ಬೆಂಗಳೂರು ವ್ಯಾಪಾರ ಕಾರಿಡಾರ್ (BBC) ಗೆ ಸಚಿವ ಸಂಪುಟದ ಅನುಮೋದನೆ
ಇದೀಗ ಸುದ್ದಿಯಲ್ಲಿದೆ:
- ಎಲೆಕ್ಟ್ರಾನಿಕ್ಸ್ ಸಿಟಿಯನ್ನು ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸಲು 117-ಕಿಮೀ ಉದ್ದದ ಬೆಂಗಳೂರು ವ್ಯಾಪಾರ ಕಾರಿಡಾರ್ (BBC), (ಹಿಂದೆ ನಗರದ ಹೊರಭಾಗದ ವರ್ತುಲ ರಸ್ತೆ ಎಂದು ಕರೆಯಲಾಗುತ್ತಿದ್ದ) ರಸ್ತೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ.
ಬೆಂಗಳೂರು ವ್ಯಾಪಾರ ಕಾರಿಡಾರ್ ನ ಬಗ್ಗೆ:
- ಅನುಷ್ಠಾನ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವು ಅಭಿವೃದ್ಧಿಪಡಿಸುತ್ತದೆ.
- ಇದು ಎಲೆಕ್ಟ್ರಾನಿಕ್ಸ್ ಸಿಟಿಯನ್ನು ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಯೊಂದಿಗೆ ಸಂಪರ್ಕಿಸುತ್ತದೆ.
- ಪ್ರಾಮುಖ್ಯತೆ – ಮುಖ್ಯ ರಸ್ತೆಗಳ ಮೂಲಕ ಹೋಗುವ ವಾಹನಗಳ ಹೊರತಾಗಿ ಸಂಚಾರ ದಟ್ಟಣೆಯನ್ನು ವಿಭಜಿಸಿ, ಪ್ರಮುಖ ವರ್ತುಲ ಹೆದ್ದಾರಿಗಳನ್ನು ಸಂಪರ್ಕಿಸುವ ಮೂಲಕ ವಾಹನಗಳ ಸಂಚಾರ ದಟ್ಟಣೆಯನ್ನು 40% ವರೆಗೆ ಕಡಿಮೆ ಮಾಡುತ್ತದೆ; ನೈಸ್ ರಸ್ತೆಗೆ ಪರ್ಯಾಯ/ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.



ನಿಮ್ಮದೊಂದು ಉತ್ತರ