ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (NDRI)ಯು ಅಭಿವೃದ್ಧಿಪಡಿಸಿರುವ, ‘ಕರಣ್ ಫ್ರೈಸ್’ ಮತ್ತು ‘ವೃಂದಾವನಿ’ ಎಂಬ ಎರಡು ಹೊಸ ಸಂಶ್ಲೇಷಿತ ಜಾನುವಾರು ತಳಿಗಳನ್ನು ಭಾರತವು ನೋಂದಾಯಿಸಿದೆ.
‘ಸಂಶ್ಲೇಷಿತ ಜಾನುವಾರು ತಳಿ’ ಎಂದರೇನು?
ಸಾಮಾನ್ಯವಾಗಿ ದೇಶೀಯ (ಬಾಸ್ ಇಂಡಿಕಸ್) ಮತ್ತು ವಿದೇಶಿಯ (ಬಾಸ್ ಟಾರಸ್) ತಳಿಗಳಂತಹ, ಎರಡು ಅಥವಾ ಹೆಚ್ಚಿನ ತಳಿಗಳ ನಡುವಿನ ‘ಯೋಜಿತ ಮಿಶ್ರತಳಿ ಸಂತಾನೋತ್ಪತ್ತಿ’ಯ ಮೂಲಕ ಅಭಿವೃದ್ಧಿಪಡಿಸಿ, ನಂತರದ ಪೀಳಿಗೆಗಳಲ್ಲಿ ಅಪೇಕ್ಷಿತ ಗುಣಲಕ್ಷಣಗಳನ್ನು ಸ್ಥಿರೀಕರಿಸಲಾದ ತಳಿ.
ವಿಶಿಷ್ಟ ತಳಿಗಳು:- ಒಮ್ಮೆ ಈ ಗುಣಲಕ್ಷಣಗಳು ಸ್ಥಿರಗೊಂಡ ನಂತರ,ಇವು ಶುದ್ಧ ತಳಿಗಳಂತೆ ಸಂತಾನೋತ್ಪತ್ತಿಯನ್ನು ನಡೆಸುತ್ತವೆ ಮತ್ತು ಇವುಗಳನ್ನುವಿಶಿಷ್ಟ ತಳಿಗಳೆಂದುಗುರುತಿಸಲಾಗುತ್ತದೆ.
‘ಕರಣ್ ಫ್ರೈಸ್’ ಜಾನುವಾರು ತಳಿಯ ಬಗ್ಗೆ:
“ಹೋಲ್ಸ್ಟೀನ್ ಫ್ರೈಸಿಯನ್” ಮತ್ತು “ಥಾರ್‌ಪಾರ್ಕರ್ ಝೆಬು” ಜಾನುವಾರುಗಳ ನಡುವಿನ ಮಿಶ್ರತಳಿ:- ಜಾಗತಿಕವಾಗಿ ಗುರುತಿಸಲ್ಪಟ್ಟ ಅಧಿಕ ಇಳುವರಿ ನೀಡುವ ತಳಿಯಾದ ‘ಹೋಲ್ಸ್ಟೀನ್ ಫ್ರೈಸಿಯನ್’ (Holstein Friesian) ಮತ್ತು ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಹಾಗೂ ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ಭಾರತದ ದೇಶೀಯ ‘ಥಾರ್‌ಪಾರ್ಕರ್ ಝೆಬು’ ಜಾನುವಾರುಗಳ ನಡುವಿನ ಮಿಶ್ರತಳಿ ಸಂತಾನೋತ್ಪತ್ತಿ ಮೂಲಕ ಈ ಸಂಶ್ಲೇಷಿತ ಹಸುವಿನ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
ವಿಶೇಷತೆ:-ಅಧಿಕ ಉತ್ಪಾದಕತೆ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಸಂಯೋಜನೆಯನ್ನು ಹೊಂದಿದ್ದು, ಇದು ದಿನಕ್ಕೆ ಗರಿಷ್ಠ 46.5 ಕೆ.ಜಿ.ಯಷ್ಟು ಹಾಲಿನ ಇಳುವರಿಯನ್ನು ನೀಡುತ್ತದೆ.
ಮಹತ್ವ:
ದೇಶೀಯ ಜಾನುವಾರುಗಳಿಗಿಂತ ಇವು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿವೆ.
ಶುದ್ಧ ವಿದೇಶಿ ತಳಿಗಳಿಗಿಂತ ಉತ್ತಮ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಇವು ಪ್ರದರ್ಶಿಸುತ್ತವೆ.
ಹೈನುಗಾರರಿಗೆ ಉತ್ತಮ ಆರ್ಥಿಕ ಆದಾಯವನ್ನು ಇವು ಒದಗಿಸುತ್ತವೆ.
ಇವುಗಳಲ್ಲಿ ಕಡಿಮೆ ಮರಣ ಪ್ರಮಾಣ ಮತ್ತು ಉತ್ತಮ ಸಂತಾನೋತ್ಪತ್ತಿ ದಕ್ಷತೆಯು ಕಂಡುಬರುತ್ತದೆ.
18 ನೇ ಜಪಾನ್-ಭಾರತ ವಿದೇಶಾಂಗ ಸಚಿವರ ಕಾರ್ಯತಂತ್ರದ ಸಂವಾದ
ಸಾಮಾನ್ಯ ಅಧ್ಯಯನ – 2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
18 ನೇ ಭಾರತ-ಜಪಾನ್ ಕಾರ್ಯತಂತ್ರದ ಸಂವಾದದಲ್ಲಿ, ಈ ಎರಡು ದೇಶಗಳು ತಮ್ಮ ‘ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆ’ಯ ಬೆಳವಣಿಗೆಯನ್ನು ಪುನರುಚ್ಚರಿಸಿದವು.
ಪ್ರಮುಖ ಮುಖ್ಯಾಂಶಗಳು:
ಆರ್ಥಿಕ ಭದ್ರತೆಯ ಕುರಿತಾದ ಖಾಸಗಿ ವಲಯದ ಸಂವಾದ (B2B):- 2026 ರ ಆರಂಭದಲ್ಲಿ ಈ ಎರಡು ದೇಶಗಳು ಇದಕ್ಕೇ ಚಾಲನೆಯನ್ನು ಘೋಷಿಸಿದವು.
ಈ ಸಂವಾದವು 5 ಆದ್ಯತಾ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳೆಂದರೆ,
ಅರೆವಾಹಕಗಳು (ಸೆಮಿಕಂಡಕ್ಟರ್‌ಗಳು),
ನಿರ್ಣಾಯಕ ಖನಿಜಗಳು,
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT),
ಶುದ್ಧ ಇಂಧನ
ಔಷಧ ಉದ್ಯಮ (ಫಾರ್ಮಾಸ್ಯುಟಿಕಲ್ಸ್)
ಜಪಾನ್-ಭಾರತ ಎಐ ಕಾರ್ಯತಂತ್ರದ ಸಂವಾದ:-‘ಜಪಾನ್-ಭಾರತ ಎಐ ಸಹಕಾರ ಉಪಕ್ರಮ’ದ (JAI) ಅಡಿಯಲ್ಲಿ ಈ ಸಂವಾದ’ವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಜಂಟಿ ಸಂಶೋಧನೆ:- ಇದಕ್ಕಾಗಿ ಜಪಾನ್ 2030 ರ ವೇಳೆಗೆ 500 ಅತ್ಯಂತ ಕೌಶಲ್ಯಯುತ ಭಾರತೀಯ ಎಐ ವೃತ್ತಿಪರರನ್ನು ಆಹ್ವಾನಿಸಲಿದೆ.
ಭಾರತ ಮತ್ತು ಜಪಾನ್ ಸಂಬಂಧಗಳು:
ರಕ್ಷಣೆ ಮತ್ತು ಭದ್ರತೆ:-
ಸೇನಾ ಸಮರಾಭ್ಯಾಸಗಳು:-‘ಮಲಬಾರ್’, ‘ಧರ್ಮ ಗಾರ್ಡಿಯನ್’ ಮತ್ತು ‘ಜಿಮೆಕ್ಸ್’ ನಂತಹ ಸಮರಾಭ್ಯಾಸಗಳು ಉಭಯ ದೇಶಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಯನ್ನು ಹೆಚ್ಚಿಸುತ್ತವೆ.
ವ್ಯಾಪಾರ:- 2023-24 ರ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು $23 ಬಿಲಿಯನ್ ಮೌಲ್ಯವನ್ನು ತಲುಪಿದೆ.
ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲ:-ಜಪಾನ್, ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲವಾಗಿದೆ.
ಬುಲೆಟ್ ರೈಲು:–ಮುಂಬೈ-ಅಹಮದಾಬಾದ ನಡುವಿನ ಅತಿ ವೇಗದ ಬುಲೆಟ್ ರೈಲು ಯೋಜನೆಯು ಭಾರತ ಮತ್ತು ಜಪಾನ್ ನಡುವಿನ ಸಾರಿಗೆ ಸಹಕಾರಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ.
ಶುದ್ಧ ಇಂಧನ ಪಾಲುದಾರಿಕೆ, 2022):-ಜಲಜನಕ, ನವೀಕರಿಸಬಹುದಾದ ಇಂಧನಗಳು ಮತ್ತು ಹವಾಮಾನ ಸಹಕಾರ ಕ್ಷೇತ್ರಗಳನ್ನು ವಿಸ್ತರಿಸುತ್ತದೆ.
ಕ್ವಾಡ್:- ‘ಕ್ವಾಡ್’ ಸಮನ್ವಯವು ಸಾಮೂಹಿಕ ಕಡಲ(ಸಾಗರ) ಬದ್ಧತೆಗಳ ಮೂಲಕ ಇಂಡೋ-ಪೆಸಿಫಿಕ್ ವಲಯದಲ್ಲಿ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ.
ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ (SCRI):- ಇದು ನಿರ್ಣಾಯಕ ಸರಕುಗಳ ಪೂರೈಕೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ವೇದಿಕೆಗಳು:- ಭಾರತ ಮತ್ತು ಜಪಾನ್ ರಾಷ್ಟ್ರಗಳು ಜಿ-20, ಅಂತಾರಾಷ್ಟ್ರೀಯ ಸೌರ ಒಕ್ಕೂಟ, CDRI ಮತ್ತು IPEF ಗಳಲ್ಲಿ ಸಹಕರಿಸುತ್ತಿದ್ದು, ಇದು ಬಹುಪಕ್ಷೀಯ ಆಡಳಿತವನ್ನು ಬಲಪಡಿಸುತ್ತದೆ.
ಬಾಹ್ಯಾಕಾಶ:- ಇಸ್ರೋ ಮತ್ತು ಜಾಕ್ಸಾ (JAXA) ದ‘ಲುಪೆಕ್ಸ್’ ಮಿಷನ್, ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿನ ಅತ್ಯಾಧುನಿಕ ಸಹಯೋಗಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ವಿಶ್ವಸಂಸ್ಥೆಯ ಮುಕ್ತ ಸಾಗರಗಳ (ಹೈ ಸೀಸ್) ಒಪ್ಪಂದ
Geography & Environment
ಇದೀಗ ಸುದ್ದಿಯಲ್ಲಿದೆ:
ವಿಶ್ವಸಂಸ್ಥೆ ಬೆಂಬಲಿತ ಅಂತರರಾಷ್ಟ್ರೀಯ ಜಲಪ್ರದೇಶಗಳ ಜೀವವೈವಿಧ್ಯ ಕುರಿತು ಒಪ್ಪಂದ ಜಾರಿಗೆ ಬಂದಿದೆ. ಇದನ್ನು ಅಧಿಕೃತವಾಗಿ ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದ’ ಎಂದು ಕರೆಯಲಾಗುತ್ತದೆ.
ಈ ಒಪ್ಪಂದವು ಮುಕ್ತ ಸಾಗರಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ಬಳಸಲು, ವಿಶ್ವದ ಮೊದಲ ಕಾನೂನುಬದ್ಧ ಜಾಗತಿಕ ಚೌಕಟ್ಟನ್ನು ಸೃಷ್ಟಿಸಿದೆ.
ಮುಕ್ತ ಸಾಗರಗಳು (High Seas) ಎಂದರೇನು?
‘ಮುಕ್ತ ಸಾಗರಗಳು’ ಎಂದರೆ ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ,ಅಂದರೆ 200 ನಾಟಿಕಲ್ ಮೈಲಿಗಳಾಚೆಗಿನ (ವಿಶೇಷ ಆರ್ಥಿಕ ವಲಯಗಳು – EEZs) ಸಾಗರ ಪ್ರದೇಶಗಳಾಗಿವೆ.
ಇವು ಜಾಗತಿಕ ಸಾಗರದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಮತ್ತು ಭೂ ಮೇಲ್ಮೈಯ ಅರ್ಧದಷ್ಟು ಭಾಗವನ್ನು ಆವರಿಸಿಕೊಂಡಿವೆ.
ಈ ಹಿಂದೆ, ಇವುಗಳ ನಿರ್ವಹಣೆಯು ಮುಖ್ಯವಾಗಿ UNCLOS ಅಡಿಯಲ್ಲಿನ ಸಾಮಾನ್ಯ ತತ್ವಗಳನ್ನು ಆಧರಿಸಿತ್ತು. ಹೀಗಾಗಿ, ಇಲ್ಲಿ ‘ಜೀವವೈವಿಧ್ಯ-ನಿರ್ದಿಷ್ಟ ನಿಯಂತ್ರಣ’ವು ಸೀಮಿತವಾಗಿತ್ತು.
ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದದ ಬಗ್ಗೆ:
ಅಂಗೀಕಾರ ಮತ್ತು ಹಿನ್ನೆಲೆ:- ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ, ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳ ಸಾಗರ ಜೀವವೈವಿಧ್ಯದ ಕುರಿತಾದ ಅಂತರ-ಸರ್ಕಾರಿ ಸಮ್ಮೇಳನ’ದ ಮುಖಾಂತರ 2023 ರಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಯಿತು.
UNCLOS ಅಡಿಯಲ್ಲಿನ ಒಂದು ಒಪ್ಪಂದ:- ಇದು ಸಮುದ್ರಗಳ (ಕಡಲ) ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ’ದ (UNCLOS) ಅಡಿಯಲ್ಲಿನ ಒಂದು ಒಪ್ಪಂದವಾಗಿದೆ.
ಸಾಗರ ಜೀವವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ:- ಇದನ್ನು ಸಾಮಾನ್ಯವಾಗಿ ‘ಮುಕ್ತ ಸಾಗರಗಳು’ ಎಂದು ಕರೆಯಲ್ಪಡುವ, ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳಲ್ಲಿ (ABNJ) ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
83 ಸದಸ್ಯ ರಾಷ್ಟ್ರಗಳು:- ಭಾರತವು ಇದಕ್ಕೆ ಸಹಿ ಹಾಕಿದೆಯಾದರೂ, ಇನ್ನೂ BBNJ ಒಪ್ಪಂದವನ್ನು ದೃಢೀಕರಿಸಿಲ್ಲ.
ಬೀಜ ಕಾಯ್ದೆ, 2026 ಮತ್ತು ರೈತರ ಮೇಲೆ ಇದರ ಪ್ರಭಾವ
ಸಾಮಾನ್ಯ ಅಧ್ಯಯನ- 3/ಕೃಷಿ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು “ಬೀಜ ಕಾಯ್ದೆ, 2026” ರ ವೈಶಿಷ್ಟ್ಯಗಳು ಮತ್ತು ರೈತರ ಮೇಲೆ ಇದರ ಪ್ರಭಾವದ ಬಗ್ಗೆ ವಿವರಣೆ ನೀಡಿದರು.
ಬೀಜ ಕಾಯ್ದೆ, 2026 ಅನ್ನು ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಬೀಜ ಕಾಯ್ದೆ 2026 ರ ಪ್ರಮುಖ ಅಂಶಗಳು:
ದೇಶಾದ್ಯಂತ ಬೀಜದ ಮೂಲ ಪತ್ತೆಹಚ್ಚುವಿಕೆ:- ವಾಣಿಜ್ಯ ಉದ್ದೇಶದಿಂದ ಮಾರಾಟವಾಗುವ ಬಿತ್ತನೆ ಬೀಜದ ಪ್ರತಿ ಪ್ಯಾಕೆಟ್, ರೈತರು ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ (QR) ಕೋಡ್ ಅನ್ನು ಹೊಂದಿರುತ್ತದೆ.
ಸ್ಕ್ಯಾನಿಂಗ್ ಈ ಕೆಳಗಿನ ಪ್ರಮುಖ ಮಾಹಿತಿಯನ್ನು ಹೊಂದಿರುತ್ತದೆ ಮತ್ತು ಒದಗಿಸುತ್ತದೆ:-
ಬೀಜವನ್ನು ಯಾರು ಉತ್ಪಾದಿಸಿದರು,
ಎಲ್ಲಿಂದ ಪಡೆಯಲಾಗಿದೆ
ಯಾವ ಮಾರಾಟಗಾರರು ಅದನ್ನು ಮಾರಾಟ ಮಾಡಿದ್ದಾರೆ.
ನೊಂದ ರೈತರಿಗೆ ತ್ವರಿತ ಪರಿಹಾರ:- ಅನಾಮಧೇಯ ಬೀಜ ಮಾರಾಟದ ನಿರ್ಮೂಲನೆ, ನಕಲಿ ಅಥವಾ ಕಳಪೆ ಗುಣಮಟ್ಟದ ಬೀಜಗಳನ್ನು ತ್ವರಿತವಾಗಿ ಪತ್ತೆಹಚ್ಚುವ ಗುರಿಯನ್ನು ಇದು ಹೊಂದಿದ್ದು, ನೊಂದ ರೈತರಿಗೆ ತ್ವರಿತ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ.
ಬೀಜ ಕಂಪನಿಗಳು ಮತ್ತು ಮಾರಾಟಗಾರರ ಕಡ್ಡಾಯ ನೋಂದಣಿ:–ವಾಣಿಜ್ಯ ಉದ್ದೇಶದ ಬೀಜ ಉತ್ಪಾದಕರ, ವರ್ತಕರ ಮತ್ತು ವಿತರಕರ ಕಡ್ಡಾಯ ನೋಂದಣಿಯನ್ನು ಈ ಕಾಯ್ದೆಯು ಪ್ರಸ್ತಾಪಿಸುತ್ತದೆ.
ಕಳಪೆ ಮತ್ತು ನಕಲಿ ಬೀಜಗಳಿಗೆ ಕಠಿಣ ದಂಡಗಳು:– ಉದ್ದೇಶಪೂರ್ವಕ ಉಲ್ಲಂಘನೆಗಳಿಗಾಗಿ, ಹೊಸ ಕಾಯ್ದೆಯು ₹30 ಲಕ್ಷದವರೆಗೆ ದಂಡ ಮತ್ತು ಸಂಭವನೀಯ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.
ಸಾಂಪ್ರದಾಯಿಕ ಬೀಜ ಪದ್ಧತಿಗಳ ಸಂರಕ್ಷಣೆ:–ಸಮುದಾಯದೊಳಗೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಮತ್ತು ವಿನಿಮಯ ಮಾಡಿಕೊಳ್ಳುವಂತಹ ರೈತರ ಸಾಂಪ್ರದಾಯಿಕ ಪದ್ಧತಿಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
ಹೊಸ ಕಾಯ್ದೆಯು ವಾಣಿಜ್ಯ ಉದ್ದೇಶದ ಬೀಜದ ಗುಣಮಟ್ಟದ ಮೇಲೆ ಮಾತ್ರ ಗಮನಹರಿಸುತ್ತದೆ, ಆದರೆ ಸಾಂಪ್ರದಾಯಿಕ ಹಾಗೂ ಬ್ರ್ಯಾಂಡ್-ರಹಿತ ಬೀಜ ವ್ಯವಸ್ಥೆಗಳ ಮೇಲೆ ಗಮನ ಹರಿಸುವುದಿಲ್ಲ.
ಆಮದು ಮಾಡಿಕೊಂಡ ಬೀಜಗಳ ವೈಜ್ಞಾನಿಕ ಮೌಲ್ಯಮಾಪನ:- ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಅವು ಪರಿಸರೀಯ, ಕೃಷಿ ಪದ್ಧತಿಯ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದನ್ನು ಇದು ಖಚಿತಪಡಿಸುತ್ತದೆ.
ಸ್ಥಳೀಯ ರೈತರ ಸಂರಕ್ಷಣೆ:- ಭಾರತದ ಬೆಳೆಯುವ ಪರಿಸ್ಥಿತಿಗಳಿಗೆ ಸೂಕ್ತವಲ್ಲದ ಕಳಪೆ ವಿದೇಶಿ ಬೀಜಗಳಿಂದ ಇದು ಸ್ಥಳೀಯ ರೈತರನ್ನು ರಕ್ಷಿಸುತ್ತದೆ.
ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಒಕ್ಕೂಟದ ಸಹಕಾರ:- ವಿವಿಧ ಪ್ರದೇಶಗಳಲ್ಲಿ ಬೀಜ ಪರೀಕ್ಷೆ, ನೋಂದಣಿ ಮತ್ತು ಕಾನೂನು ಜಾರಿ ಪ್ರಕ್ರಿಯೆಗಳಲ್ಲಿ ಸಮನ್ವಯವನ್ನು ಸುಧಾರಿಸಲು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲು ಈ ಕಾಯ್ದೆಯು ಅವಕಾಶ ಕಲ್ಪಿಸುತ್ತದೆ.
ಕೃಷಿಯು ರಾಜ್ಯ ಪಟ್ಟಿಯ ವಿಷಯವಾಗಿದೆ:- ಭಾರತೀಯ ಸಂವಿಧಾನದ 7ನೇ ಅನುಸೂಚಿಯ ಅಡಿಯಲ್ಲಿ ರಾಜ್ಯ ಪಟ್ಟಿ ಇದೆ. ಆದ್ದರಿಂದ, ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ಕೇಂದ್ರದ ಜೊತೆಗೆ ರಾಜ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ತಿರುವಳ್ಳುವರ್ ದಿನ
ಸಾಮಾನ್ಯ ಅಧ್ಯಯನ- 1/ಇತಿಹಾಸ
ಇದೀಗ ಸುದ್ದಿಯಲ್ಲಿದೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುವಳ್ಳುವರ್ ಅವರ ಸರ್ವಕಾಲಿಕ ಕೃತಿಗಳು ಮತ್ತು ಆದರ್ಶಗಳ ಶಾಶ್ವತ ಪ್ರಭಾವವನ್ನು ಗುರುತಿಸಿ, ಅವರಿಗೆ ಗೌರವ ನಮನ ಸಲ್ಲಿಸಿದರು.
ತಿರುವಳ್ಳುವರ್ ದಿನದ ಕುರಿತು:
ಮೊದಲ ಬಾರಿಗೆ ಆಚರಣೆ:-ಮೇ 17 ಮತ್ತು 18, 1935 ರಂದು.
ಪ್ರಸ್ತುತ ಸಮಯದಲ್ಲಿ, ಇದನ್ನು ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಜನವರಿ 15 ಅಥವಾ 16 ರಂದು ‘ಪೊಂಗಲ್’ ಆಚರಣೆಯ ಭಾಗವಾಗಿ ಆಚರಿಸಲಾಗುತ್ತದೆ.
‘ತಿರುವಳ್ಳುವರ್’ ಅವರ ಬಗ್ಗೆ:
ಶ್ರೇಷ್ಠ ತಮಿಳು ಕವಿ:- ಸಾಮಾನ್ಯವಾಗಿ ‘ವಳ್ಳುವರ್’ ಎಂದು ಕರೆಯಲ್ಪಡುವ ತಿರುವಳ್ಳುವರ್ ಅವರು, ಒಬ್ಬ ಪ್ರಸಿದ್ಧ ತಮಿಳು ಕವಿ ಮತ್ತು ತತ್ವಜ್ಞಾನಿಯಾಗಿದ್ದರು.
ತಿರುಕ್ಕುರಳ್ (ದ್ವಿಪದಿಗಳ ಸಂಗ್ರಹ):- ಇವರು ನೀತಿ, ರಾಜಕೀಯ, ಆರ್ಥಿಕತೆ ಮತ್ತು ಪ್ರೀತಿಯ ಕುರಿತಾದ ದ್ವಿಪದಿಗಳ ಸಂಗ್ರಹವಾದ ‘ತಿರುಕ್ಕುರಳ್’ ಕೃತಿಯ ಕರ್ತೃ ಎಂದು ಪ್ರಸಿದ್ಧರಾಗಿದ್ದಾರೆ.
ಜಲ್ಲಿಕಟ್ಟು
ಸಾಮಾನ್ಯ ಅಧ್ಯಯನ- 1/ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚಿಗೆ ಅಲಂಗನಲ್ಲೂರ್‌ನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಜಲ್ಲಿಕಟ್ಟು ಕ್ರೀಡೆಯ ಬಗ್ಗೆ:
ಇದನ್ನು ‘ಏರುತಝುವ್ವುತಲ್’ ಎಂತಲೂ ಕರೆಯಲಾಗುತ್ತದೆ.
ಗೂಳಿ ಪಳಗಿಸುವ ಕ್ರೀಡೆಯಾಗಿದೆ:-ತಮಿಳುನಾಡಿನಲ್ಲಿ ಸುಗ್ಗಿ ಹಬ್ಬವಾದ ‘ಪೊಂಗಲ್’ ಆಚರಣೆಯ ಭಾಗವಾಗಿ ಇದನ್ನು ಸಾಂಪ್ರದಾಯಿಕವಾಗಿ ಆಡಲಾಗುತ್ತದೆ.
ಅಯರ್‌ರು ಆಡುತ್ತಿದ್ದ ಕ್ರೀಡೆ:- ಈ ಗೂಳಿ ಕಾಳಗದ ಇತಿಹಾಸವು ಕ್ರಿ. ಪೂ. 400-100 ರಷ್ಟು ಹಳೆಯದಾಗಿದ್ದು, ಆ ಸಮಯದಲ್ಲಿ ಭಾರತದ ಜನಾಂಗೀಯ ಗುಂಪಾದ‘ಅಯರ್‌ರು’ ಇದನ್ನು ಆಡುತ್ತಿದ್ದರು.
ಜಲ್ಲಿ + ಕಟ್ಟು:- ಎಂಬ ಎರಡು ಪದಗಳಿಂದ ಬಂದಿದೆ. ‘ಜಲ್ಲಿ’ ಎಂದರೆ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು ಮತ್ತು ‘ಕಟ್ಟು’ ಎಂದರೆ ಕಟ್ಟಿರುವುದು.
ಈ ಹಬ್ಬದಲ್ಲಿ, ಜನರ ಗುಂಪಿನ ನಡುವೆ ಗೂಳಿಯನ್ನು ಮುಕ್ತವಾಗಿ ಬಿಡಲಾಗುತ್ತದೆ ಮತ್ತು ಅದನ್ನು ಯಾರು ಪಳಗಿಸುತ್ತಾರೋ ಅವರು ಅದರ ಕೊಂಬಿಗೆ ಕಟ್ಟಿದ ನಾಣ್ಯಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
ಈ ಕ್ರೀಡೆಯಲ್ಲಿ ಭಾಗವಹಿಸುವ ಜನರು ಪ್ರಾಣಿಯನ್ನು ತಡೆಯಲು ಅದರ ಡುಬ್ಬವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಅಥವಾ ಕೆಲವೊಮ್ಮೆ ಅವರು ಗೂಳಿಯೊಂದಿಗೆ ಓಡುತ್ತಾರೆ.
‘ಪುಲಿಕುಲಂ’ ಅಥವಾ ‘ಕಾಂಗಯಂ’ ತಳಿಯ ಹೋರಿಗಳ ಬಳಕೆ:- ಈ ಹಬ್ಬವು ರಾಜ್ಯದ ಸಾಂಸ್ಕೃತಿಕ ಪ್ರವಾಸೋದ್ಯಮದ ಭಾಗವಾಗಿದೆ.
ಈ ಕ್ರೀಡೆಯ ವಿವಿಧ ಪ್ರಕಾರಗಳು:-‘ವಾಡಿ ಮಂಜುವಿರಟ್ಟು’, ‘ವೇಲಿ ವಿರಟ್ಟು’ ಮತ್ತು ‘ವಟಂ ಮಂಜುವಿರಟ್ಟು’.
ಪ್ರಮುಖ ಕಳವಳಗಳು:
ಪ್ರಾಣಿ ಹಿಂಸೆ ಮತ್ತು ನರಳುವಿಕೆ:- ಗೂಳಿಗಳನ್ನು ಪ್ರಚೋದಿಸಲು ಮದ್ಯ, ಕೋಲುಗಳು, ಚಾಕುಗಳು ಮತ್ತು ಮೆಣಸಿನ ಪುಡಿಯನ್ನು ಕಣ್ಣುಗಳಿಗೆ ಹಾಕಲಾಗುತ್ತದೆ. ತರಬೇತಿ ಮತ್ತು ಪಂದ್ಯದ ಸಮಯದಲ್ಲಿ ಬಾಲವನ್ನು ತಿರುಚುವುದು ಮತ್ತು ದೈಹಿಕ ದೌರ್ಜನ್ಯವು ಗೂಳಿಗಳಿಗೆ ವಿಪರೀತ ಒತ್ತಡ, ನೋವು ಮತ್ತು ಗಂಭೀರ ಗಾಯಗಳನ್ನು ಉಂಟುಮಾಡುತ್ತದೆ.
ಮಾನವ ಗಾಯಗಳು ಮತ್ತು ಸಾವುಗಳು:- ಈ ಪಂದ್ಯಾವಳಿಯು ಗಮನಾರ್ಹ ಅಪಾಯಗಳನ್ನು ತಂದೊಡ್ಡುತ್ತದೆ. ಹಿಂದಿನ ವರ್ಷಗಳಲ್ಲಿ ಸ್ಪರ್ಧಿಗಳು ಮತ್ತು ಗೂಳಿಗಳು ಇಬ್ಬರಿಗೂ ಹಲವಾರು ಗಾಯಗಳು ಮತ್ತು ಸಾವುಗಳು ಸಂಭವಿಸಿರುವುದು ವರದಿಯಾಗಿದೆ.
ನೈತಿಕ ಪರಿಗಣನೆಗಳು:– ಸಾಂಸ್ಕೃತಿಕ ಮಹತ್ವ ಏನೇ ಇದ್ದರೂ, ಮನರಂಜನೆಗಾಗಿ ಗೂಳಿಗಳನ್ನು ಬಳಸುವುದು ಅನೈತಿಕವಾಗಿದೆ ಎಂದು ಪ್ರಾಣಿ ಹಕ್ಕುಗಳ ಸಂಘಗಳು ವಾದಿಸುತ್ತವೆ. ಈ ಆಚರಣೆಯು ಪ್ರಾಣಿಗಳನ್ನು ಶೋಷಿಸುತ್ತದೆ ಮತ್ತು ಅವುಗಳಿಗೆ ಆಘಾತವನ್ನು ಉಂಟುಮಾಡುತ್ತದೆ.
2023 ರಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯ್ದೆ, 1960’ ಕ್ಕೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಶಾಸಕಾಂಗಗಳು ಮಾಡಿದ ತಿದ್ದುಪಡಿಗಳನ್ನು ಎತ್ತಿಹಿಡಿದಿದೆ. ಇದು ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಗಾಡಿ ಓಟದಂತಹ ಗೂಳಿ ಪಳಗಿಸುವ ಕ್ರೀಡೆಗಳಿಗೆ ಅನುಮತಿ ನೀಡಿದೆ.
ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ – ಬೆಂಗಳೂರಿನ 3ನೇ ಅತಿದೊಡ್ಡ ಉದ್ಯಾನವನ
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರಿನ ಯಲಹಂಕದಲ್ಲಿ,ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಬೃಹತ್ “ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ”ವನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆಯು ಇತ್ತೀಚಿಗೆ ಅಧಿಕೃತ ಅನುಮೋದನೆ ನೀಡಿದೆ.
ಈ ಉದ್ಯಾನವನದ ಪ್ರಮುಖ ಲಕ್ಷಣಗಳು:
ಹೆಸರು:- ಇದನ್ನು ಅಧಿಕೃತವಾಗಿ “ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ” ಎಂದು ಕರೆಯಲಾಗುವುದು.
ಸ್ಥಳ:- ಇದು ಬೆಂಗಳೂರಿನ ಯಲಹಂಕದ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಆರಂಭವಾಗಲಿದೆ.
ವಿಸ್ತೀರ್ಣ:- ಒಟ್ಟು 153 ಎಕರೆ ಪ್ರದೇಶದಲ್ಲಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಆರಂಭಿಕ ಮಂಜೂರು ವೆಚ್ಚ:- ಮೊದಲ ಹಂತದ ಅಭಿವೃದ್ಧಿಗಾಗಿ ₹50 ಕೋಟಿ ಹಣವನ್ನು ಮಂಜೂರು ಮಾಡಿದೆ.
ಒಟ್ಟು ಅಂದಾಜು ಯೋಜನಾ ವೆಚ್ಚ:- ₹250 ಕೋಟಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ ಕಂಪನಿಗಳಿಂದ ಹೆಚ್ಚುವರಿ ಹಣಕಾಸು ನೆರವು ನಿರೀಕ್ಷಿಸಲಾಗಿದೆ.
ಪ್ರಾಮುಖ್ಯತೆ:
ನಗರದ ಶ್ವಾಸಕೋಶ:- ಹೆಚ್ಚುತ್ತಿರುವ ನಗರೀಕರಣದ ನಡುವೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ‘ಶ್ವಾಸತಾಣ’ ಮತ್ತು ಸಾರ್ವಜನಿಕರ ಮನೋಲ್ಲಾಸ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.
ಬೆಂಗಳೂರು ನಗರದ 3ನೇ ಅತಿದೊಡ್ಡ ಉದ್ಯಾನವನ:- ವಿಸ್ತೀರ್ಣದ ದೃಷ್ಟಿಯಿಂದ ಇದು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರದ ಸ್ಥಾನವನ್ನು ತುಂಬಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದು 150 ವರ್ಷಕ್ಕಿಂತ ಹೆಚ್ಚಿನ ಅವಧಿಯ ನಂತರ ಆರಂಭವಾಗುತ್ತಿರುವ ಮೊದಲ ಪ್ರಮುಖ ಸಸ್ಯೋದ್ಯಾನ (ಬೋಟಾನಿಕಲ್ ಗಾರ್ಡನ್) ಯೋಜನೆ ಎಂದು ಗುರುತಿಸುತ್ತದೆ.
ಬೆಂಗಳೂರಿನ ಪ್ರಮುಖ ಉದ್ಯಾನವನಗಳ ತುಲನಾತ್ಮಕ ಮಾಹಿತಿ:
ಉದ್ಯಾನವನದ ಹೆಸರು
ಸ್ಥಾಪನೆಯಾದ ವರ್ಷ
ವಿಸ್ತೀರ್ಣ (ಎಕರೆಗಳಲ್ಲಿ)
ಐತಿಹಾಸಿಕ ಹಿನ್ನೆಲೆ
ಲಾಲ್‌ಬಾಗ್
1760
240 ಎಕರೆ
ಹೈದರ್ ಅಲಿ ಕಾಲದಲ್ಲಿ ನಿರ್ಮಾಣವಾಯಿತು (265 ವರ್ಷಗಳ ಇತಿಹಾಸ).
ಕಬ್ಬನ್ ಪಾರ್ಕ್
1870
197 ಎಕರೆ
ಜಾನ್ ಮೇಡ್ ಕಬ್ಬನ್ ಅವರ ಹೆಸರಿನಲ್ಲಿ ನಿರ್ಮಾಣವಾಯಿತು (155 ವರ್ಷಗಳ ಇತಿಹಾಸ).
ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ
2025-26 (ಪ್ರಸ್ತಾವಿತ)
153 ಎಕರೆ
ಇದು ಯಲಹಂಕದ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಆಧುನಿಕ ಜೀವವೈವಿಧ್ಯ ಉದ್ಯಾನವಾಗಿದೆ.
ರಾಷ್ಟ್ರೀಯ ಸ್ಟಾರ್ಟ್-ಅಪ್ (ನವೋದ್ಯಮ) ದಿನವಾದ ಜನವರಿ 16 ರಂದು, ‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮವು ಒಂದು ದಶಕವನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.
ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮದ ಬಗ್ಗೆ:
ಪ್ರಾರಂಭ:-ಜನವರಿ 16, 2016.
ಉದ್ದೇಶ:-ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಹೂಡಿಕೆ ಆಧಾರಿತ ಬೆಳವಣಿಗೆಯನ್ನು ಸಾಧ್ಯವಾಗಿಸುವುದು.
ಭಾರತದ ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಯ ಬಗ್ಗೆ:
2025ರ ವೇಳೆಗೆ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದುವ ಮೂಲಕ, ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ತ್ವರಿತವಾಗಿ ರೂಪುಗೊಂಡಿದೆ.
ಭಾರತವು ವಿಶ್ವದಲ್ಲೇ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ.
ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ಎನ್‌ಸಿಆರ್ (ರಾಷ್ಟ್ರ ರಾಜಧಾನಿ ಪ್ರದೇಶ)ನಂತಹ ಪ್ರಮುಖ ಕೇಂದ್ರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ.
ಭಾರತವು $350 ಬಿಲಿಯನ್ಗೂಅಧಿಕ ಮೌಲ್ಯವನ್ನು ಹೊಂದಿರುವ120 ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಹೊಂದಿದೆ.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO)ಯ – ಜಾಗತಿಕ ನಾವೀನ್ಯತೆ ಸೂಚ್ಯಂಕ (GII), 2025 ರ ಶ್ರೇಯಾಂಕ:
ಇದು ಕಾರ್ಯಕ್ಷಮತೆಯ ಮಾನದಂಡಗಳನ್ನು ಒದಗಿಸುತ್ತದೆ ಮತ್ತು ಸುಮಾರು 140 ಆರ್ಥಿಕತೆಗಳನ್ನು ಅವುಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಆಧಾರದ ಮೇಲೆ ಶ್ರೇಣೀಕರಿಸುತ್ತದೆ.
