ಬೆಂಗಳೂರಿನ ಸೇನಾ ಅಧಿಕಾರಿಗೆ 2025ರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿ
ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರಿನ ಭಾರತೀಯ ಸೇನಾ ಅಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ತಮ್ಮ ‘ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್’ (ಸಮಾನ ಪಾಲುದಾರರು, ಶಾಶ್ವತ ಶಾಂತಿ) ಯೋಜನೆಗಾಗಿ 2025ರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಪ್ರಶಸ್ತಿ ವಿವರಗಳು:
- ಪುರಸ್ಕೃತರು:– ಬೆಂಗಳೂರು ಮೂಲದ ಭಾರತೀಯ ಸೇನಾ ಅಧಿಕಾರಿ ಮೇಜರ್ ಸ್ವಾತಿ ಶಾಂತ ಕುಮಾರ್ ಅವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
- ಪ್ರಸ್ತುತ ಪಾತ್ರ:– ಇವರು ಪ್ರಸ್ತುತ ದಕ್ಷಿಣ ಸುಡಾನ್ ದೇಶದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
- ಪ್ರಶಸ್ತಿ:- “ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್” ಎಂಬ ಶೀರ್ಷಿಕೆಯ ತಮ್ಮ ಯೋಜನೆಗಾಗಿ ಅವರು 2025ರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯೋಜನೆಯ ಬಗ್ಗೆ:
- ಈ ಯೋಜನೆಯ ಶೀರ್ಷಿಕೆ “ಈಕ್ವಲ್ ಪಾರ್ಟ್ನರ್ಸ್, ಲಾಸ್ಟಿಂಗ್ ಪೀಸ್” ಎಂಬುದಾಗಿದೆ.
- ಉದ್ದೇಶ:– ಮಿಷನ್‌ನ ಜವಾಬ್ದಾರಿಯ ವ್ಯಾಪ್ತಿಯಲ್ಲಿ ಲಿಂಗ ಸಮಾನತೆಯನ್ನು ಗಣನೀಯವಾಗಿ ಹೆಚ್ಚಿಸುವುದು ಮತ್ತು ತಳಮಟ್ಟದ ಒಳಗೊಳ್ಳುವಿಕೆಯನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.



ನಿಮ್ಮದೊಂದು ಉತ್ತರ