ಮಾಲ್ಡೀವ್ಸ್‌ಗೆ ಕರ್ನಾಟಕದ ಜಿಐ ಉತ್ಪನ್ನಗಳ ರಫ್ತು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ, ಕರ್ನಾಟಕದ ಮೂರು ‘ಭೌಗೋಳಿಕ ಸೂಚ್ಯಂಕ’ (GI) ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳನ್ನು ಇದೇ ಮೊದಲ ಬಾರಿಗೆ ವಾಯುಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ರಫ್ತು ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರಫ್ತು ಅಂಕಿಅಂಶಗಳು:
- ಈ ಯಶಸ್ವಿ ಪ್ರಾಯೋಗಿಕ ರವಾನೆಯು 500 ಕೆಜಿ ನಂಜನಗೂಡು ರಸಬಾಳೆ, 250 ಕೆಜಿ ಮೈಸೂರು ವೀಳ್ಯದೆಲೆ ಮತ್ತು 500 ಕೆಜಿ ಇಂಡಿ ಲಿಂಬೆಹಣ್ಣನ್ನು ಒಳಗೊಂಡಿದೆ.
- ನಂಜನಗೂಡು ರಸಬಾಳೆಯ ಬಗ್ಗೆ:
- ಜಿಐ ಮಾನ್ಯತೆ:- 2006 ರಲ್ಲಿ ನೀಡಲಾಗಿದೆ.
- ಬೆಳೆಯುವ ಪ್ರದೇಶ:- ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು.
- ವಿಶಿಷ್ಟ ಲಕ್ಷಣಗಳು:- ವಿಶಿಷ್ಟವಾದ ಸುವಾಸನೆ, ದಪ್ಪನೆಯ ತಿರುಳು ಮತ್ತು ಔಷಧೀಯ ಗುಣಗಳಿಗೆ (ನರಸಂಬಂಧಿ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ) ಇದು ಹೆಸರುವಾಸಿಯಾಗಿದೆ.
- ಮಣ್ಣಿನ ಅಗತ್ಯತೆ:- ಕಪಿಲಾ ನದಿಯ ದಡದಲ್ಲಿ ಕಂಡುಬರುವ ಕಪ್ಪು ಜೇಡಿಮಣ್ಣಿನ ಮೆಕ್ಕಲು ಮತ್ತು ಲವಣಯುಕ್ತ ಮಣ್ಣಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ.
- ಅಪಾಯ:- ಇದು ‘ಪನಾಮಾ ವಿಲ್ಟ್’ (ಪನಾಮಾ ಸೊರಗು ರೋಗ) ರೋಗಕ್ಕೆ ಸುಲಭವಾಗಿ ತುತ್ತಾಗುವ ಅಪಾಯವನ್ನು ಹೊಂದಿದೆ.
- ಮೈಸೂರು ವೀಳ್ಯದೆಲೆಯ ಬಗ್ಗೆ:
- ಪ್ರದೇಶ:- ಪ್ರಾಥಮಿಕವಾಗಿ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
- ಗುಣಲಕ್ಷಣಗಳು:- ಸ್ಥಳೀಯವಾಗಿ ‘ಚಿಗುರೆಲೆ’ ಎಂದು ಕರೆಯಲ್ಪಡುವ ಇವುಗಳು ತಮ್ಮ ಮೃದುವಾದ ವಿನ್ಯಾಸ, ವಿಶಿಷ್ಟ ರುಚಿ ಮತ್ತು ಅತ್ಯುತ್ತಮ ಗುಣಮಟ್ಟಕ್ಕೆ ಬಹುಬೇಡಿಕೆ ಹೊಂದಿವೆ.
- ಇಂಡಿ ಲಿಂಬೆ/ನಿಂಬೆ (ಕಾಗ್ಜಿ ನೀಮೋ)ಯ ಬಗ್ಗೆ:
- ಪ್ರದೇಶ:- ವಿಜಯಪುರ ಜಿಲ್ಲೆಯ ‘ಇಂಡಿ’ ಭಾಗದಲ್ಲಿ ಇದನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.
- ರಫ್ತು ಮೌಲ್ಯ:- ಇವುಗಳ ಅತ್ಯುನ್ನತ ಗುಣಮಟ್ಟದ ಕಾರಣದಿಂದಾಗಿ, ಮಾಲ್ಡೀವ್ಸ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವುಗಳನ್ನು “ಸೂಪರ್‌ಫುಡ್‌ಗಳು” ಎಂದು ಪ್ರಶಂಸಿಸಲಾಗಿದೆ.



ನಿಮ್ಮದೊಂದು ಉತ್ತರ