ಹೈಕೋರ್ಟ್ನ ಮೂವರು ಹೊಸ ನ್ಯಾಯಾಧೀಶರು ಅಧಿಕಾರ ಸ್ವೀಕರಿಸಿದ್ದಾರೆ
ಇದೀಗ ಸುದ್ದಿಯಲ್ಲಿದೆ:
- ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು, ನ್ಯಾಯಮೂರ್ತಿಗಳಾದ ಗೀತಾ ಕಡಬ ಭರತರಾಜ ಶೆಟ್ಟಿ, ಬೋರ್ಕಟ್ಟೆ ಮುರಳೀಧರ ಪೈ ಮತ್ತು ತ್ಯಾಗರಾಜ ನಾರಾಯಣ ಇನವಳ್ಳಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಉಚ್ಚ ನ್ಯಾಯಾಲಯಕ್ಕೇ ಸಂಬಂಧಿಸಿದ ಸಂವಿಧಾನಾತ್ಮಕ ನಿಬಂಧನೆಗಳು:
- ಭಾರತದ ಸಂವಿಧಾನದ ಭಾಗ VI ರಲ್ಲಿರುವ ವಿಧಿ 214 ರಿಂದ 231 ರವರೆಗು ಉಚ್ಚ ನ್ಯಾಯಾಲಯಕ್ಕೇ ಸಂಬಂಧಿಸಿದ ನಿಬಂಧನೆಗಳ ಬಗ್ಗೆ ವ್ಯವಹರಿಸುತ್ತವೆ.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
- ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರನ್ನು ಭಾರತದ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
- ಸಂಬಂಧಪಟ್ಟ ರಾಜ್ಯದ “ರಾಜ್ಯಪಾಲರು” ಮತ್ತು “ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ” ಸಮಾಲೋಚಿಸಿದ ನಂತರ ಭಾರತದ ರಾಷ್ಟ್ರಪತಿಗಳು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ.
ಉಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರ ನೇಮಕಾತಿಯ ಬಗ್ಗೆ:
- ಸಂಬಂಧಪಟ್ಟ ರಾಜ್ಯದ “ರಾಜ್ಯಪಾಲರು ಮತ್ತು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ” ರೊಂದಿಗೆ ಸಮಾಲೋಚಿಸಿದ ನಂತರ ಭಾರತದ ರಾಷ್ಟ್ರಪತಿಗಳು ಉಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಪಟ್ಟಿ:
|
ಕ್ರಮ ಸಂಖ್ಯೆ |
ಮುಖ್ಯ ನ್ಯಾಯಾಧೀಶರು |
ಅವಧಿ |
|
01. |
ಆರ್. ವೆಂಕಟರಾಮಯ್ಯ |
ನವೆಂಬರ್ 1, 1956 – ಜುಲೈ 16, 1957 |
|
02. |
ಎಸ್.ಆರ್. ದಾಸ್ ಗುಪ್ತಾ |
ಜುಲೈ 25, 1957 – ಆಗಸ್ಟ್ 13, 1961 |
|
07. |
ಜಿ.ಕೆ. ಗೋವಿಂದ ಭಟ್ |
7 ಜೂನ್ 1973 – 14 ಡಿಸೆಂಬರ್ 1977 |
|
09. |
ಕೆ. ಭೀಮಯ್ಯ |
ಅಕ್ಟೋಬರ್ 28, 1982 – ಏಪ್ರಿಲ್ 10, 1983 |
|
15. |
ಜಿ.ಟಿ. ನಾನಾವತಿ |
ಸೆಪ್ಟೆಂಬರ್ 28, 1994 – ಮಾರ್ಚ್ 4, 1995 |
|
17. |
ಎಸ್.ಎ. ಹಕೀಮ್ |
ಮೇ 3, 1996 – ಮೇ 9, 1996 |
|
25. |
ಜಗದೀಶ್ ಸಿಂಗ್ ಖೇಹರ್ |
ಆಗಸ್ಟ್ 8, 2010 – ಸೆಪ್ಟೆಂಬರ್ 12, 2011 |
|
29. |
ದಿನೇಶ್ ಮಹೇಶ್ವರಿ |
ಫೆಬ್ರವರಿ 12, 2018 – ಜನವರಿ 17, 2019 |
|
30. |
ಅಭಯ್ ಶ್ರೀನಿವಾಸ್ ಓಕಾ |
ಮೇ 10, 2019 – ಆಗಸ್ಟ್ 30, 2021 |
|
31. |
ರಿತು ರಾಜ್ ಅವಸ್ಥಿ |
11 ಅಕ್ಟೋಬರ್ 2021 – 2 ಜುಲೈ 2022 |
|
32. |
ಪ್ರಸನ್ನ ಬಿ. ವರಾಳೆ |
15 ಅಕ್ಟೋಬರ್ 2022 – 24 ಜನವರಿ 2024 |
|
33. |
ಪಿ.ಎಸ್. ದಿನೇಶ್ ಕುಮಾರ್ |
ಫೆಬ್ರವರಿ 3, 2024 – ಫೆಬ್ರವರಿ 24, 2024 |
|
34. |
ನಿಲಯ್ ವಿಪಿನ್ಚಂದ್ರ ಅಂಜಾರಿಯಾ |
ಫೆಬ್ರವರಿ 25, 2024 – ಮೇ 29, 2025 |
|
35. |
ವಿಭು ಬಕ್ರು |
ಪ್ರಸ್ತುತ ಹುದ್ದೆದಲ್ಲಿರುವವರು. |



ನಿಮ್ಮದೊಂದು ಉತ್ತರ