“ಯೂರೋ”ವನ್ನು ಅಧಿಕೃತ ಹಣವಾಗಿ ಅಳವಡಿಸಿಕೊಂಡ ಬಲ್ಗೇರಿಯಾ | ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025

“ಯೂರೋ”ವನ್ನು ಅಧಿಕೃತ ಹಣವಾಗಿ ಅಳವಡಿಸಿಕೊಂಡ ಬಲ್ಗೇರಿಯಾ

ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಬಾಲ್ಕನ್ ರಾಷ್ಟ್ರವಾದ ಬಲ್ಗೇರಿಯಾವು ಐರೋಪ್ಯ ಒಕ್ಕೂಟದ (EU) ಏಕೀಕೃತ ಹಣಕಾಸು ವ್ಯವಸ್ಥೆಯಾದ ‘ಯೂರೋ’ವನ್ನು ಅಧಿಕೃತವಾಗಿ ಅಳವಡಿಸಿಕೊಂಡಿದೆ. 
  • ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಾದ ಸುಮಾರು 20 ವರ್ಷಗಳ ಬಳಿಕ ಈ ನಿರ್ಧಾರವನ್ನು ಜಾರಿಗೊಳಿಸಲಾಗಿದ್ದು, ಇದರೊಂದಿಗೆ ಬಲ್ಗೇರಿಯಾವು ‘ಯೂರೋ ವಲಯ’ದ 21ನೇ ಸದಸ್ಯ ರಾಷ್ಟ್ರವಾಯಿತು.

‘ಐರೋಪ್ಯ ಒಕ್ಕೂಟ’ ದ ಬಗ್ಗೆ:

    • ಮಾಸ್ಟ್ರಿಚ್ ಒಪ್ಪಂದ, 1992:- ಈ ಒಪ್ಪಂದದ ಮೂಲಕ ಐರೋಪ್ಯ ಒಕ್ಕೂಟವು ಸ್ಥಾಪನೆಯಾಯಿತು.
    • ಯುರೋಪಿನ ಆರ್ಥಿಕ ಮತ್ತು ಹಣಕಾಸು ಒಕ್ಕೂಟ:- ಇದು ಸಾಮಾನ್ಯ ಆರ್ಥಿಕ ಮತ್ತು ಹಣಕಾಸು ಒಕ್ಕೂಟದ ರಚನೆಯ ಮಾರ್ಗವನ್ನು ಸುಗಮಗೊಳಿಸಿತು.
  • ಪ್ರಸ್ತುತ, 27 ಸದಸ್ಯ ರಾಷ್ಟ್ರಗಳು:- ಜುಲೈ 1, 2013ರಂದು ಐರೋಪ್ಯ ಒಕ್ಕೂಟಕ್ಕೆ ಕೊನೆಯದಾಗಿ ಸೇರಿಕೊಂಡ ದೇಶ ಕ್ರೊಯೇಷಿಯಾ, 28ನೇ ಸದಸ್ಯ ರಾಷ್ಟ್ರವಾಯಿತು. 
  • ಆದರೆ 2020ರಲ್ಲಿ ಯುನೈಟೆಡ್ ಕಿಂಗ್ಡಮ್ (ಬ್ರಿಟನ್) ಐರೋಪ್ಯ ಒಕ್ಕೂಟದಿಂದ ಹೊರಬಂದ ಕಾರಣ, ಪ್ರಸ್ತುತ ಐರೋಪ್ಯ ಒಕ್ಕೂಟದಲ್ಲಿ 27 ಸದಸ್ಯ ರಾಷ್ಟ್ರಗಳಿವೆ.
  • ‘ಯೂರೋ’:- ಇದು ಏಕೈಕ ಕಾನೂನುಬದ್ಧ ಚಲಾವಣಾ ಹಣಕಾಸಾಗಿ ಒಪ್ಪಿತವಾದ ಸಾಮಾನ್ಯ ಹಣಕಾಸಿನ ಅಳವಡಿಕೆಗೆ ಅವಕಾಶ ಮಾಡಿಕೊಟ್ಟಿತು.
  • ಯೂರೋ ಅಧಿಕೃತ ಹಣಕಾಸನ್ನು ಜನವರಿ 1, 2002 ರಂದು 12 ದೇಶಗಳಲ್ಲಿ:- ಮೊದಲ ಬಾರಿಗೆ ಜಾರಿಗೆ ತರಲಾಯಿತು. 
  • ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ECB):- ಇದು ಏಕೀಕೃತ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದೆ.
  • ‘ಯೂರೋಜೋನ್’:- ಇದು ಒಂದು ಸಾಮಾನ್ಯ ಭೌಗೋಳಿಕ ಮತ್ತು ಆರ್ಥಿಕ ಪ್ರದೇಶವನ್ನು ಹೊಂದಿದೆ.

