‘ಶಾಂತಿ’ (SHANTI) ಮಸೂದೆ
ಸಾಮಾನ್ಯ ಅಧ್ಯಯನ -3/ ಶಕ್ತಿ/ಇಂಧನ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸಚಿವ ಸಂಪುಟವು ‘ಶಾಂತಿ’ (SHANTI) ಎಂಬ ಶೀರ್ಷಿಕೆಯ ‘ಪರಮಾಣು ಶಕ್ತಿ ಮಸೂದೆ, 2025’ ಕ್ಕೆ ಅನುಮೋದನೆ ನೀಡಿದೆ.
ಶಾಂತಿ (SHANTI) ಮಸೂದೆಯ ಬಗ್ಗೆ:
- ಸಂಕ್ಷಿಪ್ತ ರೂಪ: “SHANTI”- ಸಸ್ಟೈನ್ಏಬಲ್ ಹಾರ್ನೆಸ್ಸಿಂಗ್ ಆಫ್ ಅಡ್ವಾನ್ಸಮೆಂಟ್ ಆಫ್ ನುಕ್ಲಿಯರ್ ಟೆಕ್ನಾಲಜಿ ಫಾರ್ ಇಂಡಿಯಾ (ಭಾರತಕ್ಕಾಗಿ ಪರಮಾಣು ತಂತ್ರಜ್ಞಾನದ ಪ್ರಗತಿಯನ್ನು ಸುಸ್ಥಿರವಾಗಿ ಬಳಸಿಕೊಳ್ಳುವುದು).
- ಉದ್ದೇಶ: ಈ ಮಸೂದೆಯು ಭಾರತದ ಪರಮಾಣು ವಲಯಕ್ಕಾಗಿ ಏಕೀಕೃತ ಮತ್ತು ಆಧುನಿಕ ಕಾನೂನು ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ.
ಭಾರತದ ಪರಮಾಣು ವಲಯದ ನಿರ್ವಹಣೆಯ ಬಗ್ಗೆ:
- ಸಾಂಪ್ರದಾಯಿಕವಾಗಿ, ಭಾರತದಲ್ಲಿನ ಪರಮಾಣು ವಿದ್ಯುತ್ ಸ್ಥಾವರಗಳು ಸರ್ಕಾರಿ ಸ್ವಾಮ್ಯದ ‘ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ’ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ಭಾರತೀಯ ನಾಭಿಕೀಯ ವಿದ್ಯುತ್ ನಿಗಮ’ (BHAVINI) ದ ಒಡೆತನದಲ್ಲಿವೆ ಮತ್ತು ಅವುಗಳಿಂದಲೇ ನಿರ್ವಹಿಸಲ್ಪಡುತ್ತಿವೆ.
- ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರವು ಈ ಕೆಳಗಿನ ಪ್ರಮುಖ ಶಾಸನಗಳಿಗೆ ತಿದ್ದುಪಡಿ ತರಬೇಕಿದೆ:
- ಅಣುಶಕ್ತಿ ಕಾಯ್ದೆ, 1962:- ಇದು ಪರಮಾಣು ಶಕ್ತಿಯ ಅಭಿವೃದ್ಧಿ ಮತ್ತು ನಿಯಂತ್ರಣದ ಚೌಕಟ್ಟಾಗಿದೆ.
- ಪರಮಾಣುವಿನ ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, 2010:- ಇದು ಪರಮಾಣು ಅವಘಡಗಳಿಗೆ ಪರಿಹಾರ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ.
ಶಾಂತಿ (SHANTI) ಮಸೂದೆಯ ಪ್ರಮುಖ ನಿಬಂಧನೆಗಳು:
- ಪರಮಾಣು ಮೌಲ್ಯ ಸರಪಳಿಯ ಭಾಗಶಃ ಮುಕ್ತಗೊಳಿಸುವಿಕೆ:- ಈ ಮಸೂದೆಯು ಖಾಸಗಿ ಮತ್ತು ಜಾಗತಿಕ ಕಂಪನಿಗಳಿಗೆ ಪರಮಾಣು ಖನಿಜಗಳ ಅನ್ವೇಷಣೆ, ಪರಮಾಣು ಉಪಕರಣ ಮತ್ತು ಬಿಡಿಭಾಗಗಳ ತಯಾರಿಕೆಯಲ್ಲಿ ಭಾಗವಹಿಸಲು ಅನುಮತಿಸುತ್ತದೆ.
- ರಿಯಾಕ್ಟರ್‌ಗಳ (ಕುಲುಮೆಗಳ) ಕಾರ್ಯಾಚರಣೆ ಮತ್ತು ಶಸ್ತ್ರಾಸ್ತ್ರ-ಸಂಬಂಧಿತ ಚಟುವಟಿಕೆಗಳಂತಹ ಪ್ರಮುಖ ಮತ್ತು ಕಾರ್ಯತಂತ್ರದ ಕ್ಷೇತ್ರಗಳು ಸರ್ಕಾರದ ನಿಯಂತ್ರಣದಲ್ಲಿಯೇ ಮುಂದುವರಿಯಲಿವೆ.
- ಪರಮಾಣು ಸುರಕ್ಷತೆ ಪ್ರಾಧಿಕಾರ:- ಈ ಶಾಸನವು ಸ್ವತಂತ್ರ ಪರಮಾಣು ಸುರಕ್ಷತೆ ಪ್ರಾಧಿಕಾರವನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ.
- ವಿಶೇಷ ಪರಮಾಣು ನ್ಯಾಯಮಂಡಳಿ:- ಪರಮಾಣು ಸಂಬಂಧಿತ ವಿವಾದಗಳನ್ನು ನಿರ್ವಹಿಸಲು ಇದು ವಿಶೇಷ ನ್ಯಾಯಮಂಡಳಿಯ ಸ್ಥಾಪನೆಗೆ ಅವಕಾಶ ಒದಗಿಸುತ್ತದೆ. ವಿವಾದಗಳ ಇತ್ಯರ್ಥವನ್ನು ಸುಗಮಗೊಳಿಸುವುದು ಮತ್ತು ಈ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಭಾರತ-ಓಮನ್ ಮುಕ್ತ ವ್ಯಾಪಾರ ಒಪ್ಪಂದ
ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಭಾರತ ಮತ್ತು ಓಮನ್ ನಡುವಿನ ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದದ (FTA) ಪ್ರಮುಖ ಅಂಶಗಳು:
- ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ದೊಂದಿಗೆ, ಭಾರತವು ಓಮನ್‌ನಲ್ಲಿ ತನ್ನ 98% ರಷ್ಟು ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಮತ್ತು ಸೇವೆಗಳಲ್ಲಿಯೂ ಗಮನಾರ್ಹ ಪ್ರವೇಶವನ್ನು ಪಡೆಯಲಿದೆ.
ಭಾರತ ಮತ್ತು ಓಮನ್ ನಡುವಿನ ಸಂಬಂಧಗಳು:
- ರಾಜತಾಂತ್ರಿಕ ಸಂಬಂಧ:- ಭಾರತ-ಓಮನ್ ನಡುವೆ 1955 ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಔಪಚಾರಿಕಗೊಳಿಸಲಾಯಿತು ಮತ್ತು 2008 ರಲ್ಲಿ ಇದನ್ನು ‘ಕಾರ್ಯತಂತ್ರದ ಪಾಲುದಾರಿಕೆ’ಗೆ ಮೇಲ್ದರ್ಜೆಗೇರಿಸಲಾಯಿತು.
- ವ್ಯಾಪಾರ ಸಂಬಂಧ:- 2023-2024 ರ ಆರ್ಥಿಕ ವರ್ಷದಲ್ಲಿ 8.947 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಟ್ಟು ವ್ಯಾಪಾರದೊಂದಿಗೆ ಓಮನ್, ಭಾರತದ 30ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.
- ಓಮನ್‌ನ ಅಗ್ರ ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿದೆ ಮತ್ತು ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳ ಪೈಕಿ ಓಮನ್, ಭಾರತದ ಮೂರನೇ ಅತಿದೊಡ್ಡ ರಫ್ತು ತಾಣವಾಗಿದೆ.
- ದಕ್ಷಿಣ ಕೊರಿಯಾದ ನಂತರ, 2023 ರ ಸಾಲಿನಲ್ಲಿ ಓಮನ್‌ನ ಕಚ್ಚಾ ತೈಲ ರಫ್ತಿಗೆ ಭಾರತವು 4ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
- ರಕ್ಷಣಾ ಸಹಕಾರ: ಭಾರತ ಮತ್ತು ಓಮನ್ ಮೂರೂ ಪಡೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ನಡುವೆ ನಿಯಮಿತವಾಗಿ ದ್ವೈವಾರ್ಷಿಕ ದ್ವಿಪಕ್ಷೀಯ ಸಮರಾಭ್ಯಾಸಗಳು ನಡೆಯುತ್ತವೆ. ಅವುಗಳೆಂದರೆ:
- ಭೂಸೇನೆ ಸಮರಾಭ್ಯಾಸ: ಅಲ್ ನಜಾಹ್
- ವಾಯುಪಡೆ ಸಮರಾಭ್ಯಾಸ: ಈಸ್ಟರ್ನ್ ಬ್ರಿಡ್ಜ್
- ನೌಕಾಸೇನೆ ಸಮರಾಭ್ಯಾಸ: ನಸೀಮ್ ಅಲ್ ಬಹ್ರ್
- ಕಡಲ ಸಹಕಾರ: ಓಮನ್ ದೇಶವು ಹೋರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲಿ ನೆಲೆಸಿದೆ; ಈ ಮಾರ್ಗದ ಮೂಲಕವೇ ಭಾರತವು ತನ್ನ ಒಟ್ಟು ತೈಲ ಆಮದಿನ ಐದನೇ ಒಂದು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.
- ಓಮನ್ ದೇಶದ ಡುಕ್ಮ್ ಬಂದರನ್ನು ಪ್ರವೇಶಿಸಲು (ಬಳಸಿಕೊಳ್ಳಲು) ಭಾರತವು 2018 ರಲ್ಲಿ ಈ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
- ಡುಕ್ಮ್ ಬಂದರು ಓಮನ್ ದೇಶದ ಆಗ್ನೇಯ ಕರಾವಳಿಯಲ್ಲಿದ್ದು, ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಚಾಚಿಕೊಂಡಿದೆ. ಇದು ಕಾರ್ಯತಂತ್ರದ ಸ್ಥಳದಲ್ಲಿದ್ದು, ಇರಾನ್‌ನ ಚಬಹಾರ್ ಬಂದರಿಗೆ ಸಮೀಪದಲ್ಲಿದೆ.
ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

- ಗಲ್ಫ್ ಸಹಕಾರ ಮಂಡಳಿಯು ಅರೇಬಿಯಾದ ಪರ್ಯಾಯ ದ್ವೀಪದ ಆರು ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
- ಸದಸ್ಯ ರಾಷ್ಟ್ರಗಳು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE).
- ಸ್ಥಾಪನೆ: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಸಹಿ ಹಾಕಲಾದ ಒಪ್ಪಂದದ ಮೂಲಕ ಮೇ 25, 1981 ರಂದು ಸ್ಥಾಪಿಸಲಾಯಿತು.
- ಉದ್ದೇಶಗಳು: ಆರ್ಥಿಕ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
- ಪ್ರಧಾನ ಕಚೇರಿ: ರಿಯಾದ್ (ಸೌದಿ ಅರೇಬಿಯಾ)
ಪ್ಯಾಕ್ಸ್ ಸಿಲಿಕಾ ಉಪಕ್ರಮದಿಂದ ಭಾರತ ಹೊರಕ್ಕೆ
ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು, ಸಾಮಾನ್ಯ ಅಧ್ಯಯನ-3/ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:
- ಅಮೇರಿಕಾ ನೇತೃತ್ವದ ಹೊಸ ನಿರ್ಣಾಯಕ ಖನಿಜ ವೈವಿಧ್ಯೀಕರಣ ಯೋಜನೆಯಾದ ‘ಪ್ಯಾಕ್ಸ್ ಸಿಲಿಕಾ’ ಉಪಕ್ರಮದಿಂದ ಭಾರತವನ್ನು ಹೊರಗಿಡಲಾಗಿದೆ.
ಪ್ಯಾಕ್ಸ್ ಸಿಲಿಕಾ ಉಪಕ್ರಮದ ಬಗ್ಗೆ:
- ಉದ್ದೇಶ:- ಈ ಅಮೇರಿಕಾ ನೇತೃತ್ವದ ಕಾರ್ಯತಂತ್ರದ ಉಪಕ್ರಮವು ನಿರ್ಣಾಯಕ ಖನಿಜಗಳಿಂದ ಸುರಕ್ಷಿತ, ಸಮೃದ್ಧ ಮತ್ತು ನಾವೀನ್ಯತೆ-ಚಾಲಿತ ಸಿಲಿಕಾನ್ ಪೂರೈಕೆ ಸರಪಳಿಯನ್ನು ನಿರ್ಮಿಸುವುದು ಉದ್ದೇಶವಾಗಿದೆ.
- ಸದಸ್ಯರು:- ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ (ದಕ್ಷಿಣ ಕೊರಿಯಾ), ಸಿಂಗಾಪುರ, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾ.
ನಿರ್ಣಾಯಕ ಖನಿಜಗಳ ಬಗ್ಗೆ:
- ವ್ಯಾಖ್ಯಾನ:- ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಖನಿಜಗಳನ್ನು ‘ನಿರ್ಣಾಯಕ ಖನಿಜಗಳು’ ಎಂದು ಕರೆಯಲಾಗುತ್ತದೆ.
- ಸರ್ಕಾರವು ಭಾರತಕ್ಕಾಗಿ 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
- 30 ನಿರ್ಣಾಯಕ ಖನಿಜಗಳು: ಆಂಟಿಮನಿ, ಬೆರಿಲಿಯಮ್, ಬಿಸ್ಮತ್, ಕೋಬಾಲ್ಟ್, ತಾಮ್ರ, ಗ್ಯಾಲಿಯಮ್, ಜರ್ಮೇನಿಯಮ್, ಗ್ರಾಫೈಟ್, ಹ್ಯಾಫ್ನಿಯಮ್, ಇಂಡಿಯಮ್, ಲಿಥಿಯಮ್, ಮಾಲಿಬ್ಡಿನಮ್, ನಿಯೋಬಿಯಮ್, ನಿಕಲ್, ಪಿಜಿಇ, ರಂಜಕ, ಪೊಟ್ಯಾಶ್, ಆರ್‌ಇಇ (REE – ವಿರಳ ಭೂ ಧಾತುಗಳು), ರೇನಿಯಮ್, ಸಿಲಿಕಾನ್, ಸ್ಟ್ರಾಂಷಿಯಮ್, ಟ್ಯಾಂಟಲಮ್, ಟೆಲೂರಿಯಮ್, ತವರ, ಟೈಟಾನಿಯಮ್, ಟಂಗ್‌ಸ್ಟನ್, ವೆನಾಡಿಯಮ್, ಜಿರ್ಕೋನಿಯಮ್, ಸೆಲೆನಿಯಮ್ ಮತ್ತು ಕ್ಯಾಡ್ಮಿಯಮ್.
- “ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957” (MMDR Act, 1957) ದೇಶದ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಗುರುತಿಸಿದೆ.
ಪ್ರೀಹ್ ವಿಹಾರ್ ದೇವಾಲಯ
ಸಾಮಾನ್ಯ ಅಧ್ಯಯನ-1/ ಕಲೆ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಪ್ರೀಹ್ ವಿಹಾರ್ ದೇವಾಲಯ ಸಂಕೀರ್ಣದಲ್ಲಿನ ಸಂರಕ್ಷಣಾ ಸೌಲಭ್ಯಗಳಿಗೆ ಹಾನಿಯಾಗಿರುವ ವರದಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ಪ್ರೀಹ್ ವಿಹಾರ್ ದೇವಾಲಯದ ಬಗ್ಗೆ:
- ಸ್ಥಳ: ಇದು ಥೈಲ್ಯಾಂಡ್ ಗಡಿಯ ಸಮೀಪವಿರುವ ಕಾಂಬೋಡಿಯಾದಲ್ಲಿ ನೆಲೆಗೊಂಡಿರುವ, ಶಿವನಿಗೆ ಸಮರ್ಪಿತವಾದ ಪುರಾತನ ಹಿಂದೂ ದೇವಾಲಯವಾಗಿದೆ.
- ಇದನ್ನು ಮುಖ್ಯವಾಗಿ ಖಮೇರ್ ರಾಜರಾದ ಒಂದನೇ ಸೂರ್ಯವರ್ಮನ್ ಮತ್ತು ಎರಡನೇ ಸೂರ್ಯವರ್ಮನ್ ಅವರ ಆಳ್ವಿಕೆಯಲ್ಲಿ (ಕ್ರಿ.ಶ. 9 ರಿಂದ 12 ನೇ ಶತಮಾನ) ನಿರ್ಮಿಸಲಾಯಿತು.
- ಇದನ್ನು 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (PMGKP)
ಸಾಮಾನ್ಯ ಅಧ್ಯಯನ-2/ ಕಲ್ಯಾಣ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಕೋವಿಡ್ ಮಹಾಮಾರಿಯಿಂದ ಮೃತಪಟ್ಟ ಎಲ್ಲಾ ವೈದ್ಯರಿಗೆ ₹50 ಲಕ್ಷದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ ವಿಮೆಯನ್ನು ವಿಸ್ತರಿಸಲು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ನ ಬಗ್ಗೆ:
- PMGKP ವಿಮಾ ಯೋಜನೆಯು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾದ ಬೃಹತ್ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್’ನ ಅಡಿಯಲ್ಲಿನ ಒಂದು ನಿರ್ದಿಷ್ಟ ಘಟಕವಾಗಿದೆ.
- ವ್ಯಾಪ್ತಿ:– ಅರ್ಹ ಆರೋಗ್ಯ ಕಾರ್ಯಕರ್ತರಿಗೆ ತಲಾ ₹50 ಲಕ್ಷದ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಇದು ಒದಗಿಸುತ್ತದೆ.
- ಒಳಗೊಂಡಿರುವ ಅಪಾಯ:- ಕೋವಿಡ್-19 ಸೋಂಕಿನಿಂದ ಸಂಭವಿಸಿದ ಸಾವುಗಳು.



ನಿಮ್ಮದೊಂದು ಉತ್ತರ