ಭಾರತವು 2020 ರಲ್ಲಿನ 48 ನೇ ಸ್ಥಾನದಿಂದ 2025 ರಲ್ಲಿ 38 ನೇ ಸ್ಥಾನಕ್ಕೆ ಸ್ಥಿರವಾದ ಏರಿಕೆಯನ್ನು ಕಂಡಿದೆ.
2025: ದಾಖಲೆಯ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷ
ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ/ಸಾಮಾನ್ಯ ಅಧ್ಯಯನ-3/ಪರಿಸರ
ಇದೀಗ ಸುದ್ದಿಯಲ್ಲಿದೆ:
ಹೊಸ ವರದಿಯೊಂದರ ಪ್ರಕಾರ, 2025 ದಾಖಲಾದ 3 ನೇ ಅತ್ಯಂತ ಉಷ್ಣತೆಯ ವರ್ಷ ಮತ್ತು ಇತಿಹಾಸದಲ್ಲೇ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷವಾಗಿದೆ.
“ಲಾ ನಿನಾ” ಬಗ್ಗೆ:
ಇದೊಂದು ಪೆಸಿಫಿಕ್ ಮಹಾಸಾಗರದ ಹವಾಮಾನ ಮಾದರಿಯಾಗಿದ್ದು, ಇದರಲ್ಲಿ ಬೆಚ್ಚಗಿನ ಸಾಗರದ ನೀರು ಮತ್ತು ಮೋಡಗಳು ಪಶ್ಚಿಮದ ಕಡೆಗೆ ಸ್ಥಳಾಂತರಗೊಳ್ಳುತ್ತವೆ.
ಸಾಮಾನ್ಯಕ್ಕಿಂತ ಭಾರೀ ಮಳೆ:- ಈ ಪ್ರಕ್ರಿಯೆಯು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಂತಹಪ್ರದೇಶಗಳಲ್ಲಿಭಾರೀ ಮಳೆಗೆ ಕಾರಣವಾಗುತ್ತದೆ.
ಸಾಮಾನ್ಯಕ್ಕಿಂತ ಹೆಚ್ಚು ಶುಷ್ಕ ಪರಿಸ್ಥಿತಿ:- ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ನೈಋತ್ಯ ಭಾಗದ ಪ್ರದೇಶಗಳು ಈ ಪರಿಸ್ಥಿತಿಗಳನ್ನು ಅನುಭವಿಸುತ್ತವೆ.
ಭಾರತದ ಮೇಲೆ El-Nino ಮತ್ತು La-Nina ಪ್ರಭಾವಗಳು:
‘ಎಲ್ ನಿನೊ’ ಸಾಮಾನ್ಯವಾಗಿ ಕಡಿಮೆ ಮಳೆ ಮತ್ತು ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ.
‘ಲಾ ನಿನಾ’ ಹೆಚ್ಚಿನ ಮಳೆ ಮತ್ತು ತಂಪಾದ ತಾಪಮಾನವನ್ನು ತರುತ್ತದೆ.
‘ವುಮನಿಯಾ’ (Womaniya) ಉಪಕ್ರಮ
ಸಾಮಾನ್ಯ ಅಧ್ಯಯನ-1/ಮಹಿಳಾ ಸಬಲೀಕರಣ
ಇದೀಗ ಸುದ್ದಿಯಲ್ಲಿದೆ:
ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಅಡಿಯಲ್ಲಿ ಜಾರಿಗೊಳಿಸಲಾದ ‘ವುಮೆನಿಯಾ’ ಉಪಕ್ರಮವು, ತನ್ನ ಅನುಷ್ಠಾನದ 7 ವರ್ಷಗಳನ್ನು ಪೂರೈಸಿದೆ.
‘ವುಮೆನಿಯಾ’ (Womaniya) ಉಪಕ್ರಮದ ಬಗ್ಗೆ:
ಪ್ರಾರಂಭ:- 2019
ಉದ್ದೇಶ:- ಖರೀದಿದಾರರೊಂದಿಗೆ ನೇರ, ಪಾರದರ್ಶಕ ಮತ್ತು ಸಂಪೂರ್ಣ ಡಿಜಿಟಲ್ ಸಂಪರ್ಕವನ್ನು ಕಲ್ಪಿಸುವ ಮೂಲಕ, ಮಧ್ಯವರ್ತಿಗಳನ್ನು ಹಾಗೂ ಪ್ರವೇಶಕ್ಕಿರುವ ಅಡೆತಡೆಗಳನ್ನು ನಿವಾರಿಸಿ, ಮಹಿಳಾ ಉದ್ಯಮಿ ಮತ್ತು ಸ್ವಸಹಾಯ ಸಂಘಗಳಿಗೆ ಸರ್ಕಾರಿ ಮಾರುಕಟ್ಟೆಗಳಲ್ಲಿ ಪ್ರವೇಶವನ್ನುಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಮಹತ್ವ:-ಸಾರ್ವಜನಿಕ ಸಂಗ್ರಹಣೆಯಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಭಾಗವಹಿಸುವಿಕೆಯನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.
ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM)ನ ಬಗ್ಗೆ:
ಸ್ಥಾಪನೆ:- 2016.
ಆನ್‌ಲೈನ್ ಮಾರುಕಟ್ಟೆ ವೇದಿಕೆ:-ಇದರಲ್ಲಿ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು (PSU) ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲವಾಗುತ್ತದೆ.
ಇದನ್ನು‘ಭಾರತದ ರಾಷ್ಟ್ರೀಯ ಸಂಗ್ರಹಣಾ ಪೋರ್ಟಲ್’ಎಂತಲೂ ಕರೆಯಲಾಗುತ್ತದೆ.
ಅಭಿವೃದ್ಧಿಪಡಿಸಿದವರು:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ ವಿಭಾಗದ ತಾಂತ್ರಿಕ ಬೆಂಬಲದೊಂದಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ.
ಕಾರ್ಯನಿರ್ವಹಣೆ:- ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ (DGS&D).
ಮಹತ್ವ:- GeM ಸಂಪೂರ್ಣವಾಗಿ ಕಾಗದರಹಿತ, ನಗದುರಹಿತ ಮತ್ತು ವ್ಯವಸ್ಥೆ ಚಾಲಿತ ಇ-ಮಾರುಕಟ್ಟೆಯಾಗಿದ್ದು, ಇದು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಖರೀದಿಯನ್ನು ಸಾಧ್ಯವಾಗಿಸುತ್ತದೆ.
ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ
ಸಾಮಾನ್ಯ ಅಧ್ಯಯನ – 2/ಆಡಳಿತ
ಇದೀಗ ಸುದ್ದಿಯಲ್ಲಿದೆ:
ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಬಲಪಡಿಸುವ ಉದ್ದೇಶದಿಂದ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು (MoTA) ‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ವನ್ನು ಆಯೋಜಿಸುತ್ತಿದೆ.
‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಬಗ್ಗೆ:
ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರ:-ಬುಡಕಟ್ಟು ಮತ್ತು ಸ್ಥಳೀಯ ವೈದ್ಯರನ್ನು ಭಾರತದ ಸಾರ್ವಜನಿಕ ಆರೋಗ್ಯ ಪರಿಸರ ವ್ಯವಸ್ಥೆಯೊಳಗೆ, ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರರನ್ನಾಗಿ ಗುರುತಿಸುವುದು ಮತ್ತು ಅವರನ್ನು ಮುಖ್ಯವಾಹಿನಿಯೊಂದಿಗೆ ಸಂಯೋಜಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ವೈದ್ಯರು ಆಳವಾದ ಜನಾಂಗೀಯ-ಔಷಧೀಯ ಜ್ಞಾನವನ್ನು ಹೊಂದಿರುತ್ತಾರೆ. ಇವರು ಸಮುದಾಯದ ಜನರಿಗೆ ಸುಲಭವಾಗಿ ಲಭ್ಯವಿರುತ್ತಾರೆ ಮತ್ತು ಆರೋಗ್ಯ ಸೇವೆಗಳಿಗಾಗಿ ಜನರು ಆಶ್ರಯಿಸುವ ‘ಮೊದಲ ಸಂಪರ್ಕ ಬಿಂದುಗಳಾಗಿ’ ಕಾರ್ಯನಿರ್ವಹಿಸುತ್ತಾರೆ..
ಅನುಷ್ಠಾನ:- “ಪ್ರಾಜೆಕ್ಟ್ ದೃಷ್ಟಿ” (DRISTI)ಯ ಅಡಿಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಬುಡಕಟ್ಟು ಆರೋಗ್ಯ ವೀಕ್ಷಣಾಲಯವಾದ, ‘ಭಾರತ್ ಬುಡಕಟ್ಟು ಆರೋಗ್ಯ ವೀಕ್ಷಣಾಲಯ’ (B-THO)ವನ್ನು ಸ್ಥಾಪಿಸುವ ಸಲುವಾಗಿ, ICMR – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ (MoTA) ನಡುವೆ ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಲಾಗುವುದು.
ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ ಮತ್ತು ಪೀಠಾಸೀನ ಅಧಿಕಾರಿಗಳ (CSPOC) 28ನೇ ಸಮ್ಮೇಳನ
ಸಾಮಾನ್ಯ ಅಧ್ಯಯನ – 2/ಆಡಳಿತ
ಇದೀಗ ಸುದ್ದಿಯಲ್ಲಿದೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಂವಿಧಾನ ಸದನ’ದಲ್ಲಿ ಆಯೋಜಿಸಲಾಗಿದ್ದ “CSPOC- ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ (Speakers) ಮತ್ತು ಪೀಠಾಸೀನ ಅಧಿಕಾರಿಗಳ (Presiding Officers) 28ನೇ ಸಮ್ಮೇಳನ”ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ತನ್ನ ವೈವಿಧ್ಯತೆಯನ್ನು ಹೇಗೆ ಪ್ರಜಾಸತ್ತಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು.
ಈ 28ನೇ ಸಮ್ಮೇಳನದ ಬಗ್ಗೆ:
ಈ ಸಮ್ಮೇಳನದಲ್ಲಿ 42 ಕಾಮನ್‌ವೆಲ್ತ್ ರಾಷ್ಟ್ರಗಳನ್ನು ಪ್ರತಿನಿಧಿಸುವ 61 ಸಭಾಧ್ಯಕ್ಷರು ಮತ್ತು ಪೀಠಾಸೀನ ಅಧಿಕಾರಿಗಳು ಭಾಗವಹಿಸಿದ್ದರು.
ಉದ್ದೇಶ:- ಸಂಸದೀಯ ಪ್ರಜಾಪ್ರಭುತ್ವದ ವಿವಿಧ ಸ್ವರೂಪಗಳ ಕುರಿತು ಜ್ಞಾನ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದು ಹಾಗೂ ಸಂಸದೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
ಅಧ್ಯಕ್ಷತೆ:- ಲೋಕಸಭೆಯ ಸಭಾಧ್ಯಕ್ಷರಾದ ‘ಓಂ ಬಿರ್ಲಾ’ ಅವರು ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಮನ್‌ವೆಲ್ತ್ ರಾಷ್ಟ್ರಗಳ ಬಗ್ಗೆ:
ಸದಸ್ಯ ರಾಷ್ಟ್ರಗಳು:-56 ಸ್ವತಂತ್ರ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಒಕ್ಕೂಟವಾಗಿದೆ.
ಈ ಸದಸ್ಯ ರಾಷ್ಟ್ರಗಳನ್ನು5 ಪ್ರದೇಶವಾರು ಸದಸ್ಯ ರಾಷ್ಟ್ರಗಳಾಗಿ ವಿಂಗಡಿಸಲಾಗಿದೆ.ಅವುಗಳೆಂದರೆ,
ಆಫ್ರಿಕಾ (21), ಏಷ್ಯಾ (8), ಕೆರಿಬಿಯನ್ ಮತ್ತು ಅಮೆರಿಕ (13), ಯುರೋಪ್ (3), ಮತ್ತು ಪೆಸಿಫಿಕ್ (11).
ಈ ದೇಶಗಳು ಒಟ್ಟಾಗಿ ಸುಮಾರು 2.7 ಬಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ ಮತ್ತು ಇದು ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಭಾಗವಾಗಿದೆ.
ಯಾವುದೇ ರಾಷ್ಟ್ರ ಸೇರ್ಪಡೆಯಾಗಲಬಹುದು:- ಇಲ್ಲಿನ ಬಹುಪಾಲು ಸದಸ್ಯ ರಾಷ್ಟ್ರಗಳು ಬ್ರಿಟಿಷ್ ಸಾಮ್ರಾಜ್ಯದ ಹಿಂದಿನ ಪ್ರಾಂತ್ಯಗಳಾಗಿದ್ದರೂ,ಒಕ್ಕೂಟದ ಮೌಲ್ಯಗಳಿಗೆ ಬದ್ಧವಾಗಿರುವ ಯಾವುದೇ ರಾಷ್ಟ್ರವು ಇದಕ್ಕೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದಾಗಿದೆ.
ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಮುಖ ಸಂಗತಿಗಳು ಮತ್ತು ಆಡಳಿತ:
ಕಾಮನ್‌ವೆಲ್ತ್ ಮುಖ್ಯಸ್ಥರು:-ಕಿಂಗ್ ಚಾರ್ಲ್ಸ್ III ಅವರು ಈ ಒಕ್ಕೂಟದ ಸಾಂಕೇತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾರೆ.
ಮಹಾಕಾರ್ಯದರ್ಶಿ:-ಷಿರ್ಲಿ ಅಯೋರ್ಕರ್ ಬೋಚ್ವೆ
ಬ್ರಿಟಿಷ್ ಇತಿಹಾಸ ಹೊಂದಿರದ ರಾಷ್ಟ್ರಗಳು:-ಮೊಜಾಂಬಿಕ್, ರುವಾಂಡಾ, ಗ್ಯಾಬನ್ ಮತ್ತು ಟೋಗೊ ರಾಷ್ಟ್ರಗಳು, ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಯಾವುದೇ ಐತಿಹಾಸಿಕ ಸಂಪರ್ಕವನ್ನು ಹೊಂದಿರದಿದ್ದರೂ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ.
ಅತಿದೊಡ್ಡ ಮತ್ತು ಚಿಕ್ಕ ರಾಷ್ಟ್ರಗಳು:-ಭಾರತವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸದಸ್ಯ ರಾಷ್ಟ್ರವಾಗಿದ್ದರೆ, ನೌರು ಮತ್ತು ತುವಾಲು ಅತ್ಯಂತ ಚಿಕ್ಕ ರಾಷ್ಟ್ರಗಳಾಗಿವೆ.
ಕಾಮನ್‌ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ (CHOGM):- ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮುಂದಿನ ಸಭೆಯು 2026 ರ ಅಂತ್ಯದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನಡೆಯಲಿದೆ.
ಗುಜರಾತ್‌ನಲ್ಲಿ- ಅತ್ಯಂತ ಮಾರಕ ರೋಗಕಾರಕಗಳಿಗಾಗಿ ಭಾರತದ ಮೊದಲ ಸರ್ಕಾರಿ ಅನುದಾನಿತ BSL-4 ಪ್ರಯೋಗಾಲಯ
ಸಾಮಾನ್ಯ ಅಧ್ಯಯನ – 2/ಆರೋಗ್ಯ;ಸಾಮಾನ್ಯ ಅಧ್ಯಯನ – 3/ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಗೃಹ ಸಚಿವರು ಗಾಂಧಿನಗರದಲ್ಲಿ‘ಜೈವಿಕ ಸುರಕ್ಷತಾ ಹಂತ-4’ (BSL-4)ನಿಯಂತ್ರಣ ಸೌಲಭ್ಯ ಮತ್ತು ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಇದನ್ನು ಭಾರತದ “ಆರೋಗ್ಯ ಕವಚ” ಎಂದು ಬಣ್ಣಿಸಿದರು.
ಜೈವಿಕ ಸುರಕ್ಷತಾ ಹಂತ-4 (BSL-4) ಪ್ರಯೋಗಾಲಯ ಸೌಲಭ್ಯದ ಬಗ್ಗೆ:
ಇವುಗಳು ಜೈವಿಕ ನಿಯಂತ್ರಣದ ಅತ್ಯುನ್ನತ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ.
ಲಸಿಕೆಗಳು ಅಥವಾ ಚಿಕಿತ್ಸೆಗಳು ಲಭ್ಯವಿಲ್ಲದ, ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಹೆಚ್ಚು ಸಾಂಕ್ರಾಮಿಕ ರೋಗಕಾರಕಗಳನ್ನು ಸುರಕ್ಷಿತವಾಗಿ ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ವಿಜ್ಞಾನಿಗಳು ಇಲ್ಲಿ ಸುಧಾರಿತ ಸಂಶೋಧನೆಯನ್ನು ನಡೆಸುತ್ತಾರೆ; ರೋಗನಿರ್ಣಯ ವಿಧಾನಗಳು, ಲಸಿಕೆಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅಲ್ಲದೆ, ಕಟ್ಟುನಿಟ್ಟಾದ ನಿಯಂತ್ರಿತ ಮತ್ತು ಅಂತಾರಾಷ್ಟ್ರೀಯ ನಿಗಾ ವ್ಯವಸ್ಥೆಯ ಅಡಿಯಲ್ಲಿ, ರೋಗ ಉಲ್ಬಣದ ತನಿಖೆ ಮತ್ತು ತ್ವರಿತ ಪ್ರತಿಕ್ರಿಯೆ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.
ಮಹತ್ವ:- ಗಾಂಧಿನಗರದಲ್ಲಿ ನಿರ್ಮಾಣವಾಗಲಿರುವ BSL-4 ಪ್ರಯೋಗಾಲಯವು, ‘ಪ್ರಾಣಿಗಳ ಜೈವಿಕ ಸುರಕ್ಷತಾ ಹಂತ’ದ ಸೌಲಭ್ಯದೊಂದಿಗೆ, ಕಾರ್ಯತಂತ್ರದ ರಾಷ್ಟ್ರೀಯ ಆಸ್ತಿಯಾಗಲಿದೆ. ಇಲ್ಲಿ ಎಬೋಲಾ ವೈರಸ್, ಮಾರ್ಬರ್ಗ್ ವೈರಸ್, ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ (CCHF) ವೈರಸ್, ಕ್ಯಾಸನೂರು ಅರಣ್ಯ ಕಾಯಿಲೆ ವೈರಸ್ (KFD) ಮತ್ತು ನಿಫಾ ವೈರಸ್ ಸೇರಿದಂತೆ ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಮಾರಕ ರೋಗಕಾರಕಗಳ ಮೇಲೆ ಸಂಶೋಧನೆ ನಡೆಸಲಾಗುತ್ತದೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಾರ್ಷಿಕ ಗೌರವ ಪ್ರಶಸ್ತಿ, 2025 ಮತ್ತು ಪುಸ್ತಕ ಬಹುಮಾನ, 2024 ಅನ್ನು ಪ್ರದಾನ ಮಾಡಲು ಜನವರಿ 9 ರಂದು ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಾರ್ಷಿಕ ಗೌರವ ಪ್ರಶಸ್ತಿ, 2025 ರ ವಿಜೇತರು:
ಜೆ.ವಿ. ಕಾರ್ಲೋ, ಪ್ರೊ. ವನಮಾಲಾ ವಿಶ್ವನಾಥ, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಡಾ. ವಿಠ್ಠಲರಾವ್ ಟಿ. ಗಾಯಕ್ವಾಡ್ ಮತ್ತು ಡಾ. ಜೆ.ಪಿ. ದೊಡ್ಡಮನಿ
ಪುಸ್ತಕ ಬಹುಮಾನ, 2024 ರ ವಿಜೇತರು:
ಡಾ. ನಟರಾಜ ಹೊನ್ನವಳ್ಳಿ, ಡಾ. ಸದಾನಂದ ಆರ್, ಕಾರ್ತಿಕ್ ಆರ್, ಡಾ. ಮಲ್ಲೇಶಪ್ಪ ಸಿದ್ದರಾಮಪುರ ಮತ್ತು ಡಾ. ದೇವರಾಜ್. ಎನ್ ಅವರಿಗೆ ಅವರ ಅತ್ಯುತ್ತಮ ಸಾಹಿತ್ಯಿಕ ಕೊಡುಗೆಗಳಿಗಾಗಿ ಪುಸ್ತಕ ಬಹುಮಾನಗಳನ್ನು ನೀಡಲಾಯಿತು.
ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರು ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಅಪರೂಪದ ಬಣ್ಣ ವೈವಿಧ್ಯವನ್ನು ಹೊಂದಿರುವ ಚಿರತೆಯನ್ನು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ದಾಖಲಿಸಿದ್ದಾರೆ.
ಪ್ರಮುಖ ಲಕ್ಷಣಗಳು ಮತ್ತು ಮಹತ್ವ:
ವಿಶಿಷ್ಟ ನೋಟ:- ಸಾಮಾನ್ಯ ಚಿರತೆಗಳು ಹಳದಿ-ಕಂದು ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿದ್ದರೆ, ಈ ಚಿರತೆಯು ಶ್ರೀಗಂಧದ ಬಣ್ಣವನ್ನು ಹೋಲುವ ಕೆಂಪು-ಗುಲಾಬಿ ಛಾಯೆಯ ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುವುದು ಇದರ ವಿಶೇಷತೆಯಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ತಾಂಜೇನಿಯಾದಲ್ಲಿ ಇಂತಹ ಚಿರತೆಗಳು ಕಂಡುಬಂದಿದ್ದವು:- ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಇಂತಹ ಚಿರತೆ ಪತ್ತೆಯಾಗಿತ್ತು. ಹಾಗೂ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವುದು ದೇಶದಲ್ಲಿ ಎರಡನೇ ಬಾರಿ ಹಾಗಾಗಿ ಜಾಗತಿಕ ಮಹತ್ವವನ್ನು ಪಡೆದುಕೊಂಡಿದೆ.
“ಸ್ಟ್ರಾಬೆರಿ ಚಿರತೆಗಳು”:- ಅಂತರರಾಷ್ಟ್ರೀಯ ಮಟ್ಟದಲ್ಲಿ ಇವುಗಳನ್ನು “ಸ್ಟ್ರಾಬೆರಿ ಚಿರತೆಗಳು” ಎಂದು ಕರೆಯಲಾಗುತ್ತದೆ. ಆದರೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸಲುವಾಗಿ ಸಂಜಯ್ ಗುಬ್ಬಿ ಅವರು ಈ ಬಗೆಯ ಚಿರತೆಗೆ “ಚಂದನ ಚಿರತೆ” ಎಂದು ಹೆಸರಿಸಲು ಪ್ರಸ್ತಾಪಿಸಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯು (WEF) ತನ್ನ 21ನೇ ಆವೃತ್ತಿಯ “ಜಾಗತಿಕ ಅಪಾಯಗಳ ವರದಿ, 2026” ಅನ್ನು ಬಿಡುಗಡೆ ಮಾಡಿದ್ದು, ಭೌಗೋಳಿಕ-ಆರ್ಥಿಕ ಮುಖಾಮುಖಿಗಳು ಪ್ರಮುಖ ರಾಷ್ಟ್ರಗಳಿಗೆ ಅತಿದೊಡ್ಡ ಅಪಾಯವನ್ನು ತಂದೊಡ್ಡಲಿವೆ ಎಂದು ಎಚ್ಚರಿಸಿದೆ.
ಜಾಗತಿಕ ಅಪಾಯಗಳ ವರದಿ, 2026 ರ ಮುಖ್ಯಾಂಶಗಳು:
ಭೌಗೋಳಿಕ-ಆರ್ಥಿಕ ಮುಖಾಮುಖಿ:- ಇದನ್ನು 2026 ರ ಪ್ರಮುಖ ಅಪಾಯವೆಂದು ಗುರುತಿಸಲಾಗಿದೆ. ಇದು ನಿರ್ಬಂಧ ಮತ್ತು ಸುಂಕಗಳಮೂಲಕ ವ್ಯಾಪಾರ, ಹಣಕಾಸು ಮತ್ತು ತಂತ್ರಜ್ಞಾನವನ್ನು “ಅಸ್ತ್ರವನ್ನಾಗಿ” ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಉದಾಹರಣೆಗೆ ಅಮೆರಿಕ ವಿಧಿಸಿದ ಸುಂಕಗಳು, ಚೀನಾದಿಂದ ನಿರ್ಣಾಯಕ ಖನಿಜಗಳ ನಿಷೇಧ ಇತ್ಯಾದಿ).
ರಾಷ್ಟ್ರ-ಆಧಾರಿತ ಸಶಸ್ತ್ರ ಸಂಘರ್ಷ:- ಇದು ಎರಡನೇ ಅತ್ಯುನ್ನತ ಅಪಾಯವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವಸಂಘರ್ಷದಂತಹ ಯುದ್ಧಗಳು ಮತ್ತು ವೆನೆಜುವೆಲಾ ಹಾಗೂ ಮಧ್ಯಪ್ರಾಚ್ಯದಂತಹ ಪ್ರದೇಶಗಳಲ್ಲಿನ ಇತ್ತೀಚಿನ ಅಸ್ಥಿರತೆಯು ಇದಕ್ಕೆ ಕಾರಣವಾಗಿದೆ.
ವೈಪರೀತ್ಯದ ಹವಾಮಾನ:- ಮುಂದಿನ ದಶಕದಲ್ಲಿ ಪರಿಸರ ಸಂಬಂಧಿ ಅಪಾಯಗಳು ಅಗ್ರ ಆದ್ಯತೆಯಾಗಿ ಉಳಿದಿದ್ದರೂ, ಆರ್ಥಿಕ ಮತ್ತು ಸೇನಾ ಸಂಘರ್ಷಗಳ ತುರ್ತು ಪರಿಸ್ಥಿತಿಯಿಂದಾಗಿ, ತಕ್ಷಣದ 2 ವರ್ಷಗಳ ಮುನ್ನೋಟದಲ್ಲಿ ಇವು ಮೂರನೇ ಸ್ಥಾನಕ್ಕೆ (8%) ಕುಸಿದಿವೆ.
ಸಾಮಾಜಿಕ ಅಪಾಯಗಳು:-ಧ್ರುವೀಕರಣ, ತಪ್ಪು ಮಾಹಿತಿ ಮತ್ತು ಎಐ ರಚಿತ ‘ಡೀಪ್‌ಫೇಕ್’ಗಳನ್ನು ಸಾಮಾಜಿಕ ಅಸ್ಥಿರತೆಗೆ, ವಿಶೇಷವಾಗಿ ಚುನಾವಣಾ ಸಮಯಗಳಲ್ಲಿ ಎದುರಾಗುವ ಪ್ರಮುಖ ಅಪಾಯಗಳೆಂದು ಉಲ್ಲೇಖಿಸಲಾಗಿದೆ.
ಭಾರತಕ್ಕೆ ಎದುರಾಗಿರುವ ದೊಡ್ಡ ಅಪಾಯಗಳು:
ಸೈಬರ್ ಭದ್ರತೆ:- ಇದನ್ನು ಭಾರತಕ್ಕೆ ಎದುರಾಗಿರುವ ಅಗ್ರ ಅಪಾಯವೆಂದು ಪರಿಗಣಿಸಲಾಗಿದೆ ಮತ್ತು ಭಾರತವು ಡಿಜಿಟಲ್ ಪಾವತಿಗಳ ಕಡೆಗೆ ಹೆಚ್ಚು ವಾಲುತ್ತಿದೆ.
ಸಂಪತ್ತಿನ ಅಸಮಾನತೆ ಮತ್ತು ಸಾಮಾಜಿಕ ಸುರಕ್ಷತಾ ಜಾಲಗಳು:- ಹೆಚ್ಚುತ್ತಿರುವ ಆದಾಯದ ಅಸಮಾನತೆಯೊಂದಿಗೆ ದೃಢವಾದ ಸಾಮಾಜಿಕ ಕಲ್ಯಾಣ ಯೋಜನೆಗಳ ಕೊರತೆಯು ಆಂತರಿಕ ಸ್ಥಿರತೆಗೆ ಗಮನಾರ್ಹ ಅಪಾಯವನ್ನು ಒಡ್ಡುತ್ತದೆ.
ಆರ್ಥಿಕ ಬಾಹ್ಯ ಆಘಾತಗಳು:-ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ಮತ್ತು ಅಂತರರಾಷ್ಟ್ರೀಯ ಸುಂಕಗಳಿಂದ ಉಂಟಾಗುವ ದೇಶೀಯ ಆರ್ಥಿಕ ಕುಸಿತಗಳಿಗೆ ಭಾರತವು ತುತ್ತಾಗುವ ಸಾಧ್ಯತೆಯಿದೆ.
ನಿರ್ಣಾಯಕ ಮೂಲಸೌಕರ್ಯ ಮತ್ತು ಸಂಪನ್ಮೂಲ ಭದ್ರತೆ:- ಈ ವರದಿಯು “ಜಲ ಭದ್ರತೆ” ಯನ್ನು ಸಂಭಾವ್ಯ ಸಂಘರ್ಷದ ಬಿಂದು ಎಂದು ಎತ್ತಿ ತೋರಿಸಿದೆ. ನಿರ್ದಿಷ್ಟವಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದ ನಂತರ, ಸಿಂಧೂ ನದಿ ಜಲಾನಯನ ಪ್ರದೇಶವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದದ ಕೇಂದ್ರಬಿಂದುವಾಗಿ ಉಳಿದಿದೆ ಎಂದು ಅದು ಗಮನಸೆಳೆದಿದೆ.
ಉದ್ಯೋಗ ಮತ್ತು ಸಾಮಾಜಿಕ ಪ್ರವೃತ್ತಿಗಳ ವರದಿ, 2026 – ILO
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ; ಉದ್ಯೋಗ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯು ತನ್ನ “ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ” (WESO) ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ಜಾಗತಿಕ ಕಾರ್ಮಿಕ ಮಾರುಕಟ್ಟೆಯಲ್ಲಿನ ನಿರಂತರ ಅಸಮಾನತೆಗಳನ್ನು ಎತ್ತಿ ತೋರಿಸಿದೆ.
ಈ ವರದಿಯ ಪ್ರಮುಖ ಅಂಶಗಳು:
ಜಾಗತಿಕ ನಿರುದ್ಯೋಗ:- 2026 ರಲ್ಲಿ ಜಾಗತಿಕ ನಿರುದ್ಯೋಗ ದರವು 4.9% ರಷ್ಟು ಉಳಿಯುವ ನಿರೀಕ್ಷೆಯಿದೆ ಮತ್ತು ಇದು ಸುಮಾರು 186 ದಶ ಲಕ್ಷ (18.6 ಕೋಟಿ) ಜನರಿಗೆ ಸಮಾನವಾಗಿದೆ.
ಗುಣಮಟ್ಟದ ಹಾಗೂ ಸುರಕ್ಷಿತ ಉದ್ಯೋಗದ ಕೊರತೆ:- ಹಾಗೆಯೇ, ಯೋಗ್ಯವಾದ ಕೆಲಸದ ಕಡೆಗಿನ ಪ್ರಗತಿಯು ಸ್ಥಗಿತಗೊಂಡಿದೆ ಮತ್ತು ಲಕ್ಷಾಂತರ ಜನರು ಇನ್ನೂ ಈ ಕೊರತೆಯನ್ನು ಎದುರಿಸುತ್ತಿದ್ದಾರೆ.
ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ನಿರಂತರ ಬಡತನ:- ಸುಮಾರು 300 ದಶ ಲಕ್ಷ (30 ಕೋಟಿ) ಕಾರ್ಮಿಕರು ದಿನಕ್ಕೆ US $3 ಗಿಂತ ಕಡಿಮೆ ಗಳಿಸುವ ಮೂಲಕ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ.
ತೀವ್ರವಾಗುತ್ತಿರುವ ಯುವ ನಿರುದ್ಯೋಗದ ಬಿಕ್ಕಟ್ಟು:– ಯುವ ಜನರ ನಿರುದ್ಯೋಗವು 2025 ರಲ್ಲಿ 12.4% ಕ್ಕೆ ಏರಿಕೆಯಾಗಿದೆ.
ನಿರಂತರ ಲಿಂಗ ಅಂತರಗಳು:- ಮಹಿಳೆಯರು ಜಾಗತಿಕ ಉದ್ಯೋಗದಲ್ಲಿ ಕೇವಲ ಐದನೇ ಎರಡರಷ್ಟು(40%) ಪಾಲನ್ನು ಹೊಂದಿದ್ದಾರೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO)ಯ ಬಗ್ಗೆ:
ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
ಇದನ್ನು 1919 ರಲ್ಲಿ ವರ್ಸೈಲ್ಸ್ ಒಪ್ಪಂದದ ಮೂಲಕ
“ರಾಷ್ಟ್ರಗಳ ಸಂಘ” (ಲೀಗ್ ಆಫ್ ನೇಷನ್ಸ್) ದ ಅಂಗಸಂಸ್ಥೆಯಾಗಿ ಸ್ಥಾಪಿಸಲಾಯಿತು.
ವಿಶೇಷತೆ:-1946 ರಲ್ಲಿ ಇದು ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
ಪ್ರಧಾನ ಕಚೇರಿ:-‘ಜಿನೀವಾ’ (ಸ್ವಿಟ್ಜರ್ಲೆಂಡ್)
ಭಾರತವು ILO ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದೆ.
ಗುರಿ:-ಕೆಲಸದ ಸ್ಥಳದಲ್ಲಿ ಹಕ್ಕುಗಳು ಮತ್ತು ಯೋಗ್ಯ ಉದ್ಯೋಗಾವಕಾಶಗಳನ್ನು ಉತ್ತೇಜಿಸುವುದು, ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವುದು ಹಾಗೂ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಂವಾದವನ್ನು ಬಲಪಡಿಸುವುದು.
ILO ನ ಪ್ರಮುಖ ವರದಿಗಳು:
ಜಾಗತಿಕ ವೇತನ ವರದಿ (GWR)
ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ (WESO).
ವಿಶ್ವ ಸಾಮಾಜಿಕ ರಕ್ಷಣೆ ವರದಿ (WSPR)
ಕೆಲಸದ ಜಾಗತಿಕ ವರದಿ (ವರ್ಲ್ಡ್ ಆಫ್ ವರ್ಕ್ ರಿಪೋರ್ಟ್)
‘ಕಾರ್ಬನ್ (ಇಂಗಾಲದ) ಕ್ರೆಡಿಟ್’ಗಳಿಂದ ಆದಾಯ ಗಳಿಸಲಿರುವ ದೆಹಲಿ
ಸಾಮಾನ್ಯ ಅಧ್ಯಯನ- 3/ ಪರಿಸರ
ಇದೀಗ ಸುದ್ದಿಯಲ್ಲಿದೆ:
ದೆಹಲಿ ಸರ್ಕಾರವು ‘ಕಾರ್ಬನ್ ಕ್ರೆಡಿಟ್ ನಗದೀಕರಣ’ಕ್ಕಾಗಿ ಒಂದು ನೂತನ ನೀತಿ ಚೌಕಟ್ಟನ್ನು ಅನುಮೋದಿಸಿರುವುದಾಗಿ ಘೋಷಿಸಿದೆ.
ನೂತನ ನೀತಿಯ ಮುಖ್ಯಾಂಶಗಳು:
ಪರಿಸರ ಸ್ನೇಹಿ ಯೋಜನೆಗಳು:- ದೆಹಲಿ ಸರ್ಕಾರವು ಜಾರಿಗೊಳಿಸುವ ವಿವಿಧ ಪರಿಸರ ಸ್ನೇಹಿ ಯೋಜನೆಗಳ ಮೂಲಕ ‘ಕಾರ್ಬನ್ ಕ್ರೆಡಿಟ್’ಗಳನ್ನು ಉತ್ಪಾದಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
ಪ್ರಮುಖ ಚಟುವಟಿಕೆಗಳು:- ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳ ಕಾರ್ಯಾಚರಣೆ, ಸಸಿ ನೆಡುವ ಅಭಿಯಾನಗಳು, ಸೌರಶಕ್ತಿಯ ಉತ್ತೇಜನ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯಂತಹ ಚಟುವಟಿಕೆಗಳನ್ನು ಕಾರ್ಬನ್ ಕ್ರೆಡಿಟ್ ಉತ್ಪಾದನೆಗೆ ಬಳಸಲಾಗುತ್ತದೆ.
ನೂತನ ನೀತಿಯ ಕಾರ್ಯವಿಧಾನ:
ವೈಜ್ಞಾನಿಕ ಮಾಪನ:- ಈ ಮೇಲಿನ ಉಪಕ್ರಮಗಳ ಮೂಲಕ ಇಂಗಾಲದ ಹೊರಸೂಸುವಿಕೆಯಲ್ಲಿ ಆಗುವ ಇಳಿಕೆಯನ್ನು ವೈಜ್ಞಾನಿಕವಾಗಿ ಅಳೆಯಲಾಗುತ್ತದೆ.
ಅಧಿಕೃತ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಣಿ:– ನಂತರ, ಇದನ್ನು ಅಧಿಕೃತವಾಗಿ ‘ಕಾರ್ಬನ್ ಕ್ರೆಡಿಟ್’ಗಳಾಗಿ ನೋಂದಾಯಿಸಲಾಗುತ್ತದೆ.
ಮಾರಾಟ ಮತ್ತು ಆದಾಯ:- ಅಂತಿಮವಾಗಿ, ಈ ಕ್ರೆಡಿಟ್‌ಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಬನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಸರ್ಕಾರವು ಆದಾಯವನ್ನು ಗಳಿಸಲಿದೆ.
ಕಾರ್ಬನ್ ಮಾರುಕಟ್ಟೆಗಳ ಬಗ್ಗೆ:
ವ್ಯಾಖ್ಯಾನ:- ಕಾರ್ಬನ್ ಮಾರುಕಟ್ಟೆಗಳು ಕಾರ್ಬನ್ ಕ್ರೆಡಿಟ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯಾಪಾರ ವ್ಯವಸ್ಥೆಗಳಾಗಿವೆ.
ಕಾರ್ಯವಿಧಾನ:-ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ಸಂಸ್ಥೆಗಳಿಂದ ‘ಕಾರ್ಬನ್ ಕ್ರೆಡಿಟ್’ಗಳನ್ನು ಖರೀದಿಸುವ ಮೂಲಕ, ಇತರ ಕಂಪನಿಗಳು ಅಥವಾ ವ್ಯಕ್ತಿಗಳು ತಮ್ಮ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಿಕೊಳ್ಳಬಹುದು.
ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (CCTS)ನ ಬಗ್ಗೆ:
ಗುರಿ:-ಭಾರತೀಯ ಆರ್ಥಿಕತೆಯನ್ನು ಇಂಗಾಲ ಮುಕ್ತವಾಗಿಸುವ (ಡಿಕಾರ್ಬನೈಸ್) ನಿಟ್ಟಿನಲ್ಲಿ ಶ್ರಮಿಸುತ್ತಿರುವ ವಿವಿಧ ಘಟಕಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು.
ಇದು ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಸ್ಥಾಪಿಸುವ ಮೂಲಕ, CCTS ‘ಭಾರತದ ಕಾರ್ಬನ್ ಮಾರುಕಟ್ಟೆ’ಗೆ ಭದ್ರ ಬುನಾದಿಯನ್ನು ಹಾಕಿದೆ.
ಕಾರ್ಬನ್ ಮಾರುಕಟ್ಟೆಯ ಸನ್ನದ್ಧತೆಯನ್ನು ಬಲಪಡಿಸಲು ಸರ್ಕಾರದ ಕ್ರಮಗಳು:
ಅಭಿವೃದ್ಧಿ ಮತ್ತು ಪರಿಸರ ಸಮತೋಲನ:-COP 27 ರಲ್ಲಿ ಪ್ರಸ್ತಾಪಿಸಿದಂತೆ, “ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ” (CBDR-RC) ತತ್ವಗಳ ಮೂಲಕ, ಭಾರತವು ಕಡಿಮೆ ಇಂಗಾಲದ ಹೊರಸೂಸುವಿಕೆ ಮತ್ತು ತನ್ನ ಅಭಿವೃದ್ಧಿಯ ಅಗತ್ಯಗಳನ್ನು ಸಮತೋಲನಗೊಳಿಸುತ್ತಿದೆ.
ಸುಸ್ಥಿರ ಜೀವನಶೈಲಿಗೆ ಹಸಿರು ಉಪಕ್ರಮಗಳು:- ಸರ್ಕಾರವು “ಮಿಷನ್ ಲೈಫ್” ಮತ್ತು “ಹಸಿರು ಕ್ರೆಡಿಟ್ ಉಪಕ್ರಮ”ಗಳನ್ನು ಜಾರಿಗೆ ತಂದಿದೆ.
ಸಾಂಸ್ಥಿಕ ನಿರ್ವಹಣೆ:-ಇಂಧನ ಸಚಿವಾಲಯದ ಅಡಿಯಲ್ಲಿ,
“ಭಾರತೀಯ ಕಾರ್ಬನ್ ಮಾರುಕಟ್ಟೆಗಾಗಿ ರಾಷ್ಟ್ರೀಯ ಮಾರ್ಗದರ್ಶನ ಸಮಿತಿ” (NSCICM).
“ಇಂಧನ ದಕ್ಷತಾ ಕಛೇರಿ” (BEE) ಅನ್ನು ಸ್ಥಾಪಿಸಲಾಗಿದೆ.
ಕಾಶಿ-ತಮಿಳು ಸಂಗಮ
ಸಾಮಾನ್ಯ ಅಧ್ಯಯನ-1/ ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
ಸಾಂಸ್ಕೃತಿಕ ತಿಳುವಳಿಕೆಯನ್ನು ಬಲಪಡಿಸುವಲ್ಲಿ, ಶೈಕ್ಷಣಿಕ ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸುವಲ್ಲಿ ಹಾಗೂ ಶಾಶ್ವತ ಬಾಂಧವ್ಯವನ್ನು ಸೃಷ್ಟಿಸುವಲ್ಲಿ ‘ಕಾಶಿ-ತಮಿಳು ಸಂಗಮ’ ವಹಿಸಿರುವ ಪಾತ್ರವನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದಾರೆ.
ಕಾಶಿ-ತಮಿಳು ಸಂಗಮ 4.0 ರ ಬಗ್ಗೆ:
ಆಯೋಜಕರು:-ಕೇಂದ್ರ ಶಿಕ್ಷಣ ಸಚಿವಾಲಯವು
ಪ್ರಾರಂಭ:-2022
ಪಾಲುದಾರ ವಿಶ್ವವಿದ್ಯಾಲಯಗಳು:-ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ.
ಉದ್ದೇಶ:-ತಮಿಳುನಾಡು ಮತ್ತು ಕಾಶಿಯ ನಡುವಿನ ಪುರಾತನ ಸಂಬಂಧಗಳನ್ನು ಮರುಶೋಧಿಸುವುದು, ದೃಢೀಕರಿಸುವುದು ಮತ್ತು ಆಚರಿಸುವುದು.
ರಾಷ್ಟ್ರೀಯ ಶಿಕ್ಷಣ ನೀತಿ (NEP), 2020:- ಇದು ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸುವ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ನೀಡಿದ ಬೆಂಬಲಕ್ಕೆ ಅನುಗುಣವಾಗಿದೆ.
ಮಹತ್ವ:
ಜ್ಞಾನವನ್ನು ಹಂಚಿಕೊಳ್ಳವ ವೇದಿಕೆ:- ಇದು ಎರಡು ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು ಮತ್ತು ಕಲಾವಿದರಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ.
ಅರಿವು ಮತ್ತು ಸಾಂಸ್ಕೃತಿಕ ಏಕತೆ:- ಇದು ಯುವಜನರಲ್ಲಿ ಅರಿವು ಮೂಡಿಸಲು ಮತ್ತು ಸಾಂಸ್ಕೃತಿಕ ಏಕತೆಯನ್ನು ಅನುಭವಿಸಲು ಸಹಕಾರಿಯಾಗಿದೆ.
ಗಮನಿಸಿ:
ಕಾಶಿ/ವಾರಾಣಸಿ/ಬನಾರಸ್ ಮತ್ತು ಚೆನ್ನೈ ಎರಡನ್ನೂ ಯುನೆಸ್ಕೋ ‘ಸಂಗೀತದ ಸೃಜನಾತ್ಮಕ ನಗರಗಳು’ ಎಂದು ಗುರುತಿಸಿದೆ.
ರಫ್ತು ಸಿದ್ಧತೆ ಸೂಚ್ಯಂಕ (EPI), 2024 – ನೀತಿ ಆಯೋಗ
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಇತ್ತೀಚಿಗೆ, ನೀತಿ ಆಯೋಗವು ರಫ್ತು ಸಿದ್ಧತೆ ಸೂಚ್ಯಂಕ (EPI) 2024 ಅನ್ನು ಬಿಡುಗಡೆ ಮಾಡಿದೆ.
ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಬಗ್ಗೆ:
ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ:- ಇದು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ರಫ್ತು ಸಿದ್ಧತೆಯ ಸಮಗ್ರ ಮೌಲ್ಯಮಾಪನ ಮಾಡುವ ಉದ್ದೇಶ ಹೊಂದಿದೆ.
ಮಹತ್ವ:- ಇದು ರಾಜ್ಯ ಮಟ್ಟದ ರಫ್ತು ಪರಿಸರ ವ್ಯವಸ್ಥೆಗಳ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಒಳಗೊಳ್ಳುವಿಕೆಯನ್ನು ಮೌಲ್ಯಮಾಪನ ಮಾಡಲು ಸಾಕ್ಷ್ಯಾಧಾರಿತ ಚೌಕಟ್ಟನ್ನು ಒದಗಿಸುತ್ತದೆ.
ರಫ್ತು ಸಿದ್ಧತೆ ಸೂಚ್ಯಂಕ (EPI), 2024 ರ ಮುಖ್ಯಾಂಶಗಳು:
ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು:
ಅತ್ಯುತ್ತಮ ಪ್ರದರ್ಶನ ನೀಡಿದ ದೊಡ್ಡ ರಾಜ್ಯಗಳು:-ಮಹಾರಾಷ್ಟ್ರ ಮತ್ತು ಅದರ ಜೊತೆಗೆ ತಮಿಳುನಾಡು, ಗುಜರಾತ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶಗಳು
ಅತ್ಯುತ್ತಮ ಪ್ರದರ್ಶನ ನೀಡಿದ ಸಣ್ಣ ರಾಜ್ಯಗಳು:-ಉತ್ತರಾಖಂಡ, ಗೋವಾ
ಈಶಾನ್ಯ ರಾಜ್ಯಗಳು:- ನಾಗಾಲ್ಯಾಂಡ್
ಕೇಂದ್ರಾಡಳಿತ ಪ್ರದೇಶಗಳು:- ಜಮ್ಮು ಮತ್ತು ಕಾಶ್ಮೀರ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು.
ಜಥಿಯಾ ದೇವಿ
ಸಾಮಾನ್ಯ ಅಧ್ಯಯನ-1/ ಸ್ಥಳಗಳು /ಸಾಮಾನ್ಯ ಅಧ್ಯಯನ-3/ ಮೂಲಸೌಕರ್ಯ
ಇದೀಗ ಸುದ್ದಿಯಲ್ಲಿದೆ:
ಹಿಮಾಚಲ ಪ್ರದೇಶ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಗೊಳಿಸಲಿರುವ ಮಹತ್ವಾಕಾಂಕ್ಷೆಯ ನಗರಾಭಿವೃದ್ಧಿ ಯೋಜನೆಗಾಗಿ ಇತ್ತೀಚೆಗೆ ‘ಜಥಿಯಾ ದೇವಿ’ ಸ್ಥಳವನ್ನು ಗುರುತಿಸಲಾಗಿದೆ.
‘ಜಥಿಯಾ ದೇವಿ’ ಸ್ಥಳದ ಬಗ್ಗೆ:
ಸ್ಥಳ:- ಈ ಸ್ಥಳವು ಶಿಮ್ಲಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ.
ಹೆಸರಿನ ಹಿನ್ನೆಲೆ:- ಈ ಪ್ರದೇಶದಲ್ಲಿರುವ ಪುರಾತನ ಜಥಿಯಾ ದೇವಿ ದೇವಾಲಯದಿಂದಾಗಿ ಈ ಸ್ಥಳಕ್ಕೆ ಈ ಹೆಸರು ಬಂದಿದೆ.
ಯೋಜನೆಯ ಸ್ವರೂಪ:- ಶಿಮ್ಲಾ ನಗರದ ಮೇಲಿನ ಒತ್ತಡವನ್ನು ತಗ್ಗಿಸಲು, ಈ ಯೋಜನೆಯನ್ನು ಒಂದು ಯೋಜಿತ ‘ಉಪಗ್ರಹ ಪರ್ವತ ಪಟ್ಟಣ’ವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ.
ಪ್ರಯೋಜನಗಳು:- ಇದು ಹೊಸ ಆರ್ಥಿಕ ಕೇಂದ್ರಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರ ಹಾಗೂ ವಿಪತ್ತು-ನಿರೋಧಕ ನಗರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕಾಳಜಿಗಳು:- ಸಾಮಾಜಿಕ ಪ್ರಭಾವದ ಮೌಲ್ಯಮಾಪನವು, ಯೋಜನೆಯಿಂದ ಸಂಭವಿಸಬಹುದಾದ ಜನರ ಸ್ಥಳಾಂತರ ಮತ್ತು ದೇವಾಲಯಗಳು, ಶಾಲೆಗಳು, ಅಂಗಡಿಗಳು, ಕಾಲುವೆಗಳು ಹಾಗೂ ಮನೆಗಳಂತಹ ಆಸ್ತಿಗಳ ನಷ್ಟವನ್ನು ಗುರುತಿಸಿದೆ.
ಕುಕಿ-ಜೋ ಮಂಡಳಿ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಬೇಡಿಕೆ
ಸಾಮಾನ್ಯ ಅಧ್ಯಯನ-2/ ಆಡಳಿತ; ಸಾಮಾನ್ಯ ಅಧ್ಯಯನ-3/ ಆಂತರಿಕ ಭದ್ರತೆ
ಇದೀಗ ಸುದ್ದಿಯಲ್ಲಿದೆ:
ಕುಕಿ-ಜೋ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸರ್ವೋಚ್ಚ ನಾಗರಿಕ ಸಂಸ್ಥೆಯಾದ “ಕುಕಿ-ಜೋ ಮಂಡಳಿ” (KZC), ಮಣಿಪುರದಲ್ಲಿ ಕುಕಿ-ಜೋ ಬುಡಕಟ್ಟು ಜನಾಂಗದವರಿಗಾಗಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ಹಿನ್ನೆಲೆ:
ಮೇ 2023 ರಲ್ಲಿ, ಜನಾಂಗೀಯ ಸಂಘರ್ಷ:– ಇಂಫಾಲ್ ಕಣಿವೆಯಲ್ಲಿ ಪ್ರಧಾನವಾಗಿ ವಾಸಿಸುವ “ಮೈತೈ” ಸಮುದಾಯ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವ “ಕುಕಿ-ಜೋ” ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದಿತು.
ಸಂಘರ್ಷಕ್ಕೆ ಕಾರಣ:-ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೈ ಸಮುದಾಯ ಮಂಡಿಸಿದ ಬೇಡಿಕೆಯು ಈ ಸಂಘರ್ಷಕ್ಕೆ ಪ್ರಚೋದನೆ ನೀಡಿತು. ಭೂಮಿಯ ಹಕ್ಕುಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ಬಗೆಗಿನ ಕಳವಳಗಳಿಂದಾಗಿ ಕುಕಿ-ಜೋ ಗುಂಪುಗಳು ಈ ಬೇಡಿಕೆಯನ್ನು ವಿರೋಧಿಸಿದ್ದವು.
ಅಕ್ಟೋಬರ್ 2024 ರಲ್ಲಿ “ಕುಕಿ-ಜೋ ಮಂಡಳಿ” (KZC) ರಚನೆ:- ಸುಮಾರು 18 ತಿಂಗಳುಗಳ ಹಿಂಸಾಚಾರದ (2023–2025) ನಂತರ ಇದನ್ನು ರಚಿಸಲಾಯಿತು. ಈ ಹಿಂಸಾಚಾರದ ಅವಧಿಯಲ್ಲಿ ಕುಕಿ-ಜೋ ಸಮುದಾಯವು ತಮ್ಮ ವಿರುದ್ಧ ಪಕ್ಷಪಾತ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿತ್ತು.
ಕುಕಿ-ಜೋ ಗುಂಪುಗಳ ಬಗ್ಗೆ:
ಇದೊಂದು ಜನಾಂಗೀಯ ಸಮುದಾಯ:- ಇವರು ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ ಮತ್ತು ಮ್ಯಾನ್ಮಾರ್ ಪ್ರದೇಶಗಳಾದ್ಯಂತ ಹರಡಿಕೊಂಡಿದ್ದಾರೆ.
ಅವರು ಮ್ಯಾನ್ಮಾರ್ ಮತ್ತು ಮಿಜೋರಾಂನ ಇತರ “ಚಿನ್-ಮಿಜೋ” ಗುಂಪುಗಳೊಂದಿಗೆ ನಿಕಟ ಜನಾಂಗೀಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.
1980-90 ರ ದಶಕದಿಂದೀಚೆಗೆ, ಹಲವಾರು ಕುಕಿ-ಜೋ ಬಂಡಾಯ ಗುಂಪುಗಳು ಹೊರಹೊಮ್ಮಿವೆ. ಇವುಗಳು ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸುತ್ತಿವೆ:
ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವ-ನಿರ್ಣಯದ ಹಕ್ಕು.
ಬುಡಕಟ್ಟು ಭೂಮಿ ಮತ್ತು ಹಕ್ಕುಗಳ ರಕ್ಷಣೆ.
ಕೆಲವು ಸಂದರ್ಭಗಳಲ್ಲಿ, ಪ್ರತ್ಯೇಕ ರಾಜ್ಯದ ಸ್ಥಾನಮಾನ.
ಕುರಿಂಜಿ ರಾಜ್‌ಕುಮಾರ್
ಸಾಮಾನ್ಯ ಅಧ್ಯಯನ-3/ ಪರಿಸರ
ಇದೀಗ ಸುದ್ದಿಯಲ್ಲಿದೆ:
ಮಾಜಿ ಬ್ಯಾಂಕ್ ಉದ್ಯೋಗಿ ಮತ್ತು “ಕುರಿಂಜಿ ರಾಜ್‌ಕುಮಾರ್” ಎಂದೇ ಖ್ಯಾತರಾಗಿದ್ದ ಪರಿಸರವಾದಿ ಜಿ. ರಾಜ್‌ಕುಮಾರ್ ಅವರು ಇತ್ತೀಚಿಗೆ ತಿರುವನಂತಪುರದಲ್ಲಿ ನಿಧನರಾದರು.
ನೀಲಕುರಿಂಜಿ ಬಗ್ಗೆ:
ಸ್ಥಳೀಯ ಪ್ರಭೇದ:- ಇದು ನೇರಳೆ ಬಣ್ಣದ ಹೂಬಿಡುವ ಕುರುಚಲು ಗಿಡದ ಪ್ರಭೇದವಾಗಿದೆ.
12 ವರ್ಷಗಳಿಗೊಮ್ಮೆ ಹೂಗಳು ಅರಳುತ್ತವೆ:- ಪಶ್ಚಿಮ ಘಟ್ಟಗಳು ಮತ್ತು ಹಿಮಾಲಯದ ಬೆಟ್ಟಗಳಲ್ಲಿ ಈ ಹೂಗಳು ಅರಳುತ್ತವೆ.
“ನೀಲಗಿರಿ”ಗೆ ಈ ಹೆಸರು ಬರಲು ಕಾರಣ:- ಈ ಬೆರಗುಗೊಳಿಸುವ ಹೂವುಗಳು ನೀಡುವ ಮಾಂತ್ರಿಕ ನೀಲಿ ಬಣ್ಣದಿಂದಾಗಿ ‘ನೀಲಗಿರಿ’ಗೆ ಆ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ:- ಇದು ನೈಋತ್ಯ ಭಾರತದ 1,340 ರಿಂದ 2,600 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಪರ್ವತ ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡುಬರುತ್ತವೆ.
ಇದು ಪ್ರಧಾನವಾಗಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕಣಿವೆ ಮತ್ತು ನೀಲಗಿರಿ ಬೆಟ್ಟಗಳಲ್ಲಿ (ಕರ್ನಾಟಕ, ಕೇರಳ ಮತ್ತು ತಮಿಳುನಾಡು) ಕಂಡುಬರುತ್ತದೆ.
IUCN ಕೆಂಪು ಪಟ್ಟಿಯಲ್ಲಿ:-‘ದುರ್ಬಲ’ (VU).
“ಕುರಿಂಜಿ ರಾಜ್‌ಕುಮಾರ್” ಅವರ ಪ್ರಮುಖ ಕೊಡುಗೆಗಳು:
‘ಕುರಿಂಜಿ ಉಳಿಸಿ ಅಭಿಯಾನ’:- ಕುರಿಂಜಿ ರಾಜ್ಕುಮಾರ್ಈ ಅಭಿಯಾನದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ಈ ಅಭಿಯಾನವು ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂತಿಯಾನ) ಮತ್ತು ಅದರ ಸೂಕ್ಷ್ಮ ಹುಲ್ಲುಗಾವಲು ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
1982 ರಲ್ಲಿ ಹೂವುಗಳ ಸಾಮೂಹಿಕ ಅರಳುವಿಕೆಯನ್ನು ವೀಕ್ಷಿಸಿದ ನಂತರ ಅವರ ಈ ಬದ್ಧತೆ ಪ್ರಾರಂಭವಾಯಿತು. ಇದು ಪರ್ವತಯಾತ್ರೆ ಮತ್ತು ಜಾಗೃತಿ ಪ್ರಯತ್ನಗಳಿಗೆ ಕಾರಣವಾಯಿತು ಮತ್ತು ಅಂತಿಮವಾಗಿ ಪ್ರಮುಖ ಪರಿಸರ ಚಳುವಳಿಯಾಗಿ ಬೆಳೆಯಿತು.
2006 ರಲ್ಲಿ ನೀಲಕುರಿಂಜಿ ಅಭಯಾರಣ್ಯ:- ಅವರು ನಂತರ ಮುನ್ನಾರ್ ಪ್ರದೇಶದಲ್ಲಿನ ಅಭಿಯಾನಗಳತ್ತ ಗಮನಹರಿಸಿದರು. ಈ ಹೋರಾಟವು ಅಂತಿಮವಾಗಿ 2006 ರಲ್ಲಿ 32 ಚದರ ಕಿ.ಮೀ ವಿಸ್ತೀರ್ಣದ ‘ನೀಲಕುರಿಂಜಿ ಅಭಯಾರಣ್ಯ’ದ ಸ್ಥಾಪನೆಗೆ ಕಾರಣವಾಯಿತು ಮತ್ತು ಅವರ ಜೀವಮಾನದ ಕನಸನ್ನು ಈಡೇರಿಸಿತು.
ಉಚಿತ ಅಂಗಾಂಗ ಕಸಿಗಾಗಿ ಬೆಂಗಳೂರಿನಲ್ಲಿ 1,000 ಹಾಸಿಗೆಯ ಆಸ್ಪತ್ರೆ
ಇದೀಗ ಸುದ್ದಿಯಲ್ಲಿದೆ:
ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಹಯೋಗದೊಂದಿಗೆ ಉಚಿತ ಅಂಗಾಂಗ ಕಸಿಗಾಗಿ 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ (ಮಲ್ಟಿ ಸ್ಪೆಷಾಲಿಟಿ) ಆಸ್ಪತ್ರೆಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಅನುವು ಮಾಡಿಕೊಡಲಿದೆ.
ಪ್ರಮುಖ ಅಂಶಗಳು:
ಉದ್ದೇಶ:-ಬಡವರಿಗಾಗಿ ಉಚಿತ ಅಂಗಾಂಗ ಕಸಿ (ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ ಮತ್ತು ಇತರ) ಸೌಲಭ್ಯವನ್ನು ಒದಗಿಸಲು ಮೀಸಲಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ. ನಿಮ್ಹಾನ್ಸ್‌ಗೆ (NIMHANS) ಹತ್ತಿರದಲ್ಲಿರುವುದರಿಂದ ಅಂಗಾಂಗ ಜೋಡಣೆ ಮತ್ತು ಸಾಗಣೆಗೆ ಇದು ಸುಗಮವಾಗಲಿದೆ.
ಸ್ಥಳ:- ಬೆಂಗಳೂರಿನ ನಿಮ್ಹಾನ್ಸ್ ಪಕ್ಕದಲ್ಲಿ ಸರ್ಕಾರ ಒದಗಿಸಿದ 10 ಎಕರೆ ಭೂಮಿಯಲ್ಲಿ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಸೌಲಭ್ಯವನ್ನು ನಿರ್ಮಿಸಲಾಗುವುದು.
ಹೂಡಿಕೆ ಮತ್ತು ನಿರ್ವಹಣೆ:- ಈ ಸೌಲಭ್ಯವನ್ನು ಸ್ಥಾಪಿಸಲು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ₹1,000 ಕೋಟಿ ಹೂಡಿಕೆ ಮಾಡಲಿದ್ದು, ನಿರ್ವಹಣೆಗಾಗಿ ವಾರ್ಷಿಕವಾಗಿ ₹350 ಕೋಟಿ ವೆಚ್ಚ ಮಾಡುವ ಅಂದಾಜಿದೆ. ಮೂವರು ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯು ಆಸ್ಪತ್ರೆಯನ್ನು ನಿರ್ವಹಿಸಲಿದೆ.
ಸಾಮರ್ಥ್ಯ ಮತ್ತು ಕಾಲಮಿತಿ:- ಮುಂದಿನ 3 ವರ್ಷಗಳಲ್ಲಿ 350 ಹಾಸಿಗೆಗಳ ಸೌಲಭ್ಯ ಪೂರ್ಣಗೊಳ್ಳಲಿದ್ದು, ಮುಂದಿನ 5 ವರ್ಷಗಳಲ್ಲಿ ಇದನ್ನು 1,000 ಹಾಸಿಗೆಗಳ ಬಹು ಸೌಲಭ್ಯ ಆಧಾರಿತ ಸೌಲಭ್ಯಕ್ಕೆ ವಿಸ್ತರಿಸಲಾಗುವುದು.
ಆರೋಗ್ಯ ವೆಚ್ಚದ ಮಾದರಿ:-
70% ರಷ್ಟು ಹಾಸಿಗೆಗಳು ಉಚಿತವಾಗಿವೆ,
30% ರಷ್ಟು ಹಾಸಿಗೆಗಳು ಕಡಿಮೆ ದರದಲ್ಲಿ ಅಂದರೆ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಲಭ್ಯವಿರುತ್ತವೆ.
ಪ್ರಸ್ತುತ ಸಂದರ್ಭ ಮತ್ತು ಬೇಡಿಕೆ:– ರಾಜ್ಯದಲ್ಲಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿರುವ 5,000 ಕ್ಕೂ ಹೆಚ್ಚು ರೋಗಿಗಳು ಮತ್ತು ಯಕೃತ್ತು ಕಸಿಗಾಗಿ ಕಾಯುತ್ತಿರುವ 1,000 ಕ್ಕೂ ಹೆಚ್ಚು ರೋಗಿಗಳಿರುವ ಹಿನ್ನೆಲೆಯಲ್ಲಿ ಈ ಉಪಕ್ರಮವು ಮಹತ್ವದ್ದಾಗಿದೆ. ಇದು 2016 ರಿಂದ ಗ್ಯಾಸ್ಟ್ರೋ ಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ ಯಕೃತ್ತು ಕಸಿ ಸೌಲಭ್ಯಗಳಿಗೆ ಪೂರಕವಾಗಿರಲಿದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ:
ಇದನ್ನು ಮೂಲತಃ ಕರ್ನಾಟಕ ಸರ್ಕಾರವು ಮಾರ್ಚ್ 2, 2018 ರಂದು “ಆರೋಗ್ಯ ಕರ್ನಾಟಕ” ಎಂದು ಪರಿಚಯಿಸಿತು ಮತ್ತು ನಂತರ ಅಕ್ಟೋಬರ್ 30, 2018 ರಂದು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಲಾಯಿತು.
ಈ ಯೋಜನೆಯನ್ನು ರಾಜ್ಯ ಸರ್ಕಾರವು “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಎಂಬ ಹೆಸರಿನಲ್ಲಿ “ಅಶ್ಯೂರೆನ್ಸ್ ಮೋಡ್” (ಭರವಸೆ ಮಾದರಿ) ನಲ್ಲಿ ಅನುಷ್ಠಾನಗೊಳಿಸುತ್ತಿದೆ.
ಪ್ರಾಥಮಿಕ ಗುರಿ:- ರಾಜ್ಯದ ಎಲ್ಲಾ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು (UHC) ಒದಗಿಸುವುದು.
ಉದ್ದೇಶ:- ಸರಳ ದ್ವಿತೀಯ, ಕಷ್ಟ ಕರವಾಗಿರುವ ದ್ವಿತೀಯ, ತೃತೀಯ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಳ ವೆಚ್ಚದ ವಿರುದ್ಧ ಆರ್ಥಿಕ ರಕ್ಷಣೆ ಒದಗಿಸುವುದು ಇದರ ಉದ್ದೇಶವಾಗಿದೆ.
ಪ್ರಯೋಜನಗಳು:
ಅರ್ಹ ಕುಟುಂಬಗಳು (ಬಿಪಿಎಲ್ ಮತ್ತು ಆರ್‌ಎಸ್‌ಬಿವೈ ಫಲಾನುಭವಿಗಳು):-ಪ್ರತಿ ಕುಟುಂಬಕ್ಕೆ ವಾರ್ಷಿಕ ₹5,00,000 ಮೂಲ ವಿಮಾ ಮೊತ್ತದೊಂದಿಗೆ 100% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ. ಪಡೆಯುತ್ತವೆ.
ಸಾಮಾನ್ಯ ಕುಟುಂಬಗಳು (ಎಪಿಎಲ್):- ಸಹ-ಪಾವತಿ ಆಧಾರದಮೇಲೆ ಪ್ರತಿ ಕುಟುಂಬಕ್ಕೆ ವಾರ್ಷಿಕ ₹1.5 ಲಕ್ಷದ ಮಿತಿಯವರೆಗೆ ಪ್ಯಾಕೇಜ್ ದರದ 30% ರಷ್ಟು ಸರ್ಕಾರಿ ಸಹಾಯಧನವನ್ನು ಪಡೆಯುತ್ತವೆ.
ಫಲಾನುಭವಿಗಳು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ (ಸಾರ್ವಜನಿಕ ಅಥವಾ ಖಾಸಗಿ) ಹಣ ಪಾವತಿಸದೆ ಮತ್ತು ಯಾವುದೇ ಶಿಫಾರಸಿನ ಅಗತ್ಯವಿಲ್ಲದೆ ನೇರವಾಗಿ ತುರ್ತು ಚಿಕಿತ್ಸೆಗಳನ್ನು ಪಡೆಯಬಹುದು.
ಮಾನದಂಡಗಳು:
“ಅರ್ಹ ಕುಟುಂಬಗಳು” ಎಂದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013 ಅಡಿಯಲ್ಲಿ ಬರುವವರು, BPL ಪಡಿತರ ಚೀಟಿ ಹೊಂದಿರುವವರು ಅಥವಾ ನೋಂದಾಯಿತ RSBY ಫಲಾನುಭವಿಗಳು.
“ಸಾಮಾನ್ಯ ಕುಟುಂಬಗಳು” ಎಂದರೆ ಅರ್ಹ ಕುಟುಂಬಗಳ ವ್ಯಾಪ್ತಿಗೆ ಬಾರದ ನಿವಾಸಿಗಳು, ಸಾಮಾನ್ಯವಾಗಿ ಎಪಿಎಲ್ ಪಡಿತರ ಚೀಟಿ ಹೊಂದಿರುವವರು.
ಪ್ರಾಥಮಿಕ ಚಿಕಿತ್ಸೆಗಳು ಮತ್ತು ಸರಳ ದ್ವಿತೀಯ ಹಂತದ ಚಿಕಿತ್ಸೆಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ (PHIs) ಮಾತ್ರ ಸೀಮಿತವಾಗಿವೆ.
ಖಾಸಗಿ ಆಸ್ಪತ್ರೆಗಳಲ್ಲಿ ಕಷ್ಟ ಕರವಾಗಿರುವ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಶಿಫಾರಸು ಪಡೆಯುವುದು ಕಡ್ಡಾಯವಾಗಿದೆ.
ತುರ್ತು ಚಿಕಿತ್ಸೆಗೆ ಶಿಫಾರಸು ಅಗತ್ಯವಿಲ್ಲ ಮತ್ತು ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಇದನ್ನು ಪಡೆಯಬಹುದು.
ವೈಶಿಷ್ಟ್ಯಗಳು:
ಭರವಸೆ ಮಾದರಿ (ಅಶ್ಯೂರೆನ್ಸ್ ಮೋಡ್):- ಈ ಯೋಜನೆಯು ಸಾಂಪ್ರದಾಯಿಕ ವಿಮಾ ಮಾದರಿಗಿಂತ ಭಿನ್ನವಾಗಿ ಭರವಸೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಫಲಾನುಭವಿಗಳಿಗೆ AB-ArK ಚೀಟಿ:-ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಅಥವಾ ನಾಗರಿಕ ಸೇವಾ ಕೇಂದ್ರಗಳಲ್ಲಿ ₹10 ಶುಲ್ಕದಲ್ಲಿ ಕಾಗದದ ಅಥವಾ ₹35 ಶುಲ್ಕದಲ್ಲಿ ಪ್ಲಾಸ್ಟಿಕ್ ನ AB-ArK ಚೀಟಿ ನೀಡಲಾಗುತ್ತದೆ.
SECC 2011 ಮತ್ತು RSBY ಕುಟುಂಬಗಳಿಗೆ 60% ರಷ್ಟು ವೆಚ್ಚವನ್ನು ಭಾರತ ಸರ್ಕಾರ ಭರಿಸಿದರೆ, ಉಳಿದ 40% ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ.
ಉಳಿದ ಎಲ್ಲಾ ಅರ್ಹ ಕುಟುಂಬಗಳ 100% ರಷ್ಟು ವೆಚ್ಚವನ್ನು ಮತ್ತು ಕೇಂದ್ರ ಯೋಜನೆಯ ವ್ಯಾಪ್ತಿಗೆ ಬಾರದ 19 ಲಕ್ಷ ಎಪಿಎಲ್ ಕುಟುಂಬಗಳಿಗೆ ಸಹಾಯಧನವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತದೆ.
ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025’ರ ಅಡಿಯಲ್ಲಿ, ‘ರಾಷ್ಟ್ರೀಯ ಕ್ರೀಡಾ ಆಡಳಿತ (ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು) ನಿಯಮಗಳು, 2026’ ಅನ್ನು ಅಧಿಸೂಚಿಸಿದೆ.
ನಿಯಮಗಳ ಉದ್ದೇಶಗಳು:
ವೃತ್ತಿಪರತೆ ಮತ್ತು ಪ್ರಮಾಣೀಕರಣ:-ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ವೃತ್ತಿಪರಗೊಳಿಸುವುದು ಮತ್ತು ಅವುಗಳಿಗೆ ಒಂದು ನಿಗದಿತ ಮಾನದಂಡವನ್ನು ರೂಪಿಸುವುದು.
ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ:– ಕ್ರೀಡಾ ಆಡಳಿತ ವ್ಯವಸ್ಥೆಯಲ್ಲಿ ಕ್ರೀಡಾಪಟುಗಳ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸುವುದ.
ನಿಯಮಗಳ ಪ್ರಮುಖ ಅಂಶಗಳು:
ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳ ಕಡ್ಡಾಯ ಸೇರ್ಪಡೆ:- ಪ್ರತಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ‘ಸಾಮಾನ್ಯ ಸಭೆ’ಯಲ್ಲಿ ಕನಿಷ್ಠ 4 ಜನ ‘ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳನ್ನು’ (SOMs) ಕಡ್ಡಾಯವಾಗಿ ಸೇರಿಸಬೇಕು.
50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು:- ನೇಮಕಗೊಂಡ ಒಟ್ಟು ಅತ್ಯುತ್ತಮ ಅರ್ಹತೆಯ ಕ್ರೀಡಾಪಟುಗಳಲ್ಲಿ ಕಡ್ಡಾಯವಾಗಿ 50% ರಷ್ಟು ಮಹಿಳಾ ಕ್ರೀಡಾಪಟುಗಳಿರಬೇಕು.
SOM ಅರ್ಹತೆಯ 10 ಹಂತಗಳು:- ಈ ಶ್ರೇಣೀಕೃತ ಮಾನದಂಡದಲ್ಲಿ ನಿಗದಿಪಡಿಸಲಾಗಿದೆ. ಅವು ಈ ಕೆಳಗಿನoತಿವೆ,
ಇದು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ , ಪ್ಯಾರಾಲಿಂಪಿಕ್ ಕ್ರೀಡಾಕೂಟ ಅಥವಾ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳಿಂದ ಹಿಡಿದು,
ರಾಷ್ಟ್ರೀಯ ಕ್ರೀಡಾಕೂಟ ಅಥವಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದ ಕ್ರೀಡಾಪಟುಗಳವರೆಗೆ ವ್ಯಾಪಿಸಿದೆ.
ಅನರ್ಹತಾ ಮಾನದಂಡಗಳು:-ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ದೋಷಿಗಳಿಗೆ ಸಾಮಾನ್ಯ ಸಭೆಯ ಸದಸ್ಯತ್ವ, ಕಾರ್ಯಕಾರಿ ಸಮಿತಿ ಚುನಾವಣೆಗಳು ಅಥವಾ ಅಥ್ಲೀಟ್ ಸಮಿತಿಗಳಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಗಿದೆ.
ರಾಷ್ಟ್ರೀಯ ಕ್ರೀಡಾ ಮಂಡಳಿಯು:- ಮಾನ್ಯತೆ, ಅಂಗಸಂಸ್ಥೆಗಳ ನೋಂದಣಿ ಮತ್ತು ಆಡಳಿತ ಅಥವಾ ನಿಧಿ ದುರುಪಯೋಗಕ್ಕೆ ಸಂಬಂಧಿಸಿದ ತನಿಖೆಗಳ ಮೇಲ್ವಿಚಾರಣೆಯನ್ನು ನಡೆಸುತ್ತದೆ.
ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿ:- ಇದು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಹೊತ್ತಿದ್ದು, ಎಲ್ಲಾ ಸಮಯದಲ್ಲೂ ಕನಿಷ್ಠ 20 ಸದಸ್ಯರ ಬಲವನ್ನು ಹೊಂದಿರಬೇಕು.
ಮರ್ಕೋಸೂರ್ ಒಪ್ಪಂದಕ್ಕೆ ಐರೋಪ್ಯಾ ಒಕ್ಕೂಟ (EU) ರಾಷ್ಟ್ರಗಳ ಅನುಮೋದನೆ
ಸಾಮಾನ್ಯ ಅಧ್ಯಯನ- 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಫ್ರಾನ್ಸ್ ನೇತೃತ್ವದ ತೀವ್ರ ವಿರೋಧ ಮತ್ತು ಯುರೋಪಿನಾದ್ಯಂತ ರೈತರ ಕಳವಳಗಳ ಹೊರತಾಗಿಯೂ, ಐರೋಪ್ಯಾ ಒಕ್ಕೂಟ (EU) ದಕ್ಷಿಣ ಅಮೆರಿಕದ ಮರ್ಕೋಸೂರ್ ಬಣದೊಂದಿಗೆ ದೀರ್ಘಕಾಲದ ವಿಳಂಬವಾಗಿದ್ದ ವ್ಯಾಪಾರ ಒಪ್ಪಂದವನ್ನು ಅನುಮೋದಿಸಿದೆ.
‘ಮರ್ಕೋಸೂರ್’ ಬಗ್ಗೆ:
ಮರ್ಕೋಸೂರ್ 1991 ರಲ್ಲಿ ರಚನೆಯಾದ ದಕ್ಷಿಣ ಅಮೆರಿಕದ ಒಂದು ವ್ಯಾಪಾರ ಬಣವಾಗಿದೆ .
