ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಸ್ತು ನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳು
1). 16ನೇ ಹಣಕಾಸು ಆಯೋಗದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು 2023ರಲ್ಲಿ ರಚನೆಯಾಗಿದ್ದು, ಇದರ ಶಿಫಾರಸುಗಳು 2026-27 ರಿಂದ 2030-31ರವರೆಗೆ ಅನ್ವಯವಾಗುತ್ತವೆ.
- ಇದರ ಅಧ್ಯಕ್ಷತೆಯನ್ನು ಡಾ. ಅರವಿಂದ್ ಪನಗಾರಿಯಾ ವಹಿಸಿದ್ದಾರೆ.
- ಇದು ರಾಜ್ಯ ಸಂಚಿತ ನಿಧಿಗಳ ಮೂಲಕ ಪಂಚಾಯತ್‌ಗಳು ಮತ್ತು ಪುರಸಭೆಗಳ ಆರ್ಥಿಕತೆಯನ್ನು ಬಲಪಡಿಸುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ.
- ಇದು ರಾಜ್ಯ ಸರ್ಕಾರಗಳನ್ನು ಬದಿಗೊತ್ತಿ ಸ್ಥಳೀಯ ಸಂಸ್ಥೆಗಳಿಗೆ ನೇರವಾಗಿ ಹಣವನ್ನು ಹಂಚಿಕೆ ಮಾಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: C
2). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಸಂತ ರವಿದಾಸ್ ಅವರನ್ನು ‘ರವಿದಾಸಿಯಾ’ ಧಾರ್ಮಿಕ ಸಂಪ್ರದಾಯದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.
- ಸಂತ ರವಿದಾಸ್ ಅವರಿಗೆ ಸೇರಿದ 41 ಸ್ತೋತ್ರಗಳನ್ನು ಗುರು ಗ್ರಂಥ ಸಾಹಿಬ್‌ನಲ್ಲಿ ಸೇರಿಸಲಾಗಿದೆ.
- ಸಾಂಪ್ರದಾಯಿಕ ನಂಬಿಕೆಯಂತೆ ಮೀರಾಬಾಯಿ ಅವರು ಸಂತ ರವಿದಾಸ್ ಅವರಿಂದ ಪ್ರಭಾವಿತರಾಗಿದ್ದರು.
- ಅವರ ಬೋಧನೆಗಳನ್ನು ಸಿಖ್ ಗುರುಗಳು ವಿರೋಧಿಸಿದರು ಮತ್ತು ಸಿಖ್ ಧಾರ್ಮಿಕ ಗ್ರಂಥಗಳಿಂದ (ನಿಯಮಗಳಿಂದ) ಕೈಬಿಟ್ಟರು.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ?
- 2 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
3). ಪಟ್ಟಿ-I (ಬೌದ್ಧರ ಪವಿತ್ರ ಸ್ಥಳಗಳು) ಅನ್ನು ಪಟ್ಟಿ-II (ಸಂಬಂಧಿತ ಘಟನೆ) ಮತ್ತು ಪಟ್ಟಿ-III (ಸ್ಥಳ) ನೊಂದಿಗೆ ಹೊಂದಿಸಿರಿ:
|
ಪಟ್ಟಿ-I |
ಪಟ್ಟಿ-II |
ಪಟ್ಟಿ-III |
|
a. ಲುಂಬಿನಿ |
1. ಮಹಾಪರಿನಿರ್ವಾಣ |
i. ಬಿಹಾರ |
|
b. ಬೋಧ್ ಗಯಾ |
2. ಬುದ್ಧನ ಜನನ |
ii. ನೇಪಾಳ |
|
c. ಸಾರನಾಥ್ |
3. ಜ್ಞಾನೋದಯ |
iii. ಉತ್ತರ ಪ್ರದೇಶ |
|
d. ಖುಷಿನಗರ |
4. ಮೊದಲ ಪ್ರವಚನ |
iv. ಉತ್ತರ ಪ್ರದೇಶ |
ಸರಿಯಾದ ಹೊಂದಾಣಿಕೆಯನ್ನು ಆಯ್ಕೆಮಾಡಿ:
- a – 2 – ii, b – 3 – i, c – 4 – iii, d – 1 – iv
- a – 1 – ii, b – 2 – i, c – 4 – iii, d – 1 – iv
- a – 4 – i, b – 3 – ii, c – 2 – iii, d – 1 – iv
- a – 3 – ii, b – 2 – i, c – 4 – iii, d – 1 – iv
ಉತ್ತರ: A
4). ಪ್ರತಿಪಾದನೆ (A): ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆಯನ್ನು (CCUS) ಒಂದು ಪ್ರಮುಖ ಪರಿವರ್ತನಾ ತಂತ್ರಜ್ಞಾನವೆಂದು ಪರಿಗಣಿಸಲಾಗಿದೆ.
ಕಾರಣ (R): ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯು ವಾತಾವರಣಕ್ಕೆ ಪ್ರವೇಶಿಸುವುದನ್ನು ತಡೆಯುವ ಮೂಲಕ, ಹೊರಸೂಸುವಿಕೆಯನ್ನು ತಗ್ಗಿಸಲು ಕಷ್ಟಕರವಾದ ಕೈಗಾರಿಕಾ ವಲಯಗಳ ನಿರಂತರ ಕಾರ್ಯಾಚರಣೆಗೆ CCUS ಅನುವು ಮಾಡಿಕೊಡುತ್ತದೆ.
ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ, ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ, ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ.
- A ಸರಿ, ಆದರೆ R ತಪ್ಪು
- A ತಪ್ಪು, ಆದರೆ R ಸರಿ
ಉತ್ತರ: A
5). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ತೈಪೂಸಂ ಹಬ್ಬವನ್ನು ಪ್ರಧಾನವಾಗಿ ತಮಿಳು ಮಾತನಾಡುವ ಸಮುದಾಯಗಳು ಆಚರಿಸುತ್ತವೆ.
- ದೊಡ್ಡ ಸಂಖ್ಯೆಯ ತಮಿಳು ವಲಸೆಗಾರರನ್ನು ಹೊಂದಿರುವ ದೇಶಗಳಲ್ಲಿ ಇದು ಗಮನಾರ್ಹವಾದ ಸಾರ್ವಜನಿಕ ಆಚರಣೆಯನ್ನು ಹೊಂದಿದೆ.
- ಈ ಹಬ್ಬವನ್ನು ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಅಧಿಕೃತವಾಗಿ ಸಾರ್ವಜನಿಕ ರಜಾದಿನವೆಂದು ಗುರುತಿಸಲಾಗಿದೆ.
- ಭಾರತದಲ್ಲಿ, ತೈಪೂಸಂ ಆಚರಣೆಗಳು ತಮಿಳುನಾಡಿಗೆ ಮಾತ್ರ ಸೀಮಿತವಾಗಿವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
6). ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (DAY-NRLM)ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಅಭಿಯಾನವು ಕೇವಲ ಸ್ವಯಂ ಉದ್ಯೋಗದ ಮೇಲೆ ಪ್ರತ್ಯೇಕವಾಗಿ ಗಮನ ಹರಿಸುತ್ತದೆ ಮತ್ತು ಕೂಲಿ ಉದ್ಯೋಗವನ್ನು ಒಳಗೊಂಡಿರುವುದಿಲ್ಲ.
- ಇದು ಗ್ರಾಮೀಣ ಬಡ ಕುಟುಂಬಗಳನ್ನು ಸ್ವಯಂ-ನಿರ್ವಹಣಾ ಸಂಸ್ಥೆಗಳಾಗಿ ಸಂಘಟಿಸಲು ಪ್ರಯತ್ನಿಸುತ್ತದೆ.
- ಹಣಕಾಸು ಸೇರ್ಪಡೆಯು ಈ ಅಭಿಯಾನದ ಪ್ರಮುಖ ಘಟಕವಾಗಿದೆ.
- ಈ ಅಭಿಯಾನವು ಗ್ರಾಮೀಣ ಕುಟುಂಬಗಳಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒತ್ತಿಹೇಳುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿಲ್ಲ?
- 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
ಉತ್ತರ: C
7). ‘ದೆಹಲಿ ಘೋಷಣೆ’ಯನ್ನು ಯಾವ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಾಯಿತು?
- ಭಾರತ-ಜಿಸಿಸಿ (GCC) ಶೃಂಗಸಭೆ
- ಭಾರತ-ಆಫ್ರಿಕಾ ಒಕ್ಕೂಟ ಸಂವಾದ
- ಭಾರತ-ಅರಬ್ ವಿದೇಶಾಂಗ ಸಚಿವರ ಸಭೆ
- ಅಲಿಪ್ತ ಚಳುವಳಿ (NAM)ಯ ಮಂತ್ರಿಮಂಡಳದ ಸಮ್ಮೇಳನ
ಉತ್ತರ: C
8). ‘ಜ್ಞಾನ್ ಭಾರತಂ’ ಅಭಿಯಾನದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಅಭಿಯಾನವು ಭಾರತದಾದ್ಯಂತ ಇರುವ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ.
- ಇದು ಪ್ರಾಥಮಿಕವಾಗಿ ಧಾರ್ಮಿಕ ಸಂಸ್ಥೆಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ಹಸ್ತಪ್ರತಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ.
- ಈ ಅಭಿಯಾನವು ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.
- ಹಸ್ತಪ್ರತಿಗಳಿಗೆ ಡಿಜಿಟಲ್ ಪ್ರವೇಶವನ್ನು ಒದಗಿಸುವುದು ಈ ಅಭಿಯಾನದ ಪ್ರಮುಖ ಫಲಿತಾಂಶವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 3 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
9). “ಭಾರತ್-ವಿಸ್ತಾರ್” (Bharat-VISTAAR) ನ ವಿಸ್ತೃತ ರೂಪವೇನು?
- ಕೃಷಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸುಸ್ಥಿರ ತಂತ್ರಜ್ಞಾನಕ್ಕಾಗಿರುವ ವಾಸ್ತವೋಪಮ (ವರ್ಚುವಲ್) ಸಂಪರ್ಕಸಾಧನ.
- ಕೃಷಿ ಸಂಪನ್ಮೂಲಗಳ ಸುಲಭ ಲಭ್ಯತೆಗಾಗಿ ರೂಪಿಸಲಾದ ಸಂಯೋಜಿತ ವಾಸ್ತವೋಪಮ (ವರ್ಚುವಲ್) ವ್ಯವಸ್ಥೆ.
- ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗಾಗಿರುವ ಮೌಲ್ಯಾಧಾರಿತ ಸಂಯೋಜಿತ ವ್ಯವಸ್ಥೆ.
- ತಂತ್ರಜ್ಞಾನ ಮತ್ತು ಕೃಷಿ ಸುಧಾರಣೆಗಳಿಗಾಗಿರುವ ವಾಸ್ತವೋಪಮ (ವರ್ಚುವಲ್) ಮೂಲಸೌಕರ್ಯ ಯೋಜನೆ.
ಉತ್ತರ: B
10). ಗೋಬರ್‌ಧನ್ (GOBARdhan) ಯೋಜನೆಯು ಕೆಳಗಿನ ಯಾವ ಸಮಗ್ರವಾದ ನೀತಿ ಉದ್ದೇಶಗಳೊಂದಿಗೆ ಹೆಚ್ಚು ನಿಕಟವಾಗಿ ಹೊಂದಿಕೆಯಾಗುತ್ತದೆ?
- ಆವರ್ತಕ ಆರ್ಥಿಕತೆ
- ಗ್ರಾಮೀಣ ಜೀವನೋಪಾಯದ ವೈವಿಧ್ಯೀಕರಣ
- ಹವಾಮಾನ ಬದಲಾವಣೆಯ ತಗ್ಗಿಸುವಿಕೆ
- ರಫ್ತು ಆಧಾರಿತ ಕೃಷಿ ಬೆಳವಣಿಗೆ
ಈ ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 1, 2, 3 ಮತ್ತು 4
- 2, 3 ಮತ್ತು 4 ಮಾತ್ರ
- 1, 2, ಮತ್ತು 3 ಮಾತ್ರ
ಉತ್ತರ: D
11). ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)ಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಲೋಕಸಭಾ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ರಾಜ್ಯಸಭಾ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ನಾಮನಿರ್ದೇಶಿತ ಸಂಸದರು ಭಾರತದಾದ್ಯಂತ ಎಲ್ಲಿ ಬೇಕಾದರೂ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ಸಂಸದರು ತಮ್ಮ ಸಾಮಾನ್ಯ ಅಧಿಕಾರ ವ್ಯಾಪ್ತಿಯ ಹೊರಗೆ ಕಾಮಗಾರಿಗಳನ್ನು ಶಿಫಾರಸು ಮಾಡಲು ಸೀಮಿತ ವಿವೇಚನಾ ಅವಕಾಶವನ್ನು ಹೊಂದಿದ್ದಾರೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: B
12). ಘನತ್ಯಾಜ್ಯ ನಿರ್ವಹಣಾ (SWM) ನಿಯಮಗಳು, 2026 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ನಿಯಮಗಳನ್ನು ಪರಿಸರ (ಸಂರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ.
- ನಿಯಮಾವಳಿಗಳ ಅಡಿಯಲ್ಲಿ ಪರಿಸರ ಪರಿಹಾರವನ್ನು ವಿಧಿಸುವಿಕೆಯು “ಮಾಲಿನ್ಯಕಾರಕನೇ ಪಾವತಿಸಬೇಕು” ಎಂಬ ತತ್ವವನ್ನು ಆಧರಿಸಿದೆ.
- ನಿಯಮಗಳ ಉಲ್ಲಂಘನೆಗಾಗಿ ಪರಿಸರ ಪರಿಹಾರವನ್ನು ವಿಧಿಸುವ ಜವಾಬ್ದಾರಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಂದಿದೆ.
