ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು

ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು

ಇದೀಗ ಸುದ್ದಿಯಲ್ಲಿದೆ:

  • ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (NCRB) ಯ ವರದಿಯ ಪ್ರಕಾರ, ಮಹಾನಗರಗಳಲ್ಲಿ ನಡೆಯುವ ಸೈಬರ್ ಅಪರಾಧಗಳಲ್ಲಿ ಬೆಂಗಳೂರಿನಲ್ಲಿ ಶೇ. 51.92 ರಷ್ಟು ಅಪರಾಧಗಳು ನಡೆಯುತ್ತವೆ.

ವರದಿಯ ಪ್ರಮುಖ ಸಂಶೋಧನೆಗಳು:

  • ರಾಜ್ಯದಲ್ಲಿ 21,889 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ತೆಲಂಗಾಣದಲ್ಲಿನ 18,236 ಪ್ರಕರಣಕ್ಕಿಂತ 20% ಹೆಚ್ಚಾಗಿ ದಾಖಲಾಗಿವೆ.
  • 2023ರಲ್ಲಿ, ಕರ್ನಾಟಕ ಭಾರತದಲ್ಲಿ ಸೈಬರ್ ಅಪರಾಧಗಳ ರಾಜಧಾನಿಯಾಗಿ ಹೊರಹೊಮ್ಮಿದೆ. ದೇಶದಾದ್ಯಂತ ದಾಖಲಾದ ಸೈಬರ್ ಅಪರಾಧ ಪ್ರಕರಣಗಳಲ್ಲಿ 25.57% ಪ್ರಕರಣಗಳು ಕರ್ನಾಟಕದಲ್ಲೇ ದಾಖಲಾಗಿವೆ.
  • 2023ರಲ್ಲಿ, ಬೆಂಗಳೂರು, ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ಏರಿಕೆಯ ಕೇಂದ್ರಬಿಂದುವಾಗಿದೆ. ಮಾಹಿತಿ ತಂತ್ರಜ್ಞಾನ ಕೇಂದ್ರವೆಂದು ಪ್ರಸಿದ್ಧವಾದ ಬೆಂಗಳೂರಿನಲ್ಲಿ ಮಾತ್ರ 21,889 ಪ್ರಕರಣಗಳಲ್ಲಿ 17,631 ಪ್ರಕರಣಗಳು ದಾಖಲಾಗಿವೆ. ಇದರ ಮೂಲಕ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವ ನಗರವಾಗಿ ಹೊರಹೊಮ್ಮಿದೆ.

ಸೈಬರ್ ಅಪರಾಧ ತಡೆಗಟ್ಟಲು ಕರ್ನಾಟಕ ಸರ್ಕಾರದ ಉಪಕ್ರಮಗಳು:

  • ಹೊಸ ಸೈಬರ್ ಕಮಾಂಡ್ ಘಟಕ:- ಇದು ರಾಜ್ಯದ ಎಲ್ಲಾ ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು 45 ಪೊಲೀಸ್ ಠಾಣೆಗಳನ್ನು ಒಂದೇ ಘಟಕದಡಿ ಕ್ರೋಢೀಕರಿಸುತ್ತದೆ.
  • ಕರ್ನಾಟಕ ಸೈಬರ್ ಭದ್ರತಾ ನೀತಿ 2024:- ಈ ನೀತಿಯು ಮೂಲಸೌಕರ್ಯಗಳ ರಕ್ಷಣೆಗೆ, ಸೈಬರ್ ಸುರಕ್ಷತಾ ಜಾಗೃತಿಯನ್ನು ಉತ್ತೇಜಿಸಲು, ಮತ್ತು ಬೆಂಗಳೂರು ನಗರದಲ್ಲಿ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಪ್ರಮುಖವಾಗಿ ಕೇಂದ್ರೀಕರಿಸುತ್ತದೆ.

ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (CCITR):- ಸೈಬರ್ ಅಪರಾಧಗಳನ್ನು ತಡೆಗಟ್ಟಲು ತನಿಖೆ ಮತ್ತು ವಿಚಾರಣೆಯನ್ನು ಸುಧಾರಿಸುವುದು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts