ಹಾವಿನ ಕಡಿತ ಮತ್ತು ರೇಬೀಸ್ ನಿಯಂತ್ರಣಕ್ಕಾಗಿ ಕರ್ನಾಟಕದ ‘ರಾಜ್ಯ ಕ್ರಿಯಾ ಯೋಜನೆ’

ಹಾವಿನ ಕಡಿತ ಮತ್ತು ರೇಬೀಸ್ ನಿಯಂತ್ರಣಕ್ಕಾಗಿ ಕರ್ನಾಟಕದ ‘ರಾಜ್ಯ ಕ್ರಿಯಾ ಯೋಜನೆ’

ಇದೀಗ ಸುದ್ದಿಯಲ್ಲಿದೆ:

  • ಕರ್ನಾಟಕ ಸರ್ಕಾರವು ಹಾವಿನ ಕಡಿತದ ವಿಷಬಾಧೆ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಜ್ಯ ಕ್ರಿಯಾ ಯೋಜನೆ (SAPSE) ಹಾಗೂ ರೇಬೀಸ್ ನಿರ್ಮೂಲನೆಗಾಗಿ ರಾಜ್ಯ ಕ್ರಿಯಾ ಯೋಜನೆ (SAPRE) ಯನ್ನು ಜಾರಿಗೊಳಿಸಿದೆ.
  • ಹಾವಿನ ಕಡಿತದ ಸಾವುಗಳನ್ನು ತೀವ್ರವಾಗಿ ತಗ್ಗಿಸುವ ಉದ್ದೇಶದಿಂದ ಪ್ರತ್ಯೇಕವಾದ ಸಮಗ್ರ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿದ ಭಾರತದ ಮೊಟ್ಟಮೊದಲ ರಾಜ್ಯ ಕರ್ನಾಟಕವಾಗಿದೆ.
  • 2030 ರ ವೇಳೆಗೆ ರೇಬೀಸ್ ಸಾವುಗಳನ್ನು ಶೂನ್ಯಕ್ಕೆ ಇಳಿಸುವುದು  ಮತ್ತು ಹಾವಿನ ಕಡಿತದ ಘಟನೆಗಳನ್ನು ಗಣನೀಯವಾಗಿ ತಗ್ಗಿಸುವುದು ಈ ಎರಡೂ ಯೋಜನೆಗಳ ಪ್ರಮುಖ ಗುರಿಯಾಗಿದೆ.

ಈ ಕ್ರಿಯಾ ಯೋಜನೆಗಳ ಪ್ರಮುಖ ಅಂಶಗಳು:

SAPSE (ಹಾವಿನ ಕಡಿತಕ್ಕೇ ಕ್ರಿಯಾ ಯೋಜನೆ):

  • ಘೋಷಿತ ಕಾಯಿಲೆ (Notifiable Disease):- ಕರ್ನಾಟಕದಲ್ಲಿ ಹಾವಿನ ಕಡಿತದ ಪ್ರಕರಣಗಳನ್ನು ಈಗ ‘ಘೋಷಿತ ಕಾಯಿಲೆ’ ಎಂದು ಘೋಷಿಸಲಾಗಿದ್ದು, ಇವುಗಳನ್ನು ಕಡ್ಡಾಯವಾಗಿ ವರದಿ ಮಾಡುವುದನ್ನು ಖಚಿತಪಡಿಸಲಾಗಿದೆ.
  • ಚಿಕಿತ್ಸೆ ಲಭ್ಯವಿದೆ:- ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ವಿಷನಿರೋಧಕ (ASV – ಆಂಟಿ-ಸ್ನೇಕ್ ವೆನಮ್) ಲಭ್ಯತೆಯನ್ನು ಖಚಿತಪಡಿಸುವುದು ಹಾಗೂ ಯಾವುದೇ ಮುಂಗಡ ಪಾವತಿಯಿಲ್ಲದೆ ತ್ವರಿತ ಮತ್ತು ಉಚಿತ ಚಿಕಿತ್ಸೆಯನ್ನು ಒದಗಿಸುವುದು.
  • ಕ್ರಮಗಳು:- ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಮೇಲೆ ಗಮನಹರಿಸುತ್ತದೆ.

SAPRE (ರೇಬೀಸ್ ಕ್ರಿಯಾ ಯೋಜನೆ):

  • ಘೋಷಿತ ಕಾಯಿಲೆ:- ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ, 2022 ರಲ್ಲಿಯೇ ರೇಬೀಸ್ ಅನ್ನು ‘ಘೋಷಿತ ಕಾಯಿಲೆ’ ಎಂದು ಘೋಷಿಸಲಾಗಿದೆ.
  • ಗುರಿ:- 2030 ರ ವೇಳೆಗೆ ನಾಯಿಗಳಿಂದ ಮನುಷ್ಯರಿಗೆ ಹರಡುವ ರೇಬೀಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
  • ರೇಬೀಸ್-ಮುಕ್ತ ನಗರಗಳು:- ಬೀದಿ ನಾಯಿಗಳ ಗಣತಿ ಸಂಖ್ಯೆ ನಿರ್ವಹಣೆ ಮತ್ತು ಬೃಹತ್ ಲಸಿಕಾ ಅಭಿಯಾನದ ಮೇಲೆ ಗಮನಹರಿಸುವ ಮೂಲಕ 11 ಪ್ರಮುಖ ನಗರ ಕೇಂದ್ರಗಳಲ್ಲಿ “ರೇಬೀಸ್-ಮುಕ್ತ ನಗರಗಳು” ಯೋಜನೆಯನ್ನು ಪ್ರಾರಂಭಿಸುವುದು.
  • ಆರೋಗ್ಯ ಉಪಕ್ರಮಗಳು:- ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೇಬೀಸ್ ನಿರೋಧಕ ಲಸಿಕೆಗಳು ಮತ್ತು ಇಮ್ಯುನೊಗ್ಲಾಬ್ಯುಲಿನ್ ಅನ್ನು ಒದಗಿಸಲಾಗುತ್ತಿದೆ.

ಮಹತ್ವ:

  • ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರ ಇಲಾಖೆಗಳನ್ನು ಒಗ್ಗೂಡಿಸಿ ಸಮಗ್ರವಾಗಿ ಕಾರ್ಯನಿರ್ವಹಿಸುವ “ಒಂದು ಆರೋಗ್ಯ” (ಒನ್ ಹೆಲ್ತ್) ವಿಧಾನದ ಅಡಿಯಲ್ಲಿ ಈ ಉಪಕ್ರಮಗಳನ್ನು ಮುನ್ನಡೆಸಲಾಗುತ್ತಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts