ಭಾರತದ ವಿದ್ಯುತ್ ವಲಯ
ಸಾಮಾನ್ಯ ಅಧ್ಯಯನ-3/ಶಕ್ತಿ
ಇದೀಗ ಸುದ್ದಿಯಲ್ಲಿದೆ:
- ಭಾರತದ ವಿದ್ಯುತ್ ವಿತರಣಾ ಸಂಸ್ಥೆಗಳು, 2024-25 ರ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ ₹2,701 ಕೋಟಿಗಳಷ್ಟು ‘ತೆರಿಗೆ ನಂತರದ ಲಾಭ’ವನ್ನು (PAT) ದಾಖಲಿಸಿವೆ.
ಭಾರತದ ವಿದ್ಯುತ್ ವಲಯದ ಬಗ್ಗೆ:
- ವಿಶ್ವದಲ್ಲೇ ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ 3ನೇ ಅತಿದೊಡ್ಡ ದೇಶ:- ಜೂನ್ 2025 ರ ಮಾಹಿತಿಯಂತೆ ಭಾರತವು 476 ಗಿಗಾವ್ಯಾಟ್ (GW) ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
- ನವೀಕರಿಸಬಹುದಾದ ಇಂಧನದಲ್ಲಿ-4ನೇ ಸ್ಥಾನ:- 2025 ರ ಮಾಹಿತಿಯಂತೆ, ಭಾರತವು ‘ನವೀಕರಿಸಬಹುದಾದ ಇಂಧನ’ ಸ್ಥಾಪಿತ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ. ಪವನ ಶಕ್ತಿಯಲ್ಲಿ 4ನೇ ಸ್ಥಾನ ಮತ್ತು ಸೌರ ಶಕ್ತಿಯಲ್ಲಿ 3ನೇ ಸ್ಥಾನವನ್ನು ಹೊಂದಿದೆ.
- ವಿದ್ಯುತ್ ಬಳಕೆಯಲ್ಲಿ ಮುಂಚೂಣೆಯಲ್ಲಿರುವ ವಲಯಗಳು:-
- ಕೈಗಾರಿಕಾ ವಲಯವು – 41.8%
- ಗೃಹಬಳಕೆ – 24.3%
- ಕೃಷಿ – 17%
- ವಾಣಿಜ್ಯ ಬಳಕೆ – 8.3%
- 2018 ರ ವೇಳೆಗೆ 100% ಗ್ರಾಮ ವಿದ್ಯುದ್ದೀಕರಣ:- ಭಾರತವು 2018 ರ ವೇಳೆಗೆ 100% ಗ್ರಾಮ ವಿದ್ಯುದ್ದೀಕರಣವನ್ನು ಸಾಧಿಸಿದೆ ಮತ್ತು ಅಂದಿನಿಂದ 2.8 ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಜಾಲ ಸಂಪರ್ಕವನ್ನು ಕಲ್ಪಿಸಿದೆ.
ಸರ್ಕಾರದ ಉಪಕ್ರಮಗಳು:
- ರಾಷ್ಟ್ರೀಯ ಸೌರ ಕಾರ್ಯಯೋಜನೆ (NSM):-
- ಪ್ರಾರಂಭ:- 2010
- ಉದ್ದೇಶ:- ಇದು ವಿದ್ಯುತ್ ಜಾಲ-ಸಂಪರ್ಕಿತ ಮತ್ತು ಜಾಲ-ರಹಿತ ಸೌರ ವಿದ್ಯುತ್ ಯೋಜನೆಗಳನ್ನು ಒಳಗೊಂಡಂತೆ, ಸೌರ ಸಾಮರ್ಥ್ಯ ಸ್ಥಾಪನೆಗೆ ಮಹತ್ವಾಕಾಂಕ್ಷೆಯ ಉದ್ದೇಶವನ್ನು ನಿಗದಿಪಡಿಸಿದೆ.
- ರಾಷ್ಟ್ರೀಯ ಶುದ್ಧ ಇಂಧನ ನಿಧಿ (NCEF):-
- ಉದ್ದೇಶ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ, ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಯೋಜನೆಗಳಲ್ಲಿನ ಸಂಶೋಧನೆ ಹಾಗೂ ನಾವೀನ್ಯತೆಯನ್ನು ಬೆಂಬಲಿಸಲು ಇದನ್ನು ಸ್ಥಾಪಿಸಲಾಗಿದೆ.
- ರಾಷ್ಟ್ರೀಯ ಪವನ ಶಕ್ತಿ ಕಾರ್ಯಯೋಜನೆ:-
- ಉದ್ದೇಶ:- ಇದು ಭಾರತದಲ್ಲಿ ಪವನ ಶಕ್ತಿಯ ಅಭಿವೃದ್ಧಿ ಮತ್ತು ವಿಸ್ತರಣೆಯ ಮೇಲೆ ಗಮನಹರಿಸುತ್ತದೆ.
- ಗುರಿ:- 2030 ರ ವೇಳೆಗೆ 140 GW ಪವನ ಶಕ್ತಿ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ನಿಗದಿಪಡಿಸಲಾಗಿದೆ.
- ಪಿಎಂ-ಕುಸುಮ್ ಯೋಜನೆ:-
- ಉದ್ದೇಶ:- ಕೃಷಿ ಪಂಪ್ಸೆಟ್ಗಳನ್ನು ಸೌರಶಕ್ತಿ ಚಾಲಿತವಾಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
- ಪರಿಷ್ಕೃತ ವಿತರಣಾ ವಲಯ ಯೋಜನೆ (RDSS):–
- ಉದ್ದೇಶ:- ವಿದ್ಯುತ್ ವಿತರಣಾ ಕಂಪನಿಗಳನ್ನು (DISCOMs) ಬಲಪಡಿಸಲು ಇದನ್ನು ಜಾರಿಗೆ ತರಲಾಗಿದೆ.
ಬ್ರಿಕ್ಸ್ ಪ್ಲಸ್ ನೌಕಾಭ್ಯಾಸ
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಪ್ರಸಕ್ತ ವರ್ಷ ಭಾರತವು ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿದ್ದರೂ ಸಹ, ದಕ್ಷಿಣ ಆಫ್ರಿಕಾ ಆಯೋಜಿಸಿದ “ವಿಲ್ ಫಾರ್ ಪೀಸ್, 2026” ಎಂಬ ಬ್ರಿಕ್ಸ್ ಪ್ಲಸ್ ನೌಕಾಭ್ಯಾಸದಿಂದ ಹೊರಗುಳಿಯಲು ನಿರ್ಧರಿಸಿದೆ.
- ಇಂತಹ ನೌಕಾಭ್ಯಾಸಗಳು ಬ್ರಿಕ್ಸ್ನ ಸಾಂಸ್ಥಿಕ ಚಟುವಟಿಕೆಗಳಲ್ಲ; ಬದಲಿಗೆ ಇವು ಕೇವಲ ಸಾಂದರ್ಭಿಕ ಅಥವಾ ತಾತ್ಕಾಲಿಕ ಉಪಕ್ರಮಗಳಾಗಿವೆ. ಆದ್ದರಿಂದ, ಇದರಲ್ಲಿ ಭಾಗವಹಿಸುವುದು ಕಡ್ಡಾಯವೇನಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಬ್ರಿಕ್ಸ್ ಪ್ಲಸ್ ನೌಕಾಭ್ಯಾಸಗಳು:
- ತಾತ್ಕಾಲಿಕ ನೌಕಾಭ್ಯಾಸದಲ್ಲಿ ಒಳಗೊಂಡಿರುವ ರಾಷ್ಟ್ರಗಳು:- ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಆಯ್ಕೆಮಾಡಿದ ಬ್ರಿಕ್ಸ್-ಯೇತರ ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ತಾತ್ಕಾಲಿಕ ಕಡಲ ಸಮರಾಭ್ಯಾಸವಾಗಿದೆ.
- ಬ್ರಿಕ್ಸ್ ಚೌಕಟ್ಟಿನ ಅಡಿಯಲ್ಲಿ ಕಡ್ಡಾಯವಾಗಿ ಇಲ್ಲ:- ಮತ್ತು ಇವು ಅಧಿಕೃತ ಬ್ರಿಕ್ಸ್ ಕಾರ್ಯವಿಧಾನಗಳ ಭಾಗವಾಗಿಲ್ಲ.