5 ಸದಸ್ಯ ರಾಷ್ಟ್ರಗಳು:-ಅರ್ಜೆಂಟೀನಾ, ಬ್ರೆಜಿಲ್, ಪರಾಗ್ವೆ, ಉರುಗ್ವೆ ಮತ್ತು ಬೊಲಿವಿಯಾ (ಇದರ ಹೊಸ ಪೂರ್ಣಾವಧಿಯ ಸದಸ್ಯ ರಾಷ್ಟ್ರವಾಗಿದೆ).
ಉದ್ದೇಶ:-ಮುಕ್ತ ವ್ಯಾಪಾರ ಮತ್ತು ಆರ್ಥಿಕ ಏಕೀಕರಣವನ್ನು ಸಾಧಿಸುವುದು ಇದರ ಉದ್ದೇಶವಾಗಿದೆ.
ಗಮನಿಸಿ:- ಈ ಮೊದಲು ಸದಸ್ಯ ರಾಷ್ಟ್ರವಾಗಿದ್ದ ವೆನೆಜುವೆಲಾವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.
ಐರೋಪ್ಯಾ ಒಕ್ಕೂಟ -ಮರ್ಕೋಸೂರ್ ಮುಕ್ತ ವ್ಯಾಪಾರ ಒಪ್ಪಂದ:
ಸುಂಕ ಕಡಿತ:-ಸುಂಕ ಕಡಿತದ ವಿಷಯದಲ್ಲಿ ಇದು ಐರೋಪ್ಯಾ ಒಕ್ಕೂಟ (EU)ದ ಸಾರ್ವಕಾಲಿಕ ಅತಿದೊಡ್ಡ ಒಪ್ಪಂದವಾಗಿದ್ದು, EU ರಫ್ತುಗಳ ಮೇಲಿನ €4 ಬಿಲಿಯನ್‌ಗೂ ಹೆಚ್ಚು ಸುಂಕಗಳನ್ನು ರದ್ದುಗೊಳಿಸುತ್ತದೆ.
€111 ಬಿಲಿಯನ್ ವ್ಯಾಪಾರ ಮೌಲ್ಯ:- ಈ ಎರಡು ಬಣಗಳ ನಡುವಿನ ವ್ಯಾಪಾರ ಮೌಲ್ಯವು €111 ಬಿಲಿಯನ್ ಆಗಿದೆ. EU ಪ್ರಮುಖವಾಗಿ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಸಾರಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದ್ದರೆ, ಕೃಷಿ ಉತ್ಪನ್ನಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತದೆ.
ಒಪ್ಪಂದದ ವಿವರಗಳು:- ಈ ಒಪ್ಪಂದದ ಅಡಿಯಲ್ಲಿ,
ಮರ್ಕೋಸೂರ್ 15 ವರ್ಷಗಳಲ್ಲಿ EU ರಫ್ತುಗಳ ಮೇಲಿನ 91% ರಷ್ಟು ಸುಂಕವನ್ನು ತೆಗೆದುಹಾಕುತ್ತದೆ.
ಅದೇ ರೀತಿ, EU 10 ವರ್ಷಗಳಲ್ಲಿ ಮರ್ಕೋಸೂರ್ ರಫ್ತುಗಳ ಮೇಲಿನ 92% ರಷ್ಟು ಸುಂಕವನ್ನು ರದ್ದುಗೊಳಿಸುತ್ತದೆ.
ಕೋಟಾಗಳ ಕಾಯ್ದಿರಿಸುವಿಕೆ:- ‘ಸೂಕ್ಷ್ಮ ಕೃಷಿ ಸರಕುಗಳ’ ಮೇಲೆ ಎರಡೂ ಕಡೆಯವರು ಕೋಟಾಗಳನ್ನು ಕಾಯ್ದುಕೊಂಡಿದ್ದಾರೆ. ಆದಾಗ್ಯೂ, EU ಗೋಮಾಂಸ ಆಮದು ಕೋಟಾಗಳನ್ನು ಹೆಚ್ಚಿಸಲಿದೆ ಮತ್ತು ಮರ್ಕೋಸೂರ್, ಸುಂಕ ರಹಿತ ಚೀಸ್ ಆಮದಿಗೆ ಅನುಮತಿ ನೀಡಲಿದೆ.
DRDO ದಿಂದ 3ನೇ ತಲೆಮಾರಿನ MPATGM ನ ಯಶಸ್ವಿ ಹಾರಾಟ ಪರೀಕ್ಷೆ
ಸಾಮಾನ್ಯ ಅಧ್ಯಯನ- 3/ ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಚಲಿಸುವ ಗುರಿಯ ಮೇಲೂ ‘ಟಾಪ್ ಅಟ್ಯಾಕ್’ (ಮೇಲ್ಭಾಗದಿಂದ ಆಕ್ರಮಣ ಮಾಡುವ) ಸಾಮರ್ಥ್ಯವನ್ನು ಹೊಂದಿರುವ, 3ನೇ ತಲೆಮಾರಿನ ‘ಫೈರ್ ಅಂಡ್ ಫರ್ಗೆಟ್’ ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಮ್ಯಾನ್ ಪೋರ್ಟಬಲ್ ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿ (MPATGM)ಯ ಬಗ್ಗೆ:
ಈ ‘ಫೈರ್ ಅಂಡ್ ಫರ್ಗೆಟ್’ ಕ್ಷಿಪಣಿಯನ್ನು DRDO ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದೆ.
‘ಫೈರ್ ಅಂಡ್ ಫರ್ಗೆಟ್’ (ಹಾರಿಸಿ ಮರೆತುಬಿಡು) ಮಾದರಿಯ ಕ್ಷಿಪಣಿ:- ಇದು ಉಡಾವಣೆಗೆ ಮುನ್ನವೇ ಗುರಿಯನ್ನು ಬಂಧಿಸುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಉಡಾವಣೆಯ ನಂತರ ಇದಕ್ಕೆ ಬಳಕೆದಾರನಿಂದ ಹೆಚ್ಚಿನ ಮಾರ್ಗದರ್ಶನ ಅಥವಾ ನಿಯಂತ್ರಣದ ಅಗತ್ಯವಿರುವುದಿಲ್ಲ.
ಇದು ಇಮೇಜಿಂಗ್ ಇನ್ಫ್ರಾರೆಡ್ ಹೋಮಿಂಗ್ ಸೀಕರ್, ಟ್ಯಾಂಡೆಮ್ ಸಿಡಿತಲೆ, ಆಲ್-ಎಲೆಕ್ಟ್ರಿಕ್ ಕಂಟ್ರೋಲ್ ಆಕ್ಚುಯೇಶನ್ ಸಿಸ್ಟಮ್, ಫೈರ್ ಕಂಟ್ರೋಲ್ ಸಿಸ್ಟಮ್, ಪ್ರೊಪಲ್ಷನ್ ಸಿಸ್ಟಮ್ ಮತ್ತು ಉನ್ನತ-ಕಾರ್ಯಕ್ಷಮತೆಯ ಸೈಟಿಂಗ್ ಸಿಸ್ಟಮ್ ಸೇರಿದಂತೆ ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನಗಳನ್ನು ಹೊಂದಿದೆ.
ಈ ಕ್ಷಿಪಣಿಯು ಹಗಲು ಮತ್ತು ರಾತ್ರಿ ಯುದ್ಧ ಕಾರ್ಯಾಚರಣೆಗಳನ್ನು ನಡೆಸಲು ಸಮರ್ಥವಾಗಿದೆ ಮತ್ತು ಆಧುನಿಕ ಪ್ರಮುಖ ಯುದ್ಧ ಟ್ಯಾಂಕ್‌ಗಳನ್ನು ಪರಿಣಾಮಕಾರಿಯಾಗಿ ಸೋಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಇದನ್ನು ಟ್ರೈಪಾಡ್ ಮತ್ತು ಸೇನಾ ವಾಹನ ಉಡಾವಣೆ ಎರಡರಿಂದಲೂ ಉಡಾವಣೆ ಮಾಡಬಹುದು.
38ನೇ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ
ಸಾಮಾನ್ಯ ಅಧ್ಯಯನ- 2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಫ್ರೆಂಚ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರರ ಸಹ-ಅಧ್ಯಕ್ಷತೆಯಲ್ಲಿ ನಡೆದ 38ನೇ ‘ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಂವಾದ’ದ ಸಂದರ್ಭದಲ್ಲಿ, ಭಾರತ ಮತ್ತು ಫ್ರಾನ್ಸ್ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದವು.
ಭಾರತ-ಫ್ರಾನ್ಸ್ ಸಂಬಂಧಗಳು:
ಜನವರಿ 26, 1998 ರಂದು ಕಾರ್ಯತಂತ್ರದ ಪಾಲುದಾರಿಕೆ ಪ್ರಾರಂಭ:- ಇದು ಭಾರತದ ಮೊಟ್ಟಮೊದಲ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ.
ಡಸಾಲ್ಟ್ ಏವಿಯೇಷನ್‌ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿ:- ಭಾರತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ.
ಪ್ರಾಜೆಕ್ಟ್ P-75ನ ಅಡಿಯಲ್ಲಿ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು ನಿರ್ಮಾಣ:- ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ, ಭಾರತದಲ್ಲಿ 6 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲಾಗಿದೆ; ಇದರಲ್ಲಿ ‘ಐಎನ್‌ಎಸ್ ವಾಗ್ಶೀರ್’ ಇತ್ತೀಚಿನದ್ದಾಗಿದೆ.
‘ರಫೇಲ್-ಎಂ’ ಯುದ್ಧ ವಿಮಾನಗಳ ಖರೀದಿ:- ಉಭಯ ರಾಷ್ಟ್ರಗಳು ಭಾರತೀಯ ನೌಕಾಪಡೆಗಾಗಿ 26 ‘ರಫೇಲ್-ಎಂ’ ಯುದ್ಧ ವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದವನ್ನು (IGA) ಅಧಿಕೃತವಾಗಿ ಅಂತಿಮಗೊಳಿಸಿವೆ.
ಜಂಟಿ ಸಮರಾಭ್ಯಾಸಗಳು:-ಶಕ್ತಿ, ವರುಣ, ಫ್ರಿನ್ಜೆಕ್ಸ್-23 (Shakti, Varuna, FRINJEX-23).
ಐರೋಪ್ಯ ಒಕ್ಕೂಟದೊಳಗೆ ಭಾರತದ 5ನೇ ಅತಿದೊಡ್ಡ ವ್ಯಾಪಾರ ಪಾಲುದಾರ:- ಮೊದಲ 4 ಸ್ಥಾನಗಳು- ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಇಟಲಿ ಮತ್ತು ಜರ್ಮನಿ.
ಭಾರತದ ಏಕೀಕೃತ ಪಾವತಿ ವ್ಯವಸ್ಥೆ (UPI):- ಫ್ರಾನನಲ್ಲಿ ಸಕ್ರಿಯಗೊಳಿಸುವ ಪ್ರಕ್ರಿಯೆಯು ಯಶಸ್ವಿಯಾಗಿದೆ.
ಜಂಟಿ ಮಿಷನ್‌ಗಳು:-
TRISHNA (ತ್ರಿಷ್ಠಾ)- ಉಪಗ್ರಹ ಮಿಷನ್,
ಸಮುದ್ರ ವಲಯದ ಜಾಗೃತಿ (MDA) ವ್ಯವಸ್ಥೆಗಳು,
ನೆಲದ ಮೇಲೆ ನಿಲ್ದಾಣ ಬೆಂಬಲ (ಗ್ರೌಂಡ್ ಸ್ಟೇಷನ್ ಸಪೋರ್ಟ್).
ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA):– ವಿಶ್ವದಾದ್ಯಂತ ಸೌರಶಕ್ತಿಯನ್ನು ಉತ್ತೇಜಿಸಲು 2015 ರಲ್ಲಿ ಭಾರತ ಮತ್ತು ಫ್ರಾನ್ಸ್ ಇದನ್ನು ಜಂಟಿಯಾಗಿ ಸ್ಥಾಪಿಸಿದವು.
ಪುಷ್ಪಗಳ ಕಣಿವೆ (Valley of Flowers)
ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ
ಇದೀಗ ಸುದ್ದಿಯಲ್ಲಿದೆ:
ಪುಷ್ಪಗಳ ಕಣಿವೆಯ ಸಮೀಪದಲ್ಲಿ ಕಾಡ್ಗಿಚ್ಚು ಹಬ್ಬುತ್ತಿದ್ದು, ಅರಣ್ಯ ಇಲಾಖೆಯು ವಾಯುಪಡೆಯ ಸಹಾಯವನ್ನು ಕೋರುವ ಅನಿವಾರ್ಯತೆ ಉಂಟಾಗಿದೆ.
ಪುಷ್ಪಗಳ ಕಣಿವೆಯ ಬಗ್ಗೆ:
ಸ್ಥಳ:-ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ‘ಪುಷ್ಪಗಳ ಕಣಿವೆ ರಾಷ್ಟ್ರೀಯ ಉದ್ಯಾನವನ’ದ ಒಳಭಾಗದಲ್ಲಿದೆ. ಇದು “ನಂದಾ ದೇವಿ ಜೀವಗೋಳ ಮೀಸಲು ಪ್ರದೇಶ”ದ ಭಾಗವಾಗಿದೆ.
ಪುಷ್ಪಗಳ ಕಣಿವೆ ಎಂದು ಕರೆಯಲು ಕಾರಣ:- ಮುಂಗಾರು ಮಳೆಯ ಸಮಯದಲ್ಲಿ ಇಡೀ ಕಣಿವೆಯು ಸಾವಿರಾರು ಅರಳುವ ಹೂವುಗಳಿಂದ ಜೀವಂತಿಕೆ ಪಡೆಯುವುದರಿಂದ ಈ ಹೆಸರು ಕರೆಯುತ್ತಾರೆ.
1982 ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು.
2005 ರಲ್ಲಿ ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ವನ್ನಾಗಿ ಘೋಷಿಸಲಾಯಿತು. ಏಕೆಂದರೆ ಇದರ ಸಾಟಿಯಿಲ್ಲದ ಸೌಂದರ್ಯ ಮತ್ತು ವಿಶಿಷ್ಟ ಉನ್ನತದ (ಆಲ್ಪೈನ್) ಪರಿಸರ ವ್ಯವಸ್ಥೆಯಿಂದಾಗಿ.
ಬ್ರಿಟಿಷ್ ಪರ್ವತಾರೋಹಿ ಫ್ರಾಂಕ್ ಸ್ಮಿತ್ ಅವರು 1931 ರಲ್ಲಿ ಆಕಸ್ಮಿಕವಾಗಿ ಈ ಸ್ಥಳವನ್ನು ತಲುಪಿದಾಗ, ಈ ಕಣಿವೆಯನ್ನು ಅಧಿಕೃತವಾಗಿ ಕಂಡುಹಿಡಿಯಲಾಯಿತು.
NPS ವಾತ್ಸಲ್ಯ ಯೋಜನೆ, 2025
ಸಾಮಾನ್ಯ ಅಧ್ಯಯನ- 2/ ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು, ಅಪ್ರಾಪ್ತ ವಯಸ್ಕರಿಗೆಜೀವನದ ಆರಂಭಿಕ ಹಂತದಲ್ಲೇ ಪಿಂಚಣಿ ಸೌಲಭ್ಯವನ್ನು ಒದಗಿಸಲು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಚೌಕಟ್ಟನ್ನು ವಿಸ್ತರಿಸುವ ಮೂಲಕ ‘ಎನ್‌ಪಿಎಸ್ ವಾತ್ಸಲ್ಯ ಯೋಜನೆ, 2025’ ಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
NPS ವಾತ್ಸಲ್ಯ ಯೋಜನೆ, 2025 ರ ಬಗ್ಗೆ:
ಅಪ್ರಾಪ್ತ ವಯಸ್ಕರಿಗಾಗಿ ಪಿಂಚಣಿ ಉಳಿತಾಯ ಯೋಜನೆ:- ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯ ಅಡಿಯಲ್ಲಿ ಬರುತ್ತದೆ.
ಪೋಷಕರಿಗೆ ಅಥವಾ ಕಾನೂನುಬದ್ಧ ಪಾಲಕರಿಗೆ ಅವಕಾಶ:- ಇದು ಮಗುವಿನ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರಿಗೆ ಎನ್‌ಪಿಎಸ್ ಖಾತೆಯನ್ನು ತೆರೆಯಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಪ್ರಮುಖ ವೈಶಿಷ್ಟ್ಯಗಳು:
ಅರ್ಹತೆ:-18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ನಾಗರಿಕರು.
ಖಾತೆಯ ಪ್ರಕಾರ:- ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ವೈಯಕ್ತಿಕ ಪಿಂಚಣಿ ಖಾತೆ ತೆರೆಯಲಾಗುವುದು.
ನಿರ್ವಹಣೆ:- ಮಗುವು ಪ್ರಾಪ್ತ ವಯಸ್ಕನಾಗುವವರೆಗೆ ಪೋಷಕರು ಅಥವಾ ಪಾಲಕರು ಈ ಖಾತೆಯನ್ನು ನಿರ್ವಹಿಸುತ್ತಾರೆ.
ಪರಿವರ್ತನೆ:- 18 ವರ್ಷ ತುಂಬಿದ ನಂತರ, ಖಾತೆಯು ಸಾಮಾನ್ಯ ಎನ್‌ಪಿಎಸ್ ಖಾತೆಯಾಗಿ ಪರಿವರ್ತನೆಗೊಳ್ಳುತ್ತದೆ.
ಅತ್ಯಲ್ಪ ಅಗತ್ಯ ಪ್ರಮಾಣದ ಕೊಡುಗೆ:- ಕನಿಷ್ಠ ಆರಂಭಿಕ ಮತ್ತು ವಾರ್ಷಿಕ ಪಾಲು ₹250 ಆಗಿದ್ದು, ಪಾಲುದಾರಿಕೆಯ ಮೇಲೆ ಯಾವುದೇ ಗರಿಷ್ಠ ಮಿತಿಯಿಲ್ಲ.
ಪಿಂಚಣಿ ನಿಧಿ ವ್ಯವಸ್ಥಾಪಕರ (PFMs) ಮೂಲಕ ಹೂಡಿಕೆ:- ಎನ್‌ಪಿಎಸ್ ಮಾರ್ಗಸೂಚಿಗಳ ಪ್ರಕಾರ ಹಣವನ್ನು ಹೂಡಿಕೆ ಮಾಡಲಾಗುತ್ತದೆ.
ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ
ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರನ್ನು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು 2026–27ರ ಅವಧಿಗೆ ‘ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿ’ಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.
ಭಾರತೀಯರೊಬ್ಬರು ಈ ಹುದ್ದೆಯನ್ನು ಹೊಂದಿರುವುದು ಇದೇ ಮೊದಲ ಬಾರಿಯಾಗಿದೆ.
ನಿಶ್ಯಸ್ತ್ರೀಕರಣ ವಿಷಯಗಳ ಕುರಿತಾದ ಸಲಹಾ ಮಂಡಳಿಯ ಬಗ್ಗೆ:
ಸ್ಥಾಪನೆ:-1978
ರಚನೆ:- ಈ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ ಮತ್ತು ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಇದರಲ್ಲಿ ಪದನಿಮಿತ್ತ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ:- ಇದು ಶಸ್ತ್ರಾಸ್ತ್ರ ಮಿತಿ ಮತ್ತು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತುಸಲಹೆ ನೀಡುತ್ತದೆ.
NIRANTAR (ನಿರಂತರ್) ವೇದಿಕೆ
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು, NIRANTAR/ನಿರಂತರ್ (ಪರಿವರ್ತನೆ, ಹೊಂದಿಕೆ ಮತ್ತು ಸ್ಥಿತಿಸ್ಥಾಪಕತ್ವದ ನಿರ್ಮಾಣಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸಂಶೋಧನೆ ಮತ್ತು ಅನ್ವಯಕ್ಕಾಗಿ ರಾಷ್ಟ್ರೀಯ ಸಂಸ್ಥೆ) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
NIRANTAR (ನಿರಂತರ್) ಸಂಸ್ಥೆಯ ಬಗ್ಗೆ:
ಸ್ಥಾಪನೆ:- ಇದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC)ದ ಅಡಿಯಲ್ಲಿರುವ ಸಂಸ್ಥೆಗಳ ಒಂದು ವೇದಿಕೆಯಾಗಿದ್ದು,ಸಮನ್ವಯ ಮತ್ತು ಸಹಯೋಗವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಉದ್ದೇಶ:- ಇದರ ನಾಲ್ಕು ವಿಭಾಗಗಳು, ಅಭಿವೃದ್ಧಿಗಾಗಿ ಸಂಪನ್ಮೂಲಗಳ, ವಿಶೇಷವಾಗಿ ಜೈವಿಕ ಸಂಪನ್ಮೂಲಗಳಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಅವುಗಳ ಸಂಶೋಧನೆ, ಮೌಲ್ಯಮಾಪನ ಮತ್ತು ಬಳಕೆಯ ಮೇಲೆ ಗಮನಹರಿಸುತ್ತವೆ.
ಮಹತ್ವ:- ಅಭಿವೃದ್ಧಿಗಾಗಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ‘ನಿರಂತರ್’ ವೇದಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ವೇದಿಕೆಗಳು 10 ನಿಮಿಷಗಳ ವಿತರಣೆ ಸೇವೆಯನ್ನು ನಿಲ್ಲಿಸಲಿವೆ
ಸಾಮಾನ್ಯ ಅಧ್ಯಯನ-3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
ಸರ್ಕಾರದ ಆದೇಶದ ಬಳಿಕ, ಭಾರತದ ತ್ವರಿತ ವಾಣಿಜ್ಯ (ಕ್ವಿಕ್ ಕಾಮರ್ಸ್) ಕಂಪನಿಗಳಾದ ಸ್ವಿಗ್ಗಿ ಮತ್ತು ಜೆಪ್ಟೋ, ತಮ್ಮ ತ್ವರಿತ ವಾಣಿಜ್ಯ ಸೇವೆಯನ್ನು ಇನ್ನು ಮುಂದೆ ‘10 ನಿಮಿಷಗಳ ಸೇವೆ’ ಎಂದು ಪ್ರಚಾರ ಮಾಡುವುದನ್ನು ನಿಲ್ಲಿಸಲು ತಮ್ಮ ಬ್ರಾಂಡಿಂಗ್ ಅನ್ನು ಬದಲಿಸಿಕೊಂಡಿವೆ.
ಈ ಕ್ರಮವು ಗಿಗ್ ಕಾರ್ಮಿಕರ ಹೆಚ್ಚಿನ ಸುರಕ್ಷತೆ, ರಕ್ಷಣೆ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.
ಗಿಗ್ ಕಾರ್ಮಿಕರ ಬಗ್ಗೆ:
ಸಾಮಾಜಿಕ ಭದ್ರತಾ ಸಂಹಿತೆ, 2020:- ಇದರ ಪ್ರಕಾರ, ಗಿಗ್ ಕಾರ್ಮಿಕರು ಎಂದರೆ ಸಾಂಪ್ರದಾಯಿಕ ಉದ್ಯೋಗದಾತ–ಉದ್ಯೋಗಿ ಸಂಬಂಧದ ಹೊರತಾಗಿ, ಕೆಲಸಗಳನ್ನು ನಿರ್ವಹಿಸಿ ಅಥವಾ ಕೆಲಸದ ವ್ಯವಸ್ಥೆಗಳಲ್ಲಿ ಭಾಗವಹಿಸಿ, ಅಂತಹ ಚಟುವಟಿಕೆಗಳಿಂದ ಆದಾಯವನ್ನು ಗಳಿಸುವ ವ್ಯಕ್ತಿಗಳು.
ನೀತಿ ಆಯೋಗದ 2020–21 ದತ್ತಾoಶದ ಪ್ರಕಾರ:-77 ಲಕ್ಷ ಕಾರ್ಮಿಕರು ಗಿಗ್ ಆರ್ಥಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇದು 2029–30 ರ ವೇಳೆಗೆ 2.35 ಕೋಟಿಗೆ ವಿಸ್ತರಿಸುವ ನಿರೀಕ್ಷೆಯಿದೆ.
ಭಾರತದಲ್ಲಿ ಗಿಗ್ ಕಾರ್ಮಿಕರಿಗಾಗಿ ಇರುವ ಉಪಕ್ರಮಗಳು:
ಸಾಮಾಜಿಕ ಭದ್ರತಾ ಸಂಹಿತೆ 2020:- ಇದು ಗಿಗ್ ಕಾರ್ಮಿಕರಿಗೆ ಜೀವ ಮತ್ತು ಅಂಗವೈಕಲ್ಯ ರಕ್ಷಣೆ, ಅಪಘಾತ ವಿಮೆ ಮುಂತಾದ ವಿವಿಧ ಪ್ರಯೋಜನಗಳನ್ನು ಕಲ್ಪಿಸುತ್ತದೆ.
ಇ-ಶ್ರಮ್ ಪೋರ್ಟಲ್:- ಇದು ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ಸಂಗ್ರಹವನ್ನು ಸ್ಥಾಪಿಸುತ್ತದೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಹಾಗೂ ಅವರಿಗೆ ಸಾಮಾಜಿಕ ಭದ್ರತಾ ಯೋಜನೆಯ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕ ವೇದಿಕೆ (ಪ್ಲಾಟ್‌ಫಾರ್ಮ್) ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ, 2024:– ಇದು ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲು ಮತ್ತು ಕಲ್ಯಾಣ ಶುಲ್ಕವನ್ನು ವಿಧಿಸಲು ಅವಕಾಶ ನೀಡುತ್ತದೆ.
ಉಬ್ಬು (ಪಫರ್) ಮೀನು ವಿಷಬಾಧೆ
ಸಾಮಾನ್ಯ ಅಧ್ಯಯನ-3/ ಪ್ರಭೇದಗಳು
ಇದೀಗ ಸುದ್ದಿಯಲ್ಲಿದೆ:
ವಿಜ್ಞಾನಿಗಳು ಭಾರತದಲ್ಲಿ ಪಫರ್‌ಫಿಶ್ ಸೇವನೆಯಿಂದ ವಿಷಪೂರಿತವಾದ ಮೊದಲ ಪ್ರಕರಣವನ್ನು ದೃಢಪಡಿಸಿದ್ದಾರೆ. ಈ ಘಟನೆಯು, ನದಿ ಮೂಲಗಳಲ್ಲಿರುವ ಆದರೆ ಈವರೆಗೂ ಹೆಚ್ಚಾಗಿ ಗುರುತಿಸಲ್ಪಡದ ಆರೋಗ್ಯದ ಅಪಾಯಗಳತ್ತ ಗಮನ ಸೆಳೆದಿದೆ.
ಉಬ್ಬು ಮೀನಿನ (Pufferfish) ಬಗ್ಗೆ:
ಇದು ಟೆಟ್ರಾಓಡಾಂಟಿಫಾರ್ಮೀಸ್ (Tetraodontiformes) ಎಂಬ ವರ್ಗೀಕರಣ ಕ್ರಮಕ್ಕೆ ಸೇರಿದೆ.
ಇದನ್ನು ಸ್ಥಳೀಯವಾಗಿ ಟೋಡ್ ಮೀನು, ಪಟ್ಕಾ ಮೀನು, ಬಲೂನ್ ಮೀನು ಮತ್ತು ಫುಗುಎಂತಲೂ ಕರೆಯಲಾಗುತ್ತದೆ.
ಜಾಗತಿಕ ಪಟ್ಟಿಗಳಲ್ಲಿ ಸರಿಸುಮಾರು 190–193 ಮಾನ್ಯವಾದ ಪ್ರಭೇದಗಳಿವೆ.
ಸರ್ವಭಕ್ಷಕ ಜೀವಿಗಳಾಗಿವೆ:- ಇವು “ಬೆಂಥಿಕ್” (ಜಲಮೂಲಗಳ ತಳಭಾಗದಲ್ಲಿ ವಾಸಿಸುವ) ಆವಾಸಸ್ಥಾನವನ್ನು ಹೊಂದಿವೆ.
ಭಾರತದಲ್ಲಿ ವರದಿಯಾದ ಸಿಹಿನೀರಿನ ಉಬ್ಬು ಮೀನು ಪ್ರಭೇದಗಳು ಸಾಮಾನ್ಯವಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗೆ ಸ್ಥಳೀಯವಾಗಿವೆ ಮತ್ತು ಆರೋಗ್ಯಕರ ನದಿ ಪರಿಸರ ವ್ಯವಸ್ಥೆಗಳ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಭಾರತದಲ್ಲಿನ ಸ್ಥಿತಿಗತಿ:
ಭಾರತೀಯ ಜಲಾನಯನ ಪ್ರದೇಶಗಳಲ್ಲಿ ಪ್ರಸ್ತುತವಾಗಿ 8 ಕುಲಗಳು (genera) ಮತ್ತು 32 ಪ್ರಭೇದದ ಉಬ್ಬು ಮೀನುಗಳು ಕಂಡು ಬರುತ್ತವೆ.
ಅವುಗಳ ಹಂಚಿಕೆಯು ನಿರ್ದಿಷ್ಟ ಪ್ರದೇಶಗಳು ಮತ್ತು ನದಿ ವ್ಯವಸ್ಥೆಗಳಿಗೆ, ಪ್ರಮುಖವಾಗಿ ಪಶ್ಚಿಮ ಘಟ್ಟಗಳು ಮತ್ತು ಗಂಗಾ, ಬ್ರಹ್ಮಪುತ್ರ ಹಾಗೂ ಮಹಾನದಿಯಂತಹ ಪ್ರಮುಖ ಜಲಾನಯನ ಪ್ರದೇಶಗಳಿಗೆ ಸೀಮಿತವಾಗಿದೆ.
ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ, ಗ್ರಾಮೀಣ ಮಹಿಳೆಯರಿಗೆ ಕೃಷಿಯೇತರ ಜೀವನೋಪಾಯವನ್ನು ಬಲಪಡಿಸಲು “ರಾಷ್ಟ್ರೀಯ ಉದ್ಯಮಶೀಲತಾ ಅಭಿಯಾನ”ಕ್ಕೆ ಚಾಲನೆ ನೀಡಲಾಗಿದೆ.
ಈ ಅಭಿಯಾನವು ಉದ್ಯಮ ಉತ್ತೇಜನಕ್ಕಾಗಿ 50,000 ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡುವ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರದ ಕ್ರಮಗಳು:
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP):-
ಅನುಷ್ಠಾನ:-ಕೆವಿಐಸಿ (KVIC)
ಉದ್ದೇಶ:-ಉತ್ಪಾದನೆ ಮತ್ತು ಸೇವಾ ವಲಯಗಳಲ್ಲಿ ಹೊಸ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸಲು.
ಸಹಾಯಧನ:- ಯೋಜನಾ ವೆಚ್ಚದ ಮೇಲೆ 35% ರಷ್ಟು ಸಹಾಯಧನವನ್ನು (ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು) ನೀಡುತ್ತದೆ.
ಸಾಲ:- ಇದು ನಿರುದ್ಯೋಗಿ ಯುವಕರು ಮತ್ತು ಕುಶಲಕರ್ಮಿಗಳನ್ನು ಗುರಿಯಾಗಿಸಿಕೊಂಡು ₹25 ಲಕ್ಷದವರೆಗೆ ಸಾಲವನ್ನು ಒದಗಿಸುತ್ತದೆ.
ಆಸ್ಪೈರ್ (ASPIRE) ಯೋಜನೆ:-
ಸಚಿವಾಲಯ:-ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
ಉದ್ದೇಶ:-ಕೃಷಿ-ಗ್ರಾಮೀಣ ನವೋದ್ಯಮಗಳನ್ನು ಉತ್ತೇಜಿಸಲು ಗ್ರಾಮೀಣ ಪ್ರದೇಶಗಳಲ್ಲಿ ‘ಜೀವನೋಪಾಯ ವ್ಯಾಪಾರ ಇನ್ಕ್ಯುಬೇಟರ್’ಗಳಿಗೆ (LBIs) ಮೂಲಸೌಕರ್ಯ, ಕೌಶಲ್ಯ ಕಾರ್ಯಕ್ರಮಗಳು ಮತ್ತು ನಾವೀನ್ಯತೆಗೆ ಬೆಂಬಲ.
ಧನಸಹಾಯ:-₹1 ಕೋಟಿವರೆಗೆ.
ಲಖ್ ಪತಿ ದೀದಿ ಉಪಕ್ರಮ:-
ವ್ಯಾಖ್ಯಾನ:- ಕೃಷಿ ಅಥವಾ ಕೃಷಿಯೇತರ ಚಟುವಟಿಕೆಗಳ ಮೂಲಕ 4 ಋತುಗಳು/ ಚಕ್ರಗಳಲ್ಲಿ ವಾರ್ಷಿಕ ₹1 ಲಕ್ಷಕ್ಕೂ ಹೆಚ್ಚು (ತಿಂಗಳಿಗೆ ₹10,000+) ಕುಟುಂಬದ ಆದಾಯವನ್ನು ಗಳಿಸುವ ಸ್ವಸಹಾಯ ಸಂಘದ ಮಹಿಳೆಯರನ್ನು “ಲಖ್ ಪತಿ ದೀದಿ” ಎಂದು ಗುರುತಿಸಲಾಗುತ್ತದೆ.
DAY – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಬಗ್ಗೆ:
2011 ರಲ್ಲಿ ಪ್ರಾರಂಭ:- ಇದನ್ನು ಸ್ವರ್ಣಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆಯಿಂದ (SGSY) ಮರು ರೂಪಿಸಿ ಪ್ರಾರಂಭಿಸಲಾಯಿತು.
2016 ರಲ್ಲಿ ಮರುನಾಮಕರಣ:- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM) ಅನ್ನು ‘DAY-NRLM’ ಎಂದು ಮರುನಾಮಕರಣ ಮಾಡಲಾಯಿತು.
ನೋಡಲ್ ಸಚಿವಾಲಯ:-ಗ್ರಾಮೀಣಾಭಿವೃದ್ಧಿ ಸಚಿವಾಲಯವು.
ಅನುದಾನದ ಮಾದರಿ:- ಇದು ಕೇಂದ್ರ ಪ್ರಯೋಜಿತ ಯೋಜನೆಯಾಗಿದ್ದು (ಸಾಮಾನ್ಯವಾಗಿ 60:40 ಅನುಪಾತ; ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಅನುಪಾತ).
ಉದ್ದೇಶ:-ಬಡ ಗ್ರಾಮೀಣ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯ ಮತ್ತು ವರ್ಧಿತ ಆದಾಯವನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವುದು.
ಪ್ರಮುಖ ಕಾರ್ಯತಂತ್ರ:-
ಗ್ರಾಮೀಣ ಬಡ ಮಹಿಳೆಯರನ್ನು ಸ್ವಸಹಾಯ ಗುಂಪುಗಳಾಗಿ ಸಾರ್ವತ್ರಿಕವಾಗಿ ಒಗ್ಗೂಡಿಸುವುದು.
ಸಾಮರ್ಥ್ಯ ವರ್ಧನೆ, ಸಾಲ ಸೌಲಭ್ಯ ಮತ್ತು ಜೀವನೋಪಾಯದ ವೈವಿಧ್ಯೀಕರಣವನ್ನು ಒದಗಿಸುವುದು.
ಸಾರಿಗೆ ನೌಕರರ ಸೇವೆಗಳನ್ನು ಹೆಚ್ಚಿಸಲು ಕೆಎಸ್‌ಆರ್‌ಟಿಸಿ (KSRTC) ‘ಸಾರಿಗೆ ಮಿತ್ರ’ ಎಚ್‌ಆರ್‌ಎಂಎಸ್ (HRMS) ಮೊಬೈಲ್ ಆ್ಯಪ್ 2.0 ಅನ್ನು ಬಿಡುಗಡೆ ಮಾಡಿದೆ.
‘ಸಾರಿಗೆ ಮಿತ್ರ’- ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS)- ಆವೃತ್ತಿ 2.0 ಆ್ಯಪ್ ನ ಬಗ್ಗೆ:
ಅಭಿವೃದ್ಧಿಪಡಿಸಿದವರು:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC).
ಪ್ರಾರಂಭಿಸಿದವರು:-ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಉದ್ದೇಶ:- ಸ್ಮಾರ್ಟ್‌ಫೋನ್‌ಗಳ ಮೂಲಕ ನೈಜ-ಸಮಯದ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾರಿಗೆ ನೌಕರರಿಗೆ ಬೆರಳ ತುದಿಯಲ್ಲೇ ವ್ಯಾಪಕ ಶ್ರೇಣಿಯ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಗುರಿ:- ಕೆಎಸ್‌ಆರ್‌ಟಿಸಿ ನೌಕರರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ದತ್ತಾಂಶದೊಂದಿಗೆ ಡಿಜಿಟಲ್ ಮೂಲಕ ಸುಲಭವಾಗಿ ವ್ಯವಹರಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಪ್ರಮುಖ ಲಕ್ಷಣಗಳು:- ಇದು ಭೌಗೋಳಿಕ ಗಡಿ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ಮೇಲ್ವಿಚಾರಣೆ ಮತ್ತು ಒಂದು ಕ್ಲಿಕ್ ಮೂಲಕ ಮಾಸಿಕ ವೇತನ ಪಾವತಿ ವಿವರ ಪತ್ರಗಳನ್ನು ಡೌನ್‌ಲೋಡ್ ಮಾಡುವ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿದೆ.
ಕಾರ್ಯವಿಧಾನ:- ಈ ಆ್ಯಪ್ ನಿರ್ಣಾಯಕ ವೈಯಕ್ತಿಕ ಮತ್ತು ವೃತ್ತಿಪರ ದಾಖಲೆಗಳಿಗೆ ತಕ್ಷಣದ ಪ್ರವೇಶವನ್ನು ನೀಡುವ ಸಮಗ್ರ ಮೊಬೈಲ್ ಬಳಕೆದಾರ ಮುಖಪುಟವಾಗಿ ಕಾರ್ಯನಿರ್ವಹಿಸುತ್ತದೆ.