾಮರ್ಥ್ಯ (MW ಗಳಲ್ಲಿ)

    ತಾರಾಪುರ

    ಮಹಾರಾಷ್ಟ್ರ

    1,400

    ರಾವತಭಾಟ

    ರಾಜಸ್ಥಾನ

    1,180

    ಕುಂದಕುಳಂ

    ತಮಿಳುನಾಡು

    2,000

    ಕೈಗಾ

    ಕರ್ನಾಟಕ

    880

    ಕಾಕ್ರಪಾರ

    ಗುಜರಾತ್

    1140

    ಕಲ್ಪಕ್ಕಂ

    ತಮಿಳುನಾಡು

    440

    ನರೋರಾ

    ಉತ್ತರ ಪ್ರದೇಶ

    440

    ಪ್ರಸ್ತಾಪಿತ/ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರಗಳು:

    ವಿದ್ಯುತ್ ಸ್ಥಾವರ

    ನಿರ್ವಹಿಸುವ ಸಂಸ್ಥೆ

    ರಾಜ್ಯ

    ಒಟ್ಟು ಸಾಮರ್ಥ್ಯ (MW ಗಳಲ್ಲಿ)

    ಜೈಠಾಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಹಾರಾಷ್ಟ್ರ

    9,900

    ಕೊವ್ವಾಡ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಆಂಧ್ರ ಪ್ರದೇಶ

    6,600

    ಮಿಥಿ ವಿರ್ಡಿ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಗುಜರಾತ

    6,000

    ಹರಿಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಪಶ್ಚಿಮ ಬಂಗಾಳ

    4,000

    ಕುಂದಕುಳಂ (ವಿಸ್ತರಣೆ)

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ತಮಿಳುನಾಡು

    2,800

    ಗೋರಖ್‌ಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಹರಿಯಾಣ

    2,800

    ಭೀಮ್‌ಪುರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಧ್ಯ ಪ್ರದೇಶ

    2,800

    ಮಹಿ ಬನ್ಸ್ವಾರ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ರಾಜಸ್ಥಾನ

    1,400

    ಕೈಗಾ (ವಿಸ್ತರಣೆ)

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಕರ್ನಾಟಕ

    1,400

    ಚುಟ್ಕಾ

    ಭಾರತದ ಪರಮಾಣು ವಿದ್ಯುತ್ ನಿಗಮ ನಿಯಮಿತ (NPCIL)

    ಮಧ್ಯ ಪ್ರದೇಶ

    1,200

    ಮದ್ರಾಸ್

    ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ

    ತಮಿಳುನಾಡು

    300

    ಎಲ್ಲೋರಾ ಗುಹೆಗಳು

    ಸಾಮಾನ್ಯ ಅಧ್ಯಯನ : -1/ ಇತಿಹಾಸ ಮತ್ತು ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • ಎಲ್ಲೋರಾ ಗುಹೆಗಳ ಸುತ್ತಮುತ್ತಲಿರುವ, ಕಡಿಮೆ ಪ್ರಚಲಿತದಲ್ಲಿರುವ ಪಾರಂಪರಿಕ ತಾಣಗಳಿಗೆ ಹೆಚ್ಚಿನ ಪ್ರಚಾರ ಮತ್ತು ಮನ್ನಣೆ ನೀಡುವಂತೆ ಪ್ರಸಿದ್ಧ ಸ್ಕಾಟ್ಲೆಂಡಿನ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಎಲ್ಲೋರಾ ಗುಹೆಗಳ ಬಗ್ಗೆ:

    • ಸ್ಥಳ:- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಜಿಲ್ಲೆಯಲ್ಲಿರುವ ಎಲ್ಲೋರಾ ಗುಹೆಗಳು, ಭಾರತದ ಪ್ರಪ್ರಥಮ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿವೆ.
    • ಕಾಲಘಟ್ಟ:- ಈ ಗುಹೆಗಳ ಸಂಕೀರ್ಣವನ್ನು ಕ್ರಿ.ಶ. 600 ಮತ್ತು ಕ್ರಿ.ಶ.1000 ರ ನಡುವಿನ ಅವಧಿಯಲ್ಲಿ ಕೆತ್ತಲಾಗಿದೆ. ಇದು ಪ್ರಮುಖವಾಗಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಯಾದವರ ಆಳ್ವಿಕೆಯ ಕಾಲಘಟ್ಟವನ್ನು ಪ್ರತಿನಿಧಿಸುತ್ತದೆ.
    • ಧಾರ್ಮಿಕ ಬಹುತ್ವ: ಈ ಸಂಕೀರ್ಣವು ಒಟ್ಟು 34 ಪ್ರಮುಖ ಗುಹೆಗಳನ್ನು ಒಳಗೊಂಡಿದೆ (12 ಬೌದ್ಧ, 17 ಹಿಂದೂ ಮತ್ತು 5 ಜೈನ ಗುಹೆಗಳು). ಇದು ಅಂದಿನ ಕಾಲದ ವಿಶಿಷ್ಟವಾದ ಅಂತರ್‌ಧರ್ಮೀಯ ಸಾಮರಸ್ಯ ಮತ್ತು ಕಲಾತ್ಮಕ ವಿನಿಮಯಕ್ಕೆ ಸಾಕ್ಷಿಯಾಗಿದೆ.

    ಪ್ರಮುಖ ವಾಸ್ತುಶಿಲ್ಪದ ಲಕ್ಷಣಗಳು:

    • ಕೈಲಾಸನಾಥ ದೇವಾಲಯ (ಗುಹೆ 16):- ಇದನ್ನು ಬೃಹತ್ ಏಕಶಿಲಾ ಜ್ವಾಲಾಮುಖಿ (ಬಸಾಲ್ಟ್) ಶಿಲೆಯಿಂದ ಕೆತ್ತಲಾಗಿದೆ. ಇದು ಹಿಂದೂಗಳ ದೇವರಾದ ಶಿವನಿಗೆ ಸಮರ್ಪಿತವಾದ ಅದ್ಭುತ ರಚನೆಯಾಗಿದೆ.
    • ಬೌದ್ಧ ಗುಹೆಗಳು:- ಇವುಗಳಲ್ಲಿ ಪ್ರಮುಖವಾಗಿ ಬೌದ್ಧ ಸನ್ಯಾಸಿಗಳ ವಸತಿಗಳಾದ ವಿಹಾರಗಳು ಮತ್ತು ಪ್ರಾರ್ಥನಾ ಮಂದಿರಗಳಾದ ಚೈತ್ಯಾಲಯಗಳನ್ನು ಕಾಣಬಹುದು.
    • ಜೈನ ಗುಹೆಗಳು: ಎಲ್ಲೋರಾ ನಿರ್ಮಾಣದ ಅಂತಿಮ ಅಥವಾ ನಂತರದ ಹಂತದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.

    ಹಾರ್ನ್‌ಬಿಲ್ ಉತ್ಸವ

    ಸಾಮಾನ್ಯ ಅಧ್ಯಯನ : 1/ಸಂಸ್ಕೃತಿ

    ಇದೀಗ ಸುದ್ದಿಯಲ್ಲಿದೆ:

    • “ಉತ್ಸವಗಳ ಉತ್ಸವ” ಎಂದೇ ಖ್ಯಾತಿಯಾಗಿರುವ ನಾಗಾಲ್ಯಾಂಡ್‌ನ ಪ್ರಸಿದ್ಧ “ಹಾರ್ನ್‌ಬಿಲ್” ಉತ್ಸವದ 26ನೇ ಆವೃತ್ತಿಯು, ಕೊಹಿಮಾದ ಕಿಸಾಮಾದಲ್ಲಿರುವ “ನಾಗಾ ಪರಂಪರೆ ಗ್ರಾಮ”ದಲ್ಲಿ ಆರಂಭಗೊಂಡಿದೆ. ಇದು ರಾಜ್ಯದ ‘ರಾಜ್ಯೋತ್ಸವ ದಿನ’ದೊಂದಿಗೆ (ಡಿಸೆಂಬರ್ 1) ಕಾಕತಾಳೀಯವಾಗಿ ಜರುಗುತ್ತದೆ.

    ಹಾರ್ನ್‌ಬಿಲ್ ಉತ್ಸವದ ಬಗ್ಗೆ:

    • ಸಮಯ ಮತ್ತು ಸ್ಥಳ:- ಇದು ವಾರ್ಷಿಕವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಕೊಹಿಮಾ ಸಮೀಪದ ಕಿಸಾಮಾದಲ್ಲಿ ನಡೆಯುತ್ತದೆ.
    • ವೈಶಿಷ್ಟ್ಯ:- ಇದು ಎಲ್ಲಾ ನಾಗಾ ಬುಡಕಟ್ಟುಗಳ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನವಾಗಿದೆ.

    ಹಾರ್ನ್‌ಬಿಲ್ ಉತ್ಸವದ ಮಹತ್ವ:

    • ಉದ್ದೇಶ: ಏಕತೆಯನ್ನು ಉತ್ತೇಜಿಸಲು ಮತ್ತು ಜನಾಂಗೀಯ ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಇದನ್ನು 2000ನೇ ಇಸವಿಯಲ್ಲಿ ರೂಪಿಸಿ ಆರಂಭಿಸಲಾಯಿತು.
    • ಸಂಸ್ಕೃತಿ ಪ್ರದರ್ಶನ: ಇದು ಸಂಗೀತ, ಕರಕುಶಲ ವಸ್ತುಗಳು, ತಿನಿಸು ಮತ್ತು ಜಾನಪದಗಳ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನಾಗಾ ಸಂಸ್ಕೃತಿ ಎರಡನ್ನೂ ಎತ್ತಿ ತೋರಿಸುತ್ತದೆ.

    ಗ್ರೇಟರ್ ಹಾರ್ನ್‌ಬಿಲ್ ನ ಬಗ್ಗೆ:

    • ವೈಜ್ಞಾನಿಕ ಹೆಸರು:- ಬ್ಯುಸೆರೋಸ್ ಬೈಕಾರ್ನಿಸ್ 
    • ಇತರ ಹೆಸರುಗಳು:- ಇದನ್ನು ಕಾನ್ಕೇವ್-ಕ್ಯಾಸ್ಕ್ಡ್ ಹಾರ್ನ್‌ಬಿಲ್, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್‌ಬಿಲ್ ಎಂತಲೂ ಕರೆಯಲಾಗುತ್ತದೆ.
    • ಆವಾಸಸ್ಥಾನ:- ಇದು ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ.
    • ವೈಶಿಷ್ಟ್ಯ:- ಗ್ರೇಟರ್ ಹಾರ್ನ್‌ಬಿಲ್‌ನ ಅತ್ಯಂತ ಪ್ರಮುಖ ಲಕ್ಷಣವೆಂದರೆ ಅದರ ಬೃಹತ್ ಕೊಕ್ಕಿನ ಮೇಲಿರುವ ಪ್ರಕಾಶಮಾನವಾದ ಹಳದಿ ಮತ್ತು ಕಪ್ಪು ಬಣ್ಣದ ಶಿರಸ್ತ್ರಾಣ/ ತಲೆಕವಚ (‘ಕ್ಯಾಸ್ಕ್’- ಕೆಲವು ಪಕ್ಷಿಗಳ ತಲೆಯ ಮೇಲಿರುವ ಗಟ್ಟಿಯಾದ ರಚನೆ).
    • ಉತ್ಸವ:- ಹಾರ್ನ್‌ಬಿಲ್ ಉತ್ಸವವನ್ನು ನಾಗಾಲ್ಯಾಂಡ್‌ನಲ್ಲಿ ಆಚರಿಸಲಾಗುತ್ತದೆ.
    • ರಾಜ್ಯ ಪಕ್ಷಿ:- ಗ್ರೇಟರ್ ಹಾರ್ನ್‌ಬಿಲ್ ಅರುಣಾಚಲ ಪ್ರದೇಶ ಮತ್ತು ಕೇರಳದ ರಾಜ್ಯ ಪಕ್ಷಿಯಾಗಿದೆ.

    ಸಂರಕ್ಷಣಾ ಸ್ಥಿತಿ:

    • IUCN ಕೆಂಪುಪಟ್ಟಿಯಲ್ಲಿ ಸ್ಥಿತಿ:- ದುರ್ಬಲ (Vu).
    • ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972:- ಅನುಸೂಚಿ I.

    ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ ಭಾರತ ಮರು ಆಯ್ಕೆಯಾಗಿದೆ

    ಸಾಮಾನ್ಯ ಅಧ್ಯಯನ : 2/ಅಂತರರಾಷ್ಟ್ರೀಯ ಸಂಬಂಧಗಳು

    ಇದೀಗ ಸುದ್ದಿಯಲ್ಲಿದೆ: 

    • ಭಾರತವು ಯುನೆಸ್ಕೋದ ಕಾರ್ಯಕಾರಿ ಮಂಡಳಿಗೆ  2025-29ರ ಅವಧಿಗೆ ಮರು ಆಯ್ಕೆಯಾಗಿದೆ.

    ಯುನೆಸ್ಕೋದ ಕಾರ್ಯಕಾರಿ ಮಂಡಳಿಯ ಬಗ್ಗೆ:

    • ರಚನೆ:- ಇದು ವಿಶ್ವಸಂಸ್ಥೆಯ ಮೂರು ಸಾಂವಿಧಾನಿಕ ಅಂಗಗಳಲ್ಲಿ ಒಂದಾಗಿದೆ. (ಉಳಿದ ಎರಡು ಅಂಗಗಳೆಂದರೆ ‘ಸಾಮಾನ್ಯ ಸಮ್ಮೇಳನ’ ಮತ್ತು ‘ಸಚಿವಾಲಯ’). ಈ ಮಂಡಳಿಯನ್ನು ಸಾಮಾನ್ಯ ಸಮ್ಮೇಳನವು ಆಯ್ಕೆ ಮಾಡುತ್ತದೆ.
    • ಅಧಿಕಾರ:- ಇದು ಸಾಮಾನ್ಯ ಸಮ್ಮೇಳನದ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
    • ಕಾರ್ಯಗಳು:- ಇದು ಮಹಾನಿರ್ದೇಶಕರು ಸಲ್ಲಿಸಿದ ಸಂಸ್ಥೆಯ ಕೆಲಸದ ಕಾರ್ಯಕ್ರಮ ಮತ್ತು ಅದಕ್ಕೆ ಸಂಬಂಧಿಸಿದ ಆಯಾವ್ಯಾಯ ಅಂದಾಜುಗಳನ್ನು ಪರಿಶೀಲಿಸುತ್ತದೆ.
    • ಸದಸ್ಯತ್ವ:- ಇದು 58 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದ್ದು, ಪ್ರತಿಯೊಂದು ರಾಷ್ಟ್ರವೂ ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತದೆ.

    ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

    ಸಾಮಾನ್ಯ ಅಧ್ಯಯನ : 3/ಆಂತರಿಕ ಭದ್ರತೆ

    ಇದೀಗ ಸುದ್ದಿಯಲ್ಲಿದೆ:

    • ಸಂಸತ್ತಿನ ಭದ್ರತಾ ಕರ್ತವ್ಯಗಳಿಗೆ ನಿಯೋಜಿಸಲಾದ ಸಿಬ್ಬಂದಿಗಾಗಿ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (CISF) ‘ಪರಿಷ್ಕೃತ ನಿಯೋಜನೆ ನೀತಿ’ಯನ್ನು ಪರಿಚಯಿಸಿದೆ.

    ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯ ಕುರಿತು:

    • ಸ್ಥಾಪನೆ:- ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968’ ರ ಅಡಿಯಲ್ಲಿ 1969 ರಲ್ಲಿ ಇದನ್ನು ಸ್ಥಾಪಿಸಲಾಯಿತು. ಇದೊಂದು ಅರೆಸೈನಿಕ ಪಡೆಯಾಗಿದೆ. 
    • ದಿನಾಚರಣೆ: ಪ್ರತಿ ವರ್ಷ ಮಾರ್ಚ್ 10 ರಂದು ‘CISF ಸಂಸ್ಥಾಪನಾ ದಿನ’ವನ್ನು (Raising Day) ಆಚರಿಸಲಾಗುತ್ತದೆ.
    • ನಿಯಂತ್ರಣ: ಇದು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    CISF ನ ಕಾರ್ಯಗಳು: ಇದು ಈ ಕೆಳಗಿನ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ, ಅವುಗಳೆಂದರೆ:

    • ಬಾಹ್ಯಾಕಾಶ ಇಲಾಖೆ.
    • ಪರಮಾಣು ಶಕ್ತಿ ಇಲಾಖೆ.
    • ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ ಮತ್ತು ಬಂದರುಗಳು.
    • ಐತಿಹಾಸಿಕ ಸ್ಮಾರಕಗಳು.
    • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆಯಂತಹ ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರಗಳು.

    ಹಂಸ-3 ಎನ್‌ಜಿ ತರಬೇತಿ ವಿಮಾನ

    ಪಠ್ಯಕ್ರಮ: GS3/ ರಕ್ಷಣೆ (Defence)

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ “ಸಿಎಸ್‌ಐಆರ್-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ” (CSIR-NAL) ಸಂಸ್ಥೆಯು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಹಂಸ-3 (ಎನ್‌ಜಿ)’ ತರಬೇತಿ ವಿಮಾನದ “ಉತ್ಪಾದನಾ ಆವೃತ್ತಿ”ಯನ್ನು ಬಿಡುಗಡೆ ಮಾಡಿದೆ.

    ಹಂಸ-3 ರ ಬಗ್ಗೆ:

    • ಹಂಸ-3 ಎಂಬುದು CSIR-NAL ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಎರಡು – ಆಸನಗಳುಳ್ಳ ತರಬೇತಿ ವಿಮಾನವಾಗಿದೆ.
    • ಇದು ಪ್ರಾಥಮಿಕ ವಿಮಾನ ತರಬೇತಿಗಾಗಿ ವಿನ್ಯಾಸಗೊಳಿಸಲಾದ, ಸಂಕೇತ ಆಧಾರಿತ ಉಪಕರಣಗಳು, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ರೆಕ್ಕೆಗಳು ಮತ್ತು ಪ್ರಮಾಣಿತ ವಿಮಾನ ನಿಯಂತ್ರಣ ಕೊಠಡಿಯನ್ನು ಒಳಗೊಂಡಿದೆ. ಇದು ಮುಖ್ಯವಾಗಿ ವಿಮಾನ ಹಾರಾಟ ಕ್ಲಬ್‌ಗಳು ಮತ್ತು ವಿಮಾನ ಚಾಲಕ ತರಬೇತಿ ಶಾಲೆಗಳಿಗೆ ಸೇವೆ ಸಲ್ಲಿಸುತ್ತಿತ್ತು.
    • ಇದನ್ನು ಸಂಪೂರ್ಣವಾಗಿ ರಬ್ಬರ ಮಿಶ್ರಿತ ಗಾಜು (ಫೈಬರ್‌ಗ್ಲಾಸ್) ಮತ್ತು ಕಾರ್ಬನ್ ಸಂಯೋಜಿತ ವಸ್ತುಗಳಿಂದ ನಿರ್ಮಿಸಲ್ಪಟ್ಟಿರುವುದರಿಂದ, ಇದು ತುಕ್ಕು ನಿರೋಧಕತೆ, ಹಾನಿ ತಡೆಯುವಂತೆ ಮತ್ತು ದುರಸ್ತಿಯ ಸುಲಭತೆಯಲ್ಲಿ ಅಂತರ್ಗತ ಅನುಕೂಲಗಳನ್ನು ಒದಗಿಸುತ್ತದೆ.

    ಹಂಸ-3 ಎನ್‌ಜಿ (ಹೊಸ ಪೀಳಿಗೆ): ಇದು ಹಂಸ-3 ರ ಸುಧಾರಿತ ಆವೃತ್ತಿಯಾಗಿದ್ದು, ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ:

    1. ಡಿಜಿಟಲ್ ಗಾಜಿನ ವಿಮಾನ ನಿಯಂತ್ರಣ ಕೊಠಡಿ: ಉತ್ತಮ ಸಾಂದರ್ಭಿಕ ಅರಿವಿಗಾಗಿ ಹಳೆಯ ಸಂಕೇತ ಆಧಾರಿತ ಉಪಕರಣಗಳನ್ನು ಇದು ಬದಲಾಯಿಸುತ್ತದೆ.
    2. ಹೆಚ್ಚಿದ ಇಂಧನ ಸಾಮರ್ಥ್ಯ: ಇದು ದೀರ್ಘಾವಧಿಯ ತರಬೇತಿ ಹಾರಾಟಗಳಿಗೆ ಮತ್ತು ಹೆಚ್ಚಿನ ಸಹನೆಗೆ ಅನುವು ಮಾಡಿಕೊಡುತ್ತದೆ.
    3. ಸ್ಥಿರ ಹಾರಾಟ ನಿರ್ವಹಣೆ: ಕನಿಷ್ಠ ಮಟ್ಟದ ವೇಗ  ಮತ್ತು ಊಹಿಸಬಹುದಾದ ನಡವಳಿಕೆಯು ಇದನ್ನು ಆರಂಭಿಕ ಹಂತದ ತರಬೇತಿಗೆ ಸೂಕ್ತವಾಗಿಸುತ್ತದೆ.

    ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA)

    ಸಾಮಾನ್ಯ ಅಧ್ಯಯನ 3/ ಕೃಷಿ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚೆಗೆ, ಪೆರುವಿನ ಲಿಮಾದಲ್ಲಿ ‘ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ’ದ (ITPGRFA) ಆಡಳಿತ ಮಂಡಳಿಯ 11ನೇ ಸಭೆಯು ಮುಕ್ತಾಯಗೊಂಡಿತು. ಆದರೆ, ‘ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ’ (SMTA) ದ ಅಡಿಯಲ್ಲಿ ಬರುವ ಬೆಳೆಗಳ ಪಟ್ಟಿಯನ್ನು ವಿಸ್ತರಿಸುವ ವಿಷಯದಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ.

    ಪ್ರಮುಖ ಅಂಶಗಳು:

    • ಭಾರತದ ವಿರೋಧ: ‘ಬಹುಪಕ್ಷೀಯ ವ್ಯವಸ್ಥೆ’ಯನ್ನು ಎಲ್ಲಾ ಬೆಳೆಗಳಿಗೆ ವಿಸ್ತರಿಸುವ ಮತ್ತು ಲಾಭ-ಹಂಚಿಕೆ ನಿಯಮಗಳನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಭಾರತ ಮತ್ತು ಇತರ ಕೆಲವು ದೇಶಗಳು ಬಲವಾಗಿ ವಿರೋಧಿಸಿದವು. ಈ ಕ್ರಮವು ಬೀಜ ವೈವಿಧ್ಯತೆಯ ಮೇಲಿನ ರಾಷ್ಟ್ರೀಯ ಸಾರ್ವಭೌಮತ್ವವನ್ನು ದುರ್ಬಲಗೊಳಿಸಬಹುದು ಎಂಬುದು ಅವುಗಳ ವಾದವಾಗಿದೆ.
    • ಪ್ರಮಾಣಿತ ವಸ್ತು ವರ್ಗಾವಣೆ ಒಪ್ಪಂದ (SMTA) ದ ನಿಯಮಗಳು: ಪ್ರಸ್ತುತ SMTA ಅಡಿಯಲ್ಲಿ, 64 ಬೆಳೆಗಳ ತಳಿ  (ಆನುವಂಶಿಕ) ವಸ್ತುವು ಕೇವಲ ಒಪ್ಪಂದದ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಲಭ್ಯವಿರುತ್ತದೆ. ಇದನ್ನು ಪ್ರತ್ಯೇಕವಾಗಿ ಸಂಶೋಧನೆ, ತಳಿ ಅಭಿವೃದ್ಧಿ ಮತ್ತು ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದಾಗಿದೆ.
    • ಬೌದ್ಧಿಕ ಆಸ್ತಿ ಹಕ್ಕುಗಳ (IPR) ನಿರ್ಬಂಧ: ಆನುವಂಶಿಕ ವಸ್ತುಗಳನ್ನು ಸ್ವೀಕರಿಸುವವರು, ತಾವು ಪಡೆದ ಮೂಲ ರೂಪದ ವಸ್ತುವಿನ ಮೇಲೆ ‘ಬೌದ್ಧಿಕ ಆಸ್ತಿ ಹಕ್ಕುಗಳನ್ನು’ (IPR) ಪ್ರತಿಪಾದಿಸುವಂತಿಲ್ಲ. ಅಲ್ಲದೆ, ಒಪ್ಪಂದದ ನಾಲ್ಕು ಲಾಭ-ಹಂಚಿಕೆ ಕಾರ್ಯವಿಧಾನಗಳ ಮೂಲಕ ಅದರಿಂದ ಬರುವ ಲಾಭಗಳನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.

    ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ (ITPGRFA) ದ ಬಗ್ಗೆ:

    • ಇದು ಕಾನೂನು ಬದ್ಧವಾಗಿರುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಒಂದು ಒಪ್ಪಂದವಾಗಿದೆ. ಇದನ್ನು 2001 ರಲ್ಲಿ ಅಂಗೀಕರಿಸಲಾಯಿತು ಮತ್ತು 2004 ರಿಂದ ಜಾರಿಗೆ ಬಂದಿತು.
    • ಉದ್ದೇಶ: ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ (ಆನುವಂಶಿಕ) ಸಂಪನ್ಮೂಲಗಳ (PGRFA) ಸಂರಕ್ಷಣೆ, ಸುಸ್ಥಿರ ಬಳಕೆ  ಮತ್ತು ಅವುಗಳ ಬಳಕೆಯಿಂದ ಬರುವ ಲಾಭಗಳ ನ್ಯಾಯಯುತ ಹಂಚಿಕೆ ಇದರ ಪ್ರಮುಖ ಗುರಿಯಾಗಿದೆ.
    • ಇದು “ಜೀವ ವೈವಿಧ್ಯತೆ ಸಮಾವೇಶ (CBD) ಮತ್ತು ನಗೋಯಾ ಶಿಷ್ಟಾಚಾರ”ಗಳಿಗೆ  ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
  • ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದ (ಹೈ ಸೀಸ್ ಒಪ್ಪಂದ) | ಭಾರತ ಮತ್ತು ಬಹ್ರೇನ್ ದ್ವಿಪಕ್ಷೀಯ ಸಂಬಂಧಗಳು | ಮಾಲ್ದೀವ್ಸ್ ಒಂದು ಪೀಳಿಗೆಯ ಮಟ್ಟದ ತಂಬಾಕು ನಿಷೇಧವನ್ನು ಜಾರಿಗೆ ತಂದ ಮೊದಲ ದೇಶ | ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV) | ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) | ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

    ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದ (ಹೈ ಸೀಸ್ ಒಪ್ಪಂದ)

    ಪರಿಸರ ಅಧ್ಯಾಯನ

    ಇದೀಗ ಸುದ್ದಿಯಲ್ಲಿದೆ:

    • ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದವು ಜನವರಿ 2026 ರಲ್ಲಿ ಜಾರಿಗೆ ಬಂದು 60 ಕ್ಕೂ ಹೆಚ್ಚು ದೇಶಗಳು ಅಂಗೀಕರಿಸಿವೆ. 

    ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದ (BBNJ):

    • ಉದ್ದೇಶ – ಇದು ರಾಷ್ಟ್ರೀಯ ವ್ಯಾಪ್ತಿಯನ್ನು ಮೀರಿದ ಪ್ರದೇಶಗಳಲ್ಲಿನ ಸಮುದ್ರದ ಜೀವ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಗುರಿಯಾಗಿಟ್ಟುಕೊಂಡ ಒಂದು ಐತಿಹಾಸಿಕ  ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
    • ಮಹತ್ವ – ಸಾಗರ ಸಂರಕ್ಷಣೆ, ಸಮಾನತೆ ಮತ್ತು ನ್ಯಾಯಸಮ್ಮತತೆಯನ್ನು ಉತ್ತೇಜಿಸುವುದು, ಪರಿಸರ ವಿನಾಶವನ್ನು ನಿಭಾಯಿಸುವುದು ಮತ್ತು ಸಮುದ್ರಗಳಲ್ಲಿ ಜೀವವೈವಿಧ್ಯತೆಯ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
    • ಅಳವಡಿಕೆ – ಮಾರ್ಚ್ 2023 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ 5 ನೇ BBNJ ಅಂತರ ಸರ್ಕಾರಿ ಸಮ್ಮೇಳನದಲ್ಲಿ ಇದನ್ನು ಒಮ್ಮತದಿಂದ ಅಂಗೀಕರಿಸಲಾಯಿತು.
    • ಸದಸ್ಯ ರಾಷ್ಟ್ರಗಳು – ಪ್ರಸ್ತುತವಾಗಿ, ಇದರಲ್ಲಿ 80 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಗಳು ಸಹಿ ಹಾಕಿದ್ದಾರೆ.

    ಭಾರತ ಮತ್ತು ಬಹ್ರೇನ್ ದ್ವಿಪಕ್ಷೀಯ ಸಂಬಂಧಗಳು

    ಸಾಮಾನ್ಯ ಅಧ್ಯಾಯನ – -2/ ಅಂತರರಾಷ್ಟ್ರೀಯ ಸಂಬಂಧಗಳು

    ಸಂದರ್ಭ:

    • ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬಹ್ರೇನ್ ವಿದೇಶಾಂಗ ಸಚಿವರನ್ನು ಭೇಟಿಯಾಗಿ ರಕ್ಷಣೆ ಮತ್ತು ಭದ್ರತೆಯಲ್ಲಿನ ಸಹಕಾರದ ಕುರಿತು ಚರ್ಚಿಸಿದರು.

    ಭಾರತ ಮತ್ತು ಬಹ್ರೇನ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:

    • ದ್ವಿಪಕ್ಷೀಯ ವ್ಯಾಪಾರ: USD 1.64 ಶತಕೋಟಿ (FY 2024–25); ಬಹ್ರೇನ್‌ ರಾಷ್ಟ್ರದ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಭಾರತವೂ ಕೂಡ ಒಂದು.
    • ಕೊಲ್ಲಿ ರಾಷ್ಟ್ರಗಳಿಗೆ ಮಹಾದ್ವಾರ: ಪರ್ಷಿಯನ್ ಕೊಲ್ಲಿಯ ಪಶ್ಚಿಮ ತೀರದಲ್ಲಿರುವ ರಾಷ್ಟ್ರ ಬಹ್ರೇನ್, ಭಾರತಕ್ಕೆ ಗಲ್ಫ್ ಸಹಕಾರ ಮಂಡಳಿ (GCC) ಯ ಪ್ರದೇಶಗಳಿಗೆ ಒಂದು ಕಾರ್ಯತಂತ್ರದ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
    • ಇಂಧನ ಭದ್ರತೆ: ಇತರ GCC ರಾಷ್ಟ್ರಗಳಿಗೆ ಹೋಲಿಸಿದರೆ ಬಹ್ರೇನ್ ಸಣ್ಣ ತೈಲ ಉತ್ಪಾದಕ ರಾಷ್ಟ್ರವಾಗಿದ್ದರೂ, ಭಾರತದ ಇಂಧನ ವೈವಿಧ್ಯೀಕರಣ ತಂತ್ರ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ವ್ಯಾಪಾರದಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ.

    ಬಹ್ರೇನ್ ರಾಷ್ಟ್ರದ ಬಗ್ಗೆ (ರಾಜಧಾನಿ: ಮನಾಮ):

    ರಾಜಕೀಯ ವೈಶಿಷ್ಟ್ಯಗಳು:

    • ಬಹ್ರೇನ್ ಏಷ್ಯಾದ ಮೂರನೇ ಅತ್ಯಂತ ಚಿಕ್ಕ ರಾಷ್ಟ್ರ.
    • ಸ್ಥಳ: ಪರ್ಷಿಯನ್ ಕೊಲ್ಲಿಯಲ್ಲಿರುವ, ಪಶ್ಚಿಮ ಏಷ್ಯಾದ ರಾಷ್ಟ್ರ.
    • ಗಡಿ: ಇದು ದ್ವೀಪ ಸಮೂಹಗಳ ರಾಷ್ಟ್ರವಾಗಿದ್ದು, ಇತರ ದೇಶಗಳೊಂದಿಗೆ ಯಾವುದೇ ಭೂ ಗಡಿಗಳನ್ನು ಹೊಂದಿಲ್ಲ.
    • ನೆರೆಯ ಜಲಮೂಲಗಳು: ಪರ್ಷಿಯನ್ ಕೊಲ್ಲಿ.

    ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

    • ಇದು 6 ಅರೇಬಿಯಾ ಪರ್ಯಾಯ ದ್ವೀಪ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
    • ಸದಸ್ಯರು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
    • ಸ್ಥಾಪನೆ: ಮೇ 25, 1981 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಿದ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು. 
    • ಉದ್ದೇಶಗಳು: ಆರ್ಥಿಕತೆ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
    • ಪ್ರಧಾನ ಕಚೇರಿ: ರಿಯಾದ್, ಸೌದಿ ಅರೇಬಿಯಾ.

    ಮಾಲ್ದೀವ್ಸ್ ಒಂದು ಪೀಳಿಗೆಯ ಮಟ್ಟದ ತಂಬಾಕು ನಿಷೇಧವನ್ನು ಜಾರಿಗೆ ತಂದ ಮೊದಲ ದೇಶ

    ಸಾಮಾನ್ಯ ಅಧ್ಯಾಯನ – 2/ ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ಮಾಲ್ದೀವ್ಸ್ ವಿಶ್ವದಲ್ಲೇ ಮೊದಲ ಬಾರಿಗೆ ಐತಿಹಾಸಿಕ ಪೀಳಿಗೆ ಮಟ್ಟದ ತಂಬಾಕು ಮತ್ತು ವೇಪಿಂಗ್ ನಿಷೇಧವನ್ನು ಜಾರಿಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.

    ಪೀಳಿಗೆಯ ಮಟ್ಟದ ನಿಷೇಧ:

    • ತಂಬಾಕು ಮೇಲಿನ ಪೀಳಿಗೆಯ ಮಟ್ಟದ ನಿಷೇಧವು ಒಂದು ಪ್ರಗತಿಪರ ಕಾನೂನು ನಿರ್ಬಂಧವಾಗಿದ್ದು, ನಿರ್ದಿಷ್ಟ ದಿನಾಂಕದ ನಂತರ ಜನಿಸಿದ ಎಲ್ಲ ವ್ಯಕ್ತಿಗಳಿಗೆ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಮೂಲಕ ತಂಬಾಕು ರಹಿತ ಪೀಳಿಗೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.

    ಮಾಲ್ಡೀವ್ಸ್ ದೇಶದ ಬಗ್ಗೆ:

    • ರಾಜಧಾನಿ: ಮಾಲೆ
    • ಅಧಿಕೃತ ಭಾಷೆ: ಧಿವೇಹಿ (ಇಂಡೋ-ಯುರೋಪಿಯನ್ ಭಾಷೆ); ಅರೇಬಿಕ್, ಹಿಂದಿ ಮತ್ತು ಇಂಗ್ಲಿಷ್ ಸಹ ಮಾತನಾಡುತ್ತಾರೆ.
    • ಧರ್ಮ: ಇಸ್ಲಾಂ ಈ ರಾಷ್ಟ್ರದ ಧರ್ಮ.
    • ಆರ್ಥಿಕತೆ: ಪ್ರವಾಸೋದ್ಯಮದ ಜೊತೆಗೆ ಮೀನುಗಾರಿಕೆ ಮತ್ತು ವಿದೇಶಿ ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.
    • ಸಂವಿಧಾನಿಕತೆ: 2008 ರ ಸಂವಿಧಾನವು ಗರಿಷ್ಠ ಐದು ವರ್ಷಗಳ ಎರಡು ಅವಧಿಗೆ ನೇರ ಚುನಾವಣೆಗಳನ್ನು ಹೊಂದಿರುವ ಅಧ್ಯಕ್ಷೀಯ ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತದೆ.

    ಭೌಗೋಳಿಕ ಲಕ್ಷಣಗಳು:

    • ವಿಶ್ವದ 7 ನೇ ಅತಿದೊಡ್ಡ ಹವಳದ ದಿಬ್ಬಗಳ ವ್ಯವಸ್ಥೆಗೆ ನೆಲೆಯಾಗಿದ್ದು, ಜಾಗತಿಕವಾಗಿ ಹವಳದ ದಿಬ್ಬಗಳ ಪ್ರದೇಶದ 3.14% ನಷ್ಟು ಪ್ರದೇಶವನ್ನು ಒಳಗೊಂಡಿದೆ.
    • ದೇಶದಲ್ಲಿ ಯಾವುದೇ ನದಿಗಳು ಅಥವಾ ಹೊಳೆಗಳಿಲ್ಲ ಮತ್ತು ಸರಾಸರಿ ಎತ್ತರ 2 ಮೀಟರ್‌ಗಿಂತ ಕಡಿಮೆ ಇರುವುದರಿಂದ ಸಮುದ್ರ ಮಟ್ಟ ಏರಿಕೆಗೆ ಇದು ಹೆಚ್ಚು ಗುರಿಯಾಗುತ್ತದೆ.
    • ಮಾಲ್ಡೀವ್ಸ್ ಉತ್ತರ-ಮಧ್ಯ ಹಿಂದೂ ಮಹಾಸಾಗರದಲ್ಲಿರುವ 26 ಹವಳ ದ್ವೀಪಗಳಲ್ಲಿ ಸುಮಾರು 1,200 ಹವಳ ದ್ವೀಪಗಳನ್ನು ಒಳಗೊಂಡಿರುವ ಒಂದು ದ್ವೀಪಸಮೂಹ ರಾಷ್ಟ್ರವಾಗಿದೆ.
    • ಇದು ಹಿಂದೂ ಮಹಾಸಾಗರ ಪ್ರದೇಶ (IOR) ದಲ್ಲಿ ಸಮುದ್ರದ ವ್ಯಾಪಾರ ಮತ್ತು ಭದ್ರತೆಗೆ ಪ್ರಮುಖವಾಗುವಂತಹ ಕಾರ್ಯತಂತ್ರದ ಸ್ಥಾನದಲ್ಲಿದೆ.

    ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV)

    ಸಾಮಾನ್ಯ ಅಧ್ಯಾಯನ – 2/ಆರೋಗ್ಯ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಮೃಗಾಲಯದಲ್ಲಿದ್ದ ಏಕೈಕ ಆಫ್ರಿಕಾದ ಆನೆ ಅಪರೂಪದ ದಂಶಕ-ಹರಡುವ ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV)‌ ನಿಂದ ಮೃತಪಟ್ಟಿದೆ — ಇದು ಭಾರತದಲ್ಲಿನ ಯಾವುದೇ ಮೃಗಾಲಯದಲ್ಲಿ ವರದಿಯಾದ ಮೊದಲ ಪ್ರಕರಣ.

    ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV) ನ ಬಗ್ಗೆ:

    • ರೋಗಕಾರಕ:- ಇದು ಒಂದು ಸಣ್ಣ, ಏಕ-ಸೂತ್ರದ RNA ವೈರಸ್ ಆಗಿದೆ. 
    • ಇದು ವಿವಿಧ ಸಸ್ತನಿ ಪ್ರಭೇಧಗಳಲ್ಲಿ ಮಯೋಕಾರ್ಡಿಟಿಸ್, ಎನ್ಸೆಫಾಲಿಟಿಸ್, ನರವೈಜ್ಞಾನಿಕ ಅಸ್ವಸ್ಥತೆಗಳು, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಮಧುಮೇಹವನ್ನು ಉಂಟುಮಾಡುತ್ತದೆ.
    • ಪ್ರಸರಣ: ದಂಶಕಗಳ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ ಮತ್ತು ನೀರಿನ ಸೇವನೆಯಿಂದ.
    • ಮೊದಲು ಪತ್ತೇಯಾಗಿದ್ದು: 1945 ರಲ್ಲಿ ಫ್ಲೋರಿಡಾದ ಗಿಬ್ಬನ್‌ನಲ್ಲಿ ಪತ್ತೇಹಚ್ಚಲಾಯಿತು.

    ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT)

    ಸಾಮಾನ್ಯ ಅಧ್ಯಾಯನ – 2 / ಆಡಳಿತ

    ಸಂದರ್ಭ:

    • ಬೈಜೂಸ್‌ನ ಅಂಗಸಂಸ್ಥೆಯಾದ ಆಕಾಶ್ ಶಿಕ್ಷಣ ಸೇವಾ ನಿಯಮಿತ  ತನ್ನ ಪ್ರಸ್ತಾವಿತ ಹಕ್ಕುಗಳ ವಿತರಣೆಯನ್ನು ಮುಂದುವರಿಸಲು ಅನುಮತಿ ನೀಡಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಯ ಆದೇಶದಲ್ಲಿ ಮಧ್ಯಪ್ರವೇಶಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತು.

    ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಯ ಬಗ್ಗೆ:

    • 2013ರ ಕಂಪನಿಗಳ ಕಾಯ್ದೆಯ ಸೆಕ್ಷನ್ 410 ಅಡಿಯಲ್ಲಿ ಸ್ಥಾಪಿತವಾಗಿ, 2016ರಿಂದ ಜಾರಿಗೆ ಬಂದಿದೆ.
    • ಕಾನೂನು ಸ್ಥಿತಿ – ಇದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಹಾಗೂ ಇತರೆ ಹಲವು ನಿಯಂತ್ರಣ ಸಂಸ್ಥೆಗಳ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ವಿಚಾರಿಸಲು ಕಾರ್ಯನಿರ್ವಹಿಸುವ ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.
    • ಈ ಕೆಳಕಂಡ ಸಂಸ್ಥೆಗಳಿಂದ ಜಾರಿಗೊಳಿಸಲಾದ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ವಿಚಾರಿಸುವ ಮೇಲ್ಮನವಿ ನ್ಯಾಯಮಂಡಳಿಯಾಗಿಯೂ ಕಾರ್ಯನಿರ್ವಹಿಸುತ್ತದೆ:
    1. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ದಿವಾಳಿತನ ಮತ್ತು ದಿವಾಳಿತನ  ಸಂಹಿತೆ, 2016 ರ ಕಲಂ 61 ರ ಅಡಿಯಲ್ಲಿ ಸ್ಥಾಪಿತವಾಗಿದೆ),
    2. ಭಾರತೀಯ ದಿವಾಳಿತನ ಮತ್ತು ದಿವಾಳಿತನ  ಮಂಡಳಿ (ದಿವಾಳಿತನ ಮತ್ತು ದಿವಾಳಿತನ  ಸಂಹಿತೆ, ಕಲಂ 202 ಮತ್ತು 211 ರ ಅಡಿಯಲ್ಲಿ ಸ್ಥಾಪಿತವಾಗಿದೆ).

    ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

    ಸಾಮಾನ್ಯ ಅಧ್ಯಾಯನ – 3/ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತ್ಯಂತ ಕಡಿಮೆ ಬೆಳೆ ವಿಮಾ ಪಾವತಿಗಳ ಬಗ್ಗೆ ತಳ ಮಟ್ಟದಲ್ಲಿ  ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಕೃಷಿ ಸಚಿವರು ಆದೇಶಿಸಿದ್ದಾರೆ.

    ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಯ ಬಗ್ಗೆ:

      • ಅನುಷ್ಠಾನ:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
      • ಪ್ರಾರಂಭ:- ಇದು 2016 ರಲ್ಲಿ, ರೈತರ ಇಳುವರಿಗಾಗಿ ವಿಮಾ ಸೇವೆಯಾಗಿ ಪ್ರಾರಂಭವಾಯಿತು. 
      • ಉದ್ದೇಶಗಳು: ಪ್ರಕೃತಿವಿಕೋಪಗಳು, ಕೀಟಗಳು ಅಥವಾ ರೋಗಗಳ ಪರಿಣಾಮದಿಂದಾಗಿ, ಅಧಿಸೂಚಿಸಲಾದ ಬೆಳೆಗಳು ವಿಫಲವಾದ ಸಂದರ್ಭದಲ್ಲಿ, ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವುದು.
      • ರೈತರು ಕೃಷಿಯಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅವರ ಆದಾಯವನ್ನು ಸ್ಥಿರಗೊಳಿಸುವುದು.
    • ರೈತರು ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
    • ಕೃಷಿ ವಲಯಕ್ಕೆ ಸಾಲದ ಹರಿವನ್ನು ಖಚಿತಪಡಿಸಿಕೊಳ್ಳುವುದು.

    PMFBY ನ ಪ್ರಮುಖ ಲಕ್ಷಣಗಳು:

    ಪ್ರೀಮಿಯಂ ದರಗಳು

    • ಎಲ್ಲಾ ಖಾರಿಫ್ ಬೆಳೆಗಳಿಗೆ ರೈತರು ಕೇವಲ 2% ಮತ್ತು ಎಲ್ಲಾ ರಾಬಿ ಬೆಳೆಗಳಿಗೆ (ಚಳಿಗಾಲದ ಬಿತ್ತನೆ) 1.5% ಏಕರೂಪದ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
    • ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ, ರೈತರು ಪಾವತಿಸಬೇಕಾದ ಪ್ರೀಮಿಯಂ ಕೇವಲ 5% ಆಗಿರುತ್ತದೆ.
    • ಬಾಕಿ ಪ್ರೀಮಿಯಂ ಅನ್ನು ಸರ್ಕಾರ ಪಾವತಿಸುತ್ತದೆ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳುತ್ತವೆ).
    • ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದ ವಿರುದ್ಧ ರೈತರಿಗೆ ಸಂಪೂರ್ಣ ವಿಮೆ ಮೊತ್ತವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
  • ನವೆಂಬರ ತಿಂಗಳ ವಸ್ತುನಿಷ್ಟ ಮಾದರಿಯ ಬಹು ಆಯ್ಕೆಯ ಪ್ರಶ್ನೋತ್ತರಗಳು

    1. ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯಾಚೆಗಿರುವ ಜೀವ ವೈವಿಧ್ಯತೆ (BBNJ) ಅಥವಾ ಹೈ ಸೀಸ್ ಒಪ್ಪಂದದ ಮೂಲಭೂತ ಉದ್ದೇಶವನ್ನು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ಗುರುತಿಸುತ್ತದೆ?
    2. ವಿಶೇಷ ಆರ್ಥಿಕ ವಲಯಗಳ (EEZ) ವ್ಯಾಪ್ತಿಯಲ್ಲಿ ಆಳ ಸಮುದ್ರದ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಿಯಂತ್ರಿಸುವುದು. 
    3. ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯಾಚೆಗಿರುವ ಪ್ರದೇಶಗಳಲ್ಲಿನ ಸಮುದ್ರದ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು. 
    4. ಕರಾವಳಿ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧಿತ ಸಹಕಾರವನ್ನು ಹೆಚ್ಚಿಸುವುದು. 
    5. ಪ್ರಾದೇಶಿಕ ಜಲ ಪ್ರದೇಶಗಳೊಳಗೆ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಮಾತ್ರ ರಕ್ಷಿಸುವುದು.

    ಉತ್ತರ: B

     

    1. ಈ ಕೆಳಗಿನವುಗಳಲ್ಲಿ ಯಾವುದು ಗಲ್ಫ್ ಸಹಕಾರ ಮಂಡಳಿಯ (GCC) ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಸರಿಯಾಗಿ ಪಟ್ಟಿ ಮಾಡುತ್ತದೆ?
    2. ಸೌದಿ ಅರೇಬಿಯಾ, ಯುಎಇ, ಓಮನ್, ಕತಾರ್, ಬಹ್ರೇನ್, ಕುವೈತ್ 
    3. ಬಹ್ರೇನ್, ಕುವೈತ್, ಕತಾರ್, ಯುಎಇ, ಇರಾನ್, ಸೌದಿ ಅರೇಬಿಯಾ 
    4. ಬಹ್ರೇನ್, ಯುಎಇ, ಓಮನ್, ಕತಾರ್, ಇರಾಕ್, ಸೌದಿ ಅರೇಬಿಯಾ 
    5. ಓಮನ್, ಕತಾರ್, ಜೋರ್ಡಾನ್, ಯುಎಇ, ಬಹ್ರೇನ್, ಕುವೈತ್

    ಉತ್ತರ: A

     

    1. ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಲ್ಡೀವ್ಸ್‌ನ ಅನನ್ಯ ಜಾಗತಿಕ ಸ್ಥಾನವನ್ನು ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿ ಗುರುತಿಸುತ್ತದೆ?
    2. ಇದು ಎಲ್ಲಾ ತಂಬಾಕು ಆಮದುಗಳನ್ನು ನಿಷೇಧಿಸಿದ ಮೊದಲ ದಕ್ಷಿಣ ಏಷ್ಯಾ ರಾಷ್ಟ್ರವಾಗಿದೆ.
    3. ಇದು ತಂಬಾಕು ಎಚ್ಚರಿಕೆಗಳಿಗಾಗಿ ಧೀವೆಹಿ ಭಾಷೆಯನ್ನು ಏಕೈಕ ಭಾಷೆಯನ್ನಾಗಿ ಮಾಡಿದ ಮೊದಲ ದೇಶವಾಗಿದೆ. 
    4. ಇದು ಸಂಪೂರ್ಣವಾಗಿ ತಂಬಾಕು-ಮುಕ್ತ ಪ್ರವಾಸೋದ್ಯಮ ವಲಯಗಳನ್ನು ಘೋಷಿಸಿದ ಮೊದಲ ದೇಶವಾಗಿದೆ. 
    5. ಇದು ತಂಬಾಕು ಮತ್ತು ವೇಪಿಂಗ್ (vaping) ಮೇಲೆ ಪೀಳಿಗೆಯ ನಿಷೇಧವನ್ನು ವಿಧಿಸಿದ ಮೊದಲ ದೇಶವಾಗಿದೆ. 

    ಉತ್ತರ: D

     

    1. ಹಿಂದೂ ಮಹಾಸಾಗರ ಪ್ರದೇಶದಲ್ಲಿ (IOR) ಮಾಲ್ಡೀವ್ಸ್‌ನ ಕಾರ್ಯತಂತ್ರದ ಪ್ರಾಮುಖ್ಯತೆಗೆ ಪ್ರಾಥಮಿಕ ಕಾರಣ ಯಾವುದು?
    2. ಅದರ ದೊಡ್ಡ ನೌಕಾಪಡೆ ಮತ್ತು ಮಿಲಿಟರಿ ನೆಲೆಗಳು. 
    3. ಪ್ರಮುಖ ಸಾಗರ ವ್ಯಾಪಾರ ಮಾರ್ಗಗಳಲ್ಲಿ ಅದರ ಸ್ಥಾನ. 
    4. ಅದರ ವ್ಯಾಪಕ ತೈಲ ನಿಕ್ಷೇಪಗಳು. 
    5. ಜಾಗತಿಕ ಹಣಕಾಸು ಕೇಂದ್ರವಾಗಿ ಅದರ ಸ್ಥಾನಮಾನ.

    ಉತ್ತರ: B

     

    1. ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್‌ನ (EMCV) ಜೀನೋಮಿಕ್ ಸ್ವರೂಪವನ್ನು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ವಿವರಿಸುತ್ತದೆ?
    2. ಪಿಕಾರ್ನಾವಿರಿಡೆ ಕುಟುಂಬಕ್ಕೆ ಸೇರಿದ ಒಂದು-ಎಳೆಯ ಆರ್‌ಎನ್‌ಎ ವೈರಸ್. 
    3. ಹರ್ಪೀಸ್‌ವಿರಿಡೆ ಕುಟುಂಬಕ್ಕೆ ಸೇರಿದ ಎರಡು-ಎಳೆಯ ಡಿಎನ್‌ಎ ವೈರಸ್. 
    4. ರಿಯೊವಿರಿಡೆ ಕುಟುಂಬಕ್ಕೆ ಸೇರಿದ ಎರಡು-ಎಳೆಯ ಆರ್‌ಎನ್‌ಎ  ವೈರಸ್. 
    5. ಪಾರ್ವೊವಿರಿಡೆ ಕುಟುಂಬಕ್ಕೆ ಸೇರಿದ ಒಂದು -ಎಳೆಯ ಡಿಎನ್‌ಎ ವೈರಸ್.

    ಉತ್ತರ: A

     

    1. ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್‌ನ (EMCV) ಸಾಂಕ್ರಾಮಿಕ ರೋಗಶಾಸ್ತ್ರದ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
    2. ಇದು ಪ್ರೈಮೇಟ್‌ಗಳಿಗೆ ಮಾತ್ರ ಸೋಂಕು ತಗುಲಿಸುತ್ತದೆ. 
    3. ಇದು ವ್ಯಾಪಕ ಶ್ರೇಣಿಯ ಸಸ್ತನಿ ಪ್ರಭೇದಗಳ ಮೇಲೆ ಪರಿಣಾಮ ಬೀರುತ್ತದೆ. 
    4. ಇದು ಉಷ್ಣವಲಯದ ಕಡಲ ಜೀವಿ ಪರಿಸರ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ. 
    5. ಇದು ಪ್ರಾಥಮಿಕವಾಗಿ ಸೊಳ್ಳೆ ವಾಹಕಗಳ ಮೂಲಕ ಹರಡುತ್ತದೆ.

    ಉತ್ತರ: B

     

    1. ಮೇಲ್ಮನವಿ ನ್ಯಾಯಾಧಿಕಾರಣಗಳ ಕಾನೂನು ಸ್ಥಾನಮಾನದ ಬಗ್ಗೆ ಯಾವ ಹೇಳಿಕೆ ಸರಿಯಾಗಿದೆ?
    2. ಇದು ಸರ್ವೋಚ್ಚ ನ್ಯಾಯಾಲಯದ ಅದೇ ಅಧಿಕಾರಗಳನ್ನು ಹೊಂದಿರುವ ಸಂಪೂರ್ಣ ನ್ಯಾಯಾಂಗ ಸಂಸ್ಥೆಯಾಗಿದೆ. 
    3. ಇದು ನೀತಿ ನಿಯಮಗಳನ್ನು ನೀಡುವ ಅರೆ-ಶಾಸಕಾಂಗ ಪ್ರಾಧಿಕಾರವಾಗಿದೆ. 
    4. ಇದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಮತ್ತು ಇತರ ಪ್ರಾಧಿಕಾರಗಳ ಮೇಲ್ಮನವಿಗಳನ್ನು ವಿಚಾರಣೆ ಮಾಡುವ ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ. 
    5. ಇದು ಕಂಪನಿಗಳ ಕಾಯಿದೆಯ ಅನುಸರಣೆಯನ್ನು ಜಾರಿಗೊಳಿಸುವ ಒಂದು ಕಾರ್ಯಕಾರಿ ಸಂಸ್ಥೆಯಾಗಿದೆ.

    ಉತ್ತರ: C

     

    1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ (PMFBY) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅನುಷ್ಠಾನಗೊಳಿಸುತ್ತದೆ.
    2. ಎಲ್ಲಾ ಆಹಾರ ಧಾನ್ಯಗಳು ಮತ್ತು ಎಣ್ಣೆಕಾಳು ಬೆಳೆಗಳಿಗೆ ರೈತರು 5% ರ ಏಕರೂಪದ ಪ್ರೀಮಿಯಂ ದರವನ್ನು ಪಾವತಿಸುತ್ತಾರೆ.
    3. ನೈಸರ್ಗಿಕ ವಿಕೋಪಗಳು, ಕೀಟಗಳು ಮತ್ತು ರೋಗಗಳಿಂದ ಬೆಳೆ ನಷ್ಟವಾದ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ಬೆಂಬಲ ನೀಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಎಲ್ಲಾ 
    4. ಯಾವುದೂ ಇಲ್ಲ

    ಉತ್ತರ: B

     

    1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ, ಈ ಕೆಳಗಿನ ಯಾವ ಪ್ರೀಮಿಯಂ ದರವನ್ನು ಅದರ ಬೆಳೆ ವರ್ಗದೊಂದಿಗೆ ಸರಿಯಾಗಿ ಹೊಂದಿಸಲಾಗಿದೆ?
    2. ರಾಬಿ ಬೆಳೆಗಳು – 2% 
    3. ಖಾರಿಫ್ ಬೆಳೆಗಳು – 1.5% 
    4. ವಾರ್ಷಿಕ ವಾಣಿಜ್ಯ/ತೋಟಗಾರಿಕಾ ಬೆಳೆಗಳು – 5% 
    5. ಎಲ್ಲಾ ಬೆಳೆಗಳು – 3%

    ಉತ್ತರ: C

     

    1. ಕೋಲ್ ಇಂಡಿಯಾ ಲಿಮಿಟೆಡ್  (CIL) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ ಮಹಾರತ್ನ PSU (ಸಾರ್ವಜನಿಕ ವಲಯದ ಉದ್ದಿಮೆ) ಆಗಿದೆ.
    2. ಇದನ್ನು ಎರಡನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸ್ಥಾಪಿಸಲಾಯಿತು.
    3. ಇದು ಭಾರತದ ದೇಶೀಯ ಕಲ್ಲಿದ್ದಲು ಉತ್ಪಾದನೆಯ ಸುಮಾರು 80% ರಷ್ಟನ್ನು ಹೊಂದಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: C

     

    1. ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (PSUs) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಎಂದರೆ ಸರ್ಕಾರವು ಕನಿಷ್ಠ 51% ಷೇರು ಬಂಡವಾಳ (ಇಕ್ವಿಟಿ) ವನ್ನು ಹೊಂದಿರುವ ಉದ್ಯಮಗಳು ಎಂದು ವ್ಯಾಖ್ಯಾನಿಸಲಾಗಿದೆ.
    2. ಎಲ್ಲಾ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಕಂಪನಿಗಳ ಕಾಯಿದೆ, 2013  ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
    3. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸಾರ್ವಜನಿಕ ವಲಯದ ಉದ್ದಿಮೆಗಳ ಮಾಲೀಕತ್ವವನ್ನು  ಹೊಂದಬಹುದು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ಈಶಾನ್ಯ ಪ್ರದೇಶ ವಿಜ್ಞಾನ ಮತ್ತು ತಂತ್ರಜ್ಞಾನ ವಲಯ (NEST Cluster) ಅನ್ನು ಈ ಕೆಳಗಿನ ಯಾರು ಉದ್ಘಾಟಿಸಿದರು?
    2. ಕೇಂದ್ರ ಶಿಕ್ಷಣ ಸಚಿವರು 
    3. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು 
    4. ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರು 
    5. ಭಾರತದ ಪ್ರಧಾನಮಂತ್ರಿ

    ಉತ್ತರ: C

     

    1. 2025 ರಲ್ಲಿ, ಭಾರತದ ಯಾವ ಜೀವಗೋಳ ಮೀಸಲು ಪ್ರದೇಶವನ್ನು ಯುನೆಸ್ಕೋದ ವಿಶ್ವ ಜೀವಗೋಳ ಮೀಸಲು ಜಾಲದಲ್ಲಿ ( WNBR) ಸೇರಿಸಲಾಯಿತು?
    2. ಸಿಮ್ಲಿಪಾಲ್ ಜೀವಗೋಳ ಮೀಸಲು (ಒಡಿಶಾ) 
    3. ನಂದಾ ದೇವಿ ಜೀವಗೋಳ ಮೀಸಲು (ಉತ್ತರಾಖಂಡ) 
    4. ಗಲ್ಫ್ ಆಫ್ ಮನ್ನಾರ್ ಜೀವಗೋಳ ಮೀಸಲು (ತಮಿಳುನಾಡು) 
    5. ಶೀತ ಮರುಭೂಮಿ ಜೀವಗೋಳ ಮೀಸಲು (ಹಿಮಾಚಲ ಪ್ರದೇಶ)

    ಉತ್ತರ: D

     

    1. ‘ತೋರ್ಖಮ್ ಗಡಿ’ ಗೆ  ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ವ್ಯಾಪಾರ ಮತ್ತು ಸಾರಿಗೆಗಾಗಿ ಪ್ರಮುಖ ಲಾಜಿಸ್ಟಿಕಲ್ ಕೇಂದ್ರ (ಹಬ್) ವಾಗಿ ಕಾರ್ಯನಿರ್ವಹಿಸುತ್ತದೆ.
    2. ಇದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಏಕೈಕ ಭೂ ಗಡಿರೇಖೆಯಾಗಿದೆ.
    3. ಇದು ಎರಡು ದೇಶಗಳ ನಡುವಿನ ಅಂತರರಾಷ್ಟ್ರೀಯ ಗಡಿರೇಖೆಯ ಮೇಲೆ ಇದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಎಲ್ಲಾ 
    4. ಯಾವುದೂ ಇಲ್ಲ

    ಉತ್ತರ: B

     

    1. ಈ ಕೆಳಗಿನ ವೈಶಿಷ್ಟ್ಯಗಳನ್ನು ಪರಿಗಣಿಸಿ:
    1. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
    2. ದುರ್ಬಲ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳನ್ನು ಗುರಿಯಾಗಿಸುತ್ತದೆ.
    3. ಉಚಿತ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.

    ಮೇಲೆ ನೀಡಿರುವ ವೈಶಿಷ್ಟ್ಯಗಳಲ್ಲಿ ಯಾವುವು ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜಾನ್ ಆರೋಗ್ಯ ಯೋಜನೆಗೆ ಸಂಬಂಧಪಟ್ಟಿವೆ?

    1. 1 ಮತ್ತು 2 ಮಾತ್ರ 
    2. 2 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: D

     

    1. “ನೀಲಿ ನಗರಗಳು” (“ಬ್ಲೂ ಸಿಟೀಸ್”) ಪರಿಕಲ್ಪನೆಯು ಪ್ರಾಥಮಿಕವಾಗಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
    2. ಪ್ರಮುಖ ನದಿ ವ್ಯವಸ್ಥೆಗಳ ಉದ್ದಕ್ಕೂ ನೆಲೆಗೊಂಡಿರುವ, ಒಳನಾಡು ಜಲಮಾರ್ಗಗಳನ್ನು ಉತ್ತೇಜಿಸುವ ನಗರಗಳು. 
    3. ಸಾಗರ ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಸುಸ್ಥಿರ ನಗರ ಅಭಿವೃದ್ಧಿಯೊಂದಿಗೆ ಸಂಯೋಜಿಸುವ ಕರಾವಳಿ ಅಥವಾ ಬಂದರು ನಗರಗಳು. 
    4. ಪ್ರತಿ ವ್ಯಕ್ತಿಗೆ ಹೆಚ್ಚಿನ ಶುದ್ಧ ಕುಡಿಯುವ ನೀರಿನ ಬಳಕೆಯನ್ನು ಹೊಂದಿರುವ ನಗರಗಳು. 
    5. ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಸ್ಮಾರ್ಟ್ ಸಿಟಿಗಳು.

    ಉತ್ತರ: B

     

    1. ಭಾರತದ ಬಂದರು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಣ್ಣ ಬಂದರುಗಳನ್ನು ಕೇಂದ್ರ ಸರ್ಕಾರವು ನಿಯಂತ್ರಿಸುತ್ತದೆ.
    2. ಪ್ರಮುಖ ಬಂದರುಗಳು ಆಯಾ ರಾಜ್ಯ ಸರ್ಕಾರಗಳ ನ್ಯಾಯವ್ಯಾಪ್ತಿಯಲ್ಲಿರುತ್ತವೆ.
    3. ಭಾರತವು 13 ಪ್ರಮುಖ ಬಂದರುಗಳು ಮತ್ತು 200 ಕ್ಕೂ ಹೆಚ್ಚು ಸಣ್ಣ ಬಂದರುಗಳನ್ನು ಹೊಂದಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮಾತ್ರ 
    2. 2 ಮತ್ತು 3 ಮಾತ್ರ 
    3. 3 ಮಾತ್ರ 
    4. 1 ಮತ್ತು 3 ಮಾತ್ರ

    ಉತ್ತರ: C

     

    1. ರೂಪಾಯಿ ಬೆಂಬಲಿತ ‘ಸ್ಥಿರ ನಾಣ್ಯ’ (ಸ್ಟೇಬಲ್‌ ಕಾಯಿನ್‌) ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇವುಗಳನ್ನು ಸಾಮಾನ್ಯವಾಗಿ ಭಾರತೀಯ ರೂಪಾಯಿಗೆ 1:1 ಅನುಪಾತದಲ್ಲಿ ಜೋಡಿಸಲಾಗುತ್ತದೆ.
    2. ಇವುಗಳು ಹೆಚ್ಚಿನ ಏರಿಳಿತವಿಲ್ಲದೆ ಕ್ರಿಪ್ಟೋ ಸ್ವತ್ತುಗಳ ಪ್ರೋಗ್ರಾಮೆಬಿಲಿಟಿಯನ್ನು ಒದಗಿಸುತ್ತವೆ.
    3. ಇವುಗಳನ್ನು ಪ್ರಾಥಮಿಕವಾಗಿ ಕೇವಲ ಊಹಾತ್ಮಕ ಹೂಡಿಕೆ ಲಾಭಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಎಲ್ಲಾ ಮೂರು 
    4. ಯಾವುದೂ ಇಲ್ಲ

    ಉತ್ತರ: B

     

    1. ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನು ಮಿಷನ್‌ಗೆ (NBHM) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ವೈಜ್ಞಾನಿಕ ಜೇನುಸಾಕಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
    2. ಇದನ್ನು ರಾಷ್ಟ್ರೀಯ ಜೇನು ಮಂಡಳಿಯ (NBB) ಮೂಲಕ ಅನುಷ್ಠಾನಗೊಳಿಸಲಾಗುತ್ತದೆ.
    3. ಇದನ್ನು ‘ಸಿಹಿ ಕ್ರಾಂತಿ’ (ಸ್ವೀಟ್ ರೆವಲ್ಯೂಷನ್) ಉಪಕ್ರಮದ ಭಾಗವಾಗಿ ಪ್ರಾರಂಭಿಸಲಾಯಿತು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: D

     

    1. ಈ ಕೆಳಗಿನ ಯಾವ ಭಾರತೀಯ ರಾಜ್ಯಗಳು ನೇಪಾಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ?
    1. ಸಿಕ್ಕಿಂ
    2. ಪಶ್ಚಿಮ ಬಂಗಾಳ
    3. ಬಿಹಾರ
    4. ಉತ್ತರಾಖಂಡ
    5. ಹಿಮಾಚಲ ಪ್ರದೇಶ

    ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1, 2, 3 ಮತ್ತು 4 ಮಾತ್ರ 
    2. 1, 3 ಮತ್ತು 5 ಮಾತ್ರ 
    3. 2 ಮತ್ತು 4 ಮಾತ್ರ 
    4. 1, 2, 3, 4 ಮತ್ತು 5

    ಉತ್ತರ: A

     

    1. ಕಾಲಾಪಾನಿ ಪ್ರದೇಶವು ಈ ಕೆಳಗಿನವುಗಳಲ್ಲಿ ಯಾವುದರ ತ್ರಿ-ಸಂಧಿ (ಮೂರು ಗಡಿಗಳು ಸಂಧಿಸುವ ಸ್ಥಳ) ಯ ಬಳಿ ಇದೆ?
    2. ಭಾರತ – ನೇಪಾಳ – ಚೀನಾ 
    3. ಭಾರತ – ನೇಪಾಳ – ಭೂತಾನ್ 
    4. ಭಾರತ – ಭೂತಾನ್ – ಚೀನಾ 
    5. ಭಾರತ – ನೇಪಾಳ – ಬಾಂಗ್ಲಾದೇಶ

    ಉತ್ತರ: A

     

    1. ಈ ಕೆಳಗಿನ ಯಾವ ಹೇಳಿಕೆಯು ಮಧುಮೇಹವನ್ನು ಉತ್ತಮವಾಗಿ ವ್ಯಾಖ್ಯಾನಿಸುತ್ತದೆ?
    2. ಇದು ಕೆಂಪು ರಕ್ತ ಕಣಗಳ ಕೊರತೆಯಿಂದ ಉಂಟಾಗುವ ಆನುವಂಶಿಕ ಅಸ್ವಸ್ಥತೆಯಾಗಿದೆ. 
    3. ಇದು ರಕ್ತದೊತ್ತಡದ  ಅಸಮತೋಲನದಿಂದ ಉಂಟಾಗುವ ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದೆ.
    4. ಇದು ದೇಹವು ಇನ್ಸುಲಿನ್ ಅನ್ನು ಉತ್ಪಾದಿಸಲು ಅಥವಾ ಸರಿಯಾಗಿ ಬಳಸಲು ಸಾಧ್ಯವಾಗದ ದೀರ್ಘಕಾಲದ ಚಯಾಪಚಯ ಅಸ್ವಸ್ಥತೆಯಾಗಿದೆ
    5. ಇದು ಗ್ಲೂಕೋಸ್ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ವೈರಲ್ ಸೋಂಕಾಗಿದೆ.

    ಉತ್ತರ: C

     

    1. ಟೈಪ್ 2 ಮಧುಮೇಹದಲ್ಲಿ , ಸಮಸ್ಯೆಯು  ಪ್ರಾಥಮಿಕವಾಗಿ ಏಕೆ ಉದ್ಭವಿಸುತ್ತದೆ?
    2. ದೇಹವು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. 
    3. ಮೇದೋಜ್ಜೀರಕ ಗ್ರಂಥಿಯು ಸೋಂಕಿಗೆ ಒಳಗಾಗುತ್ತದೆ. 
    4. ಪ್ರತಿರಕ್ಷಣಾ ವ್ಯವಸ್ಥೆಯು ಯಕೃತ್ತಿನ ಮೇಲೆ ದಾಳಿ ಮಾಡುತ್ತದೆ. 
    5. ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ ಅಥವಾ ಅದನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ.

    ಉತ್ತರ: D

     

    1. ಈ ಕೆಳಗಿನ ಹೆಪಟೈಟಿಸ್ ಪ್ರಕಾರಗಳನ್ನು ಅವುಗಳ ಗುಣಲಕ್ಷಣಗಳೊಂದಿಗೆ ಹೊಂದಿಸಿ:

    ಹೆಪಟೈಟಿಸ್ ಪ್ರಕಾರಗಳು

    ಗುಣಲಕ್ಷಣಗಳು

    a. ಹೆಪಟೈಟಿಸ್ A

    1. ಸೋಂಕಿಗೆ ಹೆಪಟೈಟಿಸ್ B ಅಗತ್ಯವಿದೆ.

    b. ಹೆಪಟೈಟಿಸ್ C

    2. ದೀರ್ಘಕಾಲದ ಯಕೃತ್ತಿನ ಸಿರೋಸಿಸ್  ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು.

    c. ಹೆಪಟೈಟಿಸ್ D

    3. ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ ಮತ್ತು ಸ್ವಯಂ-ಸೀಮಿತವಾಗಿರುತ್ತದೆ .

    d. ಹೆಪಟೈಟಿಸ್ E

    4. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಗಂಭೀರವಾಗಿರುತ್ತದೆ.

    ಸರಿಯಾದ ಸಂಯೋಜನೆಯನ್ನು ಆಯ್ಕೆಮಾಡಿ:

    1. a–3, b–2, c–1, d–4 
    2. a–4, b–1, c–2, d–3 
    3. a–3, b–1, c–4, d–2 
    4. a–2, b–3, c–1, d–4

    ಉತ್ತರ: A

     

    1. ರುಮಟಾಯ್ಡ್ ಸಂಧಿವಾತಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
    2. ಇದು ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ವ್ಯಕ್ತಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. 
    3. ಇದು ಸಾಮಾನ್ಯವಾಗಿ 30-60 ವರ್ಷದೊಳಗಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. 
    4. ಇದು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. 
    5. ಇದು ಪುರುಷರು ಮತ್ತು ಮಹಿಳೆಯರ ಮೇಲೆ ಸಮಾನವಾಗಿ ಪರಿಣಾಮ ಬೀರುತ್ತದೆ.

    ಉತ್ತರ: B

     

    1. ರುಮಟಾಯ್ಡ್ ಸಂಧಿವಾತವನ್ನು ವ್ಯವಸ್ಥಿತ ರೋಗ ಎಂದು ಪರಿಗಣಿಸಲು ಕಾರಣ:
    2. ಇದು ಮೂಳೆಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. 
    3. ಇದು ಗಾಳಿಯ ಮೂಲಕ ಹರಡುತ್ತದೆ. 
    4. ಇದು ಶ್ವಾಸಕೋಶ, ಹೃದಯ, ಚರ್ಮ ಮತ್ತು ಕಣ್ಣುಗಳು ಸೇರಿದಂತೆ ಅನೇಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. 
    5. ಇದು ಯಾವಾಗಲೂ ಮೊಣಕಾಲುಗಳು ಮತ್ತು ಕೈಗಳಿಗೆ ಸೀಮಿತವಾಗಿರುತ್ತದೆ.

    ಉತ್ತರ: C

     

    1. ಸರಂಡಾ ಅರಣ್ಯವು ಭಾರತದ ಯಾವ ಜೈವಿಕ ಭೌಗೋಳಿಕ ವಲಯದಲ್ಲಿದೆ?
    2. ಪಶ್ಚಿಮ ಘಟ್ಟಗಳ ವಲಯ 
    3. ಟ್ರಾನ್ಸ್-ಹಿಮಾಲಯನ್ ವಲಯ 
    4. ಛೋಟಾನಾಗ್‌ಪುರ ವಲಯ 
    5. ದಖನ್ ಪ್ರಸ್ಥಭೂಮಿ ವಲಯ 

    ಉತ್ತರ: C

     

    1. ಸರಂಡಾ ಅರಣ್ಯದಲ್ಲಿ  ಮುಖ್ಯವಾಗಿ ಯಾವ ಬುಡಕಟ್ಟು ಸಮುದಾಯಗಳು ನೆಲೆಸಿವೆ?
    2. ಭಿಲ್ಸ್ ಮತ್ತು ಗೊಂಡ್ಸ್ 
    3. ಹೋ, ಮುಂಡಾ, ಉರಾವೋಣ್ ಸಮುದಾಯಗಳು 
    4. ಸಂತಾಲ್ ಮತ್ತು  ತೋಡಾ 
    5. ಅಂಗಾಮಿ ಮತ್ತು ಖಾಸಿ ಬುಡಕಟ್ಟು ಜನಾಂಗಗಳು

    ಉತ್ತರ: B

     

    1. ಪ್ರತಿಪಾದನೆ (A): ಫೇಮ್ ಇಂಡಿಯಾ ಯೋಜನೆಯು ಸಾರ್ವಜನಿಕ ಸಾರಿಗೆ ವಿದ್ಯುದ್ದೀಕರಣದ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ.

    ಕಾರಣ (R): ಈ ಯೋಜನೆಯು ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆಯ ( NEMMP) ಭಾಗವಾಗಿ ಭಾರೀ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತದೆ.

    ಸರಿಯಾದ ಆಯ್ಕೆಯನ್ನು ಆರಿಸಿ:

    1. A ಮತ್ತು R ಎರಡೂ ಸರಿಯಾಗಿವೆ , ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ 
    2. A ಮತ್ತು R ಎರಡೂ ಸರಿಯಾಗಿವೆ , ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ 
    3. A ಸರಿಯಾಗಿದೆ , ಆದರೆ R ತಪ್ಪಾಗಿದೆ. 
    4. A ತಪ್ಪಾಗಿದೆ, ಆದರೆ R ಸರಿಯಾಗಿದೆ 

    ಉತ್ತರ: D

     

    1. ಇತ್ತೀಚೆಗೆ ತನ್ನ ಕಾರ್ಯತಂತ್ರದ ಪ್ರಾಮುಖ್ಯತೆಯಿಂದ ಗಮನ ಸೆಳೆದ ಮುಧ್-ನ್ಯೋಮಾ ವಾಯುನೆಲೆ ಈ ಕೆಳಗಿನ ಯಾವ ಹೇಳಿಕೆಗಳೊಂದಿಗೆ ಸಂಬಂಧಿಸಿದೆ?
    1. ಇದು ಲಡಾಖ್‌ನ ಲೇಹ್ ಜಿಲ್ಲೆಯ ನ್ಯೋಮಾದಲ್ಲಿ ಸುಮಾರು 13,700 ಅಡಿ ಎತ್ತರದಲ್ಲಿದೆ.
    2. ಇದರ ನಿರ್ಮಾಣವನ್ನು ಕೇಂದ್ರ ಲೋಕೋಪಯೋಗಿ ಇಲಾಖೆಯು (CPWD) ನಿರ್ವಹಿಸಿದೆ.
    3. ವಾಸ್ತವ ನಿಯಂತ್ರಣ ರೇಖೆಯ (LAC) ಸಮೀಪವಿರುವ ಇದರ ಸ್ಥಳವು ದೇಪ್ಸಾಂಗ್ ಬಯಲು ಪ್ರದೇಶಗಳು, ಪಾಂಗೊಂಗ್ ತ್ಸೋ ಮತ್ತು ಚುಶುಲ್ ಕಣಿವೆಯಂತಹ ಪ್ರದೇಶಗಳಲ್ಲಿ ಭಾರತಕ್ಕೆ ಯುದ್ಧತಂತ್ರದ, ಸಾಗಣೆ (ಲಾಜಿಸ್ಟಿಕಲ್) ಮತ್ತು ಕಣ್ಗಾವಲು ಅನುಕೂಲಗಳನ್ನು ಒದಗಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3 ಮಾತ್ರ

    ಉತ್ತರ: B

     

    1. ಸೀಳು ಕಣಿವೆ ಜ್ವರ (ರಿಫ್ಟ್ ವ್ಯಾಲಿ ಫೀವರ್ -RVF) ಪ್ರಾಥಮಿಕವಾಗಿ ಈ ಕೆಳಗಿನವುಗಳಲ್ಲಿ ಯಾವುದರ ಮೇಲೆ ಪರಿಣಾಮ ಬೀರುತ್ತದೆ?
    2. ಮಾನವರ ಮೇಲೆ ಮಾತ್ರ 
    3. ಕುರಿ, ಮೇಕೆ, ದನ ಮತ್ತು ಒಂಟೆಗಳಂತಹ ಪ್ರಾಣಿಗಳ ಮೇಲೆ 
    4. ಪಕ್ಷಿಗಳು ಮತ್ತು ಸರೀಸೃಪಗಳ ಮೇಲೆ 
    5. ಕಡಲ ಪ್ರಾಣಿಗಳ ಮೇಲೆ 

    ಉತ್ತರ: B

     

    1. ಕಾಕಂಬಿ (ಮೊಲಾಸಿಸ್) ಮತ್ತು ಭಾರತದಲ್ಲಿ ಅದರ ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಕಾಕಂಬಿಯು ಕಬ್ಬು ಅಥವಾ ಸಕ್ಕರೆ ಗಡ್ಡೆಯ ಸಂಸ್ಕರಣೆಯ ಉಪ-ಉತ್ಪನ್ನವಾಗಿದ್ದು , ಕೈಗಾರಿಕಾ ಹುದುಗುವಿಕೆಗೆ ಸೂಕ್ತವಾದ ಹುದುಗುವ ಸಕ್ಕರೆಯನ್ನು ಹೊಂದಿರುತ್ತದೆ.
    2. ಇದು ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮದ ( ಅಡಿಯಲ್ಲಿ ಎಥೆನಾಲ್ ಉತ್ಪಾದನೆಗೆ ಪ್ರಮುಖ ಕಚ್ಚಾ ವಸ್ತುವಾಗಿದ್ದು , ಕಚ್ಚಾ ತೈಲ ಆಮದುಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.
    3. ಕಾಕಂಬಿಯನ್ನು ಅದರ ಹೆಚ್ಚಿನ ಕ್ಯಾಲೋರಿ ಮೌಲ್ಯದಿಂದಾಗಿ ಪ್ರಾಥಮಿಕವಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ನೇರ ಇಂಧನ ಬದಲಿಯಾಗಿ ಬಳಸಲಾಗುತ್ತದೆ.
    4. ಇದು ಆಹಾರ ಉದ್ಯಮ, ಪ್ರಾಣಿಗಳ ಆಹಾರ ಮತ್ತು ಸಿಟ್ರಿಕ್ ಆಮ್ಲ ಹಾಗೂ ಯೀಸ್ಟ್‌ನ ಕೈಗಾರಿಕಾ ಉತ್ಪಾದನೆಯಲ್ಲೂ ಉಪಯೋಗವನ್ನು ಹೊಂದಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

     

    33. ಹೆಚ್ಚು ವಿಷಕಾರಿ ಪ್ರೋಟೀನ್ ಆಗಿರುವ ‘ರಿಸಿನ್’  ಜಾಗತಿಕ ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ. ರಿಸಿನ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ರಿಸಿನ್ ಅನ್ನು ಕ್ಯಾಸ್ಟರ್ ಬೀನ್ ಸಸ್ಯದ (ರಿಷಿನಸ್ ಕಮ್ಯುನಿಸ್) ಬೀಜಗಳಿಂದ ಹೊರತೆಗೆಯಲಾಗುತ್ತದೆ ಮತ್ತು ಮಾನವ ಕೋಶಗಳಲ್ಲಿ ಪ್ರೋಟೀನ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.
    2. ಇದನ್ನು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ (CWC) ಷೆಡ್ಯೂಲ್-1 ರ ಅಡಿಯಲ್ಲಿ ವರ್ಗೀಕರಿಸಲಾಗಿದೆ, ಇದು ಅದರ ಉತ್ಪಾದನೆ ಮತ್ತು ಬಳಕೆಯನ್ನು ಸಂಶೋಧನೆ, ವೈದ್ಯಕೀಯ ಅಥವಾ ರಕ್ಷಣಾ ಉದ್ದೇಶಗಳಿಗೆ ನಿರ್ಬಂಧಿಸುತ್ತದೆ.
    3. ರಿಸಿನ್ ವಿಷವನ್ನು, ಒಡ್ಡಿಕೊಂಡ ತಕ್ಷಣ ನೀಡಿದರೆ, ಸಾಮಾನ್ಯ ಪ್ರತಿಜೀವಕಗಳಿಂದ ಪರಿಣಾಮಕಾರಿಯಾಗಿ ತಟಸ್ಥಗೊಳಿಸಬಹುದು.
    4. ರಿಸಿನ್‌ಗೆ ಒಡ್ಡಿಕೊಳ್ಳುವುದು ಕೆಲವೇ ಗಂಟೆಗಳಲ್ಲಿ ಮಾರಕವಾಗಬಹುದು, ಮತ್ತು ಪ್ರಸ್ತುತ ಮಾಹಿತಿಯಂತೆ ಯಾವುದೇ ವಿಷ ಪ್ರತಿಬಂಧಕ ಲಭ್ಯವಿಲ್ಲ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 1, 2 ಮತ್ತು 4 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: B

     

    1. ಹೇಳಿಕೆ 1: ಬೂಕರ್ ಪ್ರಶಸ್ತಿಯನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು/ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಕಾದಂಬರಿಗಳಿಗೆ ನೀಡಲಾಗುತ್ತದೆ.

    ಹೇಳಿಕೆ 2: ಡೇವಿಡ್ ಸ್ಜಾಲೆ ಅವರ ‘ಫ್ಲೆಶ್’  ಕೃತಿಯು ಯುನೈಟೆಡ್ ಕಿಂಗ್‌ಡಮ್ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಕಾರಣ ಬಹುಮಾನಕ್ಕೆ ಅರ್ಹವಾಗಿತ್ತು.

    ಸರಿಯಾದ ಆಯ್ಕೆಗಳನ್ನು ಆರಿಸಿ:

    1. ಹೇಳಿಕೆ 1 ಮತ್ತು 2 ಎರಡೂ ಸರಿಯಾಗಿವೆ , ಮತ್ತು ಹೇಳಿಕೆ 2 ಎಂಬುದು ಹೇಳಿಕೆ 1 ರ ಸರಿಯಾದ ವಿವರಣೆಯಾಗಿದೆ. 
    2. ಹೇಳಿಕೆ 1 ಮತ್ತು 2 ಎರಡೂ ಸರಿಯಾಗಿವೆ , ಆದರೆ ಹೇಳಿಕೆ 2 ಎಂಬುದು ಹೇಳಿಕೆ 1 ರ ಸರಿಯಾದ ವಿವರಣೆಯಲ್ಲ. 
    3. ಹೇಳಿಕೆ 1 ಸರಿಯಾಗಿದೆ, ಹೇಳಿಕೆ 2 ತಪ್ಪಾಗಿದೆ . 
    4. ಹೇಳಿಕೆ 1 ತಪ್ಪಾಗಿದೆ , ಹೇಳಿಕೆ 2 ಸರಿಯಾಗಿದೆ.

    ಉತ್ತರ: A

     

    1. ಭಾರತದಲ್ಲಿ 2016 ರ ನವೆಂಬರ್ 8 ರಂದು ಘೋಷಿಸಲಾದ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    ಹೇಳಿಕೆ 1: ನೋಟು ಅಮಾನ್ಯೀಕರಣವು ಚಲಾವಣೆಯಲ್ಲಿದ್ದ ಸುಮಾರು 86% ಕರೆನ್ಸಿಯನ್ನು ಒಳಗೊಂಡಿರುವ ₹500 ಮತ್ತು ₹1,000 ನೋಟುಗಳನ್ನು ಕಾನೂನುಬದ್ಧವಾಗಿ ಅಮಾನ್ಯಗೊಳಿಸಿತು. 

    ಹೇಳಿಕೆ 2: 2016 ರ ನೋಟು ಅಮಾನ್ಯೀಕರಣದ ಉದ್ದೇಶಗಳು ಕಪ್ಪು ಹಣವನ್ನು ತೊಡೆದುಹಾಕುವುದು, ನಕಲಿ ಕರೆನ್ಸಿಯನ್ನು ತಡೆಯುವುದು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಆರ್ಥಿಕತೆಯನ್ನು ಔಪಚಾರಿಕಗೊಳಿಸುವುದನ್ನು ಒಳಗೊಂಡಿದ್ದವು. 

    ಹೇಳಿಕೆ 3: ನೋಟು ಅಮಾನ್ಯೀಕರಣವು ಭಾರತೀಯ ಆರ್ಥಿಕತೆಯಿಂದ ಕಪ್ಪು ಹಣವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನೇರವಾಗಿ ಕಾರಣವಾಯಿತು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2, ಮತ್ತು 3

    ಉತ್ತರ: A

     

    1. ಭಾರತದ ಆದಿತ್ಯ-L1 ಮಿಷನ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಆದಿತ್ಯ-L1 ಭಾರತದ ಮೊದಲ ಅಂತರಿಕ್ಷ ಆಧಾರಿತ ಸೌರ ವೀಕ್ಷಣಾಲಯವಾಗಿದೆ.
    2. ಗಗನನೌಕೆಯನ್ನು ಭೂಮಿಯಿಂದ ಸುಮಾರು 1.5 ದಶಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಬಿಂದು 1 (L1) ಸುತ್ತಲಿನ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.
    3. ಈ ಮಿಷನ್ ಗಗನನೌಕೆಯನ್ನು ಸೂರ್ಯನ ಮೇಲ್ಮೈ ಮತ್ತು ಕರೋನಾವನ್ನು ಅಧ್ಯಯನ ಮಾಡಲು ನೇರವಾಗಿ ಸೂರ್ಯನಿಗೆ ಕಳುಹಿಸುವುದನ್ನು ಒಳಗೊಂಡಿದೆ.
    4. L1 ನಲ್ಲಿನ ನಿಯೋಜನೆಯು ಸೂರ್ಯಗ್ರಹಣಗಳ ಸಮಯದಲ್ಲಿಯೂ ಸಹ ಸೂರ್ಯನ ನಿರಂತರ ವೀಕ್ಷಣೆಗೆ ಅವಕಾಶ ನೀಡುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 1, 2, ಮತ್ತು 4 ಮಾತ್ರ 
    3. 1, 3, ಮತ್ತು 4 ಮಾತ್ರ 
    4. ಮೇಲಿನ ಎಲ್ಲವೂ

    ಉತ್ತರ: B

     

    1. ಈ ಕೆಳಗಿನ ಉತ್ಪನ್ನಗಳು ಮತ್ತು ಅವುಗಳ ಭೌಗೋಳಿಕ ಸೂಚಕ ಟ್ಯಾಗ್  (GI Tag) ಪಡೆದ ರಾಜ್ಯಗಳನ್ನು ಹೊಂದಿಸಿ: 

    ಪಟ್ಟಿ I (ಉತ್ಪನ್ನಗಳು )

    ಪಟ್ಟಿ II (ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು)

    a. ಕಣ್ಣಾಡಿಪ್ಪಾಯ 

    1. ತಮಿಳುನಾಡು

    b. ಆಪಟಾನಿ ಜವಳಿ 

    2. ಅರುಣಾಚಲ ಪ್ರದೇಶ

    c. ಮಾರ್ತಾಂಡಂ ಜೇನು 

    3. ಕೇರಳ

    d. ಲೇಪ್ಚಾ ತುಂಗ್ಬುಕ್

    4. ಅಸ್ಸಾಂ

    e. ಬೋಡೋ ಅರೋನೈ 

    5. ಸಿಕ್ಕಿಂ

    ಸರಿಯಾದ ಜೋಡಿಗಳನ್ನು ಆಯ್ಕೆಮಾಡಿ: 

    1. a–3, b–2, c–1, d–5, e–4 
    2. a–2, b–1, c–3, d–5, e–4 
    3. a–1, b–3, c–2, d–4, e–5 
    4. a–1, b–2, c–3, d–5, e–4 

    ಉತ್ತರ: A

     

    1. ಜರ್ಮನ್‌ವಾಚ್ ಸಂಸ್ಥೆ  ಬಿಡುಗಡೆ ಮಾಡಿದ ಹವಾಮಾನ ಅಪಾಯ ಸೂಚ್ಯಂಕ, 2026 ರ ಪ್ರಕಾರ, 1995 ಮತ್ತು 2024 ರ ನಡುವೆ ತೀವ್ರ ಹವಾಮಾನ ಘಟನೆಗಳಿಂದ ಹೆಚ್ಚು ಪ್ರಭಾವಿತವಾದ ದೇಶಗಳಲ್ಲಿ ಭಾರತದ ಶ್ರೇಯಾಂಕ ಎಷ್ಟು?
    2. 5 ನೇ 
    3. 7 ನೇ 
    4. 9 ನೇ 
    5. 11 ನೇ

    ಉತ್ತರ: C

     

    1. ಭಾರತದಲ್ಲಿ ಚೀತಾ ಸಂತತಿಯನ್ನು ಪುನಃ ಪರಿಚಯಿಸುವ ಗುರಿಯನ್ನು ಹೊಂದಿರುವ ಚೀತಾ ಯೋಜನೆ (ಪ್ರಾಜೆಕ್ಟ್ ಚೀತಾ ) ಯನ್ನು ಈ ಕೆಳಗಿನವುಗಳಲ್ಲಿ ಯಾವುದು ಅನುಷ್ಠಾನಗೊಳಿಸುತ್ತಿದೆ?
    2. ಭಾರತೀಯ ವನ್ಯಜೀವಿ ಸಂಸ್ಥೆ (WII)
    3. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 
    4. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 
    5. ಭಾರತೀಯ ಪ್ರಾಣಿ ಶಾಸ್ತ್ರೀಯ ಸಮೀಕ್ಷೆ (ZSI) 

    ಉತ್ತರ: B

     

    1. ಚೀತಾಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
    1. ಚೀತಾಗಳು ಪ್ರಪಂಚದ ಅತ್ಯಂತ ವೇಗದ ಸಸ್ತನಿಗಳಾಗಿವೆ. 
    2. ಭಾರತದಲ್ಲಿ ಅಳಿವಿನಂಚಿಗೆ ತಲುಪಿದ ಏಕೈಕ ದೊಡ್ಡ ಮಾಂಸಾಹಾರಿಗಳು, ಚೀತಾಗಳಾಗಿವೆ.
    3. ಚೀತಾಗಳು ಸಿಂಹಗಳಂತೆ ಗರ್ಜಿಸಲು ಸಾಧ್ಯವಿಲ್ಲ.
    4. ಆಫ್ರಿಕನ್ ಚೀತಾ ದುರ್ಬಲ (Vulnerable), ಮತ್ತು ಏಷ್ಯಾಟಿಕ್ ಚೀತಾ ತೀವ್ರವಾಗಿ ಅಳಿವಿನಂಚಿನಲ್ಲಿರುವ (Critically Endangered) ಪ್ರಭೇದವಾಗಿದೆ.

    ಸರಿಯಾದ ಆಯ್ಕೆಗಳನ್ನು ಆರಿಸಿ:

    1. 1, 2 ಮತ್ತು 4 ಮಾತ್ರ 
    2. 1, 2 ಮತ್ತು 3 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 3 ಮತ್ತು 4 ಮಾತ್ರ

    ಉತ್ತರ: A

     

    1. ಈ ಕೆಳಗಿನವುಗಳಲ್ಲಿ ಭೂತಾನ್‌ನಲ್ಲಿ ಭಾರತವು ಪ್ರಾರಂಭಿಸಿದ ಪ್ರಮುಖ ದ್ವಿಪಕ್ಷೀಯ ಯೋಜನೆಗಳು ಯಾವುವು?
    1. ಪುನಾತ್ಸಂಗ್ಛು ಮತ್ತು ಮಂಗದೇಚ್ಛು  ಜಲವಿದ್ಯುತ್ ಯೋಜನೆಗಳು 
    2. ಇಸ್ರೋದ (ISRO) ಗ್ರೌಂಡ್ ಅರ್ಥ್ ಸ್ಟೇಷನ್ 
    3. ರೂಪೇ ಕಾರ್ಡ್ 
    4. ಭಾರತದ ರಾಷ್ಟ್ರೀಯ ಜ್ಞಾನ ಜಾಲ 

    ಸರಿಯಾದ ಆಯ್ಕೆಗಳನ್ನು ಆರಿಸಿ:

    1. 1 ಮತ್ತು 2 ಮಾತ್ರ 
    2. 1, 2, ಮತ್ತು 3 ಮಾತ್ರ 
    3. 1, 2, 3, ಮತ್ತು 4 
    4. 2, 3, ಮತ್ತು 4 ಮಾತ್ರ

    ಉತ್ತರ: C

     

    1. ‘ದೆಹಲಿ ಘೋಷಣೆ 2025’ ಅನ್ನು ಈ ಕೆಳಗಿನ ಯಾವ ಸಂಸ್ಥೆಯು ಅಳವಡಿಸಿಕೊಂಡಿದೆ?
    2. ಭಾರತೀಯ ರಿಸರ್ವ್ ಬ್ಯಾಂಕ್ 
    3. ನಗರ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟ 
    4. ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ 
    5. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ 

    ಉತ್ತರ: B

     

    1. ಈ ಕೆಳಗಿನವುಗಳಲ್ಲಿ ಯಾವುದು/ಯಾವುವು ನಗರ ಸಹಕಾರಿ ಬ್ಯಾಂಕುಗಳ (UCBs) ಗುಣಲಕ್ಷಣಗಳಾಗಿವೆ?
    1. ಅವು ಪ್ರಾಥಮಿಕವಾಗಿ ಗ್ರಾಮೀಣ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತವೆ.
    2. ಅವು ಸಹಕಾರ, ಪ್ರಜಾಪ್ರಭುತ್ವದ ನಿರ್ಧಾರ ಕೈಗೊಳ್ಳುವಿಕೆ ಮತ್ತು ಮುಕ್ತ ಸದಸ್ಯತ್ವದ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತವೆ.
    3. ಅವು ಸಣ್ಣ ವ್ಯಾಪಾರಗಳು ಮತ್ತು ಸಂಬಳ ಪಡೆಯುವ ವ್ಯಕ್ತಿಗಳಿಗೆ ಠೇವಣಿಗಳು, ಸಾಲಗಳು ಮತ್ತು ಕ್ರೆಡಿಟ್ ಸೌಲಭ್ಯಗಳನ್ನು ನೀಡುತ್ತವೆ.

    ಸರಿಯಾದ ಆಯ್ಕೆಗಳನ್ನು ಆರಿಸಿ:

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2, ಮತ್ತು 3

    ಉತ್ತರ: B

     

    1. ‘ಜೈವಿಕ ಶುದ್ಧೀಕರಣ’ವು ಇತರ ಶುದ್ಧೀಕರಣ ವಿಧಾನಗಳಿಗಿಂತ  ಏಕೆ ಭಿನ್ನವಾಗಿದೆ?
    2. ಇದು ಮಾಲಿನ್ಯಕಾರಕಗಳನ್ನು ವಿಘಟಿಸಲು ಅಥವಾ ಪರಿವರ್ತಿಸಲು ಸೂಕ್ಷ್ಮಜೀವಿಗಳ ಮೇಲೆ ಅವಲಂಬಿತವಾಗಿದೆ. 
    3. ಇದು ಕೇವಲ ಯಾಂತ್ರಿಕ ಪ್ರತ್ಯೇಕತೆಯ ತಂತ್ರಗಳನ್ನು ಬಳಸುತ್ತದೆ. 
    4. ಇದನ್ನು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಲು ಮಾತ್ರ ಬಳಸಲಾಗುತ್ತದೆ. 
    5. ಇದು ಕಲುಷಿತ ಮಣ್ಣಿನ ದಹನವನ್ನು ಒಳಗೊಂಡಿರುತ್ತದೆ.

    ಉತ್ತರ: A

     

    1. ಡಂಪ್‌ಸೈಟ್ (ತ್ಯಾಜ್ಯ ವಿಲೇವಾರಿ ಸ್ಥಳ) ಶುದ್ಧೀಕರಣ ವೇಗವರ್ಧಕ ಕಾರ್ಯಕ್ರಮ (DRAP) ಯಾವ ರಾಷ್ಟ್ರೀಯ ಗುರಿಗೆ ನೇರವಾಗಿ ಕೊಡುಗೆ ನೀಡುತ್ತದೆ?
    2. 2025 ರ ವೇಳೆಗೆ 100% ನಗರ ತ್ಯಾಜ್ಯ ವಿಭಜನೆಯನ್ನು ಸಾಧಿಸುವುದು.  
    3. 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವುದು. 
    4. 2030 ರ ವೇಳೆಗೆ ಮರುಬಳಕೆ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದು. 
    5. ಸೆಪ್ಟೆಂಬರ್ 2026 ರ ವೇಳೆಗೆ “ಲಕ್ಷ್ಯ ಶೂನ್ಯ ಡಂಪ್‌ಸೈಟ್‌ಗಳು” – ಇದನ್ನು ಸಾಧಿಸುವುದು.

