ಶ್ವಾಸಗತ ನೈಟ್ರಿಕ್ ಆಕ್ಸೈಡ್ (Inhaled Nitric Oxide)
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಹೆಚ್ಚಿನ ಪ್ರಮಾಣದ ನೈಟ್ರಿಕ್ ಆಕ್ಸೈಡ್ ಅನ್ನು ಉಸಿರಾಟದ ಮೂಲಕ ಸೇವಿಸುವುದರಿಂದ (ಶ್ವಾಸಗತ), ಬಹು-ಔಷಧ ನಿರೋಧಕ ಶ್ವಾಸಕೋಶದ ಉರಿಯೂತ (ನ್ಯುಮೋನಿಯಾ) ವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಪ್ರಸ್ತುತತೆ:
- ಭಾರತವು ಸೂಕ್ಷ್ಮಾಣುಜೀವಿ ನಿರೋಧಕತೆ (AMR – ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ಮತ್ತು ಆಸ್ಪತ್ರೆಯಿಂದ ಹರಡುವ ಸೋಂಕುಗಳ ಹೆಚ್ಚಿನ ಹೊರೆಯನ್ನು ಎದುರಿಸುತ್ತಿದೆ. ವಿಶೇಷವಾಗಿ, ತೀವ್ರ ನಿಗಾ ಘಟಕಗಳಲ್ಲಿ (ICUs) ಔಷಧ-ನಿರೋಧಕ ನ್ಯುಮೋನಿಯಾ ಒಂದು ಗಂಭೀರ ಅಪಾಯಕಾರಿಯಾಗಿ ಪರಿಣಮಿಸಿದೆ.
- ಇದಕ್ಕೆ ‘ಸ್ಯೂಡೋಮೊನಾಸ್ ಎರುಜಿನೋಸಾ’ (Pseudomonas aeruginosa) ಎಂಬ ಬ್ಯಾಕ್ಟೀರಿಯಾ ಪ್ರಮುಖ ಕಾರಣವಾಗಿದೆ. ಆಸ್ಪತ್ರೆಯಿಂದ ಹರಡುವ ನ್ಯುಮೋನಿಯಾ ಪ್ರಕರಣಗಳಲ್ಲಿ ಸುಮಾರು ಐದನೇ ಒಂದರಷ್ಟು (1/5) ಭಾಗಕ್ಕೆ ಈ ಬ್ಯಾಕ್ಟೀರಿಯಾವೇ ಕಾರಣವಾಗಿದೆ.
ನೈಟ್ರಿಕ್ ಆಕ್ಸೈಡ್ ನ ಬಗ್ಗೆ:
- ನೈಟ್ರಿಕ್ ಆಕ್ಸೈಡ್ (NO) ಒಂದು ಬಣ್ಣರಹಿತ, ಅನಿಲ ರೂಪದ ಮುಕ್ತ/ಸ್ವತಂತ್ರ ಪ್ರತಿಕ್ರಿಯಾತ್ಮಕ ಕಣದ ಅಣುವಾಗಿದೆ.
- ಇದು ಒಂದು ಸಾರಜನಕ ಮತ್ತು ಒಂದು ಆಮ್ಲಜನಕ ಪರಮಾಣುವಿನಿಂದ ಮಾಡಲ್ಪಟ್ಟಿದೆ.
- ಉತ್ಪಾದನೆ:- ಇದು ‘ಎಲ್-ಆರ್ಜಿನಿನ್’ (L-arginine) ಎಂಬ ಅಮೈನೋ ಆಮ್ಲದಿಂದ ಮಾನವನ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಅನಿಲವಾಗಿದೆ.
- ಸೊಪ್ಪು, ಬೀಟ್‌ರೂಟ್ ಮತ್ತು ಬೆಳ್ಳುಳ್ಳಿಯಂತಹ ನೈಟ್ರೇಟ ಭರಿತ ಆಹಾರಗಳ ಸೇವನೆಯ ಮೂಲಕ ಇದರ ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚಿಸಬಹುದು.
- ಕಾರ್ಯಗಳು:- ಇದು ನರಸಂವಾಹಕವಾಗಿ, ರೋಗನಿರೋಧಕ ವ್ಯವಸ್ಥೆಯ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಸ ರಕ್ತನಾಳಗಳ ರಚನೆ (ಆಂಜಿಯೋಜೆನೆಸಿಸ್) ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
- ಪ್ರಾಮುಖ್ಯತೆ:- ಶ್ವಾಸಕೋಶದಲ್ಲಿನ ರಕ್ತನಾಳಗಳನ್ನು ವಿಸ್ತರಿಸುವ ಮೂಲಕ ಇದು ದೇಹದಲ್ಲಿ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ.
- ಅಡ್ಡಪರಿಣಾಮಗಳ ಅಪಾಯ:- ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ‘ಮೆಥೆಮೊಗ್ಲೋಬಿನೆಮಿಯಾ’ ಉಂಟಾಗುವ ಅಪಾಯವಿರುತ್ತದೆ ಹಾಗೂ ಶ್ವಾಸಕೋಶದ ಹಾನಿಗೆ ಕಾರಣವಾಗುವ ಸಂಭವವಿರುತ್ತದೆ.
ದೇಶದ ಮೊದಲ ನೀರೊಳಗಿನ ರಸ್ತೆ-ರೈಲು ಸುರಂಗ ಮಾರ್ಗ ಯೋಜನೆ
ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ದೇಶದ ಮೊಟ್ಟಮೊದಲ ‘ನೀರೊಳಗಿನ ಅವಳಿ ರಸ್ತೆ ಮತ್ತು ರೈಲು ಸುರಂಗ ಯೋಜನೆ’ಯ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹ 18,662 ಕೋಟಿ ರೂಪಾಯಿಗಳಾಗಿದೆ.
ಈ ಯೋಜನೆಯ ಬಗ್ಗೆ:
- ಉದ್ದ:- ಇದು ಸುಮಾರು 34 ಕಿಲೋಮೀಟರ್ ಉದ್ದದ, ನಾಲ್ಕು-ಪಥದ ‘ಪ್ರವೇಶ-ನಿಯಂತ್ರಿತ ಸಂಪೂರ್ಣ ಹೊಸ ಮಾರ್ಗದ (ಗ್ರೀನ್‌ಫೀಲ್ಡ್) ಸಂಪರ್ಕ ಯೋಜನೆ’ಯಾಗಿದೆ.
- ವೈಶಿಷ್ಟ್ಯಗಳು:- ಇದು ರಸ್ತೆ ಮತ್ತು ರೈಲು ಸಂಚಾರ ಎರಡರ ಸುಗಮ ಹಾಗೂ ಹೆಚ್ಚಿನ ಸಾಮರ್ಥ್ಯದ ಚಲನೆಯನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ಎರಡು ಸಮಾನಾಂತರ ಸುರಂಗಗಳನ್ನು ಒಳಗೊಂಡಿರುತ್ತದೆ.
- ಸಂಪರ್ಕ:- ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ-15 ರ (NH-15) ‘ಗೊಹ್‌ಪುರ್’ ಮತ್ತು ರಾಷ್ಟ್ರೀಯ ಹೆದ್ದಾರಿ-715 ರ (NH-715) ‘ನುಮಾಲಿಗಢ’ವನ್ನು ಸಂಪರ್ಕಿಸುತ್ತದೆ.
- ಇದು ಅಸ್ಸಾಂನ ಈ ಎರಡು ನಗರಗಳ ನಡುವಿನ ಪ್ರಸ್ತುತ 240 ಕಿಲೋಮೀಟರ್ ದೂರವನ್ನು ಕೇವಲ 34 ಕಿಲೋಮೀಟರ್‌ಗಳಿಗೆ ತಗ್ಗಿಸುತ್ತದೆ.
- ಇದರಿಂದ ಪ್ರಯಾಣದ ಸಮಯವು ಪ್ರಸ್ತುತ ಇರುವ ಆರು ಗಂಟೆಗಳಿಂದ ಕೇವಲ 20 ನಿಮಿಷಗಳಿಗೆ ಇಳಿಕೆಯಾಗಲಿದೆ.
- ಪ್ರಾಮುಖ್ಯತೆ:- ಈ ಯೋಜನೆಯು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ ಪ್ರಯೋಜನವನ್ನು ಒದಗಿಸಲಿದೆ.
- ಇದು ಸಂಪರ್ಕವನ್ನು ಹೆಚ್ಚಿಸುತ್ತದೆ, ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಅಸ್ಸಾಂ ಹಾಗೂ ಇಡೀ ಈಶಾನ್ಯ ಭಾರತದಾದ್ಯಂತ ಅಭಿವೃದ್ಧಿಯನ್ನು ಚುರುಕುಗೊಳಿಸುತ್ತದೆ.
ಬ್ರಹ್ಮಪುತ್ರ ನದಿಯ ಬಗ್ಗೆ:

- ಬ್ರಹ್ಮಪುತ್ರ ನದಿಯು ಏಷ್ಯಾದ ಪ್ರಮುಖ ಗಡಿಯಾಚೆಗಿನ (ಅಂತರರಾಷ್ಟ್ರೀಯ ಗಡಿಗಳನ್ನು ಹಾದುಹರಿಯುವ) ನದಿಯಾಗಿದೆ.
- ಇದು ಟಿಬೆಟ್‌ನ ಮಾನಸ ಸರೋವರದ (ಮಪಮ್ ಯುಮ್ಕೊ) ಬಳಿಯ ‘ಚೆಮಾಯುಂಗ್‌ಡುಂಗ್’ ಹಿಮನದಿಯಿಂದ ಉಗಮಿಸುತ್ತದೆ.
- ಈ ನದಿಯನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.
- ಟಿಬೆಟ್‌ನಲ್ಲಿ (ನದಿಯ ಮೇಲ್ಭಾಗದ ಅತಿ ಉದ್ದದ ಹರಿವು) ‘ಯಾರ್ಲುಂಗ್ ತ್ಸಾಂಗ್ಪೋ’.
- ಅರುಣಾಚಲ ಪ್ರದೇಶದಲ್ಲಿ ‘ಸಿಯಾಂಗ್’ ಅಥವಾ ‘ದಿಹಾಂಗ್’.
- ಅಸ್ಸಾಂನಲ್ಲಿ ‘ಬ್ರಹ್ಮಪುತ್ರ’.
- ಬಾಂಗ್ಲಾದೇಶದಲ್ಲಿ ‘ಜಮುನಾ’.
- ಇದು ಟಿಬೆಟ್ ಪ್ರಸ್ಥಭೂಮಿಯ ಮೂಲಕ ಪೂರ್ವಕ್ಕೆ ಹರಿದು, ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಅಸ್ಸಾಂನ ಬಯಲು ಸೀಮೆಯಲ್ಲಿ ವಿಸ್ತಾರವಾಗಿ ಹರಿಯುವ ಇದು, ಬಂಗಾಳಕೊಲ್ಲಿಯನ್ನು ಸೇರುವ ಮೊದಲು ಬಾಂಗ್ಲಾದೇಶದಲ್ಲಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ.
ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ (ನಿಧಿಗಳ ನಿಧಿ) 2.0
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ₹10,000 ಕೋಟಿ ರೂ.ಗಳ ನಿಧಿಯೊಂದಿಗೆ ‘ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0’ (FoF 2.0) ಸ್ಥಾಪನೆಗೆ ಅನುಮೋದನೆ ನೀಡಿದೆ.
- ಈ ನಡೆ ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸ್ಟಾರ್ಟ್‌ಅಪ್ (ನವೋದ್ಯಮ) ಪರಿಸರ ವ್ಯವಸ್ಥೆಗೆ ‘ವೆಂಚರ್ ಕ್ಯಾಪಿಟಲ್’ (ಸಾಹಸೋದ್ಯಮ ಬಂಡವಾಳ) ಅನ್ನು ಕ್ರೂಢೀಕರಿಸುವ ಉದ್ದೇಶವಾಗಿದೆ.
ವೆಂಚರ್ ಕ್ಯಾಪಿಟಲ್ (ಸಾಹಸೋದ್ಯಮ ಬಂಡವಾಳ) ನ ಬಗ್ಗೆ:
- ವ್ಯಾಖ್ಯಾನ:- ದೀರ್ಘಾವಧಿಯ ಬೆಳವಣಿಗೆಯನ್ನು ನಿರೀಕ್ಷಿಸಿ, ಉದಯೋನ್ಮುಖ ಕಂಪನಿಗಳಿಗೆ (ನವೋದ್ಯಮಗಳಿಗೆ) ಶ್ರೀಮಂತ ವ್ಯಕ್ತಿಗಳು ಅಥವಾ ಸಾಂಸ್ಥಿಕ ಹೂಡಿಕೆದಾರರು ಒದಗಿಸುವ ಆರ್ಥಿಕ ಬೆಂಬಲ ಅಥವಾ ನಿಧಿಯನ್ನೇ ‘ವೆಂಚರ್ ಕ್ಯಾಪಿಟಲ್’ ಎನ್ನಲಾಗುತ್ತದೆ.
- ಸ್ವರೂಪ:- ಇದು ಹೆಚ್ಚಿನ ಅಪಾಯದಿಂದ ಕೂಡಿದ್ದರೂ, ಹೆಚ್ಚಿನ ಲಾಭದ ಅಥವಾ ಆದಾಯದ ಸಾಮರ್ಥ್ಯವನ್ನು ಹೊಂದಿದೆ.
- ಹೂಡಿಕೆಯ ವಿಧಾನಗಳು:- ಇದನ್ನು ಇಕ್ವಿಟಿ (ಷೇರುಪಾಲು), ಡಿಬೆಂಚರ್‌ಗಳು (ಸಾಲಪತ್ರಗಳು) ಅಥವಾ ಷರತ್ತುಬದ್ಧ ಸಾಲಗಳ ಮೂಲಕ ಒದಗಿಸಬಹುದು.
ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 (FoF 2.0) ನ ಬಗ್ಗೆ:
- ಉದ್ದೇಶ:- ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ ವ್ಯವಸ್ಥೆಗೆ ಅಗತ್ಯವಿರುವ ಸಾಹಸೋದ್ಯಮ ಬಂಡವಾಳವನ್ನು ಒಟ್ಟುಗೂಡಿಸುವುದು ಮತ್ತು ಆರ್ಥಿಕ ಬೆಂಬಲ ನೀಡುವುದು.
ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಬಗ್ಗೆ:
- ಪ್ರಾರಂಭ:- ಜನವರಿ 16, 2016.
- ಉದ್ದೇಶ:- ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಹೂಡಿಕೆ-ಪ್ರೇರಿತ ಆರ್ಥಿಕ ಬೆಳವಣಿಗೆಯನ್ನು ಸಕ್ರಿಯಗೊಳಿಸುವುದು.
ಭಾರತದ ನವೋದ್ಯಮ ಪರಿಸರ ವ್ಯವಸ್ಥೆ:
- ಬೆಳವಣಿಗೆ:- ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ವೇಗವಾಗಿ ವಿಕಸನಗೊಂಡಿದ್ದು, 2025 ರ ಹೊತ್ತಿಗೆ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿದೆ.
- ಜಾಗತಿಕ ಸ್ಥಾನ:- ಭಾರತವು ಪ್ರಸ್ತುತ ಜಗತ್ತಿನ 3ನೇ ಅತಿದೊಡ್ಡ ನವೋದ್ಯಮ (ಸ್ಟಾರ್ಟ್ಅಪ್) ಪರಿಸರ ವ್ಯವಸ್ಥೆಯಾಗಿದೆ.
- ಪ್ರಮುಖ ಕೇಂದ್ರಗಳು:- ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶದಂತಹ ಪ್ರಮುಖ ಮಹಾನಗರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ.
- ಯುನಿಕಾರ್ನ್‌ಗಳು:- ಭಾರತವು 120 ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ($1 ಬಿಲಿಯನ್‌ಗೂ ಅಧಿಕ ಮೌಲ್ಯದ ನವೋದ್ಯಮಗಳು) ಇವುಗಳ ಒಟ್ಟು ಮೌಲ್ಯ $350 ಬಿಲಿಯನ್ ಡಾಲರ್‌ಗಳನ್ನು ಮೀರಿದೆ.
- ಜಾಗತಿಕ ನಾವೀನ್ಯತಾ ಸೂಚ್ಯಂಕ (GII) 2025:- ಈ ಸೂಚ್ಯಂಕವು ಜಗತ್ತಿನ ಸುಮಾರು 140 ಆರ್ಥಿಕತೆಗಳ ನಾವೀನ್ಯತಾ ಪರಿಸರ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ ಮತ್ತು ಶ್ರೇಯಾಂಕ ನೀಡುತ್ತದೆ.
- ಈ ಸೂಚ್ಯಂಕದಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದು, 2020 ರಲ್ಲಿ 48 ನೇ ಸ್ಥಾನದಲ್ಲಿದ್ದು 2025 ರ ಹೊತ್ತಿಗೆ 38 ನೇ ಸ್ಥಾನಕ್ಕೆ ಏರಿಕೆ ಕಂಡಿದೆ.



ನಿಮ್ಮದೊಂದು ಉತ್ತರ