ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ, 2025–30 | ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ( BWC) | ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 | ಸಂಚಾರ್ ಸಾಥಿ ಆ್ಯಪ್‌ | ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) | ಹೆರಾನ್ ಎಂಕೆ II ಮಾನವರಹಿತ ವೈಮಾನಿಕ ವಾಹನಗಳು (Heron Mk II UAVs)

ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ, 2025–30

ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ‘ಹಣಕಾಸಿನ ಒಳಗೊಳ್ಳುವಿಕೆಗಾಗಿ ರಾಷ್ಟ್ರೀಯ ಕಾರ್ಯತಂತ್ರ’ (NSFI) 2025–30 ಅನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಹಣಕಾಸಿನ ಒಳಗೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವಿಸ್ತರಿಸಲು ‘ಪಂಚ-ಜ್ಯೋತಿ’ ಎಂಬ ಐದು ವರ್ಷಗಳ ಯೋಜನೆಯನ್ನು ರೂಪಿಸಿದೆ.

‘ಪಂಚ-ಜ್ಯೋತಿ’ಯ ಕಾರ್ಯತಂತ್ರದ ಸ್ತಂಭಗಳು:

  1. ಹಣಕಾಸು ಸೇವೆಗಳನ್ನು ಹೆಚ್ಚಿಸುವುದು: ಕುಟುಂಬಗಳಿಗೆ ಮತ್ತು ಕಿರು-ಉದ್ಯಮಗಳಿಗೆ ಸಮಾನ, ಜವಾಬ್ದಾರಿಯುತ ಮತ್ತು ಕೈಗೆಟುಕುವ ದರದಲ್ಲಿ ಹಣಕಾಸು ಸೇವೆಗಳನ್ನು ಒದಗಿಸುವುದು.
  2. ಲಿಂಗ-ಸೂಕ್ಷ್ಮ ಒಳಗೊಳ್ಳುವಿಕೆ: ಮಹಿಳಾ ಕೇಂದ್ರಿತ ತಂತ್ರಗಳನ್ನು ಅನುಷ್ಠಾನಗೊಳಿಸುವುದು ಹಾಗೂ ದುರ್ಬಲ ಮತ್ತು ಕಡಿಮೆ ಸೇವೆಗಳನ್ನು ಪಡೆಯುವ ಗುಂಪುಗಳಿಗೆ ಬೆಂಬಲ ನೀಡುವುದು.
  3. ಜೀವನೋಪಾಯ ಮತ್ತು ಹಣಕಾಸು ಸಂಯೋಜನೆ: ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಕಾರ್ಯಕ್ರಮಗಳನ್ನು ಔಪಚಾರಿಕ ಹಣಕಾಸು ಸೇವೆಗಳೊಂದಿಗೆ ಸಂಯೋಜಿಸುವುದು.
  4. ಹಣಕಾಸು ಶಿಕ್ಷಣ: ಜವಾಬ್ದಾರಿಯುತ ಆರ್ಥಿಕ ನಡವಳಿಕೆ ಮತ್ತು ಶಿಸ್ತನ್ನು ಉತ್ತೇಜಿಸಲು ‘ಹಣಕಾಸು ಸಾಕ್ಷರತೆ’ಯನ್ನು  ಬಳಸಿಕೊಳ್ಳುವುದು.
  5. ಗ್ರಾಹಕರ ರಕ್ಷಣೆ: ವ್ಯವಸ್ಥೆಯಲ್ಲಿ ಉತ್ತಮ ವಿಶ್ವಾಸಾರ್ಹತೆ ಮತ್ತು ಲಭ್ಯತೆಯನ್ನು ತರಲು ಗ್ರಾಹಕ ರಕ್ಷಣೆ ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವುದು.

ಹಣಕಾಸಿನ ಒಳಗೊಳ್ಳುವಿಕೆಗಾಗಿ ಸರ್ಕಾರದ ಪ್ರಮುಖ ಉಪಕ್ರಮಗಳು:

  • ಪ್ರಧಾನ ಮಂತ್ರಿ ಮುದ್ರಾ ಯೋಜನೆ: ಸಣ್ಣ ಮತ್ತು ಕಿರು ಉದ್ಯಮಗಳಿಗೆ ₹10 ಲಕ್ಷದವರೆಗೆ ಸಾಲ ನೀಡುವ ಮೂಲಕ ಬೆಂಬಲಿಸಲು ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
  • ಹಣಕಾಸಿನ ಒಳಗೊಳ್ಳುವಿಕೆ ಸೂಚ್ಯಂಕ (FI-Index): ಹಣಕಾಸು ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಕ್ರಿಯೆಯನ್ನು ಪತ್ತೆಹಚ್ಚಲು ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾರಂಭಿಸಿದೆ.
  • ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಸಾವು ಮತ್ತು ಅಂಗವೈಕಲ್ಯವನ್ನು ಒಳಗೊಳ್ಳುವ ಒಂದು ಅಪಘಾತ ವಿಮಾ ಯೋಜನೆಯಾಗಿದೆ.
  • ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಸರ್ಕಾರದ ಬೆಂಬಲಿತ ಜೀವ ವಿಮಾ ಯೋಜನೆಯಾಗಿದೆ.
  • ಅಟಲ್ ಪಿಂಚಣಿ ಯೋಜನೆ (APY): 2015 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ.
  • ಪ್ರಧಾನ ಮಂತ್ರಿ ಜನ ಧನ್ ಯೋಜನೆ (PMJDY): ಇದನ್ನು  2014 ರಲ್ಲಿ ಪ್ರಾರಂಭಿಸಲಾಯಿತು. ಬ್ಯಾಂಕ್ ಖಾತೆ ಹೊಂದಿಲ್ಲದವರನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಯೊಳಗೆ ತರುವುದು, ಉಳಿತಾಯ ಖಾತೆಗಳು, ಸಾಲ ಸೌಲಭ್ಯ, ಹಣ ರವಾನೆ, ವಿಮೆ ಮತ್ತು ಪಿಂಚಣಿಗಳಿಗೆ ಪ್ರವೇಶವನ್ನು ಒದಗಿಸುವುದು ಇದರ ಗುರಿಯಾಗಿದೆ.

ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ ( BWC)

ಸಾಮಾನ್ಯ ಅಧ್ಯಯನ2/ಭಾರತದ ಹಿತಾಸಕ್ತಿಯಲ್ಲಿ ಜಾಗತಿಕ ಗುಂಪುಗಾರಿಕೆ ; ಸಾಮಾನ್ಯ ಅಧ್ಯಯನ3/ಭದ್ರತೆ

ಇದೀಗ ಸುದ್ದಿಯಲ್ಲಿದೆ:

  • ‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ (BWC) ಜಾರಿಗೆ ಬಂದು 50 ವರ್ಷಗಳು ಪೂರ್ಣಗೊಂಡಿವೆ.

ಜೈವಿಕ ಭಯೋತ್ಪಾದನೆಯ ಬಗ್ಗೆ:

  • ವ್ಯಾಖ್ಯಾನ: ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಲ್ಲಿ ಅನಾರೋಗ್ಯ ಅಥವಾ ಸಾವನ್ನು ಉಂಟುಮಾಡುವ ಉದ್ದೇಶದಿಂದ ಬ್ಯಾಕ್ಟೀರಿಯಾ, ವೈರಸ್‌ ಅಥವಾ ಜೀವಾಣು ವಿಷಗಳಂತಹ ಜೈವಿಕ ಕಾರಕಗಳನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡುವುದನ್ನು ‘ಜೈವಿಕ ಭಯೋತ್ಪಾದನೆ’ ಎನ್ನಲಾಗುತ್ತದೆ.
  • ಉದಾಹರಣೆಗಳು: ಬ್ಯಾಸಿಲಸ್ ಆಂಥ್ರಾಸಿಸ್ (ಆಂಥ್ರಾಕ್ಸ್), ವೇರಿಯೋಲಾ ಮೇಜರ್ (ಸಿಡುಬು), ಮತ್ತು ಬೊಟುಲಿನಮ್‌ನಂತಹ ವಿಷಕಾರಿಗಳು.
  • ನಿಯಂತ್ರಣ: ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ ಮತ್ತು ಸ್ವಾಧೀನವನ್ನು ನಿಷೇಧಿಸುವ ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದವಾಗಿ ‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ ಕಾರ್ಯನಿರ್ವಹಿಸುತ್ತದೆ.

‘ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ’ದ ಬಗ್ಗೆ:

  • ಸ್ಥಾಪನೆ: ಈ ಒಪ್ಪಂದವು ಮಾರ್ಚ್ 26, 1975 ರಂದು ಜಾರಿಗೆ ಬಂದಿತು.
  • ವೈಶಿಷ್ಟ್ಯ: ಇದು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಒಂದು ಸಂಪೂರ್ಣ ವರ್ಗವನ್ನೇ ನಿಷೇಧಿಸಿದ ವಿಶ್ವದ ಮೊಟ್ಟಮೊದಲ ಬಹುಪಕ್ಷೀಯ ನಿರಸ್ತ್ರೀಕರಣ ಒಪ್ಪಂದವಾಗಿದೆ.
  • ಉದ್ದೇಶ: ಇದು ಜೈವಿಕ ಮತ್ತು ವಿಷಕಾರಿ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನಪಡಿಸಿಕೊಳ್ಳುವಿಕೆ, ವರ್ಗಾವಣೆ, ದಾಸ್ತಾನು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.
  • ಅನುಷ್ಠಾನ: ವಿಶ್ವಸಂಸ್ಥೆಯ ನಿರಸ್ತ್ರೀಕರಣ ವ್ಯವಹಾರಗಳ ಕಚೇರಿ (UNODA) ಇದರ ಅನುಷ್ಠಾನದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.
  • ಸದಸ್ಯತ್ವ: ಭಾರತ ಸೇರಿದಂತೆ ಒಟ್ಟು 189 ದೇಶಗಳು ಇದರ ಸದಸ್ಯತ್ವವನ್ನು ಹೊಂದಿವೆ.

ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025

ಸಾಮಾನ್ಯ ಅಧ್ಯಯನ : 2/ ರಾಜಕೀಯ ಮತ್ತು ಆಡಳಿತ

ಇದೀಗ ಸುದ್ದಿಯಲ್ಲಿದೆ:

  • ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025′ ಅನ್ನು ಡಿಸೆಂಬರ್ 1, 2025 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು.

ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ರ ಪ್ರಮುಖ ಅಂಶಗಳು:

  • ಈ ಮಸೂದೆಯು ‘ಕೇಂದ್ರ ಅಬಕಾರಿ ಕಾಯ್ದೆ, 1944‘ ಅನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಹೊಂದಿದೆ.
  • ಭಾರತದಲ್ಲಿ ಉತ್ಪಾದನೆಯಾದ ಅಥವಾ ತಯಾರಾದ ಸರಕುಗಳ ಮೇಲೆ ಕೇಂದ್ರ ಅಬಕಾರಿ ಸುಂಕಗಳನ್ನು ವಿಧಿಸಲು ಮತ್ತು ಸಂಗ್ರಹಿಸಲು 1944ರ ಕಾಯಿದೆ ಅವಕಾಶ ಕಲ್ಪಿಸುತ್ತದೆ.
  • ಈ ಮಸೂದೆಯು ತಯಾರಿಸದ ತಂಬಾಕು, ತಯಾರಿಸಿದ ತಂಬಾಕು, ತಂಬಾಕು ಉತ್ಪನ್ನಗಳು ಮತ್ತು ತಂಬಾಕು ಪರ್ಯಾಯಗಳ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಹೆಚ್ಚಿಸುತ್ತದೆ.
  • ತಯಾರಿಸದ ತಂಬಾಕಿನ (ಉದಾಹರಣೆಗೆ ಬಿಸಿಲಿನಲ್ಲಿ ಒಣಗಿಸಿದ ತಂಬಾಕು ಎಲೆಗಳು) ಮೇಲಿನ ಸುಂಕವನ್ನು 64% ರಿಂದ 70% ಕ್ಕೆ ಹೆಚ್ಚಿಸಲಾಗಿದೆ.

ಸಂಚಾರ್ ಸಾಥಿ ಆ್ಯಪ್‌

ಸಾಮಾನ್ಯ ಅಧ್ಯಯನ2/ಸರ್ಕಾರದ ಉಪಕ್ರಮಗಳು

ಇದೀಗ ಸುದ್ದಿಯಲ್ಲಿದೆ:

  • 2026 ರ ಮಾರ್ಚ್‌ನಿಂದ ಮಾರಾಟವಾಗುವ ಮೊಬೈಲ್ ಸಾಧನಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್‌ ಅನ್ನು ಕಡ್ಡಾಯವಾಗಿ ಪೂರ್ವ-ಸ್ಥಾಪಿತವಾಗಿ ಒದಗಿಸುವಂತೆ ದೂರಸಂಪರ್ಕ ಇಲಾಖೆಯು (DoT) ಮೊಬೈಲ್ ಫೋನ್ ತಯಾರಕ ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಸಂಚಾರ್ ಸಾಥಿ ಆ್ಯಪ್‌ ನ ಬಗ್ಗೆ:

  • ಪ್ರಾರಂಭಿಸಿದವರು: ದೂರಸಂಪರ್ಕ ಇಲಾಖೆ, ಭಾರತ ಸರ್ಕಾರ. 
  • ಉದ್ದೇಶ: ಮೊಬೈಲ್ ಸಂಬಂಧಿತ ವಂಚನೆ ಮತ್ತು ಕಳ್ಳತನದಿಂದ ರಕ್ಷಣೆ ಪಡೆಯಲು ಹಾಗೂ ಈ ಕುರಿತು ವರದಿ ಮಾಡಲು ಬಳಕೆದಾರರಿಗೆ ನೆರವಾಗುವುದು.

ಸಂಚಾರ್ ಸಾಥಿ ಆ್ಯಪ್‌ ನ ಪ್ರಮುಖ ಲಕ್ಷಣಗಳು:

  1. ಚಕ್ಷು: ನಕಲಿ ಕೆವೈಸಿ (KYC) ನವೀಕರಣಗಳಂತಹ ವಂಚನೆಗಳನ್ನು ಒಳಗೊಂಡಂತೆ, ಕರೆಗಳು, ಸಂದೇಶ ಅಥವಾ ವಾಟ್ಸಾಪ್ ಮೂಲಕ ನಡೆಯುವ ಶಂಕಿತ ವಂಚನೆಗಳನ್ನು ವರದಿ ಮಾಡಲು ಇದು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
  2. IMEI ಜಾಡೀಕರಣ (ಟ್ರ್ಯಾಕಿಂಗ್) ಮತ್ತು ತಡೆಯುವುದು (ಬ್ಲಾಕಿಂಗ್): ಕಳೆದುಹೋದ ಅಥವಾ ಕಳ್ಳತನವಾದ ಫೋನ್‌ಗಳನ್ನು ದೇಶಾದ್ಯಂತ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಪತ್ತೆಹಚ್ಚಲು ಮತ್ತು ತಡೆಯಲು ಇದು ಸಹಾಯ ಮಾಡುತ್ತದೆ.
  3. ಮೊಬೈಲ್ ಸಾಧನಗಳ ನೈಜತೆಯನ್ನು ಪರಿಶೀಲಿಸುವುದು: IMEI ಸಂಖ್ಯೆ ಅಥವಾ ಬಾರ್‌ಕೋಡ್ ಸ್ಕ್ಯಾನ್ ಬಳಸುವ ಮೂಲಕ ಮೊಬೈಲ್ ಸಾಧನವು ಅಸಲಿಯೇ ಎಂಬುದನ್ನು ಬಳಕೆದಾರರು ಪರಿಶೀಲಿಸಬಹುದು.
  4. ಮರೆಮಾಚಲಾದ ಅಂತರರಾಷ್ಟ್ರೀಯ ಕರೆಗಳನ್ನು ವರದಿ ಮಾಡುವುದು: ಸ್ಥಳೀಯ ಸಂಖ್ಯೆಯಂತೆ (+91 ನಂತರ 10 ಅಂಕಿಗಳು) ಗೋಚರಿಸುವ ವಿದೇಶಿ ಕರೆಗಳನ್ನು ಗುರುತಿಸಲು ಮತ್ತು ವರದಿ ಮಾಡಲು ಇದು ಸಹಾಯ ಮಾಡುತ್ತದೆ.
  5. ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ತಿಳಿಯಿರಿ: ಪಿನ್ ಕೋಡ್, ವಿಳಾಸ ಅಥವಾ ಹೆಸರಿನ ಮೂಲಕ ವೈರ್‌ಲೈನ್ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಹುಡುಕಲು ಇದು ಸಹಕಾರಿಯಾಗಿದೆ.

ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS)

ಸಾಮಾನ್ಯ ಅಧ್ಯಯನ2/ಕಲ್ಯಾಣ ಯೋಜನೆಗಳು

ಇದೀಗ ಸುದ್ದಿಯಲ್ಲಿದೆ:

  • ‘ಪಿಎಂ ವಿಕಾಸ್’ ಯೋಜನೆಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದೆ.

ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ ಯೋಜನೆಯ ಕುರಿತು:

  • ಹಣಕಾಸು ನೆರವು: ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
  • ಅನುಷ್ಠಾನ: ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಇದನ್ನು ಅನುಷ್ಠಾನಗೊಳಿಸುತ್ತಿದೆ.
  • ಯೋಜನೆಗಳ ವಿಲೀನ: ಈ ಯೋಜನೆಯು ಹಿಂದಿನ ಐದು ಯೋಜನೆಗಳಾದ ‘ಸೀಖೋ ಔರ್ ಕಮಾವೋ’, ‘ನೈ ಮಂಜಿಲ್’, ‘ನೈ ರೋಶ್ನಿ’, ‘ಉಸ್ತಾದ್’  ಮತ್ತು ‘ಹಮಾರಿ ಧರೋಹರ್’ ಯೋಜನೆಗಳನ್ನು ಸಂಯೋಜಿಸುತ್ತದೆ.
  • ಗುರಿಗಳು: ಇದು ಕೌಶಲ್ಯಾಭಿವೃದ್ಧಿಯ ಮೂಲಕ ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ಉನ್ನತೀಕರಣ; ಅಲ್ಪಸಂಖ್ಯಾತ ಮಹಿಳೆಯರಲ್ಲಿ ಉದ್ಯಮಶೀಲತೆ ಮತ್ತು ನಾಯಕತ್ವ; ಹಾಗೂ ಶಾಲೆಯಿಂದ ಹೊರಗುಳಿದವರಿಗೆ ಶೈಕ್ಷಣಿಕ ಬೆಂಬಲವನ್ನು ಒದಗಿಸುವುದರತ್ತ ಗಮನಹರಿಸುತ್ತದೆ.

ಇದು ನಿಮಗೆ ತಿಳಿದಿದೆಯೇ? 

  • ಭಾರತದಲ್ಲಿ ಸಾಮಾಜಿಕ-ಆರ್ಥಿಕ ರಂಗಗಳಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ ಆರು ಅಲ್ಪಸಂಖ್ಯಾತ ಗುಂಪುಗಳೆಂದರೆ –  ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು ಮತ್ತು ಜೊರಾಸ್ಟ್ರಿಯನ್ನರು (ಪಾರ್ಸಿಗಳು).

ಹೆರಾನ್ ಎಂಕೆ II ಮಾನವರಹಿತ ವೈಮಾನಿಕ ವಾಹನಗಳು (Heron Mk II UAVs)

ಸಾಮಾನ್ಯ ಅಧ್ಯಯನ3/ ರಕ್ಷಣೆ

ಇದೀಗ ಸುದ್ದಿಯಲ್ಲಿದೆ:

  • ‘ಆಪರೇಷನ್ ಸಿಂಧೂರ್’ ನ  ನಂತರ ಜಾರಿಗೊಳಿಸಲಾದ ತುರ್ತು ಉಪಬಂಧಗಳ ಅಡಿಯಲ್ಲಿ, ಇಸ್ರೇಲ್‌ನಿಂದ ಹೆರಾನ್ ಎಂಕೆ-II ಡ್ರೋನ್‌ಗಳನ್ನು ಖರೀದಿಸಲು ಭಾರತವು ಪ್ರಕ್ರಿಯೆಯನ್ನು ಆರಂಭಿಸಿದೆ.

ಹೆರಾನ್ ಎಂಕೆ II ಯುಎವಿಗಳ ಕುರಿತು:

  • ಅಭಿವೃದ್ಧಿಪಡಿಸಿದ ಸಂಸ್ಥೆ: ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್.
  • ಸಾಮರ್ಥ್ಯ: ‘ಮಧ್ಯಮ-ಎತ್ತರದ, ದೀರ್ಘಕಾಲ ಕಾರ್ಯಾಚರಣೆ ನಡೆಸಬಲ್ಲ’ ಯುಎವಿ ಆಗಿದೆ.
  • ವೈಶಿಷ್ಟ್ಯ: ಇದು ಸುಮಾರು 500 ಕೆಜಿಯಷ್ಟು ಪೇಲೋಡ್ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, 24 ಗಂಟೆಗಳಿಗೂ ಹೆಚ್ಚು ಕಾಲ ನಿರಂತರ ಹಾರಾಟವನ್ನು ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts