ರುಬಿಡಿಯಮ್ ಪರಮಾಣು ಗಡಿಯಾರ ವೈಫಲ್ಯ: ಇಸ್ರೋದ ‘ನಾವಿಕ್’ ವ್ಯವಸ್ಥೆಗೆ ಹಿನ್ನಡೆ
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಭಾರತದ ಸ್ವದೇಶಿ ನೌಕಾಯಾನ ಉಪಗ್ರಹ ವ್ಯವಸ್ಥೆಯಾದ ‘ನಾವಿಕ್’ಗೆ (NavIC) ತೀವ್ರ ಹಿನ್ನಡೆಯಾಗಿದ್ದು, IRNSS-1F ಉಪಗ್ರಹದಲ್ಲಿನ ಏಕೈಕ ಕಾರ್ಯನಿರತ ರುಬಿಡಿಯಮ್ ಪರಮಾಣು ಗಡಿಯಾರವು ವಿಫಲಗೊಂಡಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ನಾವಿಕ್ (NavIC) ಉಪಗ್ರಹ ವ್ಯವಸ್ಥೆಯ ಬಗ್ಗೆ:
- NavIC ಸಂಪೂರ್ಣ ರೂಪ:- ನಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೇಲೇಷನ್ (Navigation with Indian Constellation).
- ಈ ಉಪಗ್ರಹ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ನಿರ್ಮಿಸಿ, 2013ರಲ್ಲಿ ಉಡಾವಣೆ ಮಾಡಿತು.
- ಭಾರತದ ಸ್ವಾಯತ್ತ, ಪ್ರಾದೇಶಿಕ ನೌಕಾಯಾನ ಉಪಗ್ರಹ ವ್ಯವಸ್ಥೆಯಾಗಿದೆ:- ಇದು ನಾಗರಿಕ ಮತ್ತು ಸೇನಾ ನೌಕಾಯಾನದ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
- ನಾವಿಕ್ ಅನ್ನು ಈ ಮೊದಲು ಭಾರತೀಯ ಪ್ರಾದೇಶಿಕ ನೌಕಾಯಾನದ ಉಪಗ್ರಹ ವ್ಯವಸ್ಥೆ (IRNSS– ‘ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್’) ಎಂದು ಕರೆಯಲಾಗುತ್ತಿತ್ತು.
- ಪ್ರಮುಖ ಉದ್ದೇಶ:- ಭಾರತದಾದ್ಯಂತ ಹಾಗೂ ದೇಶದ ಗಡಿಯಿಂದ ಆಚೆಗೆ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರವಾದ ಸ್ಥಾನ, ವೇಗ ಮತ್ತು ಸಮಯದ (PVT) ಸೇವೆಗಳನ್ನು ಒದಗಿಸುವುದು. ಈ ಭೌಗೋಳಿಕ ವ್ಯಾಪ್ತಿಯು ನಾವಿಕ್ನ ‘ಪ್ರಾಥಮಿಕ ಸೇವಾ ವಲಯ’ ಎನಿಸಿಕೊಂಡಿದೆ.
- ನಾವಿಕ್ ವ್ಯವಸ್ಥೆಯ ರಚನೆ:- ಈ ವ್ಯವಸ್ಥೆಯು ಒಟ್ಟು 7 ಉಪಗ್ರಹಗಳ ಸಮೂಹವನ್ನು ಒಳಗೊಂಡಿದೆ. ಇದರ ಸುಗಮ ಕಾರ್ಯಾಚರಣೆಗಾಗಿ ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುವ ‘ಭೂಕೇಂದ್ರಗಳ ಜಾಲ’ವನ್ನು ಸ್ಥಾಪಿಸಲಾಗಿದೆ.
- ಉಪಗ್ರಹಗಳ ಕಕ್ಷೆ:- ಈ 7 ಉಪಗ್ರಹಗಳ ಪೈಕಿ 3 ಉಪಗ್ರಹಗಳನ್ನು ‘ಭೂಸ್ಥಿರ ಕಕ್ಷೆ’ಯಲ್ಲಿ ನೆಲೆಗೊಳಿಸಲಾಗಿದೆ. ಉಳಿದ 4 ಉಪಗ್ರಹಗಳನ್ನು ‘ವಾಲಿದ ಭೂಸಮಕಾಲಿಕ ಕಕ್ಷೆ’ಯಲ್ಲಿ ಇರಿಸಲಾಗಿದೆ.
- ಪ್ರಾಮುಖ್ಯತೆ:- ಈ ವ್ಯವಸ್ಥೆಯು ತನ್ನ ಸಂಪೂರ್ಣ ಸೇವಾ ವಲಯದಾದ್ಯಂತ 20 ಮೀಟರ್ಗಿಂತಲೂ ಕರಾರುವಕ್ಕಾದ ‘ಸ್ಥಾನಿಕ ನಿಖರತೆ’ಯನ್ನು ಮತ್ತು 40 ನ್ಯಾನೊ-ಸೆಕೆಂಡ್ಗಳಿಗಿಂತಲೂ ಅತ್ಯುನ್ನತ ಮಟ್ಟದ ‘ಕಾಲಮಾನದ ನಿಖರತೆ’ಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.
ಭಾರತದ ವಿದ್ಯುತ್ ಉತ್ಪಾದನಾ ಗುರಿ, 2047: ಥೋರಿಯಂ ಆಧಾರ
ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ‘ಶಾಂತಿ ಕಾಯ್ದೆ’ (SHANTI Act), 2025 ಭಾರತದ ಪರಮಾಣು ಶಕ್ತಿ ಕಾರ್ಯಕ್ರಮದಲ್ಲಿ ಒಂದು ಐತಿಹಾಸಿಕ ಘಟ್ಟವಾಗಿದೆ. ಆದರೆ, ಥೋರಿಯಂ ಬಳಕೆಯಲ್ಲಿ ಎದುರಾಗುವ ಸವಾಲುಗಳನ್ನು ತುರ್ತಾಗಿ ಪರಿಹರಿಸಬೇಕಾದ ಅಗತ್ಯವಿದೆ.
ಭಾರತದಲ್ಲಿನ ಥೋರಿಯಂ ನಿಕ್ಷೇಪಗಳು:

- ಭಾರತವು ವಿಶ್ವದ ಅತಿದೊಡ್ಡ ಥೋರಿಯಂ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
- ದೇಶದ ಒಟ್ಟು ಥೋರಿಯಂ ನಿಕ್ಷೇಪಗಳಲ್ಲಿ ಶೇ 70ರಷ್ಟು ಕೇವಲ ಕೇರಳ ಮತ್ತು ಒಡಿಶಾ ರಾಜ್ಯಗಳಲ್ಲೇ ಲಭ್ಯವಿದೆ.
- ಭಾರತವು ಮೂರು-ಹಂತದ ಪರಮಾಣು ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದ್ದು, ಥೋರಿಯಂ ಆಧಾರಿತ ರಿಯಾಕ್ಟರ್ಗಳು ಈ ಕಾರ್ಯಕ್ರಮದ ಮೂರನೇ ಹಂತದ ನಿರ್ಣಾಯಕ ಭಾಗವಾಗಿವೆ.
- ಸವಾಲುಗಳು:- ಅದಿರಿನಿಂದ ಥೋರಿಯಂ ಅನ್ನು ಹೊರತೆಗೆಯಲು ಹೆಚ್ಚಿನ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ ಹಾಗೂ ಇದು ಗಣನೀಯ ಪ್ರಮಾಣದ ತ್ಯಾಜ್ಯವನ್ನು ಸೃಷ್ಟಿಸುತ್ತದೆ. ಜೊತೆಗೆ, ಸುಧಾರಿತ ರಿಯಾಕ್ಟರ್ ತಂತ್ರಜ್ಞಾನದ ಅಗತ್ಯತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯಂತಹ ಸವಾಲುಗಳೂ ಇದರಲ್ಲಿವೆ.
ಥೋರಿಯಂ ಬಳಕೆಯ ಅಗತ್ಯತೆ:
- ಆಮದು ಮೇಲಿನ ಅವಲಂಬನೆ ಕಡಿತ:- ಪ್ರಸ್ತುತ ಭಾರತದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬೆಳವಣಿಗೆಯು ಆಮದು ಮಾಡಿಕೊಂಡ ಯುರೇನಿಯಂ ಅನ್ನು ಅತಿಯಾಗಿ ಅವಲಂಬಿಸಿದೆ.
- ದೇಶೀಯ ಯುರೇನಿಯಂ ಅದಿರುಗಳು ಕಳಪೆ ಗುಣಮಟ್ಟದ್ದಾಗಿದ್ದು, ಅವುಗಳನ್ನು ಗಣಿಗಾರಿಕೆ ಮಾಡುವುದು ದುಬಾರಿಯಾಗಿದೆ:- ಆದರೂ, ಇದು ಯುರೇನಿಯಂ ಪೂರೈಕೆಯಲ್ಲಿನ ವ್ಯತ್ಯಯಗಳ ವಿರುದ್ಧ ಸ್ವಲ್ಪಮಟ್ಟಿನ ಭದ್ರತೆಯನ್ನು ಒದಗಿಸುತ್ತದೆ.
ಭಾರತಕ್ಕೆ ಥೋರಿಯಂನ ಪ್ರಾಮುಖ್ಯತೆ:
- ಸಂಪನ್ಮೂಲಗಳ ಲಭ್ಯತೆ:- ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳು ಸೀಮಿತವಾಗಿವೆ. ಆದರೆ ಕರಾವಳಿ ಮತ್ತು ನದಿಪಾತ್ರದ ಮರಳಿನಲ್ಲಿ ಥೋರಿಯಂ ನಿಕ್ಷೇಪಗಳು ಹೇರಳವಾಗಿ ಲಭ್ಯವಿದೆ.
- ಪರಮಾಣು ವಿದಳನ ಪ್ರಕ್ರಿಯೆ:- ಥೋರಿಯಂ ಧಾತುವಿನ ಗುಣಲಕ್ಷಣಗಳು ಯುರೇನಿಯಂನಂತೆ ನೇರವಾಗಿ ವಿದಳನಶೀಲವಲ್ಲ (non-fissile). ಬದಲಾಗಿ, ಇದು ಒಂದು ಪರಿವರ್ತನಶೀಲ (fertile) ವಸ್ತುವಾಗಿದ್ದು, ನ್ಯೂಟ್ರಾನ್ಗಳನ್ನು ಹೀರಿಕೊಂಡ ನಂತರ ‘ಯುರೇನಿಯಂ-233’ ಎಂಬ ವಿದಳನಶೀಲ ಐಸೋಟೋಪ್ ಆಗಿ ಮಾರ್ಪಾಡುಗೊಳ್ಳುತ್ತದೆ. ಈ ರೂಪಾಂತರದ ಬಳಿಕವಷ್ಟೇ ಇದು ಸತತವಾದ ಪರಮಾಣು ವಿದಳನ (Nuclear fission) ಪ್ರಕ್ರಿಯೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ.
- ಕಾರ್ಯತಂತ್ರದ ಹೊಂದಾಣಿಕೆ:- ಇದು ಭಾರತದ ದೀರ್ಘಾವಧಿಯ ‘ಮೂರು-ಹಂತದ ಪರಮಾಣು ವಿದ್ಯುತ್ ಕಾರ್ಯಕ್ರಮ’ಕ್ಕೆ ಅವಿಭಾಜ್ಯ ಅಂಗವಾಗಿದೆ.
ಭಾರತದ ಮೂರು-ಹಂತದ ಪರಮಾಣು ಕಾರ್ಯಕ್ರಮ:
- ಭಾರತವು 1948ರಲ್ಲಿ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿತು.
- ‘ಅಪ್ಸರಾ’:- 1956ರಲ್ಲಿ ಟ್ರಾಂಬೆಯಲ್ಲಿರುವ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ (BARC) ಏಷ್ಯಾದ ಮೊಟ್ಟಮೊದಲ ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ ಕಾರ್ಯಾರಂಭ ಮಾಡಿತು.
- ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ. ಹೋಮಿ ಜೆ. ಭಾಭಾ ಅವರು ಭಾರತದ ಅಣುಶಕ್ತಿ ಕಾರ್ಯಕ್ರಮದ ಮೂರು ಹಂತಗಳನ್ನು ರೂಪಿಸಿದರು. ಅವುಗಳೆಂದರೆ:
- ಮೊದಲನೇ ಹಂತ:- ಒತ್ತಡದ ಭಾರಜಲ ರಿಯಾಕ್ಟರ್ಗಳು (PHWRs).
- ಎರಡನೇ ಹಂತ:- ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು (FBRs).
- ಮೂರನೇ ಹಂತ:- ಸುಧಾರಿತ ಭಾರಜಲ ರಿಯಾಕ್ಟರ್ಗಳು (AHWRs).
|
ಗಮನಿಸಿ:- ಜಪಾನ್ನ ನಂತರ ಏಷ್ಯಾದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿದ ಎರಡನೇ ರಾಷ್ಟ್ರ ಭಾರತ. ಚೀನಾಕ್ಕಿಂತಲೂ ಮುಂಚಿತವಾಗಿ 1969ರಲ್ಲೇ ಭಾರತವು ಮಹಾರಾಷ್ಟ್ರದ ತಾರಾಪುರದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ನಿರ್ಮಿಸಿತು. |
ರಾಜಸ್ಥಾನದ ನೂತನ ಆಸ್ತಿ ಮಸೂದೆ
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ರಾಜಸ್ಥಾನ ಶಾಸನಸಭೆಯು ‘ಅಶಾಂತ ಪ್ರದೇಶಗಳಲ್ಲಿನ ಸ್ಥಿರಾಸ್ತಿ ವರ್ಗಾವಣೆ ನಿಷೇಧ ಮಸೂದೆ’ಯನ್ನು ಅಂಗೀಕರಿಸಿದೆ.
- ಗುಜರಾತ ನಂತರ ಇಂತಹ ಕಠಿಣ ಮಾಸೂದೆಯನ್ನು ಜಾರಿಗೆ ತಂದ ದೇಶದ ಎರಡನೇ ರಾಜ್ಯವಾಗಿ ರಾಜಸ್ಥಾನ ಹೊರಹೊಮ್ಮಿದೆ.
ಈ ಮಸೂದೆಯ ಪ್ರಮುಖ ಅಂಶಗಳು:
- ಪ್ರಮುಖ ಉದ್ದೇಶ:- ಸರ್ಕಾರವು “ಅಶಾಂತ” (Disturbed) ಎಂದು ಘೋಷಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಿರಾಸ್ತಿ ವಹಿವಾಟುಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು.
- ಪ್ರಸ್ತಾವಿತ ಮಸೂದೆಯ ಸೆಕ್ಷನ್ 3(1,2) ರ ಪ್ರಕಾರ, ಯಾವುದೇ ಪ್ರದೇಶದಲ್ಲಿ ಕೋಮು ಗಲಭೆ ಅಥವಾ ಸಾರ್ವಜನಿಕ ಅಶಾಂತಿ ಉಂಟಾಗುವ ಸಾಧ್ಯತೆಗಳಿದ್ದರೆ, ಅಂತಹ ಪ್ರದೇಶವನ್ನು ‘ಅಶಾಂತ ಪ್ರದೇಶ’ ಎಂದು ಘೋಷಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಹೊಂದಿದೆ.
- ಒಮ್ಮೆ ಯಾವುದೇ ಪ್ರದೇಶವನ್ನು ಅಶಾಂತ ಪ್ರದೇಶವೆಂದು ಅಧಿಸೂಚಿಸಿದರೆ, ಅಲ್ಲಿ ಭೂಮಿ, ಮನೆ ಅಥವಾ ವಾಣಿಜ್ಯ ಮಳಿಗೆಗಳಂತಹ ಯಾವುದೇ ಸ್ಥಿರಾಸ್ತಿಯನ್ನು ವರ್ಗಾಯಿಸಲು ಜಿಲ್ಲಾ ದಂಡಾಧಿಕಾರಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
- ಜಿಲ್ಲಾ ದಂಡಾಧಿಕಾರಿಯ ಅನುಮತಿಯಿಲ್ಲದೆ ನಡೆಸುವ ಎಲ್ಲಾ ಚಿರಾಸ್ತಿ ವಹಿವಾಟುಗಳು ಕಾನೂನುಬಾಹಿರ ಎನಿಸಿಕೊಳ್ಳುತ್ತವೆ.
- ಅಷ್ಟೇ ಅಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಚಿರಾಸ್ತಿ ವರ್ಗಾವಣೆ ಮಾಡಿದರೆ, ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ದಂಡ ವಿಧಿಸಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
- “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂಬುದನ್ನು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುವ ಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
|
ನಿಮಗಿದು ಗೊತ್ತೇ?
|



ನಿಮ್ಮದೊಂದು ಉತ್ತರ