ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ – ಬೆಂಗಳೂರಿನ 3ನೇ ಅತಿದೊಡ್ಡ ಉದ್ಯಾನವನ
ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರಿನ ಯಲಹಂಕದಲ್ಲಿ, ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಬೃಹತ್ “ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ”ವನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟ ಸಭೆಯು ಇತ್ತೀಚಿಗೆ ಅಧಿಕೃತ ಅನುಮೋದನೆ ನೀಡಿದೆ.
ಈ ಉದ್ಯಾನವನದ ಪ್ರಮುಖ ಲಕ್ಷಣಗಳು:
- ಹೆಸರು:- ಇದನ್ನು ಅಧಿಕೃತವಾಗಿ “ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ” ಎಂದು ಕರೆಯಲಾಗುವುದು.
- ಸ್ಥಳ:- ಇದು ಬೆಂಗಳೂರಿನ ಯಲಹಂಕದ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿ ಆರಂಭವಾಗಲಿದೆ.
- ವಿಸ್ತೀರ್ಣ:- ಒಟ್ಟು 153 ಎಕರೆ ಪ್ರದೇಶದಲ್ಲಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
- ಆರಂಭಿಕ ಮಂಜೂರು ವೆಚ್ಚ:- ಮೊದಲ ಹಂತದ ಅಭಿವೃದ್ಧಿಗಾಗಿ ₹50 ಕೋಟಿ ಹಣವನ್ನು ಮಂಜೂರು ಮಾಡಿದೆ.
- ಒಟ್ಟು ಅಂದಾಜು ಯೋಜನಾ ವೆಚ್ಚ:- ₹250 ಕೋಟಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ ಕಂಪನಿಗಳಿಂದ ಹೆಚ್ಚುವರಿ ಹಣಕಾಸು ನೆರವು ನಿರೀಕ್ಷಿಸಲಾಗಿದೆ.
ಪ್ರಾಮುಖ್ಯತೆ:
- ನಗರದ ಶ್ವಾಸಕೋಶ:- ಹೆಚ್ಚುತ್ತಿರುವ ನಗರೀಕರಣದ ನಡುವೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ‘ಶ್ವಾಸತಾಣ’ ಮತ್ತು ಸಾರ್ವಜನಿಕರ ಮನೋಲ್ಲಾಸ ಕೇಂದ್ರವಾಗಿ ಇದು ಕಾರ್ಯನಿರ್ವಹಿಸಲಿದೆ.
- ಬೆಂಗಳೂರು ನಗರದ 3ನೇ ಅತಿದೊಡ್ಡ ಉದ್ಯಾನವನ:- ವಿಸ್ತೀರ್ಣದ ದೃಷ್ಟಿಯಿಂದ ಇದು ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ನಂತರದ ಸ್ಥಾನವನ್ನು ತುಂಬಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
- ಇದು 150 ವರ್ಷಕ್ಕಿಂತ ಹೆಚ್ಚಿನ ಅವಧಿಯ ನಂತರ ಆರಂಭವಾಗುತ್ತಿರುವ ಮೊದಲ ಪ್ರಮುಖ ಸಸ್ಯೋದ್ಯಾನ (ಬೋಟಾನಿಕಲ್ ಗಾರ್ಡನ್) ಯೋಜನೆ ಎಂದು ಗುರುತಿಸುತ್ತದೆ.
ಬೆಂಗಳೂರಿನ ಪ್ರಮುಖ ಉದ್ಯಾನವನಗಳ ತುಲನಾತ್ಮಕ ಮಾಹಿತಿ:
|
ಉದ್ಯಾನವನದ ಹೆಸರು |
ಸ್ಥಾಪನೆಯಾದ ವರ್ಷ |
ವಿಸ್ತೀರ್ಣ (ಎಕರೆಗಳಲ್ಲಿ) |
ಐತಿಹಾಸಿಕ ಹಿನ್ನೆಲೆ |
|
ಲಾಲ್ಬಾಗ್ |
1760 |
240 ಎಕರೆ |
ಹೈದರ್ ಅಲಿ ಕಾಲದಲ್ಲಿ ನಿರ್ಮಾಣವಾಯಿತು (265 ವರ್ಷಗಳ ಇತಿಹಾಸ). |
|
ಕಬ್ಬನ್ ಪಾರ್ಕ್ |
1870 |
197 ಎಕರೆ |
ಜಾನ್ ಮೇಡ್ ಕಬ್ಬನ್ ಅವರ ಹೆಸರಿನಲ್ಲಿ ನಿರ್ಮಾಣವಾಯಿತು (155 ವರ್ಷಗಳ ಇತಿಹಾಸ). |
|
ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನವನ |
2025-26 (ಪ್ರಸ್ತಾವಿತ) |
153 ಎಕರೆ |
ಇದು ಯಲಹಂಕದ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಆಧುನಿಕ ಜೀವವೈವಿಧ್ಯ ಉದ್ಯಾನವಾಗಿದೆ. |



ನಿಮ್ಮದೊಂದು ಉತ್ತರ