ಸರ್ಫೇಸಿ ಕಾಯ್ದೆ, 2002 (SARFAESI Act, 2002)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸರ್ಕಾರವು ಕಾನೂನು ಅಸ್ಪಷ್ಟತೆಗಳನ್ನು ತೆಗೆದುಹಾಕಲು ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಬಲಪಡಿಸಲು ‘ಸರ್ಫೇಸಿ ಕಾಯ್ದೆ, 2002′ ಕ್ಕೆ ತಿದ್ದುಪಡಿಗಳನ್ನು ತರಲು ಪರಿಗಣಿಸುತ್ತಿದೆ.
ಸರ್ಫೇಸಿ ಕಾಯ್ದೆ, 2002 (SARFAESI Act, 2002):
- ಪೂರ್ಣ ರೂಪ:- SARFAESI- ಸೆಕ್ಯುರಿಟೈಸೇಷನ್ ಅಂಡ್ ರಿಕನ್ಸಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸ್ಸೇಟ್ಸ್ ಅಂಡ್ ಎನಫೋರ್ಸ್ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಕಾಯ್ದೆ.
- ಇದು ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ ಕಾಯ್ದೆಯನ್ನು ಸೂಚಿಸುತ್ತದೆ.
-
- ಧೇಯೋದ್ದೇಶ:- ಇದು ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಿಗೆ ಅನುತ್ಪಾದಕ ಆಸ್ತಿಗಳನ್ನು (NPAs) ಮರುಪಡೆಯಲು ಕಾನೂನು ವ್ಯವಸ್ಥೆಯನ್ನು ಒದಗಿಸುತ್ತದೆ.
- ಸಾಲ ನೀಡುವವರು ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಬಹುದು:-ಇದು ಸಾಲ ನೀಡುವವರಿಗೆ ನ್ಯಾಯಾಲಯ ಅಥವಾ ನ್ಯಾಯಮಂಡಳಿಯ ಮಧ್ಯಸ್ಥಿಕೆಯಿಲ್ಲದೆ ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಲು ಅನುಮತಿಸುತ್ತದೆ.
- ಈ ಕಾಯ್ದೆಯು ಅನ್ವಯಿಕೆ:- ಬಾಕಿ ಉಳಿದಿರುವ ಸಾಲದ ಮೊತ್ತವು ₹1 ಲಕ್ಷಕ್ಕಿಂತ ಹೆಚ್ಚಿದ್ದಾಗ ಈ ಕಾಯ್ದೆಯು ಅನ್ವಯಿಸುತ್ತದೆ.
- ಸಾಲಗಾರರು ಅಥವಾ ಜಾಮೀನುದಾರರು ಅಡಮಾನವಿಟ್ಟ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ, ಬ್ಯಾಂಕುಗಳು ತಮ್ಮ ಸಾಲವನ್ನು ಮರುಪಡೆಯಬಹುದು.
ಅಂಟಾರ್ಕ್ಟಿಕ್ ಪೆಂಗ್ವಿನ್‌ಗಳು
ಭೂಗೋಳ ಮತ್ತು ಪರಿಸರ

ಇದೀಗ ಸುದ್ದಿಯಲ್ಲಿದೆ:
- ಹವಾಮಾನ ಬದಲಾವಣೆಯ ಪರಿಣಾಮವಾಗಿ, ಪೆಂಗ್ವಿನ್‌ಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ವಾಡಿಕೆಗಿಂತ ಮೊದಲೇ ಆರಂಭಿಸುತ್ತಿವೆ ಎಂದು ಅಧ್ಯಯನವೊಂದು ವರದಿ ಮಾಡಿದೆ.
ಪೆಂಗ್ವಿನ್‌ಗಳ ಬಗ್ಗೆ:
- ಹಾರಲಾರದ ಪಕ್ಷಿಗಳು:- ಇವು ಸಮುದ್ರ ಪರಿಸರಕ್ಕೆ ಹೆಚ್ಚು ಹೊಂದಿಕೊಂಡಿವೆ.
-
- ಅತ್ಯುತ್ತಮ ಈಜುಗಾರ ಪಕ್ಷಿಗಳು:- ಇವು ನೀರಿನಲ್ಲಿ ಬಹಳ ಆಳಕ್ಕೆ ಮುಳುಗಬಲ್ಲವು.
- ಅಂಟಾರ್ಕ್ಟಿಕ್ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ:- ಇವು ಆಳದ ನೀರಿನಿಂದ ಪೋಷಕಾಂಶಗಳನ್ನು ಮೇಲ್ಮೈಗೆ ತರುವುದು ಸೇರಿದಂತೆ, ಪಾಚಿಗಳು ತಮ್ಮ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಪೂರ್ಣಗೊಳಿಸಲು ಇದು ಅತ್ಯಗತ್ಯವಾಗಿದೆ.
- ಇವುಗಳು ಪ್ರಮುಖವಾಗಿ ದಕ್ಷಿಣ ಗೋಳಾರ್ಧದಲ್ಲಿ ವಾಸಿಸುತ್ತವೆ.
ಪ್ರಮುಖ ಪೆಂಗ್ವಿನ್ ಪ್ರಭೇದಗಳು:
|
ಕ್ರ.ಸಂ. |
ಪೆಂಗ್ವಿನ್ ಪ್ರಭೇದಗಳು |
ವೈಜ್ಞಾನಿಕ ಹೆಸರು |
IUCN ಕೆಂಪು ಪಟ್ಟಿಯ ಸ್ಥಿತಿಗತಿ |
|
1 |
ಚಕ್ರವರ್ತಿ ಪೆಂಗ್ವಿನ್ |
ಆಪ್ಟೆನೋಡೈಟ್ಸ್ ಫಾರ್ಸ್ಟರಿ (Aptenodytes forsteri) |
ಅಪಾಯದ ಅಂಚಿನಲ್ಲಿರುವ (NT) |
|
2 |
ರಾಜ ಪೆಂಗ್ವಿನ್ |
ಯುಡಿಪ್ಟೆಸ್ ಶ್ಲೆಗೆಲಿ (Eudyptes schlegeli) |
ಕನಿಷ್ಠ ಕಾಳಜಿ (LC) |
|
3 |
ಅಡೆಲಿ ಪೆಂಗ್ವಿನ್ |
ಪೈಗೋಸೆಲಿಸ್ ಅಡೆಲಿಯೆ (Pygoscelis adeliae) |
ಕನಿಷ್ಠ ಕಾಳಜಿ (LC) |
|
4 |
ಹಂಬೋಲ್ಟ್ ಪೆಂಗ್ವಿನ್ |
ಸ್ಪೆನಿಸ್ಕಸ್ ಹಂಬೋಲ್ಟಿ (Spheniscus humboldti) |
ದುರ್ಬಲ (VU) |
|
5 |
ಮೆಗೆಲ್ಲಾನಿಕ್ ಪೆಂಗ್ವಿನ್ |
ಸ್ಪೆನಿಸ್ಕಸ್ ಮೆಗೆಲ್ಲಾನಿಕಸ್ (Spheniscus magellanicus) |
ಕನಿಷ್ಠ ಕಾಳಜಿ (LC) |
|
6 |
ಫಿಯೋರ್ಡ್‌ಲ್ಯಾಂಡ್ ಪೆಂಗ್ವಿನ್ |
ಯುಡಿಪ್ಟೆಸ್ ಪ್ಯಾಚಿರಿಂಚಸ್ (Eudyptes pachyrhynchus) |
ಅಪಾಯದ ಅಂಚಿನಲ್ಲಿರುವ (NT) |
|
7 |
ಜೆಂಟೂ ಪೆಂಗ್ವಿನ್ |
ಪೈಗೋಸೆಲಿಸ್ ಪಪುವಾ (Pygoscelis papua) |
ಕನಿಷ್ಠ ಕಾಳಜಿ (LC) |
ಗಾಜಾ ಶಾಂತಿ ಮಂಡಳಿ
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿದೆ:
- ಪ್ರಸ್ತಾಪಿತ ‘ಗಾಜಾ ಶಾಂತಿ ಮಂಡಳಿ’ಗೆ ಸೇರುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಆಹ್ವಾನಕ್ಕೆ, ಭಾರತ ಸರ್ಕಾರವು ತನ್ನ ಪ್ರತಿಕ್ರಿಯೆಯನ್ನು ನೀಡುವ ಬಗ್ಗೆ ಪರಿಶೀಲಿಸುತ್ತಿದೆ.
ಗಾಜಾ ಶಾಂತಿ ಮಂಡಳಿಯ ಬಗ್ಗೆ:
- ಅಂತರರಾಷ್ಟ್ರೀಯ ಸಂಸ್ಥೆ:- ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
- ಗಾಜಾ ಯುದ್ಧದ ನಂತರದ ಪರಿವರ್ತನೆಯನ್ನು ನಿರ್ವಹಿಸಲು:- ಇಸ್ರೇಲ್-ಹಮಾಸ್ ಯುದ್ಧದ ಅಕ್ಟೋಬರ್ 2025 ರ ಕದನ ವಿರಾಮದ ಮೇಲ್ವಿಚಾರಣೆ ಮತ್ತು ಗಾಜಾ ಯುದ್ಧದ ನಂತರದ ಪರಿವರ್ತನೆಯನ್ನು ನಿರ್ವಹಿಸಲು ಇದನ್ನು ರಚಿಸಲಾಗಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮೋದನೆ:- ಈ ಉಪಕ್ರಮವನ್ನು ಅಕ್ಟೋಬರ್ 2025 ರಲ್ಲಿ ಪ್ರಸ್ತಾಪಿಸಲಾಯಿತು ಮತ್ತು ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇದನ್ನು ಅನುಮೋದಿಸಿತು.
ಸದಸ್ಯರು:
- ಆಹ್ವಾನಿತ ಸುಮಾರು 50 ನಾಯಕರಲ್ಲಿ, ಸುಮಾರು 35 ಜಾಗತಿಕ ನಾಯಕರು ಪ್ರಸ್ತಾಪಿತ ಶಾಂತಿ ಮಂಡಳಿಗೆ ಸೇರಲು ಒಪ್ಪಿಕೊಂಡಿದ್ದಾರೆ.
- ಭಾಗವಹಿಸುವ ರಾಷ್ಟ್ರಗಳು ಪ್ರಮುಖವಾಗಿ,
- ಮಧ್ಯಪ್ರಾಚ್ಯ ಮಿತ್ರರಾಷ್ಟ್ರಗಳಾದ- ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಜೋರ್ಡಾನ್, ಕತಾರ್ ಮತ್ತು ಈಜಿಪ್ಟ್,
- ನ್ಯಾಟೋ ಸದಸ್ಯರಾದ ಟರ್ಕಿ ಮತ್ತು ಹಂಗೇರಿ ಸೇರಿವೆ.
- ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಇರುವ ಇತರ ಹಲವಾರು ದೇಶಗಳು – ಪಾಕಿಸ್ತಾನ, ಇಂಡೋನೇಷ್ಯಾ, ವಿಯೆಟ್ನಾಂ, ಮೊರಾಕ್ಕೊ, ಅರ್ಮೇನಿಯಾ ಮತ್ತು ಅಜರ್ಬೈಜಾನ್ ಸೇರಿದಂತೆ ಹಲವು ದೇಶಗಳು ಇದರಲ್ಲಿ ಸೇರಿಕೊಂಡಿವೆ.
- 3 ವರ್ಷಗಳವರೆಗೆ ಸದಸ್ಯತ್ವದ ಅವಧಿ:- ಇದನ್ನು ನವೀಕರಿಸುವ ಆಯ್ಕೆಯೂ ಇರುತ್ತದೆ.
- ಆರಂಭಿಕ ಅವಧಿಯನ್ನು ಮೀರಿ ತಮ್ಮ ಭಾಗವಹಿಸುವಿಕೆಯನ್ನು ವಿಸ್ತರಿಸಲು ಬಯಸುವ ದೇಶಗಳು $ 1 ಬಿಲಿಯನ್ ಡಾಲರ್ ಕೊಡುಗೆ ನೀಡಬೇಕಾಗಬಹುದು, ಆದರೆ ಅಲ್ಪಾವಧಿಯ ಭಾಗವಹಿಸುವಿಕೆಯು ಯಾವುದೇ ಆರ್ಥಿಕ ಬದ್ಧತೆಯನ್ನು ಒಳಗೊಂಡಿರುವುದಿಲ್ಲ.
ಈ ಮಂಡಳಿಯ ಧೇಯೋದ್ದೇಶಗಳು:
- ಗಾಜಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿ:- ಈ ಮಂಡಳಿಯು ಗಾಜಾ ಪಟ್ಟಿಯಲ್ಲಿ ಗಾಜಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿಯ ಮೂಲಕ ಪರಿವರ್ತನಾ ಪ್ಯಾಲೇಸ್ಟಿನಿಯ ತಾಂತ್ರಿಕ ಆಡಳಿತವನ್ನು ಮೇಲ್ವಿಚಾರಣೆ ಮಾಡುತ್ತದೆ.
- ಹಮಾಸ್ ಅನ್ನು ನಿಶ್ಯಸ್ತ್ರಗೊಳಿಸುವ ಪ್ರಯತ್ನ:- ‘ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ’ಯ ನಿಯೋಜನೆಯ ಮೇಲ್ವಿಚಾರಣೆಯನ್ನು ಸಹ ಮಂಡಳಿಯ ಆದೇಶವು ಒಳಗೊಂಡಿದೆ.
- ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆ (ISF)ಯು ಒಂದು ಬಹುರಾಷ್ಟ್ರೀಯ ಶಾಂತಿಪಾಲನಾ ಕಾರ್ಯ ಯೋಜನೆ ಆಗಿದ್ದು, ಭದ್ರತೆಯನ್ನು ಕಾಪಾಡುವುದು ಮತ್ತು ಹೊಸ ಪ್ಯಾಲೇಸ್ಟಿನಿಯನ್ ಪೊಲೀಸ್ ಪಡೆಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ.
ಅಟಲ್ ಪಿಂಚಣಿ ಯೋಜನೆ (APY)
ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಪ್ರಧಾನ ಮಂತ್ರಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಅಟಲ್ ಪಿಂಚಣಿ ಯೋಜನೆಯನ್ನು 2030-31 ರವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ. ಇದರ ಜೊತೆಗೆ, ಯೋಜನೆಯ ಪ್ರಚಾರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಮುಂದುವರಿಸಲು ಸಹ ಅನುಮೋದನೆ ನೀಡಲಾಗಿದೆ
‘ಅಟಲ್ ಪಿಂಚಣಿ ಯೋಜನೆ’ಯ ಬಗ್ಗೆ:
- ಪ್ರಾರಂಭ:- 2015
- ಉದ್ದೇಶ:- ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
- ಉದ್ದೇಶಿತ ಗುಂಪು:- ಇದು ಆರಂಭದಲ್ಲಿ ಇದು 18 ರಿಂದ 40 ವರ್ಷ ವಯಸ್ಸಿನ ಭಾರತದ ಎಲ್ಲಾ ನಾಗರಿಕರಿಗೆ ಲಭ್ಯವಿದೆ.
- ಚಂದಾದಾರರ ಕೊಡುಗೆಯ ಆಧಾರದ ಮೇಲೆ ಖಾತರಿ ಕನಿಷ್ಠ ಪಿಂಚಣಿ:- 60 ನೇ ವಯಸ್ಸಿನಿಂದ ತಿಂಗಳಿಗೆ ರೂ. 1,000 ದಿಂದ ರೂ. 5,000 ರವರೆಗೆ ಖಾತರಿಯ ಕನಿಷ್ಠ ಪಿಂಚಣಿಯನ್ನು ನೀಡುತ್ತದೆ.
