ಭಾರತ: ವಿಶ್ವದ ಅತಿದೊಡ್ಡ ಅಕ್ಕಿ (ಭತ್ತ) ಉತ್ಪಾದಕ ರಾಷ್ಟ್ರ
ಸಾಮಾನ್ಯ ಅಧ್ಯಯನ-3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಚೀನಾವನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ.
- ಚೀನಾದ 145.28 ದಶ ಲಕ್ಷ ಟನ್‌ಗಳ ಉತ್ಪಾದನೆಗೆ ಹೋಲಿಸಿದರೆ, ಭಾರತದ ಅಕ್ಕಿ ಉತ್ಪಾದನೆಯು 150.18 ದಶ ಲಕ್ಷ ಟನ್‌ಗಳನ್ನು ತಲುಪಿದೆ.
ಅಕ್ಕಿ (ಭತ್ತ)ಯ ಬಗ್ಗೆ:
- ಇದು ಭಾರತದ ಅತ್ಯಂತ ಪ್ರಮುಖ ಆಹಾರ ಬೆಳೆಯಾಗಿದೆ.
- ಇದು ಪ್ರಮುಖವಾಗಿ ಖಾರಿಫ್ (ಮುಂಗಾರು) ಅಥವಾ ಬೇಸಿಗೆಯ ಬೆಳೆಯಾಗಿದೆ.
ಭತ್ತದ ಬೆಳೆಗೆ ಭೌಗೋಳಿಕ ಪರಿಸ್ಥಿತಿಗಳು:
- ಅಗತ್ಯವಿರುವ ವಾರ್ಷಿಕ ಸರಾಸರಿ ತಾಪಮಾನ:- 22°C ನಿಂದ 32°C.
- ವಾರ್ಷಿಕ ಸರಾಸರಿ ಮಳೆ:- 150-300 ಸೆಂ.ಮೀ.
- ಮಣ್ಣು:- ಜೇಡಿ ಮಣ್ಣು ಮತ್ತು ಕಡುಮಣ್ಣು (ಲೋಮಿ ಮಣ್ಣು)
- ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳು:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ 2024–25ರ ಬೆಳೆ ವರ್ಷದ (2025ರ ಅಂತ್ಯದಲ್ಲಿ ಅಂತಿಮಗೊಂಡ) ದತ್ತಾಂಶವನ್ನು ಆಧರಿಸಿ, ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ರಾಜ್ಯಗಳು ಈ ಕೆಳಗಿನಂತಿವೆ:
- ಉತ್ತರ ಪ್ರದೇಶ: 20.93 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
- ತೆಲಂಗಾಣ: 17.09 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
- ಪಶ್ಚಿಮ ಬಂಗಾಳ: 16.49 ದಶ ಲಕ್ಷ ಟನ್‌ಗಳಷ್ಟು ಉತ್ಪಾದನೆ.
ಮಹತ್ವ:
- ಇದು ಭಾರತದ ಬಹುಸಂಖ್ಯಾತ ಜನರ ಪ್ರಧಾನ ಆಹಾರ ಬೆಳೆಯಾಗಿದೆ.
- ರಾಷ್ಟ್ರೀಯ ಆಹಾರ ಮತ್ತು ಜೀವನೋಪಾಯ ಭದ್ರತಾ ವ್ಯವಸ್ಥೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ.
|
ನಿಮಗಿದು ತಿಳಿದಿದೆಯೇ?
|
SAMPANN (ಸಂಪನ್ನ- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ)
ಸಾಮಾನ್ಯ ಅಧ್ಯಯನ-2 / ಆಡಳಿತ
ಇದೀಗ ಸುದ್ದಿಯಲ್ಲಿದೆ:
- SAMPANN (‘ಸಂಪನ್ನ’- ಪಿಂಚಣಿ ಲೆಕ್ಕಪತ್ರ ಹಾಗೂ ನಿರ್ವಹಣಾ ವ್ಯವಸ್ಥೆ) ಎಂಬುದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ರೂಪಿಸಲಾದ ಒಂದು ಏಕೀಕೃತ, ಆನ್‌ಲೈನ್ ಪಿಂಚಣಿ ನಿರ್ವಹಣಾ ವ್ಯವಸ್ಥೆಯಾಗಿದೆ.
SAMPANN (ಸಂಪನ್ನ) ವ್ಯವಸ್ಥೆಯ ಬಗ್ಗೆ:
- ವಿಸ್ತರಿತ ರೂಪ:- SAMPANN- ಸಿಸ್ಟಮ್ ಫಾರ್ ಅಕೌಂಟಿಂಗ್ ಅಂಡ್ ಮ್ಯಾನೇಜಮೆಂಟ್ ಆಫ್ ಪೆನ್ಷನ್ಸ್.
- ಇದು ದೂರಸಂಪರ್ಕ ಇಲಾಖೆಯ (DoT) ಪಿಂಚಣಿದಾರರಿಗಾಗಿ ಪಿಂಚಣಿಯ ಸಂಸ್ಕರಣೆ, ಮಂಜೂರಾತಿ ಮತ್ತು ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವಿತರಣೆ ಮಾಡಲು ಒಂದೇ ವೇದಿಕೆಯನ್ನು ಸೃಷ್ಟಿಸುತ್ತದೆ.
- ಅನುಷ್ಠಾನ ಸಂಸ್ಥೆ:- ಸಂವಹನ ಲೆಕ್ಕಪತ್ರಗಳ ಮಹಾನಿಯಂತ್ರಕರು, ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯ.
- ಇತರೆ ಕಾರ್ಯ:- ಇದು ಆನ್‌ಲೈನ್ ಕುಂದುಕೊರತೆ ನಿವಾರಣೆ, ಡಿಜಿಟಲ್ ವಿವರ/ಪ್ರೊಫೈಲ್ ನಿರ್ವಹಣೆ ಮತ್ತು ವಹಿವಾಟು ದಾಖಲೆಗಳನ್ನು ಒದಗಿಸುವ ಮೂಲಕ, ನಿವೃತ್ತ ದೂರಸಂಪರ್ಕ ನೌಕರರ ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.
ವುಲ್ಫ್ ಸೂಪರ್‌ಮೂನ್/ ತೋಳ ಸಂಪೂರ್ಣಚಂದ್ರ (Wolf Supermoon)
ಸಾಮಾನ್ಯ ಅಧ್ಯಯನ-3 / ಬಾಹ್ಯಾಕಾಶ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಜನವರಿ 2026 ರಲ್ಲಿ ‘ವುಲ್ಫ್ ಸೂಪರ್‌ಮೂನ್’ ಸಂಭವಿಸಿತು.
- ವುಲ್ಫ್ ಸೂಪರ್‌ಮೂನ್ ಎಂಬುದು “ವುಲ್ಫ್ ಮೂನ್ (ತೋಳ ಚಂದ್ರ)” ಮತ್ತು “ಸೂಪರ್‌ಮೂನ್ (ಸಂಪೂರ್ಣಚಂದ್ರ)” ಎಂಬ ಎರಡು ವಿಭಿನ್ನ ಪರಿಕಲ್ಪನೆಗಳ ಸಂಯೋಜನೆಯಾಗಿದೆ.
ವುಲ್ಫ್ ಮೂನ್ (ತೋಳ ಚಂದ್ರ)ನ ಬಗ್ಗೆ:
- ಈ ಪದವು ಜನವರಿ ತಿಂಗಳಲ್ಲಿ ಸಂಭವಿಸುವ ಹುಣ್ಣಿಮೆ (ಪೂರ್ಣಚಂದ್ರ)ಯನ್ನು ಸೂಚಿಸುತ್ತದೆ.
- ಕಾಲಗಣನೆ ಮಾಡಲು:- ಇದು ಹುಣ್ಣಿಮೆಗಳಿಗೆ ಇರುವ ಇಂತಹ ಸಾಂಪ್ರದಾಯಿಕ ಹೆಸರುಗಳು ಋತುಮಾನದ ಮಾದರಿಗಳಿಂದ ಹುಟ್ಟಿಕೊಂಡಿವೆ. ಆಧುನಿಕ ಕ್ಯಾಲೆಂಡರ್‌ಗಳಿಗಿಂತ ಮೊದಲು ಕಾಲಗಣನೆ ಮಾಡಲು ಜಾನಪದ ಮತ್ತು ಪಂಚಾಂಗಗಳ ಮೂಲಕ ಇವು ಜನಪ್ರಿಯಗೊಂಡವು.
- ಈ ಹೆಸರು ಬರಲು ಕಾರಣ:- ಚಳಿಗಾಲದಲ್ಲಿ ಆಹಾರದ ಕೊರತೆಯಿಂದ ತೋಳಗಳು ಹೆಚ್ಚಾಗಿ ಕೂಗುತ್ತಿದ್ದುದರಿಂದ ಈ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ಆದಾಗ್ಯೂ, ಇದಕ್ಕೆ ಯಾವುದೇ ಖಗೋಳವೈಜ್ಞಾನಿಕ ಮಹತ್ವವಿಲ್ಲ.
ಸೂಪರ್‌ಮೂನ್ (ಸಂಪೂರ್ಣಚಂದ್ರ)ನ ಬಗ್ಗೆ:
- ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿರುವ ಹಂತವಾದ ‘ಪೆರಿಜಿ’ಯೊಂದಿಗೆ (perigee – ಭೂಮಿಗೆ ಸಮೀಪ ಬಿಂದು) ಹುಣ್ಣಿಮೆ ಏಕಕಾಲದಲ್ಲಿ ಸಂಭವಿಸಿದಾಗ ಉಂಟಾಗುವ ಖಗೋಳ ವಿದ್ಯಮಾನವೇ ಸೂಪರ್‌ಮೂನ್ (ಅಮಾವಾಸ್ಯೆ) ಆಗಿದೆ.
- ಈ ವೇಳೆ ಚಂದ್ರನು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ.
- ಚಂದ್ರನು ದೀರ್ಘವೃತ್ತಾಕಾರದ ಕಕ್ಷೆಯನ್ನು ಅನುಸರಿಸಲಿದ್ದು, ಭೂಮಿಯಿಂದ ಅದರ ಅತ್ಯಂತ ದೂರದ ಬಿಂದುವನ್ನು ‘ಅಪೋಜಿ’ (apogee – ಭೂಮಿಗೆ ದೂರದ ಬಿಂದು) ಎಂದು ಕರೆಯಲಾಗುತ್ತದೆ.
ಪ್ರಮುಖ ಲಕ್ಷಣಗಳು:
- ವುಲ್ಫ್ ಸೂಪರ್‌ಮೂನ್ ಸಮಯದಲ್ಲಿ, ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಸ್ವಲ್ಪ ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನೆ.
- ಇದಕ್ಕೆ ಸಂಬಂಧಿಸಿದ ದೃಶ್ಯ ಪರಿಣಾಮವೇ ‘ಮೂನ್ ಇಲ್ಯೂಷನ್’ (ಚಂದ್ರನ ದೃಷ್ಟಿಭ್ರಮೆ).
- ಇಲ್ಲಿ ಚಂದ್ರನು ದಿಗಂತದ ಬಳಿ ಇದ್ದಾಗ ದೊಡ್ಡದಾಗಿ ಕಾಣುತ್ತಾನೆ. ಇದು ಮಾನವನ ಕಣ್ಣಿನ ಗ್ರಹಿಕೆಯೇ ಹೊರತು, ಚಂದ್ರನ ಗಾತ್ರದಲ್ಲಿ ಉಂಟಾಗುವ ನಿಜವಾದ ಬದಲಾವಣೆಯಲ್ಲ.
ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆ
ಸಾಮಾನ್ಯ ಅಧ್ಯಯನ-3 / ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ದೀರ್ಘ ಶ್ರೇಣಿಯ ಸೂರ್ಯಾಸ್ತ್ರ ರಾಕೆಟ್ ಉಡಾವಣೆ ವ್ಯವಸ್ಥೆಯನ್ನು ಪೂರೈಸಲು, ಭಾರತೀಯ ಸೇನೆಯು ಇಸ್ರೇಲ್ ದೇಶದ ಸಹಯೋಗದೊಂದಿಗೆ ‘NIBE ಲಿಮಿಟೆಡ್’ ಜೊತೆಗೆ ₹293 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
ಸೂರ್ಯಾಸ್ತ್ರ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯ ಬಗ್ಗೆ:
- ಇದು ಭಾರತದ ಮೊದಲ ದೇಶೀಯವಾಗಿ ತಯಾರಿಸಲಾದ ಸಾರ್ವತ್ರಿಕ ಬಹು- ಸಾಮರ್ಥ್ಯದ ರಾಕೆಟ್ (ಉಡಾವಣ ವಾಹನ) ಉಡಾವಣೆ ವ್ಯವಸ್ಥೆಯಾಗಿದೆ.
- ಇದು 300 ಕಿ.ಮೀ.ವರೆಗೆ ನಿಖರವಾದ ‘ಭೂಮೇಲ್ಮೈಯಿಂದ ಭೂಮೇಲ್ಮೈಗೆ’ ದಾಳಿಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ.



ನಿಮ್ಮದೊಂದು ಉತ್ತರ