‘ಯೂರೋಜೋನ್’ನ ಬಗ್ಗೆ:

  • ಅಧಿಕೃತವಾಗಿ ಇದನ್ನು ಯೂರೋ ಪ್ರದೇಶ ಎನ್ನುವರು, ಯೂರೋವನ್ನು ತಮ್ಮ ಅಧಿಕೃತ ಹಣಕಾಸನ್ನಾಗಿ ಸಂಪೂರ್ಣವಾಗಿ ಅಳವಡಿಸಿಕೊಂಡಿರುವ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಭೌಗೋಳಿಕ ಮತ್ತು ಆರ್ಥಿಕ ಪ್ರದೇಶವಾಗಿದೆ.
  • ರಚನೆ:- ಇತ್ತೀಚಿನ, ಬಲ್ಗೇರಿಯಾದ ಸೇರ್ಪಡೆಯು ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ಪೈಕಿ, ಯೂರೋಜೋನ್ ಸೇರಿದ 21ನೇ ರಾಷ್ಟ್ರವನ್ನಾಗಿ ಮಾಡಿದೆ.
  • ಉಳಿದ 6 ರಾಷ್ಟ್ರಗಳು ತಮ್ಮದೇ ಆದ ಅಧಿಕೃತ ಹಣಕಾಸನ್ನು ಬಳಸುತ್ತಿವೆ.
  • ನಾಲ್ಕು ಪುಟ್ಟ ರಾಷ್ಟ್ರಗಳಾದ ಅಂಡೋರಾ, ಮೊನಾಕೊ, ವ್ಯಾಟಿಕನ್ ಸಿಟಿ ಮತ್ತು ಸ್ಯಾನ್ ಮರಿನೋ ಸಹ ಐರೋಪ್ಯ ಒಕ್ಕೂಟದೊಂದಿಗಿನ ಒಪ್ಪಂದಗಳ ಮೂಲಕ ಯೂರೋ ಅನ್ನು ಬಳಸುತ್ತಿವೆ. 
  • ಆದರೆ ಕೊಸೊವೊ ಮತ್ತು ಮಾಂಟೆನೆಗ್ರೊ ಐರೋಪ್ಯ ಒಕ್ಕೂಟದೊಂದಿಗೆ ಯಾವುದೇ ಒಪ್ಪಂದವಿಲ್ಲದೆ ಯೂರೋ ಅನ್ನು ತಮ್ಮ ಏಕೈಕ ಅಧಿಕೃತ ಹಣಕಾಸನ್ನಾಗಿ ಬಳಸುತ್ತಿವೆ. ಆದಾಗ್ಯೂ, ಈ ಯಾವುದೇ ದೇಶಗಳನ್ನು ಯೂರೋಜೋನ್‌ನ ಸದಸ್ಯ ರಾಷ್ಟ್ರಗಳೆಂದು ಪರಿಗಣಿಸಲಾಗುವುದಿಲ್ಲ.
  • 2023ರಲ್ಲಿ ಕ್ರೊಯೇಷಿಯಾ ಯೂರೋಜೋನ್‌ಗೆ ಸೇರಿ ಈ ಯೂರೋ ಅಳವಡಿಸಿಕೊಂಡ 20ನೇ ಸದಸ್ಯ ರಾಷ್ಟ್ರವಾಗಿದೆ.

‘ಬಲ್ಗೇರಿಯಾ’ ದೇಶದ ಬಗ್ಗೆ:

    • ಸ್ಥಳ:- ಇದು ಆಗ್ನೇಯ ಯುರೋಪಿನ ಬಾಲ್ಕನ್ ಪರ್ಯಾಯ ದ್ವೀಪದ ಪೂರ್ವ ಭಾಗದಲ್ಲಿ ನೆಲೆಗೊಂಡಿರುವ ದೇಶವಾಗಿದೆ.
    • ನೆರೆಹೊರೆ ರಾಷ್ಟ್ರಗಳು:- ಇಲ್ಲಿನ ಡ್ಯಾನ್ಯೂಬ್ ನದಿಯು ಗಡಿಯ ಬಹುತೇಕ ಭಾಗವನ್ನು ರೂಪಿಸುತ್ತದೆ.
    1. ಉತ್ತರದ ಗಡಿಯಲ್ಲಿ ರೊಮೇನಿಯಾ ದೇಶವಿದ್ದು, 
    2. ಪೂರ್ವಕ್ಕೆ ಕಪ್ಪು ಸಮುದ್ರ, 
    3. ದಕ್ಷಿಣಕ್ಕೆ ಟರ್ಕಿ ಮತ್ತು ಗ್ರೀಸ್, 
    4. ನೈಋತ್ಯಕ್ಕೆ ಉತ್ತರ ಮ್ಯಾಸಿಡೋನಿಯಾ 
    5. ಪಶ್ಚಿಮಕ್ಕೆ ಸರ್ಬಿಯಾ 
  • ರಾಜಧಾನಿ:- ಸೋಫಿಯಾ.

