ಶ್ರೀ ಗುರು ತೇಘ (ತೇಜ್) ಬಹದ್ದೂರ್
ಇತಿಹಾಸ

ಇದೀಗ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿಯವರು ಗುರು ತೇಜ್ ಬಹದ್ದೂರ್ ಅವರ 350ನೇ ಹುತಾತ್ಮ ವರ್ಷದ (ಶಹೀದಿ ಸಮಾಗಮ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
- ಈ ವೇಳೆ ಅವರು ಗುರುವಿನ ಬಲಿದಾನಕ್ಕೆ ನಮನ ಸಲ್ಲಿಸಿದರು ಹಾಗೂ ಶೌರ್ಯ, ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯ ಕುರಿತಾದ ಭಾರತದ ಪರಂಪರೆಯನ್ನು ಸ್ಮರಿಸಿದರು.
ಗುರು ತೇಘ (ತೇಜ್) ಬಹದ್ದೂರ್ ಅವರ ಬಗ್ಗೆ:
- ಇವರು 1621ರಲ್ಲಿ ಅಮೃತಸರದಲ್ಲಿ ಸಿಖ್ಖರ 6ನೇ ಗುರುವಾದ ಗುರು ಹರಗೋಬಿಂದ್ ಅವರ ಪುತ್ರನಾಗಿ ಜನಿಸಿದರು.
- ಇವರು ತಮ್ಮ 13ನೇ ವಯಸ್ಸಿನಲ್ಲಿಯೇ ಯುದ್ಧಭೂಮಿಯಲ್ಲಿ ತೋರಿದ ಅಪ್ರತಿಮ ಶೌರ್ಯದಿಂದಾಗಿ ‘ತೇಜ್ ಬಹದ್ದೂರ್’ (ಕತ್ತಿಯ ವೀರ) ಎಂಬ ಬಿರುದಿಗೆ ಪಾತ್ರರಾದರು.
- ಮಖನ್ ಶಾ ಎಂಬ ವ್ಯಾಪಾರಿಯಿಂದ ಗುರುತಿಸಲ್ಪಡುವ ಮುನ್ನ ಇವರು ಬಕಾಲ ಎಂಬಲ್ಲಿ ಹಲವು ವರ್ಷಗಳ ಕಾಲ ಧ್ಯಾನದಲ್ಲಿ ತೊಡಗಿದ್ದರು. ತದನಂತರ 1664ರಲ್ಲಿ ಇವರನ್ನು ಸಿಖ್ಖರ 9ನೇ ಗುರು ಎಂದು ಅಂಗೀಕರಿಸಲಾಯಿತು.
- ಇವರ ಪುತ್ರ ಗುರು ಗೋಬಿಂದ್ ಸಿಂಗ್ ಅವರು, “ತಮ್ಮ ಶಿರವನ್ನೇ ಅರ್ಪಿಸಿದರೂ ನಂಬಿಕೆಯನ್ನು ಬಿಟ್ಟುಕೊಡದ ಮಹಾನ್ ಚೇತನ” ಎಂದು ಇವರನ್ನು ಗೌರವಿಸಿದರು. ಈ ಮೂಲಕ ಇವರು ಭಾರತದ ಆತ್ಮಸಾಕ್ಷಿ ಮತ್ತು ಧರ್ಮದ ರಕ್ಷಕನಾದ ‘ಹಿಂದ್ ದಿ ಚಾದರ್’ ಎಂಬ ಶಾಶ್ವತ ಕೀರ್ತಿಗೆ ಭಾಜನರಾದರು.
ಗುರು ತೇಜ್ ಬಹದ್ದೂರ್ ಅವರ ಕೊಡುಗೆಗಳು:
- ಚಕ್ ನಾನಕಿ (ಇಂದಿನ ಆನಂದಪುರ ಸಾಹಿಬ್) ನಗರವನ್ನು ಸ್ಥಾಪಿಸಿದರು:- ಉತ್ತರ ಮತ್ತು ಪೂರ್ವ ಭಾರತದಾದ್ಯಂತ ವ್ಯಾಪಕವಾಗಿ ಸಂಚರಿಸಿದ ಇವರು, ನಿರ್ಭಯತೆ, ಸಮಾನತೆ ಮತ್ತು ಏಕದೇವೋಪಾಸನೆಯನ್ನು ಪ್ರತಿಪಾದಿಸುವ ಆಧ್ಯಾತ್ಮಿಕ ಬೋಧನೆಗಳನ್ನು ಪಸರಿಸಿದರು.
- ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಧಾರ್ಮಿಕ ಉದ್ವಿಗ್ನತೆ ಮತ್ತು ಬಲವಂತದ ಮತಾಂತರಗಳು ಮಿತಿಮೀರಿದ್ದವು. ಆ ಸಂದರ್ಭದಲ್ಲಿ ಇವರ ಸಂದೇಶಗಳು ಜನಮಾನಸದಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸಿದವು.
- ಕಾಶ್ಮೀರಿ ಬ್ರಾಹ್ಮಣರು ದೌರ್ಜನ್ಯದಿಂದ ಪಾರಾಗಲು ಇವರ ರಕ್ಷಣೆ ಕೋರಿದಾಗ, ಗುರು ತೇಜ್ ಬಹದ್ದೂರ್ ಅವರು ಮೊಘಲರ ಅಧಿಕಾರವನ್ನು ದಿಟ್ಟವಾಗಿ ಪ್ರಶ್ನಿಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ನಿಂತರು.
- ಮರಣ:- ಇವರನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕಾಗಿ, 1675ರಲ್ಲಿ ಇವರನ್ನು ಮತ್ತು ಇವರ ಒಡನಾಡಿಗಳನ್ನು ದೆಹಲಿಯ ಚಾಂದಿನಿ ಚೌಕ್ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಇವರುಗೈದ ಈ ಬಲಿದಾನವನ್ನು ಅತ್ಯುನ್ನತ ತ್ಯಾಗವೆಂದು ಇಂದಿಗೂ ಸ್ಮರಿಸಲಾಗುತ್ತದೆ.
ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಲು, ಪ್ರಧಾನಿ ನರೇಂದ್ರ ಮೋದಿಯವರು ಭದ್ರತೆಯ ಮೇಲಿನ ಸಚಿವ ಸಂಪುಟ (ಕ್ಯಾಬಿನೆಟ್) ಸಮಿತಿ (CCS)ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಭದ್ರತೆಯ ಮೇಲಿನ ಸಚಿವ ಸಂಪುಟ ಸಮಿತಿ (CCS)ಯ ಬಗ್ಗೆ:
- ಅತ್ಯುನ್ನತ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ಸಮಿತಿ:- ಇದು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
- ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿಯು ಕಾರ್ಯನಿರ್ವಹಿಸುತ್ತದೆ. ಇದು ಪ್ರಮುಖವಾಗಿ ಗೃಹ ಸಚಿವರು, ರಕ್ಷಣಾ ಸಚಿವರು, ಹಣಕಾಸು ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರನ್ನು ಒಳಗೊಂಡಿರುತ್ತದೆ.
- ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA) ಈ ಸಮಿತಿಯ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಕಾರ್ಯದರ್ಶಿ-ಮಟ್ಟದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಾರೆ.
ತೆಂಗು ಉತ್ತೇಜನಾ ಯೋಜನೆ
ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಮುಂಗಡ ಪತ್ರ, 2026-27ನೇ ಸಾಲಿನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ‘ತೆಂಗು ಉತ್ತೇಜನಾ ಯೋಜನೆ’ಯನ್ನು ಘೋಷಿಸಲಾಗಿದೆ.
‘ತೆಂಗು ಉತ್ತೇಜನಾ ಯೋಜನೆ’ಯ ಬಗ್ಗೆ:
- ಪ್ರಮುಖ ಉದ್ದೇಶ:- ಕರಾವಳಿ ತೀರದುದ್ದಕ್ಕೂ ಹೊಸ ತೋಟಗಳನ್ನು ನಿರ್ಮಿಸುವುದು ಹಾಗೂ ಇಳುವರಿ ಕುಂಠಿತಗೊಂಡಿರುವ ಹಳೆಯ ಮತ್ತು ರೋಗಗ್ರಸ್ತ ತೋಟಗಳನ್ನು ಅಧಿಕ ಇಳುವರಿ ನೀಡುವ ಉತ್ಕೃಷ್ಟ ತೆಂಗಿನ ತಳಿಗಳೊಂದಿಗೆ ಪುನರುಜ್ಜೀವನಗೊಳಿಸುವ ಮೂಲಕ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವುದು.
- ಅನುಷ್ಠಾನಗೊಳಿಸುವ ಪ್ರಾಧಿಕಾರ:- ‘ತೆಂಗು ಅಭಿವೃದ್ಧಿ ಮಂಡಳಿ’ (CDB).
ತೆಂಗಿನಕಾಯಿಯ ಬಗ್ಗೆ:
- ವೈಜ್ಞಾನಿಕ ಹೆಸರು:- ಕೊಕೊಸ್ ನುಸಿಫರ (Cocos nucifera)
- ಇದು ಭಾರತದ ಪ್ರಮುಖ ಬಹುವಾರ್ಷಿಕ ತೋಟಗಾರಿಕಾ ಬೆಳೆಯಾಗಿದೆ.
- ಇದನ್ನು ಅತಿಹೆಚ್ಚಾಗಿ ತೇವಾಂಶಭರಿತ ಉಷ್ಣವಲಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
- ಈ ಬೆಳೆಯು ಉತ್ತಮವಾಗಿ ನೀರು ಬಸಿದುಹೋಗುವ ಮರಳು ಮಿಶ್ರಿತ ಗೋಡು ಮಣ್ಣು (loam soils), ಅಧಿಕ ತೇವಾಂಶ ಮತ್ತು 27-32 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಹಾಗೂ ಈ ಬೆಳೆಗೆ ಯಥೇಚ್ಛವಾದ ಸೂರ್ಯನ ಬೆಳಕಿನ ಅವಶ್ಯಕತೆಯಿರುತ್ತದೆ.
- ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದಿಸುವ ರಾಷ್ಟ್ರಗಳ ಪೈಕಿಯಲ್ಲಿ ಭಾರತವೂ ಮುಂಚೂಣಿಯಲ್ಲಿದೆ.
- ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಜಂಟಿಯಾಗಿ ಭಾರತದ ಒಟ್ಟು ತೆಂಗು ಉತ್ಪಾದನೆಯಲ್ಲಿ ಶೇ. 82-83ರಷ್ಟು ಅಗ್ರಗಣ್ಯ ಪಾಲನ್ನು ಹೊಂದಿವೆ.



ನಿಮ್ಮದೊಂದು ಉತ್ತರ