KEO (ಜ್ಞಾನ ಚಾಲಿತ, ಆರ್ಥಿಕವಾಗಿ, ಮುಕ್ತ ಮೂಲ) ಗಣಕಯಂತ್ರ
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು, ಕಿಯೋನಿಕ್ಸ್ (KEONICS) ಸಹಯೋಗದೊಂದಿಗೆ ‘KEO’ ಎಂಬ ನೂತನ ವೈಯಕ್ತಿಕ ಗಣಕಯಂತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಕೈಗೆಟುಕುವ ದರದಲ್ಲಿದೆ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಪೂರಕವಾಗಿದೆ.
KEO (ಜ್ಞಾನ ಚಾಲಿತ, ಆರ್ಥಿಕವಾಗಿ, ಮುಕ್ತ ಮೂಲ) ಗಣಕಯಂತ್ರದ ಬಗ್ಗೆ:
- ಇದೊಂದು ಅತ್ಯಂತ ಕಡಿಮೆ ದರದ ಮತ್ತು ಸಾಂದ್ರ ವಿನ್ಯಾಸದ (ಚಿಕ್ಕ ಗಾತ್ರದ) ವೈಯಕ್ತಿಕ ಕಂಪ್ಯೂಟರ್ ಆಗಿದ್ದು, ಇದನ್ನು ರಾಜ್ಯದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕಿಯೋನಿಕ್ಸ್ (KEONICS) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ನವೆಂಬರ್ 2025 ರಲ್ಲಿ ನಡೆದ ಪ್ರತಿಷ್ಠಿತ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯಲ್ಲಿ ಇದಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
- ಉದ್ದೇಶ: ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ವಿದ್ಯಾರ್ಥಿಗಳು, ಗೃಹ ಬಳಕೆದಾರರು ಹಾಗೂ ಸಣ್ಣ ಉದ್ದಿಮೆಗಳಿಗೆ ಕೈಗೆಟುಕುವ ದರದಲ್ಲಿ, ಕೃತಕ ಬುದ್ಧಿಮತ್ತೆ – ಚಾಲಿತ ಗಣಕೀಕರಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.
ಡಿಜಿಟಲ್ ನಾಗರೀಕ್ ಕಾರ್ಯಕ್ರಮ
ಇದೀಗ ಸುದ್ದಿಯಲ್ಲಿದೆ:
- ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ‘ಡಿಜಿಟಲ್ ನಾಗರೀಕ್ ಕಾರ್ಯಕ್ರಮ’ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಡಿಜಿಟಲ್ ನಾಗರೀಕ್ ಕಾರ್ಯಕ್ರಮದ ಬಗ್ಗೆ:
- ಉದ್ದೇಶ: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಲ್ಲಿ ಸೈಬರ್ ಭದ್ರತೆ ಹಾಗೂ ಡಿಜಿಟಲ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು.
- ವ್ಯಾಪ್ತಿ: 6 ನೇ ತರಗತಿಯಿಂದ 10 ನೇ ತರಗತಿಯವರೆಗಿನ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಮತ್ತು 1 ಲಕ್ಷ ಶಿಕ್ಷಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
- ವಿಷಯವಸ್ತು: ಸುರಕ್ಷಿತ ಇಂಟರ್ನೆಟ್ ಬಳಕೆ, ಸೈಬರ್ ಸುರಕ್ಷತಾ ನಿಯಮಗಳು, ಆನ್ಲೈನ್ ಶಿಷ್ಟಾಚಾರ, ಡಿಜಿಟಲ್ ಹಕ್ಕುಗಳು, ಜವಾಬ್ದಾರಿ ಮತ್ತು ದತ್ತಾಂಶ ಗೌಪ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತದೆ.
- ಅನುಷ್ಠಾನ: ಈ ಕಾರ್ಯಕ್ರಮವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಸಾಮಾಜಿಕ ಜಾಲತಾಣ ಸಂಸ್ಥೆ ‘ಮೆಟಾ‘ ದ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತದೆ.
- 2024-25 ನೇ ಸಾಲಿನಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು.
- ತರಬೇತಿ: ಈ ಉಪಕ್ರಮದ ಭಾಗವಾಗಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (DSERT) ಆರಂಭಿಕ ಹಂತದಲ್ಲಿ ‘ದಿಶಾ ಪೋರ್ಟಲ್’ ಮೂಲಕ 1,00,000 ಶಿಕ್ಷಕರಿಗೆ ತರಬೇತಿ ನೀಡಲಿದೆ. ತರಬೇತಿ ಪಡೆದ ಶಿಕ್ಷಕರು ನಂತರ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ.
- ಡಿಜಿಟಲ್ ನಾಗರೀಕರ ಟೂಲ್ಕಿಟ್ (ಸಾಧನಗಳ ಸಂಕಲನ): ಸುರಕ್ಷಿತ ಮತ್ತು ಜವಾಬ್ದಾರಿಯುತ ಆನ್ಲೈನ್ ನಡವಳಿಕೆಯನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸಲು ಶಾಲೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಟೂಲ್ಕಿಟ್ ಅನ್ನು ಹಂಚಿಕೊಳ್ಳಲಾಗುವುದು.



ನಿಮ್ಮದೊಂದು ಉತ್ತರ