ರಾಜ್ಯ ಸರ್ಕಾರವು ತಾವರೇಕೆರೆ ಪ್ರದೇಶದಲ್ಲಿ ದತ್ತಾoಶ ಕೇಂದ್ರ ಪಾರ್ಕ್ (ಡೇಟಾ ಸೆಂಟರ್ ಪಾರ್ಕ್) ನಿರ್ಮಾಣಕ್ಕೆ ಸಜ್ಜಾಗುತ್ತಿದೆ
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕ ಸರ್ಕಾರವು ಹೊಸಕೋಟೆ ಮತ್ತು ಕೋಲಾರದ ಗಡಿಯಲ್ಲಿರುವ ಕೈಗಾರಿಕಾ ಪ್ರದೇಶವಾದ ತಾವರೆಕೆರೆಯಲ್ಲಿ ಮೀಸಲಾದ ಡೇಟಾ ಸೆಂಟರ್ ಪಾರ್ಕ್ ನಿರ್ಮಾಣಕ್ಕೆ ಸಜ್ಜಾಗುತ್ತಿದೆ.
ತಾವರೆಕೆರೆಯಲ್ಲಿ ಮೀಸಲಾದ ದತ್ತಾoಶ ಕೇಂದ್ರ (ಡೇಟಾ ಸೆಂಟರ್) ಪಾರ್ಕ್ ನ ಬಗ್ಗೆ:
- ಗುರಿ – ರಾಜ್ಯದಲ್ಲಿ ಬೃಹತ್ ದತ್ತಾoಶ ಕೇಂದ್ರ ಮೂಲಸೌಕರ್ಯದ ಅಗತ್ಯವನ್ನು ಪೂರೈಸುವುದು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಶೀಘ್ರದಲ್ಲೇ ತಾವರೆಕೆರೆಯಲ್ಲಿ (ಬೆಂಗಳೂರಿನ ಕೇಂದ್ರ ವ್ಯಾಪಾರ ಪ್ರದೇಶದಿಂದ ಸುಮಾರು 46 ಕಿ.ಮೀ ದೂರದಲ್ಲಿರುವ) 1,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ.



ನಿಮ್ಮದೊಂದು ಉತ್ತರ