Blog

  • ಕರ್ನಾಟಕದ ಕರಾವಳಿಯುದ್ದಕ್ಕೂ ‘ಟರ್ಟಲ್ ಟ್ರೈಲ್ಸ್’ (ಆಮೆ ಜಾಡುಗಳ) ಅಭಿವೃದ್ಧಿ

    ಕರ್ನಾಟಕದ ಕರಾವಳಿಯುದ್ದಕ್ಕೂ ‘ಟರ್ಟಲ್ ಟ್ರೈಲ್ಸ್’ (ಆಮೆ ಜಾಡುಗಳ) ಅಭಿವೃದ್ಧಿ

    ಇದೀಗ ಸುದ್ದಿಯಲ್ಲಿದೆ: 

    • 2026-27ನೇ ಸಾಲಿನ ಕೇಂದ್ರ ಮುಂಗಡ ಪತ್ರದಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕರ್ನಾಟಕ, ಒಡಿಶಾ ಮತ್ತು ಕೇರಳದ ಕರಾವಳಿಯ ಪ್ರಮುಖ ಗೂಡುಕಟ್ಟುವ ತಾಣಗಳಲ್ಲಿ ಪರಿಸರ ಸುಸ್ಥಿರವಾದ “ಆಮೆ ಜಾಡು”ಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ.
    • ಡಿಸೆಂಬರ್‌ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಕಡಲತೀರಗಳಿಗೆ ಬರುವ ಕಡಲಾಮೆಗಳ ಗೂಡುಕಟ್ಟುವ ಪ್ರದೇಶಗಳ ರಕ್ಷಣೆ, ಮೇಲ್ವಿಚಾರಣೆ ಮತ್ತು ಪ್ರದರ್ಶನ ಈ ಮಾರ್ಗಗಳ ಪ್ರಮುಖ ಗುರಿಯಾಗಿದೆ.

    ಈ ಘೋಷಣೆಯ ಪ್ರಮುಖ ವಿವರಗಳು:

    • ಉದ್ದೇಶ:- ಸಮುದ್ರ ಜೀವವೈವಿಧ್ಯದ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಜವಾಬ್ದಾರಿಯುತ ವನ್ಯಜೀವಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು.
    • ಪ್ರಮುಖ ಪ್ರಭೇದ:- ಜಾಗತಿಕವಾಗಿ ದುರ್ಬಲ(VU) ಸ್ಥಿತಿಯಲ್ಲಿರುವ ‘ಆಲಿವ್ ರಿಡ್ಲಿ’ ಕಡಲಾಮೆಗಳ ಗೂಡುಕಟ್ಟುವ ತಾಣಗಳನ್ನು ಈ ಯೋಜನೆಗಳು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿವೆ.
    • ಕರ್ನಾಟಕದ ಸ್ಥಳಗಳು:- ತಜ್ಞರು ಈ ಯೋಜನೆಗಾಗಿ ಕರ್ನಾಟಕದಲ್ಲಿ 18 ಕಡಲತೀರಗಳನ್ನು ಗುರುತಿಸಿದ್ದಾರೆ; ಇದರಲ್ಲಿ ಉತ್ತರ ಕನ್ನಡದ 15, ಉಡುಪಿಯ 2 ಮತ್ತು ಮಂಗಳೂರಿನ 1 ಕಡಲತೀರಗಳು ಸೇರಿವೆ.

    ಆಲಿವ್ ರಿಡ್ಲಿ ಕಡಲಾಮೆಗಳ ಬಗ್ಗೆ:

    • ಇವು ಪ್ರಪಂಚದಾದ್ಯಂತ ಕಂಡುಬರುವ ಎಲ್ಲಾ ಕಡಲಾಮೆಗಳಲ್ಲಿ ಅತ್ಯಂತ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಪ್ರಭೇದವಾಗಿದೆ.
    • ವೈಜ್ಞಾನಿಕ ಹೆಸರು:- ಲೆಪಿಡೋಚೆಲಿಸ್ ಒಲಿವೇಸಿಯಾ (Lepidochelys olivacea)
    • ಇವುಗಳನ್ನು ‘ಪೆಸಿಫಿಕ್ ರಿಡ್ಲಿ ಕಡಲಾಮೆ’ ಎಂತಲೂ ಕರೆಯಲಾಗುತ್ತದೆ.
    • ಭಾರತದಲ್ಲಿ ಪ್ರಮುಖವಾಗಿ ಗೂಡುಕಟ್ಟುವ ತಾಣಗಳು:- ಒಡಿಶಾದ ರುಷಿಕುಲ್ಯ ರೂಕರಿ ಕರಾವಳಿ , ಗಹಿರ್ಮಠ ಕಡಲತೀರ (ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ) ಮತ್ತು ದೇಬಿ ನದಿಯ ಮುಖಜ ಭೂಮಿ.
    • ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರಿನಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.
    • ವೈಶಿಷ್ಟ್ಯಗಳು:- ಇವು ‘ಅರಿಬಾಡಾ’ ಎಂದು ಕರೆಯಲ್ಪಡುವ ವಿಶಿಷ್ಟವಾದ ಸಾಮೂಹಿಕ ಗೂಡುಕಟ್ಟುವಿಕೆಗೆ ಹೆಸರುವಾಸಿಯಾಗಿವೆ; ಇಲ್ಲಿ ಸಾವಿರಾರು ಹೆಣ್ಣು ಆಮೆಗಳು ಮೊಟ್ಟೆಗಳನ್ನು ಇಡಲು ಒಂದೇ ಕಡಲತೀರದಲ್ಲಿ ಒಟ್ಟುಗೂಡುತ್ತವೆ.
    • ಇವು ಮಾಂಸಾಹಾರಿಗಳಾಗಿದ್ದು, ಮುಖ್ಯವಾಗಿ ಜೆಲ್ಲಿ ಮೀನುಗಳು, ಸೀಗಡಿಗಳು ಮುಂತಾದವುಗಳನ್ನು ಭಕ್ಷಿಸುತ್ತವೆ.
    • ಕಾವು ಕೊಡುವ ಅವಧಿಯಲ್ಲಿನ ಮರಳು ಮತ್ತು ವಾತಾವರಣದ ತಾಪಮಾನವನ್ನು ಅವಲಂಬಿಸಿ ಈ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಮರಿಯಾಗುತ್ತವೆ.
    • ಅಪಾಯಗಳು:- ಮಾಂಸ, ಚಿಪ್ಪು ಮತ್ತು ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಂತಹ ಇತರ ಮಾನವಜನ್ಯ ಅಂಶಗಳಿಂದಾಗಿ ಇವುಗಳು ತೀವ್ರ ಅಪಾಯವನ್ನು ಎದುರಿಸುತ್ತಿವೆ.
    • ಸಂರಕ್ಷಣಾ ಸ್ಥಾನಮಾನ:-
    • IUCN ಕೆಂಪು ಪಟ್ಟಿಯಲ್ಲಿ:- ದುರ್ಬಲ (VU).
    • ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರಲ್ಲಿ:- ಅನುಸೂಚಿ I 
    • CITES ನ ಅಡಿಯಲ್ಲಿ:- ಅನುಬಂಧ I 
    • ಸಂರಕ್ಷಣೆಗಾಗಿ ತೆಗೆದುಕೊಂಡ ಕ್ರಮಗಳು:
    • ಭಾರತೀಯ ಕರಾವಳಿ ಕಾವಲು ಪಡೆಯು ‘ಆಪರೇಷನ್ ಒಲಿವಿಯಾ’ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.
    • ಮೀನುಗಾರಿಕಾ ಬಲೆಗಳಿಗೆ ಸಿಲುಕಿ ಆಗುವ ಆಕಸ್ಮಿಕ ಸಾವುಗಳನ್ನು ತಡೆಗಟ್ಟಲು ‘ಆಮೆ ಹೊರಗಿಡುವ ಸಾಧನಗಳ’ (TEDs) ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
  • 16ನೇ ಹಣಕಾಸು ಆಯೋಗ | ಸಂತ ಗುರು ರವಿದಾಸ | ಬೌದ್ಧ ತೀರ್ಥಯಾತ್ರಾ ಮಾರ್ಗಗಳು | ಕೇಂದ್ರ ಮುಂಗಡ ಪತ್ರ, 2026-27: ತೆಂಗು, ಕೋಕೋ, ಗೋಡಂಬಿಗೆ ಆದ್ಯತೆ

    16ನೇ ಹಣಕಾಸು ಆಯೋಗ

    ರಾಜಕೀಯ

    ಇದೀಗ ಸುದ್ದಿಯಲ್ಲಿದೆ:

    • ಡಾ. ಅರವಿಂದ್ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ 2023 ರಲ್ಲಿ ರಚಿಸಲಾದ 16ನೇ ಹಣಕಾಸು ಆಯೋಗದ ಪ್ರಮುಖ ಶಿಫಾರಸುಗಳನ್ನು, 2026–27 ರಿಂದ 2030–31 ರ ಅವಧಿಯ ಅನುಷ್ಠಾನಕ್ಕಾಗಿ ಸರ್ಕಾರವು ಅಂಗೀಕರಿಸಿದೆ.

    ಹಣಕಾಸು ಆಯೋಗದ ಬಗ್ಗೆ:

    • ಸಂವಿಧಾನಾತ್ಮಕ ಸಂಸ್ಥೆ:- ಇದನ್ನು ಭಾರತ ಸಂವಿಧಾನದ 280ನೇ ವಿಧಿಯ ಅಡಿಯಲ್ಲಿ ಸ್ಥಾಪಿಸಲಾಗಿದೆ.
    • ಭಾರತದ ರಾಷ್ಟ್ರಪತಿಗಳಿಂದ ರಚನೆ:- ಪ್ರತಿ 5 ವರ್ಷಗಳಿಗೊಮ್ಮೆ (ಅಥವಾ ಅದಕ್ಕಿಂತ ಮುಂಚಿತವಾಗಿ) ಭಾರತದ ರಾಷ್ಟ್ರಪತಿಗಳಿಂದ ಇದು ತಿ ರಚಿಸಲ್ಪಡುತ್ತದೆ.
    • ಸಂಯೋಜನೆ:- ಇದು ಒಬ್ಬ ಅಧ್ಯಕ್ಷರು ಮತ್ತು ಇತರ ನಾಲ್ವರು ಸದಸ್ಯರನ್ನು ಒಳಗೊಂಡಿರುತ್ತದೆ.
    • ಪ್ರಮುಖ ಕಾರ್ಯ:- ಇದು ಈ ಕೆಳಗಿನವುಗಳನ್ನು ಶಿಫಾರಸು ಮಾಡುವ ಮೂಲಕ ‘ವಿತ್ತೀಯ (ಹಣಕಾಸು) ಒಕ್ಕೂಟ ವ್ಯವಸ್ಥೆಯ ಸಮತೋಲನ ಚಕ್ರ‘ವಾಗಿ ಕಾರ್ಯನಿರ್ವಹಿಸುತ್ತದೆ:
      • ಲಂಬ ಹಂಚಿಕೆ (Vertical Devolution): ಕೇಂದ್ರ ಮತ್ತು ರಾಜ್ಯಗಳ ನಡುವೆ ನಿವ್ವಳ ತೆರಿಗೆ ಆದಾಯದ ಹಂಚಿಕೆ.
      • ಸಮಾನಾಂತರ ಹಂಚಿಕೆ (Horizontal Devolution):- ರಾಜ್ಯ ರಾಜ್ಯಗಳ ನಡುವೆಯೇ ನಿವ್ವಳ ತೆರಿಗೆ ಆದಾಯದ ಹಂಚಿಕೆ.
      • ಸಹಾಯಾನುದಾನ (Grants-in-Aid):- ಭಾರತದ ಸಂಚಿತ ನಿಧಿಯಿಂದ (ವಿಧಿ 275) ರಾಜ್ಯಗಳಿಗೆ ನೀಡುವ ಆರ್ಥಿಕ ಸಹಾಯವನ್ನು ನಿಯಂತ್ರಿಸುವ ತತ್ವಗಳು.
      • ಸ್ಥಳೀಯ ಸಂಸ್ಥೆಗಳು:- ಪಂಚಾಯತಿಗಳು ಮತ್ತು ಪುರಸಭೆಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯದ ಸಂಚಿತ ನಿಧಿಯನ್ನು ಬಲಪಡಿಸಲು ಅಗತ್ಯವಾದ ಕ್ರಮಗಳು.
      • ಶಿಫಾರಸುಗಳ ಸ್ವರೂಪ:- ಇವು ಸಲಹಾತ್ಮಕ ಸ್ವರೂಪದ್ದಾಗಿರುತ್ತವೆ (ಕಾನೂನುಬದ್ಧವಾಗಿ ಬದ್ಧವಲ್ಲ). ಆದಾಗ್ಯೂ, ಸಾಂಪ್ರದಾಯಿಕವಾಗಿ ಸರ್ಕಾರವು ಇವುಗಳನ್ನು ಒಪ್ಪಿಕೊಳ್ಳುತ್ತದೆ.

    ಸಂತ ಗುರು ರವಿದಾಸ

    ಇತಿಹಾಸ

    ಇದೀಗ ಸುದ್ದಿಯಲ್ಲಿದ್ದಾರೆ:

    • ಸಂತ ಗುರು ರವಿದಾಸ ಅವರ 649ನೇ ಜನ್ಮದಿನದ ಸ್ಮರಣಾರ್ಥವಾಗಿ, ಆದಂಪುರ ವಿಮಾನ ನಿಲ್ದಾಣವನ್ನು ‘ಶ್ರೀ ಗುರು ರವಿದಾಸ ಜೀ ವಿಮಾನ ನಿಲ್ದಾಣ, ಆದಂಪುರ’ ಎಂದು ಮರುನಾಮಕರಣ ಮಾಡಲಾಗಿದೆ.

    ‘ಸಂತ ರವಿದಾಸ’ರ ಬಗ್ಗೆ:

    • ಇವರು 14ನೇ ಶತಮಾನದಲ್ಲಿ ಜನಿಸಿದರು.
    • ಭಾರತದಲ್ಲಿ 14 ಮತ್ತು 17ನೇ ಶತಮಾನಗಳ ನಡುವೆ ನಡೆದ ಸಾಮಾಜಿಕ-ಧಾರ್ಮಿಕ ಕ್ರಾಂತಿಯಾದ ‘ಭಕ್ತಿ ಚಳವಳಿ’ಯ ಪ್ರಮುಖ ಸಂತರಲ್ಲಿ ಇವರು ಒಬ್ಬರಾಗಿದ್ದರು.
    • ಇವರು ಸಂತ ಕಬೀರರ ಶಿಷ್ಯರಾಗಿದ್ದರು ಮತ್ತು ‘ರವಿದಾಸಿಯಾ’ ಧರ್ಮದ ಸ್ಥಾಪಕರಾಗಿದ್ದರು. ಮೀರಾಬಾಯಿ ಇವರ ಶಿಷ್ಯೆಯಾಗಿದ್ದರು.

    ಇವರ ಜೀವನ ಮತ್ತು ಬೋಧನೆಗಳು:

    • ಇವರು ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು ಹಾಗೂ ಶಾಂತಿ, ಪ್ರೀತಿ ಮತ್ತು ಭ್ರಾತೃತ್ವದ ಹರಿಕಾರರಾಗಿದ್ದರು.
    • ಜಾತಿ ಮತ್ತು ಧರ್ಮ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಇವರು ಅವಿರತವಾಗಿ ಶ್ರಮಿಸಿದರು ಮತ್ತು ತುಳಿತಕ್ಕೊಳಗಾದವರ ಏಳಿಗೆಗಾಗಿ ದುಡಿದರು.
    • ಇವರ ಜೀವನವು ತ್ಯಾಗ ಮತ್ತು ತಪಸ್ಸಿನ ಒಂದು ಅನನ್ಯ ಉದಾಹರಣೆಯಾಗಿದೆ. ಇವರು ವಿವಿಧ ಸಾಮಾಜಿಕ ವಿಷಯಗಳ ಕುರಿತು ಅನೇಕ ಕೃತಿಗಳನ್ನು ರಚಿಸಿದರು.
    • ‘ಮನ್ ಚಂಗಾ ತೋ ಕಥೌಟಿ ಮೇ ಗಂಗಾ’ (ಮನಸ್ಸು ಶುದ್ಧವಾಗಿದ್ದರೆ ಗಂಗೆಯು ಪಾತ್ರೆಯಲ್ಲೇ ಇರುತ್ತಾಳೆ) ಎಂಬ ಜನಪ್ರಿಯ ಹಿಂದಿ ಹೇಳಿಕೆಯನ್ನು ನೀಡುವ ಮೂಲಕ, ಇವರು ಸಮಾಜಕ್ಕೆ ‘ಕರ್ಮ’ದ ಸಿದ್ಧಾಂತದ ಬಗ್ಗೆ ಬಹಳ ವಿಶಾಲವಾದ ಸಂದೇಶವನ್ನು ನೀಡಿದರು.

    ಪರಂಪರೆ:

    • ಸಿಖ್ಖರ ಪವಿತ್ರ ಗ್ರಂಥವಾದ ‘ಗುರು ಗ್ರಂಥ ಸಾಹೇಬ’, ಇವರ 41 ಭಕ್ತಿಗೀತೆಗಳು ಮತ್ತು ಪದ್ಯಗಳನ್ನು ಒಳಗೊಂಡಿದೆ.
    • ನಮ್ಮ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು, ಗುರು ರವಿದಾಸ ಜೀ ಅವರು ವ್ಯಕ್ತಪಡಿಸಿದ ಮೌಲ್ಯಗಳ ಸುತ್ತ ಸಂವಿಧಾನಾತ್ಮಕ ತತ್ವಗಳನ್ನು ಅಳವಡಿಸಿಕೊಂಡಿದ್ದರು.

    ಬೌದ್ಧ ತೀರ್ಥಯಾತ್ರಾ ಮಾರ್ಗಗಳು

    ಇತಿಹಾಸ

    ಇದೀಗ ಸುದ್ದಿಯಲ್ಲಿದೆ: 

    • ಕೇಂದ್ರ ಮುಂಗಡಪತ್ರದಲ್ಲಿ, 20 ಪ್ರತಿಷ್ಠಿತ ಪ್ರವಾಸಿ ತಾಣಗಳಲ್ಲಿನ 10,000 ಪ್ರವಾಸಿ ಮಾರ್ಗದರ್ಶಿಗಳ ಕೌಶಲ್ಯಾಭಿವೃದ್ಧಿಗಾಗಿ ಒಂದು ಪ್ರಾಯೋಗಿಕ ಯೋಜನೆಯನ್ನು ಹಾಗೂ ಈ ವಲಯದ ವೃತ್ತಿಪರರಿಗೆ ತರಬೇತಿ ನೀಡಲು ‘ರಾಷ್ಟ್ರೀಯ ಆತಿಥ್ಯ ಸಂಸ್ಥೆ‘ಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.

    ಈ ಉಪಕ್ರಮದ ಬಗ್ಗೆ:

    • ರಾಷ್ಟ್ರೀಯ ತಾಣಗಳ ಡಿಜಿಟಲ್ ಜ್ಞಾನ ಜಾಲ:- ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವದ ಎಲ್ಲಾ ತಾಣಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಈ ಜಾಲವನ್ನು ಸ್ಥಾಪಿಸಲಾಗುವುದು.
    • ಸರ್ಕಾರವು ಈ ಪ್ರದೇಶದಲ್ಲಿ ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ಪ್ರಸ್ತಾಪಿಸಿದೆ.
    • ಈ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ಸೇರಿವೆ.

    ಬೌದ್ಧ ತೀರ್ಥಯಾತ್ರಾ ಮಾರ್ಗಗಳು ಬಗ್ಗೆ:

    • ಘೋಷಣೆ:- 2016ರಲ್ಲಿ, ಪ್ರವಾಸೋದ್ಯಮ ಸಚಿವಾಲಯವು ‘ಬೌದ್ಧ ತೀರ್ಥಯಾತ್ರಾ ಮಾರ್ಗ’ಗಳನ್ನು ದೇಶದ ಮೊದಲ ‘ಅಂತರರಾಷ್ಟ್ರೀಯ ಪ್ರವಾಸಿ ಪಥ’ ಎಂದು ಘೋಷಿಸಿತು. ಇದು ಭಾರತದಲ್ಲಿನ ತಾಣಗಳ ಜೊತೆಗೆ ನೇಪಾಳ ಮತ್ತು ಶ್ರೀಲಂಕಾದ ತಾಣಗಳನ್ನೂ ಒಳಗೊಂಡಿದೆ.
    • ಉದ್ದೇಶ:- ಪ್ರವಾಸಿಗರಿಗೆ ಮತ್ತು ಯಾತ್ರಾರ್ಥಿಗಳಿಗೆ ಭಗವಾನ್ ಬುದ್ಧನ ಬೋಧನೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸಲು ಮತ್ತು ಬುದ್ಧನ ಹೆಜ್ಜೆಯ ಜಾಡುಗಳನ್ನು ಅನ್ವೇಷಿಸಲು ನೆರವಾಗುವುದು.
    • ಈ ಪಥದ ಅಡಿಯಲ್ಲಿ ಬರುವ ಪ್ರಮುಖ ತಾಣಗಳು:- ಬುದ್ಧನ ಜನನದಿಂದ ಹಿಡಿದು ಅವರ ಪರಿನಿರ್ವಾಣದವರೆಗಿನ ಜೀವನಘಟ್ಟಗಳನ್ನು ಒಳಗೊಂಡಿವೆ. ಇವುಗಳಲ್ಲಿ ಬೋಧಗಯಾ, ವೈಶಾಲಿ, ರಾಜಗೀರ್, ಕುಶಿನಗರ, ಸಾರನಾಥ ಮತ್ತು ಶ್ರಾವಸ್ತಿ ಹಾಗೂ ಕಪಿಲವಸ್ತು ಮತ್ತು ಲುಂಬಿನಿ ಸೇರಿವೆ.

    4 ಪವಿತ್ರ ಬೌದ್ಧ ತೀರ್ಥಯಾತ್ರಾ ತಾಣಗಳು (ಚತುರ್ಮಹಾಸ್ಥಾನ):

    • ಲುಂಬಿನಿ (ನೇಪಾಳ):- ಗೌತಮ ಬುದ್ಧನ ಜನ್ಮಸ್ಥಳ.
    • ಬೋಧಗಯಾ (ಬಿಹಾರ):- ಬೋಧಿ ವೃಕ್ಷದ ಅಡಿಯಲ್ಲಿ ಜ್ಞಾನೋದಯ ಪಡೆದ ಸ್ಥಳ.
    • ಸಾರನಾಥ (ಉತ್ತರ ಪ್ರದೇಶ):- ಮೊದಲ ಬೋಧನೆ ಅಥವಾ ಧರ್ಮಚಕ್ರ ಪ್ರವರ್ತನ.

    ಕುಶಿನಗರ (ಉತ್ತರ ಪ್ರದೇಶ):- ಮಹಾಪರಿನಿರ್ವಾಣ (ಮರಣ).

    ಕೇಂದ್ರ ಮುಂಗಡ ಪತ್ರ, 2026-27: ತೆಂಗು, ಕೋಕೋ, ಗೋಡಂಬಿಗೆ ಆದ್ಯತೆ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • 2026-27ರ ಕೇಂದ್ರ ಮುಂಗಡಪತ್ರವು, ರೈತರ ಆದಾಯ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಂಗು, ಗೋಡಂಬಿ, ಕೋಕೋ, ಶ್ರೀಗಂಧ ಮತ್ತು ಆಯ್ದ ಕಾಯಿ ಬೆಳೆಗಳಿಗೆ ನಿರ್ದಿಷ್ಟ ಬೆಂಬಲವನ್ನು ನೀಡುವ ಮೂಲಕ, ‘ಅಧಿಕ ಮೌಲ್ಯದ ಕೃಷಿ’ಗೆ ವಿಶೇಷ ಒತ್ತು ನೀಡಿದೆ.

    ತೆಂಗು ಉತ್ಪಾದನೆ:

    • ಬಹುವಾರ್ಷಿಕ ತೋಟಗಾರಿಕೆ ಬೆಳೆ:- ತೆಂಗು ‘ಅರೆಕೇಸಿ’ ಕುಟುಂಬಕ್ಕೆ ಸೇರಿದ ಹಾಗೂ ಏಕದಳ (ಮೊನೋಕಟಿಲೆಡೊನೌಸ್) ತಾಳೆ ಜಾತಿಗೆ ಸೇರಿದ ಸಸ್ಯವಾಗಿದೆ.
    • ಇಂಡೋ-ಪೆಸಿಫಿಕ್ ಪ್ರದೇಶದ ಸ್ಥಳೀಯ ಸಸ್ಯ:- ಇದರ ಮೂಲವನ್ನು ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಗುರುತಿಸಲಾಗುತ್ತದೆ.
    • ವಾಯುಗುಣ:- ತೆಂಗಿನ ಅತ್ಯುತ್ತಮ ಬೆಳವಣಿಗೆಗೆ, 
    • ಬೆಚ್ಚಗಿನ ಮತ್ತು ತೇವಾಂಶಯುಕ್ತ ಉಷ್ಣವಲಯದ ವಾತಾವರಣ.
    • ತಾಪಮಾನ:- 25°C ನಿಂದ 30°ಸಿ
    • ಮಳೆ:- ಸಮನಾಗಿ ಹಂಚಿಕೆಯಾದ ಅಧಿಕ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ತೆಂಗು ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮಣ್ಣು, ಮೆಕ್ಕಲು ಮಣ್ಣು, ಜಂಬಿಟ್ಟಿಗೆ ಮತ್ತು ಕರಾವಳಿ ಮಣ್ಣಿನಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಗೋವಾ ಮತ್ತು ಪಶ್ಚಿಮ ಬಂಗಾಳ.
    • ಭಾರತವು ವಿಶ್ವದ ಅತಿದೊಡ್ಡ ತೆಂಗು ಉತ್ಪಾದಕ ರಾಷ್ಟ್ರವಾಗಿದ್ದು, ಸುಮಾರು 10 ದಶಲಕ್ಷ ರೈತರು ಸೇರಿದಂತೆ ಸುಮಾರು 30 ದಶಲಕ್ಷ ಜನರ ಜೀವನೋಪಾಯವನ್ನು ಇದು ಬೆಂಬಲಿಸುತ್ತದೆ.

    ಕೋಕೋ ಉತ್ಪಾದನೆ:

    • ನಿತ್ಯಹರಿದ್ವರ್ಣ ಬಹುವಾರ್ಷಿಕ ಮರ:- ಕೋಕೋ ‘ಮಾಲ್ವೇಸಿ’ ಕುಟುಂಬಕ್ಕೆ ಸೇರಿದೆ.
    • ದಕ್ಷಿಣ ಅಮೆರಿಕದ ಅಮೆಜಾನ್ ಮೇಲ್ದಂಡೆ ಜಲಾನಯನ ಪ್ರದೇಶದ ಸ್ಥಳೀಯ ಸಸ್ಯ:- ವಾಣಿಜ್ಯ ಕೃಷಿಗಾಗಿ ವಸಾಹತುಶಾಹಿ ಕಾಲದಲ್ಲಿ ಇದನ್ನು ಏಷ್ಯಾ ಮತ್ತು ಆಫ್ರಿಕಾಕ್ಕೆ ಪರಿಚಯಿಸಲಾಯಿತು.
    • ವಾಯುಗುಣ:- ಕೋಕೋ ಅತ್ಯುತ್ತಮ ಬೆಳವಣಿಗೆಗೆ, 
    • ಬೆಚ್ಚಗಿನ, ಆರ್ದ್ರ ಮತ್ತು ಸಮಭಾಜಕ ಮಾದರಿಯ ವಾತಾವರಣ.
    • ತಾಪಮಾನ:- 21°C ನಿಂದ 32°C
    • ಮಳೆ:- ವರ್ಷವಿಡೀ ಉತ್ತಮವಾಗಿ ಹಂಚಿಕೆಯಾದ ಮಳೆಯಾಗುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ಸಾವಯವ ವಸ್ತುಗಳಿಂದ ಸಮೃದ್ಧವಾಗಿರುವ ಆಳವಾದ, ಫಲವತ್ತಾದ ಮತ್ತು ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ.

    ಗೋಡಂಬಿ ಉತ್ಪಾದನೆ:

    • ನಿತ್ಯಹರಿದ್ವರ್ಣ ಉಷ್ಣವಲಯದ ಮರ:- ಗೋಡಂಬಿಯು ‘ಅನಕಾರ್ಡಿಯೇಸಿ’ ಕುಟುಂಬಕ್ಕೆ ಸೇರಿದೆ. 
    • ದಕ್ಷಿಣ ಅಮೆರಿಕದ ಈಶಾನ್ಯ ಬ್ರೆಜಿಲ್‌ನ ಕರಾವಳಿ ಪ್ರದೇಶಗಳ ಸ್ಥಳೀಯ ಸಸ್ಯ:- ಗೋಡಂಬಿ ಮರವು (ಅನಕಾರ್ಡಿಯಮ್ ಆಕ್ಸಿಡೆಂಟೇಲ್) ದಕ್ಷಿಣ ಅಮೆರಿಕದ ಸ್ಥಳೀಯ ಸಸ್ಯವಾಗಿದೆ.
    • ‘ಪೋರ್ಚುಗೀಸ್’ನ ಸಾಹಸಿ ಪ್ರವಾಸಿಗರು 16ನೇ ಶತಮಾನದಲ್ಲಿ ಇದನ್ನು ಭಾರತ ಮತ್ತು ಆಫ್ರಿಕಾಕ್ಕೆ ಪರಿಚಯಿಸಿದರು.
    • ವಾಯುಗುಣ:- ಗೋಡಂಬಿಗೆ, 
    • ನಿರ್ದಿಷ್ಟವಾದ ಒಣ ಋತುವಿನೊಂದಿಗೆ ಕೂಡಿದ ಉಷ್ಣವಲಯದ ವಾತಾವರಣ. 
    • ತಾಪಮಾನ:- 20°C ನಿಂದ 35°C 
    • ಮಳೆ:- ಸಾಧಾರಣದಿಂದ ಹೆಚ್ಚಿನ ಮಳೆ ಬೀಳುವ ಪ್ರದೇಶ, ಅವಶ್ಯಕವಾಗಿದೆ.
    • ಮಣ್ಣು:- ಜಂಬಿಟ್ಟಿಗೆ, ಕೆಂಪು ಮರಳು ಮತ್ತು ಕರಾವಳಿ ಮಣ್ಣಿನಲ್ಲಿ ಬೆಳೆಯುತ್ತದೆ ಹಾಗೂ ಕಳಪೆ ಮತ್ತು ಸಾರಹೀನ ಭೂಮಿಯಲ್ಲೂ ಉತ್ತಮ ಇಳುವರಿ ನೀಡುತ್ತದೆ.
    • ಪ್ರಮುಖ ಉತ್ಪಾದಕ ರಾಜ್ಯಗಳು:- ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ಕೇರಳ, ಕರ್ನಾಟಕ, ಗೋವಾ ಮತ್ತು ತಮಿಳುನಾಡು.
  • ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಸ್ತು ನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳು

    ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಸ್ತು ನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳು

    1). 16ನೇ ಹಣಕಾಸು ಆಯೋಗದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು 2023ರಲ್ಲಿ ರಚನೆಯಾಗಿದ್ದು, ಇದರ ಶಿಫಾರಸುಗಳು 2026-27 ರಿಂದ 2030-31ರವರೆಗೆ ಅನ್ವಯವಾಗುತ್ತವೆ.
    2. ಇದರ ಅಧ್ಯಕ್ಷತೆಯನ್ನು ಡಾ. ಅರವಿಂದ್ ಪನಗಾರಿಯಾ ವಹಿಸಿದ್ದಾರೆ.
    3. ಇದು ರಾಜ್ಯ ಸಂಚಿತ ನಿಧಿಗಳ ಮೂಲಕ ಪಂಚಾಯತ್‌ಗಳು ಮತ್ತು ಪುರಸಭೆಗಳ ಆರ್ಥಿಕತೆಯನ್ನು ಬಲಪಡಿಸುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ.
    4. ಇದು ರಾಜ್ಯ ಸರ್ಕಾರಗಳನ್ನು ಬದಿಗೊತ್ತಿ ಸ್ಥಳೀಯ ಸಂಸ್ಥೆಗಳಿಗೆ ನೇರವಾಗಿ ಹಣವನ್ನು ಹಂಚಿಕೆ ಮಾಡುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: C

     

    2). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಸಂತ ರವಿದಾಸ್ ಅವರನ್ನು ‘ರವಿದಾಸಿಯಾ’ ಧಾರ್ಮಿಕ ಸಂಪ್ರದಾಯದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.
    2. ಸಂತ ರವಿದಾಸ್‌ ಅವರಿಗೆ ಸೇರಿದ 41 ಸ್ತೋತ್ರಗಳನ್ನು ಗುರು ಗ್ರಂಥ ಸಾಹಿಬ್‌ನಲ್ಲಿ ಸೇರಿಸಲಾಗಿದೆ.
    3. ಸಾಂಪ್ರದಾಯಿಕ ನಂಬಿಕೆಯಂತೆ ಮೀರಾಬಾಯಿ ಅವರು ಸಂತ ರವಿದಾಸ್ ಅವರಿಂದ ಪ್ರಭಾವಿತರಾಗಿದ್ದರು.
    4. ಅವರ ಬೋಧನೆಗಳನ್ನು ಸಿಖ್ ಗುರುಗಳು ವಿರೋಧಿಸಿದರು ಮತ್ತು ಸಿಖ್ ಧಾರ್ಮಿಕ ಗ್ರಂಥಗಳಿಂದ (ನಿಯಮಗಳಿಂದ) ಕೈಬಿಟ್ಟರು.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?

    1. 2 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    3). ಪಟ್ಟಿ-I (ಬೌದ್ಧರ ಪವಿತ್ರ ಸ್ಥಳಗಳು) ಅನ್ನು ಪಟ್ಟಿ-II (ಸಂಬಂಧಿತ ಘಟನೆ) ಮತ್ತು ಪಟ್ಟಿ-III (ಸ್ಥಳ) ನೊಂದಿಗೆ ಹೊಂದಿಸಿರಿ:

    ಪಟ್ಟಿ-I

    ಪಟ್ಟಿ-II

    ಪಟ್ಟಿ-III

    a. ಲುಂಬಿನಿ

    1. ಮಹಾಪರಿನಿರ್ವಾಣ

    i. ಬಿಹಾರ

    b. ಬೋಧ್ ಗಯಾ

    2. ಬುದ್ಧನ ಜನನ

    ii. ನೇಪಾಳ

    c. ಸಾರನಾಥ್

    3. ಜ್ಞಾನೋದಯ

    iii. ಉತ್ತರ ಪ್ರದೇಶ

    d. ಖುಷಿನಗರ

    4. ಮೊದಲ ಪ್ರವಚನ

    iv. ಉತ್ತರ ಪ್ರದೇಶ

    ಸರಿಯಾದ ಹೊಂದಾಣಿಕೆಯನ್ನು ಆಯ್ಕೆಮಾಡಿ:

    1. a – 2 – ii, b – 3 – i, c – 4 – iii, d – 1 – iv
    2. a – 1 – ii, b – 2 – i, c – 4 – iii, d – 1 – iv
    3. a – 4 – i, b – 3 – ii, c – 2 – iii, d – 1 – iv
    4. a – 3 – ii, b – 2 – i, c – 4 – iii, d – 1 – iv

    ಉತ್ತರ: A

     

    4). ಪ್ರತಿಪಾದನೆ (A): ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆಯನ್ನು (CCUS) ಒಂದು ಪ್ರಮುಖ ಪರಿವರ್ತನಾ ತಂತ್ರಜ್ಞಾನವೆಂದು ಪರಿಗಣಿಸಲಾಗಿದೆ.

    ಕಾರಣ (R): ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯು ವಾತಾವರಣಕ್ಕೆ ಪ್ರವೇಶಿಸುವುದನ್ನು ತಡೆಯುವ ಮೂಲಕ, ಹೊರಸೂಸುವಿಕೆಯನ್ನು ತಗ್ಗಿಸಲು ಕಷ್ಟಕರವಾದ ಕೈಗಾರಿಕಾ ವಲಯಗಳ ನಿರಂತರ ಕಾರ್ಯಾಚರಣೆಗೆ CCUS ಅನುವು ಮಾಡಿಕೊಡುತ್ತದೆ.

    ಸರಿಯಾದ ಉತ್ತರವನ್ನು ಆರಿಸಿ:

    1. A ಮತ್ತು R ಎರಡೂ ಸರಿ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ. 
    2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ. 
    3. A ಸರಿ, ಆದರೆ R ತಪ್ಪು
    4. A ತಪ್ಪು, ಆದರೆ R ಸರಿ

    ಉತ್ತರ: A

     

    5). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ತೈಪೂಸಂ ಹಬ್ಬವನ್ನು ಪ್ರಧಾನವಾಗಿ ತಮಿಳು ಮಾತನಾಡುವ ಸಮುದಾಯಗಳು ಆಚರಿಸುತ್ತವೆ.
    2. ದೊಡ್ಡ ಸಂಖ್ಯೆಯ ತಮಿಳು ವಲಸೆಗಾರರನ್ನು ಹೊಂದಿರುವ ದೇಶಗಳಲ್ಲಿ ಇದು ಗಮನಾರ್ಹವಾದ ಸಾರ್ವಜನಿಕ ಆಚರಣೆಯನ್ನು ಹೊಂದಿದೆ.
    3. ಈ ಹಬ್ಬವನ್ನು ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಅಧಿಕೃತವಾಗಿ ಸಾರ್ವಜನಿಕ ರಜಾದಿನವೆಂದು ಗುರುತಿಸಲಾಗಿದೆ.
    4. ಭಾರತದಲ್ಲಿ, ತೈಪೂಸಂ ಆಚರಣೆಗಳು ತಮಿಳುನಾಡಿಗೆ ಮಾತ್ರ ಸೀಮಿತವಾಗಿವೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 1, 2 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    6). ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (DAY-NRLM)ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ಅಭಿಯಾನವು ಕೇವಲ ಸ್ವಯಂ ಉದ್ಯೋಗದ ಮೇಲೆ ಪ್ರತ್ಯೇಕವಾಗಿ ಗಮನ ಹರಿಸುತ್ತದೆ ಮತ್ತು ಕೂಲಿ ಉದ್ಯೋಗವನ್ನು ಒಳಗೊಂಡಿರುವುದಿಲ್ಲ.
    2. ಇದು ಗ್ರಾಮೀಣ ಬಡ ಕುಟುಂಬಗಳನ್ನು ಸ್ವಯಂ-ನಿರ್ವಹಣಾ ಸಂಸ್ಥೆಗಳಾಗಿ ಸಂಘಟಿಸಲು ಪ್ರಯತ್ನಿಸುತ್ತದೆ.
    3. ಹಣಕಾಸು ಸೇರ್ಪಡೆಯು ಈ ಅಭಿಯಾನದ ಪ್ರಮುಖ ಘಟಕವಾಗಿದೆ.
    4. ಈ ಅಭಿಯಾನವು ಗ್ರಾಮೀಣ ಕುಟುಂಬಗಳಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒತ್ತಿಹೇಳುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿಲ್ಲ?

    1. 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 1 ಮತ್ತು 4 ಮಾತ್ರ
    4. 1 ಮತ್ತು 3 ಮಾತ್ರ

    ಉತ್ತರ: C

     

    7). ‘ದೆಹಲಿ ಘೋಷಣೆ’ಯನ್ನು ಯಾವ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಾಯಿತು?

    1. ಭಾರತ-ಜಿಸಿಸಿ (GCC) ಶೃಂಗಸಭೆ
    2. ಭಾರತ-ಆಫ್ರಿಕಾ ಒಕ್ಕೂಟ ಸಂವಾದ
    3. ಭಾರತ-ಅರಬ್ ವಿದೇಶಾಂಗ ಸಚಿವರ ಸಭೆ
    4. ಅಲಿಪ್ತ ಚಳುವಳಿ (NAM)ಯ ಮಂತ್ರಿಮಂಡಳದ ಸಮ್ಮೇಳನ

    ಉತ್ತರ: C

     

    8). ‘ಜ್ಞಾನ್ ಭಾರತಂ’ ಅಭಿಯಾನದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ಅಭಿಯಾನವು ಭಾರತದಾದ್ಯಂತ ಇರುವ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ.
    2. ಇದು ಪ್ರಾಥಮಿಕವಾಗಿ ಧಾರ್ಮಿಕ ಸಂಸ್ಥೆಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ಹಸ್ತಪ್ರತಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ.
    3. ಈ ಅಭಿಯಾನವು ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.
    4. ಹಸ್ತಪ್ರತಿಗಳಿಗೆ ಡಿಜಿಟಲ್ ಪ್ರವೇಶವನ್ನು ಒದಗಿಸುವುದು ಈ ಅಭಿಯಾನದ ಪ್ರಮುಖ ಫಲಿತಾಂಶವಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    9). “ಭಾರತ್-ವಿಸ್ತಾರ್” (Bharat-VISTAAR) ನ ವಿಸ್ತೃತ ರೂಪವೇನು?

    1. ಕೃಷಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸುಸ್ಥಿರ ತಂತ್ರಜ್ಞಾನಕ್ಕಾಗಿರುವ ವಾಸ್ತವೋಪಮ (ವರ್ಚುವಲ್) ಸಂಪರ್ಕಸಾಧನ.
    2. ಕೃಷಿ ಸಂಪನ್ಮೂಲಗಳ ಸುಲಭ ಲಭ್ಯತೆಗಾಗಿ ರೂಪಿಸಲಾದ ಸಂಯೋಜಿತ ವಾಸ್ತವೋಪಮ (ವರ್ಚುವಲ್) ವ್ಯವಸ್ಥೆ.
    3. ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗಾಗಿರುವ ಮೌಲ್ಯಾಧಾರಿತ ಸಂಯೋಜಿತ ವ್ಯವಸ್ಥೆ.
    4. ತಂತ್ರಜ್ಞಾನ ಮತ್ತು ಕೃಷಿ ಸುಧಾರಣೆಗಳಿಗಾಗಿರುವ ವಾಸ್ತವೋಪಮ (ವರ್ಚುವಲ್) ಮೂಲಸೌಕರ್ಯ ಯೋಜನೆ.

    ಉತ್ತರ: B

     

    10). ಗೋಬರ್‌ಧನ್ (GOBARdhan) ಯೋಜನೆಯು ಕೆಳಗಿನ ಯಾವ ಸಮಗ್ರವಾದ ನೀತಿ ಉದ್ದೇಶಗಳೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಕೆಯಾಗುತ್ತದೆ?

    1. ಆವರ್ತಕ ಆರ್ಥಿಕತೆ 
    2. ಗ್ರಾಮೀಣ ಜೀವನೋಪಾಯದ ವೈವಿಧ್ಯೀಕರಣ
    3. ಹವಾಮಾನ ಬದಲಾವಣೆಯ ತಗ್ಗಿಸುವಿಕೆ
    4. ರಫ್ತು ಆಧಾರಿತ ಕೃಷಿ ಬೆಳವಣಿಗೆ

    ಈ ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 2 ಮಾತ್ರ
    2. 1, 2, 3 ಮತ್ತು 4
    3. 2, 3 ಮತ್ತು 4 ಮಾತ್ರ
    4. 1, 2, ಮತ್ತು 3 ಮಾತ್ರ

    ಉತ್ತರ: D

     

    11). ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)ಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಲೋಕಸಭಾ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    2. ರಾಜ್ಯಸಭಾ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    3. ನಾಮನಿರ್ದೇಶಿತ ಸಂಸದರು ಭಾರತದಾದ್ಯಂತ ಎಲ್ಲಿ ಬೇಕಾದರೂ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
    4. ಸಂಸದರು ತಮ್ಮ ಸಾಮಾನ್ಯ ಅಧಿಕಾರ ವ್ಯಾಪ್ತಿಯ ಹೊರಗೆ ಕಾಮಗಾರಿಗಳನ್ನು ಶಿಫಾರಸು ಮಾಡಲು ಸೀಮಿತ ವಿವೇಚನಾ ಅವಕಾಶವನ್ನು ಹೊಂದಿದ್ದಾರೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: B

     

    12). ಘನತ್ಯಾಜ್ಯ ನಿರ್ವಹಣಾ (SWM) ನಿಯಮಗಳು, 2026 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ನಿಯಮಗಳನ್ನು ಪರಿಸರ (ಸಂರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ.
    2. ನಿಯಮಾವಳಿಗಳ ಅಡಿಯಲ್ಲಿ ಪರಿಸರ ಪರಿಹಾರವನ್ನು ವಿಧಿಸುವಿಕೆಯು “ಮಾಲಿನ್ಯಕಾರಕನೇ ಪಾವತಿಸಬೇಕು” ಎಂಬ ತತ್ವವನ್ನು ಆಧರಿಸಿದೆ.
    3. ನಿಯಮಗಳ ಉಲ್ಲಂಘನೆಗಾಗಿ ಪರಿಸರ ಪರಿಹಾರವನ್ನು ವಿಧಿಸುವ ಜವಾಬ್ದಾರಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಂದಿದೆ.
    4. ಈ ನಿಯಮಗಳು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1, 3 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    13). ನ್ಯೂ ಸ್ಟಾರ್ಟ್ (New START – ಕಾರ್ಯತಂತ್ರದ ಶಸ್ತ್ರಾಸ್ತ್ರ ಕಡಿತ) ಒಪ್ಪಂದಕ್ಕೆ ಯಾವ ಎರಡು ದೇಶಗಳ ನಡುವೆ ಸಹಿ ಹಾಕಲಾಯಿತು?

    1. ಅಮೆರಿಕಾ (USA) ಮತ್ತು ಚೀನಾ
    2. ರಷ್ಯಾ ಮತ್ತು ಚೀನಾ
    3. ಅಮೆರಿಕಾ (USA) ಮತ್ತು ರಷ್ಯಾ
    4. ರಷ್ಯಾ ಮತ್ತು ಉಕ್ರೇನ್

    ಉತ್ತರ: C

     

    14). ಪಿಎಂ ವಿಕಾಸ್ (PM VIKAS) ಯೋಜನೆಯ ಪ್ರಾಥಮಿಕ ಉದ್ದೇಶವೇನು?

    1. ಎಲ್ಲಾ ಅಲ್ಪಸಂಖ್ಯಾತರಿಗೆ ಸಾರ್ವತ್ರಿಕ ವಿದ್ಯಾರ್ಥಿವೇತನವನ್ನು ಒದಗಿಸುವುದು.
    2. ಅಲ್ಪಸಂಖ್ಯಾತರು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು.
    3. ಅಲ್ಪಸಂಖ್ಯಾತ ಸಮುದಾಯಗಳ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಶಿಕ್ಷಣವನ್ನು ಬೆಂಬಲಿಸುವುದು.
    4. ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಖಚಿತಪಡಿಸುವುದು.

    ಉತ್ತರ: C

     

    15). ಘನ ಇಂಧನ ನಾಳೀಯ ರಾಮ್‌ಜೆಟ್ (SFDR) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ವಾತಾವರಣದ ಆಮ್ಲಜನಕವನ್ನು ಬಳಸಿಕೊಳ್ಳುವ ವಾಯು-ಗ್ರಾಹಕ ಚಾಲನಾ ವ್ಯವಸ್ಥೆಯಾಗಿದೆ.
    2. ಇದು ಹಾರಾಟದ ಆರಂಭಿಕ ಹಂತದಲ್ಲಿ ವೇಗವನ್ನು ಹೆಚ್ಚಿಸಲು ನಳಿಕೆ ರಹಿತ ಘನ ವೇಗವರ್ಧಕವನ್ನು ಬಳಸುತ್ತದೆ.
    3. ಈ ತಂತ್ರಜ್ಞಾನವು ಕ್ಷಿಪಣಿಯ “ನೋ-ಎಸ್ಕೇಪ್ ಜೋನ್” (ತಪ್ಪಿಸಿಕೊಳ್ಳಲು ಅವಕಾಶವಿಲ್ಲದ ವಲಯ) ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
    4. ಭಾರತವು ಈ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ 
    2. 2, 3 ಮತ್ತು 4 ಮಾತ್ರ 
    3. 1, 3 ಮತ್ತು 4 ಮಾತ್ರ 
    4. ಮೇಲಿನ ಎಲ್ಲವೂ 

    ಉತ್ತರ: D

     

    16). ಕೃಷಿ ಮೂಲಸೌಕರ್ಯ ನಿಧಿಯು (AIF) ಕೆಳಗಿನ ಯಾವ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸುತ್ತದೆ?

    1. ಆಧುನಿಕ ಶೇಖರಣೆ ಮತ್ತು ಉಗ್ರಾಣ ಸೌಲಭ್ಯಗಳ ನಿರ್ಮಾಣ.
    2. ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳ ಅಭಿವೃದ್ಧಿ.
    3. ಬೃಹತ್ ಪ್ರಮಾಣದ ನೀರಾವರಿ ಅಣೆಕಟ್ಟುಗಳ ನಿರ್ಮಾಣ.
    4. ಕೃಷಿ-ಕ್ಷೇತ್ರದ ಮೂಲಸ್ಥಳ ಮಟ್ಟದ ಮೂಲಸೌಕರ್ಯಗಳನ್ನು ಬಲಪಡಿಸುವುದು.

    ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1, 2, 3 ಮತ್ತು 4
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, ಮತ್ತು 4 ಮಾತ್ರ

    ಉತ್ತರ: D

     

    17). ಪ್ರತಿಪಾದನೆ (A): ನಮಸ್ತೆ (NAMASTE) ಯೋಜನೆಯು ಹಸ್ತಚಾಲಿತ ಮಲ ಹೊರುವವರ ಪುನರ್ವಸತಿಯನ್ನು ಬೆಂಬಲಿಸುತ್ತದೆ.

    ಕಾರಣ (R): ಈ ಯೋಜನೆಯು ನೈರ್ಮಲ್ಯ ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ, ಸುರಕ್ಷತಾ ತರಬೇತಿ ಮತ್ತು ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುತ್ತದೆ.

    ಸರಿಯಾದ ಉತ್ತರವನ್ನು ಆರಿಸಿ:

    1. A ಮತ್ತು R ಎರಡೂ ಸರಿ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ
    2. A ಮತ್ತು R ಎರಡೂ ಸರಿ ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
    3. A ಸರಿ ಆದರೆ R ತಪ್ಪು
    4. A ತಪ್ಪು ಆದರೆ R ಸರಿ

    ಉತ್ತರ: A

     

    18). ಉರ್ಮಿಯಾ ಸರೋವರದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಇರಾನ್‌ನಲ್ಲಿದೆ ಮತ್ತು ಝಾಗ್ರೋಸ್ ಪರ್ವತ ವ್ಯವಸ್ಥೆಗೆ ಸಂಬಂಧಿಸಿದ ಭೂ ರಚನಾ (ಟೆಕ್ಟೋನಿಕ್) ತಗ್ಗು ಪ್ರದೇಶದಲ್ಲಿದೆ.
    2. ಇದು ಸಮುದ್ರಕ್ಕೆ ನೈಸರ್ಗಿಕ ನಿರ್ಗಮನವಿಲ್ಲದ  (ಹೊರಹರಿವು ಇಲ್ಲದ) ಆವೃತ ಜಲಾನಯನ ಸರೋವರವಾಗಿದೆ.
    3. ಅಧಿಕ ಮಳೆಯ ಅವಧಿಯಲ್ಲಿ ಇದು ಕ್ಯಾಸ್ಪಿಯನ್ ಸಮುದ್ರಕ್ಕೆ ಹರಿಯುತ್ತದೆ.
    4. ಇದನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್ಸರ್ ಜೌಗು ಪ್ರದೇಶವೆಂದು ಅಧಿಸೂಚಿಸಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 3 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    19). “ರಫಾ ಗಡಿ” ಕ್ರಾಸಿಂಗ್ (ಸಂಚಾರ ಪಥ) ಕೆಳಗಿನ ಯಾವ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ?

    1. ಗಾಜಾ ಪಟ್ಟಿ ಮತ್ತು ಇಸ್ರೇಲ್
    2. ವೆಸ್ಟ್ ಬ್ಯಾಂಕ್ ಮತ್ತು ಜೋರ್ಡಾನ್
    3. ಗಾಜಾ ಪಟ್ಟಿ ಮತ್ತು ಈಜಿಪ್ಟ್
    4. ಇಸ್ರೇಲ್ ಮತ್ತು ಲೆಬನಾನ್

    ಉತ್ತರ: C

     

    20). ಈ ಕೆಳಗಿನ ಪಠ್ಯವನ್ನು ಪರಿಗಣಿಸಿ:

    ಇದು 1.5 ಮೀಟರ್‌ಗಿಂತಲೂ ಎತ್ತರವಿರುವ ದೊಡ್ಡ ಪಕ್ಷಿ ಪ್ರಭೇದವೊಂದನ್ನು ಇತ್ತೀಚಿಗೆ ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗಿನ ಕೃಷಿ ಭೂದೃಶ್ಯಗಳು ಮತ್ತು ಆಳವಿಲ್ಲದ ಜೌಗು ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಇದು ಬಲವಾದ ಸಾಮಾಜಿಕ ಬಾಂಧವ್ಯ, ಜೀವಮಾನವಿಡೀ ಏಕಪತ್ನಿತ್ವದ ಜೋಡಿಗಳು ಮತ್ತು ಮಾನ್ಸೂನ್ ಋತುವಿನೊಂದಿಗೆ ನಿಕಟವಾಗಿ ಹೊಂದಿಕೆಯಾಗುವ ಸಂತಾನೋತ್ಪತ್ತಿ ಚಕ್ರಕ್ಕೆ ಹೆಸರುವಾಸಿಯಾಗಿದೆ. ಈ ಪ್ರಭೇದವು ಕೀಟಗಳು, ಮೀನುಗಳು, ಬೇರುಗಳು ಮತ್ತು ಸಸ್ಯಜನ್ಯ ವಸ್ತುಗಳನ್ನು ತಿನ್ನುತ್ತದೆ; ಹಾಗೂ ಕೃಷಿಭೂಮಿಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಂದು ಕಾಲದಲ್ಲಿ ಉತ್ತರ ಮತ್ತು ಮಧ್ಯ ಭಾರತದ ಹಲವಾರು ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದ್ದರೂ, ಇತ್ತೀಚಿನ ವೀಕ್ಷಣೆಗಳು ಇದರ ಜನಸಂಖ್ಯೆಯು ಈಗ ಹೆಚ್ಚಾಗಿ ಒಂದು ನಿರ್ದಿಷ್ಟ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ತೋರಿಸುತ್ತವೆ. ಈ ಪ್ರಭೇದವನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ದುರ್ಬಲ’ (VU) ಎಂದು ಪಟ್ಟಿಮಾಡಲಾಗಿದೆ ಮತ್ತು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅನುಸೂಚಿ IV ರ ಅಡಿಯಲ್ಲಿ ರಕ್ಷಿಸಲಾಗಿದೆ.

    ಈ ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದವನ್ನು ಗುರುತಿಸಿ:

    1. ಡೆಮೊಸೆಲ್ ಕೊಕ್ಕರೆ
    2. ಸಾರಸ್ ಕೊಕ್ಕರೆ 
    3. ಸೈಬೀರಿಯನ್ ಕೊಕ್ಕರೆ 
    4. ಕಪ್ಪು-ಕುತ್ತಿಗೆಯ ಕೊಕ್ಕರೆ

    ಉತ್ತರ: B

     

    21). ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರವನ್ನು (FNTA) ಈ ಕೆಳಗಿನವರನ್ನು ಒಳಗೊಂಡ ಒಪ್ಪಂದದ ಮೂಲಕ ರಚಿಸಲಾಗಿದೆ:

    1. ಭಾರತ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ (ENPO)
    2. ಭಾರತ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ (ENPO)
    3. ನಾಗಾಲ್ಯಾಂಡ್ ಸರ್ಕಾರ ಮತ್ತು ನಾಗಾ ಬಂಡುಕೋರ ಗುಂಪುಗಳು
    4. ಭಾರತ ಸರ್ಕಾರ, ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ(ENPO) ಮತ್ತು ನೆರೆಯ ದೇಶಗಳು

    ಉತ್ತರ: B

     

    22). ಕೆಳಗಿನ ಯಾವ ಬಾಹ್ಯಾಕಾಶ ಸಂಸ್ಥೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಾರ್ಯಕ್ರಮದಲ್ಲಿ ಪಾಲುದಾರನಾಗಿಲ್ಲ?

    1. ನಾಸಾ (NASA)
    2. ರಾಸ್ಕೋಸ್ಮಾಸ್ (Roscosmos)
    3. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)
    4. ಇಸ್ರೋ (ISRO)

    ಉತ್ತರ: D

     

    23). ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (NDMA) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. NDMA ಪರಿಸರ (ರಕ್ಷಣೆ) ಕಾಯ್ದೆ, 1986 ರಿಂದ ತನ್ನ ಶಾಸನಬದ್ಧ ಅಧಿಕಾರವನ್ನು ಪಡೆದಿದೆ.
    2. ಭಾರತದ ಪ್ರಧಾನ ಮಂತ್ರಿಯವರು NDMA ಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
    3. NDMA ಯ ಮಾರ್ಗಸೂಚಿಗಳು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ (SDMAs) ಕಡ್ಡಾಯವಾಗಿವೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 2 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: C

     

    24). ನೆಕ್ಸ್‌ಕಾರ್19 (NexCAR19) ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಭಾರತದ ಹೊರಗೆ ಬಳಸಲು ಅಭಿವೃದ್ಧಿಪಡಿಸಲಾದ ಸಂಪೂರ್ಣ ಮ್ಯೂರಿನ್ (ಇಲಿ-ಮೂಲದ) CAR-T ಚಿಕಿತ್ಸೆಯಾಗಿದೆ.
    2. ಇದು ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಮಾನವಸದೃಶೀಕರಿಸಿದ CAR-T ಚಿಕಿತ್ಸೆಯನ್ನು ಪ್ರತಿನಿಧಿಸುತ್ತದೆ.
    3. CAR ರಚನೆಗಳ ಮಾನವಸದೃಶೀಕರಣವು ರೋಗಿಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    4. ಇದರ ಅಭಿವೃದ್ಧಿಯು ಸುಧಾರಿತ ರೋಗನಿರೋಧಕ ಚಿಕಿತ್ಸಾ ಪದ್ಧತಿಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    25). ಅಗ್ನಿ-ಪಿ (ಅಗ್ನಿ-ಪ್ರೈಮ್) ಕ್ಷಿಪಣಿಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಹಿಂದಿನ ಅಗ್ನಿ ರೂಪಾಂತರಗಳಿಗೆ ಹೋಲಿಸಿದರೆ ಹಗುರವಾದ ಮತ್ತು ಹೆಚ್ಚು ಸುಸಂಘಟಿತ ಕ್ಷಿಪಣಿಯಾಗಿದೆ.
    2. ಇದು ಹೆಚ್ಚಿನ ನಿಖರತೆಗಾಗಿ ಸುಧಾರಿತ ನೋದನ/ಪ್ರಚೋದನಾ ವ್ಯವಸ್ಥೆ (ಪ್ರೊಪಲ್ಷನ್) ಮತ್ತು ಪಥನಿರ್ದೇಶನ (ನ್ಯಾವಿಗೇಷನ್) ವ್ಯವಸ್ಥೆಗಳನ್ನು ಒಳಗೊಂಡಿದೆ.
    3. ಇದನ್ನು ಪ್ರತ್ಯೇಕವಾಗಿ ಸಾಂಪ್ರದಾಯಿಕ ಯುದ್ಧಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಪರಮಾಣು ಸಿಡಿತಲೆಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ.
    4. ಇದರ ವ್ಯಾಪ್ತಿಯು ಅಲ್ಪ-ಶ್ರೇಣಿಯ ಮತ್ತು ದೀರ್ಘ-ಶ್ರೇಣಿಯ ಅಗ್ನಿ ಕ್ಷಿಪಣಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 3 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    26). ಜಿಯೋ ಪಾರ್ಸಿ ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಜಾರಿಗೊಳಿಸಲಾದ ಕೇಂದ್ರ ವಲಯದ ಯೋಜನೆಯಾಗಿದೆ.
    2. ಈ ಯೋಜನೆಯು ಪಾರ್ಸಿಗಳಲ್ಲಿ ಹೆರಿಗೆಗಾಗಿ ಆರ್ಥಿಕ ಪ್ರೋತ್ಸಾಹದ ಮೇಲೆ ಪ್ರತ್ಯೇಕವಾಗಿ ಗಮನಹರಿಸುತ್ತದೆ.
    3. ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಈ ಯೋಜನೆಯ ಅಡಿಯಲ್ಲಿ ಒಂದು ಘಟಕವಾಗಿದೆ.
    4. ಈ ಯೋಜನೆಯನ್ನು 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಪ್ರಾರಂಭಿಸಲಾಯಿತು.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    27). ‘ರೂಬಲ್ ನಾಗಿ’ ಅವರು 2026 ರಲ್ಲಿ ಯಾವ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ?

    1. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ
    2. ಜಾಗತಿಕ ಶಿಕ್ಷಕ ಪ್ರಶಸ್ತಿ
    3. ಯುನೆಸ್ಕೋ ಶಾಂತಿ ಪ್ರಶಸ್ತಿ
    4. ಪದ್ಮಶ್ರೀ

    ಉತ್ತರ: B

     

    28). ಹಕ್ಕಿ-ಪಿಕ್ಕಿ ಬುಡಕಟ್ಟಿನ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇವರು ಸಾಂಪ್ರದಾಯಿಕವಾಗಿ ಪಕ್ಷಿ ಹಿಡಿಯುವವರು ಮತ್ತು ಬೇಟೆಗಾರರಾಗಿದ್ದಾರೆ.
    2. ಈ ಸಮಾಜವು ಮಾತೃಪ್ರಧಾನವಾಗಿದೆ, ಮತ್ತು ಹಿರಿಯ ಮಗನಿಗೆ ಕೂದಲು ಕತ್ತರಿಸಲು ಅನುಮತಿ ಇಲ್ಲ.
    3. ಅತ್ತೆ-ಮಾವನ ಮಕ್ಕಳೊಂದಿಗಿನ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಏಕಪತ್ನಿತ್ವವು ನಿಯಮವಾಗಿದೆ.
    4. ಈ ಬುಡಕಟ್ಟು ಮೂಲತಃ ಗುಜರಾತ್ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳಿಗೆ ಸೇರಿದೆ.
    5. ಕರ್ನಾಟಕದಲ್ಲಿ, ಇವರು ಕಟ್ಟುನಿಟ್ಟಾಗಿ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2, 3 ಮತ್ತು 4 ಮಾತ್ರ
    2. 1, 3, 4 ಮತ್ತು 5 ಮಾತ್ರ
    3. 2, 3, 4 ಮತ್ತು 5 ಮಾತ್ರ
    4. ಮೇಲಿನ ಎಲ್ಲವೂ

    ಉತ್ತರ: A

     

    29). ಗ್ರೇಟರ್ ಫ್ಲೆಮಿಂಗೊ (ರಾಜಹಂಸ) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಫ್ಲೆಮಿಂಗೊ ಕುಟುಂಬದ ಅತಿದೊಡ್ಡ ಪ್ರಭೇದವಾಗಿದೆ.
    2. ಇದರ ಸರಾಸರಿ ಎತ್ತರವು 110-150 ಸೆಂ.ಮೀ ವರೆಗೆ ಇರುತ್ತದೆ, ಮತ್ತು ತೂಕ 2-4 ಕೆಜಿ ಇರುತ್ತದೆ.
    3. ಇದರ ಐಯುಸಿಎನ್ (IUCN) ಕೆಂಪು ಪಟ್ಟಿ ಸ್ಥಾನಮಾನವು ‘ದುರ್ಬಲ’ (VU) ಆಗಿದೆ.
    4. ಇದು ಗುಜರಾತ್‌ನ ರಾಜ್ಯ ಪಕ್ಷಿಯಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 3 ಮಾತ್ರ
    2. 1, 2 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. ಮೇಲಿನ ಎಲ್ಲವೂ

    ಉತ್ತರ: B

     

    30). ಕುಡಗೋಲು ಕಣ ರೋಗ (SCD-ಸಿಕಲ್ ಸೆಲ್ ಡೀಸೆಸ್)ಯ ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. ಕೆಂಪು ರಕ್ತ ಕಣಗಳು ಕಠಿಣ ಮತ್ತು ಕುಡಗೋಲು ಆಕಾರವನ್ನು ಪಡೆಯುತ್ತವೆ, ಇದರಿಂದ ರಕ್ತದ ಹರಿವಿಗೆ ತಡೆಯುಂಟಾಗುತ್ತದೆ.
    2. ಇದು ಪ್ರಾಥಮಿಕವಾಗಿ ಸೊಳ್ಳೆಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದೆ.
    3. ಈ ರೋಗದ ಅತ್ಯಂತ ತೀವ್ರ ಸ್ವರೂಪವೆಂದರೆ ಸಿಕಲ್-ಸೆಲ್ ರಕ್ತಹೀನತೆ.
    4. SCD ರೋಗಿಗಳಲ್ಲಿನ ಹಿಮೋಗ್ಲೋಬಿನ್ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 3 ಮಾತ್ರ
    2. 1, 2 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. ಮೇಲಿನ ಎಲ್ಲವೂ

    ಉತ್ತರ: A

     

    31). ‘ಹರಿಮಾವು ಶಕ್ತಿ’ ಸಮರಾಭ್ಯಾಸವು ಪ್ರಾಥಮಿಕವಾಗಿ ಯಾವ ದೇಶಗಳ ನಡುವೆ ನಡೆಯುತ್ತದೆ?

    1. ಭಾರತ ಮತ್ತು ಇಂಡೋನೇಷ್ಯಾ
    2. ಭಾರತ ಮತ್ತು ಥೈಲ್ಯಾಂಡ್
    3. ಭಾರತ ಮತ್ತು ಮಲೇಷ್ಯಾ
    4. ಭಾರತ ಮತ್ತು ವಿಯೆಟ್ನಾಂ

    ಉತ್ತರ: C

     

    32). ಬಾಬ್ ಎಲ್-ಮಂಡೇಬ್ ಜಲಸಂಧಿಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಮೆಡಿಟರೇನಿಯನ್ ಸಮುದ್ರವನ್ನು ನೇರವಾಗಿ ಅರಬ್ಬೀ ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
    2. ಇದು ಪರ್ಷಿಯನ್ ಕೊಲ್ಲಿಯಿಂದ ಯುರೋಪ್‌ಗೆ ತೈಲ ಸಾಗಣೆಯ ಪ್ರಮುಖ ಆಯಕಟ್ಟಿನ ಜಲಮಾರ್ಗ ಆಗಿದೆ.
    3. ಇದು ಯೆಮೆನ್ ಮತ್ತು ಆಫ್ರಿಕಾದ ಕೊಂಬಿನ (ಹಾರ್ನ್ ಆಫ್ ಆಫ್ರಿಕಾ) ನಡುವೆ ನೆಲೆಗೊಂಡಿದೆ.
    4. ಇದು ಸಂಪೂರ್ಣವಾಗಿ ಸೌದಿ ಅರೇಬಿಯಾ ಮತ್ತು ಎರಿಟ್ರಿಯಾ ದೇಶಗಳ ನಿಯಂತ್ರಣದಲ್ಲಿದೆ.

    ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 4 ಮಾತ್ರ
    2. 2 ಮತ್ತು 3 ಮಾತ್ರ
    3. 1, 2 ಮತ್ತು 3 ಮಾತ್ರ
    4. 2, 3 ಮತ್ತು 4 ಮಾತ್ರ

    ಉತ್ತರ: B

     

    33). ಪಿಎಂ ಕೇರ್ಸ್ (PM CARES) ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ (PMNRF) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G ಅಡಿಯಲ್ಲಿ ಎರಡೂ ನಿಧಿಗಳು 100% ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
    2. ಎರಡೂ ನಿಧಿಗಳು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತವೆ.
    3. ಎರಡೂ ನಿಧಿಗಳು ಮಾಹಿತಿ ಹಕ್ಕು (RTI) ಕಾಯ್ದೆ, 2005 ರ ವ್ಯಾಪ್ತಿಗೆ ಒಳಪಡುತ್ತವೆ.
    4. ಎರಡೂ ನಿಧಿಗಳನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪಾಲರು (CAG) ಲೆಕ್ಕಪರಿಶೋಧನೆ ಮಾಡುವುದಿಲ್ಲ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 1, 2 ಮತ್ತು 4 ಮಾತ್ರ
    3. 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    34). ಈ ಕೆಳಗಿನ ಪಠ್ಯವನ್ನು ಪರಿಗಣಿಸಿ:

    ಇದನ್ನು ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ದೊಡ್ಡ ವಿಷರಹಿತ ಹಾವಿನ ಪ್ರಭೇದವೊಂದನ್ನು ವಿಶ್ವದ ಅತಿ ಉದ್ದದ ಹಾವಿನ ಪ್ರಭೇದವೆಂದು ಗುರುತಿಸಲಾಗಿದೆ. ಇದು ಅತ್ಯಂತ ಭಾರವಾದ ಹಾವಲ್ಲದಿದ್ದರೂ, ಹಸಿರು ಅನಾಕೊಂಡ ಮತ್ತು ಬರ್ಮೀಸ್ ಹೆಬ್ಬಾವಿನ ನಂತರ ಜಾಗತಿಕವಾಗಿ ಮೂರನೇ ಅತಿ ಭಾರದ ಹಾವಿನ ಪ್ರಭೇದಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ತನ್ನ ಹುರುಪೆಗಳ (ಪೊರೆಗಳ) ಮೇಲೆ ವಿಶಿಷ್ಟವಾದ ಬಲೆಯಂತಹ ಮಾದರಿಗಳನ್ನು ಹೊಂದಿದೆ ಮತ್ತು ತನ್ನ ಬೇಟೆಯನ್ನು ಬಿಗಿಯಾಗಿ ಸುತ್ತಿಕೊಳ್ಳುವ ಮೂಲಕ, ಉಸಿರುಗಟ್ಟಿಸಿ ನಂತರ ಇಡಿಯಾಗಿ ನುಂಗುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಇದು ಮನುಷ್ಯರನ್ನು ಬೇಟೆಯಾಡಿದ ವರದಿಗಳೂ ಇವೆ.

    ಈ ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?

    1. ಹಸಿರು ಅನಾಕೊಂಡ
    2. ಬರ್ಮೀಸ್ ಹೆಬ್ಬಾವು 
    3. ಜಾಲಾಕಾರದ ಹೆಬ್ಬಾವು (ರೆಟಿಕ್ಯುಲೇಟೆಡ್ ಪೈಥಾನ್)

    D.ಭಾರತೀಯ ಹೆಬ್ಬಾವು (ಇಂಡಿಯನ್ ರಾಕ್ ಪೈಥಾನ್) 

    ಉತ್ತರ: C

     

    35). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

    ಹಬ್ಬ / ಉತ್ಸವ

    ರಾಜ್ಯ 

    1. ಬಸ್ತಾರ್ ಪಾಂಡುಮ್ 

    ಛತ್ತೀಸ್‌ಗಢ

    1. ಹಾರ್ನ್‌ಬಿಲ್ ಹಬ್ಬ 

    ನಾಗಾಲ್ಯಾಂಡ್

    1. ಭಗೋರಿಯಾ ಹಬ್ಬ

    ಮಹಾರಾಷ್ಟ್ರ

    1. ವಂಗಾಲ ಹಬ್ಬ 

    ಮೇಘಾಲಯ

    ಮೇಲೆ ನೀಡಿರುವ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಾಣಿಕೆಯಾಗಿದೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    36). ಭಾರತದಲ್ಲಿ ಜೀತಪದ್ಧತಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಜೀತಪದ್ಧತಿಯು ಬಲವಂತದ ದುಡಿಮೆಯ ಮೂಲಕ ಸಾಲ ಮರುಪಾವತಿ ಮಾಡುವುದನ್ನು ಒಳಗೊಂಡಿರುತ್ತದೆ.
    2. ಈ ಪದ್ಧತಿಯು ಐತಿಹಾಸಿಕವಾಗಿ ಜಾತಿ ಶ್ರೇಣಿ ವ್ಯವಸ್ಥೆಗಳು ಮತ್ತು ಭೂರಹಿತತೆಗೆ ಬೆಸೆದುಕೊಂಡಿದೆ.
    3. ಆರ್ಥಿಕ ಅನಿವಾರ್ಯತೆಯ ಸಂದರ್ಭಗಳಲ್ಲಿ ಜೀತಪದ್ಧತಿಗೆ ಸಂವಿಧಾನವು ಸ್ಪಷ್ಟವಾಗಿ ಅನುಮತಿ ನೀಡುತ್ತದೆ.
    4. ಸಂವಿಧಾನದ 23ನೇ ವಿಧಿಯು ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: C

     

    37). ಪಶ್ಚಿಮ ಹಿಂದೂ ಮಹಾಸಾಗರದಲ್ಲಿರುವ ಈ ಕೆಳಗಿನ ದ್ವೀಪ ರಾಷ್ಟ್ರಗಳನ್ನು ಪಶ್ಚಿಮದಿಂದ ಪೂರ್ವಕ್ಕೆ ಜೋಡಿಸಿ:

    1. ಕೊಮೊರೊಸ್
    2. ಸೀಶೆಲ್ಸ್
    3. ಮಾರಿಷಸ್
    4. ಮಾಲ್ಡೀವ್ಸ್

    ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 – 2 – 3 – 4
    2. 2 – 1 – 3 – 4
    3. 1 – 3 – 2 – 4
    4. 2 – 3 – 1 – 4

    ಉತ್ತರ: A

     

    38). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಚಹಾ ಬೇಸಾಯಕ್ಕೆ 150-200 ಸೆಂ.ಮೀ ವಾರ್ಷಿಕ ಮಳೆ ಮತ್ತು 15°C ನಿಂದ 23°C ನಡುವಿನ ಸರಾಸರಿ ವಾರ್ಷಿಕ ತಾಪಮಾನದ ಅಗತ್ಯವಿದೆ.
    2. ಜೈವಿಕಾಂಶ (ಹ್ಯೂಮಸ್) ಸಮೃದ್ಧವಾಗಿರುವ ಆಳವಾದ, ನೀರು ಸರಾಗವಾಗಿ ಹರಿದುಹೋಗುವ ಮಣ್ಣು ಮತ್ತು ಎಲೆಗಳ ಪಕ್ವತೆಗಾಗಿ ದೀರ್ಘವಾದ ಶುಷ್ಕ ಋತುವಿನ ಅಗತ್ಯವಿದೆ.
    3. ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ಮತ್ತು ಕಪ್ಪು ಚಹಾದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.
    4. ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಹಾ ರಫ್ತುದಾರ ರಾಷ್ಟ್ರವಾಗಿದೆ ಮತ್ತು ಭಾರತದ ಒಟ್ಟು ಚಹಾ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಅಸ್ಸಾಂ ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿಲ್ಲ?

    1. 1 ಮತ್ತು 2 ಮಾತ್ರ
    2. 2 ಮತ್ತು 4 ಮಾತ್ರ
    3. 3 ಮತ್ತು 4 ಮಾತ್ರ
    4. 2, 3 ಮತ್ತು 4

    ಉತ್ತರ: B

     

    39). ನೆಟ್‌ವರ್ಕ್ ಸಿದ್ಧತಾ ಸೂಚ್ಯಂಕ (NRI) 2025 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಭಾರತವು 100 ಕ್ಕೆ 54.43 ಅಂಕಗಳೊಂದಿಗೆ 45ನೇ ಸ್ಥಾನವನ್ನು ಪಡೆದುಕೊಂಡಿದೆ.
    2. ಈ ವರದಿಯು ಪ್ರಪಂಚದಾದ್ಯಂತದ 150 ಆರ್ಥಿಕತೆಗಳನ್ನು ಮೌಲ್ಯಮಾಪನ ಮಾಡುತ್ತದೆ.
    3. ಈ ಸೂಚ್ಯಂಕವು ತಂತ್ರಜ್ಞಾನ, ಜನಸಾಮಾನ್ಯರು, ಆಡಳಿತ ಮತ್ತು ಪರಿಣಾಮ ಎಂಬ ನಾಲ್ಕು ಆಧಾರಸ್ತಂಭಗಳನ್ನು ಆಧರಿಸಿದೆ.
    4. ಈ ವರದಿಯನ್ನು ಪೋರ್ಟುಲನ್ಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    40). ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಬೆತ್ವಾ ನದಿಯಿಂದ ಹೆಚ್ಚುವರಿ ನೀರನ್ನು ಕೆನ್ ಜಲಾನಯನ ಪ್ರದೇಶಕ್ಕೆ ವರ್ಗಾಯಿಸುವ ಗುರಿಯನ್ನು ಇದು ಹೊಂದಿದೆ.
    2. ಕಾಂಕ್ರೀಟ್ ಕಾಲುವೆ ವ್ಯವಸ್ಥೆಯ ಮೂಲಕ ನೀರು ವರ್ಗಾವಣೆಯನ್ನು ಪ್ರಸ್ತಾಪಿಸಲಾಗಿದೆ.
    3. ಈ ಯೋಜನೆಯು ಪ್ರಾಥಮಿಕವಾಗಿ ಮರಾಠವಾಡ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿದೆ.
    4. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಇದರ ಫಲಾನುಭವಿ ರಾಜ್ಯಗಳಾಗಿವೆ. 

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    41). ಭಾರತದಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದ ಕೆಳಗಿನ ಕಾನೂನು ಉಪಕ್ರಮಗಳನ್ನು ಪರಿಗಣಿಸಿ:

    1. ಪರಿಸರ (ಸಂರಕ್ಷಣೆ) ಕಾಯ್ದೆ, 1986
    2. ಜೈವಿಕ ಸುರಕ್ಷತಾ ನಿಯಮಗಳು, 1989 
    3. ಸಾಮೂಹಿಕ ವಿನಾಶಕ ಶಸ್ತ್ರಾಸ್ತ್ರಗಳ ಕಾಯ್ದೆ, 2005
    4. ಪರಮಾಣು ಶಕ್ತಿ ಕಾಯ್ದೆ, 1962
    5. 2017ರ ಮರುಸಂಯೋಜಿತ ಡಿಎನ್‌ಎ ಮತ್ತು ಜೈವಿಕ-ನಿಯಂತ್ರಣ ಮಾರ್ಗಸೂಚಿಗಳು

    ಮೇಲಿನವುಗಳಲ್ಲಿ ಎಷ್ಟು ಕಾನೂನುಗಳು ಜೈವಿಕ ಶಸ್ತ್ರಾಸ್ತ್ರಗಳು ಅಥವಾ ಅಪಾಯಕಾರಿ ಸೂಕ್ಷ್ಮಾಣುಜೀವಿಗಳ ನಿಯಂತ್ರಣ ಅಥವಾ ನಿಷೇಧಕ್ಕೆ ನೇರವಾಗಿ ಸಂಬಂಧಿಸಿವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ನಾಲ್ಕು

    ಉತ್ತರ: D

     

    42). ‘ವಂದೇ ಮಾತರಂ’ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದರ ಮೊದಲ ಎರಡು ಚರಣಗಳನ್ನು 24 ಜನವರಿ 1950 ರಂದು ‘ಭಾರತದ ರಾಷ್ಟ್ರೀಯ ಹಾಡು’ ಎಂದು ಅಳವಡಿಸಿಕೊಳ್ಳಲಾಯಿತು.
    2. ಭಾರತದ ಸಂವಿಧಾನವು “ರಾಷ್ಟ್ರೀಯ ಹಾಡು” ಎಂಬ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.
    3. ಇದರ ಮಾನ್ಯತೆಯು ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಕಾರ್ಯಾಂಗದ ರೂಢಿಗಳಿಂದ ಬೆಳೆದುಬಂದಿದೆ.
    4. ಸಂವಿಧಾನದ 51A(a) ವಿಧಿಯ ಅಡಿಯಲ್ಲಿ ಇದನ್ನು ಸ್ಪಷ್ಟವಾಗಿ ಸಂರಕ್ಷಣೆ ಒದಗಿಸಲಾಗಿದೆ. 

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: B

     

    43). ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್’ ಸಂಸ್ಥೆಯು ಪ್ರಕಟಿಸುತ್ತದೆ ಮತ್ತು ಇದು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಅಳೆಯುತ್ತದೆ.
    2. ಭಾರತವು 100 ಕ್ಕೆ 39 ಅಂಕಗಳನ್ನು ಗಳಿಸಿ ಜಾಗತಿಕವಾಗಿ 91ನೇ ಸ್ಥಾನದಲ್ಲಿದೆ.
    3. ಇದು 180 ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿದೆ ಮತ್ತು 0 (ಅತ್ಯಂತ ಸ್ವಚ್ಛ) ದಿಂದ 100 (ಹೆಚ್ಚು ಭ್ರಷ್ಟ) ವರೆಗಿನ ಮಾಪಕವನ್ನು ಬಳಸುತ್ತದೆ.
    4. ಡೆನ್ಮಾರ್ಕ್ ಅತ್ಯುತ್ತಮ ಸಾಧನೆ ಮಾಡಿದ ದೇಶವಾಗಿದೆ ಮತ್ತು ಸೊಮಾಲಿಯಾ ಅತ್ಯಂತ ಕಳಪೆ ಸಾಧನೆ ಮಾಡಿದ ದೇಶಗಳಲ್ಲಿ ಒಂದಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 1, 3 ಮತ್ತು 4 ಮಾತ್ರ
    3. 1, 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    44). ಭಾರತದ ಮೊದಲ ಸಂಗೀತಮಯ ರಸ್ತೆಯನ್ನು ಎಲ್ಲಿ ನಿರ್ಮಿಸಲಾಗಿದೆ?

    1. ದೆಹಲಿ
    2. ಮುಂಬೈ
    3. ಬೆಂಗಳೂರು
    4. ಅಹಮದಾಬಾದ್

    ಉತ್ತರ: B

     

    45). ಶಾಂತಿ ಕಾಯ್ದೆ (SHANTI Act), 2025 ರ ಪ್ರಾಥಮಿಕ ಉದ್ದೇಶವೇನು?

    1. ಎಲ್ಲಾ ಖಾಸಗಿ ವಿದ್ಯುತ್ ಸ್ಥಾವರಗಳನ್ನು ರಾಷ್ಟ್ರೀಕರಣಗೊಳಿಸುವುದು.
    2. ನಾಗರಿಕ ಪರಮಾಣು ವಲಯವನ್ನು ಹೆಚ್ಚಿನ ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸುವುದು.
    3. ಪರಮಾಣು ಶಕ್ತಿಯಲ್ಲಿ ವಿದೇಶಿ ಹೂಡಿಕೆಯನ್ನು ನಿಷೇಧಿಸುವುದು.
    4. ನವೀಕರಿಸಬಹುದಾದ ಶಕ್ತಿಯನ್ನು ಪರಮಾಣು ಶಕ್ತಿಯೊಂದಿಗೆ ಬದಲಾಯಿಸುವುದು.

    ಉತ್ತರ: B

     

    46). ಮಹರ್ಷಿ ದಯಾನಂದ ಸರಸ್ವತಿ ಅವರ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ವೇದಗಳು ಜ್ಞಾನದ ಅಂತಿಮ ಮತ್ತು ದೋಷಾತೀತ ಅಧಿಕಾರವನ್ನು ಹೊಂದಿವೆ ಎಂದು ಅವರು ನಂಬಿದ್ದರು.
    2. ಅವರು ವಿಗ್ರಹಾರಾಧನೆ ಮತ್ತು ವಿಸ್ತಾರವಾದ ಆಚರಣೆಗಳನ್ನು ತಿರಸ್ಕರಿಸಿದರು.
    3. ಅವರು ಕಟ್ಟುನಿಟ್ಟಾಗಿ ಜನ್ಮವನ್ನು ಆಧರಿಸಿದ ಆನುವಂಶಿಕ ಜಾತಿ ಶ್ರೇಣಿಯನ್ನು ಬೆಂಬಲಿಸಿದರು.
    4. ಅವರು ಮಹಿಳಾ ಶಿಕ್ಷಣ ಮತ್ತು ವಿಧವಾ ಪುನರ್ವಿವಾಹವನ್ನು ಪ್ರತಿಪಾದಿಸಿದರು.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: C

     

    47). ಕ್ಯಾಸನೂರು ಅರಣ್ಯ ಕಾಯಿಲೆಗೆ (KFD) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಉಣ್ಣೆಗಳಿಂದ ಹರಡುವ ರಕ್ತಸ್ರಾವಕಾರಕ ವೈರಾಣು ಜ್ವರವಾಗಿದೆ ಮತ್ತು ಇದು ಫ್ಲಾವಿವಿರಿಡೆ ಕುಟುಂಬದ ವೈರಸ್‌ನಿಂದ ಉಂಟಾಗುತ್ತದೆ.
    2. ಇದನ್ನು 1957ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು.
    3. ರೋಗ ಉಲ್ಬಣಗೊಂಡ ಅವಧಿಯಲ್ಲಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿರುವುದು ದೃಢಪಟ್ಟಿದೆ.
    4. ಈ ಕಾಯಿಲೆಯನ್ನು ಸಾಮಾನ್ಯವಾಗಿ ‘ಮಂಗನ ಕಾಯಿಲೆ’ ಎಂದು ಕರೆಯಲಾಗುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    48). ರಾಜಾಜಿ ರಾಷ್ಟ್ರೀಯ ಉದ್ಯಾನವನವು ಭಾರತದ ಯಾವ ರಾಜ್ಯದಲ್ಲಿದೆ?

    1. ಹಿಮಾಚಲ ಪ್ರದೇಶ
    2. ಉತ್ತರಾಖಂಡ
    3. ಉತ್ತರ ಪ್ರದೇಶ
    4. ಬಿಹಾರ

    ಉತ್ತರ: B

     

    49). ಈ ಕೆಳಗಿನವುಗಳಲ್ಲಿ ಯಾವುದು ಪಂಚಶೀಲ ತತ್ವವಲ್ಲ?

    1. ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
    2. ಶಾಂತಿಯುತ ಸಹಬಾಳ್ವೆ
    3. ಸಮಾನತೆ ಮತ್ತು ಪರಸ್ಪರ ಲಾಭ
    4. ಮುಂಜಾಗರೂಕತೆಯ ಸ್ವರಕ್ಷಣೆ 

    ಉತ್ತರ: D

     

    50). ಕ್ವಾಡ್ (Quad) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಕ್ವಾಡ್ ಎನ್ನುವುದು ಭಾರತ, ಅಮೆರಿಕಾ (USA), ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಅನೌಪಚಾರಿಕ ಕಾರ್ಯತಂತ್ರದ ಸಂವಾದವಾಗಿದೆ.
    2. ಇದು ನ್ಯಾಟೋ (NATO) ಮಾದರಿಯ ಸಾಮೂಹಿಕ ರಕ್ಷಣಾ ಷರತ್ತನ್ನು ಹೊಂದಿರುವ ಔಪಚಾರಿಕ ಮಿಲಿಟರಿ ಮೈತ್ರಿಯಾಗಿದೆ.
    3. ಒಂದು ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
    4. ಇದು ಸದಸ್ಯ ರಾಷ್ಟ್ರಗಳ ನಡುವೆ ನಿಯಮಿತವಾಗಿ ಶೃಂಗಸಭೆ-ಮಟ್ಟದ ಸಭೆಗಳನ್ನು ನಡೆಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 3 ಮತ್ತು 4 ಮಾತ್ರ
    2. 1 ಮತ್ತು 2 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    51). ‘ಸೇವಾ ತೀರ್ಥ’ಕ್ಕೆ  ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಪ್ರಧಾನ ಮಂತ್ರಿ ಕಾರ್ಯಾಲಯವನ್ನು (PMO) ಹೊಂದಿದೆ.
    2. ಇದು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ (NSCS) ಸ್ಥಳಾವಕಾಶ ಕಲ್ಪಿಸಿದೆ.
    3. ಇದು ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ.
    4. ನವದೆಹಲಿಯ ವಿವಿಧೆಡೆ ಚದುರಿಹೋಗಿದ್ದ ಪ್ರಮುಖ ಕಾರ್ಯಾಂಗ ಕಚೇರಿಗಳನ್ನು ಒಂದೇ ವ್ಯವಸ್ಥಿತ ಸಂಕೀರ್ಣದಲ್ಲಿ ಕ್ರೂಢೀಕರಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    52). ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಕಾಲಕ್ರಮೇಣ ಗ್ರಾಹಕರು ಸರಕು ಮತ್ತು ಸೇವೆಗಳ ಗುಚ್ಛಕ್ಕೆ (ಬುಟ್ಟಿಗೆ) ಪಾವತಿಸುವ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುತ್ತದೆ.
    2. ಇದನ್ನು ಚಿಲ್ಲರೆ ಹಣದುಬ್ಬರದ ಸೂಚಕವಾಗಿ ಬಳಸಲಾಗುತ್ತದೆ.
    3. ಗೃಹಬಳಕೆ ಅನುಭೋಗ ವೆಚ್ಚ ಸಮೀಕ್ಷೆ 2023-24 ನ್ನು ಬಳಸಿಕೊಂಡು ಇದರ ಆಧಾರ ವರ್ಷವನ್ನು 2012 ರಿಂದ 2024 ಕ್ಕೆ ಪರಿಷ್ಕರಿಸಲಾಗಿದೆ.
    4. CPI ದತ್ತಾಂಶಗಳನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯು (NSO) ಸಿದ್ಧಪಡಿಸಿ ಬಿಡುಗಡೆ ಮಾಡುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

    1. ಕೇವಲ ಎರಡು
    2. ಕೇವಲ ಮೂರು
    3. ಯಾವುದೂ ಸರಿಯಿಲ್ಲ
    4. ಎಲ್ಲವೂ ಸರಿಯಾಗಿವೆ

    ಉತ್ತರ: A

     

    53). ಲೀಡ್ ಬ್ಯಾಂಕ್ ಯೋಜನೆಗೆ (LBS) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ 1969 ರಲ್ಲಿ ಪರಿಚಯಿಸಿತು.
    2. ಇದು ಜಿಲ್ಲಾ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.
    3. ಈ ಯೋಜನೆಯಡಿ, ಪ್ರತಿಯೊಂದು ಜಿಲ್ಲೆಯನ್ನು ಒಂದು ನಿರ್ದಿಷ್ಟ ‘ಲೀಡ್ ಬ್ಯಾಂಕ್’ಗೆ ವಹಿಸಲಾಗುತ್ತದೆ.
    4. ಇದು RBI ನ ಹಸ್ತಕ್ಷೇಪವಿಲ್ಲದೆ ನೇರವಾಗಿ ಹಣಕಾಸು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: C

     

    54). ವೈಕೋಂ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ದೇವಸ್ಥಾನದ ಸಮೀಪವಿರುವ ಸಾರ್ವಜನಿಕ ರಸ್ತೆಗಳನ್ನು ಕೆಳಜಾತಿಯವರು ಬಳಸುವುದರ ಮೇಲಿನ ನಿರ್ಬಂಧಗಳನ್ನು ವಿರೋಧಿಸಿ ಇದನ್ನು ತಿರುವಾಂಕೂರು ಸಂಸ್ಥಾನದಲ್ಲಿ ಪ್ರಾರಂಭಿಸಲಾಯಿತು.
    2. ಎಲ್ಲಾ ಜಾತಿಯವರಿಗೂ ಸಂಪೂರ್ಣ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ತಕ್ಷಣದ ಬೇಡಿಕೆಯಾಗಿತ್ತು.
    3. ಮಹಾತ್ಮ ಗಾಂಧಿಯವರು ಪ್ರಾರಂಭದಿಂದಲೇ ಈ ಪ್ರತಿಭಟನೆಯ ನೇತೃತ್ವವನ್ನು ನೇರವಾಗಿ ವಹಿಸಿದ್ದರು.
    4. ಟಿ.ಕೆ. ಮಾಧವನ್ ಅವರು ಈ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. 

    ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?

    1. ಕೇವಲ ಒಂದು
    2. ಕೇವಲ ಎರಡು
    3. ಕೇವಲ ಮೂರು
    4. ಮೇಲಿನ ಎಲ್ಲವೂ (ನಾಲ್ಕೂ)

    ಉತ್ತರ: B

     

    55). ಭೂಸ್ವಾಧೀನ, ಪುನರ್ವಸತಿ ಮತ್ತು ಮರುವಸತಿ ಕಾಯ್ದೆ, 2013 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ಕಾಯ್ದೆಯು ಯಾವುದೇ ವಿನಾಯಿತಿಯಿಲ್ಲದೆ ಎಲ್ಲಾ ಸಂದರ್ಭಗಳಲ್ಲಿ ಸ್ವಾಧೀನಪಡಿಸಿಕೊಳ್ಳುವ ಮೊದಲು ಸಾಮಾಜಿಕ ಪರಿಣಾಮ ಮೌಲ್ಯಮಾಪನವನ್ನು (SIA) ಕಡ್ಡಾಯಗೊಳಿಸುತ್ತದೆ.
    2. ಇದು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ನೀರಾವರಿ ಒದಗಿಸಿದ ಬಹು-ಬೆಳೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿರ್ಬಂಧಿಸುತ್ತದೆ.
    3. ಇದು ಐದು ವರ್ಷಗಳ ನಂತರ ಬಳಕೆಯಾಗದ ಭೂಮಿಯನ್ನು ಹಿಂದಿರುಗಿಸಲು ಅವಕಾಶ ಒದಗಿಸುತ್ತದೆ.
    4. ಕುಂದುಕೊರತೆಗಳ ನಿವಾರಣೆಗಾಗಿ ಭೂಸ್ವಾಧೀನ, ಪುನರ್ವಸತಿ ಮತ್ತು ಮರುವಸತಿ ಪ್ರಾಧಿಕಾರವನ್ನು ಸ್ಥಾಪಿಸಲು ಇದು ಅವಕಾಶ ಕಲ್ಪಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 2, 3 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 1 ಮತ್ತು 4 ಮಾತ್ರ
    4. 2 ಮತ್ತು 4 ಮಾತ್ರ

    ಉತ್ತರ: A

     

    56). ಹಿರಾಕುಡ್ ಜೌಗು ಪ್ರದೇಶಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ಮಹಾನದಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿರಾಕುಡ್ ಜಲಾಶಯದ ಒಂದು ಭಾಗವಾಗಿದೆ.
    2. ಈ ಜಲಾಶಯವು ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಾಶಯಗಳಲ್ಲಿ ಒಂದಾಗಿದೆ.
    3. ಇದನ್ನು 2021 ರಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್ಸರ್ ತಾಣವಾಗಿ  ಅಧಿಸೂಚಿಸಲಾಗಿದೆ.
    4. ಇದು ಪೂರ್ವ ಏಷ್ಯನ್-ಆಸ್ಟ್ರೇಲಾಸಿಯನ್ ಪಕ್ಷಿಗಳ ವಲಸೆ ಪಥದ (ಫ್ಲೈವೇ) ವ್ಯಾಪ್ತಿಯುದ್ದಕ್ಕೂ ನೆಲೆಗೊಂಡಿದೆ. 

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    57). ಭಾರತದ ಯಾವ ರಾಜ್ಯವು ‘ಬ್ಯಾಸಿಲಸ್ ಸಬ್ಟಿಲಿಸ್’ ಅನ್ನು ತನ್ನ ಅಧಿಕೃತ ರಾಜ್ಯ ಸೂಕ್ಷ್ಮಾಣುಜೀವಿ ಎಂದು ಗೊತ್ತುಪಡಿಸಿದೆ?

    1. ತಮಿಳುನಾಡು
    2. ಕರ್ನಾಟಕ
    3. ಕೇರಳ
    4. ಮಹಾರಾಷ್ಟ್ರ

    ಉತ್ತರ: C

     

    58). ದೀರ್ಘ-ಶ್ರೇಣಿಯ ನೌಕಾ-ವಿರೋಧಿ ಹೈಪರ್‌ಸಾನಿಕ್ ಕ್ಷಿಪಣಿಗೆ (LR-AShM) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಭಾರತೀಯ ನೌಕಾಪಡೆಯ ಕರಾವಳಿ ರಕ್ಷಣೆ ಮತ್ತು ದಾಳಿಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೈಪರ್‌ಸಾನಿಕ್ ಗ್ಲೈಡ್ ಕ್ಷಿಪಣಿಯಾಗಿದೆ.
    2. ಇದು ಅರೆ-ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸುತ್ತದೆ ಮತ್ತು ಇದು ಎರಡು-ಹಂತದ ದ್ರವ-ನೋದಕ (ಪ್ರಚೋದನಾ)  ರಾಕೆಟ್ ಮೋಟಾರ್ ಅನ್ನು ಬಳಸುತ್ತದೆ.
    3. ಇದು ಸ್ಥಿರ ಮತ್ತು ಚಲಿಸುವ ಕಡಲ ಗುರಿಗಳೆರಡನ್ನೂ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: B

     

    59). ಸೌಮ್ಯನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ದೇವಾಲಯವನ್ನು ಚೋಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.
    2. ಇದು ಭಗವಾನ್ ವಿಷ್ಣುವಿನ ವಿಭಿನ್ನ ಭಂಗಿಗಳನ್ನು ಪ್ರತಿನಿಧಿಸುವ ಮೂರು-ಹಂತದ ಗರ್ಭಗುಡಿಯನ್ನು ಒಳಗೊಂಡಿದೆ.
    3. ನೆಲದ ಮಟ್ಟದಲ್ಲಿರುವ ಗರ್ಭಗುಡಿಯು ವಿಷ್ಣುವಿನ ಶಯನ ಭಂಗಿಯನ್ನು ಹೊಂದಿದೆ.
    4. ಈ ದೇವಾಲಯದ ಮೇಲ್ಭಾಗದಲ್ಲಿ ಅಷ್ಟಾಂಗ ವಿಮಾನ ಕಿರೀಟಪ್ರಾಯವಾಗಿ ನೆಲೆಸಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    60). ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಈ ಕೆಳಗಿನ ಘಟನೆಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ ಜೋಡಿಸಿ:

    1. ಫಾರ್ವರ್ಡ್ ಬ್ಲಾಕ್ ಸ್ಥಾಪನೆ
    2. ಹರಿಪುರ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ
    3. ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ (ಆಜಾದ್ ಹಿಂದ್ ಸರ್ಕಾರ) ರಚನೆ
    4. ಭಾರತೀಯ ನಾಗರಿಕ ಸೇವೆಗೆ (ICS) ರಾಜೀನಾಮೆ

    ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 4 – 1 – 2 – 3
    2. 2 – 4 – 1 – 3
    3. 4 – 2 – 1 – 3
    4. 2 – 1 – 4 – 3

    ಉತ್ತರ: C

     

    61). “ಪ್ರಕಾಶ್ ಗಂಗಾ”  ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದರ ಪ್ರಧಾನ ವಿಷಯವು (ಥೀಮ್) ಅಂತರ್-ಸಂಪರ್ಕಿತ ರಾಷ್ಟ್ರೀಯ ಜಾಲದಾದ್ಯಂತ ವಿದ್ಯುಚ್ಛಕ್ತಿಯ ತಡೆರಹಿತ ಮತ್ತು ನಿರಂತರ ಹರಿವನ್ನು ಸಂಕೇತಿಸುತ್ತದೆ.
    2. ಸಾರ್ವತ್ರಿಕ ವಿದ್ಯುತ್ ಲಭ್ಯತೆಯಿಂದ ಜಾಗತಿಕ ಶುದ್ಧ ಇಂಧನ ಕ್ಷೇತ್ರದ ಪ್ರಮುಖ ಪಾತ್ರಧಾರಿಯಾಗಿ ಭಾರತದ ಪರಿವರ್ತನೆಯನ್ನು ಇದು ಎತ್ತಿ ತೋರಿಸುತ್ತದೆ.
    3. ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಸ್ತಬ್ಧಚಿತ್ರವು ಕೇವಲ ಉಷ್ಣ ವಿದ್ಯುತ್ ವಿಸ್ತರಣೆಯ ಮೇಲೆ ಮಾತ್ರ ಪ್ರತ್ಯೇಕವಾಗಿ ಗಮನಹರಿಸುತ್ತದೆ.
    4. ವಿದ್ಯುತ್ ನಿರ್ವಹಣೆಯಲ್ಲಿನ ಡಿಜಿಟಲ್ ಮತ್ತು ಸ್ಮಾರ್ಟ್ ತಂತ್ರಜ್ಞಾನಗಳನ್ನು ಇದು ಪ್ರದರ್ಶಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    62). ‘ಎಎಸ್‌ಸಿ ಅರ್ಜುನ್’ (ASC ARJUN) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ನಿಯೋಜಿಸಲಾದ ಮಾನವರೂಪಿ (ಹ್ಯೂಮನಾಯ್ಡ್) ರೋಬೋಟ್ ಆಗಿದೆ.
    2. ಇದು ರೈಲ್ವೆ ರಕ್ಷಣಾ ಪಡೆಯ (RPF) ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತದೆ.
    3. ಇದನ್ನು ವಿದೇಶಿ ಸಹಯೋಗದೊಂದಿಗೆ ಆಮದು ಮಾಡಿಕೊಂಡ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ.
    4. ಇದು ಭದ್ರತೆ, ಕಣ್ಗಾವಲು ಮತ್ತು ಪ್ರಯಾಣಿಕರ ನೆರವಿಗೆ ಸಹಾಯ ಮಾಡುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2, 3 ಮತ್ತು 4
    2. 1 ಮತ್ತು 3 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 4 ಮಾತ್ರ

    ಉತ್ತರ: D

     

    63). ‘ವ್ಯೂಹಾತ್ಮಕ ಆಸ್ತಿ ಹಂಚಿಕೆ ಮತ್ತು ಅಪಾಯ ನಿರ್ವಹಣಾ ಆಡಳಿತ’ (SAARG) ಸಮಿತಿಯ ನೇತೃತ್ವವನ್ನು ಯಾರು ವಹಿಸುತ್ತಾರೆ?

    1. ಉರ್ಜಿತ್ ಪಟೇಲ್
    2. ನಾರಾಯಣ್ ರಾಮಚಂದ್ರನ್
    3. ಶಕ್ತಿಕಾಂತ ದಾಸ್
    4. ಎನ್. ಚಂದ್ರಶೇಖರನ್

    ಉತ್ತರ: B

     

    64). ಅಮೋನಿಯಂ ನೈಟ್ರೇಟ್ ಅನ್ನು “ಉಭಯ-ಬಳಕೆಯ” ವಸ್ತು ಎಂದು ಏಕೆ ಪರಿಗಣಿಸಲಾಗಿದೆ?

    1. ಇದನ್ನು ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳೆರಡರಲ್ಲೂ ಬಳಸಲಾಗುತ್ತದೆ
    2. ಇದನ್ನು ರಸಗೊಬ್ಬರಗಳು ಮತ್ತು ಸ್ಫೋಟಕಗಳೆರಡರಲ್ಲೂ ಬಳಸಲಾಗುತ್ತದೆ
    3. ಇದನ್ನು ಆಹಾರ ಸಂಸ್ಕರಣೆ ಮತ್ತು ಗಣಿಗಾರಿಕೆಯಲ್ಲಿ ಬಳಸಲಾಗುತ್ತದೆ
    4. ಇದನ್ನು ಜವಳಿ ಮತ್ತು ಔಷಧೀಯ ವಸ್ತುಗಳಲ್ಲಿ ಬಳಸಲಾಗುತ್ತದೆ

    ಉತ್ತರ: B

     

    65). ಕೆಳಗಿನವುಗಳಲ್ಲಿ ಯಾವುದು ‘ಜೀವನ್ ರಕ್ಷಾ ಪದಕ’ದ ವರ್ಗವನ್ನು ಅದರ ವಿವರಣೆಯೊಂದಿಗೆ ಸರಿಯಾಗಿ ಹೊಂದಿಸುತ್ತದೆ?

    1. ಸರ್ವೋತ್ತಮ ಜೀವ ರಕ್ಷಾ ಪದಕ – ರಕ್ಷಕನಿಗೆ ಅತ್ಯಂತ ದೊಡ್ಡ ಅಪಾಯವಿರುವ ಸಂದರ್ಭಗಳಲ್ಲಿ ಜೀವ ಉಳಿಸುವುದು.
    2. ಉತ್ತಮ ಜೀವ ರಕ್ಷಾ ಪದಕ – ದೊಡ್ಡ ಅಪಾಯದ ಸಂದರ್ಭಗಳಲ್ಲಿ ತೋರುವ ಧೈರ್ಯ ಮತ್ತು ತ್ವರಿತ ಕ್ರಮ.
    3. ಜೀವ ರಕ್ಷಾ ಪದಕ – ರಕ್ಷಕನಿಗೆ ಸಣ್ಣಪುಟ್ಟ ಅಪಾಯವನ್ನು ಒಳಗೊಂಡಿರುವ ಕಾರ್ಯಗಳು.

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮಾತ್ರ
    4. 1, 2 ಮತ್ತು 3

    ಉತ್ತರ: A

     

    66). ಟಾಮ್‌ಟಾಮ್ ಸಂಚಾರ ಸೂಚ್ಯಂಕ, 2025 ರ ಪ್ರಕಾರ, ಏಷ್ಯಾದ ಅತಿ ಹೆಚ್ಚು ದಟ್ಟಣೆಯ ಅಗ್ರ 10 ನಗರಗಳಲ್ಲಿ ಕೆಳಗಿನ ಯಾವ ಭಾರತೀಯ ನಗರಗಳು ಸ್ಥಾನ ಪಡೆದಿವೆ?

    1. ಬೆಂಗಳೂರು
    2. ಪುಣೆ
    3. ಚೆನ್ನೈ
    4. ಜೈಪುರ

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 2 ಮಾತ್ರ
    2. 1, 2 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    67). ‘ಜಪಾನ್ ಸಮುದ್ರ’ವು ಪೆಸಿಫಿಕ್ ಮಹಾಸಾಗರದೊಂದಿಗೆ ಈ ಕೆಳಗಿನ ಯಾವುದರ ಮೂಲಕ ಸಂಪರ್ಕ ಕಲ್ಪಿಸುತ್ತದೆ?

    1. ಸೂಯೆಜ್ ಕಾಲುವೆ
    2. ತ್ಸುಗಾರು ಜಲಸಂಧಿ 
    3. ಬಾಸ್ಪರಸ್ ಜಲಸಂಧಿ 
    4. ಜಿಬ್ರಾಲ್ಟರ್ ಜಲಸಂಧಿ

    ಉತ್ತರ: B

     

    68). ಕುರ್ಡಿಶ್ ಜನರು (Kurds) ಮುಖ್ಯವಾಗಿ ಕೆಳಗಿನ ಯಾವ ದೇಶಗಳಾದ್ಯಂತ ಹರಡಿದ್ದಾರೆ?

    1. ಟರ್ಕಿ
    2. ಇರಾಕ್
    3. ಇರಾನ್
    4. ಸಿರಿಯಾ

    ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮತ್ತು 2 ಮಾತ್ರ
    2. 1, 2 ಮತ್ತು 3 ಮಾತ್ರ
    3. 1, 2, 3 ಮತ್ತು 4
    4. 2 ಮತ್ತು 4 ಮಾತ್ರ

    ಉತ್ತರ: C

     

    69). ಯುರೋಪಿಯನ್ ಪರಮಾಣು ಶಕ್ತಿ ಸಮುದಾಯ (EURATOM)ವನ್ನು ಯಾವ ಪ್ರಮುಖ ಯುರೋಪಿಯನ್ ಒಪ್ಪಂದದೊಂದಿಗೆ ಸ್ಥಾಪಿಸಲಾಯಿತು?

    1. ವರ್ಸೈಲ್ಸ್ ಒಪ್ಪಂದ
    2. ರೋಮ್ ಒಪ್ಪಂದ 
    3. ಲಿಸ್ಬನ್ ಒಪ್ಪಂದ
    4. ಷೆಂಗೆನ್ ಒಪ್ಪಂದ

    ಉತ್ತರ: B

     

    70). ಕೆಳಗಿನ ವಿವರಣೆಯನ್ನು ಪರಿಗಣಿಸಿ:

    ಇದು ಇಂಡೋ-ಪಶ್ಚಿಮ ಪೆಸಿಫಿಕ್ ಪ್ರದೇಶದಾದ್ಯಂತ ಕಂಡುಬರುವ ಮಧ್ಯಮ ಗಾತ್ರದ ಶಾರ್ಕ್ ಪ್ರಭೇದವಾಗಿದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಜಲರಾಶಿಗಳಲ್ಲಿ ವಾಸಿಸುತ್ತದೆ, ಮತ್ತು ಸಾಮಾನ್ಯವಾಗಿ ಹವಳದ ದಿಬ್ಬಗಳು, ಕಲ್ಲಿನ ಶಿಲಾತಳಗಳು, ಮರಳಿನ ಪ್ರಸ್ಥಭೂಮಿಗಳು, ಅಳಿವೆಗಳು (ಮ್ಯಾಂಗ್ರೋವ್‌ಗಳು) ಮತ್ತು ಕಡಲಹುಲ್ಲು ಹಾಸುಗಳೊಂದಿಗೆ ಸಂಬಂಧ ಹೊಂದಿದೆ. ಇದರ ವ್ಯಾಪ್ತಿಯು ದಕ್ಷಿಣ ಆಫ್ರಿಕಾದಿಂದ ಸಮೋವಾವರೆಗೆ ಮತ್ತು ಉತ್ತರದ ಕಡೆಗೆ ಜಪಾನ್‌ವರೆಗೂ ವಿಸ್ತರಿಸಿದೆ. ಈ ಪ್ರಭೇದವನ್ನು ಪ್ರಸ್ತುತ ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ “ಅಳಿವಿನಂಚಿನಲ್ಲಿರುವ” (EN) ಪ್ರಭೇದವೆಂದು ಪಟ್ಟಿ ಮಾಡಲಾಗಿದೆ.

    ಈ ಮೇಲಿನ ವಿವರಣೆಯಲ್ಲಿ ಉಲ್ಲೇಖಿಸಲಾದ ಪ್ರಭೇದವನ್ನು ಗುರುತಿಸಿ:

    1. ಬೃಹತ್ ಬಿಳಿ ಶಾರ್ಕ್ (Great White Shark) 
    2. ತಿಮಿಂಗಿಲ ಶಾರ್ಕ್ (Whale Shark)
    3. ಇಂಡೋ-ಪೆಸಿಫಿಕ್ ಚಿರತೆ ಶಾರ್ಕ್ (Indo-Pacific Leopard Shark) 
    4. ಸಾಗರ ವಲಯದ ಬಿಳಿತುದಿಯ ಶಾರ್ಕ್ (Oceanic Whitetip Shark)

    ಉತ್ತರ: C

     

    71). ಶ್ವಾಸದ ಮೂಲಕ ಒಳತೆಗೆದುಕೊಂಡ ನೈಟ್ರಿಕ್ ಆಕ್ಸೈಡ್‌ನ ಹೆಚ್ಚಿನ ಸಾಂದ್ರತೆಯು ಕೆಳಗಿನ ಯಾವ ಪರಿಣಾಮಗಳಿಗೆ ಕಾರಣವಾಗಬಹುದು?

    1. ಮೆಥೆಮೊಗ್ಲೋಬಿನೆಮಿಯಾ
    2. ಶ್ವಾಸಕೋಶದ ಅಂಗಾಂಶದ ಹಾನಿ
    3. ರಕ್ತದ ಆಮ್ಲಜನಕ-ಸಾಗಿಸುವ ಸಾಮರ್ಥ್ಯದ ಹೆಚ್ಚಳ

    ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:

    1. 1 ಮಾತ್ರ
    2. 1 ಮತ್ತು 2 ಮಾತ್ರ
    3. 2 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: B

     

    72). ದೇಶದ ಮೊದಲ ಜಲಾಂತರ್ಗತ, ದ್ವಿ-ನಾಳೀಯ ರಸ್ತೆ ಹಾಗೂ ರೈಲು ಸಂಯೋಜಿತ ಸುರಂಗವನ್ನು ಯಾವ ನದಿಗೆ ಅಡ್ಡಲಾಗಿ ಮತ್ತು ಯಾವ ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ?

    1. ಗಂಗಾ, ಪಶ್ಚಿಮ ಬಂಗಾಳ 
    2. ಯಮುನಾ, ಉತ್ತರ ಪ್ರದೇಶ 
    3. ಬ್ರಹ್ಮಪುತ್ರ, ಅಸ್ಸಾಂ 
    4. ಗೋದಾವರಿ, ಆಂಧ್ರ ಪ್ರದೇಶ

    ಉತ್ತರ: C

     

    73). ಪ್ರತಿಪಾದನೆ (A): ನವೋದ್ಯಮಗಳಿಗಾಗಿನ ‘ನಿಧಿಗಳ ನಿಧಿ’ಯನ್ನು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (SIDBI) ನಿರ್ವಹಿಸುತ್ತದೆ.

    ಕಾರಣ (R): SIDBI ಯು ಭಾರತದಲ್ಲಿ ಬಂಡವಾಳ ಮಾರುಕಟ್ಟೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯಾಗಿದೆ. 

    ಸಂಕೇತಗಳು:

    1. A ಮತ್ತು R ಎರಡೂ ಸರಿ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ. 
    2. A ಮತ್ತು R ಎರಡೂ ಸರಿ ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
    3. A ಸರಿ ಆದರೆ R ತಪ್ಪು
    4. A ತಪ್ಪು ಆದರೆ R ಸರಿ

    ಉತ್ತರ: C

     

    74). ಓಲ್ ಚಿಕಿ (Ol Chiki) ಲಿಪಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು 20ನೇ ಶತಮಾನದ ಆರಂಭದಲ್ಲಿ ಪಂಡಿತ್ ರಘುನಾಥ್ ಮುರ್ಮು ಅವರು ನಿರ್ದಿಷ್ಟವಾಗಿ ಸಂತಾಲಿ ಭಾಷೆಗಾಗಿ ಅಭಿವೃದ್ಧಿಪಡಿಸಿದರು.
    2. ಇದು ಸಂತಾಲಿ ಧ್ವನಿಶಾಸ್ತ್ರವನ್ನು ನಿಖರವಾಗಿ ಪ್ರತಿನಿಧಿಸಲು ವಿನ್ಯಾಸಗೊಳಿಸಲಾದ 30 ಅಕ್ಷರಗಳನ್ನು ಒಳಗೊಂಡಿದೆ.
    3. ಬುಡಕಟ್ಟು ಭಾಷೆಗಳಿಗೆ ಸರಿಹೊಂದುವಂತೆ ಇದನ್ನು ದೇವನಾಗರಿ ಲಿಪಿಯಿಂದ ಅಳವಡಿಸಿಕೊಳ್ಳಲಾಗಿದೆ ಮತ್ತು ಇದರ ಸೃಷ್ಟಿಯು ಸಂತಾಲಿ ಶಬ್ದಕೋಶ ಹಾಗೂ ವ್ಯಾಕರಣದ ವ್ಯವಸ್ಥಿತ ದಾಖಲೀಕರಣವನ್ನು ಸಾಧ್ಯವಾಗಿಸಿತು.
    4. 92ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 2003 ರ ಮೂಲಕ ಸಂತಾಲಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲಾಯಿತು.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 1 ಮತ್ತು 3 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    75). ಭೂ-ಆಧಾರ್ (ULPIN) ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. ಇದು ಪ್ರತಿಯೊಂದು ಭೂಮಿಯ ತುಕಡಿಗೂ ನಿಯೋಜಿಸಲಾದ 14-ಅಂಕಿಯ ಗುರುತಿನ ಸಂಖ್ಯೆಯಾಗಿದೆ.
    2. ಇದು ಭೂಮಿಯ ತುಕಡಿಯ ರೇಖಾಂಶ ಮತ್ತು ಅಕ್ಷಾಂಶದ ನಿರ್ದೇಶಾಂಕಗಳ ಮೇಲೆ ಆಧಾರಿತವಾಗಿದೆ.
    3. ಇದು ವ್ಯಕ್ತಿಗಳಿಗಿರುವ ಆಧಾರ್‌ನಂತೆಯೇ ‘ಡಿಜಿಟಲ್ ಭೂಮಿ ಗುರುತಿನ’ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
    4. ಇದು ಸ್ಮಾರ್ಟ್ ಸಿಟಿ ಮಿಷನ್  ವ್ಯಾಪ್ತಿಗೆ ಒಳಪಡುವ ನಗರ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ.

    ಆಯ್ಕೆಗಳು:

    1. 1 ಮತ್ತು 4 ಮಾತ್ರ
    2. 1, 2 ಮತ್ತು 3 ಮಾತ್ರ
    3. 2 ಮತ್ತು 4 ಮಾತ್ರ
    4. ಮೇಲಿನ ಎಲ್ಲವೂ

    ಉತ್ತರ: B

     

    76). ಪಿಎಂ ರಾಹತ್ (PM RAHAT) ಯೋಜನೆಯ ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

    1. ಇದು ರಸ್ತೆ ಅಪಘಾತದ ಸಂತ್ರಸ್ತರಿಗೆ ತಕ್ಷಣದ, ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ.
    2. ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ಮಾತ್ರ ಒಳಗೊಳ್ಳುತ್ತದೆ.
    3. ತುರ್ತು ಪರಿಸ್ಥಿತಿಯನ್ನು ಸುಸ್ಥಿರಗೊಳಿಸಲು ಆಸ್ಪತ್ರೆಗಳು ಮುಂಗಡ ಪಾವತಿಯನ್ನು ಕೋರುವಂತಿಲ್ಲ.
    4. ಈ ಯೋಜನೆಗೆ ಮೋಟಾರು ವಾಹನ ಅಪಘಾತ ನಿಧಿಯಿಂದ (MVAF) ಧನಸಹಾಯವನ್ನು ಭರಿಸಲಾಗುತ್ತದೆ.

    ಆಯ್ಕೆಗಳು: 

    1. 1, 3, ಮತ್ತು 4 ಮಾತ್ರ 
    2. 1 ಮತ್ತು 2 ಮಾತ್ರ C. 

    2 ಮತ್ತು 3 ಮಾತ್ರ 

    1. ಮೇಲಿನ ಎಲ್ಲವೂ

    ಉತ್ತರ: A

     

    77). ಕೆಳಗಿನ ವಿವರಣೆಯನ್ನು ಪರಿಗಣಿಸಿ:

    ಇದು ಪಶ್ಚಿಮ ಹಿಮಾಲಯಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ನೆಲದ-ಮೇಲೆ ವಾಸಿಸುವ ಪಕ್ಷಿಯಾಗಿದ್ದು, ಪಾಕಿಸ್ತಾನ, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯ ನೇಪಾಳದಾದ್ಯಂತ ಕಂಡುಬರುತ್ತದೆ. ಇದು ಮುಖ್ಯವಾಗಿ ಬೇರುಗಳು, ಗೆಡ್ಡೆಗಳು, ಬಲ್ಬ್‌ಗಳು, ಬೀಜಗಳು, ವನ್ಯಫಲಗಳು ಮತ್ತು ಪ್ರಾಸಂಗಿಕವಾಗಿ ಕೀಟಗಳು ಅಥವಾ ಹುಳುಗಳನ್ನು ಭಕ್ಷಿಸುತ್ತದೆ. ಈ ಪ್ರಭೇದವು ಉನ್ನತ ಮಟ್ಟದ ಜನ್ಮಸ್ಥಳ ನಿಷ್ಠೆಯನ್ನು ಪ್ರದರ್ಶಿಸುತ್ತದೆ; ಅಂದರೆ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಪುನಃ ತಮ್ಮ ಜನ್ಮಸ್ಥಳಕ್ಕೇ ಹಿಂದಿರುಗುತ್ತವೆ. ಇವು ಪ್ರಧಾನವಾಗಿ ಏಕಸಂಗಾತಿತ್ವದ ಪ್ರವೃತ್ತಿಯನ್ನು ಹೊಂದಿವೆ.

    ಬೇಟೆ, ಹುಲ್ಲುಗಾವಲುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವುದರಿಂದ ಉಂಟಾಗುವ ಆವಾಸಸ್ಥಾನದ ಕ್ಷೀಣತೆ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ (ಏಪ್ರಿಲ್-ಜೂನ್) ಗೂಡುಗಳನ್ನು ನಾಶಪಡಿಸುವ ಕಾಡ್ಗಿಚ್ಚಿನಿಂದಾಗಿ ಇದರ ಸಂಖ್ಯೆಯು ಕ್ಷೀಣಿಸುತ್ತಿದೆ. ಇದನ್ನು ಅಂತರರಾಷ್ಟ್ರೀಯ ಸಂರಕ್ಷಣಾ ಸಂಸ್ಥೆಗಳು ‘ದುರ್ಬಲ’ (VU) ಎಂದು ವರ್ಗೀಕರಿಸಿವೆ. ಇದು ಭಾರತದ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅನುಸೂಚಿ-I ರಲ್ಲಿ ಸ್ಥಾನ ಪಡೆದಿದೆ.

    ಈ ಮೇಲಿನ ಪಠ್ಯದಲ್ಲಿ ಯಾವ ಪ್ರಭೇದವನ್ನು ವಿವರಿಸಲಾಗಿದೆ?

    1. ಹಿಮಾಲಯದ ಮೋನಲ್ 
    2. ಚೀರ್ ಫೆಸೆಂಟ್ 
    3. ಪಶ್ಚಿಮ ಟ್ರಾಗೋಪಾನ್
    4. ಸ್ಯಾಟಿರ್ ಟ್ರಾಗೋಪಾನ್

    ಉತ್ತರ: B

     

    78). ಇತ್ತೀಚಿಗೆ, ಭಾರತವು ಯಾವ ದೇಶದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನು “ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಉನ್ನತೀಕರಿಸಿದೆ?

    1. ಜರ್ಮನಿ
    2. ಯುನೈಟೆಡ್ ಕಿಂಗ್‌ಡಮ್
    3. ಫ್ರಾನ್ಸ್
    4. ಜಪಾನ್

    ಉತ್ತರ: C

     

    79). “ಭಾರತದ ಎಐ-ಪ್ರೆನ್ಯೂರ್ಸ್” (ಭಾರತದ ಕೃತಕ ಬುದ್ದಿಮತ್ತೆ ಉದ್ಯಮಿಗಳು) ಉಪಕ್ರಮದ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಭಾರತದಲ್ಲಿನ ಕೃತಕ ಬುದ್ಧಿಮತ್ತೆ (AI) ನವೋದ್ಯಮಗಳಿಗಾಗಿ ರೂಪಿಸಲಾದ ನಿಯಂತ್ರಣ ಚೌಕಟ್ಟಾಗಿದೆ.
    2. ಇದನ್ನು ನೀತಿ ಆಯೋಗದ ಅಟಲ್ ನಾವಿನ್ಯತಾ ಮಿಷನ್ (AIM) ಅಡಿಯಲ್ಲಿ ಪ್ರಾರಂಭಿಸಲಾಗಿದೆ.
    3. ಇದು ತನ್ನ ಪ್ರಮುಖ ಪ್ರಕಟಣೆಯ ಮೂಲಕ ಆಯ್ದ ಎಐ (AI) ನವೋದ್ಯಮಗಳ ಯಶೋಗಾಥೆಗಳನ್ನು ದಾಖಲಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮತ್ತು 3 ಮಾತ್ರ
    4. 1, 2 ಮತ್ತು 3

    ಉತ್ತರ: B

     

    80). ಕೆಳಗಿನ ವಿವರಣೆಯನ್ನು ಪರಿಗಣಿಸಿ:

    ಇದು ಸುಮಾರು 2 ರಿಂದ 2.5 ಅಡಿ ಎತ್ತರವಿರುವ, ಬೃಹತ್ ಬಾಗಿದ ಕೊಕ್ಕು ಮತ್ತು ಆಕರ್ಷಕ ಪುಕ್ಕಗಳನ್ನು ಹೊಂದಿರುವ ಈ ದೊಡ್ಡ ಅರಣ್ಯವಾಸಿ ಪಕ್ಷಿಯು ತೇವಭರಿತ ನಿತ್ಯಹರಿದ್ವರ್ಣ ಮತ್ತು ಎತ್ತರದ ಎಲೆ ಉದುರುವ ಕಾಡುಗಳು, ತೋಟಗಳು ಹಾಗೂ ಕಡಿಮೆ ಎತ್ತರದ ನದಿತೀರದ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುತ್ತದೆ. ಭಾರತದಲ್ಲಿ, ಇದರ ವ್ಯಾಪ್ತಿಯು ಪಶ್ಚಿಮ ಘಟ್ಟಗಳು ಮತ್ತು ನೈಋತ್ಯ ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಪೂರ್ವ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಹರಡಿದೆ, ಜೊತೆಗೆ ಆಂಧ್ರಪ್ರದೇಶ ಮತ್ತು ಶ್ರೀಲಂಕಾಕ್ಕೂ ವಿಸ್ತರಿಸಿದೆ. ಪರಿಸರ ವಿಜ್ಞಾನದ ದೃಷ್ಟಿಯಿಂದ, ಇದು ಬೀಜಗಳನ್ನು ಪ್ರಸಾರ ಮಾಡುವ ಪ್ರಮುಖ ಜೀವರಾಶಿಯಾಗಿ ಉಷ್ಣವಲಯದ ಕಾಡುಗಳ ಪುನರುತ್ಪಾದನೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಪ್ರಸ್ತುತ ಇದನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಯದ ಅಂಚಿನಲ್ಲಿರುವ (NT) ಪ್ರಭೇದ ಎಂದು ಪಟ್ಟಿ ಮಾಡಲಾಗಿದೆ.

    ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?

    1. ಗ್ರೇಟ್ ಇಂಡಿಯನ್ ಬಸ್ಟರ್ಡ್ (Great Indian Bustard) 
    2. ಮಲಬಾರ್ ಬಣ್ಣದ ಮಂಗಟ್ಟೆ ಪಕ್ಷಿ (Malabar Pied Hornbill) 
    3. ಭಾರತೀಯ ಬೂದು ಮಂಗಟ್ಟೆ ಪಕ್ಷಿ (Indian Grey Hornbill) 
    4. ಓರಿಯಂಟಲ್ ಡಾರ್ಟರ್ (Oriental Darter)

    ಉತ್ತರ: B

     

    81). 2006 ರ ಅರಣ್ಯ ಹಕ್ಕು ಕಾಯ್ದೆಯ (FRA) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಮೇಲಿನ ವೈಯಕ್ತಿಕ ಹಾಗೂ ಸಮುದಾಯದ ಹಕ್ಕುಗಳನ್ನು ಗುರುತಿಸುತ್ತದೆ.
    2. ಇದು ಕೇವಲ ಪರಿಶಿಷ್ಟ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಹೊರಗಿಡುತ್ತದೆ.
    3. ಇದು ಅರಣ್ಯವಾಸಿ ಸಮುದಾಯಗಳಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 3 ಮಾತ್ರ
    2. 2 ಮಾತ್ರ
    3. 1 ಮಾತ್ರ
    4. 1, 2 ಮತ್ತು 3

    ಉತ್ತರ: A

     

    82). ಮುನ್ಸಿಪಲ್ ಬಾಂಡ್‌ಗಳನ್ನು ಪ್ರಾಥಮಿಕವಾಗಿ ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?

    1. ಬಂಡವಾಳ-ತೀವ್ರತೆಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು.
    2. ಅಸ್ತಿತ್ವದಲ್ಲಿರುವ ಸಾಲಗಳಿಗೆ ಮರುಹಣಕಾಸು ಒದಗಿಸಲು.
    3. ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸಲು.

    ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

    1. 1 ಮಾತ್ರ
    2. 1 ಮತ್ತು 2 ಮಾತ್ರ
    3. 1, 2 ಮತ್ತು 3
    4. 2 ಮತ್ತು 3 ಮಾತ್ರ

    ಉತ್ತರ: C

     

    83). ‘ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ’ (VVP) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.
    2. ಇದು ಚೀನಾದೊಂದಿಗಿನ ಭಾರತದ ಗಡಿಯಲ್ಲಿರುವ ಹಳ್ಳಿಗಳ ಮೇಲೆ ಕೇಂದ್ರೀಕರಿಸುತ್ತದೆ.
    3. ಇದು ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯ ಮತ್ತು ಜೀವನೋಪಾಯದ ಅವಕಾಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 2 ಮತ್ತು 3 ಮಾತ್ರ
    2. 1 ಮತ್ತು 2 ಮಾತ್ರ
    3. 3 ಮಾತ್ರ
    4. 1, 2 ಮತ್ತು 3

    ಉತ್ತರ: A

     

    84). “ಗಾಜಾ ಶಾಂತಿ ಮಂಡಳಿ”ಯನ್ನು ಈ ಕೆಳಗಿನ ಯಾವುದರ ಮೇಲ್ವಿಚಾರಣೆಗಾಗಿ ರಚಿಸಲಾಗಿದೆ?

    1. ರಷ್ಯಾ-ಉಕ್ರೇನ್ ಯುದ್ಧದ ಕದನ ವಿರಾಮ.
    2. ಇಸ್ರೇಲ್-ಲೆಬನಾನ್ ಸಂಘರ್ಷದ ಕದನ ವಿರಾಮ.
    3. ಇಸ್ರೇಲ್-ಹಮಾಸ್ ಯುದ್ಧದ ಕದನ ವಿರಾಮ.
    4. ಸಿರಿಯನ್ ಅಂತರ್ಯುದ್ಧದ ಕದನ ವಿರಾಮ.

    ಉತ್ತರ: C

     

    85). ದೊಡ್ಡ ತಲೆಯ (ಲಾಗರ್‌ಹೆಡ್) ಕಡಲಾಮೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ದೇಹದ ಗಾತ್ರಕ್ಕೆ ಮೀರಿದ ಅಸಾಧಾರಣ ದೊಡ್ಡ ತಲೆಯನ್ನು ಹೊಂದಿರುವುದರಿಂದ ಇದು ಈ ಹೆಸರನ್ನು ಪಡೆದುಕೊಂಡಿದೆ.
    2. ಇದು ಪ್ರಾಥಮಿಕವಾಗಿ ಗಟ್ಟಿ ಚಿಪ್ಪಿನ ಸಮುದ್ರ ಜೀವಿಗಳನ್ನು ಭಕ್ಷಿಸುತ್ತದೆ.
    3. ಇದನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವ’ (EN) ಪ್ರಭೇದ ಎಂದು ವರ್ಗೀಕರಿಸಲಾಗಿದೆ. 

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮಾತ್ರ
    4. 1, 2 ಮತ್ತು 3

    ಉತ್ತರ: A

     

    86). ಇಂಧನಕ್ಕಾಗಿ ಕೃತಕ ಬುದ್ಧಿಮತ್ತೆಯ (AI) ಜಾಗತಿಕ ಅಭಿಯಾನವನ್ನು ಈ ಕೆಳಗಿನ ಯಾವ ಸಂಸ್ಥೆ ಪ್ರಾರಂಭಿಸಿದೆ?

    1. ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)
    2. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
    3. ವಿಶ್ವಬ್ಯಾಂಕ್ (WB)
    4. ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)

    ಉತ್ತರ: D

     

    87). ‘ಪ್ಯಾಕ್ಸ್ ಸಿಲಿಕಾ’ ಎಂಬ ಪದವು ಯಾವುದನ್ನು ಉಲ್ಲೇಖಿಸುತ್ತದೆ?

    1. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ.
    2. ಸುರಕ್ಷಿತ ಸಿಲಿಕಾನ್ ಪೂರೈಕೆ ಸರಪಳಿಗಾಗಿ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮ.
    3. ವಿರಳ ಭೂ-ಧಾತುಗಳ ಮೇಲಿನ ಜಾಗತಿಕ ಒಪ್ಪಂದ.
    4. ವ್ಯಾಪಾರ ಸೌಲಭ್ಯದ ಕುರಿತಾದ ವಿಶ್ವ ವ್ಯಾಪಾರ ಸಂಸ್ಥೆಯ (WTO) ಒಪ್ಪಂದ.

    ಉತ್ತರ: B

     

    88). ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ (IEEPA) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಈ ಕಾಯ್ದೆಯನ್ನು 1977 ರಲ್ಲಿ ಜಾರಿಗೊಳಿಸಲಾಯಿತು.
    2. ಇದು ಅಸಾಮಾನ್ಯ ಮತ್ತು ಅಸಾಧಾರಣ ವಿದೇಶಿ ಬೆದರಿಕೆಗಳ ವಿರುದ್ಧ ಕ್ರಮಕೈಗೊಳ್ಳಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.
    3. ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸದೆಯೇ ಈ ಕಾಯ್ದೆಯನ್ನು ಜಾರಿಗೊಳಿಸಬಹುದಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 2 ಮಾತ್ರ
    2. 2 ಮತ್ತು 3 ಮಾತ್ರ
    3. 1 ಮಾತ್ರ
    4. 1, 2 ಮತ್ತು 3

    ಉತ್ತರ: A

     

    89). ನಿವ್ವಳ ಶೂನ್ಯ (ನೆಟ್ ಜೀರೋ) ಪರಿಕಲ್ಪನೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಎಲ್ಲಾ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದನ್ನು ಸೂಚಿಸುತ್ತದೆ.
    2. ಇದು ಹೊರಸೂಸಲ್ಪಟ್ಟ ಹಸಿರುಮನೆ ಅನಿಲಗಳು ಮತ್ತು ವಾತಾವರಣದಿಂದ ತೆಗೆದುಹಾಕಲ್ಪಟ್ಟ ಹಸಿರುಮನೆ ಅನಿಲಗಳ ನಡುವೆ ಸಮತೋಲನವನ್ನು ಸಾಧಿಸುವುದನ್ನು ಉಲ್ಲೇಖಿಸುತ್ತದೆ.
    3. ಇದು ಮಾನವ-ಪ್ರೇರಿತ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯ ಮೌಲ್ಯಕ್ಕೆ ತಗ್ಗಿಸುವ ಗುರಿ ಹೊಂದಿದೆ.
    4. ಬೇಲಾ ಗ್ರಾಮವನ್ನು ಅದರ ಸುಸ್ಥಿರ ಮತ್ತು ಇಂಗಾಲ-ತಟಸ್ಥ ಉಪಕ್ರಮಗಳಿಗಾಗಿ ಭಾರತದ ಮೊದಲ ನೆಟ್-ಜೀರೋ ಪಂಚಾಯತಿ ಎಂದು ಗುರುತಿಸಲಾಗಿದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 4 ಮಾತ್ರ
    2. 2, 3 ಮತ್ತು 4 ಮಾತ್ರ
    3. 1, 2 ಮತ್ತು 3 ಮಾತ್ರ
    4. 1, 2, 3 ಮತ್ತು 4

    ಉತ್ತರ: B

     

    90). ದಕ್ಷಿಣ ಆಂಧ್ರಪ್ರದೇಶದ ಮೂರು ಜಿಲ್ಲೆಗಳಾದ ಚಿತ್ತೂರು, ನೆಲ್ಲೂರು ಮತ್ತು ವೈಎಸ್ಆರ್ (YSR) ಕಡಪಗಳಿಗೆ ಮಾತ್ರ ಸೀಮಿತವಾದ (ಸ್ಥಳೀಯ) ಸ್ಥಳೀಯ ವೃಕ್ಷ ಪ್ರಭೇದವೊಂದು ಪ್ರಾಥಮಿಕವಾಗಿ ಪೂರ್ವ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ಅತಿದೊಡ್ಡ ಮೀಸಲು ಪ್ರದೇಶವು ಸುಮಾರು 4,755 ಚದರ ಕಿ.ಮೀ ವ್ಯಾಪ್ತಿಯ ಜೀವಗೋಳ ಮೀಸಲು ಪ್ರದೇಶದಲ್ಲಿದೆ. ಇದು ನಿಧಾನವಾಗಿ ಬೆಳೆಯುವ ಪ್ರಭೇದವಾಗಿದ್ದು, ಪ್ರಬುದ್ಧಾವಸ್ಥೆ ತಲುಪಲು 25 ರಿಂದ 40 ವರ್ಷಗಳನ್ನು ತೆಗೆದುಕೊಳ್ಳುತ್ತದೆ; ಈ ಕಾರಣದಿಂದ ಇದು ಅತಿಯಾದ ಶೋಷಣೆಗೆ ಸುಲಭವಾಗಿ ತುತ್ತಾಗುತ್ತದೆ. ಈ ಪ್ರಭೇದವನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವ’ (EN) ಪ್ರಭೇದ ಎಂದು ಪಟ್ಟಿ ಮಾಡಲಾಗಿದೆ, CITES ಒಪ್ಪಂದದ ಅಡಿಯಲ್ಲಿ ಇದರ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ ಮತ್ತು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇದಕ್ಕೆ ರಕ್ಷಣೆ ಒದಗಿಸಲಾಗಿದೆ.

    ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?

    1. ಶ್ರೀಗಂಧ (Sandalwood)
    2. ತೇಗ (Teak)
    3. ರಕ್ತ ಚಂದನ (Red Sanders)
    4. ಬೀಟೆ ಮರ (Rosewood)

    ಉತ್ತರ: C

     

    91). ಸ್ವದೇಶಿ ನಿರ್ಮಿತ ಟಿಡಿ (Td) ಲಸಿಕೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದನ್ನು ಕೇಂದ್ರೀಯ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತದೆ.
    2. ಇದು ಧನುರ್ವಾಯು (ಟೆಟನಸ್) ಮತ್ತು ಗಂಟಲುಮಾರಿ (ಡಿಫ್ತೀರಿಯಾ) ರೋಗಗಳೆರಡರ ವಿರುದ್ಧವೂ ರಕ್ಷಣೆ ನೀಡುತ್ತದೆ.
    3. ಇದು ಕೇವಲ ಧನುರ್ವಾಯುವಿನ ವಿರುದ್ಧ ಮಾತ್ರ ರಕ್ಷಣೆ ನೀಡುತ್ತಿದ್ದ ಹಿಂದಿನ ಟೆಟನಸ್ ಟಾಕ್ಸಾಯ್ಡ್ (TT) ಲಸಿಕೆಯನ್ನು ಬದಲಾಯಿಸಿದೆ.
    4. 2006 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO), ದೇಶಗಳು ಟಿಡಿ (Td) ಲಸಿಕೆಯಿಂದ ಟಿಟಿ (TT) ಲಸಿಕೆಗೆ ಬದಲಾಗಬೇಕೆಂದು ಶಿಫಾರಸು ಮಾಡಿತ್ತು.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1, 2 ಮತ್ತು 3 ಮಾತ್ರ
    2. 1 ಮತ್ತು 4 ಮಾತ್ರ
    3. 2, 3 ಮತ್ತು 4 ಮಾತ್ರ
    4. 1, 2, 3 ಮತ್ತು 4

    ಉತ್ತರ: A

     

    92). ಬಯೋಫಾರ್ಮಾ ಶಕ್ತಿ ಉಪಕ್ರಮದ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

    1. ಇದು ಭಾರತದಲ್ಲಿ (ಜೈವಿಕ ಮೂಲದ ಔಷಧಗಳು) ಮತ್ತು ‘ಬಯೋಸಿಮಿಲರ್ಸ್’ (ಜೈವಿಕ-ಸಮಾನ ಔಷಧಗಳು) ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
    2. ಇದು ಭಾರತವನ್ನು ಪ್ರಮುಖ ಜಾಗತಿಕ ಬಯೋಫಾರ್ಮಾ ಉದ್ಯಮದ ಮುಂಚೂಣಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ.
    3. ಇದು ಜಾಗತಿಕ ಜೈವಿಕ ಔಷಧಗಳ (ಬಯೋಫಾರ್ಮಾಸ್ಯುಟಿಕಲ್) ಮಾರುಕಟ್ಟೆಯ ಪಾಲಿನಲ್ಲಿ 5% ಅನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿದೆ.
    4. ಇದು ದೇಶೀಯ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಮೌಲ್ಯದ ಬಯೋಫಾರ್ಮಾಸ್ಯುಟಿಕಲ್ ಉತ್ಪನ್ನಗಳ ಆಮದುಗಳನ್ನು ಹೆಚ್ಚಿಸುವತ್ತ ಪ್ರಾಥಮಿಕವಾಗಿ ಗಮನಹರಿಸುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

    1. 1 ಮತ್ತು 3 ಮಾತ್ರ
    2. 2 ಮತ್ತು 4 ಮಾತ್ರ
    3. 1 ಮತ್ತು 4 ಮಾತ್ರ
    4. 1, 2 ಮತ್ತು 3 ಮಾತ್ರ

    ಉತ್ತರ: D

  • ಎಪಿಎಂಸಿಯಿಂದ ಅತ್ಯಾಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ

    ಎಪಿಎಂಸಿಯಿಂದ ಅತ್ಯಾಧುನಿಕ ಹಣ್ಣು ಮತ್ತು ತರಕಾರಿ ಮಾರುಕಟ್ಟೆ

    ಇದೀಗ ಸುದ್ದಿಯಲ್ಲಿದೆ:

    • ನಗರದ ಜನದಟ್ಟಣೆಯ ಮಾರುಕಟ್ಟೆಗಳನ್ನು ಸ್ಥಳಾಂತರಿಸಲು ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ, ಕರ್ನಾಟಕ ಕೃಷಿ ಮಾರುಕಟ್ಟೆ ಇಲಾಖೆಯು ಅತ್ಯಾಧುನಿಕ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆಯನ್ನು ನಿರ್ಮಿಸಲು ಮುಂದಾಗಿದೆ.

    ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಬಗ್ಗೆ:

    • ಪ್ರಮುಖ ಉದ್ದೇಶ:- ರೈತರು ಮತ್ತು ವ್ಯಾಪಾರಿಗಳಿಬ್ಬರಿಗೂ ಅನುಕೂಲವಾಗುವಂತೆ ಶೈತ್ಯಾಗಾರದಂತಹ ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ, ನೈರ್ಮಲ್ಯಯುತವಾದ ಮತ್ತು ಸುಸಜ್ಜಿತವಾದ ವ್ಯಾಪಾರ ಕೇಂದ್ರವನ್ನು ನಿರ್ಮಿಸುವುದು.
    • ಸ್ಥಳ:- ಹೊಸೂರು ರಸ್ತೆಯ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ 42 ಎಕರೆ 12 ಗುಂಟೆ ಜಮೀನಿನಲ್ಲಿ ನೆಲೆಗೊಂಡಿದ್ದು, ಆಯಕಟ್ಟಿನ ಪರಿಧಿ ವರ್ತುಲ ರಸ್ತೆಯ ಸಮೀಪದಲ್ಲಿದೆ.
    • ಸಂಚಾರ ದಟ್ಟಣೆ ನಿವಾರಣಾ ಯೋಜನೆ:- ಸಗಟು ವ್ಯಾಪಾರ ಕಾರ್ಯಾಚರಣೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸುವ ಮೂಲಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಿಂದ ಬರುವ ಬೃಹತ್ ಸರಕು ಸಾಗಣೆ ಲಾರಿಗಳು ನಗರದೊಳಗೆ ಪ್ರವೇಶಿಸುವುದನ್ನು ತಡೆಗಟ್ಟಿ, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
  • ಗಿಲ್ಲೆನ್-ಬ್ಯಾರೆ ಸಿಂಡ್ರೋಮ್ (GBS) ರೋಗಿಗಳಿಗೆ ಆರ್ಥಿಕ ನೆರವು ವಿಸ್ತರಣೆ

    ಗಿಲ್ಲೆನ್-ಬ್ಯಾರೆ ಸಿಂಡ್ರೋಮ್ (GBS) ರೋಗಿಗಳಿಗೆ ಆರ್ಥಿಕ ನೆರವು ವಿಸ್ತರಣೆ

    ಇದೀಗ ಸುದ್ದಿಯಲ್ಲಿದೆ:

    • ರಾಜ್ಯ ಸರ್ಕಾರವು ಅಪರೂಪದ ನರರೋಗವಾದ ಗಿಲ್ಲೆನ್-ಬ್ಯಾರೆ ಸಿಂಡ್ರೋಮ್‌ನಿಂದ (GBS) ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ನೆರವನ್ನು ವಿಸ್ತರಿಸಲಿದೆ.

    ಉಪಕ್ರಮದ ಬಗ್ಗೆ:

    • ಪ್ರಾರಂಭಿಸಿದವರು:- ಇದನ್ನು ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಭಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇದನ್ನು ಘೋಷಿಸಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಹೊರಡಿಸಿದ ಸುತ್ತೋಲೆಯ ಮೂಲಕ ಇದನ್ನು ಜಾರಿಗೊಳಿಸಲಾಗಿದೆ.
    • ಪ್ರಮುಖ ಉದ್ದೇಶ: ಅಪರೂಪದ ನರರೋಗವಾದ ಗಿಲ್ಲೆನ್-ಬ್ಯಾರೆ ಸಿಂಡ್ರೋಮ್‌ನಿಂದ (GBS) ಬಳಲುತ್ತಿರುವ ರೋಗಿಗಳಿಗೆ, ನಿರ್ಣಾಯಕ ಮತ್ತು ದುಬಾರಿ ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (IVIG) ಚಿಕಿತ್ಸೆಯ ವೆಚ್ಚವನ್ನು ಭರಿಸುವ ಮೂಲಕ ಆರ್ಥಿಕ ರಕ್ಷಣೆಯನ್ನು ವಿಸ್ತರಿಸುವುದು ಇದರ ಉದ್ದೇಶವಾಗಿದೆ.
    • ಯೋಜನೆಯ ಏಕೀಕರಣ:- ಈ ಚಿಕಿತ್ಸೆಯನ್ನು ಈಗ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ತರಲಾಗಿದೆ.
    • ವ್ಯಾಪ್ತಿ ಮತ್ತು ಹಣಕಾಸು:
      • ಪರಿಷ್ಕೃತ ಪ್ಯಾಕೇಜ್ ಅಡಿಯಲ್ಲಿ IVIG ಚಿಕಿತ್ಸೆಗಾಗಿ ಪ್ರತಿ ರೋಗಿಗೆ 2 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.
      • ಔಷಧದ ಬೆಲೆಯನ್ನು ಪ್ರತಿ ಗ್ರಾಂಗೆ 2,000 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
      • ರೋಗಿಯ ದೇಹದ ತೂಕದ ಆಧಾರದ ಮೇಲೆ ಡೋಸೇಜ್ ವ್ಯಾಪ್ತಿಯನ್ನು ಲೆಕ್ಕಹಾಕಲಾಗುತ್ತದೆ (ಪ್ರತಿ ಕೆಜಿ ದೇಹದ ತೂಕಕ್ಕೆ 2 ಗ್ರಾಂ, ಪ್ರತಿ ಚಕ್ರಕ್ಕೆ ಗರಿಷ್ಠ 20 ಗ್ರಾಂ ವರೆಗೆ).
      • ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆಗಾಗಿ ಎರಡು ನಿರ್ದಿಷ್ಟ ಕಾರ್ಯವಿಧಾನದ ಕೋಡ್‌ಗಳನ್ನು ರಚಿಸಲಾಗಿದೆ.

    ಗಿಲ್ಲೆನ್-ಬ್ಯಾರೆ ಸಿಂಡ್ರೋಮ್ (GBS)ನ ಬಗ್ಗೆ:

    • ಜಿಬಿಎಸ್ (GBS):- ಜಿಬಿಎಸ್ ಎಂಬುದು ಒಂದು ಅಪರೂಪದ ಸ್ವಯಂ ನಿರೋಧಕ ಕಾಯಿಲೆಯಾಗಿದೆ . ಈ ಸ್ಥಿತಿಯಲ್ಲಿ, ದೇಹದ ರೋಗನಿರೋಧಕ ಶಕ್ತಿಯು ತಪ್ಪಾಗಿ ತನ್ನದೇ ದೇಹದ ನರಮಂಡಲದ (ಬಾಹ್ಯ ನರಗಳ) ಮೇಲೆ ದಾಳಿ ಮಾಡುತ್ತದೆ. ಇದು ಸ್ನಾಯುಗಳ ದೌರ್ಬಲ್ಯಕ್ಕೆ ಕಾರಣವಾಗಲಿದ್ದು, ತೀವ್ರ ಸ್ವರೂಪದಲ್ಲಿ ಪಾರ್ಶ್ವವಾಯುವಿಗೆ ದಾರಿಮಾಡಿಕೊಡಬಹುದು.
    • ಸಂಭವಿಸುವಿಕೆ:- ಅಂಕಿಅಂಶಗಳ ಪ್ರಕಾರ, ವಾರ್ಷಿಕವಾಗಿ ಪ್ರತಿ ಒಂದು ಲಕ್ಷ ಜನರಲ್ಲಿ ಒಬ್ಬರಿಂದ ಇಬ್ಬರಿಗೆ ಈ ಕಾಯಿಲೆ ಬಾಧಿಸುವ ಸಾಧ್ಯತೆಯಿದೆ. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಮತ್ತು ವಯಸ್ಕರಲ್ಲಿ ಕಂಡುಬರುತ್ತದೆ.
    • ಪ್ರಚೋದಕಗಳು:- ಈ ಕಾಯಿಲೆಯು ಸಾಮಾನ್ಯವಾಗಿ ದೇಹಕ್ಕೆ ಯಾವುದಾದರೂ ವೈರಾಣು (ವೈರಸ್) ಅಥವಾ ಬ್ಯಾಕ್ಟೀರಿಯಾದ ಸೋಂಕು ತಗುಲಿದ ನಂತರ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ, ಇನ್ಫ್ಲುಯೆನ್ಸ, ಝಿಕಾ ವೈರಸ್ ಅಥವಾ (ಅತ್ಯಂತ ಅಪರೂಪದ ಸಂದರ್ಭಗಳಲ್ಲಿ) ಕೆಲವು ಲಸಿಕೆಗಳು ಇದಕ್ಕೆ ಪ್ರಚೋದನೆ ನೀಡಬಹುದು.
    • ರೋಗಲಕ್ಷಣಗಳು:-
    • ಆರಂಭಿಕ ಲಕ್ಷಣಗಳು:- ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ದೌರ್ಬಲ್ಯ ಪ್ರಾರಂಭವಾಗಿ, ಕ್ರಮೇಣ ಅದು ದೇಹದ ಮೇಲ್ಭಾಗಕ್ಕೆ ಹರಡುತ್ತದೆ. ಸೂಜಿ ಚುಚ್ಚಿದಂತಹ ಅನುಭವ ಮತ್ತು ಬೆನ್ನು ನೋವು ಕಂಡುಬರಬಹುದು.
    • ತೀವ್ರ ಲಕ್ಷಣಗಳು:- ರೋಗ ಉಲ್ಬಣಿಸಿದಾಗ ಪಾರ್ಶ್ವವಾಯು, ಉಸಿರಾಟದ ತೊಂದರೆ, ಮಾತನಾಡುವಲ್ಲಿ ತೊಂದರೆ ಮತ್ತು ದೃಷ್ಟಿ ಸಮಸ್ಯೆಗಳು ಉಂಟಾಗಬಹುದು.
    • ಆರೋಗ್ಯದ ಮೇಲಾಗುವ ಪರಿಣಾಮಗಳು (ತೊಡಕುಗಳು):- ಈ ಕಾಯಿಲೆಯು ಹೃದಯ ಬಡಿತದ ಏರುಪೇರು, ರಕ್ತದೊತ್ತಡದ ಸಮಸ್ಯೆಗಳು ಅಥವಾ ಗಂಭೀರ ಉಸಿರಾಟದ ವೈಫಲ್ಯಕ್ಕೆ ಕಾರಣವಾಗಬಹುದು.
    • ಚಿಕಿತ್ಸಾ ವಿಧಾನಗಳು:- ಜಿಬಿಎಸ್‌ಗೆ ಯಾವುದೇ ನಿರ್ದಿಷ್ಟವಾದ ಶಾಶ್ವತ ಪರಿಹಾರವಿಲ್ಲದಿದ್ದರೂ, ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಈ ಕೆಳಗಿನ ಚಿಕಿತ್ಸೆಗಳು ಲಭ್ಯವಿವೆ:
    • IVIG ಚಿಕಿತ್ಸೆ:- ರೋಗನಿರೋಧಕ ವ್ಯವಸ್ಥೆಯ ದಾಳಿಯನ್ನು ತಡೆಯಲು ಆರೋಗ್ಯಕರ ಪ್ರತಿಕಾಯಗಳನ್ನು ಅಭಿಧಮನಿಯ ಮೂಲಕ ನೀಡಲಾಗುತ್ತದೆ.
    • ಪ್ಲಾಸ್ಮಾ ವಿನಿಮಯ:- ರೋಗಿಯ ರಕ್ತದಲ್ಲಿರುವ ಹಾನಿಕಾರಕ ಪ್ರತಿಕಾಯಗಳನ್ನು ಹೊರತೆಗೆಯಲು ಈ ವಿಧಾನವನ್ನು ಬಳಸಲಾಗುತ್ತದೆ.
    • ಸಹಾಯಕ ಆರೈಕೆ:- ರೋಗಿಗೆ ಉಸಿರಾಟದ ವೈಫಲ್ಯ ಉಂಟಾದಾಗ ಕೃತಕ ಉಸಿರಾಟದ ಯಂತ್ರಗಳ ನೆರವು ನೀಡಲಾಗುತ್ತದೆ ಮತ್ತು ಸ್ನಾಯುಗಳ ಚಲನೆ ಸುಧಾರಿಸಲು ಫಿಸಿಯೋಥೆರಪಿ ಮಾಡಲಾಗುತ್ತದೆ.
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ಪ್ರಶಸ್ತಿ

    ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ಪ್ರಶಸ್ತಿ

    ಇದೀಗ ಸುದ್ದಿಯಲ್ಲಿದೆ: 

    • ಇಬ್ಬರು ಹಿರಿಯ ವಿಜ್ಞಾನಿಗಳಿಗೆ ಕೆಎಸ್‌ಟಿಎ (KSTA) ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಪ್ರೊ. ಸಿ.ಎನ್.ಆರ್. ರಾವ್ – ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ:

    • ಪ್ರಶಸ್ತಿ ಪುರಸ್ಕೃತರು:- ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆಯ (ZSI) ವಿಜ್ಞಾನಿ ಮತ್ತು ಮಾಜಿ ನಿರ್ದೇಶಕರಾದ ರಾಮಕೃಷ್ಣ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    • ನೀಡುವ ಪ್ರಾಧಿಕಾರ:- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು (KSTA) ಈ ಪ್ರಶಸ್ತಿಯನ್ನು ನೀಡುತ್ತದೆ.
    • ಉದ್ದೇಶ:- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
    • ನಗದು ಬಹುಮಾನ ಮತ್ತು ಗೌರವ:- ಈ ಪ್ರಶಸ್ತಿಯು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕ ಮತ್ತು 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
    • ಪ್ರಶಸ್ತಿಯ ಬಗ್ಗೆ:- ಇದು ಕೆಎಸ್‌ಟಿಎ ಸ್ಥಾಪಿಸಿದ ಪ್ರತಿಷ್ಠಿತ ಗೌರವವಾಗಿದ್ದು, ಹಿರಿಯ ವಿಜ್ಞಾನಿಗಳ ಜೀವಮಾನದ ಸಾಧನೆಯನ್ನು ಗುರುತಿಸಲು ಇದನ್ನು ನೀಡಲಾಗುತ್ತದೆ.

    ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕಾಗಿ ಕೆಎಸ್‌ಟಿಎ ಜೀವಮಾನ ಸಾಧನೆ ಪ್ರಶಸ್ತಿ (2023):

    • ಪ್ರಶಸ್ತಿ ಪುರಸ್ಕೃತರು:- ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (CFTRI) ಮಾಜಿ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
    • ನೀಡುವ ಪ್ರಾಧಿಕಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು (KSTA) ಈ ಪ್ರಶಸ್ತಿಯನ್ನು ನೀಡುತ್ತದೆ.
    • ಉದ್ದೇಶ:- ನಿರ್ದಿಷ್ಟವಾಗಿ ಕನ್ನಡ ಭಾಷೆಯಲ್ಲಿ ‘ಸ್ಟೀಮ್’ (STEAM – ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ) ವಿಷಯಗಳನ್ನು ಜನಪ್ರಿಯಗೊಳಿಸುವಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
    • ನಗದು ಬಹುಮಾನ ಮತ್ತು ಗೌರವ:- ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕ ಮತ್ತು 75,000 ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
    • ಪ್ರಶಸ್ತಿಯ ಬಗ್ಗೆ:- ವಿಜ್ಞಾನ ಕ್ಷೇತ್ರದಲ್ಲಿನ ಭಾಷಾ ಅಂತರವನ್ನು ಕಡಿಮೆ ಮಾಡುವುದು ಮತ್ತು ಸ್ಥಳೀಯ ಜನರಿಗೆ ತಾಂತ್ರಿಕ ಜ್ಞಾನವನ್ನು ಲಭ್ಯವಾಗುವಂತೆ ಮಾಡುವವರನ್ನು ಗುರುತಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
  • ಬ್ಯಾಕ್ಟ್ರಿಯನ್ ಒಂಟೆಗಳು | ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ, 2025

    ಬ್ಯಾಕ್ಟ್ರಿಯನ್ ಒಂಟೆಗಳು

    ಪರಿಸರ

    ಇದೀಗ ಸುದ್ದಿಯಲ್ಲಿದೆ:

    • ದೆಹಲಿಯ ಕರ್ತವ್ಯ ಪಥದಲ್ಲಿ ಜರುಗಿದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಗಲ್ವಾನ್’ ಮತ್ತು ‘ನುಬ್ರಾ’ ಹೆಸರಿನ ಎರಡು ಗಾಂಭೀರ್ಯಪೂರ್ಣ ‘ಬ್ಯಾಕ್ಟ್ರಿಯನ್ ಒಂಟೆ’ಗಳನ್ನು ಪ್ರದರ್ಶಿಸಲಾಯಿತು.
    • ಭಾರತದಲ್ಲಿ ಈ ಪ್ರಭೇದದ ಒಂಟೆಗಳು ಕೇವಲ ಲಡಾಖ್‌ನ ಶೀತ ಮರುಭೂಮಿಯಲ್ಲಿ ಮಾತ್ರ ಕಂಡುಬರುತ್ತವೆ. ಆ ಪ್ರದೇಶಗಳ ಹೆಸರನ್ನೇ ಈ ಎರಡು ಒಂಟೆಗಳಿಗೆ ನಾಮಕರಣ ಮಾಡಲಾಗಿದೆ.

    ಬ್ಯಾಕ್ಟ್ರಿಯನ್ ಒಂಟೆಗಳ ಬಗ್ಗೆ:

    • ವೈಜ್ಞಾನಿಕ ಹೆಸರು:- ಕ್ಯಾಮೆಲಸ್ ಬ್ಯಾಕ್ಟ್ರಿಯನಸ್ 
    • ಹೆಸರಿನ ಮೂಲ:- ಅಫ್ಘಾನಿಸ್ತಾನ, ಇರಾನ್ ಮತ್ತು ಕಝಾಕಿಸ್ತಾನ್ ನಡುವೆ ಇರುವ ‘ಬ್ಯಾಕ್ಟ್ರಿಯಾ’ ಎಂಬ ಐತಿಹಾಸಿಕ ಪ್ರದೇಶದಿಂದ (ಒಂದು ಕಾಲದಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್ ವಶಪಡಿಸಿಕೊಂಡಿದ್ದ ಸಾಮ್ರಾಜ್ಯ) ಈ ಹೆಸರು ಬಂದಿದೆ.
    • ದೈಹಿಕ ಲಕ್ಷಣಗಳು:- ಇದು ವಿಶಿಷ್ಟವಾಗಿ ‘ಎರಡು ಡುಬ್ಬಗಳನ್ನು’ ಹೊಂದಿರುವ ಒಂಟೆಯಾಗಿದ್ದು, ಇದನ್ನು ಏಷ್ಯದ ಅಥವಾ ಮಂಗೋಲಿಯಾದ ಒಂಟೆ ಎಂತಲೂ ಕರೆಯಲಾಗುತ್ತದೆ.
    • ಸಂರಕ್ಷಣಾ ಸ್ಥಾನಮಾನ:- ‘ಐಯುಸಿಎನ್’ (IUCN) ಕೆಂಪು ಪಟ್ಟಿಯಲ್ಲಿ ಇದನ್ನು ‘ತೀವ್ರ ಅಳಿವಿನಂಚಿನಲ್ಲಿರುವ’ (CR) ಪ್ರಭೇದ ಎಂದು ವರ್ಗೀಕರಿಸಲಾಗಿದೆ.
    • ಹಂಚಿಕೆ:- ಇವು ಮುಖ್ಯವಾಗಿ ಉತ್ತರ ಪಾಕಿಸ್ತಾನ, ಇರಾನ್, ಟರ್ಕಿ ಮತ್ತು ಭಾರತದಲ್ಲಿ (ಲಡಾಖ್) ಕಂಡುಬರುತ್ತವೆ. ಇದರ ಅತಿ ದೊಡ್ಡ ದೇಶೀಯ (ಸಾಕಣೆ) ಜನಸಂಖ್ಯೆ ಚೀನಾದಲ್ಲಿದೆ.
    • ಆಹಾರ ಕ್ರಮ:- ಬ್ಯಾಕ್ಟ್ರಿಯನ್ ಒಂಟೆಗಳನ್ನು ಸರ್ವಭಕ್ಷಕ ಎಂದು ಪರಿಗಣಿಸಲಾಗಿದ್ದರೂ, ಅವು ಪ್ರಾಥಮಿಕವಾಗಿ ಸಸ್ಯಾಹಾರಿಗಳಾಗಿವೆ. ಇತರ ಪ್ರಾಣಿಗಳು ತಿನ್ನಲು ನಿರಾಕರಿಸುವ ಮುಳ್ಳಿನ, ಕಠಿಣವಾದ ಅಥವಾ ಒಣಗಿದ ಸಸ್ಯಗಳನ್ನು ಸಹ ಇವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.
    • ಐತಿಹಾಸಿಕ ಮಹತ್ವ: ಪ್ರಾಚೀನ ಕಾಲದಲ್ಲಿ ಇವುಗಳನ್ನು ‘ರೇಷ್ಮೆ ಮಾರ್ಗದ ಹಡಗುಗಳು’ ಎಂದು ಕರೆಯಲಾಗುತ್ತಿತ್ತು. ಮಧ್ಯ ಏಷ್ಯಾದ ಅತ್ಯಂತ ಕಠಿಣವಾದ ಮತ್ತು ನಿರ್ದಯ ಹವಾಮಾನದ ವ್ಯಾಪಾರ ಮಾರ್ಗಗಳನ್ನು ದಾಟುವಲ್ಲಿ ಈ ಒಂಟೆಗಳು ನಿರ್ಣಾಯಕ ಪಾತ್ರ ವಹಿಸಿದ್ದವು.

    ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ, 2025

    ಆಡಳಿತ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿನ, ‘2025 ರ ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕ’ದ ವರದಿಯ ಪ್ರಕಾರ, ವಿಪರೀತ ಸಂಚಾರ ದಟ್ಟಣೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಜಾಗತಿಕವಾಗಿ ಐದನೇ (5ನೇ) ಸ್ಥಾನವನ್ನು ಮತ್ತು ಏಷ್ಯಾ ಖಂಡದಲ್ಲಿ ಎರಡನೇ (2ನೇ) ಸ್ಥಾನವನ್ನು ಪಡೆದುಕೊಂಡಿದೆ.

    ಟಾಮ್‌ಟಾಮ್ ಟ್ರಾಫಿಕ್ ಸೂಚ್ಯಂಕದ ಬಗ್ಗೆ:

    • ಮೌಲ್ಯಮಾಪನದ ಮಾನದಂಡಗಳು:- ಈ ಸೂಚ್ಯಂಕವು ಮುಖ್ಯವಾಗಿ ಸರಾಸರಿ ಪ್ರಯಾಣದ ಸಮಯ, ಸಂಚಾರ ದಟ್ಟಣೆಯ ಮಟ್ಟಗಳು ಮತ್ತು ವಾಹನಗಳ ವೇಗದ ಆಧಾರದ ಮೇಲೆ ವಿಶ್ವದಾದ್ಯಂತ ಪ್ರಮುಖ ನಗರಗಳನ್ನು ಮೌಲ್ಯಮಾಪನ ಮಾಡುತ್ತದೆ.
    • ಬಳಕೆ ಮತ್ತು ಮಹತ್ವ:- ನಗರ ಚಲನಶೀಲತೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಹಾಗೂ ವಿವಿಧ ಪ್ರದೇಶಗಳು ಮತ್ತು ದೇಶಗಳಾದ್ಯಂತ ಸಂಚಾರ ದಟ್ಟಣೆಯ ಪ್ರವೃತ್ತಿಗಳನ್ನು ವಿಶ್ಲೇಷಿಸಿ ಹೋಲಿಸಲು ಈ ಸೂಚ್ಯಂಕವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ.

    ಈ ವರದಿಯ ಪ್ರಮುಖ ಅಂಶಗಳು:

    • ಬೆಂಗಳೂರಿಗೆ ಮೊದಲ ಸ್ಥಾನ: ಬರೋಬ್ಬರಿ ಶೇ. 74.4 ರಷ್ಟು ಸರಾಸರಿ ಸಂಚಾರ ದಟ್ಟಣೆಯ ಮಟ್ಟವನ್ನು ದಾಖಲಿಸುವ ಮೂಲಕ ಬೆಂಗಳೂರು ನಗರವು ಭಾರತದ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ.
    • ವಿಶ್ವದ ಅತಿ ನಿಧಾನಗತಿಯ ನಗರಗಳು:- ವಾಹನಗಳ ಚಲನೆಯ ವೇಗದ ಆಧಾರದ ಮೇಲೆ, ವಿಶ್ವದ ಅತ್ಯಂತ ನಿಧಾನಗತಿಯ ಅಗ್ರ 5 ನಗರಗಳ ಪಟ್ಟಿಯಲ್ಲಿ ಭಾರತದ ಎರಡು ನಗರಗಳಾದ ಬೆಂಗಳೂರು ಮತ್ತು ಕೋಲ್ಕತ್ತಾ ಸ್ಥಾನ ಪಡೆದಿವೆ.
    • ಏಷ್ಯಾದ ಅಗ್ರ 10 ರಲ್ಲಿ ಭಾರತದ ಹಲವು ನಗರಗಳು:- ಏಷ್ಯಾದ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಅಗ್ರ 10 ನಗರಗಳ ಪೈಕಿ ಬರೋಬ್ಬರಿ 6 ನಗರಗಳು ಭಾರತದ್ದಾಗಿವೆ.
    • ಅವುಗಳೆಂದರೆ: ಬೆಂಗಳೂರು (1ನೇ ಸ್ಥಾನ), ಪುಣೆ (2ನೇ ಸ್ಥಾನ), ಮುಂಬೈ (6), ನವದೆಹಲಿ (7), ಕೋಲ್ಕತ್ತಾ (9), ಮತ್ತು ಜೈಪುರ (10ನೇ ಸ್ಥಾನ).
  • ಆಕ್ಟಿವಿಟಿ ಪಾಯಿಂಟ್ ಟ್ರ್ಯಾಕಿಂಗ್ ಸಿಸ್ಟಮ್ (APTS) ಮೊಬೈಲ್ ಅಪ್ಲಿಕೇಶನ್

    ಆಕ್ಟಿವಿಟಿ ಪಾಯಿಂಟ್ ಟ್ರ್ಯಾಕಿಂಗ್ ಸಿಸ್ಟಮ್ (APTS) ಮೊಬೈಲ್ ಅಪ್ಲಿಕೇಶನ್

    ಇದೀಗ ಸುದ್ದಿಯಲ್ಲಿದೆ:

    • ವಿದ್ಯಾರ್ಥಿಗಳು ಅಂಕಗಳಿಕೆಗಾಗಿ ಮಾಡುವ ವಂಚನೆಯನ್ನು ತಡೆಗಟ್ಟಲು, ಚಟುವಟಿಕೆಯ ಅಂಕಗಳನ್ನು ಮೇಲ್ವಿಚಾರಣೆ ಮಾಡುವ ಆ್ಯಪ್ ಅನ್ನು ವಿಶ್ವಶ್ವೇರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಾರಂಭಿಸಲಿದೆ.

    ‘APTS ಮೊಬೈಲ್ ಅಪ್ಲಿಕೇಶನ್’ ಬಗ್ಗೆ:

    • ಅಭಿವೃದ್ಧಿಪಡಿಸಿದವರು:- ಇದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಅಭಿವೃದ್ಧಿಪಡಿಸಿದೆ.
    • ಉದ್ದೇಶ: ವಿದ್ಯಾರ್ಥಿಗಳು ಚಟುವಟಿಕೆ ಅಂಕಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸುವ ಅನೈತಿಕ ಅಭ್ಯಾಸವನ್ನು ತಡೆಯುವುದು, ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನೈಜವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ‘ಆಕ್ಟಿವಿಟಿ ಪಾಯಿಂಟ್ ಟ್ರ್ಯಾಕಿಂಗ್ ಸಿಸ್ಟಮ್’ (APTS) ಮೊಬೈಲ್ ‘ಅಪ್ಲಿಕೇಶನ್‌’ನ ಉದ್ದೇಶವಾಗಿದೆ.
    • ಗುರಿ ಗುಂಪು: ಎಐಸಿಟಿಇ (AICTE) 2018-19 ರಿಂದ ಕಡ್ಡಾಯಗೊಳಿಸಿರುವಂತೆ, ಪದವಿಗೆ ಅರ್ಹತೆ ಪಡೆಯಲು ನಾಲ್ಕು ವರ್ಷಗಳ ಕೋರ್ಸ್‌ನಲ್ಲಿ ಕನಿಷ್ಠ 100ಕ್ಕೆ 75 ಚಟುವಟಿಕೆ ಅಂಕಗಳನ್ನು ಗಳಿಸಬೇಕಾದ ವಿಟಿಯು ಅಡಿಯಲ್ಲಿರುವ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ.
    • ಕಾರ್ಯವಿಧಾನ:- ಈ ವ್ಯವಸ್ಥೆಯು ಕಡ್ಡಾಯ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ವಿದ್ಯಾರ್ಥಿಗಳು ತಾವು ಅನುಮೋದಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿ ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳನ್ನು ಇದರಲ್ಲಿ ಅಪ್‌ಲೋಡ್ ಮಾಡಬೇಕು.
    • ಉದ್ದೇಶಗಳು: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಸಾಮರ್ಥ್ಯಗಳು, ಸಾಮಾಜಿಕ ಬದ್ಧತೆ, ಮೃದು ಕೌಶಲ್ಯಗಳು, ನಾಯಕತ್ವ ಗುಣಗಳು ಮತ್ತು ತಂಡಮನೋಭಾವವನ್ನು ಬೆಳೆಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
    • ಪ್ರಮುಖ ಚಟುವಟಿಕೆಗಳು:- ಅರ್ಹ ಚಟುವಟಿಕೆಗಳಲ್ಲಿ ಹಳ್ಳಿಯ ಆದಾಯ ಹೆಚ್ಚಳಕ್ಕೆ ವ್ಯಾಪಾರ ಪ್ರಸ್ತಾಪಗಳನ್ನು ಸಿದ್ಧಪಡಿಸುವುದು, ಸುಸ್ಥಿರ ನೀರು ನಿರ್ವಹಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಪ್ರವಾಸೋದ್ಯಮ ಅಥವಾ ಸೂಕ್ತ ತಂತ್ರಜ್ಞಾನಗಳನ್ನು ಉತ್ತೇಜಿಸುವುದು, ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಗ್ರಾಮೀಣ ಜನಸಂಖ್ಯೆಗೆ ಕೌಶಲ್ಯ ನೀಡುವುದು ಮತ್ತು ಶೇಕಡಾ 100 ರಷ್ಟು ಡಿಜಿಟಲೀಕರಿಸಿದ ಹಣದ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವುದು ಸೇರಿವೆ.
  • ಶ್ರೀ ನಾರಾಯಣ್ ರಾಮಚಂದ್ರನ್ ಸಮಿತಿ | ಅಗರ್‌ವುಡ್ (Agarwood)

    ಶ್ರೀ ನಾರಾಯಣ್ ರಾಮಚಂದ್ರನ್ ಸಮಿತಿ

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ:

    • ಇತ್ತೀಚಿಗೆ, ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು’ (PFRDA) ‘ಕಾರ್ಯತಂತ್ರದ ಆಸ್ತಿ ಹಂಚಿಕೆ ಮತ್ತು ಅಪಾಯ ನಿರ್ವಹಣಾ ಸಮಿತಿ’ (SAARG) ಎಂಬ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

    ಈ ಸಮಿತಿಯ ಬಗ್ಗೆ:

    • ಅಧ್ಯಕ್ಷತೆ:- ಶ್ರೀ ನಾರಾಯಣ್ ರಾಮಚಂದ್ರನ್
    • ಉದ್ದೇಶ:- ‘ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ’ಯ (NPS) ಹೂಡಿಕೆ ಚೌಕಟ್ಟನ್ನು ಸಂಪೂರ್ಣವಾಗಿ ಆಧುನೀಕರಿಸಲು ಮತ್ತು ಸಮಗ್ರವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆ.

    ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯ ಬಗ್ಗೆ:

    • ಸ್ವಭಾವ:- ಇದು 18 ರಿಂದ 70 ವರ್ಷದೊಳಗಿನ ಭಾರತೀಯ ನಾಗರಿಕರಿಗಾಗಿ ರೂಪಿಸಲಾದ ಸ್ವಯಂಪ್ರೇರಿತ ಮತ್ತು ಮಾರುಕಟ್ಟೆ ಸಂಯೋಜಿತ ನಿವೃತ್ತಿ ಉಳಿತಾಯ ಯೋಜನೆಯಾಗಿದೆ.
    • ನಿಯಂತ್ರಣ:- ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ (PFRDA).
    • ಉದ್ದೇಶ:- ನಾಗರಿಕರ ನಿವೃತ್ತಿಯ ನಂತರ ಅವರಿಗೆ ನಿಯಮಿತವಾದ ಪಿಂಚಣಿ ಆದಾಯವನ್ನು ಒದಗಿಸುವ ದೃಷ್ಟಿಯಿಂದ, ದುಡಿಯುವ ವಯಸ್ಸಿನಲ್ಲಿ ವ್ಯವಸ್ಥಿತ ಉಳಿತಾಯವನ್ನು ಮಾಡಲು ಇದು ಜನರನ್ನು ಪ್ರೋತ್ಸಾಹಿಸುತ್ತದೆ.

    ಅಗರ್‌ವುಡ್ (Agarwood)

    ಆರ್ಥಿಕತೆ

    ಇದೀಗ ಸುದ್ದಿಯಲ್ಲಿದೆ: 

    • ತ್ರಿಪುರಾದಲ್ಲಿ 80 ಕೋಟಿ ರೂ. ವೆಚ್ಚದ ‘ಅಗರ್‌ವುಡ್ ಮೌಲ್ಯ ಸರಪಳಿ ಅಭಿವೃದ್ಧಿ ಯೋಜನೆ’ಗೆ ಕೇಂದ್ರ ಸಚಿವರು ಇತ್ತೀಚಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಶಾನ್ಯ ಭಾರತದ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

    ಅಗರ್‌ವುಡ್ ಬಗ್ಗೆ:

    • ರೂಪುಗೊಳ್ಳುವಿಕೆ:- ಅಗರ್‌ವುಡ್ ಎಂಬುದು ಅತ್ಯಂತ ಅಪರೂಪದ ಹಾಗೂ ಸುವಾಸನೆಭರಿತ ಮರವಾಗಿದೆ. ‘ಅಕ್ವಿಲೇರಿಯಾ’ ಜಾತಿಗೆ ಸೇರಿದ ಮರಗಳಿಗೆ ಗಾಯವಾದಾಗ ಅಥವಾ ಸೋಂಕು ತಗುಲಿದಾಗ, ಮರವು ತನ್ನ ರಕ್ಷಣೆಗಾಗಿ ವಿಶೇಷವಾದ ಕಪ್ಪು ಬಣ್ಣದ ರಾಳವನ್ನು ಉತ್ಪಾದಿಸುತ್ತದೆ.ರಾಳ-ಭರಿತ ಭಾಗವೇ ‘ಅಗರ್‌ವುಡ್’ ಆಗಿ ಮಾರ್ಪಡುತ್ತದೆ.
    • ಉಪಯೋಗಗಳು ಮತ್ತು ವಹಿವಾಟು:- ರಾಳದಿಂದ ಸಮೃದ್ಧವಾಗಿರುವ ಈ ಮರವನ್ನು ಹೆಚ್ಚಿನ ಮೌಲ್ಯದ ಸುಗಂಧ ತೈಲಗಳು (ಔದ್), ಅಗರಬತ್ತಿ ಮತ್ತು ಸಾಂಪ್ರದಾಯಿಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಇದು ಜಾಗತಿಕವಾಗಿ ಅತಿ ಹೆಚ್ಚು ವಹಿವಾಟು ಹೊಂದಿದೆ.
    • ಬೆಳೆಯುವ ಪ್ರದೇಶಗಳು:- ತ್ರಿಪುರಾ ಮತ್ತು ಈಶಾನ್ಯ ಭಾರತದ ಇತರ ಭಾಗಗಳು ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಉಷ್ಣವಲಯದ, ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಇದು ಪ್ರಮುಖವಾಗಿ ಕಂಡುಬರುತ್ತದೆ. ಇಲ್ಲಿನ ಹವಾಮಾನ ಮತ್ತು ಮಣ್ಣು ಅಕ್ವಿಲೇರಿಯಾ ಮರಗಳ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿದೆ.
    • ಅಪರೂಪ ಮತ್ತು ದುಬಾರಿ:- ನೈಸರ್ಗಿಕವಾಗಿ ಕೇವಲ ಕೆಲವೇ ಕೆಲವು ಮರಗಳು ಮಾತ್ರ ಈ ರಾಳವನ್ನು ಉತ್ಪಾದಿಸುತ್ತವೆ. ಅಲ್ಲದೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು ದಶಕಗಳೇ ಬೇಕಾಗಬಹುದು. ಇದೇ ಕಾರಣಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಗರ್‌ವುಡ್ ಅತ್ಯಂತ ಅಪರೂಪ ಹಾಗೂ ದುಬಾರಿಯಾಗಿದೆ (ಇದನ್ನು ‘ದ್ರವ ಚಿನ್ನ’ ಎಂದೂ ಕರೆಯಲಾಗುತ್ತದೆ).
  • ಬೆಂಗಳೂರಿನ ಸೇನಾ ಅಧಿಕಾರಿಗೆ 2025ರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ

    ಬೆಂಗಳೂರಿನ ಸೇನಾ ಅಧಿಕಾರಿಗೆ 2025ರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ

    ಇದೀಗ ಸುದ್ದಿಯಲ್ಲಿದೆ:

    • ಬೆಂಗಳೂರಿನ ಭಾರತೀಯ ಸೇನಾ ಅಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ತಮ್ಮ ‘ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್’ (ಸಮಾನ ಪಾಲುದಾರರು, ಶಾಶ್ವತ ಶಾಂತಿ) ಯೋಜನೆಗಾಗಿ 2025ರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

    ಪ್ರಶಸ್ತಿ ವಿವರಗಳು:

    • ಪುರಸ್ಕೃತರು: ಬೆಂಗಳೂರು ಮೂಲದ ಭಾರತೀಯ ಸೇನಾ ಅಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
    • ಪ್ರಸ್ತುತ ಪಾತ್ರ: ಇವರು ಪ್ರಸ್ತುತ ದಕ್ಷಿಣ ಸುಡಾನ್‌ ದೇಶದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
    • ಪ್ರಶಸ್ತಿ:- “ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್” ಎಂಬ ಶೀರ್ಷಿಕೆಯ ತಮ್ಮ ಯೋಜನೆಗಾಗಿ ಅವರು 2025ರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಯೋಜನೆಯ ಬಗ್ಗೆ:

    • ಈ ಯೋಜನೆಯ ಶೀರ್ಷಿಕೆ “ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್” ಎಂಬುದಾಗಿದೆ.
    • ಉದ್ದೇಶ: ಮಿಷನ್‌ನ ಜವಾಬ್ದಾರಿಯ ವ್ಯಾಪ್ತಿಯಲ್ಲಿ ಲಿಂಗ ಸಮಾನತೆಯನ್ನು ಗಣನೀಯವಾಗಿ ಹೆಚ್ಚಿಸುವುದು ಮತ್ತು ತಳಮಟ್ಟದ ಒಳಗೊಳ್ಳುವಿಕೆಯನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.