“ಹೈಜೀನ್ ಆನ್ ಗೋ”- ಸಂಚಾರಿ ನೈರ್ಮಲ್ಯ ವಾಹನ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಬೆಂಗಳೂರು ನಗರ ಪೊಲೀಸರಿಗಾಗಿಯೇ ಮೀಸಲಾದ ಪ್ರಪ್ರಥಮ ಸಂಚಾರಿ ನೈರ್ಮಲ್ಯ ವಾಹನ ‘ಹೈಜೀನ್ ಆನ್ ಗೋ’ (Hygiene on Go) ಗೆ ಚಾಲನೆ ದೊರೆತಿದೆ.
‘ಹೈಜೀನ್ ಆನ್ ಗೋ’ ಸಂಚಾರಿ ನೈರ್ಮಲ್ಯ ವಾಹನದ ಬಗ್ಗೆ:
- ಗುರಿ:- ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣಾ ಪರಿಸ್ಥಿತಿಗಳನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ.
- ಪ್ರಾರಂಭಿಸಿದವರು:- ಗೃಹ ಇಲಾಖೆಯು, ಬೆಂಗಳೂರು ನಗರ ಪೊಲೀಸರಿಗಾಗಿಯೇ ಮೀಸಲಾದ, ಈ ರೀತಿಯ ಪ್ರಪ್ರಥಮ ಸಂಚಾರಿ ನೈರ್ಮಲ್ಯ ವಾಹನವಾಗಿದೆ.
- ವೆಚ್ಚ ಮತ್ತು ಕಾರ್ಯನಿರ್ವಹಣೆ:- ಗೃಹ ಇಲಾಖೆಯು ₹2.06 ಕೋಟಿ ವೆಚ್ಚದಲ್ಲಿ ಮೂರು ವಾಹನಗಳನ್ನು ಖರೀದಿಸಿ, ಮಾರ್ಪಡಿಸಿದ್ದು, ಇವು ಮಾರ್ಚ್ 2028 ರವರೆಗೆ 27 ತಿಂಗಳ ಕಾಲ ಕಾರ್ಯನಿರ್ವಹಿಸಲಿವೆ.
- ಒಳಗೊಂಡ ವ್ಯಾಪ್ತಿ:– ಈ ವಾಹನಗಳು ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆಯವರೆಗೆ, ಅತೀ ಹೆಚ್ಚು ಸಂಚಾರ ದಟ್ಟಣೆ ಇರುವ ಮೂರು ಪ್ರಮುಖ ಮಾರ್ಗಗಳಾದ ತಣಿಸಂದ್ರ, ಆಡುಗೋಡಿ ಮತ್ತು ಮೈಸೂರು ರಸ್ತೆಗಳಲ್ಲಿ ಸಂಚರಿಸಲಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸಕಾಲಿಕ ಮತ್ತು ವಿಶ್ವಾಸಾರ್ಹ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 91 ನಿಗದಿಪಡಿಸಿದ ನಿಲುಗಡೆ ಸ್ಥಳಗಳನ್ನು ಒಳಗೊಳ್ಳಲಿವೆ.
- ಒಳಗೊಂಡಿರುವ ಘಟಕಗಳು:- ಇವು ಹೊರಭಾಗದ ಸಿಸಿಟಿವಿ ವ್ಯಾಪ್ತಿ, ಜಿಪಿಎಸ್ ಅನುಸರಣೆ ಮತ್ತು ರಸ್ತೆ ಸುರಕ್ಷತಾ ಸಂದೇಶಗಳನ್ನು ಬಿತ್ತರಿಸುವ ಎಲ್ಇಡಿ ಫಲಕಗಳನ್ನು ಸಹ ಒಳಗೊಂಡಿರಲಿವೆ.
- ಪ್ರಾಮುಖ್ಯತೆ:- ಈ ವಾಹನಗಳು ಪುರುಷ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿರಲಿವೆ. ಈ ಸಂಚಾರಿ ನೈರ್ಮಲ್ಯ ವ್ಯವಸ್ಥೆಯು ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.



ನಿಮ್ಮದೊಂದು ಉತ್ತರ