- ಈ ನಿಯಮಗಳು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
13). ನ್ಯೂ ಸ್ಟಾರ್ಟ್ (New START – ಕಾರ್ಯತಂತ್ರದ ಶಸ್ತ್ರಾಸ್ತ್ರ ಕಡಿತ) ಒಪ್ಪಂದಕ್ಕೆ ಯಾವ ಎರಡು ದೇಶಗಳ ನಡುವೆ ಸಹಿ ಹಾಕಲಾಯಿತು?
- ಅಮೆರಿಕಾ (USA) ಮತ್ತು ಚೀನಾ
- ರಷ್ಯಾ ಮತ್ತು ಚೀನಾ
- ಅಮೆರಿಕಾ (USA) ಮತ್ತು ರಷ್ಯಾ
- ರಷ್ಯಾ ಮತ್ತು ಉಕ್ರೇನ್
ಉತ್ತರ: C
14). ಪಿಎಂ ವಿಕಾಸ್ (PM VIKAS) ಯೋಜನೆಯ ಪ್ರಾಥಮಿಕ ಉದ್ದೇಶವೇನು?
- ಎಲ್ಲಾ ಅಲ್ಪಸಂಖ್ಯಾತರಿಗೆ ಸಾರ್ವತ್ರಿಕ ವಿದ್ಯಾರ್ಥಿವೇತನವನ್ನು ಒದಗಿಸುವುದು.
- ಅಲ್ಪಸಂಖ್ಯಾತರು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪಾರಂಪರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದು.
- ಅಲ್ಪಸಂಖ್ಯಾತ ಸಮುದಾಯಗಳ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಶಿಕ್ಷಣವನ್ನು ಬೆಂಬಲಿಸುವುದು.
- ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ಖಚಿತಪಡಿಸುವುದು.
ಉತ್ತರ: C
15). ಘನ ಇಂಧನ ನಾಳೀಯ ರಾಮ್‌ಜೆಟ್ (SFDR) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವಾತಾವರಣದ ಆಮ್ಲಜನಕವನ್ನು ಬಳಸಿಕೊಳ್ಳುವ ವಾಯು-ಗ್ರಾಹಕ ಚಾಲನಾ ವ್ಯವಸ್ಥೆಯಾಗಿದೆ.
- ಇದು ಹಾರಾಟದ ಆರಂಭಿಕ ಹಂತದಲ್ಲಿ ವೇಗವನ್ನು ಹೆಚ್ಚಿಸಲು ನಳಿಕೆ ರಹಿತ ಘನ ವೇಗವರ್ಧಕವನ್ನು ಬಳಸುತ್ತದೆ.
- ಈ ತಂತ್ರಜ್ಞಾನವು ಕ್ಷಿಪಣಿಯ “ನೋ-ಎಸ್ಕೇಪ್ ಜೋನ್” (ತಪ್ಪಿಸಿಕೊಳ್ಳಲು ಅವಕಾಶವಿಲ್ಲದ ವಲಯ) ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
- ಭಾರತವು ಈ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: D
16). ಕೃಷಿ ಮೂಲಸೌಕರ್ಯ ನಿಧಿಯು (AIF) ಕೆಳಗಿನ ಯಾವ ಚಟುವಟಿಕೆಗಳನ್ನು ನೇರವಾಗಿ ಬೆಂಬಲಿಸುತ್ತದೆ?
- ಆಧುನಿಕ ಶೇಖರಣೆ ಮತ್ತು ಉಗ್ರಾಣ ಸೌಲಭ್ಯಗಳ ನಿರ್ಮಾಣ.
- ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳ ಅಭಿವೃದ್ಧಿ.
- ಬೃಹತ್ ಪ್ರಮಾಣದ ನೀರಾವರಿ ಅಣೆಕಟ್ಟುಗಳ ನಿರ್ಮಾಣ.
- ಕೃಷಿ-ಕ್ಷೇತ್ರದ ಮೂಲಸ್ಥಳ ಮಟ್ಟದ ಮೂಲಸೌಕರ್ಯಗಳನ್ನು ಬಲಪಡಿಸುವುದು.
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1, 2, 3 ಮತ್ತು 4
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, ಮತ್ತು 4 ಮಾತ್ರ
ಉತ್ತರ: D
17). ಪ್ರತಿಪಾದನೆ (A): ನಮಸ್ತೆ (NAMASTE) ಯೋಜನೆಯು ಹಸ್ತಚಾಲಿತ ಮಲ ಹೊರುವವರ ಪುನರ್ವಸತಿಯನ್ನು ಬೆಂಬಲಿಸುತ್ತದೆ.
ಕಾರಣ (R): ಈ ಯೋಜನೆಯು ನೈರ್ಮಲ್ಯ ಕಾರ್ಮಿಕರಿಗೆ ಕೌಶಲ್ಯ ಅಭಿವೃದ್ಧಿ, ಸುರಕ್ಷತಾ ತರಬೇತಿ ಮತ್ತು ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುತ್ತದೆ.
ಸರಿಯಾದ ಉತ್ತರವನ್ನು ಆರಿಸಿ:
- A ಮತ್ತು R ಎರಡೂ ಸರಿ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ
- A ಮತ್ತು R ಎರಡೂ ಸರಿ ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
- A ಸರಿ ಆದರೆ R ತಪ್ಪು
- A ತಪ್ಪು ಆದರೆ R ಸರಿ
ಉತ್ತರ: A
18). ಉರ್ಮಿಯಾ ಸರೋವರದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಇರಾನ್‌ನಲ್ಲಿದೆ ಮತ್ತು ಝಾಗ್ರೋಸ್ ಪರ್ವತ ವ್ಯವಸ್ಥೆಗೆ ಸಂಬಂಧಿಸಿದ ಭೂ ರಚನಾ (ಟೆಕ್ಟೋನಿಕ್) ತಗ್ಗು ಪ್ರದೇಶದಲ್ಲಿದೆ.
- ಇದು ಸಮುದ್ರಕ್ಕೆ ನೈಸರ್ಗಿಕ ನಿರ್ಗಮನವಿಲ್ಲದ (ಹೊರಹರಿವು ಇಲ್ಲದ) ಆವೃತ ಜಲಾನಯನ ಸರೋವರವಾಗಿದೆ.
- ಅಧಿಕ ಮಳೆಯ ಅವಧಿಯಲ್ಲಿ ಇದು ಕ್ಯಾಸ್ಪಿಯನ್ ಸಮುದ್ರಕ್ಕೆ ಹರಿಯುತ್ತದೆ.
- ಇದನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್ಸರ್ ಜೌಗು ಪ್ರದೇಶವೆಂದು ಅಧಿಸೂಚಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
19). “ರಫಾ ಗಡಿ” ಕ್ರಾಸಿಂಗ್ (ಸಂಚಾರ ಪಥ) ಕೆಳಗಿನ ಯಾವ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ?
- ಗಾಜಾ ಪಟ್ಟಿ ಮತ್ತು ಇಸ್ರೇಲ್
- ವೆಸ್ಟ್ ಬ್ಯಾಂಕ್ ಮತ್ತು ಜೋರ್ಡಾನ್
- ಗಾಜಾ ಪಟ್ಟಿ ಮತ್ತು ಈಜಿಪ್ಟ್
- ಇಸ್ರೇಲ್ ಮತ್ತು ಲೆಬನಾನ್
ಉತ್ತರ: C
20). ಈ ಕೆಳಗಿನ ಪಠ್ಯವನ್ನು ಪರಿಗಣಿಸಿ:
ಇದು 1.5 ಮೀಟರ್‌ಗಿಂತಲೂ ಎತ್ತರವಿರುವ ದೊಡ್ಡ ಪಕ್ಷಿ ಪ್ರಭೇದವೊಂದನ್ನು ಇತ್ತೀಚಿಗೆ ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗಿನ ಕೃಷಿ ಭೂದೃಶ್ಯಗಳು ಮತ್ತು ಆಳವಿಲ್ಲದ ಜೌಗು ಪ್ರದೇಶಗಳಲ್ಲಿ ಗುರುತಿಸಲಾಗಿದೆ. ಇದು ಬಲವಾದ ಸಾಮಾಜಿಕ ಬಾಂಧವ್ಯ, ಜೀವಮಾನವಿಡೀ ಏಕಪತ್ನಿತ್ವದ ಜೋಡಿಗಳು ಮತ್ತು ಮಾನ್ಸೂನ್ ಋತುವಿನೊಂದಿಗೆ ನಿಕಟವಾಗಿ ಹೊಂದಿಕೆಯಾಗುವ ಸಂತಾನೋತ್ಪತ್ತಿ ಚಕ್ರಕ್ಕೆ ಹೆಸರುವಾಸಿಯಾಗಿದೆ. ಈ ಪ್ರಭೇದವು ಕೀಟಗಳು, ಮೀನುಗಳು, ಬೇರುಗಳು ಮತ್ತು ಸಸ್ಯಜನ್ಯ ವಸ್ತುಗಳನ್ನು ತಿನ್ನುತ್ತದೆ; ಹಾಗೂ ಕೃಷಿಭೂಮಿಗಳಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಂದು ಕಾಲದಲ್ಲಿ ಉತ್ತರ ಮತ್ತು ಮಧ್ಯ ಭಾರತದ ಹಲವಾರು ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದ್ದರೂ, ಇತ್ತೀಚಿನ ವೀಕ್ಷಣೆಗಳು ಇದರ ಜನಸಂಖ್ಯೆಯು ಈಗ ಹೆಚ್ಚಾಗಿ ಒಂದು ನಿರ್ದಿಷ್ಟ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ತೋರಿಸುತ್ತವೆ. ಈ ಪ್ರಭೇದವನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ದುರ್ಬಲ’ (VU) ಎಂದು ಪಟ್ಟಿಮಾಡಲಾಗಿದೆ ಮತ್ತು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅನುಸೂಚಿ IV ರ ಅಡಿಯಲ್ಲಿ ರಕ್ಷಿಸಲಾಗಿದೆ.
ಈ ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದವನ್ನು ಗುರುತಿಸಿ:
- ಡೆಮೊಸೆಲ್ ಕೊಕ್ಕರೆ
- ಸಾರಸ್ ಕೊಕ್ಕರೆ
- ಸೈಬೀರಿಯನ್ ಕೊಕ್ಕರೆ
- ಕಪ್ಪು-ಕುತ್ತಿಗೆಯ ಕೊಕ್ಕರೆ
ಉತ್ತರ: B
21). ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರವನ್ನು (FNTA) ಈ ಕೆಳಗಿನವರನ್ನು ಒಳಗೊಂಡ ಒಪ್ಪಂದದ ಮೂಲಕ ರಚಿಸಲಾಗಿದೆ:
- ಭಾರತ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ (ENPO)
- ಭಾರತ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ (ENPO)
- ನಾಗಾಲ್ಯಾಂಡ್ ಸರ್ಕಾರ ಮತ್ತು ನಾಗಾ ಬಂಡುಕೋರ ಗುಂಪುಗಳು
- ಭಾರತ ಸರ್ಕಾರ, ಪೂರ್ವ ನಾಗಾಲ್ಯಾಂಡ್ ಜನತಾ ಸಂಸ್ಥೆ(ENPO) ಮತ್ತು ನೆರೆಯ ದೇಶಗಳು
ಉತ್ತರ: B
22). ಕೆಳಗಿನ ಯಾವ ಬಾಹ್ಯಾಕಾಶ ಸಂಸ್ಥೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಾರ್ಯಕ್ರಮದಲ್ಲಿ ಪಾಲುದಾರನಾಗಿಲ್ಲ?
- ನಾಸಾ (NASA)
- ರಾಸ್ಕೋಸ್ಮಾಸ್ (Roscosmos)
- ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA)
- ಇಸ್ರೋ (ISRO)
ಉತ್ತರ: D
23). ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (NDMA) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- NDMA ಪರಿಸರ (ರಕ್ಷಣೆ) ಕಾಯ್ದೆ, 1986 ರಿಂದ ತನ್ನ ಶಾಸನಬದ್ಧ ಅಧಿಕಾರವನ್ನು ಪಡೆದಿದೆ.
- ಭಾರತದ ಪ್ರಧಾನ ಮಂತ್ರಿಯವರು NDMA ಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.
- NDMA ಯ ಮಾರ್ಗಸೂಚಿಗಳು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ (SDMAs) ಕಡ್ಡಾಯವಾಗಿವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: C
24). ನೆಕ್ಸ್‌ಕಾರ್19 (NexCAR19) ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದ ಹೊರಗೆ ಬಳಸಲು ಅಭಿವೃದ್ಧಿಪಡಿಸಲಾದ ಸಂಪೂರ್ಣ ಮ್ಯೂರಿನ್ (ಇಲಿ-ಮೂಲದ) CAR-T ಚಿಕಿತ್ಸೆಯಾಗಿದೆ.
- ಇದು ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಮೊದಲ ಮಾನವಸದೃಶೀಕರಿಸಿದ CAR-T ಚಿಕಿತ್ಸೆಯನ್ನು ಪ್ರತಿನಿಧಿಸುತ್ತದೆ.
- CAR ರಚನೆಗಳ ಮಾನವಸದೃಶೀಕರಣವು ರೋಗಿಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಇದರ ಅಭಿವೃದ್ಧಿಯು ಸುಧಾರಿತ ರೋಗನಿರೋಧಕ ಚಿಕಿತ್ಸಾ ಪದ್ಧತಿಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
25). ಅಗ್ನಿ-ಪಿ (ಅಗ್ನಿ-ಪ್ರೈಮ್) ಕ್ಷಿಪಣಿಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಹಿಂದಿನ ಅಗ್ನಿ ರೂಪಾಂತರಗಳಿಗೆ ಹೋಲಿಸಿದರೆ ಹಗುರವಾದ ಮತ್ತು ಹೆಚ್ಚು ಸುಸಂಘಟಿತ ಕ್ಷಿಪಣಿಯಾಗಿದೆ.
- ಇದು ಹೆಚ್ಚಿನ ನಿಖರತೆಗಾಗಿ ಸುಧಾರಿತ ನೋದನ/ಪ್ರಚೋದನಾ ವ್ಯವಸ್ಥೆ (ಪ್ರೊಪಲ್ಷನ್) ಮತ್ತು ಪಥನಿರ್ದೇಶನ (ನ್ಯಾವಿಗೇಷನ್) ವ್ಯವಸ್ಥೆಗಳನ್ನು ಒಳಗೊಂಡಿದೆ.
- ಇದನ್ನು ಪ್ರತ್ಯೇಕವಾಗಿ ಸಾಂಪ್ರದಾಯಿಕ ಯುದ್ಧಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಪರಮಾಣು ಸಿಡಿತಲೆಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ.
- ಇದರ ವ್ಯಾಪ್ತಿಯು ಅಲ್ಪ-ಶ್ರೇಣಿಯ ಮತ್ತು ದೀರ್ಘ-ಶ್ರೇಣಿಯ ಅಗ್ನಿ ಕ್ಷಿಪಣಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
26). ಜಿಯೋ ಪಾರ್ಸಿ ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಜಾರಿಗೊಳಿಸಲಾದ ಕೇಂದ್ರ ವಲಯದ ಯೋಜನೆಯಾಗಿದೆ.
- ಈ ಯೋಜನೆಯು ಪಾರ್ಸಿಗಳಲ್ಲಿ ಹೆರಿಗೆಗಾಗಿ ಆರ್ಥಿಕ ಪ್ರೋತ್ಸಾಹದ ಮೇಲೆ ಪ್ರತ್ಯೇಕವಾಗಿ ಗಮನಹರಿಸುತ್ತದೆ.
- ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಈ ಯೋಜನೆಯ ಅಡಿಯಲ್ಲಿ ಒಂದು ಘಟಕವಾಗಿದೆ.
- ಈ ಯೋಜನೆಯನ್ನು 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಪ್ರಾರಂಭಿಸಲಾಯಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
27). ‘ರೂಬಲ್ ನಾಗಿ’ ಅವರು 2026 ರಲ್ಲಿ ಯಾವ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ?
- ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ
- ಜಾಗತಿಕ ಶಿಕ್ಷಕ ಪ್ರಶಸ್ತಿ
- ಯುನೆಸ್ಕೋ ಶಾಂತಿ ಪ್ರಶಸ್ತಿ
- ಪದ್ಮಶ್ರೀ
ಉತ್ತರ: B
28). ಹಕ್ಕಿ-ಪಿಕ್ಕಿ ಬುಡಕಟ್ಟಿನ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇವರು ಸಾಂಪ್ರದಾಯಿಕವಾಗಿ ಪಕ್ಷಿ ಹಿಡಿಯುವವರು ಮತ್ತು ಬೇಟೆಗಾರರಾಗಿದ್ದಾರೆ.
- ಈ ಸಮಾಜವು ಮಾತೃಪ್ರಧಾನವಾಗಿದೆ, ಮತ್ತು ಹಿರಿಯ ಮಗನಿಗೆ ಕೂದಲು ಕತ್ತರಿಸಲು ಅನುಮತಿ ಇಲ್ಲ.
- ಅತ್ತೆ-ಮಾವನ ಮಕ್ಕಳೊಂದಿಗಿನ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತದೆ ಮತ್ತು ಏಕಪತ್ನಿತ್ವವು ನಿಯಮವಾಗಿದೆ.
- ಈ ಬುಡಕಟ್ಟು ಮೂಲತಃ ಗುಜರಾತ್ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳಿಗೆ ಸೇರಿದೆ.
- ಕರ್ನಾಟಕದಲ್ಲಿ, ಇವರು ಕಟ್ಟುನಿಟ್ಟಾಗಿ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2, 3 ಮತ್ತು 4 ಮಾತ್ರ
- 1, 3, 4 ಮತ್ತು 5 ಮಾತ್ರ
- 2, 3, 4 ಮತ್ತು 5 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
29). ಗ್ರೇಟರ್ ಫ್ಲೆಮಿಂಗೊ (ರಾಜಹಂಸ) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಫ್ಲೆಮಿಂಗೊ ಕುಟುಂಬದ ಅತಿದೊಡ್ಡ ಪ್ರಭೇದವಾಗಿದೆ.
- ಇದರ ಸರಾಸರಿ ಎತ್ತರವು 110-150 ಸೆಂ.ಮೀ ವರೆಗೆ ಇರುತ್ತದೆ, ಮತ್ತು ತೂಕ 2-4 ಕೆಜಿ ಇರುತ್ತದೆ.
- ಇದರ ಐಯುಸಿಎನ್ (IUCN) ಕೆಂಪು ಪಟ್ಟಿ ಸ್ಥಾನಮಾನವು ‘ದುರ್ಬಲ’ (VU) ಆಗಿದೆ.
- ಇದು ಗುಜರಾತ್‌ನ ರಾಜ್ಯ ಪಕ್ಷಿಯಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: B
30). ಕುಡಗೋಲು ಕಣ ರೋಗ (SCD-ಸಿಕಲ್ ಸೆಲ್ ಡೀಸೆಸ್)ಯ ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- ಕೆಂಪು ರಕ್ತ ಕಣಗಳು ಕಠಿಣ ಮತ್ತು ಕುಡಗೋಲು ಆಕಾರವನ್ನು ಪಡೆಯುತ್ತವೆ, ಇದರಿಂದ ರಕ್ತದ ಹರಿವಿಗೆ ತಡೆಯುಂಟಾಗುತ್ತದೆ.
- ಇದು ಪ್ರಾಥಮಿಕವಾಗಿ ಸೊಳ್ಳೆಗಳ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದೆ.
- ಈ ರೋಗದ ಅತ್ಯಂತ ತೀವ್ರ ಸ್ವರೂಪವೆಂದರೆ ಸಿಕಲ್-ಸೆಲ್ ರಕ್ತಹೀನತೆ.
- SCD ರೋಗಿಗಳಲ್ಲಿನ ಹಿಮೋಗ್ಲೋಬಿನ್ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
31). ‘ಹರಿಮಾವು ಶಕ್ತಿ’ ಸಮರಾಭ್ಯಾಸವು ಪ್ರಾಥಮಿಕವಾಗಿ ಯಾವ ದೇಶಗಳ ನಡುವೆ ನಡೆಯುತ್ತದೆ?
- ಭಾರತ ಮತ್ತು ಇಂಡೋನೇಷ್ಯಾ
- ಭಾರತ ಮತ್ತು ಥೈಲ್ಯಾಂಡ್
- ಭಾರತ ಮತ್ತು ಮಲೇಷ್ಯಾ
- ಭಾರತ ಮತ್ತು ವಿಯೆಟ್ನಾಂ
ಉತ್ತರ: C
32). ಬಾಬ್ ಎಲ್-ಮಂಡೇಬ್ ಜಲಸಂಧಿಯ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಮೆಡಿಟರೇನಿಯನ್ ಸಮುದ್ರವನ್ನು ನೇರವಾಗಿ ಅರಬ್ಬೀ ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
- ಇದು ಪರ್ಷಿಯನ್ ಕೊಲ್ಲಿಯಿಂದ ಯುರೋಪ್‌ಗೆ ತೈಲ ಸಾಗಣೆಯ ಪ್ರಮುಖ ಆಯಕಟ್ಟಿನ ಜಲಮಾರ್ಗ ಆಗಿದೆ.
- ಇದು ಯೆಮೆನ್ ಮತ್ತು ಆಫ್ರಿಕಾದ ಕೊಂಬಿನ (ಹಾರ್ನ್ ಆಫ್ ಆಫ್ರಿಕಾ) ನಡುವೆ ನೆಲೆಗೊಂಡಿದೆ.
- ಇದು ಸಂಪೂರ್ಣವಾಗಿ ಸೌದಿ ಅರೇಬಿಯಾ ಮತ್ತು ಎರಿಟ್ರಿಯಾ ದೇಶಗಳ ನಿಯಂತ್ರಣದಲ್ಲಿದೆ.
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 4 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
ಉತ್ತರ: B
33). ಪಿಎಂ ಕೇರ್ಸ್ (PM CARES) ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ (PMNRF) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G ಅಡಿಯಲ್ಲಿ ಎರಡೂ ನಿಧಿಗಳು 100% ತೆರಿಗೆ ವಿನಾಯಿತಿಗೆ ಅರ್ಹವಾಗಿವೆ.
- ಎರಡೂ ನಿಧಿಗಳು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತವೆ.
- ಎರಡೂ ನಿಧಿಗಳು ಮಾಹಿತಿ ಹಕ್ಕು (RTI) ಕಾಯ್ದೆ, 2005 ರ ವ್ಯಾಪ್ತಿಗೆ ಒಳಪಡುತ್ತವೆ.
- ಎರಡೂ ನಿಧಿಗಳನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪಾಲರು (CAG) ಲೆಕ್ಕಪರಿಶೋಧನೆ ಮಾಡುವುದಿಲ್ಲ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 1, 2 ಮತ್ತು 4 ಮಾತ್ರ
- 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
34). ಈ ಕೆಳಗಿನ ಪಠ್ಯವನ್ನು ಪರಿಗಣಿಸಿ:
ಇದನ್ನು ಇಂಡೋನೇಷ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್ ಮತ್ತು ಭಾರತದ ಕೆಲವು ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ದೊಡ್ಡ ವಿಷರಹಿತ ಹಾವಿನ ಪ್ರಭೇದವೊಂದನ್ನು ವಿಶ್ವದ ಅತಿ ಉದ್ದದ ಹಾವಿನ ಪ್ರಭೇದವೆಂದು ಗುರುತಿಸಲಾಗಿದೆ. ಇದು ಅತ್ಯಂತ ಭಾರವಾದ ಹಾವಲ್ಲದಿದ್ದರೂ, ಹಸಿರು ಅನಾಕೊಂಡ ಮತ್ತು ಬರ್ಮೀಸ್ ಹೆಬ್ಬಾವಿನ ನಂತರ ಜಾಗತಿಕವಾಗಿ ಮೂರನೇ ಅತಿ ಭಾರದ ಹಾವಿನ ಪ್ರಭೇದಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ತನ್ನ ಹುರುಪೆಗಳ (ಪೊರೆಗಳ) ಮೇಲೆ ವಿಶಿಷ್ಟವಾದ ಬಲೆಯಂತಹ ಮಾದರಿಗಳನ್ನು ಹೊಂದಿದೆ ಮತ್ತು ತನ್ನ ಬೇಟೆಯನ್ನು ಬಿಗಿಯಾಗಿ ಸುತ್ತಿಕೊಳ್ಳುವ ಮೂಲಕ, ಉಸಿರುಗಟ್ಟಿಸಿ ನಂತರ ಇಡಿಯಾಗಿ ನುಂಗುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಇದು ಮನುಷ್ಯರನ್ನು ಬೇಟೆಯಾಡಿದ ವರದಿಗಳೂ ಇವೆ.
ಈ ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?
- ಹಸಿರು ಅನಾಕೊಂಡ
- ಬರ್ಮೀಸ್ ಹೆಬ್ಬಾವು
- ಜಾಲಾಕಾರದ ಹೆಬ್ಬಾವು (ರೆಟಿಕ್ಯುಲೇಟೆಡ್ ಪೈಥಾನ್)
D.ಭಾರತೀಯ ಹೆಬ್ಬಾವು (ಇಂಡಿಯನ್ ರಾಕ್ ಪೈಥಾನ್)
ಉತ್ತರ: C
35). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:
|
ಹಬ್ಬ / ಉತ್ಸವ |
ರಾಜ್ಯ |
|
ಛತ್ತೀಸ್‌ಗಢ |
|
ನಾಗಾಲ್ಯಾಂಡ್ |
|
ಮಹಾರಾಷ್ಟ್ರ |
|
ಮೇಘಾಲಯ |
ಮೇಲೆ ನೀಡಿರುವ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಾಣಿಕೆಯಾಗಿದೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
36). ಭಾರತದಲ್ಲಿ ಜೀತಪದ್ಧತಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಜೀತಪದ್ಧತಿಯು ಬಲವಂತದ ದುಡಿಮೆಯ ಮೂಲಕ ಸಾಲ ಮರುಪಾವತಿ ಮಾಡುವುದನ್ನು ಒಳಗೊಂಡಿರುತ್ತದೆ.
- ಈ ಪದ್ಧತಿಯು ಐತಿಹಾಸಿಕವಾಗಿ ಜಾತಿ ಶ್ರೇಣಿ ವ್ಯವಸ್ಥೆಗಳು ಮತ್ತು ಭೂರಹಿತತೆಗೆ ಬೆಸೆದುಕೊಂಡಿದೆ.
- ಆರ್ಥಿಕ ಅನಿವಾರ್ಯತೆಯ ಸಂದರ್ಭಗಳಲ್ಲಿ ಜೀತಪದ್ಧತಿಗೆ ಸಂವಿಧಾನವು ಸ್ಪಷ್ಟವಾಗಿ ಅನುಮತಿ ನೀಡುತ್ತದೆ.
- ಸಂವಿಧಾನದ 23ನೇ ವಿಧಿಯು ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: C
37). ಪಶ್ಚಿಮ ಹಿಂದೂ ಮಹಾಸಾಗರದಲ್ಲಿರುವ ಈ ಕೆಳಗಿನ ದ್ವೀಪ ರಾಷ್ಟ್ರಗಳನ್ನು ಪಶ್ಚಿಮದಿಂದ ಪೂರ್ವಕ್ಕೆ ಜೋಡಿಸಿ:
- ಕೊಮೊರೊಸ್
- ಸೀಶೆಲ್ಸ್
- ಮಾರಿಷಸ್
- ಮಾಲ್ಡೀವ್ಸ್
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 – 2 – 3 – 4
- 2 – 1 – 3 – 4
- 1 – 3 – 2 – 4
- 2 – 3 – 1 – 4
ಉತ್ತರ: A
38). ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಚಹಾ ಬೇಸಾಯಕ್ಕೆ 150-200 ಸೆಂ.ಮೀ ವಾರ್ಷಿಕ ಮಳೆ ಮತ್ತು 15°C ನಿಂದ 23°C ನಡುವಿನ ಸರಾಸರಿ ವಾರ್ಷಿಕ ತಾಪಮಾನದ ಅಗತ್ಯವಿದೆ.
- ಜೈವಿಕಾಂಶ (ಹ್ಯೂಮಸ್) ಸಮೃದ್ಧವಾಗಿರುವ ಆಳವಾದ, ನೀರು ಸರಾಗವಾಗಿ ಹರಿದುಹೋಗುವ ಮಣ್ಣು ಮತ್ತು ಎಲೆಗಳ ಪಕ್ವತೆಗಾಗಿ ದೀರ್ಘವಾದ ಶುಷ್ಕ ಋತುವಿನ ಅಗತ್ಯವಿದೆ.
- ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ಮತ್ತು ಕಪ್ಪು ಚಹಾದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ.
- ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಹಾ ರಫ್ತುದಾರ ರಾಷ್ಟ್ರವಾಗಿದೆ ಮತ್ತು ಭಾರತದ ಒಟ್ಟು ಚಹಾ ಉತ್ಪಾದನೆಯ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಅಸ್ಸಾಂ ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿಲ್ಲ?
- 1 ಮತ್ತು 2 ಮಾತ್ರ
- 2 ಮತ್ತು 4 ಮಾತ್ರ
- 3 ಮತ್ತು 4 ಮಾತ್ರ
- 2, 3 ಮತ್ತು 4
ಉತ್ತರ: B
39). ನೆಟ್‌ವರ್ಕ್ ಸಿದ್ಧತಾ ಸೂಚ್ಯಂಕ (NRI) 2025 ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಭಾರತವು 100 ಕ್ಕೆ 54.43 ಅಂಕಗಳೊಂದಿಗೆ 45ನೇ ಸ್ಥಾನವನ್ನು ಪಡೆದುಕೊಂಡಿದೆ.
- ಈ ವರದಿಯು ಪ್ರಪಂಚದಾದ್ಯಂತದ 150 ಆರ್ಥಿಕತೆಗಳನ್ನು ಮೌಲ್ಯಮಾಪನ ಮಾಡುತ್ತದೆ.
- ಈ ಸೂಚ್ಯಂಕವು ತಂತ್ರಜ್ಞಾನ, ಜನಸಾಮಾನ್ಯರು, ಆಡಳಿತ ಮತ್ತು ಪರಿಣಾಮ ಎಂಬ ನಾಲ್ಕು ಆಧಾರಸ್ತಂಭಗಳನ್ನು ಆಧರಿಸಿದೆ.
- ಈ ವರದಿಯನ್ನು ಪೋರ್ಟುಲನ್ಸ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
40). ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಬೆತ್ವಾ ನದಿಯಿಂದ ಹೆಚ್ಚುವರಿ ನೀರನ್ನು ಕೆನ್ ಜಲಾನಯನ ಪ್ರದೇಶಕ್ಕೆ ವರ್ಗಾಯಿಸುವ ಗುರಿಯನ್ನು ಇದು ಹೊಂದಿದೆ.
- ಕಾಂಕ್ರೀಟ್ ಕಾಲುವೆ ವ್ಯವಸ್ಥೆಯ ಮೂಲಕ ನೀರು ವರ್ಗಾವಣೆಯನ್ನು ಪ್ರಸ್ತಾಪಿಸಲಾಗಿದೆ.
- ಈ ಯೋಜನೆಯು ಪ್ರಾಥಮಿಕವಾಗಿ ಮರಾಠವಾಡ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿದೆ.
- ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಇದರ ಫಲಾನುಭವಿ ರಾಜ್ಯಗಳಾಗಿವೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
41). ಭಾರತದಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ನಿಯಂತ್ರಣಕ್ಕೆ ಸಂಬಂಧಿಸಿದ ಕೆಳಗಿನ ಕಾನೂನು ಉಪಕ್ರಮಗಳನ್ನು ಪರಿಗಣಿಸಿ:
- ಪರಿಸರ (ಸಂರಕ್ಷಣೆ) ಕಾಯ್ದೆ, 1986
- ಜೈವಿಕ ಸುರಕ್ಷತಾ ನಿಯಮಗಳು, 1989
- ಸಾಮೂಹಿಕ ವಿನಾಶಕ ಶಸ್ತ್ರಾಸ್ತ್ರಗಳ ಕಾಯ್ದೆ, 2005
- ಪರಮಾಣು ಶಕ್ತಿ ಕಾಯ್ದೆ, 1962
- 2017ರ ಮರುಸಂಯೋಜಿತ ಡಿಎನ್‌ಎ ಮತ್ತು ಜೈವಿಕ-ನಿಯಂತ್ರಣ ಮಾರ್ಗಸೂಚಿಗಳು
ಮೇಲಿನವುಗಳಲ್ಲಿ ಎಷ್ಟು ಕಾನೂನುಗಳು ಜೈವಿಕ ಶಸ್ತ್ರಾಸ್ತ್ರಗಳು ಅಥವಾ ಅಪಾಯಕಾರಿ ಸೂಕ್ಷ್ಮಾಣುಜೀವಿಗಳ ನಿಯಂತ್ರಣ ಅಥವಾ ನಿಷೇಧಕ್ಕೆ ನೇರವಾಗಿ ಸಂಬಂಧಿಸಿವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ನಾಲ್ಕು
ಉತ್ತರ: D
42). ‘ವಂದೇ ಮಾತರಂ’ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದರ ಮೊದಲ ಎರಡು ಚರಣಗಳನ್ನು 24 ಜನವರಿ 1950 ರಂದು ‘ಭಾರತದ ರಾಷ್ಟ್ರೀಯ ಹಾಡು’ ಎಂದು ಅಳವಡಿಸಿಕೊಳ್ಳಲಾಯಿತು.
- ಭಾರತದ ಸಂವಿಧಾನವು “ರಾಷ್ಟ್ರೀಯ ಹಾಡು” ಎಂಬ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.
- ಇದರ ಮಾನ್ಯತೆಯು ಸಂವಿಧಾನ ರಚನಾ ಸಭೆಯ ಚರ್ಚೆಗಳು ಮತ್ತು ಕಾರ್ಯಾಂಗದ ರೂಢಿಗಳಿಂದ ಬೆಳೆದುಬಂದಿದೆ.
- ಸಂವಿಧಾನದ 51A(a) ವಿಧಿಯ ಅಡಿಯಲ್ಲಿ ಇದನ್ನು ಸ್ಪಷ್ಟವಾಗಿ ಸಂರಕ್ಷಣೆ ಒದಗಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: B
43). ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್’ ಸಂಸ್ಥೆಯು ಪ್ರಕಟಿಸುತ್ತದೆ ಮತ್ತು ಇದು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಅಳೆಯುತ್ತದೆ.
- ಭಾರತವು 100 ಕ್ಕೆ 39 ಅಂಕಗಳನ್ನು ಗಳಿಸಿ ಜಾಗತಿಕವಾಗಿ 91ನೇ ಸ್ಥಾನದಲ್ಲಿದೆ.
- ಇದು 180 ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿದೆ ಮತ್ತು 0 (ಅತ್ಯಂತ ಸ್ವಚ್ಛ) ದಿಂದ 100 (ಹೆಚ್ಚು ಭ್ರಷ್ಟ) ವರೆಗಿನ ಮಾಪಕವನ್ನು ಬಳಸುತ್ತದೆ.
- ಡೆನ್ಮಾರ್ಕ್ ಅತ್ಯುತ್ತಮ ಸಾಧನೆ ಮಾಡಿದ ದೇಶವಾಗಿದೆ ಮತ್ತು ಸೊಮಾಲಿಯಾ ಅತ್ಯಂತ ಕಳಪೆ ಸಾಧನೆ ಮಾಡಿದ ದೇಶಗಳಲ್ಲಿ ಒಂದಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 1, 3 ಮತ್ತು 4 ಮಾತ್ರ
- 1, 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: C
44). ಭಾರತದ ಮೊದಲ ಸಂಗೀತಮಯ ರಸ್ತೆಯನ್ನು ಎಲ್ಲಿ ನಿರ್ಮಿಸಲಾಗಿದೆ?
- ದೆಹಲಿ
- ಮುಂಬೈ
- ಬೆಂಗಳೂರು
- ಅಹಮದಾಬಾದ್
ಉತ್ತರ: B
45). ಶಾಂತಿ ಕಾಯ್ದೆ (SHANTI Act), 2025 ರ ಪ್ರಾಥಮಿಕ ಉದ್ದೇಶವೇನು?
- ಎಲ್ಲಾ ಖಾಸಗಿ ವಿದ್ಯುತ್ ಸ್ಥಾವರಗಳನ್ನು ರಾಷ್ಟ್ರೀಕರಣಗೊಳಿಸುವುದು.
- ನಾಗರಿಕ ಪರಮಾಣು ವಲಯವನ್ನು ಹೆಚ್ಚಿನ ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸುವುದು.
- ಪರಮಾಣು ಶಕ್ತಿಯಲ್ಲಿ ವಿದೇಶಿ ಹೂಡಿಕೆಯನ್ನು ನಿಷೇಧಿಸುವುದು.
- ನವೀಕರಿಸಬಹುದಾದ ಶಕ್ತಿಯನ್ನು ಪರಮಾಣು ಶಕ್ತಿಯೊಂದಿಗೆ ಬದಲಾಯಿಸುವುದು.
ಉತ್ತರ: B
46). ಮಹರ್ಷಿ ದಯಾನಂದ ಸರಸ್ವತಿ ಅವರ ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ವೇದಗಳು ಜ್ಞಾನದ ಅಂತಿಮ ಮತ್ತು ದೋಷಾತೀತ ಅಧಿಕಾರವನ್ನು ಹೊಂದಿವೆ ಎಂದು ಅವರು ನಂಬಿದ್ದರು.
- ಅವರು ವಿಗ್ರಹಾರಾಧನೆ ಮತ್ತು ವಿಸ್ತಾರವಾದ ಆಚರಣೆಗಳನ್ನು ತಿರಸ್ಕರಿಸಿದರು.
- ಅವರು ಕಟ್ಟುನಿಟ್ಟಾಗಿ ಜನ್ಮವನ್ನು ಆಧರಿಸಿದ ಆನುವಂಶಿಕ ಜಾತಿ ಶ್ರೇಣಿಯನ್ನು ಬೆಂಬಲಿಸಿದರು.
- ಅವರು ಮಹಿಳಾ ಶಿಕ್ಷಣ ಮತ್ತು ವಿಧವಾ ಪುನರ್ವಿವಾಹವನ್ನು ಪ್ರತಿಪಾದಿಸಿದರು.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: C
47). ಕ್ಯಾಸನೂರು ಅರಣ್ಯ ಕಾಯಿಲೆಗೆ (KFD) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಉಣ್ಣೆಗಳಿಂದ ಹರಡುವ ರಕ್ತಸ್ರಾವಕಾರಕ ವೈರಾಣು ಜ್ವರವಾಗಿದೆ ಮತ್ತು ಇದು ಫ್ಲಾವಿವಿರಿಡೆ ಕುಟುಂಬದ ವೈರಸ್‌ನಿಂದ ಉಂಟಾಗುತ್ತದೆ.
- ಇದನ್ನು 1957ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು.
- ರೋಗ ಉಲ್ಬಣಗೊಂಡ ಅವಧಿಯಲ್ಲಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿರುವುದು ದೃಢಪಟ್ಟಿದೆ.
- ಈ ಕಾಯಿಲೆಯನ್ನು ಸಾಮಾನ್ಯವಾಗಿ ‘ಮಂಗನ ಕಾಯಿಲೆ’ ಎಂದು ಕರೆಯಲಾಗುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
48). ರಾಜಾಜಿ ರಾಷ್ಟ್ರೀಯ ಉದ್ಯಾನವನವು ಭಾರತದ ಯಾವ ರಾಜ್ಯದಲ್ಲಿದೆ?
- ಹಿಮಾಚಲ ಪ್ರದೇಶ
- ಉತ್ತರಾಖಂಡ
- ಉತ್ತರ ಪ್ರದೇಶ
- ಬಿಹಾರ
ಉತ್ತರ: B
49). ಈ ಕೆಳಗಿನವುಗಳಲ್ಲಿ ಯಾವುದು ಪಂಚಶೀಲ ತತ್ವವಲ್ಲ?
- ಆಂತರಿಕ ವ್ಯವಹಾರಗಳಲ್ಲಿ ಪರಸ್ಪರ ಹಸ್ತಕ್ಷೇಪ ಮಾಡದಿರುವುದು
- ಶಾಂತಿಯುತ ಸಹಬಾಳ್ವೆ
- ಸಮಾನತೆ ಮತ್ತು ಪರಸ್ಪರ ಲಾಭ
- ಮುಂಜಾಗರೂಕತೆಯ ಸ್ವರಕ್ಷಣೆ
ಉತ್ತರ: D
50). ಕ್ವಾಡ್ (Quad) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಕ್ವಾಡ್ ಎನ್ನುವುದು ಭಾರತ, ಅಮೆರಿಕಾ (USA), ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಅನೌಪಚಾರಿಕ ಕಾರ್ಯತಂತ್ರದ ಸಂವಾದವಾಗಿದೆ.
- ಇದು ನ್ಯಾಟೋ (NATO) ಮಾದರಿಯ ಸಾಮೂಹಿಕ ರಕ್ಷಣಾ ಷರತ್ತನ್ನು ಹೊಂದಿರುವ ಔಪಚಾರಿಕ ಮಿಲಿಟರಿ ಮೈತ್ರಿಯಾಗಿದೆ.
- ಒಂದು ಸ್ವತಂತ್ರ, ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
- ಇದು ಸದಸ್ಯ ರಾಷ್ಟ್ರಗಳ ನಡುವೆ ನಿಯಮಿತವಾಗಿ ಶೃಂಗಸಭೆ-ಮಟ್ಟದ ಸಭೆಗಳನ್ನು ನಡೆಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 3 ಮತ್ತು 4 ಮಾತ್ರ
- 1 ಮತ್ತು 2 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
51). ‘ಸೇವಾ ತೀರ್ಥ’ಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಪ್ರಧಾನ ಮಂತ್ರಿ ಕಾರ್ಯಾಲಯವನ್ನು (PMO) ಹೊಂದಿದೆ.
- ಇದು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ (NSCS) ಸ್ಥಳಾವಕಾಶ ಕಲ್ಪಿಸಿದೆ.
- ಇದು ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ.
- ನವದೆಹಲಿಯ ವಿವಿಧೆಡೆ ಚದುರಿಹೋಗಿದ್ದ ಪ್ರಮುಖ ಕಾರ್ಯಾಂಗ ಕಚೇರಿಗಳನ್ನು ಒಂದೇ ವ್ಯವಸ್ಥಿತ ಸಂಕೀರ್ಣದಲ್ಲಿ ಕ್ರೂಢೀಕರಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
52). ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (CPI) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಕಾಲಕ್ರಮೇಣ ಗ್ರಾಹಕರು ಸರಕು ಮತ್ತು ಸೇವೆಗಳ ಗುಚ್ಛಕ್ಕೆ (ಬುಟ್ಟಿಗೆ) ಪಾವತಿಸುವ ಬೆಲೆಗಳಲ್ಲಿನ ಸರಾಸರಿ ಬದಲಾವಣೆಯನ್ನು ಅಳೆಯುತ್ತದೆ.
- ಇದನ್ನು ಚಿಲ್ಲರೆ ಹಣದುಬ್ಬರದ ಸೂಚಕವಾಗಿ ಬಳಸಲಾಗುತ್ತದೆ.
- ಗೃಹಬಳಕೆ ಅನುಭೋಗ ವೆಚ್ಚ ಸಮೀಕ್ಷೆ 2023-24 ನ್ನು ಬಳಸಿಕೊಂಡು ಇದರ ಆಧಾರ ವರ್ಷವನ್ನು 2012 ರಿಂದ 2024 ಕ್ಕೆ ಪರಿಷ್ಕರಿಸಲಾಗಿದೆ.
- CPI ದತ್ತಾಂಶಗಳನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯು (NSO) ಸಿದ್ಧಪಡಿಸಿ ಬಿಡುಗಡೆ ಮಾಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?
- ಕೇವಲ ಎರಡು
- ಕೇವಲ ಮೂರು
- ಯಾವುದೂ ಸರಿಯಿಲ್ಲ
- ಎಲ್ಲವೂ ಸರಿಯಾಗಿವೆ
ಉತ್ತರ: A
53). ಲೀಡ್ ಬ್ಯಾಂಕ್ ಯೋಜನೆಗೆ (LBS) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಸೆಂಬರ್ 1969 ರಲ್ಲಿ ಪರಿಚಯಿಸಿತು.
- ಇದು ಜಿಲ್ಲಾ ಮಟ್ಟದಲ್ಲಿ ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.
- ಈ ಯೋಜನೆಯಡಿ, ಪ್ರತಿಯೊಂದು ಜಿಲ್ಲೆಯನ್ನು ಒಂದು ನಿರ್ದಿಷ್ಟ ‘ಲೀಡ್ ಬ್ಯಾಂಕ್’ಗೆ ವಹಿಸಲಾಗುತ್ತದೆ.
- ಇದು RBI ನ ಹಸ್ತಕ್ಷೇಪವಿಲ್ಲದೆ ನೇರವಾಗಿ ಹಣಕಾಸು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: C
54). ವೈಕೋಂ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ದೇವಸ್ಥಾನದ ಸಮೀಪವಿರುವ ಸಾರ್ವಜನಿಕ ರಸ್ತೆಗಳನ್ನು ಕೆಳಜಾತಿಯವರು ಬಳಸುವುದರ ಮೇಲಿನ ನಿರ್ಬಂಧಗಳನ್ನು ವಿರೋಧಿಸಿ ಇದನ್ನು ತಿರುವಾಂಕೂರು ಸಂಸ್ಥಾನದಲ್ಲಿ ಪ್ರಾರಂಭಿಸಲಾಯಿತು.
- ಎಲ್ಲಾ ಜಾತಿಯವರಿಗೂ ಸಂಪೂರ್ಣ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ತಕ್ಷಣದ ಬೇಡಿಕೆಯಾಗಿತ್ತು.
- ಮಹಾತ್ಮ ಗಾಂಧಿಯವರು ಪ್ರಾರಂಭದಿಂದಲೇ ಈ ಪ್ರತಿಭಟನೆಯ ನೇತೃತ್ವವನ್ನು ನೇರವಾಗಿ ವಹಿಸಿದ್ದರು.
- ಟಿ.ಕೆ. ಮಾಧವನ್ ಅವರು ಈ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.
ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿದೆ/ವೆ?
- ಕೇವಲ ಒಂದು
- ಕೇವಲ ಎರಡು
- ಕೇವಲ ಮೂರು
- ಮೇಲಿನ ಎಲ್ಲವೂ (ನಾಲ್ಕೂ)
ಉತ್ತರ: B
55). ಭೂಸ್ವಾಧೀನ, ಪುನರ್ವಸತಿ ಮತ್ತು ಮರುವಸತಿ ಕಾಯ್ದೆ, 2013 ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯು ಯಾವುದೇ ವಿನಾಯಿತಿಯಿಲ್ಲದೆ ಎಲ್ಲಾ ಸಂದರ್ಭಗಳಲ್ಲಿ ಸ್ವಾಧೀನಪಡಿಸಿಕೊಳ್ಳುವ ಮೊದಲು ಸಾಮಾಜಿಕ ಪರಿಣಾಮ ಮೌಲ್ಯಮಾಪನವನ್ನು (SIA) ಕಡ್ಡಾಯಗೊಳಿಸುತ್ತದೆ.
- ಇದು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ, ನೀರಾವರಿ ಒದಗಿಸಿದ ಬಹು-ಬೆಳೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿರ್ಬಂಧಿಸುತ್ತದೆ.
- ಇದು ಐದು ವರ್ಷಗಳ ನಂತರ ಬಳಕೆಯಾಗದ ಭೂಮಿಯನ್ನು ಹಿಂದಿರುಗಿಸಲು ಅವಕಾಶ ಒದಗಿಸುತ್ತದೆ.
- ಕುಂದುಕೊರತೆಗಳ ನಿವಾರಣೆಗಾಗಿ ಭೂಸ್ವಾಧೀನ, ಪುನರ್ವಸತಿ ಮತ್ತು ಮರುವಸತಿ ಪ್ರಾಧಿಕಾರವನ್ನು ಸ್ಥಾಪಿಸಲು ಇದು ಅವಕಾಶ ಕಲ್ಪಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 2, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2 ಮತ್ತು 4 ಮಾತ್ರ
ಉತ್ತರ: A
56). ಹಿರಾಕುಡ್ ಜೌಗು ಪ್ರದೇಶಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಮಹಾನದಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಿರಾಕುಡ್ ಜಲಾಶಯದ ಒಂದು ಭಾಗವಾಗಿದೆ.
- ಈ ಜಲಾಶಯವು ಭಾರತದ ಅತಿದೊಡ್ಡ ಮಾನವ ನಿರ್ಮಿತ ಜಲಾಶಯಗಳಲ್ಲಿ ಒಂದಾಗಿದೆ.
- ಇದನ್ನು 2021 ರಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್ಸರ್ ತಾಣವಾಗಿ ಅಧಿಸೂಚಿಸಲಾಗಿದೆ.
- ಇದು ಪೂರ್ವ ಏಷ್ಯನ್-ಆಸ್ಟ್ರೇಲಾಸಿಯನ್ ಪಕ್ಷಿಗಳ ವಲಸೆ ಪಥದ (ಫ್ಲೈವೇ) ವ್ಯಾಪ್ತಿಯುದ್ದಕ್ಕೂ ನೆಲೆಗೊಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
57). ಭಾರತದ ಯಾವ ರಾಜ್ಯವು ‘ಬ್ಯಾಸಿಲಸ್ ಸಬ್ಟಿಲಿಸ್’ ಅನ್ನು ತನ್ನ ಅಧಿಕೃತ ರಾಜ್ಯ ಸೂಕ್ಷ್ಮಾಣುಜೀವಿ ಎಂದು ಗೊತ್ತುಪಡಿಸಿದೆ?
- ತಮಿಳುನಾಡು
- ಕರ್ನಾಟಕ
- ಕೇರಳ
- ಮಹಾರಾಷ್ಟ್ರ
ಉತ್ತರ: C
58). ದೀರ್ಘ-ಶ್ರೇಣಿಯ ನೌಕಾ-ವಿರೋಧಿ ಹೈಪರ್‌ಸಾನಿಕ್ ಕ್ಷಿಪಣಿಗೆ (LR-AShM) ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತೀಯ ನೌಕಾಪಡೆಯ ಕರಾವಳಿ ರಕ್ಷಣೆ ಮತ್ತು ದಾಳಿಯ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಹೈಪರ್‌ಸಾನಿಕ್ ಗ್ಲೈಡ್ ಕ್ಷಿಪಣಿಯಾಗಿದೆ.
- ಇದು ಅರೆ-ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸುತ್ತದೆ ಮತ್ತು ಇದು ಎರಡು-ಹಂತದ ದ್ರವ-ನೋದಕ (ಪ್ರಚೋದನಾ) ರಾಕೆಟ್ ಮೋಟಾರ್ ಅನ್ನು ಬಳಸುತ್ತದೆ.
- ಇದು ಸ್ಥಿರ ಮತ್ತು ಚಲಿಸುವ ಕಡಲ ಗುರಿಗಳೆರಡನ್ನೂ ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
59). ಸೌಮ್ಯನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ದೇವಾಲಯವನ್ನು ಚೋಳ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ.
- ಇದು ಭಗವಾನ್ ವಿಷ್ಣುವಿನ ವಿಭಿನ್ನ ಭಂಗಿಗಳನ್ನು ಪ್ರತಿನಿಧಿಸುವ ಮೂರು-ಹಂತದ ಗರ್ಭಗುಡಿಯನ್ನು ಒಳಗೊಂಡಿದೆ.
- ನೆಲದ ಮಟ್ಟದಲ್ಲಿರುವ ಗರ್ಭಗುಡಿಯು ವಿಷ್ಣುವಿನ ಶಯನ ಭಂಗಿಯನ್ನು ಹೊಂದಿದೆ.
- ಈ ದೇವಾಲಯದ ಮೇಲ್ಭಾಗದಲ್ಲಿ ಅಷ್ಟಾಂಗ ವಿಮಾನ ಕಿರೀಟಪ್ರಾಯವಾಗಿ ನೆಲೆಸಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
60). ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಈ ಕೆಳಗಿನ ಘಟನೆಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ ಜೋಡಿಸಿ:
- ಫಾರ್ವರ್ಡ್ ಬ್ಲಾಕ್ ಸ್ಥಾಪನೆ
- ಹರಿಪುರ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ
- ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರದ (ಆಜಾದ್ ಹಿಂದ್ ಸರ್ಕಾರ) ರಚನೆ
- ಭಾರತೀಯ ನಾಗರಿಕ ಸೇವೆಗೆ (ICS) ರಾಜೀನಾಮೆ
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 4 – 1 – 2 – 3
- 2 – 4 – 1 – 3
- 4 – 2 – 1 – 3
- 2 – 1 – 4 – 3
ಉತ್ತರ: C
61). “ಪ್ರಕಾಶ್ ಗಂಗಾ” ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದರ ಪ್ರಧಾನ ವಿಷಯವು (ಥೀಮ್) ಅಂತರ್-ಸಂಪರ್ಕಿತ ರಾಷ್ಟ್ರೀಯ ಜಾಲದಾದ್ಯಂತ ವಿದ್ಯುಚ್ಛಕ್ತಿಯ ತಡೆರಹಿತ ಮತ್ತು ನಿರಂತರ ಹರಿವನ್ನು ಸಂಕೇತಿಸುತ್ತದೆ.
- ಸಾರ್ವತ್ರಿಕ ವಿದ್ಯುತ್ ಲಭ್ಯತೆಯಿಂದ ಜಾಗತಿಕ ಶುದ್ಧ ಇಂಧನ ಕ್ಷೇತ್ರದ ಪ್ರಮುಖ ಪಾತ್ರಧಾರಿಯಾಗಿ ಭಾರತದ ಪರಿವರ್ತನೆಯನ್ನು ಇದು ಎತ್ತಿ ತೋರಿಸುತ್ತದೆ.
- ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಸ್ತಬ್ಧಚಿತ್ರವು ಕೇವಲ ಉಷ್ಣ ವಿದ್ಯುತ್ ವಿಸ್ತರಣೆಯ ಮೇಲೆ ಮಾತ್ರ ಪ್ರತ್ಯೇಕವಾಗಿ ಗಮನಹರಿಸುತ್ತದೆ.
- ವಿದ್ಯುತ್ ನಿರ್ವಹಣೆಯಲ್ಲಿನ ಡಿಜಿಟಲ್ ಮತ್ತು ಸ್ಮಾರ್ಟ್ ತಂತ್ರಜ್ಞಾನಗಳನ್ನು ಇದು ಪ್ರದರ್ಶಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: A
62). ‘ಎಎಸ್‌ಸಿ ಅರ್ಜುನ್’ (ASC ARJUN) ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ನಿಯೋಜಿಸಲಾದ ಮಾನವರೂಪಿ (ಹ್ಯೂಮನಾಯ್ಡ್) ರೋಬೋಟ್ ಆಗಿದೆ.
- ಇದು ರೈಲ್ವೆ ರಕ್ಷಣಾ ಪಡೆಯ (RPF) ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತದೆ.
- ಇದನ್ನು ವಿದೇಶಿ ಸಹಯೋಗದೊಂದಿಗೆ ಆಮದು ಮಾಡಿಕೊಂಡ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ.
- ಇದು ಭದ್ರತೆ, ಕಣ್ಗಾವಲು ಮತ್ತು ಪ್ರಯಾಣಿಕರ ನೆರವಿಗೆ ಸಹಾಯ ಮಾಡುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2, 3 ಮತ್ತು 4
- 1 ಮತ್ತು 3 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 4 ಮಾತ್ರ
ಉತ್ತರ: D
63). ‘ವ್ಯೂಹಾತ್ಮಕ ಆಸ್ತಿ ಹಂಚಿಕೆ ಮತ್ತು ಅಪಾಯ ನಿರ್ವಹಣಾ ಆಡಳಿತ’ (SAARG) ಸಮಿತಿಯ ನೇತೃತ್ವವನ್ನು ಯಾರು ವಹಿಸುತ್ತಾರೆ?
- ಉರ್ಜಿತ್ ಪಟೇಲ್
- ನಾರಾಯಣ್ ರಾಮಚಂದ್ರನ್
- ಶಕ್ತಿಕಾಂತ ದಾಸ್
- ಎನ್. ಚಂದ್ರಶೇಖರನ್
ಉತ್ತರ: B
64). ಅಮೋನಿಯಂ ನೈಟ್ರೇಟ್ ಅನ್ನು “ಉಭಯ-ಬಳಕೆಯ” ವಸ್ತು ಎಂದು ಏಕೆ ಪರಿಗಣಿಸಲಾಗಿದೆ?
- ಇದನ್ನು ಕೃಷಿ ಮತ್ತು ವೈದ್ಯಕೀಯ ಕ್ಷೇತ್ರಗಳೆರಡರಲ್ಲೂ ಬಳಸಲಾಗುತ್ತದೆ
- ಇದನ್ನು ರಸಗೊಬ್ಬರಗಳು ಮತ್ತು ಸ್ಫೋಟಕಗಳೆರಡರಲ್ಲೂ ಬಳಸಲಾಗುತ್ತದೆ
- ಇದನ್ನು ಆಹಾರ ಸಂಸ್ಕರಣೆ ಮತ್ತು ಗಣಿಗಾರಿಕೆಯಲ್ಲಿ ಬಳಸಲಾಗುತ್ತದೆ
- ಇದನ್ನು ಜವಳಿ ಮತ್ತು ಔಷಧೀಯ ವಸ್ತುಗಳಲ್ಲಿ ಬಳಸಲಾಗುತ್ತದೆ
ಉತ್ತರ: B
65). ಕೆಳಗಿನವುಗಳಲ್ಲಿ ಯಾವುದು ‘ಜೀವನ್ ರಕ್ಷಾ ಪದಕ’ದ ವರ್ಗವನ್ನು ಅದರ ವಿವರಣೆಯೊಂದಿಗೆ ಸರಿಯಾಗಿ ಹೊಂದಿಸುತ್ತದೆ?
- ಸರ್ವೋತ್ತಮ ಜೀವ ರಕ್ಷಾ ಪದಕ – ರಕ್ಷಕನಿಗೆ ಅತ್ಯಂತ ದೊಡ್ಡ ಅಪಾಯವಿರುವ ಸಂದರ್ಭಗಳಲ್ಲಿ ಜೀವ ಉಳಿಸುವುದು.
- ಉತ್ತಮ ಜೀವ ರಕ್ಷಾ ಪದಕ – ದೊಡ್ಡ ಅಪಾಯದ ಸಂದರ್ಭಗಳಲ್ಲಿ ತೋರುವ ಧೈರ್ಯ ಮತ್ತು ತ್ವರಿತ ಕ್ರಮ.
- ಜೀವ ರಕ್ಷಾ ಪದಕ – ರಕ್ಷಕನಿಗೆ ಸಣ್ಣಪುಟ್ಟ ಅಪಾಯವನ್ನು ಒಳಗೊಂಡಿರುವ ಕಾರ್ಯಗಳು.
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
66). ಟಾಮ್‌ಟಾಮ್ ಸಂಚಾರ ಸೂಚ್ಯಂಕ, 2025 ರ ಪ್ರಕಾರ, ಏಷ್ಯಾದ ಅತಿ ಹೆಚ್ಚು ದಟ್ಟಣೆಯ ಅಗ್ರ 10 ನಗರಗಳಲ್ಲಿ ಕೆಳಗಿನ ಯಾವ ಭಾರತೀಯ ನಗರಗಳು ಸ್ಥಾನ ಪಡೆದಿವೆ?
- ಬೆಂಗಳೂರು
- ಪುಣೆ
- ಚೆನ್ನೈ
- ಜೈಪುರ
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: B
67). ‘ಜಪಾನ್ ಸಮುದ್ರ’ವು ಪೆಸಿಫಿಕ್ ಮಹಾಸಾಗರದೊಂದಿಗೆ ಈ ಕೆಳಗಿನ ಯಾವುದರ ಮೂಲಕ ಸಂಪರ್ಕ ಕಲ್ಪಿಸುತ್ತದೆ?
- ಸೂಯೆಜ್ ಕಾಲುವೆ
- ತ್ಸುಗಾರು ಜಲಸಂಧಿ
- ಬಾಸ್ಪರಸ್ ಜಲಸಂಧಿ
- ಜಿಬ್ರಾಲ್ಟರ್ ಜಲಸಂಧಿ
ಉತ್ತರ: B
68). ಕುರ್ಡಿಶ್ ಜನರು (Kurds) ಮುಖ್ಯವಾಗಿ ಕೆಳಗಿನ ಯಾವ ದೇಶಗಳಾದ್ಯಂತ ಹರಡಿದ್ದಾರೆ?
- ಟರ್ಕಿ
- ಇರಾಕ್
- ಇರಾನ್
- ಸಿರಿಯಾ
ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮತ್ತು 2 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
- 2 ಮತ್ತು 4 ಮಾತ್ರ
ಉತ್ತರ: C
69). ಯುರೋಪಿಯನ್ ಪರಮಾಣು ಶಕ್ತಿ ಸಮುದಾಯ (EURATOM)ವನ್ನು ಯಾವ ಪ್ರಮುಖ ಯುರೋಪಿಯನ್ ಒಪ್ಪಂದದೊಂದಿಗೆ ಸ್ಥಾಪಿಸಲಾಯಿತು?
- ವರ್ಸೈಲ್ಸ್ ಒಪ್ಪಂದ
- ರೋಮ್ ಒಪ್ಪಂದ
- ಲಿಸ್ಬನ್ ಒಪ್ಪಂದ
- ಷೆಂಗೆನ್ ಒಪ್ಪಂದ
ಉತ್ತರ: B
70). ಕೆಳಗಿನ ವಿವರಣೆಯನ್ನು ಪರಿಗಣಿಸಿ:
ಇದು ಇಂಡೋ-ಪಶ್ಚಿಮ ಪೆಸಿಫಿಕ್ ಪ್ರದೇಶದಾದ್ಯಂತ ಕಂಡುಬರುವ ಮಧ್ಯಮ ಗಾತ್ರದ ಶಾರ್ಕ್ ಪ್ರಭೇದವಾಗಿದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಜಲರಾಶಿಗಳಲ್ಲಿ ವಾಸಿಸುತ್ತದೆ, ಮತ್ತು ಸಾಮಾನ್ಯವಾಗಿ ಹವಳದ ದಿಬ್ಬಗಳು, ಕಲ್ಲಿನ ಶಿಲಾತಳಗಳು, ಮರಳಿನ ಪ್ರಸ್ಥಭೂಮಿಗಳು, ಅಳಿವೆಗಳು (ಮ್ಯಾಂಗ್ರೋವ್‌ಗಳು) ಮತ್ತು ಕಡಲಹುಲ್ಲು ಹಾಸುಗಳೊಂದಿಗೆ ಸಂಬಂಧ ಹೊಂದಿದೆ. ಇದರ ವ್ಯಾಪ್ತಿಯು ದಕ್ಷಿಣ ಆಫ್ರಿಕಾದಿಂದ ಸಮೋವಾವರೆಗೆ ಮತ್ತು ಉತ್ತರದ ಕಡೆಗೆ ಜಪಾನ್‌ವರೆಗೂ ವಿಸ್ತರಿಸಿದೆ. ಈ ಪ್ರಭೇದವನ್ನು ಪ್ರಸ್ತುತ ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ “ಅಳಿವಿನಂಚಿನಲ್ಲಿರುವ” (EN) ಪ್ರಭೇದವೆಂದು ಪಟ್ಟಿ ಮಾಡಲಾಗಿದೆ.
ಈ ಮೇಲಿನ ವಿವರಣೆಯಲ್ಲಿ ಉಲ್ಲೇಖಿಸಲಾದ ಪ್ರಭೇದವನ್ನು ಗುರುತಿಸಿ:
- ಬೃಹತ್ ಬಿಳಿ ಶಾರ್ಕ್ (Great White Shark)
- ತಿಮಿಂಗಿಲ ಶಾರ್ಕ್ (Whale Shark)
- ಇಂಡೋ-ಪೆಸಿಫಿಕ್ ಚಿರತೆ ಶಾರ್ಕ್ (Indo-Pacific Leopard Shark)
- ಸಾಗರ ವಲಯದ ಬಿಳಿತುದಿಯ ಶಾರ್ಕ್ (Oceanic Whitetip Shark)
ಉತ್ತರ: C
71). ಶ್ವಾಸದ ಮೂಲಕ ಒಳತೆಗೆದುಕೊಂಡ ನೈಟ್ರಿಕ್ ಆಕ್ಸೈಡ್‌ನ ಹೆಚ್ಚಿನ ಸಾಂದ್ರತೆಯು ಕೆಳಗಿನ ಯಾವ ಪರಿಣಾಮಗಳಿಗೆ ಕಾರಣವಾಗಬಹುದು?
- ಮೆಥೆಮೊಗ್ಲೋಬಿನೆಮಿಯಾ
- ಶ್ವಾಸಕೋಶದ ಅಂಗಾಂಶದ ಹಾನಿ
- ರಕ್ತದ ಆಮ್ಲಜನಕ-ಸಾಗಿಸುವ ಸಾಮರ್ಥ್ಯದ ಹೆಚ್ಚಳ
ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ:
- 1 ಮಾತ್ರ
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
72). ದೇಶದ ಮೊದಲ ಜಲಾಂತರ್ಗತ, ದ್ವಿ-ನಾಳೀಯ ರಸ್ತೆ ಹಾಗೂ ರೈಲು ಸಂಯೋಜಿತ ಸುರಂಗವನ್ನು ಯಾವ ನದಿಗೆ ಅಡ್ಡಲಾಗಿ ಮತ್ತು ಯಾವ ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ?
- ಗಂಗಾ, ಪಶ್ಚಿಮ ಬಂಗಾಳ
- ಯಮುನಾ, ಉತ್ತರ ಪ್ರದೇಶ
- ಬ್ರಹ್ಮಪುತ್ರ, ಅಸ್ಸಾಂ
- ಗೋದಾವರಿ, ಆಂಧ್ರ ಪ್ರದೇಶ
ಉತ್ತರ: C
73). ಪ್ರತಿಪಾದನೆ (A): ನವೋದ್ಯಮಗಳಿಗಾಗಿನ ‘ನಿಧಿಗಳ ನಿಧಿ’ಯನ್ನು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (SIDBI) ನಿರ್ವಹಿಸುತ್ತದೆ.
ಕಾರಣ (R): SIDBI ಯು ಭಾರತದಲ್ಲಿ ಬಂಡವಾಳ ಮಾರುಕಟ್ಟೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯಾಗಿದೆ.
ಸಂಕೇತಗಳು:
- A ಮತ್ತು R ಎರಡೂ ಸರಿ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ.
- A ಮತ್ತು R ಎರಡೂ ಸರಿ ಆದರೆ R ಎಂಬುದು A ಯ ಸರಿಯಾದ ವಿವರಣೆಯಲ್ಲ
- A ಸರಿ ಆದರೆ R ತಪ್ಪು
- A ತಪ್ಪು ಆದರೆ R ಸರಿ
ಉತ್ತರ: C
74). ಓಲ್ ಚಿಕಿ (Ol Chiki) ಲಿಪಿಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು 20ನೇ ಶತಮಾನದ ಆರಂಭದಲ್ಲಿ ಪಂಡಿತ್ ರಘುನಾಥ್ ಮುರ್ಮು ಅವರು ನಿರ್ದಿಷ್ಟವಾಗಿ ಸಂತಾಲಿ ಭಾಷೆಗಾಗಿ ಅಭಿವೃದ್ಧಿಪಡಿಸಿದರು.
- ಇದು ಸಂತಾಲಿ ಧ್ವನಿಶಾಸ್ತ್ರವನ್ನು ನಿಖರವಾಗಿ ಪ್ರತಿನಿಧಿಸಲು ವಿನ್ಯಾಸಗೊಳಿಸಲಾದ 30 ಅಕ್ಷರಗಳನ್ನು ಒಳಗೊಂಡಿದೆ.
- ಬುಡಕಟ್ಟು ಭಾಷೆಗಳಿಗೆ ಸರಿಹೊಂದುವಂತೆ ಇದನ್ನು ದೇವನಾಗರಿ ಲಿಪಿಯಿಂದ ಅಳವಡಿಸಿಕೊಳ್ಳಲಾಗಿದೆ ಮತ್ತು ಇದರ ಸೃಷ್ಟಿಯು ಸಂತಾಲಿ ಶಬ್ದಕೋಶ ಹಾಗೂ ವ್ಯಾಕರಣದ ವ್ಯವಸ್ಥಿತ ದಾಖಲೀಕರಣವನ್ನು ಸಾಧ್ಯವಾಗಿಸಿತು.
- 92ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 2003 ರ ಮೂಲಕ ಸಂತಾಲಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲಾಯಿತು.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 1 ಮತ್ತು 3 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
75). ಭೂ-ಆಧಾರ್ (ULPIN) ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- ಇದು ಪ್ರತಿಯೊಂದು ಭೂಮಿಯ ತುಕಡಿಗೂ ನಿಯೋಜಿಸಲಾದ 14-ಅಂಕಿಯ ಗುರುತಿನ ಸಂಖ್ಯೆಯಾಗಿದೆ.
- ಇದು ಭೂಮಿಯ ತುಕಡಿಯ ರೇಖಾಂಶ ಮತ್ತು ಅಕ್ಷಾಂಶದ ನಿರ್ದೇಶಾಂಕಗಳ ಮೇಲೆ ಆಧಾರಿತವಾಗಿದೆ.
- ಇದು ವ್ಯಕ್ತಿಗಳಿಗಿರುವ ಆಧಾರ್‌ನಂತೆಯೇ ‘ಡಿಜಿಟಲ್ ಭೂಮಿ ಗುರುತಿನ’ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
- ಇದು ಸ್ಮಾರ್ಟ್ ಸಿಟಿ ಮಿಷನ್ ವ್ಯಾಪ್ತಿಗೆ ಒಳಪಡುವ ನಗರ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ.
ಆಯ್ಕೆಗಳು:
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- ಮೇಲಿನ ಎಲ್ಲವೂ
ಉತ್ತರ: B
76). ಪಿಎಂ ರಾಹತ್ (PM RAHAT) ಯೋಜನೆಯ ಕುರಿತಾದ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- ಇದು ರಸ್ತೆ ಅಪಘಾತದ ಸಂತ್ರಸ್ತರಿಗೆ ತಕ್ಷಣದ, ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ.
- ಈ ಯೋಜನೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ಮಾತ್ರ ಒಳಗೊಳ್ಳುತ್ತದೆ.
- ತುರ್ತು ಪರಿಸ್ಥಿತಿಯನ್ನು ಸುಸ್ಥಿರಗೊಳಿಸಲು ಆಸ್ಪತ್ರೆಗಳು ಮುಂಗಡ ಪಾವತಿಯನ್ನು ಕೋರುವಂತಿಲ್ಲ.
- ಈ ಯೋಜನೆಗೆ ಮೋಟಾರು ವಾಹನ ಅಪಘಾತ ನಿಧಿಯಿಂದ (MVAF) ಧನಸಹಾಯವನ್ನು ಭರಿಸಲಾಗುತ್ತದೆ.
ಆಯ್ಕೆಗಳು:
- 1, 3, ಮತ್ತು 4 ಮಾತ್ರ
- 1 ಮತ್ತು 2 ಮಾತ್ರ C.
2 ಮತ್ತು 3 ಮಾತ್ರ
- ಮೇಲಿನ ಎಲ್ಲವೂ
ಉತ್ತರ: A
77). ಕೆಳಗಿನ ವಿವರಣೆಯನ್ನು ಪರಿಗಣಿಸಿ:
ಇದು ಪಶ್ಚಿಮ ಹಿಮಾಲಯಕ್ಕೆ ಮಾತ್ರ ಸೀಮಿತವಾದ (ಸ್ಥಳೀಯ) ನೆಲದ-ಮೇಲೆ ವಾಸಿಸುವ ಪಕ್ಷಿಯಾಗಿದ್ದು, ಪಾಕಿಸ್ತಾನ, ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯ ನೇಪಾಳದಾದ್ಯಂತ ಕಂಡುಬರುತ್ತದೆ. ಇದು ಮುಖ್ಯವಾಗಿ ಬೇರುಗಳು, ಗೆಡ್ಡೆಗಳು, ಬಲ್ಬ್‌ಗಳು, ಬೀಜಗಳು, ವನ್ಯಫಲಗಳು ಮತ್ತು ಪ್ರಾಸಂಗಿಕವಾಗಿ ಕೀಟಗಳು ಅಥವಾ ಹುಳುಗಳನ್ನು ಭಕ್ಷಿಸುತ್ತದೆ. ಈ ಪ್ರಭೇದವು ಉನ್ನತ ಮಟ್ಟದ ಜನ್ಮಸ್ಥಳ ನಿಷ್ಠೆಯನ್ನು ಪ್ರದರ್ಶಿಸುತ್ತದೆ; ಅಂದರೆ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಪುನಃ ತಮ್ಮ ಜನ್ಮಸ್ಥಳಕ್ಕೇ ಹಿಂದಿರುಗುತ್ತವೆ. ಇವು ಪ್ರಧಾನವಾಗಿ ಏಕಸಂಗಾತಿತ್ವದ ಪ್ರವೃತ್ತಿಯನ್ನು ಹೊಂದಿವೆ.
ಬೇಟೆ, ಹುಲ್ಲುಗಾವಲುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವುದರಿಂದ ಉಂಟಾಗುವ ಆವಾಸಸ್ಥಾನದ ಕ್ಷೀಣತೆ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ (ಏಪ್ರಿಲ್-ಜೂನ್) ಗೂಡುಗಳನ್ನು ನಾಶಪಡಿಸುವ ಕಾಡ್ಗಿಚ್ಚಿನಿಂದಾಗಿ ಇದರ ಸಂಖ್ಯೆಯು ಕ್ಷೀಣಿಸುತ್ತಿದೆ. ಇದನ್ನು ಅಂತರರಾಷ್ಟ್ರೀಯ ಸಂರಕ್ಷಣಾ ಸಂಸ್ಥೆಗಳು ‘ದುರ್ಬಲ’ (VU) ಎಂದು ವರ್ಗೀಕರಿಸಿವೆ. ಇದು ಭಾರತದ ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಅನುಸೂಚಿ-I ರಲ್ಲಿ ಸ್ಥಾನ ಪಡೆದಿದೆ.
ಈ ಮೇಲಿನ ಪಠ್ಯದಲ್ಲಿ ಯಾವ ಪ್ರಭೇದವನ್ನು ವಿವರಿಸಲಾಗಿದೆ?
- ಹಿಮಾಲಯದ ಮೋನಲ್
- ಚೀರ್ ಫೆಸೆಂಟ್
- ಪಶ್ಚಿಮ ಟ್ರಾಗೋಪಾನ್
- ಸ್ಯಾಟಿರ್ ಟ್ರಾಗೋಪಾನ್
ಉತ್ತರ: B
78). ಇತ್ತೀಚಿಗೆ, ಭಾರತವು ಯಾವ ದೇಶದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನು “ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಉನ್ನತೀಕರಿಸಿದೆ?
- ಜರ್ಮನಿ
- ಯುನೈಟೆಡ್ ಕಿಂಗ್‌ಡಮ್
- ಫ್ರಾನ್ಸ್
- ಜಪಾನ್
ಉತ್ತರ: C
79). “ಭಾರತದ ಎಐ-ಪ್ರೆನ್ಯೂರ್ಸ್” (ಭಾರತದ ಕೃತಕ ಬುದ್ದಿಮತ್ತೆ ಉದ್ಯಮಿಗಳು) ಉಪಕ್ರಮದ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದಲ್ಲಿನ ಕೃತಕ ಬುದ್ಧಿಮತ್ತೆ (AI) ನವೋದ್ಯಮಗಳಿಗಾಗಿ ರೂಪಿಸಲಾದ ನಿಯಂತ್ರಣ ಚೌಕಟ್ಟಾಗಿದೆ.
- ಇದನ್ನು ನೀತಿ ಆಯೋಗದ ಅಟಲ್ ನಾವಿನ್ಯತಾ ಮಿಷನ್ (AIM) ಅಡಿಯಲ್ಲಿ ಪ್ರಾರಂಭಿಸಲಾಗಿದೆ.
- ಇದು ತನ್ನ ಪ್ರಮುಖ ಪ್ರಕಟಣೆಯ ಮೂಲಕ ಆಯ್ದ ಎಐ (AI) ನವೋದ್ಯಮಗಳ ಯಶೋಗಾಥೆಗಳನ್ನು ದಾಖಲಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 2 ಮಾತ್ರ
- 2 ಮತ್ತು 3 ಮಾತ್ರ
- 1 ಮತ್ತು 3 ಮಾತ್ರ
- 1, 2 ಮತ್ತು 3
ಉತ್ತರ: B
80). ಕೆಳಗಿನ ವಿವರಣೆಯನ್ನು ಪರಿಗಣಿಸಿ:
ಇದು ಸುಮಾರು 2 ರಿಂದ 2.5 ಅಡಿ ಎತ್ತರವಿರುವ, ಬೃಹತ್ ಬಾಗಿದ ಕೊಕ್ಕು ಮತ್ತು ಆಕರ್ಷಕ ಪುಕ್ಕಗಳನ್ನು ಹೊಂದಿರುವ ಈ ದೊಡ್ಡ ಅರಣ್ಯವಾಸಿ ಪಕ್ಷಿಯು ತೇವಭರಿತ ನಿತ್ಯಹರಿದ್ವರ್ಣ ಮತ್ತು ಎತ್ತರದ ಎಲೆ ಉದುರುವ ಕಾಡುಗಳು, ತೋಟಗಳು ಹಾಗೂ ಕಡಿಮೆ ಎತ್ತರದ ನದಿತೀರದ ಪರಿಸರ ವ್ಯವಸ್ಥೆಗಳಲ್ಲಿ ವಾಸಿಸುತ್ತದೆ. ಭಾರತದಲ್ಲಿ, ಇದರ ವ್ಯಾಪ್ತಿಯು ಪಶ್ಚಿಮ ಘಟ್ಟಗಳು ಮತ್ತು ನೈಋತ್ಯ ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಪೂರ್ವ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಹರಡಿದೆ, ಜೊತೆಗೆ ಆಂಧ್ರಪ್ರದೇಶ ಮತ್ತು ಶ್ರೀಲಂಕಾಕ್ಕೂ ವಿಸ್ತರಿಸಿದೆ. ಪರಿಸರ ವಿಜ್ಞಾನದ ದೃಷ್ಟಿಯಿಂದ, ಇದು ಬೀಜಗಳನ್ನು ಪ್ರಸಾರ ಮಾಡುವ ಪ್ರಮುಖ ಜೀವರಾಶಿಯಾಗಿ ಉಷ್ಣವಲಯದ ಕಾಡುಗಳ ಪುನರುತ್ಪಾದನೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಪ್ರಸ್ತುತ ಇದನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಯದ ಅಂಚಿನಲ್ಲಿರುವ (NT) ಪ್ರಭೇದ ಎಂದು ಪಟ್ಟಿ ಮಾಡಲಾಗಿದೆ.
ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?
- ಗ್ರೇಟ್ ಇಂಡಿಯನ್ ಬಸ್ಟರ್ಡ್ (Great Indian Bustard)
- ಮಲಬಾರ್ ಬಣ್ಣದ ಮಂಗಟ್ಟೆ ಪಕ್ಷಿ (Malabar Pied Hornbill)
- ಭಾರತೀಯ ಬೂದು ಮಂಗಟ್ಟೆ ಪಕ್ಷಿ (Indian Grey Hornbill)
- ಓರಿಯಂಟಲ್ ಡಾರ್ಟರ್ (Oriental Darter)
ಉತ್ತರ: B
81). 2006 ರ ಅರಣ್ಯ ಹಕ್ಕು ಕಾಯ್ದೆಯ (FRA) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಮೇಲಿನ ವೈಯಕ್ತಿಕ ಹಾಗೂ ಸಮುದಾಯದ ಹಕ್ಕುಗಳನ್ನು ಗುರುತಿಸುತ್ತದೆ.
- ಇದು ಕೇವಲ ಪರಿಶಿಷ್ಟ ಪಂಗಡಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಹೊರಗಿಡುತ್ತದೆ.
- ಇದು ಅರಣ್ಯವಾಸಿ ಸಮುದಾಯಗಳಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಗುರಿಯನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 3 ಮಾತ್ರ
- 2 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
82). ಮುನ್ಸಿಪಲ್ ಬಾಂಡ್‌ಗಳನ್ನು ಪ್ರಾಥಮಿಕವಾಗಿ ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ?
- ಬಂಡವಾಳ-ತೀವ್ರತೆಯ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು.
- ಅಸ್ತಿತ್ವದಲ್ಲಿರುವ ಸಾಲಗಳಿಗೆ ಮರುಹಣಕಾಸು ಒದಗಿಸಲು.
- ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸಲು.
ಕೆಳಗೆ ನೀಡಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:
- 1 ಮಾತ್ರ
- 1 ಮತ್ತು 2 ಮಾತ್ರ
- 1, 2 ಮತ್ತು 3
- 2 ಮತ್ತು 3 ಮಾತ್ರ
ಉತ್ತರ: C
83). ‘ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ’ (VVP) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುತ್ತಿದೆ.
- ಇದು ಚೀನಾದೊಂದಿಗಿನ ಭಾರತದ ಗಡಿಯಲ್ಲಿರುವ ಹಳ್ಳಿಗಳ ಮೇಲೆ ಕೇಂದ್ರೀಕರಿಸುತ್ತದೆ.
- ಇದು ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯ ಮತ್ತು ಜೀವನೋಪಾಯದ ಅವಕಾಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 2 ಮತ್ತು 3 ಮಾತ್ರ
- 1 ಮತ್ತು 2 ಮಾತ್ರ
- 3 ಮಾತ್ರ
- 1, 2 ಮತ್ತು 3
ಉತ್ತರ: A
84). “ಗಾಜಾ ಶಾಂತಿ ಮಂಡಳಿ”ಯನ್ನು ಈ ಕೆಳಗಿನ ಯಾವುದರ ಮೇಲ್ವಿಚಾರಣೆಗಾಗಿ ರಚಿಸಲಾಗಿದೆ?
- ರಷ್ಯಾ-ಉಕ್ರೇನ್ ಯುದ್ಧದ ಕದನ ವಿರಾಮ.
- ಇಸ್ರೇಲ್-ಲೆಬನಾನ್ ಸಂಘರ್ಷದ ಕದನ ವಿರಾಮ.
- ಇಸ್ರೇಲ್-ಹಮಾಸ್ ಯುದ್ಧದ ಕದನ ವಿರಾಮ.
- ಸಿರಿಯನ್ ಅಂತರ್ಯುದ್ಧದ ಕದನ ವಿರಾಮ.
ಉತ್ತರ: C
85). ದೊಡ್ಡ ತಲೆಯ (ಲಾಗರ್‌ಹೆಡ್) ಕಡಲಾಮೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ದೇಹದ ಗಾತ್ರಕ್ಕೆ ಮೀರಿದ ಅಸಾಧಾರಣ ದೊಡ್ಡ ತಲೆಯನ್ನು ಹೊಂದಿರುವುದರಿಂದ ಇದು ಈ ಹೆಸರನ್ನು ಪಡೆದುಕೊಂಡಿದೆ.
- ಇದು ಪ್ರಾಥಮಿಕವಾಗಿ ಗಟ್ಟಿ ಚಿಪ್ಪಿನ ಸಮುದ್ರ ಜೀವಿಗಳನ್ನು ಭಕ್ಷಿಸುತ್ತದೆ.
- ಇದನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವ’ (EN) ಪ್ರಭೇದ ಎಂದು ವರ್ಗೀಕರಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
86). ಇಂಧನಕ್ಕಾಗಿ ಕೃತಕ ಬುದ್ಧಿಮತ್ತೆಯ (AI) ಜಾಗತಿಕ ಅಭಿಯಾನವನ್ನು ಈ ಕೆಳಗಿನ ಯಾವ ಸಂಸ್ಥೆ ಪ್ರಾರಂಭಿಸಿದೆ?
- ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)
- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
- ವಿಶ್ವಬ್ಯಾಂಕ್ (WB)
- ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)
ಉತ್ತರ: D
87). ‘ಪ್ಯಾಕ್ಸ್ ಸಿಲಿಕಾ’ ಎಂಬ ಪದವು ಯಾವುದನ್ನು ಉಲ್ಲೇಖಿಸುತ್ತದೆ?
- ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ.
- ಸುರಕ್ಷಿತ ಸಿಲಿಕಾನ್ ಪೂರೈಕೆ ಸರಪಳಿಗಾಗಿ ಅಮೆರಿಕ ನೇತೃತ್ವದ ಕಾರ್ಯತಂತ್ರದ ಉಪಕ್ರಮ.
- ವಿರಳ ಭೂ-ಧಾತುಗಳ ಮೇಲಿನ ಜಾಗತಿಕ ಒಪ್ಪಂದ.
- ವ್ಯಾಪಾರ ಸೌಲಭ್ಯದ ಕುರಿತಾದ ವಿಶ್ವ ವ್ಯಾಪಾರ ಸಂಸ್ಥೆಯ (WTO) ಒಪ್ಪಂದ.
ಉತ್ತರ: B
88). ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ (IEEPA) ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಈ ಕಾಯ್ದೆಯನ್ನು 1977 ರಲ್ಲಿ ಜಾರಿಗೊಳಿಸಲಾಯಿತು.
- ಇದು ಅಸಾಮಾನ್ಯ ಮತ್ತು ಅಸಾಧಾರಣ ವಿದೇಶಿ ಬೆದರಿಕೆಗಳ ವಿರುದ್ಧ ಕ್ರಮಕೈಗೊಳ್ಳಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.
- ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸದೆಯೇ ಈ ಕಾಯ್ದೆಯನ್ನು ಜಾರಿಗೊಳಿಸಬಹುದಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 2 ಮಾತ್ರ
- 2 ಮತ್ತು 3 ಮಾತ್ರ
- 1 ಮಾತ್ರ
- 1, 2 ಮತ್ತು 3
ಉತ್ತರ: A
89). ನಿವ್ವಳ ಶೂನ್ಯ (ನೆಟ್ ಜೀರೋ) ಪರಿಕಲ್ಪನೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಎಲ್ಲಾ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದನ್ನು ಸೂಚಿಸುತ್ತದೆ.
- ಇದು ಹೊರಸೂಸಲ್ಪಟ್ಟ ಹಸಿರುಮನೆ ಅನಿಲಗಳು ಮತ್ತು ವಾತಾವರಣದಿಂದ ತೆಗೆದುಹಾಕಲ್ಪಟ್ಟ ಹಸಿರುಮನೆ ಅನಿಲಗಳ ನಡುವೆ ಸಮತೋಲನವನ್ನು ಸಾಧಿಸುವುದನ್ನು ಉಲ್ಲೇಖಿಸುತ್ತದೆ.
- ಇದು ಮಾನವ-ಪ್ರೇರಿತ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯ ಮೌಲ್ಯಕ್ಕೆ ತಗ್ಗಿಸುವ ಗುರಿ ಹೊಂದಿದೆ.
- ಬೇಲಾ ಗ್ರಾಮವನ್ನು ಅದರ ಸುಸ್ಥಿರ ಮತ್ತು ಇಂಗಾಲ-ತಟಸ್ಥ ಉಪಕ್ರಮಗಳಿಗಾಗಿ ಭಾರತದ ಮೊದಲ ನೆಟ್-ಜೀರೋ ಪಂಚಾಯತಿ ಎಂದು ಗುರುತಿಸಲಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
- 1, 2, 3 ಮತ್ತು 4
ಉತ್ತರ: B
90). ದಕ್ಷಿಣ ಆಂಧ್ರಪ್ರದೇಶದ ಮೂರು ಜಿಲ್ಲೆಗಳಾದ ಚಿತ್ತೂರು, ನೆಲ್ಲೂರು ಮತ್ತು ವೈಎಸ್ಆರ್ (YSR) ಕಡಪಗಳಿಗೆ ಮಾತ್ರ ಸೀಮಿತವಾದ (ಸ್ಥಳೀಯ) ಸ್ಥಳೀಯ ವೃಕ್ಷ ಪ್ರಭೇದವೊಂದು ಪ್ರಾಥಮಿಕವಾಗಿ ಪೂರ್ವ ಘಟ್ಟಗಳಲ್ಲಿ ಕಂಡುಬರುತ್ತದೆ. ಇದರ ಅತಿದೊಡ್ಡ ಮೀಸಲು ಪ್ರದೇಶವು ಸುಮಾರು 4,755 ಚದರ ಕಿ.ಮೀ ವ್ಯಾಪ್ತಿಯ ಜೀವಗೋಳ ಮೀಸಲು ಪ್ರದೇಶದಲ್ಲಿದೆ. ಇದು ನಿಧಾನವಾಗಿ ಬೆಳೆಯುವ ಪ್ರಭೇದವಾಗಿದ್ದು, ಪ್ರಬುದ್ಧಾವಸ್ಥೆ ತಲುಪಲು 25 ರಿಂದ 40 ವರ್ಷಗಳನ್ನು ತೆಗೆದುಕೊಳ್ಳುತ್ತದೆ; ಈ ಕಾರಣದಿಂದ ಇದು ಅತಿಯಾದ ಶೋಷಣೆಗೆ ಸುಲಭವಾಗಿ ತುತ್ತಾಗುತ್ತದೆ. ಈ ಪ್ರಭೇದವನ್ನು ಐಯುಸಿಎನ್ (IUCN) ಕೆಂಪು ಪಟ್ಟಿಯಲ್ಲಿ ‘ಅಳಿವಿನಂಚಿನಲ್ಲಿರುವ’ (EN) ಪ್ರಭೇದ ಎಂದು ಪಟ್ಟಿ ಮಾಡಲಾಗಿದೆ, CITES ಒಪ್ಪಂದದ ಅಡಿಯಲ್ಲಿ ಇದರ ಅಂತರರಾಷ್ಟ್ರೀಯ ವ್ಯಾಪಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ ಮತ್ತು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇದಕ್ಕೆ ರಕ್ಷಣೆ ಒದಗಿಸಲಾಗಿದೆ.
ಮೇಲಿನ ಪಠ್ಯದಲ್ಲಿ ವಿವರಿಸಲಾದ ಪ್ರಭೇದ ಯಾವುದು?
- ಶ್ರೀಗಂಧ (Sandalwood)
- ತೇಗ (Teak)
- ರಕ್ತ ಚಂದನ (Red Sanders)
- ಬೀಟೆ ಮರ (Rosewood)
ಉತ್ತರ: C
91). ಸ್ವದೇಶಿ ನಿರ್ಮಿತ ಟಿಡಿ (Td) ಲಸಿಕೆಯ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದನ್ನು ಕೇಂದ್ರೀಯ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತದೆ.
- ಇದು ಧನುರ್ವಾಯು (ಟೆಟನಸ್) ಮತ್ತು ಗಂಟಲುಮಾರಿ (ಡಿಫ್ತೀರಿಯಾ) ರೋಗಗಳೆರಡರ ವಿರುದ್ಧವೂ ರಕ್ಷಣೆ ನೀಡುತ್ತದೆ.
- ಇದು ಕೇವಲ ಧನುರ್ವಾಯುವಿನ ವಿರುದ್ಧ ಮಾತ್ರ ರಕ್ಷಣೆ ನೀಡುತ್ತಿದ್ದ ಹಿಂದಿನ ಟೆಟನಸ್ ಟಾಕ್ಸಾಯ್ಡ್ (TT) ಲಸಿಕೆಯನ್ನು ಬದಲಾಯಿಸಿದೆ.
- 2006 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO), ದೇಶಗಳು ಟಿಡಿ (Td) ಲಸಿಕೆಯಿಂದ ಟಿಟಿ (TT) ಲಸಿಕೆಗೆ ಬದಲಾಗಬೇಕೆಂದು ಶಿಫಾರಸು ಮಾಡಿತ್ತು.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1, 2 ಮತ್ತು 3 ಮಾತ್ರ
- 1 ಮತ್ತು 4 ಮಾತ್ರ
- 2, 3 ಮತ್ತು 4 ಮಾತ್ರ
- 1, 2, 3 ಮತ್ತು 4
ಉತ್ತರ: A
92). ಬಯೋಫಾರ್ಮಾ ಶಕ್ತಿ ಉಪಕ್ರಮದ ಕುರಿತಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
- ಇದು ಭಾರತದಲ್ಲಿ (ಜೈವಿಕ ಮೂಲದ ಔಷಧಗಳು) ಮತ್ತು ‘ಬಯೋಸಿಮಿಲರ್ಸ್’ (ಜೈವಿಕ-ಸಮಾನ ಔಷಧಗಳು) ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
- ಇದು ಭಾರತವನ್ನು ಪ್ರಮುಖ ಜಾಗತಿಕ ಬಯೋಫಾರ್ಮಾ ಉದ್ಯಮದ ಮುಂಚೂಣಿ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ.
- ಇದು ಜಾಗತಿಕ ಜೈವಿಕ ಔಷಧಗಳ (ಬಯೋಫಾರ್ಮಾಸ್ಯುಟಿಕಲ್) ಮಾರುಕಟ್ಟೆಯ ಪಾಲಿನಲ್ಲಿ 5% ಅನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿದೆ.
- ಇದು ದೇಶೀಯ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಮೌಲ್ಯದ ಬಯೋಫಾರ್ಮಾಸ್ಯುಟಿಕಲ್ ಉತ್ಪನ್ನಗಳ ಆಮದುಗಳನ್ನು ಹೆಚ್ಚಿಸುವತ್ತ ಪ್ರಾಥಮಿಕವಾಗಿ ಗಮನಹರಿಸುತ್ತದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?
- 1 ಮತ್ತು 3 ಮಾತ್ರ
- 2 ಮತ್ತು 4 ಮಾತ್ರ
- 1 ಮತ್ತು 4 ಮಾತ್ರ
- 1, 2 ಮತ್ತು 3 ಮಾತ್ರ
ಉತ್ತರ: D



ನಿಮ್ಮದೊಂದು ಉತ್ತರ