    ಉತ್ತರ: D

     

    1. ಇತ್ತೀಚೆಗೆ ಸುದ್ದಿಯಲ್ಲಿದ್ದ “ಮೆಗಾಚೈಲ್ (ಹ್ಯಾಕೆರಿಯಾಪಿಸ್) ಲೂಸಿಫರ್” ಎಂಬುದು ಯಾವ ಜೀವಿಗಳ ಗುಂಪಿಗೆ ಸೇರಿದೆ?
    2. ಉಭಯಚರಗಳು 
    3. ಜೇನುನೊಣಗಳ ಪ್ರಭೇದಗಳು 
    4. ಕಡಲ ಕಠಿಣಚರ್ಮಿಗಳು 
    5. ಸಿಹಿನೀರಿನ ಮೃದ್ವಂಗಿಗಳು 

    ಉತ್ತರ: B

     

    1. ಗಗನಯಾನ ಮಿಷನ್‌ಗೆ ಸಂಬಂಧಿಸಿದಂತೆ LVM3 ನ ಸೂಕ್ತತೆಯನ್ನು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಪ್ರತ್ಯೇಕಿಸುತ್ತದೆ?
    2. ಇದು ಸ್ಟ್ರಾಪ್-ಆನ್ ಬೂಸ್ಟರ್‌ಗಳನ್ನು ಹೊಂದಿರುವ ಭಾರತದ ಏಕೈಕ ರಾಕೆಟ್ ಆಗಿದೆ. 
    3. ಇದು ಮಾರ್ಪಾಡುಗಳ ನಂತರ ಮಾನವ ದರ್ಜೆಗೆ  ಸೂಕ್ತವಾಗಿದ್ದು, 4-ಟನ್ ಪೇಲೋಡ್‌ಗಳನ್ನು ಭೂ ಸ್ಥಿರ ವರ್ಗಾವಣೆ ಕಕ್ಷೆಗೆ ಇರಿಸಲು ಸಾಮರ್ಥ್ಯವಿರುವ ಏಕೈಕ ಭಾರತೀಯ ಉಡಾವಣಾ ವಾಹನವಾಗಿದೆ. 
    4. ಇದು ಸಿಬ್ಬಂದಿ ಕಾರ್ಯಾಚರಣೆಗಳಿಗಾಗಿ ಅಳವಡಿಸಲಾದ ಸೌರ-ವಿದ್ಯುತ್ ಪ್ರೊಪಲ್ಷನ್ ಹಂತವನ್ನು  ಬಳಸುತ್ತದೆ. 
    5. ಇದನ್ನು ಮೂಲತಃ ಮರುಬಳಕೆ ಮಾಡಬಹುದಾದ ಕಕ್ಷೆಯ ವರ್ಗದ ರಾಕೆಟ್ ಆಗಿ ಅಭಿವೃದ್ಧಿಪಡಿಸಲಾಗಿದೆ.

    ಉತ್ತರ: B

     

    1. ಪ್ರತಿಪಾದನೆ (A): ಕ್ರಯೋಸ್ಪಿಯರ್ (ಶೀತಾವರಣ/ಹಿಮಮಂಡಲ) ಅನ್ನು ಜಾಗತಿಕ ಹವಾಮಾನ ವ್ಯವಸ್ಥೆಯ ನಿರ್ಣಾಯಕ ಅಂಶವೆಂದು ಪರಿಗಣಿಸಲಾಗಿದೆ.

    ಕಾರಣ (R): ಹೆಪ್ಪುಗಟ್ಟಿದ ಮೇಲ್ಮೈಗಳು ಹೆಚ್ಚಿನ “ಪ್ರತಿಫಲನ ಸಾಮರ್ಥ್ಯ” (ಆಲ್ಬೆಡೋ) ವನ್ನು ಹೊಂದಿರುತ್ತವೆ, ಇದು ಸೌರ ವಿಕಿರಣದ ಒಂದು ಮಹತ್ವದ ಭಾಗವನ್ನು ಬಾಹ್ಯಾಕಾಶಕ್ಕೆ ಪ್ರತಿಫಲಿಸುತ್ತದೆ.

    1. A ಮತ್ತು R ಎರಡೂ ಸರಿಯಾಗಿವೆ, ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ. 
    2. A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ. 
    3. A ಸರಿಯಾಗಿದೆ, ಆದರೆ R ತಪ್ಪಾಗಿದೆ. D. A ತಪ್ಪಾಗಿದೆ, ಆದರೆ R ಸರಿಯಾಗಿದೆ.

    ಉತ್ತರ: A

     

    1. ರಾಷ್ಟ್ರೀಯ ಜಲ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಜಲ ಸಂರಕ್ಷಣೆ ಮತ್ತು ದಕ್ಷ ಜಲ ಸಂಪನ್ಮೂಲ ನಿರ್ವಹಣೆಯಲ್ಲಿನ ಅಮೋಘ ಪ್ರಯತ್ನಗಳಿಗೆ ಬಹುಮಾನ ನೀಡುವ ಗುರಿಯನ್ನು ಹೊಂದಿದೆ.
    2. ಈ ಪ್ರಶಸ್ತಿಗಳು ‘ಜಲ ಸಮೃದ್ಧ ಭಾರತ’ದ ಸರ್ಕಾರದ ದೃಷ್ಟಿಕೋನವನ್ನು ಉತ್ತೇಜಿಸುತ್ತವೆ.
    3. ಮಹಾರಾಷ್ಟ್ರವು ‘ಅತ್ಯುತ್ತಮ ರಾಜ್ಯ’ ವಿಭಾಗದಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿದೆ. ಗುಜರಾತ್ ಮತ್ತು ಹರಿಯಾಣ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ.
    4. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ಪ್ರಶಸ್ತಿಗಳನ್ನು ನಿರ್ವಹಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಮೂರು ಮಾತ್ರ 
    4. ಎಲ್ಲಾ ನಾಲ್ಕು

    ಉತ್ತರ: C

     

    1. ಪ್ರತಿಪಾದನೆ ( A): ಜಲಜನಕವನ್ನು ಒಂದು ಪ್ರಮುಖ ಭವಿಷ್ಯದ ಶಕ್ತಿ ವಾಹಕವೆಂದು ಪರಿಗಣಿಸಲಾಗಿದೆ.

    ಕಾರಣ (R): ಇದು ಬ್ರಹ್ಮಾಂಡದಲ್ಲಿ ಅತ್ಯಂತ ಹಗುರವಾದ, ಹೆಚ್ಚು ಹೇರಳವಾದ, ಮತ್ತು ಹೆಚ್ಚು ದಹಿಸುವ ರಾಸಾಯನಿಕ ಧಾತುವಾಗಿದೆ.

    1. A ಮತ್ತು R ಎರಡೂ ಸರಿಯಾಗಿವೆ, ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ 
    2. A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ 
    3. A ಸರಿಯಾಗಿದೆ, ಆದರೆ R ತಪ್ಪಾಗಿದೆ 
    4. A ತಪ್ಪಾಗಿದೆ, ಆದರೆ R ಸರಿಯಾಗಿದೆ

    ಉತ್ತರ: B

     

    1. ಜಾಗತಿಕ ಕ್ರಯೋಸ್ಪಿಯರ್‌ (ಶೀತಾವರಣ/ಹಿಮಮಂಡಲ) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭೂಮಿಯ ಧ್ರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ.
    2. ನೀರ್ಗಲ್ಲು ಬೆಟ್ಟಗಳನ್ನು  ಶೀತಾವರಣದ ಭಾಗವೆಂದು ಪರಿಗಣಿಸಲಾಗುತ್ತದೆ.
    3. ಶೀತ ಕೆಳಭೂಸ್ತರ (Permafrost) ಎಂದರೆ ಸತತ ಎರಡಕ್ಕಿಂತ ಹೆಚ್ಚು ವರ್ಷಗಳ ಕಾಲ ಹೆಪ್ಪುಗಟ್ಟಿದ ನೆಲ ಎಂದರ್ಥ. 
    4. ಋತುಮಾನದ ಸರೋವರ ಮತ್ತು ಹಿಮನದಿಯನ್ನು ಕ್ರಯೋಸ್ಪಿಯರ್‌ ನಿಂದ ಹೊರಗಿಡಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಮೂರು ಮಾತ್ರ 
    4. ಎಲ್ಲಾ ನಾಲ್ಕು

    ಉತ್ತರ: B

     

    1. FGM-148 ಜಾವೆಲಿನ್ ವ್ಯವಸ್ಥೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ‘ಅತಿಗೆಂಪು ಇಮೇಜಿಂಗ್ ಸೀಕರ್’ ಅನ್ನು ಬಳಸುತ್ತದೆ, ಇದು ನಿಜವಾದ “ಫೈರ್-ಅಂಡ್-ಫರ್ಗೆಟ್” (ಹೊಡೆದು ಮರೆತುಬಿಡಿ) ಸಾಮರ್ಥ್ಯವನ್ನು ಒದಗಿಸುತ್ತದೆ.
    2. ಇದು ಕವಚ ರಕ್ಷಿತ ಗುರಿಗಳ ವಿರುದ್ಧ ‘ಮೇಲ್ಭಾಗದ ದಾಳಿ ಹಾಗೂ ನೇರ ದಾಳಿ ವಿಧಾನಗಳೆರಡರಲ್ಲೂ ಕಾರ್ಯನಿರ್ವಹಿಸಲು ಸಮರ್ಥವಾಗಿದೆ.
    3. ಕ್ಷಿಪಣಿಯು ಗುರಿಯನ್ನು ಅಪ್ಪಳಿಸುವವರೆಗೆ ಇದಕ್ಕೆ ನಿರ್ವಾಹಕರಿಂದ ನಿರಂತರ ಮಾರ್ಗದರ್ಶನದ ಅಗತ್ಯವಿರುತ್ತದೆ.
    4. ಇದು ಮಧ್ಯಮ-ಶ್ರೇಣಿಯ ದಾಳಿ ಸಾಮರ್ಥ್ಯವನ್ನು ಹೊಂದಿರುವ, ಒಬ್ಬ ವ್ಯಕ್ತಿಯೇ ಸಾಗಿಸಬಲ್ಲ ‘ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿ’ ವ್ಯವಸ್ಥೆಯಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

     

    1. ORS (ಮೌಖಿಕ ಪುನರ್ಜಲೀಕರಣ ಲವಣಗಳು) ಅನ್ನು ಪ್ರಾಥಮಿಕವಾಗಿ ಈ ಕೆಳಗಿನವುಗಳಲ್ಲಿ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ?
    2. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಚಿಕಿತ್ಸೆಗಾಗಿ. 
    3. ತೀವ್ರ ಅತಿಸಾರದಿಂದ ಉಂಟಾಗುವ ನಿರ್ಜಲೀಕರಣದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ. 
    4. ಮಕ್ಕಳಲ್ಲಿ ಅಧಿಕ ರಕ್ತದೊತ್ತಡದ ನಿರ್ವಹಣೆಗಾಗಿ. 
    5. ಮಲೇರಿಯಾದಿಂದ ಉಂಟಾಗುವ ನಿರ್ಜಲೀಕರಣದ ಚಿಕಿತ್ಸೆಗಾಗಿ.

    ಉತ್ತರ: B

     

    1. ‘ಜಂಟಿ ಕ್ರೆಡಿಟಿಂಗ್ (ಸಾಲ) ವ್ಯವಸ್ಥೆ’ಗೆ (JCM) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಜಪಾನ್ ಪ್ರಾರಂಭಿಸಿದ ಒಂದು ದ್ವಿಪಕ್ಷೀಯ ಇಂಗಾಲದ ಮಾರುಕಟ್ಟೆ ಚೌಕಟ್ಟಾಗಿದೆ. 
    2. JCM ಅಡಿಯಲ್ಲಿ, ಪಾಲುದಾರ ರಾಷ್ಟ್ರಗಳಲ್ಲಿ ಉತ್ಪತ್ತಿಯಾಗುವ ಇಂಗಾಲದ ಕ್ರೆಡಿಟ್‌ಗಳನ್ನು ಜಪಾನ್ ಮಾತ್ರ ಬಳಸಿಕೊಳ್ಳಬಹುದು.
    3. JCM ತಂತ್ರಜ್ಞಾನ ವರ್ಗಾವಣೆ ಮತ್ತು ಹಣಕಾಸಿನ ನೆರವಿನ ಮೂಲಕ ಕಡಿಮೆ ಇಂಗಾಲದ ತಂತ್ರಜ್ಞಾನಗಳಅಳವಡಿಕೆಯನ್ನು ಬೆಂಬಲಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ
    2. 2 ಮತ್ತು 3 ಮಾತ್ರ 
    3. 1 ಮತ್ತು 2 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಅಕಾಂತೋಸಿಸ್ ನಿಗ್ರಿಕನ್ಸ್’ ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಸಾಮಾನ್ಯವಾಗಿ ದೇಹದ ಮಡಿಕೆಗಳಲ್ಲಿ ಕಂಡುಬರುವ ಕಪ್ಪು, ವೆಲ್ವೆಟ್‌ನಂತಹ (ಮೃದುವಾದ) ಚರ್ಮದ ಕಲೆಗಳಿಂದ ಗುರುತಿಸಲ್ಪಡುತ್ತದೆ.
    2. ಈ ಸ್ಥಿತಿಯು ಹಠಾತ್ತನೆ ಗಂಟೆಗಳು ಅಥವಾ ದಿನಗಳಲ್ಲಿ ಕಾಣಿಸಿ, ತೀವ್ರ ಹಾರ್ಮೋನುಗಳ ಅಸಮತೋಲನವನ್ನು ಸೂಚಿಸುತ್ತದೆ.
    3. ಇದು ಇನ್ಸುಲಿನ್ ಪ್ರತಿರೋಧದೊಂದಿಗೆ ಬಲವಾಗಿ ಸಂಬಂಧ ಹೊಂದಿದೆ ಮತ್ತು ಮಧುಮೇಹ ಪೂರ್ವ ಹಂತದ ಆರಂಭಿಕ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: C

     

    1. ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ (IITF) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವಾರ್ಷಿಕವಾಗಿ ಆಯೋಜಿಸುತ್ತದೆ.
    2. ಇದು ಪ್ರತಿ ವರ್ಷ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತದೆ.
    3. IITF ನ ಮೊದಲ ಆವೃತ್ತಿಯನ್ನು 1990 ರಲ್ಲಿ ಪ್ರಾರಂಭಿಸಲಾಯಿತು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 2 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

     

    1. ಪ್ರತಿಪಾದನೆ (A): ಮೀಥೇನ್ ಅನ್ನು ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕ ಎಂದು ವರ್ಗೀಕರಿಸಲಾಗಿದೆ.

    ಕಾರಣ (R): ಇದರ ವಾತಾವರಣದ ಜೀವಿತಾವಧಿಯು ಸುಮಾರು 12 ವರ್ಷಗಳು. ಇದು ಇಂಗಾಲದ ಡೈಆಕ್ಸೈಡ್ (CO2) ಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆಯಾಗಿದೆ.

    ಸರಿಯಾದ ಆಯ್ಕೆಯನ್ನು ಆರಿಸಿ:

    1. A ಮತ್ತು R ಎರಡೂ ಸರಿಯಾಗಿವೆ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ.
    2. A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ.
    3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
    4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

    ಉತ್ತರ: A

     

    1. ಕೆಳಗಿನ ಜಾಗತಿಕ ವಲಯಗಳನ್ನು ಅವುಗಳ ಅಂದಾಜು ಮೀಥೇನ್ ಹೊರಸೂಸುವಿಕೆಗಳ ಪಾಲಿನೊಂದಿಗೆ ಹೊಂದಿಸಿ:

    ಪಟ್ಟಿ I (ವಲಯ)

    ಪಟ್ಟಿ II (ಶೇಕಡಾವಾರು ಪಾಲು)

    1. ಕೃಷಿ 

    a. 35%

    2. ಶಕ್ತಿ

    b. 20%

    3. ತ್ಯಾಜ್ಯ

    c. 40%

    ಸರಿಯಾದ ಹೊಂದಾಣಿಕೆಯ ಸಂಯೋಜನೆಯನ್ನು ಆರಿಸಿ:

    1. 1-c, 2-a, 3-b
    2. 1-a, 2-c, 3-b
    3. 1-c, 2-b, 3-a
    4. 1-b, 2-a, 3-c

    ಉತ್ತರ: A

     

    1. ‘ಕೋಡೆಕ್ಸ್ ಆಲಿಮೆಂಟೇರಿಯಸ್ ಆಯೋಗ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಗ್ರಾಹಕರ ಆರೋಗ್ಯವನ್ನು ರಕ್ಷಿಸಲು ಮತ್ತು ಆಹಾರ ವ್ಯಾಪಾರದಲ್ಲಿ ನ್ಯಾಯೋಚಿತ ಪದ್ಧತಿಗಳನ್ನು ಖಚಿತಪಡಿಸಿಕೊಳ್ಳಲು FAO ಮತ್ತು WHO ಗಳ ಸಹಯೋಗದೊಂದಿಗೆ ಸ್ಥಾಪಿಸಲಾದ ಒಂದು ಆಯೋಗವಾಗಿದೆ.
    2. ಇದು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಂತೆ ಒಟ್ಟು 189 ಸದಸ್ಯತ್ವರನ್ನು ಹೊಂದಿದೆ.
    3. ಇದರ ಅಧಿವೇಶನಗಳು ಪ್ರತಿ ಎರಡು ವರ್ಷಗಳಿಗೊಮ್ಮೆ, ರೋಮ್ ಮತ್ತು ಜಿನೀವಾ ನಗರಗಳ ನಡುವೆ ಪರ್ಯಾಯವಾಗಿ ನಡೆಯುತ್ತವೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಜಲ ಆಯವ್ಯಯ’ (ವಾಟರ್ ಬಜೆಟಿಂಗ್) ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ:
    1. ಇದು ಪರಿಸರಕ್ಕೆ ಬೇಕಾದ ನೀರಿನ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
    2. ಇದನ್ನು ಭಾರತದ ಬರಪೀಡಿತ ಜಿಲ್ಲೆಗಳಲ್ಲಿ ಮಾತ್ರ ಕಡ್ಡಾಯಗೊಳಿಸಲಾಗಿದೆ.
    3. ಇದು ನೀರಿನ ಪೂರೈಕೆ ಮತ್ತು ಬೇಡಿಕೆಯ ನಡುವಿನ ಕೊರತೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
    4. ಇದು ಅಂತರ್ಜಲ ಪುನರ್ಭರ್ತಿಯನ್ನು ಸುಧಾರಿಸಲು ಮಾತ್ರ ಕೊಡುಗೆ ನೀಡುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 2 ಮತ್ತು 4 
    2. 1, 2, ಮತ್ತು 3 
    3. 1 ಮತ್ತು 3 
    4. 3 ಮತ್ತು 4

    ಉತ್ತರ: C

     

    1. ‘ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ’ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಭಾರತ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೀಡುತ್ತದೆ.
    2. ಇದು ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಗುರುತಿಸುತ್ತದೆ.
    3. ಮಿಚೆಲ್ ಬ್ಯಾಚಲೆಟ್ ಅವರು ಈ ಪ್ರಶಸ್ತಿಯ 2024 ರ ಸಾಲಿನ ಪುರಸ್ಕೃತರಾಗಿದ್ದಾರೆ. 

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ
    3. 3 ಮಾತ್ರ 
    4. 1, 2 ಮತ್ತು 3

    ಉತ್ತರ: B

     

    1. ‘ಆಂಟಿ-ಮೈಕ್ರೋಬಿಯಲ್ ಪ್ರತಿರೋಧಕತೆ 2.0 ರಾಷ್ಟ್ರೀಯ ಕ್ರಿಯಾ ಯೋಜನೆ 2025–29 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತದಾದ್ಯಂತ AMR ಕಣ್ಗಾವಲು ವ್ಯವಸ್ಥೆಗಳು ಮತ್ತು ಪ್ರಯೋಗಾಲಯ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
    2. ಇದು NAP-AMR 1.0 ಗೆ ಹೋಲಿಸಿದರೆ ಖಾಸಗಿ ವಲಯವನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತದೆ.
    3. ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಮತ್ತು ಆಂಟಿ ಮೈಕ್ರೋಬಿಯಲ್ ಬಳಕೆಯ ಮೇಲಿನ ನಿಯಂತ್ರಕ ಚೌಕಟ್ಟುಗಳನ್ನು  ಸುಧಾರಿಸುವುದು ಇದರ ಉದ್ದೇಶಗಳಲ್ಲಿ ಒಂದಾಗಿದೆ. 

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: D

     

    1. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 (NFSA 2013) ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. NFSA ಅಡಿಯಲ್ಲಿ ಆಹಾರದ ಹಕ್ಕನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ.
    2. ಈ ಕಾಯಿದೆಯ ಅಡಿಯಲ್ಲಿ, ಅಂತ್ಯೋದಯ ಅನ್ನ ಯೋಜನೆ ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯಗಳನ್ನು ಪಡೆಯಲು ಅರ್ಹವಾಗಿವೆ.
    3. ಈ ಯೋಜನೆಯ ವ್ಯಾಪ್ತಿಯ ಅನುಪಾತವು ಗ್ರಾಮೀಣ ಮತ್ತು ನಗರ ಜನಸಂಖ್ಯೆಗೆ ಏಕರೂಪವಾಗಿದ್ದು, ಎರಡಕ್ಕೂ ಶೇಕಡಾ 70 ರಷ್ಟಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 2 ಮತ್ತು 4 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಯುವ ಫಾರ್ ಆಲ್’ ಉಪಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY} ಪ್ರಾರಂಭಿಸಿದೆ.
    2. ಇದು ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯ ಪ್ರಮಾಣೀಕರಣ ಕೋರ್ಸ್ ಆಗಿದೆ.
    3. ಭಾರತದಾದ್ಯಂತ 1 ಕೋಟಿ ನಾಗರಿಕರಿಗೆ ಮೂಲಭೂತ ಕೃತಕ ಬುದ್ಧಿಮತ್ತೆ ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ
    2. 1 ಮತ್ತು 2 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: A

     

    1. ಹನೋಯಿ ಸಮಾವೇಶದ ಪ್ರಾಥಮಿಕ ಉದ್ದೇಶವನ್ನು ಈ ಕೆಳಗಿನವುಗಳಲ್ಲಿ ಯಾವುದು ಉತ್ತಮವಾಗಿ ವಿವರಿಸುತ್ತದೆ?
    2. ಅಂತರರಾಷ್ಟ್ರೀಯ ಗಡಿಗಳಾದ್ಯಂತ ದತ್ತಾಂಶ ರಕ್ಷಣೆ ಮತ್ತು ಗೌಪ್ಯತೆಗಾಗಿ ಜಾಗತಿಕ ಮಾನದಂಡಗಳನ್ನು ಹೊಂದಿಸುವುದು. 
    3. ವರ್ಧಿತ ಅಂತರರಾಷ್ಟ್ರೀಯ ಸಹಕಾರದ ಮೂಲಕ ಸೈಬರ್ ಅಪರಾಧಗಳ (cybercrimes) ತನಿಖೆ ಮತ್ತು ಕಾನೂನು ಕ್ರಮಕ್ಕೆ ಅನುವು ಮಾಡಿಕೊಡುವ ಜಾಗತಿಕ ಚೌಕಟ್ಟನ್ನು ಸ್ಥಾಪಿಸುವುದು. 
    4. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಡಿಜಿಟಲ್ ವ್ಯಾಪಾರ ಮತ್ತು ಇ-ಕಾಮರ್ಸ್ ಸಹಕಾರವನ್ನು ಉತ್ತೇಜಿಸುವುದು. 
    5. ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ಸೈಬರ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಜಾಗತಿಕ ನಿಯಂತ್ರಕ ಸಂಸ್ಥೆಯನ್ನು ರಚಿಸುವುದು.

    ಉತ್ತರ: B

     

    1. ‘PPV&FRA ಕಾಯಿದೆ’ಯ ಅಡಿಯಲ್ಲಿ, ನೋಂದಣಿಗೆ  ಅರ್ಹವಾದ ಸಸ್ಯ ಪ್ರಭೇದಗಳ ವರ್ಗಗಳಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಒಳಗೊಂಡಿಲ್ಲ ?
    2. ಹೊಸ ತಳಿ 
    3. ಮೂಲಭೂತವಾಗಿ ಪಡೆದ ಪ್ರಭೇದ
    4. GEAC ನಿಂದ ಅನುಮೋದಿಸಲಾದ ಕುಲಾಂತರಿ (GM) ಪ್ರಭೇದ
    5. ಅಸ್ತಿತ್ವದಲ್ಲಿರುವ ಪ್ರಭೇದ

    ಉತ್ತರ: C

     

    1. ಭಾರತದಲ್ಲಿನ ‘ಡುಗಾಂಗ್ ಸಂರಕ್ಷಣೆಗೆ’ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಭಾರತದ ಮೊದಲ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವು ತಮಿಳುನಾಡಿನ ಪಾಕ್ ಕೊಲ್ಲಿ ಪ್ರದೇಶದಲ್ಲಿದೆ.
    2. ಡುಗಾಂಗ್ ಅನ್ನು IUCN ಕೆಂಪು ಪಟ್ಟಿಯಲ್ಲಿ ‘ದುರ್ಬಲ’  ಎಂದು ಪಟ್ಟಿ ಮಾಡಲಾಗಿದೆ.
    3. ಡುಗಾಂಗ್ ಅನ್ನು ವನ್ಯಜೀವಿ (ಸಂರಕ್ಷಣಾ) ಕಾಯಿದೆ, 1972 ರ ‘ಅನುಸೂಚಿ I’  ರ ಅಡಿಯಲ್ಲಿ ರಕ್ಷಿಸಲಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

     

    1. ಭಾರತದಲ್ಲಿ ಡುಗಾಂಗ್‌ಗಳ ಸಂಖ್ಯೆಯ ಇಳಿಮುಖಕ್ಕೆ ಈ ಕೆಳಗಿನ ಯಾವ ಬೆದರಿಕೆಗಳು ಪ್ರಮುಖ ಕಾರಣಗಳಾಗಿವೆ?
    1. ಕಡಲ ಹುಲ್ಲು ಆವಾಸಸ್ಥಾನಗಳ ನಷ್ಟ.
    2. ಮೀನುಗಾರಿಕೆ ಬಲೆಗಳಲ್ಲಿ ಆಕಸ್ಮಿಕವಾಗಿ ಸಿಕ್ಕಿಬೀಳುವಿಕೆ .
    3. ಕಡಲಾಚೆಯ ಪವನ ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ನೀರಿನೊಳಗಿನ ಶಬ್ದ ಮಾಲಿನ್ಯ.
    4. ಅಕ್ರಮ ಬೇಟೆ.

    ಸರಿಯಾದ ಉತ್ತರವನ್ನು ಆರಿಸಿ:

    1. 1, 2 ಮತ್ತು 4 ಮಾತ್ರ 
    2. 1, 3 ಮತ್ತು 4 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

     

    1. ಲೀಡ್‌ ಐಟಿ(‘LeadIT’) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು 2019 ರ ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾರತ, ಸ್ವೀಡನ್ ಮತ್ತು ವಿಶ್ವ ಆರ್ಥಿಕ ವೇದಿಕೆ ಜಂಟಿಯಾಗಿ ಪ್ರಾರಂಭಿಸಿದವು.
    2. ಇದು 2050 ರ ವೇಳೆಗೆ ‘ನಿವ್ವಳ ಶೂನ್ಯ’ ಗುರಿಯತ್ತ ಸಾಗಲು, ಹೊರಸೂಸುವಿಕೆಯನ್ನು ತಗ್ಗಿಸಲು ಕಷ್ಟಕರವಾದ ವಲಯಗಳಲ್ಲಿ ಕೈಗಾರಿಕಾ ಪರಿವರ್ತನೆಯನ್ನು ವೇಗಗೊಳಿಸಲು ಗಮನಹರಿಸುತ್ತದೆ.
    3. ಲೀಡ್‌ ಐಟಿ ಎಂಬುದು ವಿದ್ಯುತ್ ವಲಯವನ್ನು ಇಂಗಾಲ ಮುಕ್ತಗೊಳಿಸಲು ಸಂಪೂರ್ಣವಾಗಿ ಮೀಸಲಾದ ಮೊದಲ ಜಾಗತಿಕ ಉಪಕ್ರಮವಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: A

     

    1. ಪ್ರತಿಪಾದನೆ (A): ಕ್ರಿಸ್ಪರ್ ಕ್ಯಾಸ್ 9 (CRISPR-Cas9) ಅನ್ನು ವಂಶವಾಹಿ ಚಿಕಿತ್ಸೆ ಮತ್ತು ಕೃಷಿ ಜೈವಿಕ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆ  ಎಂದು ಪರಿಗಣಿಸಲಾಗಿದೆ.

    ಕಾರಣ (R): ಇದು ನಿರ್ದಿಷ್ಟ ಜೀನೋಮ್ ಸ್ಥಳಗಳಲ್ಲಿ ಡಿ.ಎನ್.ಎ ಅನುಕ್ರಮಣಿಕೆಗಳ ಹೆಚ್ಚು ಗುರಿಪಡಿಸಿದ ಮತ್ತು ನಿಖರವಾದ ಮಾರ್ಪಾಡಿಗೆ ಅನುವು ಮಾಡಿಕೊಡುತ್ತದೆ.

    ಸರಿಯಾದ ಆಯ್ಕೆಯನ್ನು ಆರಿಸಿ:

    1. A ಮತ್ತು R ಎರಡೂ ಸರಿಯಾಗಿವೆ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ.
    2. A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ.
    3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
    4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

    ಉತ್ತರ: A

     

    1. ಅಂತರರಾಷ್ಟ್ರೀಯ ನಿಯಮಾವಳಿಗಳು ಮತ್ತು ಅವುಗಳ ಕಾರ್ಯಗಳ  ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

    ನಿಯಮಾವಳಿಗಳು (ಪ್ರೋಟೋಕಾಲ್ ಗಳು)

    ಕಾರ್ಯಗಳು 

    1. ಜೈವಿಕ ಸುರಕ್ಷತೆಯ ಮೇಲಿನ ಕಾರ್ಟಜಿನಾ ನಿಯಮಾವಳಿ

    ಜೈವಿಕ ಪರಿವರ್ತಿತ ಜೀವಿಗಳು ಮತ್ತು ಕುಲಾಂತರಿ ಜೀವಿಗಳ ಗಡಿಯಾಚೆಗಿನ ಚಲನೆಯನ್ನು ನಿಯಂತ್ರಿಸುತ್ತದೆ.

    2. ನಗೋಯಾ ನಿಯಮಾವಳಿ

    ಆನುವಂಶಿಕ ಸಂಪನ್ಮೂಲಗಳ ಪ್ರವೇಶ ಮತ್ತು ಲಾಭ ಹಂಚಿಕೆಯನ್ನು ಖಚಿತಪಡಿಸುತ್ತದೆ.

    3. ನಗೋಯಾ-ಕೌಲಾಲಂಪುರ್ ಪೂರಕ ನಿಯಮಾವಳಿ

    LMO ಗಳಿಂದ ಉಂಟಾಗುವ ಹಾನಿಗೆ ಹೊಣೆಗಾರಿಕೆ ಮತ್ತು ಪರಿಹಾರ 

    ಮೇಲೆ ನೀಡಿರುವ ಜೋಡಿಗಳಲ್ಲಿ ಯಾವುದು/ಯಾವುವು ಸರಿಯಾಗಿ ಹೊಂದಾಣಿಕೆಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: D

     

    1. ಚಿತ್ತರಂಜನ್ ದಾಸ್ ಅವರ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಅಲಿಪೋರ್ ಬಾಂಬ್ ಪ್ರಕರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದಕ್ಕಾಗಿ ಅವರು ‘ದೇಶಬಂಧು’ ಎಂಬ ಬಿರುದನ್ನು ಗಳಿಸಿದರು.
    2. ಅವರು ಅರವಿಂದ ಘೋಷ್ ಅವರನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡ ನಂತರ ವಕೀಲಿ ವೃತ್ತಿಯಿಂದ ದೂರ ಸರಿದರು ಮತ್ತು ರಾಷ್ಟ್ರೀಯ ಚಳವಳಿಗೆ ಸಂಪೂರ್ಣವಾಗಿ ತೊಡಗಿಸಿಕೊಂಡರು.
    3. 1923 ರಲ್ಲಿ ಸ್ವರಾಜ್ ಪಕ್ಷವನ್ನು ಸ್ಥಾಪಿಸಲು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: A

     

    1. ‘ಭಾರತ ಅಭಿವೃದ್ಧಿ ಮತ್ತು ಕಾರ್ಯತಂತ್ರದ ನಿಧಿ’ಯ (IDSF) ಪ್ರಮುಖ ವಲಯಗಳ ಆದ್ಯತೆಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಯಾವುವು ಸೇರಿವೆ?
    1. ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಕಾರಿಡಾರ್‌ಗಳು.
    2. ಶಿಕ್ಷಣ ಮತ್ತು ಕೌಶಲ್ಯ
    3. ರಕ್ಷಣಾ ಸ್ವಾಧೀನಗಳು.
    4. ‘ಎಂ ಎಸ್ ಎಮ್ ಇ’ ಗಳ ಉನ್ನತೀಕರಣ/ವಿಸ್ತರಣೆ

    ಸರಿಯಾದ ಉತ್ತರವನ್ನು ಆರಿಸಿ:

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2, 3 ಮತ್ತು 4

    ಉತ್ತರ: A

     

    1. ‘ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ’ (RDI) ಯೋಜನೆ ನಿಧಿಯ ಅಡಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದನ್ನು “ಉದಯೋನ್ಮುಖ ಕ್ಷೇತ್ರಗಳು” ಎಂದು ಪರಿಗಣಿಸಬಹುದು?
    1. ಕೃತಕ ಬುದ್ಧಿಮತ್ತೆ.
    2. ಕ್ವಾಂಟಮ್ ತಂತ್ರಜ್ಞಾನಗಳು.
    3. ಹಸಿರು ಜಲಜನಕ.
    4. ಬ್ಲಾಕ್‌ಚೈನ್ ಆಧಾರಿತ ಆಡಳಿತ ಪರಿಹಾರಗಳು.

    ಸರಿಯಾದ ಉತ್ತರವನ್ನು ಆರಿಸಿ:

    1. 1 ಮತ್ತು 2 ಮಾತ್ರ 
    2. 1, 2 ಮತ್ತು 3 ಮಾತ್ರ 
    3. 2, 3 ಮತ್ತು 4 ಮಾತ್ರ 
    4. 1, 2, 3 ಮತ್ತು 4

    ಉತ್ತರ: D

     

    1. ‘ರೌಮರಿ-ದೊಂಡುವಾ ಜೌಗು ಪ್ರದೇಶ ಸಂಕೀರ್ಣ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಲಾವೋಖೋವಾ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದೆ, ಇದು ಕಾಜಿರಂಗ ಹುಲಿ ಮೀಸಲು ಪ್ರದೇಶದ ಭಾಗವಾಗಿದೆ.
    2. ಇದು ಕಾಜಿರಂಗ ಹುಲಿ ಮೀಸಲು ಪ್ರದೇಶವನ್ನು ನಮೇರಿ ಹುಲಿ ಮೀಸಲು ಪ್ರದೇಶದೊಂದಿಗೆ ಸಂಪರ್ಕಿಸುವ ಪ್ರಮುಖ ‘ಜೀವಿ ಪರಿಸರ ಪಥ’ (ವನ್ಯಜೀವಿ ಕಾರಿಡಾರ್) ವಾಗಿ ಕಾರ್ಯನಿರ್ವಹಿಸುತ್ತದೆ.
    3. ಇದು ಅಸ್ಸಾಂನ ದೀಪೋರ್ ಬೀಲ್ ಮತ್ತು ಮಣಿಪುರದ ಲೋಕ್ಟಕ್ ಸರೋವರಕ್ಕಿಂತ ಹೆಚ್ಚಿನ ಪಕ್ಷಿ ಪ್ರಭೇದಗಳನ್ನು ವಾರ್ಷಿಕವಾಗಿ ದಾಖಲಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 1 ಮತ್ತು 3 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: B

     

    1. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. 1956 ರ ರಾಜ್ಯ ಪುನರ್ವಿಂಗಡಣೆ ಕಾಯಿದೆಯ ನಂತರ ಕರ್ನಾಟಕದ ರಚನೆಯ ಸ್ಮರಣಾರ್ಥವಾಗಿ ಇದನ್ನು ಸ್ಥಾಪಿಸಲಾಯಿತು.
    2. ಇದನ್ನು ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ ಮತ್ತು ಸಂಸ್ಥೆಗಳಿಗೆ ನೀಡಲಾಗುವುದಿಲ್ಲ.
    3. ಇದು ಕರ್ನಾಟಕ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 2 ಮಾತ್ರ
    4. 1, 2 ಮತ್ತು 3

    ಉತ್ತರ: A

     

    1. ಕೆಳಗಿನ ಕರ್ನಾಟಕ ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳನ್ನುಅವುಗಳ 2024–25 ರ ಪುರಸ್ಕೃತರೊಂದಿಗೆ ಸರಿಯಾಗಿ ಹೊಂದಿಸಿ:

    ಪಟ್ಟಿ I (ಪ್ರಶಸ್ತಿ)

    ಪಟ್ಟಿ II (ಪುರಸ್ಕೃತರು)

    a. ಡಾ. ರಾಜ್‌ಕುಮಾರ್ ಪ್ರಶಸ್ತಿ

    1. ರಿಚರ್ಡ್ ಕ್ಯಾಸ್ಟಲಿನೊ

    b. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ

    2. ಉಮಾಶ್ರೀ

    c. ಡಾ. ವಿಷ್ಣುವರ್ಧನ್ ಪ್ರಶಸ್ತಿ

    3. ಎನ್. ಆರ್. ನಂಜುಂಡೇಗೌಡ

    ಸರಿಯಾದ ಆಯ್ಕೆಯನ್ನು ಆರಿಸಿ:

    1. a-2, b-3, c-1
    2. a-3, b-1, c-2
    3. a-1, b-2, c-3
    4. a-2, b-1, c-3

    ಉತ್ತರ: A

     

    1. ‘ಹೋರ್ಟಿ ರೋಡ್ 2 ಇಂಡಿಯಾ’ ಉಪಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಭಾರತದ ಕೃಷಿ ಸಚಿವಾಲಯ ಮತ್ತು ನೆದರ್‌ಲ್ಯಾಂಡ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವಿನ ಸಂಪೂರ್ಣ ದ್ವಿಪಕ್ಷೀಯ ಸರ್ಕಾರದಿಂದ-ಸರ್ಕಾರದ ಕಾರ್ಯಕ್ರಮವಾಗಿದೆ.
    2. ಡಚ್  ಪರಿಣತಿಯ ಬೆಂಬಲದೊಂದಿಗೆ ಹಸಿರುಮನೆ ಮತ್ತು ನಿಯಂತ್ರಿತ-ಪರಿಸರ ತಂತ್ರಜ್ಞಾನಗಳ ಮೂಲಕ ಆಧುನಿಕ ತೋಟಗಾರಿಕೆಯನ್ನು ವೇಗವರ್ಧಕಗೊಳಿಸುವುದು ಇದರ ಗುರಿಯಾಗಿದೆ.
    3. ಭಾರತದಲ್ಲಿನ ಇದರ ಪ್ರಾಯೋಗಿಕ ಯೋಜನೆಗಳು 2026 ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ
    2. 1 ಮತ್ತು 2 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: C

     

    1. ‘ವಿಂಡರ್ಜಿ ಇಂಡಿಯಾ 2025’ ನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಮನ್ನಣೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. 2024–25 ನೇ ಸಾಲಿನಲ್ಲಿ ಭಾರತದಲ್ಲಿ ಅತಿ ಹೆಚ್ಚು ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಿದ್ದಕ್ಕಾಗಿ ಕರ್ನಾಟಕವು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು.
    2. ಚೆನ್ನೈನಲ್ಲಿ ನಡೆದ ‘ವಿಂಡರ್ಜಿ ಇಂಡಿಯಾ’ದ ಏಳನೇ ಆವೃತ್ತಿಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
    3. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ಅಧಿಕಾರಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: B

    1. ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ನೀತಿಯು 2032 ರ ವೇಳೆಗೆ 3 ಮಿಲಿಯನ್ (30 ಲಕ್ಷ) ಯುವಜನರಿಗೆ ಕೌಶಲ್ಯ ಒದಗಿಸುವ ಗುರಿಯನ್ನು ಹೊಂದಿದೆ.
    2. ಇದು ಐಟಿಐಗಳಲ್ಲಿ ಮಹಿಳೆಯರ ದಾಖಲಾತಿಯನ್ನು ಒಟ್ಟು ದಾಖಲಾತಿಯ ಮೂರನೇ ಒಂದರಷ್ಟು ಭಾಗಕ್ಕೆ ಹೆಚ್ಚಿಸುವ ಗುರಿಯನ್ನು ಒಳಗೊಂಡಿದೆ.
    3. ಇದು IMC-K ಅಡಿಯಲ್ಲಿನ ಅಂತರರಾಷ್ಟ್ರೀಯ ಚಲನಶೀಲತೆ ಕಾರ್ಯಕ್ರಮಗಳನ್ನು ಕೇವಲ ಕೊಲ್ಲಿ ರಾಷ್ಟ್ರಗಳಿಗೆ ಮಾತ್ರ ಸೀಮಿತಗೊಳಿಸಲು ಪ್ರಸ್ತಾಪಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ಇತ್ತೀಚೆಗೆ ಭಾರತದಲ್ಲಿ ಪ್ರಾರಂಭಿಸಲಾದ ‘ಮಟ್ಸ್ ಸಹಾಯಕ್’ (MUTS Sahayak) ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ನೈಋತ್ಯ ರೈಲ್ವೆಯು ಪ್ರಾರಂಭಿಸಿದೆ.
    2. ಇದು ಕೈಯಲ್ಲಿ ಹಿಡಿಯುವ ಸಾಧನಗಳ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ವಿತರಿಸಲು ಅನುವು ಮಾಡಿಕೊಡುತ್ತದೆ.
    3. ನೈಋತ್ಯ ರೈಲ್ವೆಯು ಈ ರೀತಿಯ ಯೋಜನೆಯನ್ನು ಪರಿಚಯಿಸಿದ ಭಾರತದ ಎರಡನೇ ರೈಲ್ವೆ ವಲಯವಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 2 ಮಾತ್ರ 
    4. 1, 2 ಮತ್ತು 3

    ಉತ್ತರ: C

     

    1. ಪ್ರಸ್ತಾಪಿತ ಹೊನ್ನಾವರ ಆಳ ನೀರಿನ ಬಂದರು ಯಾವ ನದಿಯ ನದೀಮುಖದಲ್ಲಿದೆ?
    2. ನೇತ್ರಾವತಿ ನದಿ 
    3. ಕಾಳಿ ನದಿ 
    4. ಶರಾವತಿ ನದಿ 
    5. ಅಘನಾಶಿನಿ ನದಿ

    ಉತ್ತರ: C

     

    1. ಇತ್ತೀಚೆಗೆ ಪ್ರಾರಂಭಿಸಲಾದ ‘ಕೋಬ್ರಾ ಬೀಟ್’ ವ್ಯವಸ್ಥೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ವ್ಯವಸ್ಥೆಯನ್ನು ಬೆಂಗಳೂರು ಸಂಚಾರ ಪೊಲೀಸ್ ಪರಿಚಯಿಸಿದ್ದಾರೆ.
    2. ಇದು ಸಂಚಾರ ದಟ್ಟಣೆಯ ಸೂಕ್ಷ್ಮ-ಮಟ್ಟದ, ಸ್ಥಳ-ನಿರ್ದಿಷ್ಟ ಕಾರಣಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
    3. ಇದು ನೈಜ-ಸಮಯದ ಸಂಚಾರ ಕಣ್ಗಾವಲಿಗಾಗಿ ಇರುವ ಡ್ರೋನ್ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯಾಗಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಲಕ್ಷ್ಯ’ ರಾಕೆಟ್‌ಗೆ  ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದನ್ನು ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಅಭಿವೃದ್ಧಿಪಡಿಸಿದೆ.
    2. ಇದು ‘ಇನ್- ಸ್ಪೇಸ್’ ಮಾಡೆಲ್ ರಾಕೆಟ್ರಿ ಸ್ಪರ್ಧೆ 2024–25 ಅನ್ನು ಗೆದ್ದಿದೆ.
    3. ಈ ಸ್ಪರ್ಧೆಯು 2 ಕೆ.ಜಿ ತೂಕದ CANSAT ಅನ್ನು ಹೊತ್ತೊಯ್ಯುವ ಮಾದರಿ ರಾಕೆಟ್ ಅನ್ನು 2,000 ಮೀಟರ್ ಎತ್ತರಕ್ಕೆ ಉಡಾಯಿಸುವುದನ್ನು ಒಳಗೊಂಡಿತ್ತು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 2 ಮಾತ್ರ
    4. 1, 2 ಮತ್ತು 3

    ಉತ್ತರ: C

     

    1. ‘ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ’ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ಯೋಜನೆಯು ಕರ್ನಾಟಕದಲ್ಲಿ ವಾರ್ಷಿಕವಾಗಿ 5 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
    2. ಎಲ್ಲಾ ಫಲಾನುಭವಿಗಳಿಗೆ ಕೇವಲ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ (SDEL) ಮೂಲಕವೇ ತರಬೇತಿ ನೀಡಲಾಗುತ್ತದೆ.
    3. ಈ ಯೋಜನೆಯು ಗುರಿಪಡಿಸಿದ ಯುವಜನರಲ್ಲಿ ಅರ್ಧದಷ್ಟು ಜನರಿಗೆ ಇತರ ಸರ್ಕಾರಿ ಇಲಾಖೆಗಳು ಅನುಷ್ಠಾನಗೊಳಿಸುವ ಯೋಜನೆಗಳ ಮೂಲಕ ತರಬೇತಿ ನೀಡಲಾಗುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 1 ಮತ್ತು 2 ಮಾತ್ರ 
    3. 2 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಬೆಂಗಳೂರು ಕೌಶಲ್ಯ ಶೃಂಗಸಭೆ 2025’ ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಕಾರ್ಯಪಡೆ ಪರಿವರ್ತನೆಯ ಕುರಿತಾದ ಕರ್ನಾಟಕದ ಪ್ರಮುಖ ವಾರ್ಷಿಕ ಕಾರ್ಯಕ್ರಮವಾಗಿದೆ.
    2. ಇದನ್ನು SDEL, KSDC, ಕೃಷಿ ಇಲಾಖೆ ಮತ್ತು ಕರ್ನಾಟಕ ಡಿಜಿಟಲ್ ಆರ್ಥಿಕತೆ ಮಿಷನ್ ಜಂಟಿಯಾಗಿ ಆಯೋಜಿಸಿದ್ದವು.
    3. ಈ ಶೃಂಗಸಭೆಯ ಧ್ಯೇಯವಾಕ್ಯ (ಥೀಮ್) “ಕಾರ್ಯಪಡೆ 2030: ಜಾಗತಿಕ ಚಲನಶೀಲತೆಗಾಗಿ ಕೌಶಲ್ಯಗಳು” ಆಗಿತ್ತು.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮತ್ತು 3 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 2 ಮಾತ್ರ 
    4. 1, 2 ಮತ್ತು 3

    ಉತ್ತರ: C

     

    1. ಕಬ್ಬಿನ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ (FRP) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಸಕ್ಕರೆ ಕಾರ್ಖಾನೆಗಳು ತಾವು ಖರೀದಿಸಿದ ಕಬ್ಬಿಗೆ ರೈತರಿಗೆ ಪಾವತಿಸಲು ಕಾನೂನುಬದ್ಧವಾಗಿ ಬದ್ಧವಾಗಿರುವ ಕನಿಷ್ಠ ಬೆಲೆ ಇದಾಗಿದೆ.
    2. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಇದನ್ನು ನಿಗದಿಪಡಿಸುತ್ತದೆ.
    3. FRP ಯು ಕಬ್ಬು ನಿಯಂತ್ರಣ ಆದೇಶ, 1966 ರ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1 ಮಾತ್ರ 
    2. 1 ಮತ್ತು 2 ಮಾತ್ರ 
    3. 1, 2 ಮತ್ತು 3 
    4. 2 ಮತ್ತು 3 ಮಾತ್ರ

    ಉತ್ತರ: C

     

    1. ‘ಕನಿಷ್ಠ ಬೆಂಬಲ ಬೆಲೆ’ಯ ಅಡಿಯಲ್ಲಿ ಈ ಕೆಳಗಿನ ಯಾವ ಬೆಳೆಗಳನ್ನು ‘ವಾಣಿಜ್ಯ ಬೆಳೆಗಳು’ ಎಂದು ವರ್ಗೀಕರಿಸಲಾಗಿದೆ?
    2. ಕಬ್ಬು ಮತ್ತು ಹತ್ತಿ 
    3. ಸೆಣಬು ಮತ್ತು ಕೊಬ್ಬರಿ 
    4. ತೊಗರಿ ಮತ್ತು ಬೇಳೆ
    5. ರಾಗಿ ಮತ್ತು ಹುಚ್ಚೆಳ್ಳು (ನೈಜರ್ ಬೀಜ)

    ಉತ್ತರ: B

     

    1. ‘ಕರ್ನಾಟಕ ನವೋದ್ಯಮ ನೀತಿ’ 2025–30 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ನೀತಿಯು ಐದು ವರ್ಷಗಳಲ್ಲಿ 25,000 ಹೊಸ ನವೋದ್ಯಮಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
    2. ಈ ನವೋದ್ಯಮಗಳಲ್ಲಿ ಕನಿಷ್ಠ 10,000 ದಷ್ಟನ್ನು ಬೆಂಗಳೂರಿನ ಆಚೆಗಿನ ಪ್ರದೇಶಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
    3. ಈ ನೀತಿಯನ್ನು ‘ಡಿಜಿಟಲ್ ಇಂಡಿಯಾ ಮಿಷನ್’ನ ಭಾಗವಾಗಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?

    1. 1 ಮತ್ತು 2 ಮಾತ್ರ 
    2. 2 ಮತ್ತು 3 ಮಾತ್ರ 
    3. 1 ಮತ್ತು 3 ಮಾತ್ರ 
    4. 1, 2 ಮತ್ತು 3

    ಉತ್ತರ: A

     

    1. ‘ಸಂಪನ್ಮೂಲ ಕ್ರೂಢೀಕರಣ ಸಮಿತಿ’ಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
    2. ನಂದನ್ ನಿಲೇಕಣಿ 
    3. ಕೆ.ಪಿ. ಕೃಷ್ಣನ್ 
    4. ಅಮಿತಾಬ್ ಕಾಂತ್ 
    5. ಎಸ್. ವೆಂಕಟರಮಣನ್

    ಉತ್ತರ: B

     

    1. ಕೃಷಿ ಮೇಳ 2025 ರ ಧ್ಯೇಯವಾಕ್ಯ (ಥೀಮ್) ಏನಾಗಿತ್ತು ?
    2. “ಭವಿಷ್ಯದ ಭಾರತಕ್ಕಾಗಿ ಡಿಜಿಟಲ್ ಕೃಷಿ”. 
    3. “ಸ್ಮಾರ್ಟ್ ರೈತರು – ಸ್ಮಾರ್ಟ್ ರಾಷ್ಟ್ರ”. 
    4. “ಸಮೃದ್ಧ ಕೃಷಿ – ವಿಕಸಿತ ಭಾರತ: ಮಣ್ಣು, ನೀರು ಮತ್ತು ಬೆಳೆ”
    5. “ಹಸಿರು ಕ್ರಾಂತಿ 2.0”.

    ಉತ್ತರ: C

     

    1. ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2025 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಈ ಮಸೂದೆಯು ಕಡ್ಡಾಯ ಕೊಡುಗೆ ಚೌಕಟ್ಟನ್ನು ಪ್ರಸ್ತಾಪಿಸುತ್ತದೆ, ಇದರಲ್ಲಿ ಗೃಹ ಕಾರ್ಮಿಕರು ಮತ್ತು ಉದ್ಯೋಗದಾತರು ರಾಜ್ಯದ ವ್ಯವಸ್ಥೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.
    2. ಉದ್ಯೋಗದಾತರು ನೀಡಬೇಕಾದ ಕಲ್ಯಾಣ ಶುಲ್ಕವನ್ನು ಗೃಹ ಕಾರ್ಮಿಕರಿಗೆ ಪಾವತಿಸಬೇಕಾದ ವೇತನದ 5% ಗೆ ಮಿತಿಗೊಳಿಸಲಾಗಿದೆ.
    3. ಕಲ್ಯಾಣ ನಿಧಿಗೆ ನೀಡುವ ಎಲ್ಲಾ ಕೊಡುಗೆಗಳನ್ನು ಕೇವಲ ಡಿಜಿಟಲ್ ವಹಿವಾಟುಗಳ ಮೂಲಕವೇ ರವಾನಿಸಬೇಕೆಂದು ಮಸೂದೆ ಕಡ್ಡಾಯಗೊಳಿಸುತ್ತದೆ.

    ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?

    1. ಒಂದು ಮಾತ್ರ 
    2. ಎರಡು ಮಾತ್ರ 
    3. ಮೂರೂ ಸರಿ 
    4. ಯಾವುದೂ ಅಲ್ಲ

    ಉತ್ತರ: C

     

    1. ಕಾರಾಗೃಹಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಕರ್ನಾಟಕ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು?
    2. ಸಂದೀಪ್ ಪಾಟೀಲ್ 
    3. ಹಿತೇಂದ್ರ 
    4. ಅಮರನಾಥ್ ರೆಡ್ಡಿ 
    5. ರಿಷ್ಯಂತ್

    ಉತ್ತರ: B

     

    1. ಕರ್ನಾಟಕವು ತಾಯಿ ಮರಣ ಪ್ರಮಾಣದಲ್ಲಿ 2024 ಕ್ಕೆ ಹೋಲಿಸಿದರೆ, 2025 ರ ಜನವರಿಯಿಂದ ಅಕ್ಟೋಬರ್‌ವರೆಗೆ ಎಷ್ಟು ಶೇಕಡಾವಾರು ಇಳಿಕೆಯನ್ನು ದಾಖಲಿಸಿದೆ?
    2. 10% 
    3. 18% 
    4. 24% 
    5. 30%

    ಉತ್ತರ: C

     

    1. ವಿಜಯಪುರ ಜಿಲ್ಲೆಯಲ್ಲಿ ‘ಕೋಟಿ ವೃಕ್ಷ ಅಭಿಯಾನ’ವನ್ನು ಯಾವ ಆಡಳಿತವು ಪ್ರಾರಂಭಿಸಿತು?
    2. ರಾಜ್ಯ ಅರಣ್ಯ ಇಲಾಖೆ ಮಾತ್ರ 
    3. ಜಿಲ್ಲಾಡಳಿತ 
    4. ಪರಿಸರ ಸಚಿವಾಲಯ, ಭಾರತ ಸರ್ಕಾರ 
    5. ಪಂಚಾಯತ್ ರಾಜ್ ಸಂಸ್ಥೆಗಳು

    ಉತ್ತರ: B




    1. ‘ಕಲಾಲೋಕ’ ಮಳಿಗೆಯನ್ನು ಯಾವ ಇಲಾಖೆಯು ಸ್ಥಾಪಿಸಿದೆ?
    2. ಪ್ರವಾಸೋದ್ಯಮ ಇಲಾಖೆ 
    3. ಕೈಗಾರಿಕಾ ಇಲಾಖೆ 
    4. ಕರ್ನಾಟಕ ಕೈಮಗ್ಗ ಅಭಿವೃದ್ಧಿ ಇಲಾಖೆ 
    5. ವಾಣಿಜ್ಯ ಸಚಿವಾಲಯ, ಭಾರತ ಸರ್ಕಾರ

    ಉತ್ತರ: B

     

    1. ಭಾರತದಲ್ಲಿ ದತ್ತು ಸ್ವೀಕಾರದ ಸಂಖ್ಯೆಯಲ್ಲಿ ಕರ್ನಾಟಕವು ಎಷ್ಟನೇ ಸ್ಥಾನದಲ್ಲಿದೆ.?
    2. ಮೊದಲನೇ 
    3. ಎರಡನೇ 
    4. ಮೂರನೇ 
    5. ನಾಲ್ಕನೇ

    ಉತ್ತರ: D

     

    1. ‘ಬೆಂಗಳೂರು ಸೇಫ್ ಸಿಟಿ ಯೋಜನೆ’ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. ಇದು ಗೃಹ ಸಚಿವಾಲಯದ ಅಡಿಯಲ್ಲಿನ ತಂತ್ರಜ್ಞಾನ ಆಧಾರಿತ ಉಪಕ್ರಮವಾಗಿದ್ದು, ಇದರ ಸಂಪೂರ್ಣ ಅನುದಾನವನ್ನು ರಾಜ್ಯ ಸರ್ಕಾರವು ಒದಗಿಸುತ್ತದೆ.
    2. ನಗರ ಸುರಕ್ಷತೆಯನ್ನು ಹೆಚ್ಚಿಸಲು ಈ ಯೋಜನೆಯು ಸ್ಥಿರ, ಹೈ-ರೆಸಲ್ಯೂಷನ್, ಪ್ಯಾನ್-ಟಿಲ್ಟ್-ಜೂಮ್ ಕ್ಯಾಮೆರಾಗಳು, ಡ್ರೋನ್‌ಗಳು ಮತ್ತು ದೇಹದಲ್ಲಿ ಧರಿಸುವ ಕ್ಯಾಮೆರಾಗಳನ್ನು ಸಂಯೋಜಿಸುತ್ತದೆ.
    3. ತುರ್ತು ಪ್ರತಿಕ್ರಿಯೆ ವ್ಯವಸ್ಥೆಯು ಕಮಾಂಡ್ ಸೆಂಟರ್‌ಗಳೊಂದಿಗೆ ಸಂಪರ್ಕ ಹೊಂದಿದ ಮೀಸಲಾದ ಪೊಲೀಸ್ ವಾಹನಗಳು ಮತ್ತು ವಿಧಿವಿಜ್ಞಾನ ವ್ಯಾನ್‌ಗಳನ್ನು ಒಳಗೊಂಡಿದೆ.
    4. ಈ ಯೋಜನೆಯು ಪ್ರಾಥಮಿಕವಾಗಿ ಸಂಚಾರ ನಿರ್ವಹಣೆ ಮತ್ತು ಪಾಲಿಕೆ ಸೇವೆಗಳ ಮೇಲೆ ಗಮನಹರಿಸುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 2 ಮತ್ತು 3 ಮಾತ್ರ 
    2. 1 ಮತ್ತು 4 ಮಾತ್ರ 
    3. 1, 2 ಮತ್ತು 3 ಮಾತ್ರ 
    4. ಮೇಲಿನ ನಾಲ್ಕೂ ಹೇಳಿಕೆಗಳು

    ಉತ್ತರ: A

     

    1. KEO (ಜ್ಞಾನಾಧಾರಿತ, ಆರ್ಥಿಕ, ಮುಕ್ತ-ಮೂಲ) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
    1. KEO ಎಂಬುದು ಕರ್ನಾಟಕ ಸರ್ಕಾರವು ಕಿಯೋನಿಕ್ಸ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ-ಸನ್ನದ್ಧ ವೈಯಕ್ತಿಕ ಗಣಕಯಂತ್ರವಾಗಿದೆ.
    2. ಇದು ಮುಕ್ತ-ಮೂಲ RISC-V ಪ್ರೊಸೆಸರ್ ಮತ್ತು ಲಿನಕ್ಸ್ ಆಧಾರಿತ ಕಾರ್ಯಾಚರಣಾ ವ್ಯವಸ್ಥೆಯ  ಮೇಲೆ ನಿರ್ಮಿಸಲ್ಪಟ್ಟಿದೆ.
    3. ಕೃತಕ ಬುದ್ಧಿಮತ್ತೆ ಅನ್ವಯಿಕೆಗಳನ್ನು ನಡೆಸಲು KEO ಗೆ ನಿರಂತರ ಅಂತರ್ಜಾಲ ಸಂಪರ್ಕದ ಅಗತ್ಯವಿರುತ್ತದೆ.
    4. ಇದನ್ನು ಕರ್ನಾಟಕ ಡಿ.ಎಸ್.ಇ.ಆರ್.ಟಿ ಪಠ್ಯಕ್ರಮದ ಮೇಲೆ ತರಬೇತಿ ಪಡೆದ ‘ಬುದ್ದ್’ ಎಂಬ ಕೃತಕ ಬುದ್ಧಿಮತ್ತೆ ಸಹಾಯಕದೊಂದಿಗೆ ಪೂರ್ವಭಾವಿಯಾಗಿ ಅಳವಡಿಸಲಾಗಿರುತ್ತದೆ.

    ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

    1. 1, 2 ಮತ್ತು 4 ಮಾತ್ರ 
    2. 1 ಮತ್ತು 3 ಮಾತ್ರ 
    3. 2, 3 ಮತ್ತು 4 ಮಾತ್ರ 
    4. ಮೇಲಿನ ನಾಲ್ಕೂ ಹೇಳಿಕೆಗಳು

    ಉತ್ತರ: A

     

    1. ‘ಡಿಜಿಟಲ್ ನಾಗರಿಕ್’ ಕಾರ್ಯಕ್ರಮದ ಅಡಿಯಲ್ಲಿ ಯಾವ ಪೋರ್ಟಲ್ ನ ಮೂಲಕ ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತದೆ. 
    2. ನಿಷ್ಠಾ  ಪೋರ್ಟಲ್ 
    3. ದೀಕ್ಷಾ ಪೋರ್ಟಲ್ 
    4. ದಿಶಾ ಪೋರ್ಟಲ್ 
    5. ಸ್ವಯಂ ಪೋರ್ಟಲ್

    ಉತ್ತರ: C

  • ರಾಜ್ಯೋತ್ಸವ ಪ್ರಶಸ್ತಿ | ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ಸಾಹಿತ್ಯ ಪ್ರಶಸ್ತಿಗಳು, 2019

    ರಾಜ್ಯೋತ್ಸವ ಪ್ರಶಸ್ತಿ

    ಇದೀಗ ಸುದ್ದಿಯಲ್ಲಿದೆ:

    • ನವೆಂಬರ್ 1 ರಂದು ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 70 ಮಹನೀಯರಿಗೆ ರಾಜ್ಯ ಸರ್ಕಾರವು ತನ್ನ ವಾರ್ಷಿಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಿದೆ.

    ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ:

    • ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ‘ರಾಜ್ಯೋತ್ಸವ ಪ್ರಶಸ್ತಿ’ ಎಂತಲೂ ಕರೆಯಲಾಗುತ್ತದೆ.
    • ಇದು ಕರ್ನಾಟಕ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. 
    • ಐತಿಹಾಸಿಕ ಮಹತ್ವ: 1956 ರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಏಕೀಕರಣಗೊಳಿಸುವ ಮೂಲಕ ಕರ್ನಾಟಕ ರಾಜ್ಯ ರಚನೆಯಾದ ಸ್ಮರಣಾರ್ಥವಾಗಿ, ಪ್ರತಿ ವರ್ಷ ನವೆಂಬರ್ 1 ರಂದು ಅಂದರೆ ‘ಕನ್ನಡ ರಾಜ್ಯೋತ್ಸವ’ದಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
    • ಈ ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನ, 25 ಗ್ರಾಂ ಚಿನ್ನದ ಪದಕ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ.

    2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು:

    ಕ್ರ.ಸಂ

    ಪ್ರಶಸ್ತಿ ಪುರಸ್ಕೃತರು

    ಕ್ಷೇತ್ರ

    1

    ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) 

    ಆಡಳಿತ

    2

    ಡಾ.ಎಸ್.ವಿ.ಹಿತ್ತಲಮನಿ

    ಕೃಷಿ

    3

    ಶ್ರೀ ಎಂ ಸಿ ರಂಗಸ್ವಾಮಿ

    ಕೃಷಿ

    4

    ಶ್ರೀ ಪ್ರಕಾಶ್ ರಾಜ್

    ಚಲನಚಿತ್ರ /ಕಿರುತೆರೆ

    5

    ಶ್ರೀಮತಿ ವಿಜಯಲಕ್ಷ್ಮೀ ಸಿಂಗ್

    ಚಲನಚಿತ್ರ /ಕಿರುತೆರೆ

    6

    ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ 

    ಜಾನಪದ

    7

    ಶ್ರೀ ಬಿ. ಟಾಕಪ್ಪ ಕಣ್ಣೂರು 

    ಜಾನಪದ

    8

    ಶ್ರೀ ಸಣ್ ನಿಂಗಪ್ಪ  ಸತ್ತೆಪ್ಪ ಮುಶೆಣ್ಣಗೋಳ

    ಜಾನಪದ

    9

    ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ 

    ಜಾನಪದ

    10

    ಶ್ರೀ ಎಂ. ಟೋಪಣ್ಣ

    ಜಾನಪದ

    11

    ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ

    ಜಾನಪದ

    12

    ಶ್ರೀಮತಿ ಸಿಂಧು ಗುಜರನ್

    ಜಾನಪದ

    13

    ಶ್ರೀ ಎಲ್. ಮಹದೇವಪ್ಪ ಉಡಿಕಲ್

    ಜಾನಪದ

    14

    ಪ್ರೊ. ಕೆ. ರಾಮಮೂರ್ತಿ ರಾವ್

    ನೃತ್ಯ

    15

    ಶ್ರೀ ರಾಮೇಗೌಡ

    ಪರಿಸರ

    16

    ಶ್ರೀ ಮಲ್ಲಿಕಾರ್ಜುನ ನಿಂಗಪ್ಪ

    ಪರಿಸರ

    17

    ಶ್ರೀ ಗುಂಡೂರಾಜ್

    ಬಯಲಾಟ

    18

    ಶ್ರೀ ಕೆ.ಸುಬ್ರಮಣ್ಯ 

    ಮಾಧ್ಯಮ

    19

    ಶ್ರೀ ಅಂಶಿ ಪ್ರಸನ್ನಕುಮಾರ್

    ಮಾಧ್ಯಮ

    20

    ಶ್ರೀ ಬಿ.ಎಂ ಹನೀಫ್

    ಮಾಧ್ಯಮ

    21

    ಶ್ರೀ ಎಂ ಸಿದ್ಧರಾಜು

    ಮಾಧ್ಯಮ

    22

    ಶ್ರೀ ಕೋಟ ಸುರೇಶ ಬಂಗೇರ

    ಯಕ್ಷಗಾನ

    23

    ಶ್ರೀ ಐರಬೈಲ್‌ ಆನಂದ ಶೆಟ್ಟಿ

    ಯಕ್ಷಗಾನ

    24

    ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)

    ಯಕ್ಷಗಾನ

    25

    ಶ್ರೀ ರಾಮಯ್ಯ 

    ವಿಜ್ಞಾನ-ತಂತ್ರಜ್ಞಾನ 

    26

    ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್

    ವಿಜ್ಞಾನ-ತಂತ್ರಜ್ಞಾನ 

    27

    ಡಾ. ಆರ್. ವಿ ನಾಡಗೌಡ 

    ವಿಜ್ಞಾನ-ತಂತ್ರಜ್ಞಾನ 

    28

    ಡಾ. ಆಲಮ್ಮ ಮಾರಣ್ಣ 

    ವೈದ್ಯಕೀಯ

    29

    ಡಾ. ಜಯರಂಗನಾಥ್ 

    ವೈದ್ಯಕೀಯ

    30

    ಶ್ರೀ ಉಮೇಶ ಪಂಬದ

    ಶಿಲ್ಪಕಲೆ / ಇತರೆ ಕಲೆ

    31

    ಡಾ. ರವೀಂದ್ರ ಕೋರಿಶೆಟ್ಟಿರ್

    ಶಿಲ್ಪಕಲೆ / ಇತರೆ ಕಲೆ

    32

    ಶ್ರೀ ಕೆ.ದಿನೇಶ್

    ಶಿಲ್ಪಕಲೆ / ಇತರೆ ಕಲೆ

    33

    ಶ್ರೀ ಶಾಂತರಾಜು 

    ಶಿಲ್ಪಕಲೆ / ಇತರೆ ಕಲೆ

    34

    ಶ್ರೀ ಜಾಫರ್ ಮೊಹಿಯುದ್ದೀನ್

    ಶಿಲ್ಪಕಲೆ / ಇತರೆ ಕಲೆ

    35

    ಶ್ರೀ ಪೆನ್ನ ಓಬಳಯ್ಯ  

    ಶಿಲ್ಪಕಲೆ / ಇತರೆ ಕಲೆ

    36

    ಶ್ರೀ ಶಾಂತಿ ಬಾಯಿ

    ಶಿಲ್ಪಕಲೆ / ಇತರೆ ಕಲೆ

    37

    ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ)

    ಇತರೆ ಕಲೆ

    38

    ಶ್ರೀ ದೇವೆಂದ್ರಕುಮಾರ ಪತ್ತಾರ್

    ಸಂಗೀತ

    39

    ಶ್ರೀ ಮಡಿವಾಳಯ್ಯ ಸಾಲಿ

    ಸಂಗೀತ

    40

    ಶ್ರೀಮತಿ ಸೂಲಗಿತ್ತಿ ಈರಮ್ಮ 

    ಸಮಾಜ ಸೇವೆ

    41

    ಶ್ರೀಮತಿ ಫಕ್ಕೀರಿ

    ಸಮಾಜ ಸೇವೆ

    42

    ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ

    ಸಮಾಜ ಸೇವೆ

    43

    ಡಾ. ಎನ್. ಸೀತಾರಾಮ ಶೆಟ್ಟಿ

    ಸಮಾಜ ಸೇವೆ

    44

    ಶ್ರೀ ಕೋಣಂದೂರು ಲಿಂಗಪ್ಪ 

    ಸಮಾಜ ಸೇವೆ

    45

    ಶ್ರೀ ಶೇಖರಗೌಡ ವಿ ಮಾಲಿಪಾಟೀಲ್ 

    ಸಹಕಾರ

    46

    ಪ್ರೊ. ರಾಜೇಂದ್ರ ಚೆನ್ನಿ

    ಸಾಹಿತ್ಯ

    47

    ಶ್ರೀ ತುಂಬಾಡಿ ರಾಮಯ್ಯ

    ಸಾಹಿತ್ಯ

    48

    ಪ್ರೊ ಆರ್ ಸುನಂದಮ್ಮ 

    ಸಾಹಿತ್ಯ

    49

    ಡಾ.ಎಚ್.ಎಲ್ ಪುಷ್ಪ 

    ಸಾಹಿತ್ಯ

    50

    ಶ್ರೀ ರಹಮತ್ ತರೀಕೆರೆ

    ಸಾಹಿತ್ಯ

    51

    ಶ್ರೀ ಹ.ಮ. ಪೂಜಾರ

    ಸಾಹಿತ್ಯ

    52

    ಶ್ರೀ ಜಕರಿಯ ಬಜಪೆ (ಸೌದಿ ಅರೇಬಿಯಾ)

    ಹೊರನಾಡು ಕನ್ನಡಿಗ

    53

    ಶ್ರೀ ಪಿ ವಿ ಶೆಟ್ಟಿ (ಮುಂಬೈ)

    ಹೊರನಾಡು ಕನ್ನಡಿಗ

    54

    ಶ್ರೀ ಹೆಚ್.ಎಂ. ಪರಮಶಿವಯ್ಯ

    ರಂಗಭೂಮಿ 

    55

    ಶ್ರೀ ಎಲ್.ಬಿ.ಶೇಖ್ (ಮಾಸ್ತರ್)

    ರಂಗಭೂಮಿ 

    56

    ಶ್ರೀ ಬಂಗಾರಪ್ಪ ಖುದಾನಪುರ

    ರಂಗಭೂಮಿ 

    57

    ಶ್ರೀ ಮೈಮ್ ರಮೇಶ್

    ರಂಗಭೂಮಿ 

    58

    ಶ್ರೀಮತಿ ಡಿ.ರತ್ನಮ್ಮ ದೇಸಾಯಿ 

    ರಂಗಭೂಮಿ 

    59

    ಡಾ. ಎಂ.ಆರ್. ಜಯರಾಮ್

    ಶಿಕ್ಷಣ 

    60

    ಡಾ. ಎನ್ ಎಸ್ ರಾಮೇಗೌಡ

    ಶಿಕ್ಷಣ 

    61

    ಶ್ರೀ. ಎಸ್. ಬಿ. ಹೊಸಮನಿ

    ಶಿಕ್ಷಣ 

    62

    ಶ್ರೀಮತಿ ರಾಜಶ್ರೀ ನಾಗರಾಜು

    ಶಿಕ್ಷಣ 

    63

    ಶ್ರೀ ಆಶೀಶ್ ಕುಮಾರ್ ಬಲ್ಲಾಳ

    ಕ್ರೀಡೆ

    64

    ಶ್ರೀ ಎಂ ಯೋಗೇಂದ್ರ

    ಕ್ರೀಡೆ

    65

    ಡಾ. ಬಬಿನಾ ಎನ್.ಎಂ (ಯೋಗ)

    ಕ್ರೀಡೆ

    66

    ನ್ಯಾ. ಶ್ರೀ ಪವನ್ ಕುಮಾರ್ ಭಜಂತ್ರಿ 

    ನ್ಯಾಯಾಂಗ

    67

    ಶ್ರೀ ಬಸಣ್ಣ ಮೋನಪ್ಪ ಬಡಿಗೇರ

    ಶಿಲ್ಪಕಲೆ

    68

    ಶ್ರೀ ನಾಗಲಿಂಗಪ್ಪ ಜಿ ಗಂಗೂರ 

    ಶಿಲ್ಪಕಲೆ

    69

    ಶ್ರೀ ಬಿ. ಮಾರುತಿ

    ಚಿತ್ರಕಲೆ

    70

    ಶ್ರೀಮತಿ ಎಲ್. ಹೇಮಾಶೇಖರ್

    ಕರಕುಶಲ

    ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳು ಮತ್ತು ಸಾಹಿತ್ಯ ಪ್ರಶಸ್ತಿಗಳು, 2019

    ಇದೀಗ ಸುದ್ದಿಯಲ್ಲಿದೆ: 

    • ಕನ್ನಡ ಚಲನಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನ ಸಾಧನೆಯನ್ನು ಪರಿಗಣಿಸಿ ವ್ಯಕ್ತಿಗಳ ಅತ್ಯುನ್ನತ ಕೊಡುಗೆಗಳನ್ನು ಗೌರವಿಸಲು ಕರ್ನಾಟಕ ಸರ್ಕಾರವು 2019ನೇ ಸಾಲಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೀಡುತ್ತದೆ.

    ಪ್ರಶಸ್ತಿ ಪುರಸ್ಕೃತರ ವಿವರ

    • ಡಾ. ರಾಜ್‌ಕುಮಾರ್ ಪ್ರಶಸ್ತಿ
      • ಪುರಸ್ಕೃತರು: ಉಮಾಶ್ರೀ
      • ವಿಭಾಗ: ಚಲನಚಿತ್ರ ರಂಗದ ಜೀವಮಾನ ಸಾಧನೆ.
    • ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
      • ಪುರಸ್ಕೃತರು: ಎನ್. ಆರ್. ನಂಜುಂಡೇಗೌಡ
      • ವಿಭಾಗ: ಚಲನಚಿತ್ರ ನಿರ್ದೇಶನದಲ್ಲಿ ಜೀವಮಾನ ಸಾಧನೆ.
    • ಡಾ. ವಿಷ್ಣುವರ್ಧನ್ ಪ್ರಶಸ್ತಿ
      • ಪುರಸ್ಕೃತರು: ರಿಚರ್ಡ್ ಕ್ಯಾಸ್ಟಲಿನೊ
      • ವಿಭಾಗ: ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಜೀವಮಾನ ಸಾಧನೆ.
    • ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ
      • ಸಾಹಿತ್ಯ ವಿಭಾಗದಲ್ಲಿ, ಅಂಕಿತ ಪ್ರಕಾಶನ ಪ್ರಕಟಿಸಿದ “ಬೆಳ್ಳಿ ತೊರೆ – ಸಿನಿಮಾ ಪ್ರಬಂಧಗಳು” ಕೃತಿಗಾಗಿ ಹಿರಿಯ ಪತ್ರಕರ್ತ ರಘುನಾಥ್ ಚ.ಹ. ಅವರಿಗೆ 2019 ನೇ ಸಾಲಿನ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
      • ಲೇಖಕರು ಮತ್ತು ಪ್ರಕಾಶಕರಿಬ್ಬರಿಗೂ ತಲಾ ₹20,000 ನಗದು ಬಹುಮಾನ ಹಾಗೂ ಬೆಳ್ಳಿ ಪದಕವನ್ನು ನೀಡಿ ಗೌರವಿಸಲಾಗುತ್ತದೆ.
  • ASTraM ಅಪ್ಲಿಕೇಶನ್ | ದೇವದಾಸಿ ಸಮೀಕ್ಷೆ

    ASTraM ಅಪ್ಲಿಕೇಶನ್

    ಇದೀಗ ಸುದ್ದಿಯಲ್ಲಿದೆ:

    • ಸಂಚಾರಿ ಪೊಲೀಸರು ತಮ್ಮ ASTraM ಅಪ್ಲಿಕೇಶನ್‌ನಲ್ಲಿ ಇ-ಅಪಘಾತ ವರದಿ ವೈಶಿಷ್ಟ್ಯವನ್ನು ಪರಿಚಯಿಸಿದ್ದಾರೆ.

    ASTraM ಅಪ್ಲಿಕೇಶನ್ ನ ಬಗ್ಗೆ:

    • ಸಂಕ್ಷಿಪ್ತ ರೂಪ:- ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಕಾರ್ಯಗತ ಬುದ್ಧಿಮತ್ತೆ.
    • ಜನವರಿ 2024 ರಲ್ಲಿ ಬೆಂಗಳೂರು ಸಂಚಾರ ಪೊಲೀಸರು ಪ್ರಾರಂಭಿಸಿದರು.

    ಉದ್ದೇಶಗಳು:

    • ಉತ್ತಮ ಸಂಚಾರ ನಿರ್ವಹಣೆಗಾಗಿ ಬೆಂಗಳೂರು ಸಂಚಾರ ಪೊಲೀಸರಿಗೆ ನೈಜ-ಸಮಯದ, ದತ್ತಾಂಶ ಆಧಾರಿತ ಸಾಂದರ್ಭಿಕ ಅರಿವನ್ನು ಒದಗಿಸುವುದು.
    • ಸಂಚಾರ ಯೋಜನೆಗಾಗಿ ಸಂಚಾರಿ ಅಧಿಕಾರಿಗಳಿಗೆ ಮತ್ತು ಪಾಲುದಾರರಿಗೆ ಪ್ರತಿ 15 ನಿಮಿಷಗಳಿಗೊಮ್ಮೆ ಸಂಚಾರ ದಟ್ಟಣೆಯ ಬಗ್ಗೆ ಎಚ್ಚರಿಕೆಗಳನ್ನು ಒದಗಿಸುವುದು .

    ಸಂಚಾರಿ ಅಪಘಾತಗಳು, ಉಲ್ಲಂಘನೆಗಳನ್ನು ವರದಿ ಮಾಡುವ ಮೂಲಕ ಮತ್ತು ಆನ್‌ಲೈನ್ ಸಂಚಾರ ದಂಡ ಪಾವತಿಗಳನ್ನು ಮಾಡುವ ಮೂಲಕ ನಾಗರಿಕರು ಸಕ್ರಿಯವಾಗಿ ಭಾಗವಹಿಸಲು ಅನುವು ಮಾಡಿಕೊಡುವುದು .

    ದೇವದಾಸಿ ಸಮೀಕ್ಷೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕದಲ್ಲಿ ನಡೆಯುತ್ತಿರುವ ದೇವದಾಸಿಯರ ಮರು ಸಮೀಕ್ಷೆಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.

    ಸಮನ್ವಯ ಸಂಸ್ಥೆಯಾದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (KSWDC) ಸಮೀಕ್ಷೆ ನಡೆಸುತ್ತದೆ.

    • ಕರ್ನಾಟಕ ಸಚಿವ ಸಂಪುಟವು ದೇವದಾಸಿ ಪದ್ಧತಿಯನ್ನು ನಿರ್ಮೂಲಗೊಳಿಸುವ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ “ಕರ್ನಾಟಕ ದೇವದಾಸಿ (ತಡೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ, 2025” ಅನ್ನು ಅನುಮೋದಿಸಿದೆ.

    ದೇವದಾಸಿ ಪುನರ್ವಸತಿ ಮಸೂದೆ:

    • ದೇವದಾಸಿ ಪುನರ್ವಸತಿ ಕಾಯ್ದೆ, 1982 ಅನ್ನು ಬದಲಾಯಿಸುತ್ತದೆ.
    • ದೇವದಾಸಿ ಮತ್ತು ಅವರ ಮಕ್ಕಳ ಘನತೆಯನ್ನು ರಕ್ಷಿಸುವುದು ಕಡ್ಡಾಯವಾಗಿದೆ.

    ದೇವದಾಸಿ ಪದ್ಧತಿಯ ಬಗ್ಗೆ:

    • ಇದು ಚೋಳ, ಚೇರ ಮತ್ತು ಪಾಂಡ್ಯರ ಕಾಲದ ಪ್ರಾಚೀನ ಪದ್ಧತಿಯಾಗಿದ್ದು, ಇದರಲ್ಲಿ ಕೆಳಜಾತಿಯ ಯುವತಿಯರನ್ನು ದೇವಾಲಯದ ದೇವತೆಗಳಿಗೆ ಸಮರ್ಪಿಸಲಾಗುತ್ತಿತ್ತು.
    • ಅವರನ್ನು “ದೇವರ ಸೇವಕಿ” ಎಂದು ಕರೆಯಲಾಗುತ್ತಿದ್ದರೂ, ಈ ಯುವತಿಯರು ದೇವಾಲಯದ ಪೋಷಕರಿಗೆ ಹಾಗೂ ಪ್ರಭಾವಶಾಲಿ ಪುರುಷರಿಗೆ ಲೈಂಗಿಕ ಸೇವೆ ನೀಡುವ ಸ್ಥಿತಿಗೆ ತಳ್ಳಲ್ಪಡುತ್ತಿದ್ದರು.

    ಈ ಪದ್ಧತಿ ಭಾರತದೆಲ್ಲೆಡೆ ವಿವಿಧ ಪ್ರಾದೇಶಿಕ ಹೆಸರಿನಲ್ಲಿ ಮುಂದುವರಿದಿದ್ದು, ಉದಾಹರಣೆಗೆ ಅಸ್ಸಾಂನಲ್ಲಿ ನಾಟಿಸ್, ಕೇರಳದಲ್ಲಿ ಮಹಾರಿಸ್, ಕರ್ನಾಟಕದಲ್ಲಿ ಬಸವಿ/ಜೋಗತಿ, ಆಂಧ್ರಪ್ರದೇಶದಲ್ಲಿ ಜೋಗಿನ್, ಮತ್ತು ಮಹಾರಾಷ್ಟ್ರದಲ್ಲಿ ಆರಾಧಿನಿ ಎಂದು ಕರೆಯಲಾಗುತ್ತದೆ.

  • ಅಕ್ಕೈ ಪದ್ಮಶಾಲಿ ಅವರನ್ನು ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀತಿಯನ್ನು ತಯಾರಿಸುವ ಸಮಿತಿಯಲ್ಲಿ ಸದಸ್ಯರಾಗಿ ನೇಮಿಸಲಾಗಿದೆ

    ಅಕ್ಕೈ ಪದ್ಮಶಾಲಿ ಅವರನ್ನು ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀತಿಯನ್ನು ತಯಾರಿಸುವ ಸಮಿತಿಯಲ್ಲಿ ಸದಸ್ಯರಾಗಿ ನೇಮಿಸಲಾಗಿದೆ

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕದ ತೃತೀಯ ಲಿಂಗಿಗಳ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯ ಸದಸ್ಯರನ್ನಾಗಿ ಹೆಸರಿಸಲಾಗಿದೆ. ಈ ಸಮಿತಿಯು ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆಗಾಗಿ ಸಮಾನ ಅವಕಾಶ ನೀತಿಯನ್ನು ರೂಪಿಸಲು ರಚಿಸಲಾಗಿದೆ.
    • ತೃತೀಯ ಲಿಂಗಿಗಳಿಗೆ ಸಮಾನ ಅವಕಾಶ ನೀತಿಯನ್ನು ರೂಪಿಸಲು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಆಶಾ ಮೆನನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು.

    ತೃತೀಯ ಲಿಂಗಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ:

    1. ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಮತ್ತು ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿ ಸಾಂಸ್ಥಿಕ ಅಂತರಗಳು.
    2. ನೀತಿ ನಿರೂಪಣೆಯಲ್ಲಿ ದತ್ತಾಂಶ ಮತ್ತು ಪ್ರಾತಿನಿಧ್ಯದ ಕೊರತೆ.
    3. ಆರೋಗ್ಯ ರಕ್ಷಣೆಯಲ್ಲಿ ತಾರತಮ್ಯ.
    4. ಕೆಲಸದ ಸ್ಥಳದ ಅಡೆತಡೆಗಳು.
    5. ಸಾಮಾಜಿಕ ಕಳಂಕ.

    ತೃತೀಯ ಲಿಂಗಿಗಳ ಜೀವನ ಮಟ್ಟವನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳು:

    • ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019: – ಇದು ತೃತೀಯ ಲಿಂಗಿ ವ್ಯಕ್ತಿಗಳ ಹಕ್ಕುಗಳನ್ನು ಮತ್ತು ಅವರ ಕಲ್ಯಾಣವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ . ಶಿಕ್ಷಣ, ಉದ್ಯೋಗ, ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಸೇವೆಗಳಂತಹ ಕ್ಷೇತ್ರಗಳಲ್ಲಿ ತೃತೀಯ ಲಿಂಗಿಗಳ ವಿರುದ್ಧ ತಾರತಮ್ಯವನ್ನು ಈ ಕಾಯ್ದೆ ನಿಷೇಧಿಸುತ್ತದೆ.
    • NALSA (2014):- ತೃತೀಯ ಲಿಂಗಿ ವ್ಯಕ್ತಿಗಳನ್ನು ಮೂರನೇ ಲಿಂಗದವರೆಂದು ಗುರುತಿಸಲಾಗಿದೆ.
    • ತೃತೀಯ ಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್:ಗುರುತಿನ ಪ್ರಮಾಣಪತ್ರಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ಸಕ್ರಿಯಗೊಳಿಸುತ್ತದೆ .

    ಸ್ಮೈಲ್ (SMILE) ಯೋಜನೆ:- ಇದು ಜೀವನೋಪಾಯ ಮತ್ತು ಸಾಮಾಜಿಕ ಭದ್ರತಾ ಘಟಕಗಳನ್ನು ಒಳಗೊಂಡಂತೆ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪುನರ್ವಸತಿ ಮತ್ತು ಬೆಂಬಲವನ್ನು ಗುರಿಯಾಗಿರಿಸಿಕೊಂಡಿದೆ.

  • ಮುಖ ಪರಿಚಯ ಗುರುತಿಸುವಿಕೆ ಹಾಜರಾತಿ  (FRA)

    ಮುಖ ಪರಿಚಯ ಗುರುತಿಸುವಿಕೆ ಹಾಜರಾತಿ  (FRA)

    ಇದೀಗ ಸುದ್ದಿಯಲ್ಲಿದೆ:

    • ಮಂಡ್ಯ, ಹಾವೇರಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕ ಯೋಜನೆಯಾಗಿ ಮುಖ ಪರಿಚಯ ಗುರುತಿಸುವಿಕೆ ಹಾಜರಾತಿ  (FRA) ಅನ್ನು ಈಗಾಗಲೇ ಜಾರಿಗೆ ತರಲಾಗಿದೆ.
    • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಮುಖ ಪರಿಚಯ ಗುರುತಿಸುವಿಕೆ ಹಾಜರಾತಿಯ ಅನುಷ್ಠಾನವನ್ನು ಘೋಷಿಸಿದ್ದರು.

    ಮುಖ ಪರಿಚಯ ಗುರುತಿಸುವಿಕೆ ಹಾಜರಾತಿ (FRA) ಯ ಬಗ್ಗೆ:

    • ಇದು ಸಂಪರ್ಕರಹಿತ ಜೈವಿಕ ಗುರುತಿನ ವ್ಯವಸ್ಥೆಯಾಗಿದ್ದು, ಮುಖವನ್ನು ಪತ್ತೆಹಚ್ಚಿ ಅದರ ಸಂಖ್ಯಾತ್ಮಕ ಮಾದರಿ (ಎಂಬೆಡಿಂಗ್) ರಚಿಸುತ್ತದೆ, ಅದನ್ನು ಮೊದಲು ನೋಂದಾಯಿಸಿದ ಸಂಕ್ಷಿಪ್ತ ರೇಖಾಚಿತ್ರಕ್ಕೂ (ಪ್ರೊಫೈಲ್) ಹೋಲಿಕೆ ಮಾಡುತ್ತದೆ ಮತ್ತು ಸಮಯ, ದಿನಾಂಕ ಹಾಗೂ ಸ್ಥಳವನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ.
    • ಹೀಗೆ ಕಾರ್ಯ ನಿರ್ವಹಿಸುತ್ತದೆ: ಹಿಡಿತ → ಪತ್ತೆ → ಸಾಮಾನ್ಯೀಕರಣ → ವೈಶಿಷ್ಟ್ಯ ಹೊರತೆಗೆಯುವುದು → ಹೋಲಿಕೆ → ಜೀವಂತಿಕೆಯ ಪರಿಶೀಲನೆ → ಹಾಜರಾತಿ ದಾಖಲೆ → ಸರ್ವರ್/HRMS‌ಗೆ ಸಮನ್ವಯ.
    • ಮುಖ್ಯ ಘಟಕಗಳು:ಕ್ಯಾಮೆರಾ/ಮೊಬೈಲ್ ಆಪ್; ಮುಖ ಪತ್ತೆ/ಗುರುತಿಸುವ ಮಾದರಿ (CNN ಆಧಾರಿತ); ಜೀವಂತಿಕೆ/ವಂಚನೆ ವಿರೋಧಿ ವ್ಯವಸ್ಥೆ ಸುರಕ್ಷಿತ ಮಾದರಿ ದತ್ತಾoಶ; ನಿರ್ವಾಹಕ ನಿಯಂತ್ರಣ ಫಲಕ; ಏಕೀಕರಣಗಳು (HR/ವೇತನ ಮತ್ತು ಪ್ರವೇಶ ನಿಯಂತ್ರಣ).
  • ಜಿಲ್ಲಾ ಯೋಜನಾ ಸಮಿತಿಗಳು

    ಜಿಲ್ಲಾ ಯೋಜನಾ ಸಮಿತಿಗಳು

    ಇದೀಗ ಸುದ್ದಿಯಲ್ಲಿದೆ:

    • ಬಿ.ಆರ್. ಪಾಟೀಲ್ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಜಿಲ್ಲೆಗಳಲ್ಲಿ ನಿರಂತರವಾಗಿ ಜಿಲ್ಲಾ ಯೋಜನಾ ಸಮಿತಿಗಳ ಸಭೆಗಳನ್ನು ಏರ್ಪಡಿಸುತ್ತಿಲ್ಲದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

    ಜಿಲ್ಲಾ ಯೋಜನಾ ಸಮಿತಿ (DPC) ಗಳ ಬಗ್ಗೆ:

    • ಇದು ವಿಧಿ  243Z ಅಡಿಯಲ್ಲಿ ಸ್ಥಾಪಿತವಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಇದನ್ನು ಪ್ರತಿ ಜಿಲ್ಲೆಯಲ್ಲೂ ಕಡ್ಡಾಯವಾಗಿ ಸ್ಥಾಪಿಸಬೇಕು.
    • ಉದ್ದೇಶ: ಪಂಚಾಯತಿ ಮತ್ತು ನಗರಸಭೆ ಯೋಜನೆಗಳನ್ನು ಕ್ರೋಢೀಕರಿಸುವುದು; ಜಿಲ್ಲೆಗೆ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸುವುದು.
    • ಸದಸ್ಯರು: ಗ್ರಾಮೀಣ-ನಗರ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಮತ್ತು ನಗರಸಭೆಗಳ ಚುನಾಯಿತ ಸದಸ್ಯರಿಂದ ಕನಿಷ್ಠ ಐದನೇ ನಾಲ್ಕು ಭಾಗದಷ್ಟು ಆಯ್ಕೆಯಾದವರು.
    • ಉಳಿದ ಸದಸ್ಯರು: ರಾಜ್ಯ ಕಾನೂನಿನ ಮೂಲಕ ಒದಗಿಸಲಾದ ಪ್ರಕಾರ; ಜಿಲ್ಲೆಯ ಶಾಸಕರು/ಸಂಸದರು ಮತ್ತು ನಾಮನಿರ್ದೇಶಿತ ತಜ್ಞರನ್ನು ಒಳಗೊಂಡಿರಬಹುದು.
  • ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 (KARC-2)

    ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 (KARC-2)

    ಇದೀಗ ಸುದ್ದಿಯಲ್ಲಿದೆ:

    • ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಏಳು ಮಂಡಳಿ ಮತ್ತು ನಿಗಮಗಳನ್ನು ಮುಚ್ಚಲು ಮತ್ತು ಇತರ ಒಂಬತ್ತು ಮಂಡಳಿಗಳನ್ನು ವಿಲೀನಗೊಳಿಸಲು ಶಿಫಾರಸು ಮಾಡಿದೆ.

    ಶಿಫಾರಸುಗಳು:

    ಮುಚ್ಚಲು ಶಿಫಾರಸು ಮಾಡಲಾದ ಮಂಡಳಿ ಮತ್ತು ನಿಗಮಗಳು:

    1. ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ.
    2. ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ.
    3. ಕರ್ನಾಟಕ ಸಹಕಾರಿ ಕೋಳಿ ಸಾಕಣೆ ಒಕ್ಕೂಟ.
    4. ಕರ್ನಾಟಕ ಕಾಗದದ ಮರ ನಿಯಮಿತ.
    5. ಕರ್ನಾಟಕ ರಾಜ್ಯ ಕೃಷಿ-ಜೋಳ  ಉತ್ಪನ್ನಗಳು ನಿಯಮಿತ.
    6. ಮೈಸೂರು ಬೆಳಕಿನ ದೀಪ  ಕಾರ್ಖಾನೆ ನಿಗಮ. 
    7. ಕರ್ನಾಟಕ ಕೃಷಿ ಕೈಗಾರಿಕೆ ನಿಗಮ ನಿಯಮಿತ.

    ವಿಲೀನಕ್ಕೆ ಶಿಫಾರಸು ಮಾಡಲಾದ ಮಂಡಳಿಗಳು ಮತ್ತು ನಿಗಮಗಳು:

    1. ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಘ.
    2. ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ನಿಯಮಿತ.
    3. ಬೆಂಗಳೂರು ಉಪನಗರ ರೈಲ್ವೆ ಕಂಪನಿ ನಿಯಮಿತ (B-RIDE).
    4. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ.
    5. ಆಹಾರ ಕರ್ನಾಟಕ ನಿಗಮ ನಿಯಮಿತ.
    6. ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ ನಿಯಮಿತ.

    ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 (KARC-2) ದ ಬಗ್ಗೆ:

    • ಜನವರಿ 2021 ರಲ್ಲಿ ರಚನೆಯಾಯಿತು.
    • ಉದ್ದೇಶ – ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಸಮಗ್ರ ಕ್ರಮಗಳನ್ನು ಶಿಫಾರಸು ಮಾಡುವುದು.
    • ಆಯೋಗದ ಆದೇಶವು ಆಡಳಿತ ವ್ಯವಸ್ಥೆಗಳನ್ನು ಪುನರ್ರಚಿಸುವುದು, ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಸರಳೀಕರಿಸುವುದು ಮತ್ತು ಇಲಾಖೆಗಳಾದ್ಯಂತ ಸಾಂಸ್ಥಿಕ ಆಡಳಿತವನ್ನು ಬಲಪಡಿಸುವುದನ್ನು ಒಳಗೊಂಡಿದೆ.
    • ಪ್ರಸ್ತುತ ಅಧ್ಯಕ್ಷರು ಶ್ರೀ ಆರ್.ವಿ. ದೇಶಪಾಂಡೆ, ಅವರನ್ನು ಜನವರಿ 2024 ರಲ್ಲಿ ಕ್ಯಾಬಿನೆಟ್ ಮಂತ್ರಿ ಸ್ಥಾನಮಾನದೊಂದಿಗೆ ನೇಮಿಸಲಾಯಿತು . ಅವರು ಹಿಂದಿನ ಅಧ್ಯಕ್ಷರಾದ ಶ್ರೀ ಟಿ.ಎಂ. ವಿಜಯ್ ಭಾಸ್ಕರ್ ಅವರಿಂದ ಅಧಿಕಾರ ವರ್ಗಾಯಿಸಿಕೊಂಡರು.

    ಕರ್ನಾಟಕ ಆಡಳಿತ ಸುಧಾರಣಾ ಆಯೋಗಗಳು:

    ಆಯೋಗ

    ಅಧ್ಯಕ್ಷರು

    ಸಂವಿಧಾನ ಉಲ್ಲೇಖ/ದಿನಾಂಕ

    ಕರ್ನಾಟಕ ಆಡಳಿತ ಸುಧಾರಣಾ ಆಯೋಗ -1 (KARC-1)

    ಹಾರನಹಳ್ಳಿ ರಾಮಸ್ವಾಮಿ

    2000 ನೇ ಇಸವಿಯಲ್ಲಿ DPAR ಆದೇಶದ ಮೂಲಕ ರಚಿಸಲಾಗಿದೆ; 2001 ರಲ್ಲಿ ವರದಿಗಳನ್ನು ಸಲ್ಲಿಸಲಾಗಿದೆ.

    ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 (KARC-2)

    ಮೊದಲು – ಟಿ.ಎಂ. ವಿಜಯ್ ಭಾಸ್ಕರ್,  

    ಪ್ರಸ್ತುತ – ಆರ್.ವಿ. ದೇಶಪಾಂಡೆ.

    2001 ರಲ್ಲಿ ರಚನೆಯಾಯಿತು.