ವಿದ್ಯುನ್ಮಾನ ಅಭಿವೃದ್ಧಿ ನಿಧಿ (EDF) | ಸಾಲುಮರದ ತಿಮ್ಮಕ್ಕ | ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳು (NGRA), 2025

ವಿದ್ಯುನ್ಮಾನ ಅಭಿವೃದ್ಧಿ ನಿಧಿ (EDF)

ಸಾಮಾನ್ಯ ಅಧ್ಯಯನ-3 / ಆರ್ಥಿಕತೆ; ಮಾಹಿತಿ ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಭಾರತ ಸರ್ಕಾರವು ವಿದ್ಯುನ್ಮಾನ/ಎಲೆಕ್ಟ್ರಾನಿಕ್ಸ್  ಅಭಿವೃದ್ಧಿ ನಿಧಿಯನ್ನು (EDF) ಪ್ರಾರಂಭಿಸಿದೆ.

ವಿದ್ಯುನ್ಮಾನ/ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿಯ ಬಗ್ಗೆ:

  • ಪ್ರಾರಂಭ: ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳ ಪ್ರಮುಖ ಅಂಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 2016 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
  • ಉದ್ದೇಶ : ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ.

ಕಾರ್ಯತಂತ್ರದ ಮಹತ್ವ:

  • ಆಮದು ಅವಲಂಬನೆ ತಗ್ಗಿಸುವಿಕೆ: ಎಲೆಕ್ಟ್ರಾನಿಕ್ಸ್ ಸರಕುಗಳಿಗಾಗಿ ಭಾರತವು ಇತರ ದೇಶಗಳ ಆಮದಿನ ಮೇಲೆ ಹೊಂದಿರುವ ಅವಲಂಬನೆಯನ್ನು ಕಡಿಮೆ ಮಾಡುವುದು.
  • ದೇಶೀಯ ನಾವೀನ್ಯತೆಗೆ ಉತ್ತೇಜನ: ಸೆಮಿಕಂಡಕ್ಟರ್‌ಗಳು (ಅರೆವಾಹಕಗಳು), ಇಂಟರ್ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ಗಳಂತಹ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ದೇಶೀಯ ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು.
  • ಜಾಗತಿಕ ತಾಣವಾಗಿ ಭಾರತ: ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು.

ಸಾಲುಮರದ ತಿಮ್ಮಕ್ಕ

ಸಾಮಾನ್ಯ ಅಧ್ಯಯನ – 4/ ನೀತಿಶಾಸ್ತ್ರ ; ಪರಿಸರ ನೀತಿಶಾಸ್ತ್ರ

ಇದೀಗ ಸುದ್ದಿಯಲ್ಲಿ:

  • ನಾಡಿನ ಹಿರಿಯ ಚೇತನ, ‘ಪದ್ಮಶ್ರೀ’ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಅಗಲುವಿಕೆಗೆ ಇಡೀ ಭಾರತವೇ ಕಂಬನಿ ಮಿಡಿದಿದೆ. 
  • ಇವರು ಕೇವಲ ಒಬ್ಬ ಪರಿಸರವಾದಿ ಮಾತ್ರವಲ್ಲ, ಬದಲಾಗಿ ಜಾಗತಿಕ ಮಟ್ಟದಲ್ಲಿ ತಳಮಟ್ಟದ ಅರಣ್ಯೀಕರಣದ ಅಪ್ರತಿಮ ಸಂಕೇತವಾಗಿದ್ದರು.

ಸಾಲುಮರದ ತಿಮ್ಮಕ್ಕ ಅವರ ಕುರಿತು:

  • ಹಿನ್ನೆಲೆ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು, ವಿವಾಹದ ನಂತರ ಹುಲಿಕಲ್ ಗ್ರಾಮದಲ್ಲಿ ನೆಲೆಸಿದರು.
  • ಕಾಯಕದ ಆರಂಭ: 1950 ರ ದಶಕದ ಆರಂಭದಲ್ಲಿ, ತಿಮ್ಮಕ್ಕ ಮತ್ತು ಅವರ ಪತಿ ಬಿಕ್ಕಲ ಚಿಕ್ಕಯ್ಯ ಅವರು ನಿಸ್ವಾರ್ಥ ಪರಿಸರ ಸೇವೆಯನ್ನು ಆರಂಭಿಸಿದರು.
  • ದಂಪತಿಗಳು ಪ್ರತಿದಿನ ಮೈಲುಗಟ್ಟಲೆ ದೂರದಿಂದ ನೀರನ್ನು ಹೊತ್ತು ತಂದು ಸಸಿಗಳಿಗೆ ಎರೆಯುತ್ತಿದ್ದರು. ಮೇಯುವ ಜಾನುವಾರುಗಳಿಂದ ಎಳೆಯ ಸಸಿಗಳನ್ನು ರಕ್ಷಿಸಲು ಮುಳ್ಳಿನ ಕೊಂಬೆಗಳನ್ನು ಬಳಸಿ ಬೇಲಿ ಹಾಕುತ್ತಿದ್ದರು.
  • ವೈಜ್ಞಾನಿಕ ಅರಿವು: ಮರಗಳು ಬದುಕಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಲು, ಅವರು ಪ್ರಮುಖವಾಗಿ ‘ಮುಂಗಾರು’ ಋತುಗಳಲ್ಲಿ ಸಸಿಗಳನ್ನು ನೆಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು.
  • ಸ್ಫೂರ್ತಿಯ ಸೆಲೆ: ಅವರ ಪರಿಸರ ಕಾಳಜಿಯ ಪರಂಪರೆಯು ಕರ್ನಾಟಕದ ಅರಣ್ಯೀಕರಣ ನೀತಿಗಳ ಮೇಲೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ, ಭಾರತದಾದ್ಯಂತ ಹಲವಾರು ಗಿಡ ನೆಡುವ ಚಳವಳಿಗಳಿಗೆ ಅವರು ಪ್ರೇರಣೆಯಾಗಿದ್ದಾರೆ.
  • 2019 ರ ಐತಿಹಾಸಿಕ ರಕ್ಷಣೆ: ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ನಾಶವನ್ನು ಅವರು ಬಲವಾಗಿ ವಿರೋಧಿಸಿದ್ದರು. 2019 ರಲ್ಲಿ ರಸ್ತೆ ಅಗಲೀಕರಣ ಯೋಜನೆಯ ಸಂದರ್ಭದಲ್ಲಿ, ತಾವು ಮಕ್ಕಳಂತೆ ಸಲುಹಿದ್ದ 385 ಮರಗಳು ಕಡಿಯಲ್ಪಡುವ ಭೀತಿ ಎದುರಾಯಿತು. ಆಗ ಅವರು ನೇರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಆ ಮರಗಳನ್ನು ಉಳಿಸುವಲ್ಲಿ ಯಶಸ್ವಿಯಾದರು.

ಪರಿಸರಕ್ಕಾದ ಲಾಭ ಮತ್ತು ಪರಿಣಾಮ:

ಅವರ ದಶಕಗಳ ದಣಿವರಿಯದ ಪ್ರಯತ್ನಗಳು ಇಂದು ಬೃಹತ್ ಹೆಮ್ಮರಗಳಾಗಿ ಬೆಳೆದು ನಿಂತಿವೆ.

  1. ಹಸಿರು ಪಥ : ಅವರ ಶ್ರಮವು ಒಂದು ವಿಶಾಲವಾದ ಹಸಿರು ಪಥದ ನಿರ್ಮಾಣಕ್ಕೆ ಕಾರಣವಾಗಿದೆ.
  2. ಜೀವವೈವಿಧ್ಯದ ರಕ್ಷಣೆ: ಈ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳು ನೀಡುತ್ತಿವೆ ಮತ್ತು ಅಸoಖ್ಯಾತ ಪಕ್ಷಿಸಂಕುಲಕ್ಕೆ ಆಶ್ರಯ ತಾಣವಾಗಿವೆ.
  3. ವಾಯುಗುಣ ನಿಯಂತ್ರಣ: ಈ ಮರಗಳು ಆ ಪ್ರದೇಶದ ‘ಸೂಕ್ಷ್ಮ ವಾಯುಗುಣವನ್ನು’ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
  4. ಮಾದರಿ ಕಾರ್ಯ: ಇದು ಸಮುದಾಯ ನೇತೃತ್ವದ ಅರಣ್ಯೀಕರಣಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳು (NGRA), 2025

ಸಾಮಾನ್ಯ ಅಧ್ಯಯನ – 3/ ಹೈನುಗಾರಿಕೆ ವಲಯ

ಇದೀಗ ಸುದ್ದಿಯಲ್ಲಿದೆ:

  • ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 2025 ನೇ ಸಾಲಿನ ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ (NGRA) ವಿಜೇತರನ್ನು ಘೋಷಿಸಿದೆ.

ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿಗಳ ಬಗ್ಗೆ:

  • ಈ ಪ್ರಶಸ್ತಿಗಳು ಜಾನುವಾರು ಮತ್ತು ಹೈನುಗಾರಿಕೆ ವಲಯದಲ್ಲಿ ನೀಡಲಾಗುವ ಅತ್ಯುನ್ನತ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿವೆ.
  • ರಾಷ್ಟ್ರೀಯ ಕ್ಷೀರ ದಿನಾಚರಣೆಯ ಅಂಗವಾಗಿ ಪ್ರತೀ ವರ್ಷ ನವೆಂಬರ್ 26 ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
  • ರಾಷ್ಟ್ರೀಯ ಗೋಕುಲ್ ಮಿಷನ್‌ನ ಭಾಗವಾಗಿ 2014 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
  • ದೇಶೀಯ ಜಾನುವಾರು ತಳಿಗಳ ವೈಜ್ಞಾನಿಕ ಸಂರಕ್ಷಣೆ ಮತ್ತು ಅಭಿವೃದ್ಧಿಯ ಮೇಲೆ ಇದು ಕೇಂದ್ರೀಕರಿಸುತ್ತದೆ.
  • ಹಾಲು ಉತ್ಪಾದಿಸುವ ರೈತರು, ಹೈನುಗಾರಿಕೆ ಸಹಕಾರ ಸಂಘಗಳು/ ಕಂಪನಿಗಳು/ರೈತ ಉತ್ಪಾದಕರ ಸಂಘಗಳು ಮತ್ತು ಕೃತಕ ಗರ್ಭಧಾರಣೆ ತಂತ್ರಜ್ಞರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ.
  • ಪ್ರಶಸ್ತಿ ಪುರಸ್ಕೃತರಿಗೆ ಅರ್ಹತಾ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಅನುಕ್ರಮವಾಗಿ ₹5,00,000, ₹3,00,000 ಮತ್ತು ₹2,00,000 ನಗದು ಬಹುಮಾನವನ್ನು ನೀಡಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts