ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನ ಆಧಾರಿತ ಅಭ್ಯಾಸ ಪ್ರಶ್ನೆಗಳು
1). ‘ಪ್ರಗತಿ’ (PRAGATI) ಉಪಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಪ್ರಧಾನ ಮಂತ್ರಿ ಕಾರ್ಯಾಲಯ (PMO) ಆರಂಭಿಸಿದ ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
- ಇದು ಕೇವಲ ಕೇಂದ್ರ ವಲಯದ ಯೋಜನೆಗಳ ಮೇಲ್ವಿಚಾರಣೆ ಮತ್ತು ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆಯ ಮೇಲೆ ಮಾತ್ರ ಗಮನಹರಿಸುತ್ತದೆ.
- ಇದು ನಾಗರಿಕರ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸಹ ಸಂಯೋಜಿಸುತ್ತದೆ.
- ಇದು ಮೂಲಸೌಕರ್ಯ ಮತ್ತು ಅಧಿಕ ಮೌಲ್ಯದ ಯೋಜನೆಗಳ ಮೇಲ್ವಿಚಾರಣೆ, ಅಂತರ-ಸಚಿವಾಲಯಗಳ ಸಮನ್ವಯವನ್ನು ಸುಗಮಗೊಳಿಸುವುದು ಮತ್ತು ಯೋಜನೆಗಳ ಸಂಸದೀಯ ಮೇಲ್ವಿಚಾರಣೆಯನ್ನು ನಡೆಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಒಂದು ಹೇಳಿಕೆ ಮಾತ್ರ
- ಎರಡು ಹೇಳಿಕೆಗಳು ಮಾತ್ರ
- ಮೂರು ಹೇಳಿಕೆಗಳು ಮಾತ್ರ
- ಮೇಲಿನ ಯಾವುದೂ ಅಲ್ಲ
ಉತ್ತರ:- B
2). ಪ್ರತಿಪಾದನೆ (A): ‘ಹಣಕಾಸು ಸ್ಥಿರತೆ ವರದಿ’ಯು ಬ್ಯಾಂಕಿಂಗ್ ವಲಯದ ಮೇಲೆ ಮಾತ್ರ ಪ್ರತ್ಯೇಕವಾಗಿ ಗಮನಹರಿಸುತ್ತದೆ.
ಕಾರಣ (R): ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಪ್ರತ್ಯೇಕವಾಗಿ ನಿಯಂತ್ರಿಸಲ್ಪಡುತ್ತವೆ ಮತ್ತು ಅವು ಹಣಕಾಸು ವ್ಯವಸ್ಥೆಯ ಭಾಗವಾಗಿಲ್ಲ.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- A ಮತ್ತು R ಎರಡೂ ಸರಿಯಾಗಿವೆ ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
- A ಸರಿಯಾಗಿದೆ, ಆದರೆ R ತಪ್ಪಾಗಿದೆ
- A ಮತ್ತು R ಎರಡೂ ತಪ್ಪಾಗಿವೆ
ಉತ್ತರ:- D
3). ಭಾರತದಲ್ಲಿ ಗಾಂಜಾ (Cannabis) ಸಂಬಂಧಿತ ಇತ್ತೀಚಿನ ಕಾನೂನು ಮತ್ತು ನೀತಿ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸೆಣಬಿನ ಸಸ್ಯಗಳಿಂದ ಹೊರತೆಗೆಯಲಾದ ಕ್ಯಾನಬಿಡಿಯಾಲ್ (CBD) ಅನ್ನು ಭಾರತದಲ್ಲಿ ವೈದ್ಯಕೀಯ ಬಳಕೆಗೆ ಅನುಮತಿಸಲಾಗಿದೆ.
- ಸಂಶೋಧನೆಗಾಗಿ ಗಾಂಜಾ ಕೃಷಿಯನ್ನು ಸೂಕ್ತ ಅನುಮತಿಯ ಅಡಿಯಲ್ಲಿ ಅನುಮತಿಸಬಹುದು ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ.
- ಕೈಗಾರಿಕಾ ಉದ್ದೇಶಗಳಿಗಾಗಿ ಗಾಂಜಾವನ್ನು ನಿಯಂತ್ರಿಸಲು ಯಾವುದೇ ಭಾರತೀಯ ರಾಜ್ಯವು ಆಸಕ್ತಿ ತೋರಿಸಿಲ್ಲ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಲ್ಲ?
- ಒಂದು ಮಾತ್ರ
- ಎರಡು ಮಾತ್ರ
- ಮೂರೂ ಹೇಳಿಕೆಗಳು
- ಮೇಲಿನ ಯಾವುದೂ ಅಲ್ಲ
ಉತ್ತರ:- A
4). ‘ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್’ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ರಾಜ್ಯದ ಯೋಜನೆಗಳು ಸೇರಿದಂತೆ ವಿವಿಧ ಸಚಿವಾಲಯಗಳಾದ್ಯಂತ ಮೂಲಸೌಕರ್ಯ ಯೋಜನೆಗಳ ಯೋಜನೆ ಮತ್ತು ಅನುಷ್ಠಾನವನ್ನು ಏಕೀಕರಿಸುವ ಗುರಿಯನ್ನು ಹೊಂದಿದೆ.
- ಇದು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಸಾಗಣೆ ವೆಚ್ಚಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ.
- ಇದನ್ನು DPIIT ಇಲಾಖೆಯು ಸಂಯೋಜಿಸುತ್ತದೆ ಮತ್ತು ನೀತಿ ಆಯೋಗವು ವಿಶೇಷ ಯೋಜನಾ-ಮಟ್ಟದ ಅನುಮೋದನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
- ಇದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರತ್ಯೇಕವಾಗಿ ಅನುಷ್ಠಾನಗೊಳಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಒಂದು ಮಾತ್ರ
- ಎರಡು ಮಾತ್ರ
- ಮೂರೂ ಹೇಳಿಕೆಗಳು
- ಯಾವುದೂ ಅಲ್ಲ
ಉತ್ತರ:- B
5). ಭಾರತದ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ‘ಪ್ರಳಯ್’ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಅಭಿವೃದ್ಧಿಪಡಿಸಿದೆ.
- ಇದು ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಸಾಂಪ್ರದಾಯಿಕ ಫಿರಂಗಿ ವ್ಯವಸ್ಥೆಗಳ ನಡುವಿನ ಅಂತರವನ್ನು ತುಂಬುತ್ತದೆ.
- ಇದನ್ನು ತ್ವರಿತ ಪ್ರತಿಕ್ರಿಯೆ ಮತ್ತು ಉನ್ನತ-ನಿಖರತೆಯ ಯುದ್ಧಭೂಮಿ ಬೆಂಬಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
- ಇದು ಭಾರತದ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ ಕಾರ್ಯಕ್ರಮದ ಭಾಗವಾಗಿದೆ.
ಮೇಲೆ ನೀಡಿರುವ ಯಾವ ಹೇಳಿಕೆಗಳು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ:- A
6). ಹೊಂದಿಸಿ ಬರೆಯಿರಿ:
ಈ ಕೆಳಗಿನ ಪಟ್ಟಿಗಳನ್ನು ಪರಿಗಣಿಸಿ ಮತ್ತು ಸರಿಯಾದ ಆಯ್ಕೆಯನ್ನು ಆರಿಸಿ:
|
ಪಟ್ಟಿ – I (ಕ್ಷಿಪಣಿ)
|
ಪಟ್ಟಿ – II (ವೈಶಿಷ್ಟ್ಯಗಳು/ಪ್ರಕಾರ)
|
|
a. ಪೃಥ್ವಿ
|
1. ಮಧ್ಯಮ ಶ್ರೇಣಿಯ ಭೂ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ.
|
|
b. ಅಗ್ನಿ
|
2. 3ನೇ ತಲೆಮಾರಿನ ‘ಫೈರ್ ಅಂಡ್ ಫರ್ಗೆಟ್’ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ
|
|
c. ತ್ರಿಶೂಲ್
|
3. ಅಲ್ಪ-ಶ್ರೇಣಿಯ ಭೂ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ.
|
|
d. ನಾಗ್
|
4. ಮಧ್ಯಮ/ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ.
|
|
e. ಆಕಾಶ್
|
5. ಅಲ್ಪ-ಶ್ರೇಣಿಯ, ಕೆಳಮಟ್ಟದ, ತ್ವರಿತ ಪ್ರತಿಕ್ರಿಯೆ ನೀಡುವ ಭೂ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ.
|
ಸರಿಯಾದ ಹೊಂದಾಣಿಕೆಯನ್ನು ಆಯ್ಕೆಮಾಡಿ:
- a-3, b-4, c-5, d-2, e-1
- a-1, b-3, c-4, d-2, e-5
- a-5, b-2, c-3, d-1, e-4
- a-2, b-4, c-1, d-3, e-5
ಉತ್ತರ:- A
7). ಈ ಕೆಳಗಿನ ಯಾವ ವಲಯಗಳು ‘ರಾಷ್ಟ್ರೀಯ ತಂತ್ರಜ್ಞಾನ ಸನ್ನದ್ಧತೆ ಮೌಲ್ಯಮಾಪನ ಚೌಕಟ್ಟು’ (NTRAF) ಉಪಕ್ರಮದಿಂದ ನೇರವಾಗಿ ಪ್ರಯೋಜನ ಪಡೆಯುವ ಸಾಧ್ಯತೆಯಿದೆ?
- ಬಾಹ್ಯಾಕಾಶ ತಂತ್ರಜ್ಞಾನ
- ಜೈವಿಕ ತಂತ್ರಜ್ಞಾನ ಮತ್ತು ಔಷಧ ಉದ್ಯಮ
- ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು
- ಡೀಪ್-ಟೆಕ್ ನವೋದ್ಯಮಗಳು
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ನಾಲ್ಕೂ ಹೇಳಿಕೆಗಳು
- ಯಾವುದೂ ಅಲ್ಲ
ಉತ್ತರ:- C
8). ಪಠ್ಯ (ಪ್ಯಾರಾಗ್ರಾಫ್)
ಈ ಉಷ್ಣವಲಯದ ಪರಾಗಸ್ಪರ್ಶ ಪ್ರಭೇದವು ಭೂಮಿಯ ಮೇಲಿನ ಜೇನುನೊಣಗಳ ಅತ್ಯಂತ ಹಳೆಯ ಗುಂಪುಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಧಾನವಾಗಿ ಅಮೆಜಾನ್ ಮಳೆಕಾಡುಗಳು ಹಾಗೂ ಇತರ ಆರ್ದ್ರ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜೇನುಸಾಕಣೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಯುರೋಪಿಯನ್ ಜೇನುನೊಣಗಳಿಗಿಂತ ಭಿನ್ನವಾಗಿ, ಇದು ಕಾರ್ಯನಿರ್ವಹಿಸುವ ಕೊಂಡಿಯನ್ನು ಹೊಂದಿಲ್ಲ, ಆದರೆ ಕಚ್ಚುವ ಮೂಲಕ ಮತ್ತು ಸಸ್ಯ ರಾಳಗಳನ್ನು ಬಳಸುವ ಮೂಲಕ ತನ್ನ ನೆಲೆಗಳನ್ನು ಸಕ್ರಿಯವಾಗಿ ರಕ್ಷಿಸಿಕೊಳ್ಳುತ್ತದೆ. ಮಳೆಕಾಡುಗಳ ಜೈವಿಕ ವಿಜ್ಞಾನವನ್ನು ಕಾಪಾಡಿಕೊಳ್ಳುವಲ್ಲಿ ಇದು ಸರಿದೂಗಿಸಲಾಗದ ಪಾತ್ರವನ್ನು ವಹಿಸುತ್ತದೆ. ಇದು ಸ್ಥಳೀಯ ಹೂಬಿಡುವ ಸಸ್ಯಗಳು ಮತ್ತು ಕೋಕೋ, ಕಾಫಿ, ಆವಕಾಡೊಗಳು ಮತ್ತು ಬೆರ್ರಿಗಳಂತಹ ಹಲವಾರು ಆರ್ಥಿಕವಾಗಿ ಮಹತ್ವದ ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದ ಪರಾಗಸ್ಪರ್ಶವನ್ನು ಮಾಡುತ್ತದೆ. ಆದಾಗ್ಯೂ, ಅರಣ್ಯನಾಶ, ಹವಾಮಾನ ಬದಲಾವಣೆ, ಕೀಟನಾಶಕಗಳ ಬಳಕೆ ಮತ್ತು ಪರಿಚಯಿಸಲಾದ ಅನ್ಯ ಜೇನು ಪ್ರಭೇದಗಳ ಸ್ಪರ್ಧೆಯಿಂದಾಗಿ ಇವುಗಳ ಸಂತತಿಯು ಹೆಚ್ಚು ಬೆದರಿಕೆಗೊಳಗಾಗಿದೆ. ಇದರ ಪರಿಸರ ಮಹತ್ವವನ್ನು ಗುರುತಿಸಿ, ಇತ್ತೀಚಿನ ಕೆಲವು ಘೋಷಣೆಗಳು ಇದರ ಅಸ್ತಿತ್ವದಲ್ಲಿರುವ, ಅಭಿವೃದ್ಧಿ ಹೊಂದುವ, ಮಾಲಿನ್ಯ ಮುಕ್ತ ಆವಾಸಸ್ಥಾನಗಳಲ್ಲಿ ವಾಸಿಸುವ ಮತ್ತು ಪರಿಸರ ಹಾನಿ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ಪ್ರತಿನಿಧಿಸುವ ಹಕ್ಕನ್ನು ಅಂಗೀಕರಿಸಿವೆ.
ಈ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?
- ಕೊಂಡಿರಹಿತ/ಕಚ್ಚದ ಜೇನುನೊಣ
- ಬಂಬಲ್ ಜೇನು
- ಏಪಿಸ್ ಮೆಲ್ಲಿಫೆರಾ
- ಕಾರ್ಪೆಂಟರ್ ಜೇನು/ಬಡಗಿ ಜೇನು
ಉತ್ತರ:- A
9). ರಾಷ್ಟ್ರೀಯ ತನಿಖಾ ದಳಕ್ಕೆ (NIA) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- 9/11 ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಎನ್ಐಎ (NIA) ಕಾಯ್ದೆ, 2008 ರ ಅಡಿಯಲ್ಲಿ ಎನ್ಐಎ ಅನ್ನು ಸ್ಥಾಪಿಸಲಾಯಿತು.
- 2019 ರ ತಿದ್ದುಪಡಿಯು, ಭಾರತೀಯ ನಾಗರಿಕರು ಅಥವಾ ಭಾರತದ ಹಿತಾಸಕ್ತಿಗಳನ್ನು ಒಳಗೊಂಡಂತೆ ಭಾರತದ ಹೊರಗೆ ಎಸಗಲಾದ ನಿಗದಿತ ಅಪರಾಧಗಳನ್ನು (ತನಿಖೆ ಮಾಡಲು ಎನ್ಐಎಗೆ ಅನುಮತಿಸುತ್ತದೆ.
- ಎನ್ಐಎ, ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
- ಭಾರತದಲ್ಲಿನ ಎಲ್ಲಾ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ಎನ್ಐಎ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ:- C
10). ಗ್ರಾಮ ರಕ್ಷಣಾ ಕಾವಲುಗಾರರಿಗೆ (ಗಾರ್ಡ್‌ಗಳಿಗೆ) (VDG) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವಿಡಿಜಿ (VDG) ಸ್ವಯಂಸೇವಕರು ಪರ್ವತ ಯುದ್ಧ ಮತ್ತು ಬಂಕರ್ ರಕ್ಷಣೆಯಲ್ಲಿ ತರಬೇತಿಯನ್ನು ಪಡೆಯುತ್ತಾರೆ.
- ತರಬೇತಿಯು ಶಸ್ತ್ರಾಸ್ತ್ರ ನಿರ್ವಹಣೆ, ಗುಂಡು ಹಾರಿಸುವ ಅಭ್ಯಾಸಗಳು ಮತ್ತು ಮೂಲಭೂತ ಯುದ್ಧ ಕಸರತ್ತುಗಳನ್ನು ಒಳಗೊಂಡಿದೆ.
- ಭದ್ರತಾ ಪಡೆಗಳೊಂದಿಗೆ ಸಮನ್ವಯವಿಲ್ಲದೆ ವಿಡಿಜಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ.
- ಈ ಕಾರ್ಯಕ್ರಮವು ಬಂಡಾಯ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ನಾಲ್ಕೂ ಹೇಳಿಕೆಗಳು
D ಒಂದು ಮಾತ್ರ
ಉತ್ತರ:- B
11). ಪಠ್ಯ (ಪ್ಯಾರಾಗ್ರಾಫ್):
ಭಾರತದಲ್ಲಿ ಕೃಷಿ ಪರಿಸರ ವಿಜ್ಞಾನ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ನಬಾರ್ಡ್ (NABARD) 2022 ರಲ್ಲಿ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅಧಿಕ ಹೂಡಿಕೆ ಆಧಾರಿತ ಕೃಷಿಯ ಬದಲಿಗೆ ಕಡಿಮೆ ವೆಚ್ಚದ, ಪರಿಸರ ವ್ಯವಸ್ಥೆ ಆಧಾರಿತ ಒಳಹರಿವುಗಳನ್ನು ಪ್ರೋತ್ಸಾಹಿಸುವ ಮೂಲಕ, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಣ್ಣಿನ ಆರೋಗ್ಯ, ಜೀವವೈವಿಧ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಇದು ಪ್ರಯತ್ನಿಸುತ್ತದೆ.
ಈ ಮೇಲಿನ ಪಠ್ಯದಲ್ಲಿ ವಿವರಿಸಲಾದ ಕಾರ್ಯಕ್ರಮ ಯಾವುದು?
- ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY)
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)
- ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ (NMSA)
- ಜೀವ (JIVA – ಗ್ರಾಮ ಪ್ರಗತಿಗಾಗಿ ಜಂಟಿ ಉಪಕ್ರಮ)
ಉತ್ತರ:- B
12). ಪಾವತಿ ಶಿಲ್ಕು (BoP) ಸಂದರ್ಭದಲ್ಲಿ, ಈ ಕೆಳಗಿನವುಗಳಲ್ಲಿ ಯಾವುದು ಚಾಲ್ತಿ ಖಾತೆ ಕೊರತೆಯನ್ನು (CAD) ಹೆಚ್ಚಿಸುತ್ತದೆ?
- ವಿದೇಶದಿಂದ ಬರುವ ಹಣದ ರವಾನೆ ಹೆಚ್ಚಳ.
- ಚಿನ್ನದ ಆಮದು ಹೆಚ್ಚಳ.
- ಸಾಫ್ಟ್‌ವೇರ್ ಸೇವಾ ರಫ್ತುಗಳಲ್ಲಿ ಏರಿಕೆ.
- ಕಚ್ಚಾ ತೈಲ ಬೆಲೆಗಳ ಹೆಚ್ಚಳ.
ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ:- A
13). ಕ್ವಾಡ್ (QUAD) ಗುಂಪಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕ್ವಾಡ್; ಭಾರತ, ಯುಎಸ್, ಜಪಾನ್ ಮತ್ತು ದಕ್ಷಿಣ ಕೊರಿಯಾವನ್ನು ಒಳಗೊಂಡಿದೆ.
- ಇದನ್ನು ಆರಂಭದಲ್ಲಿ 2007 ರಲ್ಲಿ ರೂಪಿಸಲಾಯಿತು ಮತ್ತು 2017 ರ ನಂತರ ಪುನಶ್ಚೇತನಗೊಳಿಸಲಾಯಿತು.
- ಈ ವೇದಿಕೆಯು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುತ್ತದೆ.
- ಮಲಬಾರ್ ನೌಕಾ ಸಮರಾಭ್ಯಾಸವು ಕ್ವಾಡ್ ಅಡಿಯಲ್ಲಿನ ಪ್ರಮುಖ ಮಿಲಿಟರಿ ಸಹಕಾರ ಉಪಕ್ರಮವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: B
14). ಹಂಗೇರಿಯ ‘ಮಹಾ ಹಂಗೇರಿಯನ್ ಬಯಲು’ ಪ್ರದೇಶದಂತಹ ಪ್ರದೇಶಗಳಲ್ಲಿ ‘ಜಲ ರಕ್ಷಕರು’ (Water Guardians) ಉಪಕ್ರಮವು ಈ ಕೆಳಗಿನ ಯಾವ ಸವಾಲುಗಳನ್ನು ನೇರವಾಗಿ ಪರಿಹರಿಸುತ್ತದೆ?
- ಕುಸಿಯುತ್ತಿರುವ ಅಂತರ್ಜಲ ಮಟ್ಟಗಳು.
- ಹವಾಮಾನ ಬದಲಾವಣೆಯಿಂದ ಉಂಟಾಗುವ ಮರುಭೂಮೀಕರಣ.
- ಸುಸ್ಥಿರವಲ್ಲದ ಭೂ ಮತ್ತು ಜಲ ನಿರ್ವಹಣಾ ಪದ್ಧತಿಗಳು.
- ನಗರ ಕೇಂದ್ರಗಳಿಂದ ಉಂಟಾಗುವ ಕೈಗಾರಿಕಾ ಮಾಲಿನ್ಯ.
ಈ ಉಪಕ್ರಮವು ಮೇಲಿನ ಎಷ್ಟು ಸವಾಲುಗಳನ್ನು ಪರಿಹರಿಸುತ್ತದೆ?
- ಎರಡು ಮಾತ್ರ
- ಒಂದು ಮಾತ್ರ
- ನಾಲ್ಕೂ ಹೇಳಿಕೆಗಳು
- ಮೂರು ಮಾತ್ರ
ಉತ್ತರ: D
15). ರೇಬೀಸ್ ರೋಗಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ರೇಬೀಸ್ ಎಂಬುದು ಲಿಸ್ಸಾವೈರಸ್ ಕುಲಕ್ಕೆ ಸೇರಿದ ಆರ್‌ಎನ್‌ಎ (RNA) ವೈರಸ್‌ನಿಂದ ಉಂಟಾಗುವ ಒಂದು ಪ್ರಾಣಿಜನ್ಯ ವೈರಲ್ ಕಾಯಿಲೆಯಾಗಿದೆ.
- ರೇಬೀಸ್ 100% ಮಾರಣಾಂತಿಕವಾಗಿದೆ ಆದರೆ ಲಸಿಕೆಯಿಂದ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ.
- ದಕ್ಷಿಣ ಏಷ್ಯಾದಲ್ಲಿ, ಸಾಕು ನಾಯಿಗಳು ಈ ವೈರಸ್‌ನ ಅತ್ಯಂತ ಸಾಮಾನ್ಯವಾದ ಆಶ್ರಯದಾತಗಳಾಗಿವೆ.
- ರೇಬೀಸ್‌ನ ರೋಗಲಕ್ಷಣಗಳು ಆತಂಕ, ಗೊಂದಲ, ಅತಿಯಾದ ಲಾಲಾರಸ ಸ್ರವಿಸುವಿಕೆ, ಸೆಳವು ಮತ್ತು ಪಾರ್ಶ್ವವಾಯುವನ್ನು ಒಳಗೊಂಡಿವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: C
16). ಮಕರವಿಳಕ್ಕು ಹಬ್ಬಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಮಲಯಾಳಂ ಕ್ಯಾಲೆಂಡರ್‌ನ ಮಕರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ.
- ಮಕರ ಜ್ಯೋತಿಯು ಕಾಡಿನಿಂದ ಮೂರು ಬಾರಿ ಕಾಣಿಸಿಕೊಳ್ಳುವ ಪವಿತ್ರ ಬೆಳಕನ್ನು ಸೂಚಿಸುತ್ತದೆ.
- ಮಕರವಿಳಕ್ಕು, ಮಕರ ಸಂಕ್ರಾಂತಿಯಂದೇ ಏಕಕಾಲದಲ್ಲಿ ಸಂಭವಿಸುತ್ತದೆ.
- ಇದರ ಪ್ರಮುಖ ಆಚರಣೆಗಳು ಕಲಮೆಝುತು ಪಟ್ಟು, ನಾಯಟ್ಟು ವಿಲಿ ಮತ್ತು ಗುರುತಿ ಯನ್ನು ಒಳಗೊಂಡಿವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: B
17). ಸುಭಾಷ್ ಚಂದ್ರ ಬೋಸ್ ಅವರ ಅಡಿಯಲ್ಲಿನ ಭಾರತೀಯ ರಾಷ್ಟ್ರೀಯ ಸೇನೆಗೆ (INA) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಐಎನ್‌ಎ (INA) ‘ಜೈ ಹಿಂದ್’ ಮತ್ತು ‘ದೆಹಲಿ ಚಲೋ’ ಘೋಷಣೆಗಳಿಗೆ ಪ್ರಾಮುಖ್ಯತೆಯನ್ನು ನೀಡಿತು.
- ಎರಡನೇ ಮಹಾಯುದ್ಧದ ನಂತರ ಐಎನ್‌ಎ ಸೈನಿಕರು ಕೆಂಪು ಕೋಟೆಯಲ್ಲಿ ಸಾರ್ವಜನಿಕ ವಿಚಾರಣೆಗಳನ್ನು ಎದುರಿಸಿದರು.
- ಐಎನ್‌ಎ ವಿಚಾರಣೆಗಳ ಮಾನಸಿಕ ಪರಿಣಾಮವು ರಾಯಲ್ ಇಂಡಿಯನ್ ನೇವಿಯಲ್ಲಿ ಅಶಾಂತಿಗೆ ಕಾರಣವಾಯಿತು.
- ಶರಣಾಗತಿಯ ಮೊದಲು ಐಎನ್‌ಎ ಪೂರ್ವ ಭಾರತದ ದೊಡ್ಡ ಭಾಗಗಳ ಮೇಲೆ ಪ್ರಾದೇಶಿಕ ನಿಯಂತ್ರಣವನ್ನು ಸಾಧಿಸಿತ್ತು.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ಒಂದು ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: B
18). ‘ಐಎನ್‌ಎಸ್‌ವಿ ಕೌಂಡಿನ್ಯ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಗುಪ್ತರ ಕಾಲದ ಹಡಗು ಚಿತ್ರಣದಿಂದ ಸ್ಫೂರ್ತಿ ಪಡೆದಿದೆ.
- ಮಧ್ಯಕಾಲೀನ ಭಾರತೀಯ ಕಡಲ ತಂತ್ರಗಳನ್ನು ಅನುಸರಿಸಿ ಕಬ್ಬಿಣದ ಮೊಳೆಗಳು ಮತ್ತು ಮರದ ಹಲಗೆಗಳನ್ನು ಬಳಸಿ ಈ ನೌಕೆಯನ್ನು ನಿರ್ಮಿಸಲಾಗಿದೆ.
- ಇದು ಭಾರತ ಮತ್ತು ಓಮನ್ ನಡುವಿನ ಪ್ರಾಚೀನ ಕಡಲ ವ್ಯಾಪಾರ ಮಾರ್ಗಗಳಲ್ಲಿ ಮರುಸಂಚರಿಸುತ್ತದೆ.
- ಈ ಯೋಜನೆಯು ಭಾರತೀಯ ನೌಕಾಪಡೆಯು ಪ್ರತ್ಯೇಕವಾಗಿ ಅನುಷ್ಠಾನಗೊಳಿಸಿದ ಯೋಜನೆಯ ಭಾಗವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
19). ಭಾರತದಲ್ಲಿನ ಅಗರಬತ್ತಿ ವಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು ವಿಶ್ವದ ಅತಿದೊಡ್ಡ ಅಗರಬತ್ತಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದೆ.
- ಈ ವಲಯವು ಎಂಎಸ್‌ಎಂಇಗಳ ಸೀಮಿತ ಪಾಲ್ಗೊಳ್ಳುವಿಕೆಯೊಂದಿಗೆ ದೊಡ್ಡ ಕಾರ್ಪೊರೇಟ್ ಉತ್ಪಾದಕರಿಂದಲೇ ಹೆಚ್ಚಾಗಿ ಪ್ರಾಬಲ್ಯ ಹೊಂದಿದೆ.
- ಇದು ವಿಶೇಷವಾಗಿ ಗ್ರಾಮೀಣ ಮಹಿಳೆಯರು ಮತ್ತು ಕಿರು-ಉದ್ಯಮಿಗಳಿಗೆ ಗಮನಾರ್ಹ ಉದ್ಯೋಗವನ್ನು ಒದಗಿಸುತ್ತದೆ.
- ಅಗರಬತ್ತಿಗಳ ರಫ್ತು ದಕ್ಷಿಣ ಏಷ್ಯಾಕ್ಕೆ ಮಾತ್ರ ಹೆಚ್ಚಾಗಿ ಸೀಮಿತವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಲ್ಲ?
- 1 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: C
20). ಭಾರತೀಯ ಮಾನದಂಡಗಳ ಬ್ಯೂರೋಗೆ (BIS) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಬಿಐಎಸ್ (BIS) ಸಂಸತ್ತಿನ ಕಾಯ್ದೆಯಡಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ .
- ಭಾರತದಲ್ಲಿ ಸ್ವಯಂಪ್ರೇರಿತ ಪ್ರಮಾಣೀಕರಣ ಯೋಜನೆಗಳಿಗೆ ಮಾತ್ರ ಬಿಐಎಸ್ ಜವಾಬ್ದಾರವಾಗಿದೆ.
- ಚಿನ್ನದ ಆಭರಣಗಳ ಹಾಲ್ ಮಾರ್ಕಿಂಗ್ ಅನ್ನು ಬಿಐಎಸ್ ನಿರ್ವಹಿಸುತ್ತದೆ.
- ಕೆಲವು ಭಾರತೀಯ ಮಾನದಂಡಗಳನ್ನು ಕಡ್ಡಾಯಗೊಳಿಸುವ ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಬಿಐಎಸ್ ಹೊರಡಿಸಬಹುದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
21). ಪಿನಾಕ ದೀರ್ಘ ಶ್ರೇಣಿಯ ಮಾರ್ಗದರ್ಶಿ ರಾಕೆಟ್ (LRGR-120) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅಸ್ತಿತ್ವದಲ್ಲಿರುವ ಪಿನಾಕ ವ್ಯವಸ್ಥೆಯ ವ್ಯಾಪ್ತಿ ಸಾಮರ್ಥ್ಯವನ್ನು ವಿಸ್ತರಿಸಲು ಇದನ್ನು ನಿಖರ-ಮಾರ್ಗದರ್ಶಿ ಯುದ್ಧಸಾಮಗ್ರಿಯಾಗಿ ಅಭಿವೃದ್ಧಿಪಡಿಸಲಾಗಿದೆ.
- ಮಾರ್ಗದರ್ಶನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಕೇವಲ ಪ್ರಚೋದಕ ದ್ರವ್ಯರಾಶಿಯನ್ನು ಹೆಚ್ಚಿಸುವ ಮೂಲಕ ಇದರ ಶ್ರೇಣಿಯ ವಿಸ್ತರಣೆಯನ್ನು ಸಾಧಿಸಲಾಗಿದೆ.
- ಈ ರಾಕೆಟ್ ಅನ್ನು ಪ್ರಮುಖವಾಗಿ ಭಾರತೀಯ ಸೇನೆಯ ಪಿನಾಕ ಪಿನಾಕಾ ಬಹು-ನಾಳ ಉಡಾವಣಾ ರಾಕೆಟ್ ವ್ಯವಸ್ಥೆ’ಯೊಂದಿಗೆ ಬಳಸಲು ಉದ್ದೇಶಿಸಲಾಗಿದೆ.
- ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಎರಡು ಮಾತ್ರ
- ಮೂರು ಮಾತ್ರ
- ಒಂದು ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: B
22). ‘ನರಸಾಪುರ ಜಾಲಿ (ಲೇಸ್) ಕಸೂತಿ ಕರಕುಶಲತೆ’ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಸ್ಥಾನ ಕಲೆಯಾಗಿ ಹುಟ್ಟಿಕೊಂಡಿತು.
- ಇದನ್ನು ಪ್ರಾಥಮಿಕವಾಗಿ ಉತ್ತಮವಾದ ಹತ್ತಿ ದಾರವನ್ನು ಬಳಸಿಕೊಂಡು ಕ್ರೋಶ ತಂತ್ರಗಳ ಮೂಲಕ ತಯಾರಿಸಲಾಗುತ್ತದೆ.
- ಈ ಕರಕುಶಲತೆಯಲ್ಲಿ ತೊಡಗಿರುವ ಬಹುಪಾಲು ಕುಶಲಕರ್ಮಿಗಳು ಮನೆಯಿಂದಲೇ ಕೆಲಸ ಮಾಡುವ ಮಹಿಳೆಯರಾಗಿದ್ದಾರೆ.
- ಇದು ಭೌಗೋಳಿಕ ಸೂಚ್ಯಂಕ (GI) ಪದ್ಧತಿ ಮತ್ತು ಒಡಿಒಪಿ (ಒಂದು ಜಿಲ್ಲೆ, ಒಂದು ಉತ್ಪನ್ನ) ಉಪಕ್ರಮದ ಅಡಿಯಲ್ಲಿ ಗುರುತಿಸಲ್ಪಟ್ಟಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ: D
23). ‘ಐಎನ್‌ಎಸ್ ವಾಗ್ಶೀರ್’ ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ‘ಪ್ರಾಜೆಕ್ಟ್ 75’ ರ ಅಡಿಯಲ್ಲಿ ನಿರ್ಮಿಸಲಾದ ಕೊನೆಯ ಜಲಾಂತರ್ಗಾಮಿ ನೌಕೆಯಾಗಿದೆ.
- ಇದು ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ನೌಕೆಯಾಗಿದೆ.
- ಇದನ್ನು ಫ್ರಾನ್ಸ್‌ನಿಂದ ತಂತ್ರಜ್ಞಾನ ಹಸ್ತಾಂತರದ ಮೂಲಕ ನಿರ್ಮಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 3 ಮಾತ್ರ
- 1 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: A
24). ಯುರೋಪಿಯನ್ ಆರ್ಥಿಕ ಮತ್ತು ಹಣಕಾಸು ಒಕ್ಕೂಟಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇಎಂಯು (EMU) ಅನ್ನು ಅಧಿಕೃತವಾಗಿ ಮಾಸ್ಟ್ರಿಚ್ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು.
- ಎಲ್ಲಾ ಇಯು (EU) ಸದಸ್ಯ ರಾಷ್ಟ್ರಗಳು, ಒಕ್ಕೂಟಕ್ಕೆ ಸೇರಿದ ತಕ್ಷಣವೇ ‘ಯುರೋ’ ಅನ್ನು ಅಳವಡಿಸಿಕೊಳ್ಳುವುದು ಕಾನೂನುಬದ್ಧವಾಗಿ ಅಗತ್ಯವಿದೆ.
- ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ECB), ‘ಇಯು’ವಿನ ಎಲ್ಲಾ ಸದಸ್ಯರಿಗೆ ಹಣಕಾಸು ನೀತಿಯನ್ನು ನಿರ್ವಹಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 3 ಮಾತ್ರ
- 1 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: C
25). ‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯನ್ನು ರಾಷ್ಟ್ರೀಯ ಕ್ರೀಡಾ ಆಡಳಿತ ಮಂಡಳಿಗಳಾಗಿ ಸ್ಥಾಪಿಸಲು ಅವಕಾಶ ನೀಡುತ್ತದೆ.
- ಅಂತರರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಸಂಯೋಜನೆಯು, ಭಾರತದಲ್ಲಿ ಅವುಗಳಿಗೆ ಸ್ವಯಂಚಾಲಿತವಾಗಿ ಕಾನೂನು ಮಾನ್ಯತೆಯನ್ನು ನೀಡುತ್ತದೆ.
- ರಾಷ್ಟ್ರೀಯ ಕ್ರೀಡಾ ಆಡಳಿತ ಮಂಡಳಿಗಳ ಮಾನ್ಯತೆಯ ಅಧಿಕಾರವು ಈ ಕಾಯ್ದೆಯಡಿ ರಚಿಸಲಾದ ರಾಷ್ಟ್ರೀಯ ಕ್ರೀಡಾ ಮಂಡಳಿಗೆ ನೀಡಲಾಗಿದೆ.
- ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯನ್ನು ರಚಿಸಲು ಈ ಕಾಯ್ದೆಯು ಒದಗಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 3 ಮತ್ತು 4
ಉತ್ತರ: D
26). ಗಂಗಾ ನೀರು ಹಂಚಿಕೆ ಒಪ್ಪಂದ, 1996 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ತೀಸ್ತಾ ಬ್ಯಾರೇಜ್‌ನಲ್ಲಿ ಗಂಗಾ ನದಿ ನೀರನ್ನು ಹಂಚಿಕೊಳ್ಳುವಿಕೆಯನ್ನು ನಿರ್ವಹಿಸಲು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ಹೂಳನ್ನು ಹೊರಹಾಕಲು ಮತ್ತು ಕೋಲ್ಕತ್ತಾ ಬಂದರಿನ ನೌಕಾಯಾನ ಅರ್ಹತೆಯನ್ನು ಸುಧಾರಿಸಲು ಹೂಗ್ಲಿ ನದಿಗೆ ನೀರನ್ನು ತಿರುಗಿಸುವ ಗುರಿಯನ್ನು ಇದು ಹೊಂದಿದೆ.
- ಇದು ಕೃಷಿ ಮತ್ತು ಮೀನುಗಾರಿಕೆಗೆ ಹಾನಿ ಮಾಡುತ್ತದೆ, ನದಿ ನೌಕಾಯಾನಕ್ಕೆ ಅಡ್ಡಿಪಡಿಸುತ್ತದೆ, ಕರಾವಳಿ ಪ್ರದೇಶಗಳಲ್ಲಿ ಉಪ್ಪಿನಂಶದ ನುಗ್ಗುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಸುಂದರಬನ್ಸ್ ಪರಿಸರ ವ್ಯವಸ್ಥೆಗೆ ಬೆದರಿಕೆ ಹಾಕುತ್ತದೆ ಎಂದು ಬಾಂಗ್ಲಾದೇಶ ವಾದಿಸಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಲ್ಲ?
- ಒಂದು ಹೇಳಿಕೆ ಮಾತ್ರ
- ಎರಡು ಹೇಳಿಕೆಗಳು ಮಾತ್ರ
- ಮೂರೂ ಹೇಳಿಕೆಗಳು
- ಮೂರೂ ಹೇಳಿಕೆಗಳು ಸರಿಯಾಗಿವೆ
ಉತ್ತರ: A
27). ಗಂಗಾ ನದಿಯ ಉಪನದಿಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕೋಶಿ ನದಿಯು, ಗಂಡಕ್ ನದಿಯ ಸಂಗಮದ ನಂತರದ ಪ್ರವಾಹದ ಕೆಳಭಾಗದಲ್ಲಿ ಗಂಗಾ ನದಿಯನ್ನು ಸೇರುತ್ತದೆ.
- ದಾಮೋದರ್ ನದಿಯು ಅಂತಿಮವಾಗಿ ಹೂಗ್ಲಿ ಕವಲು ನದಿಯ ಮೂಲಕ ಗಂಗಾ ನದಿ ವ್ಯವಸ್ಥೆಯನ್ನು ಸೇರುತ್ತದೆ.
- ಮಹಾನಂದಾ ನದಿಯು ಗಂಗಾ ನದಿಯ ಅತ್ಯಂತ ಪೂರ್ವದ ಪ್ರಮುಖ ಉಪನದಿಯಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಒಂದು ಮಾತ್ರ
- ಎರಡು ಮಾತ್ರ
- ಮೂರೂ ಹೇಳಿಕೆಗಳು
- ಯಾವುದೂ ಅಲ್ಲ
ಉತ್ತರ: C
28). ಸಂಗೀತ ಕಲಾನಿಧಿ ಪ್ರಶಸ್ತಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಮದ್ರಾಸ್ ಸಂಗೀತ ಅಕಾಡೆಮಿಯು 1942ರಲ್ಲಿ ಸ್ಥಾಪಿಸಿತು ಮತ್ತು ಇದು ಕರ್ನಾಟಿಕ್ ಸಂಗೀತದ ಹಾಡುಗಾರರಿಗೆ ಮಾತ್ರ ಪ್ರತ್ಯೇಕವಾಗಿ ನೀಡಲ್ಪಡುತ್ತದೆ.
- ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ “ಕರ್ನಾಟಿಕ್ ಸಂಗೀತದ ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುತ್ತದೆ. ಇದು ಚಿನ್ನದ ಪದಕ ಮತ್ತು ಬಿರುದು ಪತ್ರವನ್ನು ಒಳಗೊಂಡಿರುತ್ತದೆ.
- 2005 ರಿಂದ, ಎಲ್ಲಾ ಸಂಗೀತ ಕಲಾನಿಧಿ ಪ್ರಶಸ್ತಿ ಪುರಸ್ಕೃತರು ‘ದಿ ಹಿಂದೂ’ ಸಂಸ್ಥೆಯು ಸ್ಥಾಪಿಸಿದ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
- 2025 ರ ಪ್ರಶಸ್ತಿಯನ್ನು ಪ್ರಖ್ಯಾತ ಕರ್ನಾಟಿಕ್ ಪಿಟೀಲು ವಾದಕ “ಆರ್.ಕೆ. ಶ್ರೀರಾಮ್‌ಕುಮಾರ್” ಅವರಿಗೆ ನೀಡಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ: D
29). ‘ಅಲೋ ಪ್ರಭಾತ್: ಡ್ಯಾನ್ಸ್ ಆಫ್ ದಿ ಡಾನ್’ ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದಲ್ಲಿ ಕ್ಯಾಲೆಂಡರ್ ವರ್ಷದ ಮೊದಲ ಸೂರ್ಯೋದಯವನ್ನು ಸ್ವಾಗತಿಸಲು ಆಯೋಜಿಸಲಾದ ಸಾಂಸ್ಕೃತಿಕ ಪ್ರದರ್ಶನವಾಗಿದೆ. ಇದನ್ನು ‘ಮೇಯೋರ್’ ಮತ್ತು ‘ಮಿಶ್ಮಿ’ ಸಮುದಾಯಗಳು ಆಚರಿಸುತ್ತವೆ.
- ಇದನ್ನು ಅರುಣಾಚಲ ಪ್ರದೇಶದಲ್ಲಿರುವ ಭಾರತದ ಅತ್ಯಂತ ಪೂರ್ವದ ಜನವಸತಿ ಗ್ರಾಮವಾದ ‘ಡಾಂಗ್’ ನಲ್ಲಿ ಆಚರಿಸಲಾಗುತ್ತದೆ.
- ಸಾಂಪ್ರದಾಯಿಕ ಪಠಣಗಳು, ಹಾಡುಗಳು ಮತ್ತು ದೇಶೀಯ ಲಯಗಳು ಈ ಆಚರಣೆಯ ಪ್ರಮುಖ ಭಾಗವಾಗಿವೆ.
- ಈ ಪ್ರದರ್ಶನವು ಆ ಪ್ರದೇಶದ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಲ್ಲ?
- ಎರಡು ಹೇಳಿಕೆಗಳು ಮಾತ್ರ
- ಮೂರು ಹೇಳಿಕೆಗಳು ಮಾತ್ರ
- ಒಂದು ಹೇಳಿಕೆ ಮಾತ್ರ
- ನಾಲ್ಕೂ ಹೇಳಿಕೆಗಳು ಸರಿಯಾಗಿವೆ
ಉತ್ತರ: D
30). ವೆನೆಜುವೆಲಾದ ತೈಲ ವಲಯ ಮತ್ತು ಭಾರತದ ಮೇಲೆ ಅದರ ಪರಿಣಾಮಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವೆನೆಜುವೆಲಾ ಒಪೆಕ್ (OPEC) ನ ಸದಸ್ಯ ರಾಷ್ಟ್ರವಾಗಿದೆ ಮತ್ತು ಇದು ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ.
- ವೆನೆಜುವೆಲಾದಿಂದ ಭಾರತದ ತೈಲ ಆಮದು, ಅದರ ಒಟ್ಟು ತೈಲ ಆಮದಿನ ಕನಿಷ್ಠ ಪಾಲನ್ನು ಹೊಂದಿದೆ.
- ವೆನೆಜುವೆಲಾದಲ್ಲಿನ ಯಾವುದೇ ಅಸ್ಥಿರತೆಯು ಜಾಗತಿಕ ತೈಲ ಬೆಲೆಗಳ ಮೇಲೆ ಪರೋಕ್ಷ ಪರಿಣಾಮಗಳನ್ನು ಬೀರಬಹುದು ಮತ್ತು ಇದು ಭಾರತದ ಮೇಲೆ ಪರಿಣಾಮ ಬೀರಬಹುದು.
- ವೆನೆಜುವೆಲಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
31). ಸೋಮನಾಥ ದೇವಾಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದ ಪ್ರಕಾರ, ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಇದನ್ನು ಮೊದಲನೆಯದು ಎಂದು ಪರಿಗಣಿಸಲಾಗಿದೆ.
- ಇದು ಇಂದಿನ ಗುಜರಾತ್‌ನ ಕರಾವಳಿಯಲ್ಲಿರುವ ಪ್ರಭಾಸ ಪಾಟನ್‌ನಲ್ಲಿದೆ ಮತ್ತು ಐತಿಹಾಸಿಕವಾಗಿ ಕಡಲ ವ್ಯಾಪಾರ ಹಾಗೂ ಸಾಂಸ್ಕೃತಿಕ ವಿನಿಮಯಗಳಿಂದ ಪ್ರಯೋಜನ ಪಡೆದಿದೆ.
- ಸಾ.ಶ 1026 ರಲ್ಲಿ ಘಜ್ನಿ ಮಹಮದ್, ಸೋಮನಾಥ ದೇವಾಲಯದ ಮೇಲೆ ಮೊದಲ ದಾಳಿಯನ್ನು ನಡೆಸಿದನು.
- ಧಾರ್ಮಿಕ ತೀರ್ಥಯಾತ್ರೆ ಮತ್ತು ವ್ಯಾಪಾರ ಜಾಲಗಳೆರಡರೊಂದಿಗಿನ ಒಡನಾಟದಿಂದಾಗಿ ಸೋಮನಾಥದ ಪ್ರಾಮುಖ್ಯತೆಯು ಹೆಚ್ಚಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
- ಒಂದು ಹೇಳಿಕೆ ಮಾತ್ರ
- ಎರಡು ಹೇಳಿಕೆಗಳು ಮಾತ್ರ
- ಮೂರು ಹೇಳಿಕೆಗಳು ಮಾತ್ರ
- ನಾಲ್ಕೂ ಹೇಳಿಕೆಗಳು
ಉತ್ತರ: D
32). ಭಾರತದಲ್ಲಿನ ‘ಅಧಿಸೂಚಿಸಬೇಕಾದ ರೋಗಗಳಿಗೆ’ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅಧಿಸೂಚಿಸಬೇಕಾದ ರೋಗವೆಂದರೆ, ಕಾನೂನಿನ ಪ್ರಕಾರ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕಾದ ರೋಗವಾಗಿದೆ.
- ಒಂದು ರೋಗವನ್ನು ‘ಅಧಿಸೂಚಿಸಬೇಕಾದ ರೋಗ’ ಎಂದು ಘೋಷಿಸುವುದರಿಂದ ದೇಶಾದ್ಯಂತ ಅದರ ಚಿಕಿತ್ಸೆಯು ಸ್ವಯಂಚಾಲಿತವಾಗಿ ಉಚಿತವಾಗುತ್ತದೆ.
- ಕಡ್ಡಾಯ ಅಧಿಸೂಚನೆಯು ನೈಜ ಸಮಯದಲ್ಲಿ ರೋಗದ ಕಣ್ಗಾವಲು ಮತ್ತು ಆರಂಭಿಕ ಹರಡುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
- ರೋಗಗಳನ್ನು ಅಧಿಸೂಚಿಸಬೇಕಾದ ರೋಗಗಳೆಂದು ಘೋಷಿಸುವ ಅಧಿಕಾರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
33). ಭಾರತದ ಅಕ್ಕಿ ಉತ್ಪಾದನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಚೀನಾವು ಭಾರತವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ.
- ಚೀನಾಕ್ಕಿಂತ ಹೆಚ್ಚಿನ ಪ್ರತಿ ಹೆಕ್ಟೇರ್ ಉತ್ಪಾದಕತೆಯಿಂದಾಗಿ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿದೆ.
- ಭತ್ತವು ಪ್ರಧಾನವಾಗಿ ನೈಋತ್ಯ ಮುಂಗಾರು ಋತುವಿನಲ್ಲಿ ಬೆಳೆಯುವ ಖಾರಿಫ್ ಬೆಳೆಯಾಗಿದೆ.
- ಭಾರತದಲ್ಲಿ ಸಾಗುವಳಿ ಮಾಡುವ ಪ್ರದೇಶದ ವಿಸ್ತೀರ್ಣದ ಆಧಾರದಲ್ಲಿ, ಆಹಾರ ಧಾನ್ಯ ಬೆಳೆಗಳಲ್ಲಿ ಭತ್ತವು ಅತಿದೊಡ್ಡ ಪಾಲನ್ನು ಆಕ್ರಮಿಸಿದೆ. ಉತ್ತರ ಪ್ರದೇಶವು ಭಾರತದಲ್ಲಿ ಅಕ್ಕಿಯ ಅತಿದೊಡ್ಡ ಉತ್ಪಾದಕ ರಾಜ್ಯವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 4 ಮಾತ್ರ
- 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
ಉತ್ತರ: B
34) DRR 100 (ಕಮಲಾ) ಮತ್ತು ಪೂಸಾ DST ಇವು ಯಾವುದಕ್ಕೆ ಉದಾಹರಣೆಗಳಾಗಿವೆ:
- ಸಾಂಪ್ರದಾಯಿಕ ಸ್ಥಳೀಯ ಅಕ್ಕಿ ತಳಿಗಳು
- ಹೈಬ್ರಿಡ್ ಅಕ್ಕಿ ತಳಿಗಳು
- ಸುಧಾರಿತ ಒತ್ತಡ-ಸಹಿಷ್ಣು ಅಕ್ಕಿ ತಳಿಗಳು
- ಕುಲಾಂತರಿ (ತಳೀಯವಾಗಿ ಮಾರ್ಪಡಿಸಿದ) ಅಕ್ಕಿ ತಳಿಗಳು
ಉತ್ತರ: C
35). ‘ಸಂಪನ್ನ’ (SAMPANN) ವ್ಯವಸ್ಥೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗೆ ಒಂದು ಸಮಗ್ರ ಆನ್‌ಲೈನ್ ಪಿಂಚಣಿ ನಿರ್ವಹಣಾ ವ್ಯವಸ್ಥೆಯಾಗಿದೆ.
- ಇದು ರಾಜ್ಯ ಖಜಾನೆಗಳು ಮತ್ತು ಅಂಚೆ ಕಚೇರಿಗಳ ಮೂಲಕ ಪಿಂಚಣಿ ವಿತರಣೆಯನ್ನು ಸುಗಮಗೊಳಿಸುತ್ತದೆ.
- ಈ ವ್ಯವಸ್ಥೆಯು ನಿವೃತ್ತರಿಗೆ ಡಿಜಿಟಲ್ ಪ್ರೊಫೈಲ್ ನಿರ್ವಹಣೆ ಮತ್ತು ವಹಿವಾಟು ದಾಖಲೆಗಳನ್ನು ಒದಗಿಸುತ್ತದೆ.
- ಸಂವಹನ ಸಚಿವಾಲಯದ ಅಡಿಯಲ್ಲಿನ ‘ಸಂವಹನ ಲೆಕ್ಕಪತ್ರಗಳ ಮಹಾನಿಯಂತ್ರಕರು, ದೂರಸಂಪರ್ಕ ಇಲಾಖೆ’ ಇದರ ಅನುಷ್ಠಾನ ಸಂಸ್ಥೆಯಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
36). ಹಂಟಿಂಗ್‌ಟನ್ ಕಾಯಿಲೆಗೆ (HD) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಹಂಟಿಂಗ್‌ಟನ್ ಕಾಯಿಲೆಯು (HD) ಚಲನಾ, ಅರಿವಿನ ಮತ್ತು ಮಾನಸಿಕ ಕಾರ್ಯಗಳ ಮೇಲೆ ಪರಿಣಾಮ ಬೀರುವ ಅನುವಂಶೀಯ ನರಕ್ಷೀಣತೆ ಅಸ್ವಸ್ಥತೆಯಾಗಿದೆ.
- ಇದು ‘ಆಟೋಸೋಮಲ್ ಡಾಮಿನೆಂಟ್’ (ದೈಹಿಕ ಪ್ರಬಲ) ಆನುವಂಶಿಕ ಮಾದರಿಯನ್ನು ಅನುಸರಿಸುತ್ತದೆ. ರೋಗಲಕ್ಷಣಗಳು ಸಾಮಾನ್ಯವಾಗಿ ಬಾಲ್ಯದಲ್ಲಿ ಪ್ರಾರಂಭವಾಗುತ್ತವೆ ಮತ್ತು 5-10 ವರ್ಷಗಳಲ್ಲಿ ವೇಗವಾಗಿ ಉಲ್ಬಣಗೊಳ್ಳುತ್ತವೆ.
- ರಕ್ತಸಂಬಂಧಿ ವಿವಾಹಗಳು ರೋಗ ಪ್ರಸರಣದ ಸಂಭವನೀಯತೆಯನ್ನು 75% ವರೆಗೆ ಹೆಚ್ಚಿಸಬಹುದು.
- ಹಂಟಿಂಗ್‌ಟನ್ ಕಾಯಿಲೆಯನ್ನು ರಾಷ್ಟ್ರೀಯ ಅಪರೂಪದ ಕಾಯಿಲೆಗಳ ನೀತಿ-2021 ರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
37). ಪ್ರತಿಪಾದನೆ (A): ಪಾವತಿಗಳ ನಿಯಂತ್ರಣ ಮಂಡಳಿಯು (PRB) ವಾಣಿಜ್ಯ ಬ್ಯಾಂಕುಗಳ ಬಡ್ಡಿ ದರಗಳು ಮತ್ತು ಸಾಲ ನೀಡುವ ನೀತಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದೆ.
ಕಾರಣ (R): ಪಾವತಿಗಳ ನಿಯಂತ್ರಣ ಮಂಡಳಿಯು (PRB) ಭಾರತದಲ್ಲಿ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಆರ್‌ಬಿಐ (RBI) ಚೌಕಟ್ಟಿನ ಭಾಗವಾಗಿದೆ.
ಸರಿಯಾದ ಆಯ್ಕೆಯನ್ನು ಆರಿಸಿ:
- A ಮತ್ತು R ಎರಡೂ ಸರಿಯಾಗಿವೆ ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ
- A ಮತ್ತು R ಎರಡೂ ಸರಿಯಾಗಿವೆ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ
- A ಸರಿಯಾಗಿದೆ, ಆದರೆ R ತಪ್ಪಾಗಿದೆ
- A ತಪ್ಪಾಗಿದೆ, ಆದರೆ R ಸರಿಯಾಗಿದೆ
ಉತ್ತರ: D
38). ‘ತಾಜ್ ಟ್ರೆಪಿಜಿಯಂ ವಲಯ’ಕ್ಕೆ (TTZ) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ತಾಜ್ ಮಹಲ್, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಯನ್ನು ರಕ್ಷಿಸಲು ರಚಿಸಲಾದ ಸುಮಾರು 10,400 ಚದರ ಕಿ.ಮೀ. ವಿಸ್ತೀರ್ಣದ ಟ್ರೆಪಿಜಿಯಂ ಆಕಾರದ ಪ್ರದೇಶವಾಗಿದೆ.
- ಕೈಗಾರಿಕಾ ಮಾಲಿನ್ಯವನ್ನು ನಿಗ್ರಹಿಸಲು 1996 ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಇದನ್ನು ಸ್ಥಾಪಿಸಲಾಯಿತು.
- ಸರ್ವೋಚ್ಚ ನ್ಯಾಯಾಲಯ, ಟಿಟಿಝಡ್ (TTZ) ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಗೆ ಕಲ್ಲಿದ್ದಲು ಮತ್ತು ಕೋಕ್‌ನಿಂದ ನೈಸರ್ಗಿಕ ಅನಿಲದಂತಹ ಸ್ವಚ್ಛ ಇಂಧನಗಳಿಗೆ ಬದಲಾಗಲು ನಿರ್ದೇಶನ ನೀಡಿತು.
- ಟಿಟಿಝಡ್ (TTZ) ವ್ಯಾಪ್ತಿಯಲ್ಲಿನ ಎಲ್ಲಾ ಕೈಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: A
39). ವುಲ್ಫ್ ಸೂಪರ್‌ಮೂನ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಜನವರಿಯಲ್ಲಿ ಉಂಟಾಗುವ ಹುಣ್ಣಿಮೆಯು, ಚಂದ್ರನು ತನ್ನ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪಕ್ಕೆ ಬರುವುದರೊಂದಿಗೆ ಏಕಕಾಲದಲ್ಲಿ ಸಂಭವಿಸಿದಾಗ ಇದು ಉಂಟಾಗುತ್ತದೆ.
- ವುಲ್ಫ್ ಸೂಪರ್‌ಮೂನ್ ಸಮಯದಲ್ಲಿ, ಚಂದ್ರನ ನಿಜವಾದ ಭೌತಿಕ ಗಾತ್ರವು ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ.
- ಸೂಪರ್‌ಮೂನ್‌ನ ಹೆಚ್ಚಿದ ಹೊಳಪು ಭೂಮಿಯಿಂದ ಅದರ ಕಡಿಮೆ ಅಂತರದ ಕಾರಣದಿಂದಾಗಿರುತ್ತದೆ.
- ‘ಮೂನ್ ಇಲ್ಯೂಷನ್’ (ಚಂದ್ರನ ದೃಗ್ಭ್ರಮೆ) ಎಂಬುದು ಮಾನವನ ದೃಶ್ಯ ಸಂಸ್ಕರಣೆಗೆ ಸಂಬಂಧಿಸಿದ ಗ್ರಹಿಕೆಯ ವಿದ್ಯಮಾನವಾಗಿದೆ. ಇದು ಚಂದ್ರನ ಸ್ಪಷ್ಟ ಗಾತ್ರದ ಮೇಲೆ ಪರಿಣಾಮ ಬೀರುತ್ತದೆ ಆದರೆ ಅದರ ಹೊಳಪಿನ ಮೇಲಲ್ಲ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ: C
40). ‘ಸೂರ್ಯಾಸ್ತ್ರ’ ರಾಕೆಟ್ ಉಡಾವಣಾ ವ್ಯವಸ್ಥೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ಸಾರ್ವತ್ರಿಕ ಬಹು ಸಾಮರ್ಥ್ಯ ರಾಕೆಟ್ ಉಡಾವಣಾ ವ್ಯವಸ್ಥೆಯಾಗಿದೆ.
- ಇದು 300 ಕಿ.ಮೀ. ವ್ಯಾಪ್ತಿಯವರೆಗೆ ನಿಖರವಾದ ಮೇಲ್ಮೈಯಿಂದ ಮೇಲ್ಮೈ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
- ಈ ವ್ಯವಸ್ಥೆಯನ್ನು ಯಾವುದೇ ವಿದೇಶಿ ಸಹಯೋಗವಿಲ್ಲದೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ.
- ಇದನ್ನು ಭಾರತೀಯ ಸೇನೆಯು ₹293 ಕೋಟಿ ಮೌಲ್ಯದ ಒಪ್ಪಂದದ ಅಡಿಯಲ್ಲಿ ಸಂಗ್ರಹಿಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
41). ‘ಪಂಖುಡಿ’ ಪೋರ್ಟಲ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮತ್ತು ಪಾಲುದಾರಿಕೆ ಸೌಲಭ್ಯಕ್ಕಾಗಿ ಇರುವ ಒಂದು ಸಮಗ್ರ ಡಿಜಿಟಲ್ ಪೋರ್ಟಲ್ ಆಗಿದೆ.
- ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿದೆ.
- ಇದು ವ್ಯಕ್ತಿಗಳು, ಅನಿವಾಸಿ ಭಾರತೀಯರು (NRIs), ಎನ್‌ಜಿಒಗಳು (NGOs), ಕಾರ್ಪೊರೇಟ್‌ಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಸಂಪರ್ಕಿಸುವ ಏಕ-ಗವಾಕ್ಷಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
- ಇದು ಪ್ರತ್ಯೇಕವಾಗಿ ಖಾಸಗಿ ವಲಯದ CSR ದೇಣಿಗೆದಾರರಿಗೆ ಮಾತ್ರ ಉದ್ದೇಶಿಸಲಾಗಿದೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ಹೊರತುಪಡಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2, 3 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
42). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಮಿಷನ್
|
ಪ್ರಮುಖ ಉದ್ದೇಶ
|
ಪ್ರಾಥಮಿಕ ಫಲಾನುಭವಿಗಳ ಗುಂಪು
|
|
a. ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0
|
1. ಅಪೌಷ್ಟಿಕತೆಯನ್ನು ಎದುರಿಸುವುದು ಮತ್ತು ಬಾಲ್ಯದ ಆರಂಭಿಕ ಆರೈಕೆ ಅಭಿವೃದ್ಧಿ.
|
i. ಮಕ್ಕಳು (0–6 ವರ್ಷ), ಹದಿಹರೆಯದ ಹುಡುಗಿಯರು, ಗರ್ಭಿಣಿಯರು ಮತ್ತು ಬಾಣಂತಿಯರು.
|
|
b. ಮಿಷನ್ ವಾತ್ಸಲ್ಯ
|
2. ಮಕ್ಕಳ ರಕ್ಷಣೆ ಮತ್ತು ಕಲ್ಯಾಣ.
|
ii. ಕಷ್ಟಕರ ಸಂದರ್ಭಗಳಲ್ಲಿರುವ ಮಕ್ಕಳು
|
|
c. ಸಂಬಲ್
|
3. ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ.
|
iii. ದೌರ್ಜನ್ಯ ಮತ್ತು ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರು.
|
|
d. ಸಾಮರ್ಥ್ಯ
|
4. ಮಹಿಳಾ ಸಬಲೀಕರಣ.
|
iv. ಜೀವನ ಚಕ್ರದಾದ್ಯಂತ ಇರುವ ವಯಸ್ಕ ಮಹಿಳೆಯರು.
|
ಆಯ್ಕೆಗಳಿಂದ ಸರಿಯಾದ ಜೋಡಿಗಳನ್ನು ಆರಿಸಿ:
- a–1–i, b–2–ii, c–3–iii, d-4-iv
- a–2–ii, b–1–i, c–3–iii, d-4-iv
- a–3–iii, b–2–i, c–1–ii, d-4-iv
- a–1–iii, b–3–ii, c–2–i, d-4-iv
ಉತ್ತರ: A
43). ‘ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ’ ಇವುಗಳಲ್ಲಿ ಯಾವುದನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದೆ?
- ರಷ್ಯಾದ ದೇಶೀಯ ತೈಲ ಕಂಪನಿಗಳ ಮೇಲೆ ನೇರವಾಗಿ ನಿರ್ಬಂಧಗಳನ್ನು ವಿಧಿಸುವುದು.
- ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಖರೀದಿಸುವ ಭಾರತ, ಚೀನಾ ಮತ್ತು ಬ್ರೆಜಿಲ್ ಸೇರಿದಂತೆ ಇತರ ದೇಶಗಳ ಮೇಲೆ ಅತಿ ಹೆಚ್ಚು ಸುಂಕಗಳನ್ನು ವಿಧಿಸಲು ಯುಎಸ್ (US) ಅಧ್ಯಕ್ಷರಿಗೆ ಅಧಿಕಾರ ನೀಡುವುದು.
- ಅಮೆರಿಕಕ್ಕೆ ರಷ್ಯಾದ ತೈಲದ ಎಲ್ಲಾ ಆಮದುಗಳನ್ನು ನಿಷೇಧಿಸುವುದು.
- ವಿಶ್ವಸಂಸ್ಥೆಯ ಅಡಿಯಲ್ಲಿ ಹೊಸ ಬಹುಪಕ್ಷೀಯ ನಿರ್ಬಂಧಗಳ ಆಡಳಿತವನ್ನು ರಚಿಸುವುದು.
ಉತ್ತರ: B
44). ‘ಸ್ಪೈನಾ ಬೈಫಿಡಾ’ ವನ್ನು ಈ ಕೆಳಗಿನ ಯಾವುದರ ಮೂಲಕ ಅತ್ಯುತ್ತಮವಾಗಿ ವಿವರಿಸಬಹುದು:
- ಬೆನ್ನುಹುರಿಯ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗ.
- ನರ ಕೊಳವೆ ಸರಿಯಾಗಿ ಮುಚ್ಚದಿರುವುದರಿಂದ ಉಂಟಾಗುವ ಜನ್ಮಜಾತ ದೋಷ.
- ಬಾಹ್ಯ ನರಗಳ ಕ್ಷೀಣಗೊಳ್ಳುವ ಅಸ್ವಸ್ಥತೆ.
- ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುವ ಸ್ವಯಂ ನಿರೋಧಕ ಕಾಯಿಲೆ.
ಉತ್ತರ: B
45). ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಿಒಪಿ-21 (COP-21) ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿ ಐಎಸ್‌ಎ (ISA) ಅನ್ನು ಪ್ರಾರಂಭಿಸಲಾಯಿತು.
- ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಸಂಪೂರ್ಣವಾಗಿ ನೆಲೆಗೊಂಡಿರುವ ದೇಶಗಳು ಮಾತ್ರ ಐಎಸ್‌ಎ ಸದಸ್ಯತ್ವಕ್ಕೆ ಅರ್ಹವಾಗಿವೆ.
- ಐಎಸ್‌ಎ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿದ ಮತ್ತು ಅನುಮೋದಿಸಿದ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ.
- ಐಎಸ್‌ಎಯ ಪ್ರಧಾನ ಕಚೇರಿಯು ಗುರುಗ್ರಾಮ್‌ನ ರಾಷ್ಟ್ರೀಯ ಸೌರ ಶಕ್ತಿ ಸಂಸ್ಥೆಯ ಆವರಣದಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
46). ಆಲಿವ್ ರಿಡ್ಲಿ ಆಮೆಗಳ ಬಗ್ಗೆ ಆಗಾಗ್ಗೆ ಉಲ್ಲೇಖಿಸಲಾದ “ಅರಿಬಾಡಾ” ಎಂಬ ವಿದ್ಯಮಾನವು ಏನನ್ನು ಸೂಚಿಸುತ್ತದೆ?
- ಆಹಾರ ಮತ್ತು ಸಂತಾನೋತ್ಪತ್ತಿ ನೆಲೆಗಳ ನಡುವಿನ ಋತುಮಾನದ ದೀರ್ಘ-ದೂರದ ವಲಸೆ.
- ಸಾವಿರಾರು ಹೆಣ್ಣು ಆಮೆಗಳು ಒಂದೇ ಕಡಲತೀರದಲ್ಲಿ ಮೊಟ್ಟೆಗಳನ್ನು ಇಡಲು ಏಕಕಾಲದಲ್ಲಿ ಸೇರುವ ಸಾಮೂಹಿಕ ಗೂಡುಕಟ್ಟುವ ಘಟನೆ.
- ಸಮುದ್ರ ಪರಭಕ್ಷಕಗಳನ್ನು ತಪ್ಪಿಸಲು ಮಾಡಿಕೊಂಡಿರುವ ವರ್ತನೆಯ ರೂಪಾಂತರ.
- ಹಿಂದೂ ಮಹಾಸಾಗರದ ದ್ವೀಪ ಕಡಲತೀರಗಳಿಗೆ ಮಾತ್ರ ಸೀಮಿತವಾಗಿರುವ ಗೂಡುಕಟ್ಟುವ ತಂತ್ರ.
ಉತ್ತರ: B
47). ಅಂತರರಾಷ್ಟ್ರೀಯ ಒಪ್ಪಂದಗಳು ಅಥವಾ ಸಂಸ್ಥೆಗಳಿಂದ ಅಮೆರಿಕ ಸಂಯುಕ್ತ ಸಂಸ್ಥಾನ (US) ಹಿಂತೆಗೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ?
- ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (UNFCCC).
- ಹವಾಮಾನ ಬದಲಾವಣೆಯ ಮೇಲಿನ ಅಂತರಸರ್ಕಾರಿ ಸಮಿತಿ (IPCC).
- ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA).
- ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA).
- ವಿಶ್ವ ಹವಾಮಾನ ಸಂಸ್ಥೆ (WMO).
ಮೇಲೆ ನೀಡಿರುವ ಘಟಕಗಳಲ್ಲಿ ಯುಎಸ್ (US) ಹಿಂತೆಗೆದುಕೊಂಡಿರುವುದು ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ಸರಿಯಾಗಿ ನಮೂದಿಸಲಾಗಿದೆ?
- 1, 2, 3 ಮತ್ತು 4 ಮಾತ್ರ
- 1, 3, 4 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- 1, 2, 3, 4 ಮತ್ತು 5
ಉತ್ತರ: A
48). ‘ಡೂಮ್ಸ್‌ಡೇ ಹಿಮನದಿ’ ಅಥವಾ ಥ್ವೈಟ್ಸ್ ಹಿಮನದಿ ಈ ಕೆಳಗಿನ ಯಾವ ಪ್ರದೇಶದಲ್ಲಿದೆ?
- ಪೂರ್ವ ಅಂಟಾರ್ಕ್ಟಿಕ್ ಹಿಮ ಪಟಲ/ಪದರ
- ಗ್ರೀನ್‌ಲ್ಯಾಂಡ್ ಹಿಮ ಪಟಲ/ಪದರ
- ಪಶ್ಚಿಮ ಅಂಟಾರ್ಕ್ಟಿಕ್ ಹಿಮ ಪಟಲ/ಪದರ
- ಆರ್ಕ್ಟಿಕ್ ಮಹಾಸಾಗರ ಜಲಾನಯನ ಪ್ರದೇಶ
ಉತ್ತರ: C
49). ಮಾಧವ್ ಗಾಡ್ಗೀಳ್ ಅವರ ಪರಿಸರ ಸಂಬಂಧಿ ಮಧ್ಯಸ್ಥಿಕೆಗಳು ಭಾರತದಲ್ಲಿ ಈ ಕೆಳಗಿನ ಯಾವುದರೊಂದಿಗೆ ಸರಿಯಾಗಿ ಸಂಬಂಧ ಹೊಂದಿವೆ?
- ನೀಲಗಿರಿಯನ್ನು ಭಾರತದ ಮೊದಲ ಜೀವಗೋಳ ಮೀಸಲು ಎಂದು ಘೋಷಿಸುವುದು.
- ಜೈವಿಕ ವೈವಿಧ್ಯ ಕಾಯ್ದೆ, 2002 ರ ಜಾರಿ.
- ಅರಣ್ಯ ಹಕ್ಕುಗಳ ಕಾಯ್ದೆ, 2006 ರ ಜಾರಿ.
- ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಸ್ಥಾಪನೆ.
ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
50). ನ್ಯಾಟೋ (NATO) ದ ಸಾಮೂಹಿಕ ರಕ್ಷಣೆಯ ತತ್ವಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಉತ್ತರ ಅಟ್ಲಾಂಟಿಕ್ ಒಪ್ಪಂದದ 5 ನೇ ವಿಧಿಯು, ಒಬ್ಬ ನ್ಯಾಟೋ ಸದಸ್ಯನ ಮೇಲಿನ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂಬ ತತ್ವವನ್ನು ಒಳಗೊಂಡಿದೆ.
- ನ್ಯಾಟೋ ಸ್ಥಾಪನೆಯಾದಾಗಿನಿಂದ 5 ನೇ ವಿಧಿಯನ್ನು ಕೇವಲ ಒಮ್ಮೆ ಮಾತ್ರ ಬಳಸಲಾಗಿದೆ.
- ಅಮೆರಿಕದಲ್ಲಿ 2001 ರ ಸೆಪ್ಟೆಂಬರ್ 11 ರಂದು ನಡೆದ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆಯಾಗಿ 5 ನೇ ವಿಧಿಯನ್ನು ಏಕೈಕ ಬಾರಿ ಬಳಸಲಾಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: D
51). ‘ಬಯೋಹ್ಯಾಪಿನೆಸ್’ ಅಥವಾ ‘ಜೈವಿಕ ಸಂತೋಷ’ ಎಂಬುದು ಈ ಕೆಳಗಿನ ಯಾವುದನ್ನು ಅತ್ಯುತ್ತಮವಾಗಿ ವಿವರಿಸುತ್ತದೆ:
- ತೀವ್ರವಾದ ಕೈಗಾರಿಕಾ ಕೃಷಿಯ ಮೂಲಕ ಸಾಧಿಸಿದ ಆರ್ಥಿಕ ಸಮೃದ್ಧಿ.
- ತಾಂತ್ರಿಕ ಪ್ರಗತಿಯಿಂದ ಉಂಟಾಗುವ ಮಾನಸಿಕ ಯೋಗಕ್ಷೇಮ.
- ಮಾನವನ ಆರೋಗ್ಯ, ಪೋಷಣೆ ಮತ್ತು ಜೀವನೋಪಾಯವನ್ನು ಸುಧಾರಿಸಲು ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಬಳಸುವ ಮೂಲಕ ಸಾಧಿಸಿದ ಯೋಗಕ್ಷೇಮ ಮತ್ತು ನೆಮ್ಮದಿಯ ಸ್ಥಿತಿ.
- ಅರಣ್ಯ ಆಧಾರಿತ ಪರಿಸರ ಪ್ರವಾಸೋದ್ಯಮದಿಂದ ಮಾತ್ರ ಪಡೆಯಲಾದ ಸಂತೋಷ.
ಉತ್ತರ: C
52). ಯೂರೋ ಮತ್ತು ಯೂರೋ ವಲಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಯೂರೋವನ್ನು ಮೊದಲ ಬಾರಿಗೆ ಜನವರಿ 1, 2002 ರಂದು 12 ದೇಶಗಳಲ್ಲಿ ಪರಿಚಯಿಸಲಾಯಿತು.
- ಇದು ಐರೋಪ್ಯ ಒಕ್ಕೂಟದ (EU) ಎಲ್ಲಾ 27 ಸದಸ್ಯರಿಗೆ ಏಕೈಕ ಕಾನೂನುಬದ್ಧ ಚಲಾವಣಾ ಹಣವಾಗಿದೆ.
- ಯೂರೋ ವಲಯವು, ಯೂರೋವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವ EU ಸದಸ್ಯರನ್ನು ಮಾತ್ರ ಉಲ್ಲೇಖಿಸುತ್ತದೆ.
- ಬಲ್ಗೇರಿಯಾದ ಸೇರ್ಪಡೆಯೊಂದಿಗೆ, ಯೂರೋ ವಲಯದ ಸದಸ್ಯ ರಾಷ್ಟ್ರಗಳ ಸಂಖ್ಯೆಯು ಇಯು (EU) ನ ಒಟ್ಟು 27 ರಾಷ್ಟ್ರಗಳಲ್ಲಿ 21 ಕ್ಕೆ ಏರಿಕೆಯಾಗಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
53). ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ.
- ಈ ರಾಷ್ಟ್ರೀಯ ಸಂಸ್ಥೆಗಳು ಆಯಾ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಯೋಜನೆಯನ್ನು ಹೊಂದಿರುವುದು ಅಗತ್ಯವಾಗಿದೆ.
- ಎಲ್ಲಾ ಕ್ರೀಡಾ ಒಕ್ಕೂಟಗಳನ್ನು ಕಡ್ಡಾಯವಾಗಿ ರಾಜ್ಯ ಸರ್ಕಾರಗಳ ನಿಯಂತ್ರಣಕ್ಕೆ ತರಬೇಕು ಎಂದು ಈ ಕಾಯ್ದೆಯು ಕಡ್ಡಾಯಗೊಳಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3
ಉತ್ತರ: C
54). ಸಂಗೀತ ಕಲಾನಿಧಿ ಪ್ರಶಸ್ತಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು 1942 ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯು ಸ್ಥಾಪಿಸಿತು ಮತ್ತು ಇದನ್ನು ಕರ್ನಾಟಿಕ್ ಸಂಗೀತದಲ್ಲಿ ಅತ್ಯುನ್ನತ ಮನ್ನಣೆ ಎಂದು ಪರಿಗಣಿಸಲಾಗಿದೆ.
- ಈ ಪ್ರಶಸ್ತಿಯು ಚಿನ್ನದ ಪದಕ, ಬಿರುದು ಪತ್ರ ಮತ್ತು 2005 ರಿಂದ ‘ದಿ ಹಿಂದೂ’ ಸ್ಥಾಪಿಸಿದ ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿಯನ್ನು ಒಳಗೊಂಡಿದೆ.
- ಇದನ್ನು ಕೆಲವೊಮ್ಮೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ “ನೊಬೆಲ್ ಪ್ರಶಸ್ತಿ” ಎಂದು ಕರೆಯಲಾಗುತ್ತದೆ.
- ಇತ್ತೀಚಿನ ಪುರಸ್ಕೃತರು ಪಿಟೀಲು ವಾದಕ ಆರ್.ಕೆ. ಶ್ರೀರಾಮ್‌ಕುಮಾರ್ ಅವರನ್ನು ಒಳಗೊಂಡಿದ್ದಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
55). ಅರುಣಾಚಲ ಪ್ರದೇಶದ ಡಾಂಗ್ ಗ್ರಾಮದಲ್ಲಿ ಭಾರತದ ಮೊದಲ ಸೂರ್ಯೋದಯದ ಆಚರಣೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವರ್ಷದ ಮೊದಲ ಸೂರ್ಯೋದಯವನ್ನು “ಅಲೋ ಪ್ರಭಾತ್: ಡ್ಯಾನ್ಸ್ ಆಫ್ ದಿ ಡಾನ್” ಎಂಬ ಶೀರ್ಷಿಕೆಯ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು.
- ಈ ಆಚರಣೆಯನ್ನು ಮೇಯೋರ್ ಮತ್ತು ಮಿಶ್ಮಿ ಸಮುದಾಯಗಳು ಆಯೋಜಿಸಿದ್ದವು.
- ಈ ಕಾರ್ಯಕ್ರಮವು ಆಧುನಿಕ ವಾದ್ಯಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪಠಣಗಳು, ಹಾಡುಗಳು ಮತ್ತು ದೇಶೀಯ ಲಯಗಳನ್ನು ಒಳಗೊಂಡಿತ್ತು.
- ಡಾಂಗ್, ಭಾರತದ ಅತ್ಯಂತ ಪೂರ್ವದ ಗ್ರಾಮವಾಗಿದ್ದು ಅಂಜಾವ್ ಜಿಲ್ಲೆಯಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
56). ಈ ಕೆಳಗಿನ ಯೋಜನೆಗಳನ್ನು ಹೊಂದಿಸಿ ಬರೆಯಿರಿ:
|
ಯೋಜನೆ
|
ಪ್ರಕಾರ / ಅನುದಾನ ಮತ್ತು ಅನುಷ್ಠಾನ
|
|
a. ಪ್ರಧಾನ ಮಂತ್ರಿ-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
|
1. ಕೇಂದ್ರ ವಲಯದ ಯೋಜನೆ – ಕೇಂದ್ರದಿಂದ ಸಂಪೂರ್ಣವಾಗಿ ಅನುದಾನಿತ ಮತ್ತು ಅನುಷ್ಠಾನ.
|
|
b. ಕೃಷಿ ಯಂತ್ರ (KY)
|
2. ಕೇಂದ್ರ ಪುರಸ್ಕೃತ ಯೋಜನೆ – ರಾಜ್ಯ ಸರ್ಕಾರಗಳಿಂದ ಅನುದಾನ ಹಂಚಿಕೆ ಮತ್ತು ಅನುಷ್ಠಾನ.
|
|
c. ನೈಸರ್ಗಿಕ ಕೃಷಿಯ ಮೇಲಿನ ರಾಷ್ಟ್ರೀಯ ಮಿಷನ್
|
3. ಕೇಂದ್ರ ಪುರಸ್ಕೃತ ಯೋಜನೆ – ಜಂಟಿ ಅನುದಾನ, ರಾಜ್ಯ ಅನುಷ್ಠಾನ.
|
|
d. ರಾಷ್ಟ್ರೀಯ ಜೇನು ಮತ್ತು ಜೇನುತುಪ್ಪ ಮಿಷನ್
|
4. ಕೇಂದ್ರ ಪುರಸ್ಕೃತ ಯೋಜನೆ – ರಾಜ್ಯ ಅನುಷ್ಠಾನ, ಜಂಟಿ ಅನುದಾನ.
|
ಆಯ್ಕೆಗಳು:
- a-4, b-2, c-3, d-1
- a-1, b-2, c-3, d-4
- a-3, b-2, c-4, d-1
- a-2, b-3, c-4, d-1
ಉತ್ತರ: A
57). ಸ್ವಾಮಿ ವಿವೇಕಾನಂದರ ದಾರ್ಶನಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಪ್ರತಿಬಿಂಬಿಸುತ್ತದೆ?