- ಚೀನಾ ನೇತೃತ್ವ:- ಈ ನೌಕಾಭ್ಯಾಸವು ರಷ್ಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಸಕ್ರಿಯವಾಗಿ ಭಾಗವಹಿಸುವಿಕೆಯನ್ನು ಒಳಗೊಂಡಿದೆ.
ಬ್ರಿಕ್ಸ್ (BRICS) ಸಂಘಟನೆಯ ಬಗ್ಗೆ:
- ಸ್ಥಾಪನೆ:- 2009.
- ಪ್ರಧಾನ ಕಚೇರಿ:- ಶಾಂಘೈ.
- BRICS – ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ಸಂಕ್ಷಿಪ್ತ ರೂಪ:- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (2010 ರಲ್ಲಿ ಸೇರ್ಪಡೆಯಾಯಿತು) ರಾಷ್ಟ್ರಗಳನ್ನು ಸೂಚಿಸುವ ಸಂಕ್ಷಿಪ್ತ ರೂಪವಾಗಿದೆ.
- ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಿಮ್ ಓ’ನೀಲ್, 2001 ರಲ್ಲಿ “BRIC” ಎಂಬ ಪದವನ್ನು ಪರಿಚಯಿಸಿದರು:- ಇದು ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಎಂಬ ನಾಲ್ಕು ಉದಯೋನ್ಮುಖ ಆರ್ಥಿಕತೆಗಳನ್ನು ಒಳಗೊಂಡಿದೆ.
- ಸದಸ್ಯ ರಾಷ್ಟ್ರಗಳು:-
- 5 ಮೂಲ ಸದಸ್ಯ ರಾಷ್ಟ್ರಗಳು:- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ
2024-25 ರ 6 ಹೊಸ ಸದಸ್ಯ ರಾಷ್ಟ್ರಗಳು:- ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.

- ಬ್ರಿಕ್ಸ್ ಪಾಲು:- ಬ್ರಿಕ್ಸ್ 5 ಅತ್ಯಂತ ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡಿದೆ. ಇದು,
- ಜಾಗತಿಕ ಜನಸಂಖ್ಯೆಯ 41%,
- ಜಾಗತಿಕ ಜಿಡಿಪಿಯ 24%
- ಜಾಗತಿಕ ವ್ಯಾಪಾರದ 16% ರಷ್ಟನ್ನು ಪ್ರತಿನಿಧಿಸುತ್ತದೆ.
|
ಸೂಚನೆ:- 2028 ರ ವೇಳೆಗೆ, ಬ್ರಿಕ್ಸ್ ಜಾಗತಿಕ ಆರ್ಥಿಕತೆಯ 35% ಪಾಲನ್ನು ಹೊಂದುವ ನಿರೀಕ್ಷೆಯಿದೆ. |
ನ್ಯೂ ಡೆವಲಪ್ಮೆಂಟ್ ಬ್ಯಾಂಕ್ (ನೂತನ ಅಭಿವೃದ್ಧಿ ಬ್ಯಾಂಕ್):– ಮೂಲಸೌಕರ್ಯ ಮತ್ತು ಸುಸ್ಥಿರ ಯೋಜನೆಗಳನ್ನು ಬೆಂಬಲಿಸಲು, ಈ ಗುಂಪಿನ ಪ್ರಾಥಮಿಕ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ಮೊಟ್ಟಮೊದಲ ಮುಕ್ತ – ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆ
ಸಾಮಾನ್ಯ ಅಧ್ಯಯನ-3/ಜಲಚರ ಸಾಕಣೆ
ಇದೀಗ ಸುದ್ದಿಯಲ್ಲಿದೆ:
- ಭಾರತ ಸರ್ಕಾರವು ಅಂಡಮಾನ್ ಸಮುದ್ರದಿಂದ, ಭಾರತದ ಮೊಟ್ಟಮೊದಲ ‘ಮುಕ್ತ ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆ’ಗೆ ಚಾಲನೆ ನೀಡಿದೆ.
ಮುಕ್ತ – ಸಮುದ್ರ ಕಡಲ ಮೀನು ಸಾಕಾಣಿಕೆ ಯೋಜನೆಯ ಬಗ್ಗೆ:
- ಅನುಷ್ಠಾನ:- ಭೂ ವಿಜ್ಞಾನ ಸಚಿವಾಲಯ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (NIOT) ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಸಹಯೋಗದೊಂದಿಗೆ ಜಾರಿಯಾಗುತ್ತಿದೆ.
- ಗುರಿ:- ಸಮುದ್ರಾಹಾರ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಕರಾವಳಿ ಮೀನುಗಾರಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು.
- ಉದ್ದೇಶ:- ಈ ಪ್ರಾಯೋಗಿಕ ಉಪಕ್ರಮವು ನೈಸರ್ಗಿಕ ಸಾಗರ ಪರಿಸ್ಥಿತಿಗಳಲ್ಲಿ ಕಡಲ ತುಡುಪ್ಪದ ಮೀನು (ಫಿನ್ಫಿಶ್) ಮತ್ತು ಸಮುದ್ರ ಶೈವಲ/ ಕಳೆಯ ಮುಕ್ತ ಸಮುದ್ರ ಕೃಷಿಯ ಮೇಲೆ ಕೇಂದ್ರೀಕರಿಸುತ್ತದೆ. ಇದು ವೈಜ್ಞಾನಿಕ ಆವಿಷ್ಕಾರವನ್ನು ಜೀವನೋಪಾಯದ ಸೃಷ್ಟಿಯೊಂದಿಗೆ ಸಂಯೋಜಿಸುತ್ತದೆ.
ಮುಕ್ತ ಸಮುದ್ರ ಮೀನು ಸಾಕಾಣಿಕೆಯ ಬಗ್ಗೆ:
- ವ್ಯಾಖ್ಯಾನ:- ಇದು ಕರಾವಳಿಯಿಂದ ದೂರದಲ್ಲಿರುವ (ಕಡಲಾಚೆಯ) ತೆರೆದ ಸಮುದ್ರದ ನೀರಿನಲ್ಲಿ ಕಡಲ ಮೀನಿನ ಪ್ರಭೇದಗಳ ಸಾಕಣೆಯನ್ನು ಸೂಚಿಸುತ್ತದೆ.
- ಎತ್ತರದ ಅಲೆಗಳು, ಪ್ರವಾಹಗಳು ಮತ್ತು ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಪಂಜರಗಳು ಅಥವಾ ನೀರಿನಲ್ಲಿ ಮುಳುಗಿಸಬಹುದಾದ ವ್ಯವಸ್ಥೆಗಳನ್ನು ಬಳಸಿಕೊಂಡು ಸಾಕಣೆಯನ್ನು ಮಾಡಲಾಗುತ್ತದೆ.
ಮಹತ್ವ:- ಸುಸ್ಥಿರ ಮೀನುಗಾರಿಕೆ, ಜೀವನೋಪಾಯದ ಭದ್ರತೆ ಮತ್ತು ನೀಲಿ ಆರ್ಥಿಕತೆಯ ವಿಸ್ತರಣೆಗೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ (ECOSOC) 80 ವರ್ಷಗಳು
ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಗುಂಪುಗಳು
ಇದೀಗ ಸುದ್ದಿಯಲ್ಲಿದೆ:
- ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು (ECOSOC) ತನ್ನ ಕಾರ್ಯಚಟುವಟಿಕೆಯ 80 ವರ್ಷಗಳನ್ನು ಪೂರೈಸಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC)ಯ ಬಗ್ಗೆ:
- ವಿಶ್ವಸಂಸ್ಥೆಯ 6 ಪ್ರಮುಖ ಅಂಗಗಳಲ್ಲಿ ಒಂದು:- ಮತ್ತು ಅಂತರರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಪರಿಸರ ನೀತಿ ಸಂಯೋಜನೆಗೆ ಕೇಂದ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
- ಸ್ಥಾಪನೆ:- ವಿಶ್ವಸಂಸ್ಥೆಯ ಘೋಷಣಾಪತ್ರದ ಅಡಿಯಲ್ಲಿ 1945 ರಲ್ಲಿ ಸ್ಥಾಪಿಸಲಾಯಿತು.



ನಿಮ್ಮದೊಂದು ಉತ್ತರ