ಹಂಪಿ ಮೂಲಸೌಕರ್ಯ ಯೋಜನೆಗಳ ಕುರಿತು ಯುನೆಸ್ಕೋ ಕಳವಳ


ಇದೀಗ ಸುದ್ದಿಯಲ್ಲಿದೆ:
- ಅಂಜನಾದ್ರಿ ಬೆಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ‘ಪಾರಂಪರಿಕ ಪರಿಣಾಮ ಮೌಲ್ಯಮಾಪನ’ (HIA) ವರದಿಯನ್ನು ಸಿದ್ಧಪಡಿಸುತ್ತಿದ್ದು, ಇದನ್ನು 2026 ರ ಫೆಬ್ರವರಿ 1 ರೊಳಗೆ ಯುನೆಸ್ಕೋಗೆ ಸಲ್ಲಿಸಲು ನಿರ್ಧರಿಸಿದೆ.
ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಐತಿಹಾಸಿಕ ಪ್ರಾಮುಖ್ಯತೆಯ ಬಗ್ಗೆ ( ಪಡೆದಿದೆ):
- 1986 ರಲ್ಲಿ ಯುನೆಸ್ಕೋದಿಂದ ಮಾನ್ಯತೆ ದೊರೆತಿದೆ.
- ರಾಜಧಾನಿ:- 1336 ರಲ್ಲಿ ಒಂದನೇ ಹರಿಹರ ಮತ್ತು ಒಂದನೇ ಬುಕ್ಕರಾಯ ಎಂಬ ಸಹೋದರರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯದ 14 ನೇ ಶತಮಾನದ ಭವ್ಯ ರಾಜಧಾನಿಯಾಗಿ ಹಂಪಿ ಮೆರೆದಿತ್ತು.
- ಸುವರ್ಣ ಯುಗ:- ಶ್ರೀ ಕೃಷ್ಣದೇವರಾಯನ ಆಳ್ವಿಕೆಯಲ್ಲಿ (1509–1530) ತನ್ನ ಉತ್ತುಂಗವನ್ನು ತಲುಪಿದ ಈ ನಗರವು, ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಮಧ್ಯಕಾಲೀನ ನಗರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು.
- ಅವನತಿ:- 1565 ರಲ್ಲಿ ನಡೆದ ಐತಿಹಾಸಿಕ ತಾಳಿಕೋಟೆ ಕದನದಲ್ಲಿ ದಖನ್ ಸುಲ್ತಾನರ ಒಕ್ಕೂಟದಿಂದ ವಿಜಯನಗರ ಸಾಮ್ರಾಜ್ಯವು ಸೋಲನುಭವಿಸಿದ ನಂತರ, ಈ ನಗರವನ್ನು ಲೂಟಿ ಮಾಡಿ ಪಾಳುಗೆಡವಲಾಯಿತು.
- ಸಾಹಿತ್ಯಿಕ ಉಲ್ಲೇಖಗಳು:- ಪೋರ್ಚುಗೀಸ್ ಪ್ರವಾಸಿ ಡೊಮಿಂಗೊ ಪಯಾಸ್ ಮತ್ತು ಇಟಾಲಿಯನ್ ಪ್ರವಾಸಿ ನಿಕೊಲೊ ಡಿ ಕಾಂಟಿ ಅವರಂತಹ ವಿದೇಶಿಯರು, ಹಂಪಿಯನ್ನು ‘ರೋಮ್ ನಗರಕ್ಕಿಂತಲೂ ಸುಂದರವಾಗಿದೆ’ ಎಂದು ತಮ್ಮ ಪ್ರವಾಸ ಕಥನಗಳಲ್ಲಿ ಬಣ್ಣಿಸಿದ್ದಾರೆ.
ಹಂಪಿ ನಗರದ ವಾಸ್ತುಶಿಲ್ಪದ ಮುಖ್ಯಾಂಶಗಳು:
- ಶೈಲಿ:- ಇದು ಪ್ರಾಥಮಿಕವಾಗಿ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಬೃಹತ್ ಆವರಣಗಳು, ಎತ್ತರದ ಗೋಪುರಗಳು ಮತ್ತು ಅತ್ಯಂತ ಸುಂದರವಾಗಿ ಅಲಂಕರಿಸಲ್ಪಟ್ಟ ಕಲ್ಯಾಣ ಮಂಟಪಗಳಿಂದ ಕೂಡಿದೆ.
- ವಿರೂಪಾಕ್ಷ ದೇವಾಲಯ:- ಇದು 7ನೇ ಶತಮಾನದಲ್ಲಿ ನಿರ್ಮಾಣವಾದ, ಭಾರತದ ಅತ್ಯಂತ ಹಳೆಯ ಮತ್ತು ಇಂದಿಗೂ ಪೂಜೆ ನಡೆಯುತ್ತಿರುವ ದೇವಾಲಯಗಳಲ್ಲಿ ಒಂದಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ.
- ವಿಜಯ ವಿಠಲ ದೇವಾಲಯ:- 50 ರೂ. ಮುಖಬೆಲೆಯ ನೋಟಿನಲ್ಲಿ ಚಿತ್ರಿಸಲಾಗಿರುವ ‘ಕಲ್ಲಿನ ರಥ’ ಮತ್ತು ಕೈಯಿಂದ ತಟ್ಟಿದಾಗ ಸುಮಧುರ ನಾದವನ್ನು ಹೊರಹೊಮ್ಮಿಸುವ ‘ಸಂಗೀತ ಸ್ತಂಭ’ಗಳಿಗೆ ಈ ದೇವಾಲಯವು ಜಗತ್ಪ್ರಸಿದ್ಧವಾಗಿದೆ.
- ಧಾರ್ಮಿಕೇತರ ರಚನೆಗಳು:- ಧಾರ್ಮಿಕ ರಚನೆಗಳಲ್ಲದೆ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರಭಾವವನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಕಮಲ ಮಹಲ್, ಆನೆ ಲಾಯಗಳು ಮತ್ತು ರಾಣಿಯ ಸ್ನಾನಗೃಹವನ್ನು ಇದು ಒಳಗೊಂಡಿದೆ.



ನಿಮ್ಮದೊಂದು ಉತ್ತರ