ಹಂಟಿಂಗ್‌ಟನ್ ಕಾಯಿಲೆ (Huntington’s Disease)
ಸಾಮಾನ್ಯ ಅಧ್ಯಯನ-2 / ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಭಾರತದಲ್ಲಿ ಹಂಟಿಂಗ್‌ಟನ್ ಕಾಯಿಲೆಯು ಸೀಮಿತ ಅರಿವು ಮತ್ತು ವಿಳಂಬವಾದ ರೋಗನಿರ್ಣಯದಿಂದಾಗಿ, ಸಮರ್ಪಕವಾಗಿ ಪತ್ತೆಯಾಗದೇ ಉಳಿದಿದೆ ಎಂಬ ವಿಷಯವನ್ನು ಗುರುತಿಸಲಾಗುತ್ತಿದೆ.
ಹಂಟಿಂಗ್‌ಟನ್ ಕಾಯಿಲೆ (HD)ಯ ಬಗ್ಗೆ:
- ಇದು ಮೆದುಳಿನ ಮೇಲೆ ಪರಿಣಾಮ ಬೀರುವ ಅಪರೂಪದ, ಹಂತ ಹಂತವಾಗಿ ಉಲ್ಬಣಗೊಳ್ಳುವ, ಅನುವಂಶಿಕ ನರಕ್ಷಯ ಕಾಯಿಲೆಯಾಗಿದೆ.
- ಪರಿಣಾಮ:- ಚಲನಾ ವೈಫಲ್ಯ, ಬೌದ್ಧಿಕ ಕ್ಷಮತೆ ಕುಸಿತ ಮತ್ತು ಮಾನಸಿಕ ಅಡಚಣೆಗಳಿಗೆ (ಖಿನ್ನತೆ, ಮನೋವಿಕಾರ, ಸಿಡುಕುತನ, ಒ.ಸಿ.ಡಿ) ಹಾಗೂ ಜೀವಮಾನದ ಅಸಾಮರ್ಥ್ಯಕ್ಕೆ ಎಡೆಮಾಡಿಕೊಡುತ್ತದೆ.
- ಕಾರಣ:- ಈ ಕಾಯಿಲೆಯು ಹಂಟಿಂಗ್‌ಟಿನ್ (HTT) ವಂಶವಾಹಿಯಲ್ಲಿನ ರೂಪಾಂತರದಿಂದ ಉಂಟಾಗುತ್ತದೆ.
- ಇದು ‘ಆಟೋಸೋಮಲ್ ಡಾಮಿನೆಂಟ್’ (ದೈಹಿಕ ಪ್ರಬಲ) ಆನುವಂಶಿಕ ಮಾದರಿಯನ್ನು ಅನುಸರಿಸುತ್ತದೆ. ಅಂದರೆ, ತಂದೆ ಅಥವಾ ತಾಯಿಯಿಂದ ರೂಪಾಂತರಗೊಂಡ ವಂಶವಾಹಿಯನ್ನು ಅನುವಂಶಿಕವಾಗಿ ಪಡೆಯುವ ಮಗುವಿಗೆ ಈ ಕಾಯಿಲೆ ಬರುತ್ತದೆ.
- ರಕ್ತಸಂಬಂಧಿಗಳ ನಡುವಿನ ವಿವಾಹಗಳು:- ಈ ಕಾಯಿಲೆ ಹರಡುವ ಸಾಧ್ಯತೆಯನ್ನು 75% ರಷ್ಟು ಗಣನೀಯವಾಗಿ ಹೆಚ್ಚಿಸುತ್ತವೆ.
- ರೋಗಲಕ್ಷಣಗಳು ಸಾಮಾನ್ಯವಾಗಿ 40 ಮತ್ತು 50 ವರ್ಷ ವಯಸ್ಸಿನ ನಡುವೆ ಪ್ರಾರಂಭವಾಗುತ್ತವೆ ಮತ್ತು 15–20 ವರ್ಷಗಳ ಅವಧಿಯವರೆಗೆ ಉಲ್ಬಣಗೊಳ್ಳುತ್ತವೆ.
- ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿ ಲಭ್ಯವಿಲ್ಲ:- ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆರೈಕೆದಾರರ ಹೊರೆಯನ್ನು ತಗ್ಗಿಸಲು ಚಿಕಿತ್ಸೆಗಳು ಲಭ್ಯವಿವೆ.
ನೀತಿ ದೃಷ್ಟಿಕೋನ:
- ಅಪರೂಪದ ಕಾಯಿಲೆಗಳ ವ್ಯಾಖ್ಯಾನ:- ವಿಶ್ವ ಆರೋಗ್ಯ ಸಂಸ್ಥೆಯು (WHO), ಪ್ರತಿ 1,000 ಜನರಲ್ಲಿ 1 ಅಥವಾ ಅದಕ್ಕಿಂತ ಕಡಿಮೆ ಜನರ ಮೇಲೆ ಪರಿಣಾಮ ಬೀರುವ ಕಾಯಿಲೆಗಳನ್ನು ಅಪರೂಪದ ಕಾಯಿಲೆಗಳೆಂದು ವ್ಯಾಖ್ಯಾನಿಸುತ್ತದೆ.
- ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ:- ಜಾಗತಿಕವಾಗಿ 7,000ಕ್ಕೂ ಹೆಚ್ಚು ಅಪರೂಪದ ಕಾಯಿಲೆಗಳು ಅಸ್ತಿತ್ವದಲ್ಲಿದ್ದರೂ, 5% ಕ್ಕಿಂತ ಕಡಿಮೆ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆಯ ಆಯ್ಕೆಗಳಿವೆ.
ಅಪರೂಪದ ಕಾಯಿಲೆಗಳಿಗೆ ರಾಷ್ಟ್ರೀಯ ನೀತಿಯನ್ನು (NPRD), 2021
- ಉದ್ದೇಶ:- ಅಪರೂಪದ ಕಾಯಿಲೆಗಳ ಗುರುತಿಸುವಿಕೆ, ತಡೆಗಟ್ಟುವಿಕೆ ಮತ್ತು ಅಂತಹ ಕಾಯಿಲೆಗಳಿರುವ ಕುಟುಂಬಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
- 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ:- ಈ ನೀತಿಯು ಭಾರತದಲ್ಲಿ 63 ಅಪರೂಪದ ಕಾಯಿಲೆಗಳನ್ನು ಗುರುತಿಸಿದೆ, ಆದರೆ ಹಂಟಿಂಗ್‌ಟನ್ ಕಾಯಿಲೆಯನ್ನು ಇದರಲ್ಲಿ ಸೇರಿಸಲಾಗಿಲ್ಲ.
- ಗುರುತಿಸಲಾದ 63 ಕಾಯಿಲೆಗಳಲ್ಲಿ ಯಾವುದಾದರೂ ಕಾಯಿಲೆ ಹೊಂದಿರುವ ರೋಗಿಗಳು ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PM-JAY)ಯ ಅಡಿಯಲ್ಲಿ ₹50 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುತ್ತಾರೆ.
ಪಾವತಿ ನಿಯಂತ್ರಣ ಮಂಡಳಿ (PRB)
ಸಾಮಾನ್ಯ ಅಧ್ಯಯನ-3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ‘ಭಾರತೀಯ ರಿಸರ್ವ್ ಬ್ಯಾಂಕ್’(RBI)ನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ಪಾವತಿ ನಿಯಂತ್ರಣ ಮಂಡಳಿ (PRB)ಯ ಮೊದಲ ಸಭೆ ನಡೆಯಿತು. ಇದು ಭಾರತದ ಹೊಸ ಪಾವತಿ ಆಡಳಿತ ಚೌಕಟ್ಟಿನ ಕಾರ್ಯಾರಂಭವನ್ನು ಸೂಚಿಸುತ್ತದೆ.
‘ಪಾವತಿ ನಿಯಂತ್ರಣ ಮಂಡಳಿ’ (Payment Regulatory Board)ಯ ಬಗ್ಗೆ:
- ಶಾಸನಬದ್ಧ ಸಂಸ್ಥೆ:- ಇದೊಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದರ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿನ ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ ಮೇಲೆ ನಿಯಂತ್ರಣ ಮತ್ತು ಮೇಲ್ವಿಚಾರಣಾ ಅಧಿಕಾರವನ್ನು ಚಲಾಯಿಸುತ್ತದೆ.
- ಸ್ಥಾಪನೆ:- ಪಾವತಿ ಮತ್ತು ವ್ಯವಹಾರ ನಿವಾರಣಾ ವ್ಯವಸ್ಥೆಗಳ (PSS) ಕಾಯ್ದೆ, 2007ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
- ಧ್ಯೇಯೋದ್ದೇಶ:- ಡಿಜಿಟಲ್ ಮತ್ತು ನಗದು ರಹಿತ ಪಾವತಿಗಳಲ್ಲಿ ಸುರಕ್ಷತೆ, ದಕ್ಷತೆ, ಸ್ಥಿರತೆ ಮತ್ತು ಗ್ರಾಹಕರ ರಕ್ಷಣೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
ತಾಜ್ ತ್ರಾಪಿಜ್ಯ/ಟ್ರಾಪೆಜಿಯಂ ವಲಯ (TTZ)
ಸಾಮಾನ್ಯ ಅಧ್ಯಯನ- 3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ತಾಜ್ ಟ್ರಾಪೆಜಿಯಂ ವಲಯದಲ್ಲಿ (TTZ) ಪರಿಸರ ನಿಯಮಗಳ ಪಾಲನೆಯಾಗದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ಜಾರಿ ಮಾಡಿದೆ.
ತಾಜ್ ತ್ರಾಪಿಜ್ಯ/ ಟ್ರಾಪೆಜಿಯಂ ವಲಯ (TTZ)ದ ಬಗ್ಗೆ:
- ಉದ್ದೇಶ:- ಇದು ತಾಜ್ ಮಹಲ್, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ (ಇವೆಲ್ಲವೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು) ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಲು ರೂಪಿಸಲಾದ, 10,400 ಚದರ ಕಿ.ಮೀ. ವಿಸ್ತೀರ್ಣದ ತ್ರಾಪಿಜ್ಯ ಆಕಾರದ ಪರಿಸರ ಸಂರಕ್ಷಣಾ ವಲಯದ ಪ್ರದೇಶವಾಗಿದೆ.
- ಇದು ಕೈಗಾರಿಕಾ ಮಾಲಿನ್ಯವನ್ನು ನಿಯಂತ್ರಿಸಲು ವಿಶೇಷ ನಿಯಮಗಳನ್ನು ಹೊಂದಿದೆ.
- ಸ್ಥಾಪನೆ:- ತಾಜ್ ಮಹಲ್ ಮೇಲೆ ಪರಿಣಾಮ ಬೀರುವ ಮಾಲಿನ್ಯವನ್ನು ನಿಯಂತ್ರಿಸಲು 1996ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಸ್ಥಾಪಿಸಿತು.
- ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ:- TTZ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳು ಕಲ್ಲಿದ್ದಲು ಮತ್ತು ಕೋಕ್ ಬಳಕೆಯನ್ನು ನಿಲ್ಲಿಸಿ, ನೈಸರ್ಗಿಕ ಅನಿಲದಂತಹ ಶುದ್ಧ ಇಂಧನಗಳ ಬಳಕೆಗೆ ಬದಲಾಗುವಂತೆ ಸರ್ವೋಚ್ಚ ನ್ಯಾಯಾಲಯವು ಕಡ್ಡಾಯಗೊಳಿಸಿತು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ಬಗ್ಗೆ:
- ಶಾಸನಬದ್ಧ ಸಂಸ್ಥೆ:- ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ, 2010ರ ಅಡಿಯಲ್ಲಿ ಸ್ಥಾಪಿಸಲಾದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
- ಧ್ಯೇಯೋದ್ದೇಶ:- ಪರಿಸರ ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ತೀರ್ಪುನ್ನು ಖಚಿತಪಡಿಸುವುದು.
- ಇದು ‘ಅನುಸೂಚಿ I’ ರಲ್ಲಿ ಉಲ್ಲೇಖಿಸಲಾದ ಪ್ರಮುಖ ಪರಿಸರ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತದೆ. ಅವುಗಳೆಂದರೆ:
- ಪರಿಸರ (ಸಂರಕ್ಷಣೆ) ಕಾಯ್ದೆ-1986,
- ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1974,
- ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ-1981 ಮತ್ತು ಇತರೆ ಕಾಯ್ದೆಗಳನ್ನು ಒಳಗೊಂಡಿದೆ.



ನಿಮ್ಮದೊಂದು ಉತ್ತರ