66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಅಮೆರಿಕವು ವಿಶ್ವಸಂಸ್ಥೆಯ 31 ಘಟಕಗಳು ಮತ್ತು ವಿಶ್ವಸಂಸ್ಥೆಯೇತರ 35 ಸಂಸ್ಥೆಗಳು ಸೇರಿದಂತೆ ಒಟ್ಟು 66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸಿದೆ.
- ಈ ಸಂಸ್ಥೆಗಳಲ್ಲಿ ಹವಾಮಾನ, ಇಂಧನ ಮತ್ತು ವಿಜ್ಞಾನ ವೇದಿಕೆಗಳಾದ
- ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (UNFCCC),
- ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರಿ ಸಮಿತಿ (IPCC),
- ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಮತ್ತು
- ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಸೇರಿವೆ.
ಅಮೆರಿಕದ ನಿರ್ಗಮನಕ್ಕೆ ಕಾರಣಗಳು:
- ಸಾರ್ವಭೌಮತ್ವದ ಕಳವಳ:- ದೇಶೀಯ ನೀತಿಯ ಸ್ವಾಯತ್ತತೆಯನ್ನು ನಿಯಂತ್ರಿಸುತ್ತವೆ ಅಥವಾ ಮಿತಿಗೊಳಿಸುತ್ತವೆ ಎಂದು ಭಾವಿಸಲಾದ, ಕಡ್ಡಾಯವಾಗಿ ಪಾಲಿಸಬೇಕಾದ ಅಂತರರಾಷ್ಟ್ರೀಯ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುವುದು.
- ಸಾಂಸ್ಥಿಕ ಪಕ್ಷಪಾತದ ಗ್ರಹಿಕೆ:- ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ರಾಜಕೀಕರಣ, ಅದಕ್ಷತೆ ಮತ್ತು ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಪಕ್ಷಪಾತದ ಧೋರಣೆಗಳು.
- ದೇಶೀಯ ರಾಜಕೀಯ ಒತ್ತಡಗಳು:- ಬಹುಪಕ್ಷೀಯ ಬದ್ಧತೆಗಳನ್ನು, ಸೀಮಿತ ನೇರ ಚುನಾವಣಾ ಲಾಭಗಳನ್ನು ನೀಡುವ ‘ದುಬಾರಿ ಬಾಧ್ಯತೆ’ಗಳಾಗಿ ಪರಿಗಣಿಸುತ್ತಿರುವುದು.
- ಹೊರೆ ಹಂಚಿಕೆ ವಾದ:- ಜಾಗತಿಕ ಸಂಸ್ಥೆಗಳಿಗೆ ಅಮೆರಿಕವು ಅಸಮಾನವಾಗಿ (ಅಗತ್ಯಕ್ಕಿಂತ ಹೆಚ್ಚು) ಕೊಡುಗೆ ನೀಡುತ್ತಿದೆ ಎಂಬ ಪ್ರತಿಪಾದನೆಯೂ ಕೂಡ ಕಾರಣಗಳಲ್ಲಿ ಒಂದಾಗಿದೆ.
- ಕಾರ್ಯತಂತ್ರದ ಮರುಹೊಂದಾಣಿಕೆ:- ಸಾರ್ವತ್ರಿಕ ಸಂಸ್ಥೆಗಳಿಗಿಂತ ದ್ವಿಪಕ್ಷೀಯ ಅಥವಾ ಕಿರು-ಪಕ್ಷೀಯ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು.
- ಕಾರ್ಯತಂತ್ರದ ಪೈಪೋಟಿ:- ಪ್ರತಿಸ್ಪರ್ಧಿಗಳು ಪ್ರಭಾವ ಬೀರುವ ವೇದಿಕೆಗಳನ್ನು ಮಿತಿಗೊಳಿಸುವ ಅಥವಾ ನಿಯಂತ್ರಿಸುವ ಬಯಕೆಯೂ ಕೂಡ ಈ ಕಾರಣಗಳಲ್ಲಿ ಸೇರಿದೆ.
ಸಂಭಾವ್ಯ ಪರಿಣಾಮಗಳು:
- ಹವಾಮಾನ ಬದಲಾವಣೆ ಹೋರಾಟಕ್ಕೆ ಹಿನ್ನಡೆ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳನ್ನು ಇದು ದುರ್ಬಲಗೊಳಿಸುತ್ತದೆ. ಅಲ್ಲದೆ, ಹವಾಮಾನ ಬದ್ಧತೆಗಳು ಹಾಗೂ ಹಣಕಾಸಿನ ನೆರವಿನ ಭರವಸೆಗಳನ್ನು ವಿಳಂಬ ಮಾಡಲು ಇತರ ದೇಶಗಳಿಗೆ ನೆಪವನ್ನು ಒದಗಿಸುತ್ತದೆ.
- ಬಹುಪಕ್ಷೀಯತೆಯ ವಿಘಟನೆ:- ಇದು ಅಂತರರಾಷ್ಟ್ರೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ಪ್ರಬಲ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ತೀವ್ರಗೊಳಿಸಿ, ರಕ್ಷಣಾತ್ಮಕ ನೀತಿಗಳು ಹಾಗೂ ಸಣ್ಣ ತಾತ್ಕಾಲಿಕ ಪ್ರಾದೇಶಿಕ ಬಣಗಳತ್ತ ಸಾಗುವ ಪ್ರವೃತ್ತಿಯನ್ನು ವೇಗಗೊಳಿಸುತ್ತದೆ.
- ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಕುಸಿತ:– ಅಮೆರಿಕದ ಅನುದಾನ ಕಡಿತವು ಈಗಾಗಲೇ ಕ್ಷೀಣಿಸುತ್ತಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
- ಜಾಗತಿಕ ಶಾಂತಿ ಮತ್ತು ಭದ್ರತಾ ಅಪಾಯಗಳು:- ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಂತಹ ಸಂಸ್ಥೆಗಳಿಗೆ ಅಮೆರಿಕದ ಬೆಂಬಲ ಕಡಿಮೆಯಾಗುವುದರಿಂದ, ವಿಶೇಷವಾಗಿ ಆಫ್ರಿಕಾ ಮತ್ತು ಕೆರಿಬಿಯನ್ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮತ್ತು ಸಂಘರ್ಷದ ನಂತರದ ಚೇತರಿಕೆಗೆ ಅಡ್ಡಿಯಾಗುತ್ತದೆ.
- ಜಾಗತಿಕ ನಿಯಮಗಳ ದುರ್ಬಲಗೊಳ್ಳುವಿಕೆ:– ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಕಟ್ಟುಪಾಡುಗಳನ್ನು ಆಯ್ದು ಪಾಲಿಸುವಂತೆ ಇದು ಇತರ ರಾಷ್ಟ್ರಗಳನ್ನು ಉತ್ತೇಜಿಸುತ್ತದೆ.
- ನಾಯಕತ್ವದ ನಿರ್ವಾತ:- ಜಾಗತಿಕ ನಿಯಮಗಳು ಮತ್ತು ಸಂಸ್ಥೆಗಳನ್ನು ರೂಪಿಸಲು ಇತರ ಪ್ರಮುಖ ಶಕ್ತಿಗಳಿಗೆ ಇದು ಅವಕಾಶವನ್ನು ಸೃಷ್ಟಿಸುತ್ತದೆ.
ಡೂಮ್ಸ್ಡೇ ಹಿಮನದಿ
ಸಾಮಾನ್ಯ ಅಧ್ಯಯನ-1/ ಭೂಗೋಳಶಾಸ್ತ್ರ; ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ:
- ‘ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಅರ್ಥ್ ಸರ್ಫೇಸ್’ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು, ಥ್ವೈಟ್ಸ್ ಹಿಮನದಿ ಪ್ರದೇಶದಲ್ಲಿನ ಇತ್ತೀಚಿನ ರಚನಾತ್ಮಕ ಬದಲಾವಣೆಗಳನ್ನು ವಿವರಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಅಂಟಾರ್ಕ್ಟಿಕ್ನ ಇತರ ಹಿಮ ತೊರೆ (ಐಸ್ ಶೆಲ್ಫ್)ಗಳುಹೇಗೆ ಕುಸಿಯಬಹುದು ಎಂಬುದನ್ನು ಇದು ವಿಶ್ಲೇಷಿಸಿದೆ.
ಡೂಮ್ಸ್ಡೇ ಹಿಮನದಿ (ಥ್ವೈಟ್ಸ್ ಹಿಮನದಿ)ಯ ಬಗ್ಗೆ:
- ಇದು ಪಶ್ಚಿಮ ಅಂಟಾರ್ಕ್ಟಿಕ್ ಹಿಮ ಪಟಲ/ಪದರ (WAIS)ದ ಒಂದು ಹೊರಹರಿಯುವ ಹಿಮನದಿಯಾಗಿದ್ದು, ಅಮುಂಡ್ಸನ್ ಸಮುದ್ರವನ್ನು ಸೇರುತ್ತದೆ.
- ಸಮುದ್ರದ ಮಟ್ಟದಲ್ಲಿ ಭಾರಿ ಏರಿಕೆಯನ್ನು ಉಂಟುಮಾಡುವ ಇದರ ಸಾಮರ್ಥ್ಯದಿಂದಾಗಿ, ಇದಕ್ಕೆ ‘ಡೂಮ್ಸ್ಡೇ ಹಿಮನದಿ’ ಎಂತಲೂ ಕರೆಯಲಾಗುತ್ತದೆ.
- ಕುಸಿತದ ಪರಿಣಾಮ:- ಡೂಮ್ಸ್ಡೇ ಹಿಮನದಿಯ ಸಂಪೂರ್ಣ ನಾಶವು (ಕುಸಿತವು) ಜಾಗತಿಕ ಸಮುದ್ರ ಮಟ್ಟದಲ್ಲಿ 3 ಮೀಟರ್ಗಳಷ್ಟು ಏರಿಕೆಗೆ ಕಾರಣವಾಗಬಹುದು.
ಅಂಟಾರ್ಕ್ಟಿಕ್ ಒಪ್ಪಂದದ ಸಂರಕ್ಷಣಾ ಪ್ರಯತ್ನಗಳು:
- ಒಳಗೊಂಡಿರುವ ಪ್ರದೇಶ:- ಈ ಒಪ್ಪಂದವು 60° ದಕ್ಷಿಣ ಅಕ್ಷಾಂಶದ ದಕ್ಷಿಣಕ್ಕಿರುವ ಪ್ರದೇಶವನ್ನು ಒಳಗೊಂಡಿದೆ.
- ಉದ್ದೇಶ:- ಅಂಟಾರ್ಕ್ಟಿಕಾವನ್ನು ಸೇನಾಮುಕ್ತಗೊಳಿಸುವ ಉದ್ದೇಶದೊಂದಿಗೆ 1959ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇದಕ್ಕೆ ಸಹಿ ಹಾಕಲಾಯಿತು.
- ಒಪ್ಪಂದದ ನಿಯಮಗಳಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು, ಇದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗುತ್ತದೆ.
- ಭಾರತವು 1983ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು.
ಅಂಟಾರ್ಕ್ಟಿಕ್ ಸಮುದ್ರ (ಕಡಲ) ಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಸಮಾವೇಶ (CCAMLR):
- ಈ ಸಮಾವೇಶಕ್ಕೆ 1980ರಲ್ಲಿ ಕ್ಯಾನ್ಬೆರಾದಲ್ಲಿ (ಆಸ್ಟ್ರೇಲಿಯಾ) ಸಹಿ ಹಾಕಲಾಯಿತು.
- ಉದ್ದೇಶ:- ಅಂಟಾರ್ಕ್ಟಿಕಾ ಪರಿಸರವನ್ನು ರಕ್ಷಿಸಿ ಸಂರಕ್ಷಿಸುವುದು ಹಾಗೂ ವಿಶೇಷವಾಗಿ ಅಂಟಾರ್ಕ್ಟಿಕಾದ ಸಮುದ್ರೀಯ ಜೀವ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಿಸುವುದು.
- ಭಾರತವು 1985ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು.
ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಸಂಬಂಧಿಸಿದ ಪರಿಸರ ಸಂರಕ್ಷಣೆಯ ಶಿಷ್ಟಾಚಾರ (ಮ್ಯಾಡ್ರಿಡ್ ಪ್ರೋಟೋಕಾಲ್):
- ಈ ಒಪ್ಪಂದಕ್ಕೆ 1991ರಲ್ಲಿ ಮ್ಯಾಡ್ರಿಡ್ನಲ್ಲಿ (ಸ್ಪೇನ್) ಸಹಿ ಹಾಕಲಾಯಿತು.
- ಉದ್ದೇಶ:- ಇದು ಅಂಟಾರ್ಕ್ಟಿಕ್ ಒಪ್ಪಂದ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಅಂಟಾರ್ಕ್ಟಿಕ್ ಪರಿಸರ ಹಾಗೂ ಅದರ ಅವಲಂಬಿತ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
- ಭಾರತವು 1998ರಲ್ಲಿ ಈ ಶಿಷ್ಟಾಚಾರವನ್ನು ದೃಢೀಕರಿಸಿತು.
ರಾಷ್ಟ್ರೀಯ ಅಂಟಾರ್ಕ್ಟಿಕ್ ಕಾರ್ಯಕ್ರಮದ ವ್ಯವಸ್ಥಾಪಕರ ಮಂಡಳಿ (COMNAP):
- ಭಾರತವು ಇದರ ಸದಸ್ಯ ರಾಷ್ಟ್ರವೂ ಆಗಿದ್ದು, ಇದು ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರಗಳ ಪೈಕಿ ಭಾರತ ಹೊಂದಿರುವ ಮಹತ್ವದ ಸ್ಥಾನವನ್ನು ತೋರಿಸುತ್ತದೆ.
ಮಾಧವ್ ಗಾಡ್ಗೀಳ್
ಸಾಮಾನ್ಯ ಅಧ್ಯಯನ-3/ ಪರಿಸರ; ಸುದ್ದಿಯಲ್ಲಿರುವ ವ್ಯಕ್ತಿಗಳು
ಇದೀಗ ಸುದ್ದಿಯಲ್ಲಿದೆ:
- ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಮಾಡಿದ ತಮ್ಮ ಮಹತ್ವದ ಕಾರ್ಯಕ್ಕಾಗಿ ಪ್ರಸಿದ್ಧರಾಗಿದ್ದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ಅವರು ನಿಧನರಾಗಿದ್ದಾರೆ.
ಪ್ರಮುಖ ಕೊಡುಗೆಗಳು:
- ಗಾಡ್ಗೀಳ್ ಆಯೋಗ, 2010:- ಪರಿಸರ ಮತ್ತು ಅರಣ್ಯ ಸಚಿವಾಲಯವು ‘ಗಾಡ್ಗೀಳ್ ಆಯೋಗ’ ಎಂದೇ ಪರಿಚಿತವಾಗಿರುವ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP) ಅಧ್ಯಕ್ಷರನ್ನಾಗಿ ಮಾಧವ್ ಗಾಡ್ಗೀಳ್ ಅವರನ್ನು ನೇಮಿಸಿತು.
- ಅವರು 2011ರ ತಮ್ಮ ವರದಿಯಲ್ಲಿ, 6 ರಾಜ್ಯಗಳಲ್ಲಿ ವ್ಯಾಪಿಸಿರುವ 1,40,000 ಚ.ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿನ 64% ಪ್ರದೇಶವನ್ನು “ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳು” (ESAs) ಎಂದು ವರ್ಗೀಕರಿಸುವಂತೆ ಶಿಫಾರಸು ಮಾಡಿದ್ದರು.
- ಇದರಿಂದ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಬಿಸಿತಾಣಗಳು (ಹಾಟ್ಸ್ಪಾಟ್’) ಆಗಿರುವ ಮಹತ್ವ ಹಾಗೂ ಅವುಗಳನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಪ್ರಯತ್ನಗಳ ಕುರಿತು ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯಲು ಕಾರಣವಾಯಿತು.
- ನೀಲಗಿರಿ- ಜೀವಗೋಳ ಮೀಸಲು ತಾಣ:- 1986ರಲ್ಲಿ ನೀಲಗಿರಿಯನ್ನು ಭಾರತದ ಮೊದಲ ಜೀವಗೋಳ ಮೀಸಲು ತಾಣವನ್ನಾಗಿ ಘೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
- ನಂತರ ಅವರು ಜೈವಿಕ ವೈವಿಧ್ಯತೆ ಕಾಯ್ದೆ-2002 ಮತ್ತು ಅರಣ್ಯ ಹಕ್ಕುಗಳ ಕಾಯ್ದೆ-2006 ಅನ್ನು ರೂಪಿಸುವಲ್ಲಿ ನೆರವಾದರು.
- ಅವರು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ರಾಷ್ಟ್ರೀಯ ಹುಲಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಶೈಕ್ಷಣಿಕ ಸಂಶೋಧನೆಯನ್ನು ತಳಮಟ್ಟದ ಪರಿಸರ ಚಳವಳಿಯೊಂದಿಗೆ ಯಶಸ್ವಿಯಾಗಿ ಬೆಸೆಯುವ ಕಾರ್ಯ ಮಾಡಿದರು.
- ಅವರ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ (1992), ಪದ್ಮಭೂಷಣ (2006), ಪರಿಸರ ಸಾಧನೆಗಾಗಿ ನೀಡುವ ಟೈಲರ್ ಪ್ರಶಸ್ತಿ (2015) ಮತ್ತು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (UNEP) ನೀಡುವ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ (2024) ಸೇರಿದಂತೆ ಪ್ರಮುಖ ಗೌರವಗಳನ್ನು ನೀಡಿ ಪುರಸ್ಕರಿಸಲಾಗಿದೆ.
- ಪಶ್ಚಿಮ ಘಟ್ಟಗಳಲ್ಲಿನ ಅವರ ಕಾರ್ಯಕ್ಕಾಗಿ-‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ:- ವಾರ್ಷಿಕವಾಗಿ ನೀಡಲಾಗುವ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. ಪಶ್ಚಿಮ ಘಟ್ಟಗಳಲ್ಲಿನ ಅವರ ಮಹತ್ವದ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.



ನಿಮ್ಮದೊಂದು ಉತ್ತರ