- ನಿರ್ವಹಣಾ ಸಂಸ್ಥೆ:- ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA).
- ಇದನ್ನು ‘ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ’ಯ ಚೌಕಟ್ಟಿನ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.
- ಪ್ರಗತಿ:- ಜನವರಿ 2026 ರ ಹೊತ್ತಿಗೆ, 8.66 ಕೋಟಿಗೂ ಹೆಚ್ಚು ಚಂದಾದಾರರು ನೋಂದಾಯಿಸಿಕೊಂಡಿದ್ದಾರೆ. ಇದು ಭಾರತದ ಅಂತರ್ಗತ ಸಾಮಾಜಿಕ ಭದ್ರತಾ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿದೆ.
ಸಿ-295 ವಿಮಾನ
ಭದ್ರತೆ

ಇದೀಗ ಸುದ್ದಿಯಲ್ಲಿದೆ:
- ವಡೋದರಾದಲ್ಲಿರುವ ಏರ್‌ಬಸ್ ಮತ್ತು ಟಾಟಾ ಸಂಸ್ಥೆಯ ಜೋಡಣಾ ಘಟಕದಲ್ಲಿ ತಯಾರಾಗುತ್ತಿರುವ, ಮೊದಲಬಾರಿಗೆ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಸಿ-295 ವಿಮಾನವು ಸೆಪ್ಟೆಂಬರ್, 2026 ಕ್ಕಿಂತ ಮೊದಲೇ ಸಿದ್ಧಗೊಂಡು ಹೊರಬರಲಿದೆ.
- ಈ ಯೋಜನೆಯು ಭಾರತ ಮತ್ತು ಸ್ಪೇನ್ ದೇಶಗಳ ನಡುವಿನ ರಕ್ಷಣಾ ಸಹಕಾರವು ಮತ್ತಷ್ಟು ಬಲಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಸಿ-295 ವಿಮಾನದ ಬಗ್ಗೆ:
- ಬಹುಮುಖಿ ಬಳಕೆ:- ಇದೊಂದು ಬಹುಮುಖಿ ಮತ್ತು ವಿಶ್ವಾಸಾರ್ಹವಾದ ಯುದ್ಧತಂತ್ರದ ಕುಶಲ ಸಾರಿಗೆ ವಿಮಾನವಾಗಿದೆ. ಇದನ್ನು ಸೈನಿಕರ ಅಥವಾ ಸರಕು ಸಾಗಣೆ, ಕಡಲ ಗಸ್ತು, ಕಣ್ಗಾವಲು, ವೈದ್ಯಕೀಯ ತುರ್ತು ಸ್ಥಳಾಂತರ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು.
- ಸಾಮರ್ಥ್ಯ:- ಈ ವಿಮಾನವು ಸುಮಾರು 8 ಟನ್‌ಗಳಷ್ಟು ಭಾರವನ್ನು ಅಥವಾ 70 ಸೈನಿಕರನ್ನು ಏಕಕಾಲದಲ್ಲಿ ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
- ಕಾರ್ಯಾಚರಣೆ:- ಇದು ಗಂಟೆಗೆ 260 ನಾಟ್ಸ್ ವೇಗದಲ್ಲಿ ಹಾರಾಟ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶೇಷತೆಯೆಂದರೆ, ಇದು ಅತ್ಯಂತ ಚಿಕ್ಕದಾದ ಹಾಗೂ ಸುಸಜ್ಜಿತವಲ್ಲದ ಡಾಂಬರು ಹಾಕದ ಕಚ್ಚಾ ರನ್-ವೇಗಳಿಂದಲೂ ಸರಾಗವಾಗಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
- ಸತತ 13 ಗಂಟೆಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ:- ಅತ್ಯುತ್ತಮ ನಿರ್ವಹಣಾ ಕೌಶಲ ಮತ್ತು ಇಂಧನ ದಕ್ಷತೆಯನ್ನು ಹೊಂದಿದೆ.
- ಹಿನ್ನೆಲೆ:- ಏರ್‌ಬಸ್ ಸಿ-295 (ಈ ಹಿಂದಿನ CASA C-295) ಮಧ್ಯಮ ಶ್ರೇಣಿಯ, ಎರಡು ಎಂಜಿನ್‌ಗಳನ್ನು ಹೊಂದಿರುವ ‘ಟರ್ಬೊಪ್ರಾಪ್’ ಸಾರಿಗೆ ವಿಮಾನವಾಗಿದೆ.
- ಇದನ್ನು ಮೂಲತಃ ಸ್ಪೇನ್‌ನ ಏರೋಸ್ಪೇಸ್ ಕಂಪನಿ ‘CASA’ ವಿನ್ಯಾಸಗೊಳಿಸಿ, ನಿರ್ಮಿಸಿತ್ತು. ಪ್ರಸ್ತುತ ಈ ಸಂಸ್ಥೆಯು ಯುರೋಪಿನ ಬಹುರಾಷ್ಟ್ರೀಯ ಕಂಪನಿ ‘ಏರ್‌ಬಸ್ ಡಿಫೆನ್ಸ್ ಮತ್ತು ಸ್ಪೇಸ್’ ವಿಭಾಗದ ಭಾಗವಾಗಿದೆ.
ಗ್ರಾಕಾ ಮಾಚೆಲ್ ಅವರಿಗೆ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ, 2025
ಇತರೆ

ಇದೀಗ ಸುದ್ದಿಯಲ್ಲಿದೆ:
- ಮೊಜಾಂಬಿಕ್‌ನ ಹಕ್ಕುಗಳ ಹೋರಾಟಗಾರ್ತಿ ಮತ್ತು ಮಾನವತಾವಾದಿ ಗ್ರಾಕಾ ಮಾಚೆಲ್ ಅವರನ್ನು 2025 ರ ‘ಶಾಂತಿ, ನಿಶ್ಯಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಘೋಷಿಸಿದೆ.
- ಶಿಕ್ಷಣ, ಆರೋಗ್ಯ ಮತ್ತು ಪೋಷಣೆ, ಆರ್ಥಿಕ ಸಬಲೀಕರಣ ಮತ್ತು ಮಾನವೀಯ ಕಾರ್ಯಗಳ ಕ್ಷೇತ್ರಗಳಲ್ಲಿನ ಅವರ “ಮಾರ್ಗ-ನಿರ್ಮಾಪಕ ಕೆಲಸ”ಕ್ಕಾಗಿ ಗ್ರಾಕಾ ಮಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ.
‘ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ’ಯ ಬಗ್ಗೆ:
- ಸ್ಥಾಪಿನೆ:- 1986
- ವಾರ್ಷಿಕ ಪ್ರಶಸ್ತಿಯಾಗಿದೆ:- ಈ ಪ್ರಶಸ್ತಿಯನ್ನು ಭಾರತದಲ್ಲಿ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿದೆ.
- ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಗೌರವಾರ್ಥವಾಗಿ ಈ ಪ್ರಶಸ್ತಿಗೆ ಈ ಹೆಸರನ್ನು ಇಡಲಾಗಿದೆ.
- ಪ್ರಶಸ್ತಿ ಮೊತ್ತ:- 1 ಕೋಟಿ ರೂಪಾಯಿ (ಇತ್ತೀಚಿಗೆ, ಈ ಪ್ರಶಸ್ತಿಯ ಮೊತ್ತವನ್ನು 25 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ).
- ಉದ್ದೇಶ:- ಶಾಂತಿ, ಹೊಸ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ಸಾಮಾನ್ಯವಾಗಿ, ನವೆಂಬರ್ 19 ರಂದು ಇಂದಿರಾ ಗಾಂಧಿಯವರ ಜನ್ಮದಿನದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
- ವಿಭಾಗಗಳು:- ಈ ಪ್ರಶಸ್ತಿಯನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ:
- ಶಾಂತಿ:- ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಮತ್ತು ಕಾಪಾಡುವ ಪ್ರಯತ್ನಗಳನ್ನು ಇದು ಗುರುತಿಸುತ್ತದೆ.
- ನಿಶ್ಯಸ್ತ್ರೀಕರಣ:- ಸಾಮೂಹಿಕ ವಿನಾಶದ ಅಸ್ತ್ರಗಳ ಕಡಿತ ಮತ್ತು ನಿರ್ಮೂಲನೆಗೆ ನೀಡಿದ ಕೊಡುಗೆಗಳನ್ನು ಇದು ಗುರುತಿಸುತ್ತದೆ.
- ಅಭಿವೃದ್ಧಿ:- ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿನ ಕಾರ್ಯವನ್ನು ಇದು ಗೌರವಿಸುತ್ತದೆ.
ಇಸ್ರೇಲ್ ವೆಸ್ಟ್ ಬ್ಯಾಂಕ್ ಹೊರಠಾಣೆಗೆ ‘ಹೊಸ ವಸಾಹತು’ ಎಂಬ ಅಧಿಕೃತ ಮಾನ್ಯತೆ ನೀಡಿದೆ
ಅಂತರರಾಷ್ಟ್ರೀಯ

ಇದೀಗ ಸುದ್ದಿಯಲ್ಲಿದೆ:
- ಇಸ್ರೇಲ್ ಸರ್ಕಾರವು ವೆಸ್ಟ್ ಬ್ಯಾಂಕ್‌ನಲ್ಲಿರುವ ಹೊರಠಾಣೆಯನ್ನು, ‘ಯಾಟ್ಜಿವ್’ (Yatziv) ಎಂಬ ಹೆಸರಿನ ಹೊಸ ವಸಾಹತು ಎಂದು ಸಂಪೂರ್ಣವಾಗಿ ಕಾನೂನುಬದ್ಧಗೊಳಿಸಿದೆ.
- ‘ಯಾಟ್ಜಿವ್’ ಎಂದು ಕರೆಯಲ್ಪಡುವ ಈ ಹೊಸದಾಗಿ ಸಕ್ರಮಗೊಂಡ ಯಹೂದಿ ವಸಾಹತು, ವೆಸ್ಟ್ ಬ್ಯಾಂಕ್‌ನಲ್ಲಿರುವ ‘ಬೀಟ್ ಸಾಹೂರ್’ ಎಂಬ ಪ್ಯಾಲೇಸ್ಟಿನಿಯನ್ ಪಟ್ಟಣದ ಪಕ್ಕದಲ್ಲಿದೆ.
‘ವೆಸ್ಟ್ ಬ್ಯಾಂಕ್’ನ ಬಗ್ಗೆ:
- ವೆಸ್ಟ್ ಬ್ಯಾಂಕ್ ಪ್ರದೇಶವು ಜೋರ್ಡಾನ್ ನದಿಯ ಪಶ್ಚಿಮ ಭಾಗದಲ್ಲಿ ನೆಲೆಗೊಂಡಿದೆ.
- ಈ ಪ್ರದೇಶವು ಪಶ್ಚಿಮಕ್ಕೆ ಇಸ್ರೇಲ್, ಪೂರ್ವಕ್ಕೆ ಜೋರ್ಡಾನ್ ಮತ್ತು ನೈಋತ್ಯಕ್ಕೆ ಜೆರುಸಲೆಮ್‌ನಿಂದ ಸುತ್ತುವರಿದಿದೆ.
- ಇಲ್ಲಿನ ಪ್ರಮುಖ ನಗರಗಳಲ್ಲಿ ರಾಮಲ್ಲಾ (ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಆಡಳಿತ ರಾಜಧಾನಿ), ಹೆಬ್ರಾನ್, ನಬ್ಲಸ್, ಜೆನಿನ್ ಮತ್ತು ಬೆತ್ಲೆಹೆಮ್ ನಗರಗಳು ಸೇರಿವೆ.
‘ವೆಸ್ಟ್ ಬ್ಯಾಂಕ್’ನ ಇತಿಹಾಸ:
- 1948:- ಅರಬ್-ಇಸ್ರೇಲ್ ಯುದ್ಧದ ನಂತರ, ವೆಸ್ಟ್ ಬ್ಯಾಂಕ್ ಪ್ರದೇಶವನ್ನು ಆಕ್ರಮಿಸಿಕೊಳ್ಳಲಾಯಿತು. ತದನಂತರ 1949 ರಿಂದ 1967 ರವರೆಗೆ ಜೋರ್ಡಾನ್ ಇದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.
- ಆರು ದಿನಗಳ ಯುದ್ಧ, 1967:- ಈ ಸಮಯದಲ್ಲಿ, ಇಸ್ರೇಲ್ ಜೋರ್ಡಾನ್‌ನಿಂದ ವೆಸ್ಟ್ ಬ್ಯಾಂಕ್ ಅನ್ನು ವಶಪಡಿಸಿಕೊಂಡಿತು. ಅಂದಿನಿಂದ ಈ ಪ್ರದೇಶವು ವಿವಿಧ ಹಂತಗಳಲ್ಲಿ ಇಸ್ರೇಲಿ ನಿಯಂತ್ರಣದಲ್ಲಿ ಉಳಿದಿದೆ.
- ಓಸ್ಲೋ ಒಪ್ಪಂದಗಳು, 1993–1995:- ಈ ಒಪ್ಪಂದಗಳು ‘ಪ್ಯಾಲೇಸ್ಟಿನಿಯನ್ ಪ್ರಾಧಿಕಾರ’ವನ್ನು ರಚಿಸಿದವು ಮತ್ತು ಆಡಳಿತದ ದೃಷ್ಟಿಯಿಂದ ವೆಸ್ಟ್ ಬ್ಯಾಂಕ್ ಅನ್ನು ಈ ಕೆಳಗಿನ 3 ವಿಭಾಗಗಳಾಗಿ ವಿಂಗಡಿಸಿದವು:
- ಪ್ರದೇಶ- ಎ:- ಇಲ್ಲಿ ಸಂಪೂರ್ಣ ಪ್ಯಾಲೇಸ್ಟಿನಿಯ ನಾಗರಿಕ ಮತ್ತು ಭದ್ರತಾ ನಿಯಂತ್ರಣವಿರುತ್ತದೆ.
- ಪ್ರದೇಶ- ಬಿ:- ಇಲ್ಲಿ ಪ್ಯಾಲೇಸ್ಟಿನಿಯನ್ ನಾಗರಿಕ ನಿಯಂತ್ರಣವಿದ್ದು, ಜಂಟಿ ಇಸ್ರೇಲಿ-ಪ್ಯಾಲೇಸ್ಟಿನಿಯನ್ ಭದ್ರತಾ ನಿಯಂತ್ರಣವಿರುತ್ತದೆ.
- ಪ್ರದೇಶ- ಸಿ:- ಇದು ಸಂಪೂರ್ಣ ಇಸ್ರೇಲಿ ನಿಯಂತ್ರಣದಲ್ಲಿರುವ ಪ್ರದೇಶವಾಗಿದೆ (ಇದು ವೆಸ್ಟ್ ಬ್ಯಾಂಕ್‌ನ ಸುಮಾರು 60% ರಷ್ಟು ಭಾಗವನ್ನು ಒಳಗೊಂಡಿದೆ).
- 1967 ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ವೆಸ್ಟ್ ಬ್ಯಾಂಕ್ ಪ್ರದೇಶವನ್ನು, ಪ್ಯಾಲೇಸ್ಟಿನಿಯನ್ನರು ತಮ್ಮ ಭವಿಷ್ಯದ ಸ್ವತಂತ್ರ ರಾಷ್ಟ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಬಯಸುತ್ತಾರೆ.



ನಿಮ್ಮದೊಂದು ಉತ್ತರ