ಸಂಶ್ಲೇಷಿತ ಜಾನುವಾರು ತಳಿಗಳು
ಸಾಮಾನ್ಯ ಅಧ್ಯಯನ – 3/ಹೈನುಗಾರಿಕೆ ವಲಯ

ಇದೀಗ ಸುದ್ದಿಯಲ್ಲಿದೆ:
- ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (NDRI)ಯು ಅಭಿವೃದ್ಧಿಪಡಿಸಿರುವ, ‘ಕರಣ್ ಫ್ರೈಸ್’ ಮತ್ತು ‘ವೃಂದಾವನಿ’ ಎಂಬ ಎರಡು ಹೊಸ ಸಂಶ್ಲೇಷಿತ ಜಾನುವಾರು ತಳಿಗಳನ್ನು ಭಾರತವು ನೋಂದಾಯಿಸಿದೆ.
‘ಸಂಶ್ಲೇಷಿತ ಜಾನುವಾರು ತಳಿ’ ಎಂದರೇನು?
-
- ಸಾಮಾನ್ಯವಾಗಿ ದೇಶೀಯ (ಬಾಸ್ ಇಂಡಿಕಸ್) ಮತ್ತು ವಿದೇಶಿಯ (ಬಾಸ್ ಟಾರಸ್) ತಳಿಗಳಂತಹ, ಎರಡು ಅಥವಾ ಹೆಚ್ಚಿನ ತಳಿಗಳ ನಡುವಿನ ‘ಯೋಜಿತ ಮಿಶ್ರತಳಿ ಸಂತಾನೋತ್ಪತ್ತಿ’ಯ ಮೂಲಕ ಅಭಿವೃದ್ಧಿಪಡಿಸಿ, ನಂತರದ ಪೀಳಿಗೆಗಳಲ್ಲಿ ಅಪೇಕ್ಷಿತ ಗುಣಲಕ್ಷಣಗಳನ್ನು ಸ್ಥಿರೀಕರಿಸಲಾದ ತಳಿ.
- ವಿಶಿಷ್ಟ ತಳಿಗಳು:- ಒಮ್ಮೆ ಈ ಗುಣಲಕ್ಷಣಗಳು ಸ್ಥಿರಗೊಂಡ ನಂತರ, ಇವು ಶುದ್ಧ ತಳಿಗಳಂತೆ ಸಂತಾನೋತ್ಪತ್ತಿಯನ್ನು ನಡೆಸುತ್ತವೆ ಮತ್ತು ಇವುಗಳನ್ನು ವಿಶಿಷ್ಟ ತಳಿಗಳೆಂದು ಗುರುತಿಸಲಾಗುತ್ತದೆ.
‘ಕರಣ್ ಫ್ರೈಸ್’ ಜಾನುವಾರು ತಳಿಯ ಬಗ್ಗೆ:
- “ಹೋಲ್ಸ್ಟೀನ್ ಫ್ರೈಸಿಯನ್” ಮತ್ತು “ಥಾರ್‌ಪಾರ್ಕರ್ ಝೆಬು” ಜಾನುವಾರುಗಳ ನಡುವಿನ ಮಿಶ್ರತಳಿ:- ಜಾಗತಿಕವಾಗಿ ಗುರುತಿಸಲ್ಪಟ್ಟ ಅಧಿಕ ಇಳುವರಿ ನೀಡುವ ತಳಿಯಾದ ‘ಹೋಲ್ಸ್ಟೀನ್ ಫ್ರೈಸಿಯನ್’ (Holstein Friesian) ಮತ್ತು ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಹಾಗೂ ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ಭಾರತದ ದೇಶೀಯ ‘ಥಾರ್‌ಪಾರ್ಕರ್ ಝೆಬು’ ಜಾನುವಾರುಗಳ ನಡುವಿನ ಮಿಶ್ರತಳಿ ಸಂತಾನೋತ್ಪತ್ತಿ ಮೂಲಕ ಈ ಸಂಶ್ಲೇಷಿತ ಹಸುವಿನ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
- ವಿಶೇಷತೆ:- ಅಧಿಕ ಉತ್ಪಾದಕತೆ ಮತ್ತು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವ ಸಾಮರ್ಥ್ಯದ ಸಂಯೋಜನೆಯನ್ನು ಹೊಂದಿದ್ದು, ಇದು ದಿನಕ್ಕೆ ಗರಿಷ್ಠ 46.5 ಕೆ.ಜಿ.ಯಷ್ಟು ಹಾಲಿನ ಇಳುವರಿಯನ್ನು ನೀಡುತ್ತದೆ.
ಮಹತ್ವ:
- ದೇಶೀಯ ಜಾನುವಾರುಗಳಿಗಿಂತ ಇವು ಹೆಚ್ಚಿನ ಉತ್ಪಾದಕತೆಯನ್ನು ಹೊಂದಿವೆ.
- ಶುದ್ಧ ವಿದೇಶಿ ತಳಿಗಳಿಗಿಂತ ಉತ್ತಮ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಇವು ಪ್ರದರ್ಶಿಸುತ್ತವೆ.
- ಹೈನುಗಾರರಿಗೆ ಉತ್ತಮ ಆರ್ಥಿಕ ಆದಾಯವನ್ನು ಇವು ಒದಗಿಸುತ್ತವೆ.
- ಇವುಗಳಲ್ಲಿ ಕಡಿಮೆ ಮರಣ ಪ್ರಮಾಣ ಮತ್ತು ಉತ್ತಮ ಸಂತಾನೋತ್ಪತ್ತಿ ದಕ್ಷತೆಯು ಕಂಡುಬರುತ್ತದೆ.
18 ನೇ ಜಪಾನ್-ಭಾರತ ವಿದೇಶಾಂಗ ಸಚಿವರ ಕಾರ್ಯತಂತ್ರದ ಸಂವಾದ
ಸಾಮಾನ್ಯ ಅಧ್ಯಯನ – 2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- 18 ನೇ ಭಾರತ-ಜಪಾನ್ ಕಾರ್ಯತಂತ್ರದ ಸಂವಾದದಲ್ಲಿ, ಈ ಎರಡು ದೇಶಗಳು ತಮ್ಮ ‘ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆ’ಯ ಬೆಳವಣಿಗೆಯನ್ನು ಪುನರುಚ್ಚರಿಸಿದವು.
ಪ್ರಮುಖ ಮುಖ್ಯಾಂಶಗಳು:
- ಆರ್ಥಿಕ ಭದ್ರತೆಯ ಕುರಿತಾದ ಖಾಸಗಿ ವಲಯದ ಸಂವಾದ (B2B):- 2026 ರ ಆರಂಭದಲ್ಲಿ ಈ ಎರಡು ದೇಶಗಳು ಇದಕ್ಕೇ ಚಾಲನೆಯನ್ನು ಘೋಷಿಸಿದವು.
- ಈ ಸಂವಾದವು 5 ಆದ್ಯತಾ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳೆಂದರೆ,
- ಅರೆವಾಹಕಗಳು (ಸೆಮಿಕಂಡಕ್ಟರ್‌ಗಳು),
- ನಿರ್ಣಾಯಕ ಖನಿಜಗಳು,
- ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT),
- ಶುದ್ಧ ಇಂಧನ
- ಔಷಧ ಉದ್ಯಮ (ಫಾರ್ಮಾಸ್ಯುಟಿಕಲ್ಸ್)
- ಜಪಾನ್-ಭಾರತ ಎಐ ಕಾರ್ಯತಂತ್ರದ ಸಂವಾದ:- ‘ಜಪಾನ್-ಭಾರತ ಎಐ ಸಹಕಾರ ಉಪಕ್ರಮ’ದ (JAI) ಅಡಿಯಲ್ಲಿ ಈ ಸಂವಾದ’ವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
- ಜಂಟಿ ಸಂಶೋಧನೆ:- ಇದಕ್ಕಾಗಿ ಜಪಾನ್ 2030 ರ ವೇಳೆಗೆ 500 ಅತ್ಯಂತ ಕೌಶಲ್ಯಯುತ ಭಾರತೀಯ ಎಐ ವೃತ್ತಿಪರರನ್ನು ಆಹ್ವಾನಿಸಲಿದೆ.
ಭಾರತ ಮತ್ತು ಜಪಾನ್ ಸಂಬಂಧಗಳು:
- ರಕ್ಷಣೆ ಮತ್ತು ಭದ್ರತೆ:-
- ಸೇನಾ ಸಮರಾಭ್ಯಾಸಗಳು:- ‘ಮಲಬಾರ್’, ‘ಧರ್ಮ ಗಾರ್ಡಿಯನ್’ ಮತ್ತು ‘ಜಿಮೆಕ್ಸ್’ ನಂತಹ ಸಮರಾಭ್ಯಾಸಗಳು ಉಭಯ ದೇಶಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಯನ್ನು ಹೆಚ್ಚಿಸುತ್ತವೆ.
- ವ್ಯಾಪಾರ:- 2023-24 ರ ಅವಧಿಯಲ್ಲಿ ದ್ವಿಪಕ್ಷೀಯ ವ್ಯಾಪಾರವು ಸುಮಾರು $23 ಬಿಲಿಯನ್ ಮೌಲ್ಯವನ್ನು ತಲುಪಿದೆ.
- ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲ:- ಜಪಾನ್, ಭಾರತದ 5ನೇ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಮೂಲವಾಗಿದೆ.
- ಬುಲೆಟ್ ರೈಲು:– ಮುಂಬೈ-ಅಹಮದಾಬಾದ ನಡುವಿನ ಅತಿ ವೇಗದ ಬುಲೆಟ್ ರೈಲು ಯೋಜನೆಯು ಭಾರತ ಮತ್ತು ಜಪಾನ್ ನಡುವಿನ ಸಾರಿಗೆ ಸಹಕಾರಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ.
- ಶುದ್ಧ ಇಂಧನ ಪಾಲುದಾರಿಕೆ, 2022):- ಜಲಜನಕ, ನವೀಕರಿಸಬಹುದಾದ ಇಂಧನಗಳು ಮತ್ತು ಹವಾಮಾನ ಸಹಕಾರ ಕ್ಷೇತ್ರಗಳನ್ನು ವಿಸ್ತರಿಸುತ್ತದೆ.
- ಕ್ವಾಡ್:- ‘ಕ್ವಾಡ್’ ಸಮನ್ವಯವು ಸಾಮೂಹಿಕ ಕಡಲ(ಸಾಗರ) ಬದ್ಧತೆಗಳ ಮೂಲಕ ಇಂಡೋ-ಪೆಸಿಫಿಕ್ ವಲಯದಲ್ಲಿ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ.
- ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ (SCRI):- ಇದು ನಿರ್ಣಾಯಕ ಸರಕುಗಳ ಪೂರೈಕೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
- ವೇದಿಕೆಗಳು:- ಭಾರತ ಮತ್ತು ಜಪಾನ್ ರಾಷ್ಟ್ರಗಳು ಜಿ-20, ಅಂತಾರಾಷ್ಟ್ರೀಯ ಸೌರ ಒಕ್ಕೂಟ, CDRI ಮತ್ತು IPEF ಗಳಲ್ಲಿ ಸಹಕರಿಸುತ್ತಿದ್ದು, ಇದು ಬಹುಪಕ್ಷೀಯ ಆಡಳಿತವನ್ನು ಬಲಪಡಿಸುತ್ತದೆ.
- ಬಾಹ್ಯಾಕಾಶ:- ಇಸ್ರೋ ಮತ್ತು ಜಾಕ್ಸಾ (JAXA) ದ ‘ಲುಪೆಕ್ಸ್’ ಮಿಷನ್, ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿನ ಅತ್ಯಾಧುನಿಕ ಸಹಯೋಗಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ವಿಶ್ವಸಂಸ್ಥೆಯ ಮುಕ್ತ ಸಾಗರಗಳ (ಹೈ ಸೀಸ್) ಒಪ್ಪಂದ
Geography & Environment

ಇದೀಗ ಸುದ್ದಿಯಲ್ಲಿದೆ:
- ವಿಶ್ವಸಂಸ್ಥೆ ಬೆಂಬಲಿತ ಅಂತರರಾಷ್ಟ್ರೀಯ ಜಲಪ್ರದೇಶಗಳ ಜೀವವೈವಿಧ್ಯ ಕುರಿತು ಒಪ್ಪಂದ ಜಾರಿಗೆ ಬಂದಿದೆ. ಇದನ್ನು ಅಧಿಕೃತವಾಗಿ ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದ’ ಎಂದು ಕರೆಯಲಾಗುತ್ತದೆ.
- ಈ ಒಪ್ಪಂದವು ಮುಕ್ತ ಸಾಗರಗಳನ್ನು ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ಬಳಸಲು, ವಿಶ್ವದ ಮೊದಲ ಕಾನೂನುಬದ್ಧ ಜಾಗತಿಕ ಚೌಕಟ್ಟನ್ನು ಸೃಷ್ಟಿಸಿದೆ.
ಮುಕ್ತ ಸಾಗರಗಳು (High Seas) ಎಂದರೇನು?
- ‘ಮುಕ್ತ ಸಾಗರಗಳು’ ಎಂದರೆ ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ, ಅಂದರೆ 200 ನಾಟಿಕಲ್ ಮೈಲಿಗಳಾಚೆಗಿನ (ವಿಶೇಷ ಆರ್ಥಿಕ ವಲಯಗಳು – EEZs) ಸಾಗರ ಪ್ರದೇಶಗಳಾಗಿವೆ.
- ಇವು ಜಾಗತಿಕ ಸಾಗರದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಮತ್ತು ಭೂ ಮೇಲ್ಮೈಯ ಅರ್ಧದಷ್ಟು ಭಾಗವನ್ನು ಆವರಿಸಿಕೊಂಡಿವೆ.
- ಈ ಹಿಂದೆ, ಇವುಗಳ ನಿರ್ವಹಣೆಯು ಮುಖ್ಯವಾಗಿ UNCLOS ಅಡಿಯಲ್ಲಿನ ಸಾಮಾನ್ಯ ತತ್ವಗಳನ್ನು ಆಧರಿಸಿತ್ತು. ಹೀಗಾಗಿ, ಇಲ್ಲಿ ‘ಜೀವವೈವಿಧ್ಯ-ನಿರ್ದಿಷ್ಟ ನಿಯಂತ್ರಣ’ವು ಸೀಮಿತವಾಗಿತ್ತು.
ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಜೀವವೈವಿಧ್ಯ (BBNJ) ಒಪ್ಪಂದದ ಬಗ್ಗೆ:
- ಅಂಗೀಕಾರ ಮತ್ತು ಹಿನ್ನೆಲೆ:- ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ, ‘ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳ ಸಾಗರ ಜೀವವೈವಿಧ್ಯದ ಕುರಿತಾದ ಅಂತರ-ಸರ್ಕಾರಿ ಸಮ್ಮೇಳನ’ದ ಮುಖಾಂತರ 2023 ರಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಯಿತು.
- UNCLOS ಅಡಿಯಲ್ಲಿನ ಒಂದು ಒಪ್ಪಂದ:- ಇದು ಸಮುದ್ರಗಳ (ಕಡಲ) ಕಾನೂನಿನ ಮೇಲಿನ ವಿಶ್ವಸಂಸ್ಥೆಯ ಸಮಾವೇಶ’ದ (UNCLOS) ಅಡಿಯಲ್ಲಿನ ಒಂದು ಒಪ್ಪಂದವಾಗಿದೆ.
- ಸಾಗರ ಜೀವವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ:- ಇದನ್ನು ಸಾಮಾನ್ಯವಾಗಿ ‘ಮುಕ್ತ ಸಾಗರಗಳು’ ಎಂದು ಕರೆಯಲ್ಪಡುವ, ರಾಷ್ಟ್ರೀಯ ಅಧಿಕಾರ ವ್ಯಾಪ್ತಿಯ ಆಚೆಗಿನ ಪ್ರದೇಶಗಳಲ್ಲಿ (ABNJ) ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
- 83 ಸದಸ್ಯ ರಾಷ್ಟ್ರಗಳು:- ಭಾರತವು ಇದಕ್ಕೆ ಸಹಿ ಹಾಕಿದೆಯಾದರೂ, ಇನ್ನೂ BBNJ ಒಪ್ಪಂದವನ್ನು ದೃಢೀಕರಿಸಿಲ್ಲ.
ಬೀಜ ಕಾಯ್ದೆ, 2026 ಮತ್ತು ರೈತರ ಮೇಲೆ ಇದರ ಪ್ರಭಾವ
ಸಾಮಾನ್ಯ ಅಧ್ಯಯನ- 3/ಕೃಷಿ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು “ಬೀಜ ಕಾಯ್ದೆ, 2026” ರ ವೈಶಿಷ್ಟ್ಯಗಳು ಮತ್ತು ರೈತರ ಮೇಲೆ ಇದರ ಪ್ರಭಾವದ ಬಗ್ಗೆ ವಿವರಣೆ ನೀಡಿದರು.
- ಬೀಜ ಕಾಯ್ದೆ, 2026 ಅನ್ನು ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಬೀಜ ಕಾಯ್ದೆ 2026 ರ ಪ್ರಮುಖ ಅಂಶಗಳು:
- ದೇಶಾದ್ಯಂತ ಬೀಜದ ಮೂಲ ಪತ್ತೆಹಚ್ಚುವಿಕೆ:- ವಾಣಿಜ್ಯ ಉದ್ದೇಶದಿಂದ ಮಾರಾಟವಾಗುವ ಬಿತ್ತನೆ ಬೀಜದ ಪ್ರತಿ ಪ್ಯಾಕೆಟ್, ರೈತರು ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ (QR) ಕೋಡ್ ಅನ್ನು ಹೊಂದಿರುತ್ತದೆ.
- ಸ್ಕ್ಯಾನಿಂಗ್ ಈ ಕೆಳಗಿನ ಪ್ರಮುಖ ಮಾಹಿತಿಯನ್ನು ಹೊಂದಿರುತ್ತದೆ ಮತ್ತು ಒದಗಿಸುತ್ತದೆ:-
- ಬೀಜವನ್ನು ಯಾರು ಉತ್ಪಾದಿಸಿದರು,
- ಎಲ್ಲಿಂದ ಪಡೆಯಲಾಗಿದೆ
- ಯಾವ ಮಾರಾಟಗಾರರು ಅದನ್ನು ಮಾರಾಟ ಮಾಡಿದ್ದಾರೆ.
- ನೊಂದ ರೈತರಿಗೆ ತ್ವರಿತ ಪರಿಹಾರ:- ಅನಾಮಧೇಯ ಬೀಜ ಮಾರಾಟದ ನಿರ್ಮೂಲನೆ, ನಕಲಿ ಅಥವಾ ಕಳಪೆ ಗುಣಮಟ್ಟದ ಬೀಜಗಳನ್ನು ತ್ವರಿತವಾಗಿ ಪತ್ತೆಹಚ್ಚುವ ಗುರಿಯನ್ನು ಇದು ಹೊಂದಿದ್ದು, ನೊಂದ ರೈತರಿಗೆ ತ್ವರಿತ ಪರಿಹಾರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ.
- ಬೀಜ ಕಂಪನಿಗಳು ಮತ್ತು ಮಾರಾಟಗಾರರ ಕಡ್ಡಾಯ ನೋಂದಣಿ:– ವಾಣಿಜ್ಯ ಉದ್ದೇಶದ ಬೀಜ ಉತ್ಪಾದಕರ, ವರ್ತಕರ ಮತ್ತು ವಿತರಕರ ಕಡ್ಡಾಯ ನೋಂದಣಿಯನ್ನು ಈ ಕಾಯ್ದೆಯು ಪ್ರಸ್ತಾಪಿಸುತ್ತದೆ.
- ಕಳಪೆ ಮತ್ತು ನಕಲಿ ಬೀಜಗಳಿಗೆ ಕಠಿಣ ದಂಡಗಳು:– ಉದ್ದೇಶಪೂರ್ವಕ ಉಲ್ಲಂಘನೆಗಳಿಗಾಗಿ, ಹೊಸ ಕಾಯ್ದೆಯು ₹30 ಲಕ್ಷದವರೆಗೆ ದಂಡ ಮತ್ತು ಸಂಭವನೀಯ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.
- ಸಾಂಪ್ರದಾಯಿಕ ಬೀಜ ಪದ್ಧತಿಗಳ ಸಂರಕ್ಷಣೆ:– ಸಮುದಾಯದೊಳಗೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ಮತ್ತು ವಿನಿಮಯ ಮಾಡಿಕೊಳ್ಳುವಂತಹ ರೈತರ ಸಾಂಪ್ರದಾಯಿಕ ಪದ್ಧತಿಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.
- ಹೊಸ ಕಾಯ್ದೆಯು ವಾಣಿಜ್ಯ ಉದ್ದೇಶದ ಬೀಜದ ಗುಣಮಟ್ಟದ ಮೇಲೆ ಮಾತ್ರ ಗಮನಹರಿಸುತ್ತದೆ, ಆದರೆ ಸಾಂಪ್ರದಾಯಿಕ ಹಾಗೂ ಬ್ರ್ಯಾಂಡ್-ರಹಿತ ಬೀಜ ವ್ಯವಸ್ಥೆಗಳ ಮೇಲೆ ಗಮನ ಹರಿಸುವುದಿಲ್ಲ.
- ಆಮದು ಮಾಡಿಕೊಂಡ ಬೀಜಗಳ ವೈಜ್ಞಾನಿಕ ಮೌಲ್ಯಮಾಪನ:- ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಅವು ಪರಿಸರೀಯ, ಕೃಷಿ ಪದ್ಧತಿಯ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದನ್ನು ಇದು ಖಚಿತಪಡಿಸುತ್ತದೆ.
- ಸ್ಥಳೀಯ ರೈತರ ಸಂರಕ್ಷಣೆ:- ಭಾರತದ ಬೆಳೆಯುವ ಪರಿಸ್ಥಿತಿಗಳಿಗೆ ಸೂಕ್ತವಲ್ಲದ ಕಳಪೆ ವಿದೇಶಿ ಬೀಜಗಳಿಂದ ಇದು ಸ್ಥಳೀಯ ರೈತರನ್ನು ರಕ್ಷಿಸುತ್ತದೆ.
- ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಒಕ್ಕೂಟದ ಸಹಕಾರ:- ವಿವಿಧ ಪ್ರದೇಶಗಳಲ್ಲಿ ಬೀಜ ಪರೀಕ್ಷೆ, ನೋಂದಣಿ ಮತ್ತು ಕಾನೂನು ಜಾರಿ ಪ್ರಕ್ರಿಯೆಗಳಲ್ಲಿ ಸಮನ್ವಯವನ್ನು ಸುಧಾರಿಸಲು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲು ಈ ಕಾಯ್ದೆಯು ಅವಕಾಶ ಕಲ್ಪಿಸುತ್ತದೆ.
- ಕೃಷಿಯು ರಾಜ್ಯ ಪಟ್ಟಿಯ ವಿಷಯವಾಗಿದೆ:- ಭಾರತೀಯ ಸಂವಿಧಾನದ 7ನೇ ಅನುಸೂಚಿಯ ಅಡಿಯಲ್ಲಿ ರಾಜ್ಯ ಪಟ್ಟಿ ಇದೆ. ಆದ್ದರಿಂದ, ಈ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಜಾರಿಗೊಳಿಸುವಲ್ಲಿ ಕೇಂದ್ರದ ಜೊತೆಗೆ ರಾಜ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ತಿರುವಳ್ಳುವರ್ ದಿನ
ಸಾಮಾನ್ಯ ಅಧ್ಯಯನ- 1/ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿರುವಳ್ಳುವರ್ ಅವರ ಸರ್ವಕಾಲಿಕ ಕೃತಿಗಳು ಮತ್ತು ಆದರ್ಶಗಳ ಶಾಶ್ವತ ಪ್ರಭಾವವನ್ನು ಗುರುತಿಸಿ, ಅವರಿಗೆ ಗೌರವ ನಮನ ಸಲ್ಲಿಸಿದರು.
ತಿರುವಳ್ಳುವರ್ ದಿನದ ಕುರಿತು:
- ಮೊದಲ ಬಾರಿಗೆ ಆಚರಣೆ:- ಮೇ 17 ಮತ್ತು 18, 1935 ರಂದು.
- ಪ್ರಸ್ತುತ ಸಮಯದಲ್ಲಿ, ಇದನ್ನು ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಜನವರಿ 15 ಅಥವಾ 16 ರಂದು ‘ಪೊಂಗಲ್’ ಆಚರಣೆಯ ಭಾಗವಾಗಿ ಆಚರಿಸಲಾಗುತ್ತದೆ.
‘ತಿರುವಳ್ಳುವರ್’ ಅವರ ಬಗ್ಗೆ:
- ಶ್ರೇಷ್ಠ ತಮಿಳು ಕವಿ:- ಸಾಮಾನ್ಯವಾಗಿ ‘ವಳ್ಳುವರ್’ ಎಂದು ಕರೆಯಲ್ಪಡುವ ತಿರುವಳ್ಳುವರ್ ಅವರು, ಒಬ್ಬ ಪ್ರಸಿದ್ಧ ತಮಿಳು ಕವಿ ಮತ್ತು ತತ್ವಜ್ಞಾನಿಯಾಗಿದ್ದರು.
- ತಿರುಕ್ಕುರಳ್ (ದ್ವಿಪದಿಗಳ ಸಂಗ್ರಹ):- ಇವರು ನೀತಿ, ರಾಜಕೀಯ, ಆರ್ಥಿಕತೆ ಮತ್ತು ಪ್ರೀತಿಯ ಕುರಿತಾದ ದ್ವಿಪದಿಗಳ ಸಂಗ್ರಹವಾದ ‘ತಿರುಕ್ಕುರಳ್’ ಕೃತಿಯ ಕರ್ತೃ ಎಂದು ಪ್ರಸಿದ್ಧರಾಗಿದ್ದಾರೆ.
ಜಲ್ಲಿಕಟ್ಟು
ಸಾಮಾನ್ಯ ಅಧ್ಯಯನ- 1/ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇತ್ತೀಚಿಗೆ ಅಲಂಗನಲ್ಲೂರ್‌ನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಜಲ್ಲಿಕಟ್ಟು ಕ್ರೀಡೆಯ ಬಗ್ಗೆ:
- ಇದನ್ನು ‘ಏರುತಝುವ್ವುತಲ್’ ಎಂತಲೂ ಕರೆಯಲಾಗುತ್ತದೆ.
- ಗೂಳಿ ಪಳಗಿಸುವ ಕ್ರೀಡೆಯಾಗಿದೆ:- ತಮಿಳುನಾಡಿನಲ್ಲಿ ಸುಗ್ಗಿ ಹಬ್ಬವಾದ ‘ಪೊಂಗಲ್’ ಆಚರಣೆಯ ಭಾಗವಾಗಿ ಇದನ್ನು ಸಾಂಪ್ರದಾಯಿಕವಾಗಿ ಆಡಲಾಗುತ್ತದೆ.
- ಅಯರ್‌ರು ಆಡುತ್ತಿದ್ದ ಕ್ರೀಡೆ:- ಈ ಗೂಳಿ ಕಾಳಗದ ಇತಿಹಾಸವು ಕ್ರಿ. ಪೂ. 400-100 ರಷ್ಟು ಹಳೆಯದಾಗಿದ್ದು, ಆ ಸಮಯದಲ್ಲಿ ಭಾರತದ ಜನಾಂಗೀಯ ಗುಂಪಾದ ‘ಅಯರ್‌ರು’ ಇದನ್ನು ಆಡುತ್ತಿದ್ದರು.
- ಜಲ್ಲಿ + ಕಟ್ಟು:- ಎಂಬ ಎರಡು ಪದಗಳಿಂದ ಬಂದಿದೆ. ‘ಜಲ್ಲಿ’ ಎಂದರೆ ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು ಮತ್ತು ‘ಕಟ್ಟು’ ಎಂದರೆ ಕಟ್ಟಿರುವುದು.
- ಈ ಹಬ್ಬದಲ್ಲಿ, ಜನರ ಗುಂಪಿನ ನಡುವೆ ಗೂಳಿಯನ್ನು ಮುಕ್ತವಾಗಿ ಬಿಡಲಾಗುತ್ತದೆ ಮತ್ತು ಅದನ್ನು ಯಾರು ಪಳಗಿಸುತ್ತಾರೋ ಅವರು ಅದರ ಕೊಂಬಿಗೆ ಕಟ್ಟಿದ ನಾಣ್ಯಗಳನ್ನು ಬಹುಮಾನವಾಗಿ ಪಡೆಯುತ್ತಾರೆ.
- ಈ ಕ್ರೀಡೆಯಲ್ಲಿ ಭಾಗವಹಿಸುವ ಜನರು ಪ್ರಾಣಿಯನ್ನು ತಡೆಯಲು ಅದರ ಡುಬ್ಬವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಅಥವಾ ಕೆಲವೊಮ್ಮೆ ಅವರು ಗೂಳಿಯೊಂದಿಗೆ ಓಡುತ್ತಾರೆ.
- ‘ಪುಲಿಕುಲಂ’ ಅಥವಾ ‘ಕಾಂಗಯಂ’ ತಳಿಯ ಹೋರಿಗಳ ಬಳಕೆ:- ಈ ಹಬ್ಬವು ರಾಜ್ಯದ ಸಾಂಸ್ಕೃತಿಕ ಪ್ರವಾಸೋದ್ಯಮದ ಭಾಗವಾಗಿದೆ.
- ಈ ಕ್ರೀಡೆಯ ವಿವಿಧ ಪ್ರಕಾರಗಳು:- ‘ವಾಡಿ ಮಂಜುವಿರಟ್ಟು’, ‘ವೇಲಿ ವಿರಟ್ಟು’ ಮತ್ತು ‘ವಟಂ ಮಂಜುವಿರಟ್ಟು’.
ಪ್ರಮುಖ ಕಳವಳಗಳು:
- ಪ್ರಾಣಿ ಹಿಂಸೆ ಮತ್ತು ನರಳುವಿಕೆ:- ಗೂಳಿಗಳನ್ನು ಪ್ರಚೋದಿಸಲು ಮದ್ಯ, ಕೋಲುಗಳು, ಚಾಕುಗಳು ಮತ್ತು ಮೆಣಸಿನ ಪುಡಿಯನ್ನು ಕಣ್ಣುಗಳಿಗೆ ಹಾಕಲಾಗುತ್ತದೆ. ತರಬೇತಿ ಮತ್ತು ಪಂದ್ಯದ ಸಮಯದಲ್ಲಿ ಬಾಲವನ್ನು ತಿರುಚುವುದು ಮತ್ತು ದೈಹಿಕ ದೌರ್ಜನ್ಯವು ಗೂಳಿಗಳಿಗೆ ವಿಪರೀತ ಒತ್ತಡ, ನೋವು ಮತ್ತು ಗಂಭೀರ ಗಾಯಗಳನ್ನು ಉಂಟುಮಾಡುತ್ತದೆ.
- ಮಾನವ ಗಾಯಗಳು ಮತ್ತು ಸಾವುಗಳು:- ಈ ಪಂದ್ಯಾವಳಿಯು ಗಮನಾರ್ಹ ಅಪಾಯಗಳನ್ನು ತಂದೊಡ್ಡುತ್ತದೆ. ಹಿಂದಿನ ವರ್ಷಗಳಲ್ಲಿ ಸ್ಪರ್ಧಿಗಳು ಮತ್ತು ಗೂಳಿಗಳು ಇಬ್ಬರಿಗೂ ಹಲವಾರು ಗಾಯಗಳು ಮತ್ತು ಸಾವುಗಳು ಸಂಭವಿಸಿರುವುದು ವರದಿಯಾಗಿದೆ.
- ನೈತಿಕ ಪರಿಗಣನೆಗಳು:– ಸಾಂಸ್ಕೃತಿಕ ಮಹತ್ವ ಏನೇ ಇದ್ದರೂ, ಮನರಂಜನೆಗಾಗಿ ಗೂಳಿಗಳನ್ನು ಬಳಸುವುದು ಅನೈತಿಕವಾಗಿದೆ ಎಂದು ಪ್ರಾಣಿ ಹಕ್ಕುಗಳ ಸಂಘಗಳು ವಾದಿಸುತ್ತವೆ. ಈ ಆಚರಣೆಯು ಪ್ರಾಣಿಗಳನ್ನು ಶೋಷಿಸುತ್ತದೆ ಮತ್ತು ಅವುಗಳಿಗೆ ಆಘಾತವನ್ನು ಉಂಟುಮಾಡುತ್ತದೆ.
- 2023 ರಲ್ಲಿ ಸರ್ವೋಚ್ಚ ನ್ಯಾಯಾಲಯವು, ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯ್ದೆ, 1960’ ಕ್ಕೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ಶಾಸಕಾಂಗಗಳು ಮಾಡಿದ ತಿದ್ದುಪಡಿಗಳನ್ನು ಎತ್ತಿಹಿಡಿದಿದೆ. ಇದು ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಗಾಡಿ ಓಟದಂತಹ ಗೂಳಿ ಪಳಗಿಸುವ ಕ್ರೀಡೆಗಳಿಗೆ ಅನುಮತಿ ನೀಡಿದೆ.



ನಿಮ್ಮದೊಂದು ಉತ್ತರ