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025

ಸಾಮಾನ್ಯ ಅಧ್ಯಯನ – 2/ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚೆಗೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025ರ ಆಯ್ದ ನಿಬಂಧನೆಗಳನ್ನು ಅಧಿಸೂಚಿಸಿದೆ.

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ, 2025ರ ಬಗ್ಗೆ:

  • ಇದನ್ನು ಮೂಲತಃ ಆಗಸ್ಟ್ 2025ರಲ್ಲಿ ಅಧಿಸೂಚಿಸಲಾಗಿತ್ತು. ಇದು ವಿವಿಧ ನಿಬಂಧನೆಗಳನ್ನು ಬೇರೆ ಬೇರೆ ದಿನಾಂಕಗಳಂದು ಜಾರಿಗೊಳಿಸಲು ಅವಕಾಶ ನೀಡುತ್ತದೆ.
  • ಗುರಿ:- ಇದು ಭಾರತದಲ್ಲಿನ ಕ್ರೀಡಾ ಸಂಸ್ಥೆಗಳ ಆಡಳಿತವನ್ನು ಪುನಾರಚಿಸುವ ಗುರಿಯನ್ನು ಹೊಂದಿದೆ.
  • ಇದು ಕ್ರೀಡಾಪಟುಗಳ ಕಲ್ಯಾಣ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುವ ಮೂಲಕ, ಭಾರತೀಯ ಕ್ರೀಡಾ ಆಡಳಿತವನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿಸಲು ಪ್ರಯತ್ನಿಸುತ್ತದೆ.

ಮುಖ್ಯ ಲಕ್ಷಣಗಳು: 

  • ರಾಷ್ಟ್ರೀಯ ಕ್ರೀಡಾ ಆಡಳಿತ ಸಂಸ್ಥೆಗಳು:- ಈ ಕಾಯ್ದೆಯು ಇವುಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುತ್ತದೆ,
  1. ರಾಷ್ಟ್ರೀಯ ಒಲಿಂಪಿಕ್ ಸಮಿತಿ 
  2. ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ 
  • ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಯೋಜನೆ:- ರಾಷ್ಟ್ರೀಯ ಸಂಸ್ಥೆಗಳು ಆಯಾ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಯೋಜನೆಯನ್ನು ಹೊಂದಿರುತ್ತವೆ.
  • ರಾಷ್ಟ್ರೀಯ ಕ್ರೀಡಾ ಮಂಡಳಿ:- ಇದನ್ನು ಸ್ಥಾಪಿಸಲು ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಇದು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆಯನ್ನು ನೀಡುತ್ತದೆ.
  • ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ:- ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲು ಈ  ಕಾಯ್ದೆಯು ಅವಕಾಶ ಕಲ್ಪಿಸುತ್ತದೆ.

ಉದ್ದೇಶಗಳು:

  • ಇದು ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿತನ, ನೈತಿಕ ಆಚರಣೆಗಳು ಮತ್ತು ಉತ್ತಮ ಆಡಳಿತವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಇದು ಒಲಿಂಪಿಕ್ ಅಧಿನಿಯಮ (ಚಾರ್ಟರ್), ಪ್ಯಾರಾಲಿಂಪಿಕ್ ಅಧಿನಿಯಮ (ಚಾರ್ಟರ್) ಮತ್ತು ಅಂತರರಾಷ್ಟ್ರೀಯ ಉತ್ತಮ ಆಚರಣೆಗಳಿಗೆ ಅನುಗುಣವಾಗಿ ಕ್ರೀಡಾಪಟುಗಳ ಕಲ್ಯಾಣವನ್ನು ಖಚಿತಪಡಿಸುತ್ತದೆ ಹಾಗೂ ಕ್ರೀಡೆಗೆ ಸಂಬಂಧಿಸಿದ ವಿವಾದಗಳಿಗೆ ಪರಿಣಾಮಕಾರಿ ಮತ್ತು ಸಮಯೋಚಿತ ಪರಿಹಾರವನ್ನು ಒದಗಿಸುತ್ತದೆ.
  • ಇದು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಕ್ರೀಡಾಪಟುಗಳ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts