ರಷ್ಯಾದ S-500 ವಾಯು ರಕ್ಷಣಾ ವ್ಯವಸ್ಥೆ
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಭಾರತದ ಪ್ರಧಾನಮಂತ್ರಿಗಳು ಮತ್ತು ರಷ್ಯಾದ ಅಧ್ಯಕ್ಷರು, ರಷ್ಯಾದ ಮುಂದಿನ ಪೀಳಿಗೆಯ ಅತ್ಯಾಧುನಿಕ ‘S-500’ ವಾಯು ರಕ್ಷಣಾ ವ್ಯವಸ್ಥೆಯನ್ನು ಪಡೆಯುವ ಕುರಿತು ಭಾರತಕ್ಕಿರುವ ಆಸಕ್ತಿಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
S-500 ವಾಯು ರಕ್ಷಣಾ ವ್ಯವಸ್ಥೆಯ ಬಗ್ಗೆ:
- ಇದು ರಷ್ಯಾದ ಅತ್ಯಂತ ಸುಧಾರಿತ ದೀರ್ಘ-ವ್ಯಾಪ್ತಿಯ, ‘ಭೂಮಿಯಿಂದ ಗಗನಕ್ಕೆ ಚಿಮ್ಮುವ’ ಮತ್ತು ಬಾಹ್ಯಾಕಾಶ ನಿರೋಧಕ ರಕ್ಷಣಾ ವ್ಯವಸ್ಥೆಯಾಗಿದ್ದು, ಆಧುನಿಕ ಹಾಗೂ ಭವಿಷ್ಯದ ವಿವಿಧ ರೀತಿಯ ವೈಮಾನಿಕ ಬೆದರಿಕೆಗಳನ್ನು ಹತ್ತಿಕ್ಕಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಇದು 600 ಕಿ.ಮೀ ವರೆಗಿನ ದೂರದಲ್ಲಿರುವ ವಿಮಾನಗಳು, ಕ್ಷಿಪಣಿಗಳು ಮತ್ತು ಶಬ್ದಾತೀತ (ಹೈಪರ್ಸಾನಿಕ್) ಶಸ್ತ್ರಾಸ್ತ್ರಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ.
- ಇದು 200 ಕಿ.ಮೀ ವರೆಗಿನ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ಪ್ರತಿಕ್ರಿಯಾ ಸಮಯವು ಕೇವಲ 3–4 ಸೆಕೆಂಡುಗಳಾಗಿದ್ದು, ಇದು S-400 ವ್ಯವಸ್ಥೆಗಿಂತ ಸುಮಾರು ಎರಡು ಪಟ್ಟು ವೇಗವಾಗಿದೆ.
S-400 ಮತ್ತು S-500 ನಡುವಿನ ವ್ಯತ್ಯಾಸಗಳು
|
ವೈಶಿಷ್ಟ್ಯ |
S-400 |
S-500 |
|
ವ್ಯಾಪ್ತಿ |
380 ಕಿ.ಮೀ |
600 ಕಿ.ಮೀ |
|
ಗುರಿಯ ಎತ್ತರ |
30–40 ಕಿ.ಮೀ |
200 ಕಿ.ಮೀ ವರೆಗೆ (ಸಮೀಪ-ಬಾಹ್ಯಾಕಾಶ) |
|
ಪ್ರತಿಬಂಧಿಸುವ ಬೆದರಿಕೆಗಳು |
ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಸೀಮಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು |
ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳು, ಸ್ಟೆಲ್ತ್ (ರಹಸ್ಯ) ವಿಮಾನಗಳು, LEO ಉಪಗ್ರಹಗಳು |
|
ಪ್ರತಿಕ್ರಿಯೆಯ ಸಮಯ |
9–10 ಸೆಕೆಂಡುಗಳು |
3–4 ಸೆಕೆಂಡುಗಳು |
|
ಉಪಗ್ರಹ ನಿರೋಧಕ ಸಾಮರ್ಥ್ಯ |
ಇಲ್ಲ |
ಹೌದು |
|
ಕಾರ್ಯವ್ಯಾಪ್ತಿ/ಪಾತ್ರ |
ವಾಯು ರಕ್ಷಣೆ |
ವಾಯು ಮತ್ತು ಬಾಹ್ಯಾಕಾಶ ರಕ್ಷಣೆ |
ಆಪರೇಷನ್ “ಸಾಗರ್ ಬಂಧು”
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಶ್ರೀಲಂಕಾದಾದ್ಯಂತ ವ್ಯಾಪಕ ವಿನಾಶವನ್ನುಂಟುಮಾಡಿದ ‘ದಿತ್ವಾಹ್‘ ಚಂಡಮಾರುತದ ಹಿನ್ನೆಲೆಯಲ್ಲಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಬೆಂಬಲ ನೀಡಲು ಭಾರತವು ತಕ್ಷಣವೇ ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯನ್ನು ಕೈಗೊಂಡಿತು.
ಆಪರೇಷನ್ “ಸಾಗರ್ ಬಂಧು” ಕಾರ್ಯಾಚರಣೆಯ ಬಗ್ಗೆ:
- ಇದು ಶ್ರೀಲಂಕಾಕ್ಕೆ ತುರ್ತು ನೆರವು ನೀಡಲು ಭಾರತವು ಕೈಗೊಂಡ ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’ ಕಾರ್ಯಾಚರಣೆಯಾಗಿದೆ.
- ಈ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ಈ ಕೆಳಗಿನ ನೆರವನ್ನು ರವಾನಿಸಿದೆ:
- ಪರಿಹಾರ ಸಾಮಗ್ರಿಗಳು
- ವೈದ್ಯಕೀಯ ಸರಬರಾಜುಗಳು
- ತುರ್ತು ರಕ್ಷಣಾ ಉಪಕರಣಗಳು
ಮಹತ್ವ:
- ಈ ಕಾರ್ಯಾಚರಣೆಯು ಭಾರತದ ‘ನೆರೆಹೊರೆ ಮೊದಲು ನೀತಿ’ (Neighbourhood First Policy) ಮತ್ತು ‘ಮಹಾಸಾಗರ್’ (MAHASAGAR) ಎಂಬ ವಿಶಾಲವಾದ ಸಮುದ್ರಯಾನ ದೃಷ್ಟಿಕೋನದ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ದಿತ್ವಾಹ್ ಚಂಡಮಾರುತದ ಬಗ್ಗೆ:
- ಇದು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ವೇಗವಾಗಿ ರೂಪುಗೊಂಡ ಒಂದು ಉಷ್ಣವಲಯದ ಚಂಡಮಾರುತವಾಗಿದೆ.
- ‘ದಿತ್ವಾಹ್’ ಎಂಬ ಹೆಸರನ್ನು ಯೆಮನ್ ದೇಶವು ಸೂಚಿಸಿದೆ.



ನಿಮ್ಮದೊಂದು ಉತ್ತರ