- ಅವರು ಯೋಗ ಮತ್ತು ವೇದಾಂತದ ಹಿಂದೂ ತತ್ವಗಳನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದರು.
- ಅವರು ಆಧ್ಯಾತ್ಮಿಕತೆಯನ್ನು ಭೌತಿಕ ಪ್ರಗತಿಯೊಂದಿಗೆ ಸಂಯೋಜಿಸುವ ‘ನವ-ವೇದಾಂತ’ವನ್ನು ಪ್ರತಿಪಾದಿಸಿದರು.
- ಅವರು ಕೇವಲ ಆಧ್ಯಾತ್ಮಿಕ ವಿಮೋಚನೆಗೆ ಒತ್ತು ನೀಡಿದರು ಮತ್ತು ಸಾಮಾಜಿಕ ಅಥವಾ ಆರ್ಥಿಕ ಸುಧಾರಣೆಯನ್ನು ನಿರುತ್ಸಾಹಗೊಳಿಸಿದರು.
- ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳಲ್ಲಿ ಹೆಮ್ಮೆಯನ್ನು ಪ್ರತಿಪಾದಿಸಿದರು.
ಆಯ್ಕೆಗಳು:
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: B
58). ಭಾರತದಲ್ಲಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- HPV ಲಸಿಕೆಯನ್ನು ಎಲ್ಲಾ ಭಾರತೀಯ ರಾಜ್ಯಗಳಲ್ಲಿ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ (UIP) ಅಡಿಯಲ್ಲಿ ಸೇರಿಸಲಾಗಿದೆ.
- ಕೈಗೆಟುಕುವ ದರ ಮತ್ತು ಲಭ್ಯತೆಯನ್ನು ಸುಧಾರಿಸಲು ದೇಶೀಯ HPV ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
- HPV ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಅನ್ನು ನಿರ್ಮೂಲನೆ ಮಾಡುವ ದೀರ್ಘಕಾಲೀನ ಗುರಿಗೆ ಕೊಡುಗೆ ನೀಡುತ್ತದೆ.
- HPV ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ತಪಾಸಣೆಯ ಅಗತ್ಯವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಲ್ಲ (NOT correct)?
- 1 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
59). ‘ಸಾಂಜಾ ಶಕ್ತಿ’ ಸಮರಾಭ್ಯಾಸವು ಈ ಕೆಳಗಿನ ದೇಶಗಳ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸವಾಗಿದೆ:
- ಭಾರತ ಮತ್ತು ಚೀನಾ
- ಭಾರತ ಮತ್ತು ನೇಪಾಳ
- ಭಾರತ ಮತ್ತು ಫ್ರಾನ್ಸ್
- ಭಾರತ ಮತ್ತು ರಷ್ಯಾ
ಉತ್ತರ: C
60). 2025ರ ವೇಳೆಗೆ ಭಾರತದ ನವೀಕರಿಸಬಹುದಾದ ಇಂಧನ ಚಿತ್ರಣಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಒಟ್ಟು ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ.
- ಪವನ ಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ.
- ಸೌರ ಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ.
- ಒಟ್ಟಾರೆ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
61). ನೂತನ ಅಭಿವೃದ್ಧಿ ಬ್ಯಾಂಕ್ (NDB) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಫೋರ್ಟಲೆಜಾ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಸ್ಥಾಪಿಸಲಾಯಿತು.
- ಇದರ ಸಾಲ ನೀಡುವಿಕೆಯು ಕೇವಲ ಬ್ರಿಕ್ಸ್ (BRICS) ಸದಸ್ಯ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಿದೆ.
- ಇದು ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ.
- ಇದರ ಪ್ರಧಾನ ಕಚೇರಿ ಬೀಜಿಂಗ್‌ನಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
ಉತ್ತರ: D
62). ಭಾರತದ ಮೊಟ್ಟಮೊದಲ ಮುಕ್ತ ಸಮುದ್ರದ ಮೀನು ಕೃಷಿ ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಸಮುದ್ರದ ಕಡಲ ತುಡುಪ್ಪದ ಮೀನು (ಫಿನ್‌ಫಿಶ್) ಮತ್ತು ಸಮುದ್ರ ಶೈವಲ/ ಕಳೆಯ ಕೃಷಿ ಎರಡನ್ನೂ ಒಳಗೊಂಡಿರುವ ಭಾರತದ ಮೊಟ್ಟಮೊದಲ ಮುಕ್ತ ಸಮುದ್ರದ ಮೀನು ಕೃಷಿ ಯೋಜನೆಯಾಗಿದೆ.
- ಈ ಯೋಜನೆಯನ್ನು ಭೂ ವಿಜ್ಞಾನ ಸಚಿವಾಲಯ ಮತ್ತು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ.
- ಅಸ್ತಿತ್ವದಲ್ಲಿರುವ ಕರಾವಳಿ ಮೂಲಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳಲು ಈ ಯೋಜನೆಯು ಅರಬ್ಬಿ ಸಮುದ್ರದಲ್ಲಿದೆ.
- ಸಾಂಪ್ರದಾಯಿಕ ಕರಾವಳಿ ಮೀನುಗಾರಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಎಲ್ಲವೂ ಸರಿಯಾಗಿವೆ
ಉತ್ತರ: A
63). UN ECOSOC ನ ರಚನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ECOSOC ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಚುನಾಯಿತರಾದ 54 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
- ECOSOC ನ ಸದಸ್ಯರು ಮೂರು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ.
- ವಿಶ್ವಸಂಸ್ಥೆಯ ವ್ಯವಸ್ಥೆಯ ಹಲವಾರು ವಿಶೇಷ ಏಜೆನ್ಸಿಗಳ ಕಾರ್ಯಚಟುವಟಿಕೆಗಳನ್ನು ECOSOC ಮೇಲ್ವಿಚಾರಣೆ ಮಾಡುತ್ತದೆ.
- ECOSOC ನಲ್ಲಿನ ಖಾಯಂ ಸದಸ್ಯತ್ವವು ಭದ್ರತಾ ಮಂಡಳಿಯ ಸದಸ್ಯರಿಗೆ ಸೀಮಿತವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
64). ಹಸಿರು ಅಲ್ಯೂಮಿನಿಯಂಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವಿದ್ಯುದ್ವಿಭಜನೆಯ ಅಪಕರ್ಷಣ ಪ್ರಕ್ರಿಯೆಯಿಂದಾಗಿ ಸಾಂಪ್ರದಾಯಿಕ ಅಲ್ಯೂಮಿನಿಯಂ ಉತ್ಪಾದನೆಯು ಹೆಚ್ಚು ಶಕ್ತಿಯನ್ನು ಬೇಡುವ ಪ್ರಕ್ರಿಯೆಯಾಗಿದೆ.
- ಹಸಿರು ಅಲ್ಯೂಮಿನಿಯಂ ಉತ್ಪಾದನೆಯು ಸಂಪೂರ್ಣವಾಗಿ ಮರುಬಳಕೆಯ ಅಲ್ಯೂಮಿನಿಯಂ ತ್ಯಾಜ್ಯವನ್ನು ಅವಲಂಬಿಸಿದೆ.
- ನವೀಕರಿಸಬಹುದಾದ ಇಂಧನ ಬಳಕೆಯು ಅಲ್ಯೂಮಿನಿಯಂ ಕರಗಿಸುವಿಕೆಯ ಇಂಗಾಲದ ಹೆಜ್ಜೆಗುರುತನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
- ಹಸಿರು ಅಲ್ಯೂಮಿನಿಯಂ ಉತ್ಪಾದನೆಯು ವೃತ್ತಾಕಾರದ ಆರ್ಥಿಕತೆಯ ಉದ್ದೇಶಗಳನ್ನು ಬೆಂಬಲಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
65). ಪ್ರತಿಪಾದನೆ (A): IMEC (ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್), ಭಾರತವನ್ನು ಪಶ್ಚಿಮ ಏಷ್ಯಾದೊಂದಿಗೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಪಶ್ಚಿಮ ಏಷ್ಯಾವನ್ನು ಯುರೋಪ್‌ನೊಂದಿಗೆ ಸಂಪರ್ಕಿಸುವ ಉತ್ತರ ಕಾರಿಡಾರ್ ಅನ್ನು ಒಳಗೊಂಡಿದೆ.
ಕಾರಣ (R): ಈ ಕಾರಿಡಾರ್ ಪರ್ಯಾಯ ಭೂ-ಸಮುದ್ರ ಮಾರ್ಗಗಳ ಮೂಲಕ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯವನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.
ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ
- A ಮತ್ತು R ಎರಡೂ ಸರಿ ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
- A ಸರಿ ಆದರೆ R ತಪ್ಪು
- A ತಪ್ಪು ಆದರೆ R ಸರಿ
ಉತ್ತರ: A
66). ಭಾರತದಲ್ಲಿ ಮಕ್ಕಳ ಕಳ್ಳಸಾಗಣೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತೀಯ ನ್ಯಾಯ ಸಂಹಿತೆ (BNS), 2023 ರ ಪ್ರಕಾರ, ಕಳ್ಳಸಾಗಣೆ ಎಂದರೆ ಶೋಷಣೆಗಾಗಿ ವ್ಯಕ್ತಿಗಳ ನೇಮಕಾತಿ, ಸಾಗಾಣಿಕೆ, ಆಶ್ರಯ ನೀಡುವಿಕೆ, ವರ್ಗಾವಣೆ ಅಥವಾ ಸ್ವೀಕೃತಿ ಎಂದು ವ್ಯಾಖ್ಯಾನಿಸುತ್ತದೆ.
- ಕಳ್ಳಸಾಗಣೆಯ ಮಾರ್ಗಗಳಲ್ಲಿ ಬೆದರಿಕೆಗಳು, ಬಲವಂತ, ಅಪಹರಣ, ವಂಚನೆ, ಅಧಿಕಾರ ದುರ್ಬಳಕೆ ಅಥವಾ ಆಮಿಷ ಒಡ್ಡುವುದು ಸೇರಿವೆ.
- ಶೋಷಣೆಯ ವ್ಯಾಪ್ತಿಯು ದೈಹಿಕ ಮತ್ತು ಲೈಂಗಿಕ ಶೋಷಣೆ, ಗುಲಾಮಗಿರಿ, ಬಲವಂತದ ದುಡಿಮೆ ಮತ್ತು ಬಲವಂತವಾಗಿ ಅಂಗಾಂಗಗಳನ್ನು ತೆಗೆಯುವುದನ್ನು ಒಳಗೊಂಡಿದೆ.
- ಕಳ್ಳಸಾಗಣೆಯು ಗಡಿಯಾಚೆಗಿನ ಸಾಗಾಣಿಕೆಯನ್ನು ಒಳಗೊಂಡಿದ್ದರೆ ಮಾತ್ರ ಶಿಕ್ಷಾರ್ಹವಾಗಿರುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
67). ಬಾಗುರುಂಬಾ ನೃತ್ಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಅಸ್ಸಾಂನ ಬೋಡೋ ಸಮುದಾಯದ ಜಾನಪದ ನೃತ್ಯವಾಗಿದೆ ಮತ್ತು ಇದನ್ನು ಜನಪ್ರಿಯವಾಗಿ “ಚಿಟ್ಟೆ ನೃತ್ಯ” ಎಂದು ಕರೆಯಲಾಗುತ್ತದೆ.
- ಸಾಂಪ್ರದಾಯಿಕವಾಗಿ, ಫಲವತ್ತತೆ ಮತ್ತು ಸಮೃದ್ಧಿಯನ್ನು ಕೋರಲು ಪುರುಷರು ಮಾತ್ರ ಬಾಗುರುಂಬಾ ನೃತ್ಯವನ್ನು ಮಾಡುತ್ತಾರೆ.
- ಈ ನೃತ್ಯವು ಬೋಡೋ ಹೊಸ ವರ್ಷವನ್ನು ಸೂಚಿಸುವ ಬ್ವಿಸಾಗು ಹಬ್ಬದೊಂದಿಗೆ ಸಂಬಂಧ ಹೊಂದಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
ಉತ್ತರ: B
68). ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕಕ್ಕೆ (RNI) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- RNI ತನ್ನ ಗಮನವನ್ನು ಆರ್ಥಿಕ ಶಕ್ತಿಯಿಂದ ನೈತಿಕ ಆಡಳಿತ, ಸುಸ್ಥಿರತೆ ಮತ್ತು ಜಾಗತಿಕ ಜವಾಬ್ದಾರಿಗೆ ಬದಲಾಯಿಸುತ್ತದೆ.
- ಇದು ನೈತಿಕ ಆಡಳಿತ, ಸಾಮಾಜಿಕ ಯೋಗಕ್ಷೇಮ, ಪರಿಸರ ಉಸ್ತುವಾರಿ ಮತ್ತು ಜಾಗತಿಕ ಜವಾಬ್ದಾರಿ ಎಂಬ ನಾಲ್ಕು ಆಯಾಮಗಳಲ್ಲಿ ದೇಶಗಳನ್ನು ಮೌಲ್ಯಮಾಪನ ಮಾಡುತ್ತದೆ.
- ಈ ಸೂಚ್ಯಂಕವನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಅಭಿವೃದ್ಧಿಪಡಿಸಿದೆ.
- ಸಿಂಗಾಪುರ, ಸ್ವಿಟ್ಜರ್ಲೆಂಡ್ ಮತ್ತು ಡೆನ್ಮಾರ್ಕ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತವು ಜಾಗತಿಕವಾಗಿ 16ನೇ ಸ್ಥಾನದಲ್ಲಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
69). ಪರಿಸರ (ಸಂರಕ್ಷಣೆ) ನಿಧಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ನಿಧಿಯು ಪರಿಸರ (ಸಂರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ನಿಧಿಯಾಗಿದೆ.
- ಪರಿಸರ ಉಲ್ಲಂಘನೆಗಳಿಂದ ಬರುವ ಹಣಕಾಸಿನ ದಂಡಗಳನ್ನು ಮಾಲಿನ್ಯ ನಿಯಂತ್ರಣ, ಮರುಸ್ಥಾಪನೆ, ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಗೆ ಬಳಸುವುದು ಇದರ ಉದ್ದೇಶವಾಗಿದೆ.
- ದಂಡದ ಮೊತ್ತದಲ್ಲಿ 75% ರಷ್ಟನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸಂಚಿತ ನಿಧಿಗೆ ವರ್ಗಾಯಿಸಲಾಗುತ್ತದೆ, ಆದರೆ 25% ರಷ್ಟನ್ನು ಕೇಂದ್ರವು ಉಳಿಸಿಕೊಳ್ಳುತ್ತದೆ.
- ಇದನ್ನು ಕೇವಲ ಭಾರತದ ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಪರಿಶೋಧಕರು(CAG) ಮಾತ್ರ ನಿರ್ವಹಿಸುತ್ತಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
70). 2025ರಲ್ಲಿ, ಯುನೈಟೆಡ್ ಕಿಂಗ್‌ಡಮ್ (UK) ಚಾಗೋಸ್ ದ್ವೀಪಗಳ ಸಾರ್ವಭೌಮತ್ವವನ್ನು ಯಾವ ದೇಶಕ್ಕೆ ವರ್ಗಾಯಿಸಿತು?
- ಸೀಶೆಲ್ಸ್
- ಭಾರತ
- ಮಾರಿಷಸ್
- ಮಾಲ್ಡೀವ್ಸ್
ಉತ್ತರ: C
71). ‘ಒಂದು ನಿಲ್ದಾಣ ಒಂದು ಉತ್ಪನ್ನ’ (OSOP) ಯೋಜನೆಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಾದ್ಯಂತ ಸ್ಥಳೀಯ, ಸ್ವದೇಶಿ ಮತ್ತು ವಿಶೇಷ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ 2022 ರಲ್ಲಿ OSOP ಯೋಜನೆಯನ್ನು ಪ್ರಾರಂಭಿಸಲಾಯಿತು.
- ಈ ಯೋಜನೆಯನ್ನು ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ (NID) ಸಹಯೋಗದೊಂದಿಗೆ ಸಂಸ್ಕೃತಿ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.
- OSOP ಮಳಿಗೆಗಳನ್ನು ಸೌಂದರ್ಯದ ದೃಷ್ಟಿಯಿಂದ ಏಕರೂಪವಾಗಿರುವಂತೆ ಮತ್ತು ಸ್ಥಳೀಯವಾಗಿ ವಿಭಿನ್ನವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ; ಇವು ಹೆಚ್ಚಾಗಿ NID ಯ ವಿನ್ಯಾಸದ ಅಂಶಗಳನ್ನು ಹೊಂದಿರುತ್ತವೆ.
- ಸಾಗಣೆ ಮತ್ತು ಬಹು-ಮಾದರಿ ಸಂಪರ್ಕವನ್ನು ಸುಧಾರಿಸಲು ರೂಪಿಸಲಾದ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಸಮಗ್ರ ಅಭಿವೃದ್ಧಿ ಯೋಜನೆ) ನ ಪ್ರಮುಖ ಅಂಶ ಈ ಯೋಜನೆಯಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
- 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: D
72). ಐರೋಪ್ಯ ಒಕ್ಕೂಟದ (EU) ‘ಬಲವಂತ-ವಿರೋಧಿ ಸಾಧನ’ದ ಮುಖ್ಯ ಉದ್ದೇಶವೇನು?
- EU ದೇಶಗಳಿಗೆ ಆರ್ಥಿಕ ನೆರವು ನೀಡುವುದು.
- ಯಾವುದೇ ಒಂದು EU ಸದಸ್ಯ ರಾಷ್ಟ್ರದ ಮೇಲೆ ಒತ್ತಡ ಹೇರಲು ವ್ಯಾಪಾರ ಕ್ರಮಗಳನ್ನು ಬಳಸುವ ದೇಶಗಳಿಗೆ ಪ್ರತಿಕ್ರಿಯಿಸುವುದು.
- EU ನಲ್ಲಿ ವಲಸೆಯನ್ನು ನಿಯಂತ್ರಿಸುವುದು.
- EU ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.
ಉತ್ತರ: B
73). SARFAESI ಕಾಯ್ದೆಯ ಪೂರ್ಣ ರೂಪವೇನು?
- ಸೆಕ್ಯೂರಿಟೈಸೇಶನ್ ಅಂಡ್ ರಿಕವರಿ ಆಫ್ ಅಸೆಟ್ಸ್ ಅಂಡ್ ಫೈನಾನ್ಷಿಯಲ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್.
- ಸೆಕ್ಯುರಿಟೈಸೇಷನ್ ಅಂಡ್ ರಿಕನ್ಸಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸ್ಸೇಟ್ಸ್ ಅಂಡ್ ಎನಫೋರ್ಸ್ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಕಾಯ್ದೆ.
- ಸೆಕ್ಯೂರಿಟೀಸ್ ಅಂಡ್ ಫೈನಾನ್ಷಿಯಲ್ ಅಸೆಟ್ಸ್ ರೆಗ್ಯುಲೇಶನ್ ಆಕ್ಟ್ ಫಾರ್ ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್.
- ಸೆಕ್ಯೂರಿಟೈಸೇಶನ್ ಅಂಡ್ ರೆಗ್ಯುಲೇಶನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಸೆಕ್ಯೂರಿಟಿ ಎನ್‌ಫೋರ್ಸ್‌ಮೆಂಟ್.
ಉತ್ತರ: B
74). ಪೆಂಗ್ವಿನ್‌ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಪೆಂಗ್ವಿನ್‌ಗಳು ಕೇವಲ ಅಂಟಾರ್ಕ್ಟಿಕಾದಲ್ಲಿ ಮಾತ್ರ ಕಂಡುಬರುತ್ತವೆ ಮತ್ತು ಇವು ಜಗತ್ತಿನ ಬೇರೆಲ್ಲೂ ಲಭ್ಯವಿಲ್ಲ.
- ಪೆಂಗ್ವಿನ್‌ಗಳ ಕೆಲವು ಪ್ರಭೇದಗಳು ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡುಬರುತ್ತವೆ.
- ಪೆಂಗ್ವಿನ್‌ಗಳು ಹಾರಲು ಅಸಮರ್ಥವಾದ ಪಕ್ಷಿಗಳಾಗಿದ್ದರೂ ಸಹ, ಅತ್ಯುತ್ತಮ ಈಜುಗಾರರು ಮತ್ತು ಆಳಕ್ಕೆ ಮುಳುಗುವ ಸಾಮರ್ಥ್ಯವನ್ನು ಹೊಂದಿವೆ.
- ಪೆಂಗ್ವಿನ್‌ಗಳು ಆಳ ಸಮುದ್ರದ ಪೋಷಕಾಂಶಗಳನ್ನು ಮೇಲ್ಮೈ ನೀರಿಗೆ ತರುವ ಮೂಲಕ ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಪೋಷಕಾಂಶಗಳ ಚಕ್ರಕ್ಕೆ ಮಹತ್ವದ ಕೊಡುಗೆ ನೀಡುತ್ತವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: C
75). ‘ಗಾಜಾ ಶಾಂತಿ ಮಂಡಳಿ’ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಗಾಜಾ ಶಾಂತಿ ಮಂಡಳಿಯನ್ನು ಅಕ್ಟೋಬರ್ 2025 ರಲ್ಲಿ ಪ್ರಸ್ತಾಪಿಸಲಾಯಿತು ಮತ್ತು ಅದರ ನಂತರದ ತಿಂಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇದಕ್ಕೆ ಅನುಮೋದನೆ ನೀಡಿತು.
- ಅಮೆರಿಕ ಅಧ್ಯಕ್ಷರ ಅಧ್ಯಕ್ಷತೆಯಲ್ಲಿರುವ ಈ ಮಂಡಳಿಯು ಇಸ್ರೇಲ್-ಹಮಾಸ್ ಸಂಘರ್ಷದ ಕದನ ವಿರಾಮ ಮತ್ತು ಯುದ್ಧದ ನಂತರದ ಗಾಜಾದ ಸ್ಥಿತ್ಯಂತರದ ಮೇಲ್ವಿಚಾರಣೆ ನಡೆಸುವ ಗುರಿಯನ್ನು ಹೊಂದಿದೆ.
- ಸುಮಾರು 50 ದೇಶಗಳಿಗೆ ಆಹ್ವಾನ ನೀಡಲಾಗಿತ್ತು ಮತ್ತು ಅವುಗಳಲ್ಲಿ ಸರಿಸುಮಾರು 35 ಜಾಗತಿಕ ನಾಯಕರು ಇದರಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.
- ಈ ಮಂಡಳಿಯ ಸದಸ್ಯತ್ವವು ಕಾಯಂ ಸ್ವರೂಪದ್ದಾಗಿದ್ದು, ಇದನ್ನು ನವೀಕರಿಸಲು ಸಾಧ್ಯವಿಲ್ಲ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
- ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಅಟಲ್ ಪಿಂಚಣಿ ಯೋಜನೆಯನ್ನು (APY) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಸಂರಚನೆಯ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.
- ಚಂದಾದಾರರಿಗೆ ನೀಡಲಾಗುವ ಪಿಂಚಣಿಯು ಅವರು ನೀಡಿದ ಕೊಡುಗೆಯನ್ನು ಅವಲಂಬಿಸಿರುತ್ತದೆ ಮತ್ತು ಇದನ್ನು ಸರ್ಕಾರವು ಖಾತರಿಪಡಿಸುತ್ತದೆ.
- APY ಯೋಜನೆಯು ಕೇವಲ ಉದ್ಯೋಗದಾತರ ಮೂಲಕ ಕೊಡುಗೆ ನೀಡುವ ಸಂಘಟಿತ ವಲಯದ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದೆ.
- ಈ ಯೋಜನೆಗೆ ನೀಡುವ ಕೊಡುಗೆಗಳು ಸ್ವಯಂಪ್ರೇರಿತವಾಗಿದ್ದು, ಆಯ್ದುಕೊಂಡ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಇವು ಬದಲಾಗುತ್ತವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
77). C-295 ವಿಮಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತದಲ್ಲೇ ತಯಾರಾದ (“ಮೇಡ್ ಇನ್ ಇಂಡಿಯಾ”) ಮೊದಲ C-295 ವಿಮಾನವು ಸೆಪ್ಟೆಂಬರ್ 2026 ಕ್ಕಿಂತ ಮೊದಲು ಏರ್‌ಬಸ್-ಟಾಟಾ ವಡೋದರಾ ಜೋಡಣಾ ಘಟಕದಿಂದ ಹೊರಬರಲಿದೆ.
- ಈ ವಿಮಾನವನ್ನು ಸಂಪೂರ್ಣವಾಗಿ ಭಾರತದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ.
- C-295 ಎಂಬುದು ಮಧ್ಯಮ ಶ್ರೇಣಿಯ ಅವಳಿ-ಎಂಜಿನ್ ಟರ್ಬೊಪ್ರಾಪ್ ಯುದ್ಧತಂತ್ರದ ಸಾರಿಗೆ ವಿಮಾನವಾಗಿದ್ದು, ಇದನ್ನು ಮೂಲತಃ ಸ್ಪ್ಯಾನಿಷ್ ಕಂಪನಿಯಾದ CASA ವಿನ್ಯಾಸಗೊಳಿಸಿದೆ.
- CASA ಸಂಸ್ಥೆಯು ಪ್ರಸ್ತುತ ‘ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್’ನ ಭಾಗವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- ಮೇಲಿನ ಎಲ್ಲವೂ
ಉತ್ತರ: B
78). ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಪ್ರಶಸ್ತಿಯನ್ನು ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಕೊಡುಗೆಗಳನ್ನು ಗುರುತಿಸಿ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ವತಿಯಿಂದ ವಾರ್ಷಿಕವಾಗಿ ನೀಡಲಾಗುತ್ತದೆ.
- ಇತ್ತೀಚೆಗೆ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಉತ್ತೇಜಿಸಿದ ಗ್ರಾಕಾ ಮಾಚೆಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ಈ ಪ್ರಶಸ್ತಿಯನ್ನು ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಸಾಮಾನ್ಯವಾಗಿ ಇದನ್ನು ಇಂದಿರಾ ಗಾಂಧಿಯವರ ಜನ್ಮದಿನದಂದು ಪ್ರದಾನ ಮಾಡಲಾಗುತ್ತದೆ.
- ಪ್ರಶಸ್ತಿ ಮೊತ್ತವನ್ನು ಇತ್ತೀಚೆಗೆ 25 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಇದನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು ಇಬ್ಬರಿಗೂ ನೀಡಬಹುದಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
79). ಟರ್ನರ್ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಪ್ರಶಸ್ತಿಯನ್ನು ಟೇಟ್ ಬ್ರಿಟನ್ ಸಂಸ್ಥೆಯು ನೀಡುತ್ತದೆ ಮತ್ತು ಇದು ಸಮಕಾಲೀನ ಬ್ರಿಟಿಷ್ ಕಲೆಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
- ಇದನ್ನು ಕೇವಲ ಕಲೆಯ ಜೀವಿತಾವಧಿಯ ಸಾಧನೆಗಳಿಗಾಗಿ ನೀಡಲಾಗುತ್ತದೆ ಮತ್ತು ಬ್ರಿಟಿಷ್ ಕಲಾವಿದರ ಅತ್ಯುತ್ತಮ ಪ್ರದರ್ಶನಗಳನ್ನು ಇದು ಗುರುತಿಸುತ್ತದೆ.
- ನ್ನೆನಾ ಕಲು ಅವರು 2025ರ ಟರ್ನರ್ ಪ್ರಶಸ್ತಿಯನ್ನು ಪಡೆದ ಕಲಿಕಾ ಅಸಾಮರ್ಥ್ಯ ಹೊಂದಿರುವ ಮೊದಲ ಕಲಾವಿದೆಯಾಗಿದ್ದಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
80). ಈ ಕೆಳಗಿನ ಜೋಡಿಗಳಲ್ಲಿ ಯಾವುದು/ಯಾವುವು ಸರಿಯಾಗಿ ಹೊಂದಾಣಿಕೆಯಾಗಿವೆ?
|
ಪ್ರಶಸ್ತಿ
|
ಪುರಸ್ಕೃತರು
|
|
1. ವಿಜ್ಞಾನ ರತ್ನ
|
ಪ್ರೊ. ಜಯಂತ್ ವಿಷ್ಣು ನರ್ಲಿಕರ್
|
|
2. ವಿಜ್ಞಾನ ತಂಡ
|
ಟೀಮ್ ಅರೋಮಾ ಮಿಷನ್ (CSIR)
|
|
3. ವಿಜ್ಞಾನ ಶ್ರೀ
|
ಡಾ. ಜ್ಞಾನೇಂದ್ರ ಪ್ರತಾಪ್ ಸಿಂಗ್
|
|
4. ವಿಜ್ಞಾನ ರತ್ನ
|
ಪ್ರೊ. ಪ್ರದೀಪ್ ಥಲಪ್ಪಿಲ್
|
ಸರಿಯಾದ ಉತ್ತರವನ್ನು ಆರಿಸಿ:
- 1, 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
81). ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ (PMRBP) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಅಸಾಧಾರಣ ಸಾಧನೆಗಳನ್ನು ಗುರುತಿಸಲು ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಪ್ರದಾನ ಮಾಡಲಾಗುತ್ತದೆ.
- ಈ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಿರ್ವಹಿಸುತ್ತದೆ ಮತ್ತು ಇದನ್ನು ಭಾರತದ ಪ್ರಧಾನ ಮಂತ್ರಿಯವರು ಪ್ರದಾನ ಮಾಡುತ್ತಾರೆ.
- ಈ ಪ್ರಶಸ್ತಿಯು ಶೌರ್ಯ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಮಾಜ ಸೇವೆಯಲ್ಲಿನ ಮಕ್ಕಳ ಸಾಧನೆಗಳನ್ನು ಒಳಗೊಂಡಿದೆ.
- ಈ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವು ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್‌ಜಾದೆಗಳ ತ್ಯಾಗದ ಸ್ಮರಣಾರ್ಥ ಆಚರಿಸಲಾಗುವ ವೀರ್ ಬಾಲ್ ದಿವಸ್ ನೊಂದಿಗೆ ತಾಳೆಯಾಗುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
82). ‘ನೈಟ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಟಲಿ’ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಇಟಲಿ ಗಣರಾಜ್ಯದ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯವು ಪ್ರದಾನ ಮಾಡುತ್ತದೆ.
- ಇಟಲಿ ಮತ್ತು ಇತರ ದೇಶಗಳ ನಡುವೆ ಸೌಹಾರ್ದ ಸಂಬಂಧಗಳನ್ನು ಉತ್ತೇಜಿಸುವ ವ್ಯಕ್ತಿಗಳನ್ನು ಈ ಪ್ರಶಸ್ತಿಯು ಗುರುತಿಸುತ್ತದೆ.
- ಈ ಗೌರವವನ್ನು ಕೇವಲ ಇಟಲಿಯ ನಾಗರಿಕರಿಗೆ ಮಾತ್ರ ನೀಡಲು ಸೀಮಿತಗೊಳಿಸಲಾಗಿದೆ.
- ಇಟಲಿ ಮತ್ತು ಭಾರತದ ನಡುವಿನ ಆರ್ಥಿಕ ಮತ್ತು ದೂತಾವಾಸದ ಸಂಬಂಧಗಳನ್ನು ಬಲಪಡಿಸಿದ್ದಕ್ಕಾಗಿ ಶ್ರೀನಿವಾಸ್ ಡೆಂಪೊ ಅವರನ್ನು ಈ ಗೌರವದೊಂದಿಗೆ ಪುರಸ್ಕರಿಸಲಾಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 2, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
ಉತ್ತರ: C
83). ಪವನ್ ಕಲ್ಯಾಣ್ ಅವರಿಗೆ ನೀಡಲಾದ ಕೆಂಜುಟ್ಸು ಗೌರವಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರು ಟಕೆಡಾ ಶಿಂಗೆನ್ ಸಮುರಾಯ್ ಕುಲದ ಅಡಿಯಲ್ಲಿ ಕೆಂಜುಟ್ಸು ಸಂಪ್ರದಾಯಕ್ಕೆ ಸೇರ್ಪಡೆಗೊಂಡ ಮೊದಲ ಭಾರತೀಯರಾಗಿದ್ದಾರೆ.
- ಇವರಿಗೆ ‘ಸೊಗೊ ಬುಡೋ ಕಾನ್ರಿ ಕೈ’ ವತಿಯಿಂದ 5ನೇ ಡಾನ್ ಬ್ಲ್ಯಾಕ್ ಬೆಲ್ಟ್ ಗೌರವವನ್ನು ನೀಡಲಾಯಿತು.
- ‘ಟೈಗರ್ ಆಫ್ ಮಾರ್ಷಲ್ ಆರ್ಟ್ಸ್’ ಎಂಬ ಬಿರುದನ್ನು ಇವರಿಗೆ ‘ಗೋಲ್ಡನ್ ಡ್ರಾಗನ್ಸ್’ ಸಂಸ್ಥೆಯು ಪ್ರದಾನ ಮಾಡಿದೆ.
- ಈ ಗೌರವವನ್ನು ಪ್ರಮುಖವಾಗಿ ಪವನ್ ಕಲ್ಯಾಣ್ ಅವರ ರಾಜಕೀಯ ಕೊಡುಗೆಗಳಿಗಾಗಿ ನೀಡಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
84). ಈ ಕೆಳಗಿನ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಭಾಗಗಳನ್ನು ಅವುಗಳ ವಿಜೇತರೊಂದಿಗೆ ಹೊಂದಿಸಿ:
|
ವಿಭಾಗ
|
ವಿಜೇತರು
|
|
a. ಅತ್ಯುತ್ತಮ ಚಲನಚಿತ್ರ – ಡ್ರಾಮಾ
|
1. ಪಾಲ್ ಥಾಮಸ್ ಆಂಡರ್ಸನ್
|
|
b. ಅತ್ಯುತ್ತಮ ಚಲನಚಿತ್ರ – ಸಂಗೀತ ಅಥವಾ ಹಾಸ್ಯ
|
2. ಹ್ಯಾಮ್ನೆಟ್
|
|
c. ಅತ್ಯುತ್ತಮ ನಿರ್ದೇಶಕ
|
3. ಒನ್ ಬ್ಯಾಟಲ್ ಆಫ್ಟರ್ ಅನದರ್
|
|
d. ಅತ್ಯುತ್ತಮ ನಟಿ – ಡ್ರಾಮಾ
|
4. ಜೆಸ್ಸಿ ಬಕ್ಲಿ
|
ಕೆಳಗೆ ನೀಡಲಾದ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- a–2, b–3, c–1, d–4
- a–3, b–2, c–1, d–4
- a–2, b–1, c–3, d–4
- a–4, b–3, c–1, d–2
ಉತ್ತರ: A
85). ಪದ್ಮಪಾಣಿ ಜೀವಮಾನದ ಸಾಧನೆ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಪ್ರಶಸ್ತಿಯನ್ನು ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಪ್ರದಾನ ಮಾಡುತ್ತದೆ; ಇದು ಪದ್ಮಪಾಣಿ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
- ಈ ಪ್ರಶಸ್ತಿಯು ಚಲನಚಿತ್ರ ಮತ್ತು ಸಂಬಂಧಿತ ಕಲೆಗಳಿಗೆ ನೀಡಿದ ಅಸಾಧಾರಣ ಹಾಗೂ ಸುದೀರ್ಘ ಕೊಡುಗೆಗಳನ್ನು ಗುರುತಿಸುತ್ತದೆ.
- ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ನೀಡಲಾಗುತ್ತದೆ.
- ಇತ್ತೀಚೆಗೆ ಹಿರಿಯ ಸಂಗೀತ ಸಂಯೋಜಕ ಇಳಯರಾಜ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
86). ‘ಐಎನ್ಎಸ್ ಸಿಂಧುಘೋಷ್’ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಪ್ರಾಜೆಕ್ಟ್ 877EKM (Project 877EKM) ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿಯಾಗಿದೆ.
- ಇದು ಅಣುಶಕ್ತಿ ಚಾಲಿತ ದಾಳಿ ಜಲಾಂತರ್ಗಾಮಿಯಾಗಿದ್ದು, ಇದನ್ನು ಹಳೆಯ ಸೋವಿಯತ್ ಒಕ್ಕೂಟದಲ್ಲಿ ನಿರ್ಮಿಸಲಾಯಿತು.
- ಇದು 1986 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ತನ್ನ ವರ್ಗದ ಮೊದಲ ಜಲಾಂತರ್ಗಾಮಿಯಾಗಿದೆ.
- ಇದು ಭಾರತದ ಮೊದಲ ಸ್ವದೇಶಿ ಜಲಾಂತರ್ಗಾಮಿ ಕಾರ್ಯಕ್ರಮವನ್ನು ಗುರುತಿಸಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 3 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
ಉತ್ತರ: B
87). ಪ್ರಾದೇಶಿಕ ಮಟ್ಟದ ಮಾಲಿನ್ಯ ಪ್ರತಿಕ್ರಿಯೆ ಕಸರತ್ತಿಗೆ (RPREX-2025) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತೀಯ ಕರಾವಳಿ ರಕ್ಷಣಾ ಪಡೆಯು ನಡೆಸಿದ ಪ್ರಾದೇಶಿಕ ಮಟ್ಟದ ಮಾಲಿನ್ಯ ಪ್ರತಿಕ್ರಿಯೆ ಕಸರತ್ತಾಗಿದೆ.
- ಇದು ಪ್ರಮುಖ ತೈಲ ಸೋರಿಕೆ ಘಟನೆಗಳ ವಿರುದ್ಧ ಸನ್ನದ್ಧತೆಯನ್ನು ಪರೀಕ್ಷಿಸುವ ಗುರಿಯನ್ನು ಹೊಂದಿತ್ತು ಮತ್ತು ಇದನ್ನು ‘ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ತುರ್ತು ಯೋಜನೆ’ (NOSDCP) ಅಡಿಯಲ್ಲಿ ನಡೆಸಲಾಯಿತು.
- ಇದನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಆಯೋಜಿಸಿತ್ತು.
- ಇದನ್ನು ಅರಬ್ಬಿ ಸಮುದ್ರದ ಮುಂಬೈ ಕರಾವಳಿಯಲ್ಲಿ ನಡೆಸಲಾಯಿತು ಮತ್ತು ಓಎನ್‌ಜಿಸಿ (ONGC) ಈ ಕಸರತ್ತಿನಲ್ಲಿ ಪ್ರಮುಖ ಪಾಲುದಾರನಾಗಿತ್ತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1, 2 ಮತ್ತು 3 ಮಾತ್ರ
- 1, 3 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ: C
88). ಈ ಕೆಳಗಿನ ಸೇನಾ ಕಸರತ್ತುಗಳು ಮತ್ತು ಭಾಗವಹಿಸುವ ದೇಶಗಳು/ಪಡೆಗಳ ಜೋಡಿಗಳನ್ನು ಪರಿಗಣಿಸಿ:
|
ಸೇನಾ ಕಸರತ್ತು
|
ಭಾಗವಹಿಸಿದವರು
|
|
1. ಡೆಸರ್ಟ್ ಸೈಕ್ಲೋನ್
|
ಭಾರತ – ಯುಎಇ (UAE)
|
|
2. ಹರಿಮೌ ಶಕ್ತಿ
|
ಭಾರತ – ಮಲೇಷ್ಯಾ
|
|
3. ಸಾಂಜಾ ಶಕ್ತಿ
|
ಭಾರತ – ಇಂಡೋನೇಷ್ಯಾ
|
|
4. ಪೂರ್ವಿ ಪ್ರಚಂಡ ಪ್ರಹಾರ್
|
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ
|
|
5. ಮಹಾಸಾಗರ್ (MAHASAGAR)
|
ಭಾರತೀಯ ನೌಕಾಪಡೆ – ಇಂಡೋನೇಷಿಯನ್ ನೌಕಾಪಡೆ
|
ಮೇಲೆ ನೀಡಿರುವ ಜೋಡಿಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗಿವೆ?
- ಕೇವಲ ಎರಡು
- ಕೇವಲ ಮೂರು
- ಕೇವಲ ನಾಲ್ಕು
- ಎಲ್ಲ ಐದೂ
ಉತ್ತರ: C
89). ಈ ಕೆಳಗಿನ ದಿನಾಚರಣೆಗಳನ್ನು ಅವುಗಳನ್ನು ಆಚರಿಸುವ ದಿನಾಂಕ ಮತ್ತು 2025ರ ಘೋಷವಾಕ್ಯಗಳೊಂದಿಗೆ ಹೊಂದಿಸಿ:
|
ದಿನ
|
ಆಚರಿಸುವ ದಿನಾಂಕ
|
2025ರ ಘೋಷವಾಕ್ಯ
|
|
a. ರಾಷ್ಟ್ರೀಯ ಗಣಿತ ದಿನ
|
1. ಡಿಸೆಂಬರ್ 24
|
i. ಪ್ರಶಾಸನ್ ಗಾಂವ್ ಕಿ ಓರ್. (ಹಳ್ಳಿಗಳ ಕಡೆಗೆ ಆಡಳಿತ).
|
|
b. ಕಿಸಾನ್ ದಿವಸ್
|
2. ಡಿಸೆಂಬರ್ 22
|
ii. ಸುಸ್ಥಿರ ಅಭಿವೃದ್ಧಿಗಾಗಿ ಗಣಿತ.
|
|
c. ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ
|
3. ಡಿಸೆಂಬರ್ 23
|
iii. ಡಿಜಿಟಲ್ ನ್ಯಾಯದ ಮೂಲಕ ಸಮರ್ಥ ಮತ್ತು ತ್ವರಿತ ವಿಲೇವಾರಿ.
|
|
d. ಉತ್ತಮ ಆಡಳಿತ ದಿನ
|
4. ಡಿಸೆಂಬರ್ 25
|
iv. ವಿಕಸಿತ ಭಾರತ 2047 – ಭಾರತೀಯ ಕೃಷಿಯನ್ನು ಜಾಗತೀಕರಣಗೊಳಿಸುವಲ್ಲಿ FPOಗಳ ಪಾತ್ರ.
|
ಸಂಕೇತಗಳು:
- a-2–ii, b-3–iv, c-1–iii, d-4–i
- a-2–i, b-3–ii, c-1–iv, d-4–iii
- a-1–ii, b-2–iv, c-3–iii, d-4–i
- a-2–ii, b-4–iv, c-1–iii, d-3–i
ಉತ್ತರ: A
90). ಈ ಕೆಳಗಿನ ದಿನಾಚರಣೆಗಳನ್ನುಅವುಗಳ ಘೋಷವಾಕ್ಯ ಮತ್ತು ಆಚರಿಸುವ ದಿನಾಂಕದೊಂದಿಗೆ ಹೊಂದಿಸಿ:
|
ದಿನ
|
2025/26ರ ಘೋಷವಾಕ್ಯ
|
ಆಚರಿಸುವ ದಿನಾಂಕ
|
|
a. ವಿಶ್ವ ಬ್ರೈಲ್ ದಿನ
|
1. “ಸ್ವಯಂ ಪ್ರಜ್ವಲಿಸಿ, ಜಗತ್ತಿನ ಮೇಲೆ ಪ್ರಭಾವ ಬೀರಿ – ವಿಕಸಿತ ಭಾರತ ಯುವ ನಾಯಕರ ಸಂವಾದ”.
|
i. ಜನವರಿ 12
|
|
b. ಪ್ರವಾಸಿ ಭಾರತೀಯ ದಿವಸ್
|
2. “ಡಿಜಿಟಲ್-ಮೊದಲು” ಜಗತ್ತಿನಲ್ಲಿ ಪ್ರವೇಶಸಾಧ್ಯತೆಯನ್ನು ಸುಲಭಗೊಳಿಸುವುದು”.
|
ii. ಜನವರಿ 4
|
|
c. ರಾಷ್ಟ್ರೀಯ ಯುವ ದಿನ
|
3. ವಿಕಸಿತ ಭಾರತ 2047 ರಲ್ಲಿ ಭಾರತೀಯ ವಲಸಿಗರ ಪಾತ್ರ.
|
iii. ಜನವರಿ 9
|
|
d. ಭಾರತೀಯ ಸೇನಾ ದಿನ
|
4. “ನೆಟ್‌ವರ್ಕಿಂಗ್ ಮತ್ತು ದತ್ತಾಂಶ ಕೇಂದ್ರೀಕೃತ ವರ್ಷ”.
|
iv. ಜನವರಿ 15
|
|
e. ರಾಷ್ಟ್ರೀಯ ನವೋದ್ಯಮ (ಸ್ಟಾರ್ಟ್-ಅಪ್) ದಿನ
|
5. “ಒಟ್ಟಾಗಿ ಭವಿಷ್ಯವನ್ನು ರೂಪಿಸೋಣ, ಒಂದು ಸಮಯದಲ್ಲಿ ಒಂದು ನವೀನ ಕಲ್ಪನೆ”.
|
v. ಜನವರಿ 16
|
ಸಂಕೇತಗಳು:
- a-2–ii, b-3–iii, c-1–i, d-4–iv, e-5–v
- a-2–iii, b-3–ii, c-1–i, d-4–v, e-5–iv
- a-1–ii, b-2–iii, c-3–i, d-4–iv, e-5–v
- a-2–ii, b-5–iii, c-1–i, d-3–iv, e-4–v
ಉತ್ತರ: A
91). ಸೈನಾ ನೆಹ್ವಾಲ್ ಅವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರು ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಇವರು 2015 ರಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕವನ್ನು ಸಾಧಿಸಿದ ಮೊದಲ ಭಾರತೀಯ ಶಟ್ಲರ್ ಆಗಿದ್ದಾರೆ.
- ಇವರು ಬಿಡಬ್ಲ್ಯೂಎಫ್ (BWF) ಸೂಪರ್ ಸೀರೀಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 3 ಮಾತ್ರ
- 1, 2 ಮತ್ತು 3
ಉತ್ತರ: B
92). 2025ರ ಫಿಡೆ (FIDE) ವಿಶ್ವ ರಾಪಿಡ್ ಚೆಸ್ ಚಾಂಪಿಯನ್‌ಶಿಪ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್ ಕತಾರ್‌ನ ದೋಹಾದಲ್ಲಿ ನಡೆಯಿತು.
- ಭಾರತೀಯ ಚೆಸ್ ಆಟಗಾರರು ಈ ಕೂಟದ ಮುಕ್ತ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಪದಕಗಳನ್ನು ಗೆದ್ದಿದ್ದಾರೆ.
- ಕೊನೆರು ಹಂಪಿ ಅವರು ಮಹಿಳಾ ರಾಪಿಡ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
- 1 ಮತ್ತು 2 ಮಾತ್ರ
- 2 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: A
93). ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025 ರ ಅಡಿಯಲ್ಲಿ ರಾಷ್ಟ್ರೀಯ ಕ್ರೀಡಾ ಮಂಡಳಿ (NSB) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಮಂಡಳಿಯು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಅಗತ್ಯವಿರುವ ಸಂಯೋಜನೆಯನ್ನು ನೀಡುತ್ತದೆ.
- ಇದು ವಿವಿಧ ಕ್ರೀಡಾ ಸಂಸ್ಥೆಗಳಿಗೆ ನೀಡಲಾಗುವ ಸರ್ಕಾರಿ ಧನಸಹಾಯದ ಅರ್ಹತೆಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಹೊಂದಿದೆ.
- ಇದು ಕ್ರೀಡೆಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಇತ್ಯರ್ಥಪಡಿಸುವ ಮೇಲ್ಮನವಿ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
- ಇದು ಕ್ರೀಡಾ ಸಂಸ್ಥೆಗಳ ಹಣಕಾಸಿನ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಎಲ್ಲ ನಾಲ್ಕು
ಉತ್ತರ: C
94). ಈ ಕೆಳಗಿನ ಯಾವ ನಗರಗಳು ವೆಸ್ಟ್ ಬ್ಯಾಂಕ್‌ನಲ್ಲಿ ನೆಲೆಗೊಂಡಿವೆ?
- ಜೆನಿನ್, ಹೆಬ್ರಾನ್, ಬೆಥ್ ಲೆಹೆಮ್ ಮತ್ತು ನಬ್ಲಸ್
- ಗಾಜಾ ಸಿಟಿ, ಹೆಬ್ರಾನ್, ರಾಮಲ್ಲಾ ಮತ್ತು ಬೆಥ್ ಲೆಹೆಮ್
- ಟೆಲ್ ಅವಿವ್, ನಬ್ಲಸ್, ಜೆನಿನ್ ಮತ್ತು ರಾಮಲ್ಲಾ
- ಗಾಜಾ ಸಿಟಿ, ಜೆರುಸಲೇಂ, ಹೆಬ್ರಾನ್ ಮತ್ತು ರಾಮಲ್ಲಾ
ಉತ್ತರ: A