ಬಾಗುರುಂಬಾ ನೃತ್ಯ
ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಪ್ರಧಾನ ಮಂತ್ರಿಯವರು ಅಸ್ಸಾಂಗೆ ಭೇಟಿ ನೀಡಿ, ಬಾಗುರುಂಬಾ ಧೌ 2026 ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಾಗುರುಂಬಾ ನೃತ್ಯದ ಬಗ್ಗೆ:
- ಇದನ್ನು ಸಾಮಾನ್ಯವಾಗಿ “ಚಿಟ್ಟೆ ನೃತ್ಯ” ಎಂದು ಉಲ್ಲೇಖಿಸಲಾಗುತ್ತದೆ.
- ಅಸ್ಸಾಂನ ಬೋಡೋ ಸಮುದಾಯದ ಒಂದು ಸಮೂಹ ಜಾನಪದ ನೃತ್ಯ:- ಅತ್ಯಂತ ಪ್ರಮುಖ ಮತ್ತು ಆಕರ್ಷಕ ಜಾನಪದ ನೃತ್ಯಗಳಲ್ಲಿ ಒಂದಾಗಿದೆ.
- ಸಾಂಪ್ರದಾಯಿಕವಾಗಿ ಯುವತಿಯರು ಪ್ರದರ್ಶಿಸುವ ನೃತ್ಯ:- ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಸಂಕೇತಿಸುತ್ತದೆ ಹಾಗೂ ಫಲವತ್ತತೆ, ಶಾಂತಿ ಮತ್ತು ಸಂತೋಷದ ವಿಷಯಗಳನ್ನು ಆಚರಿಸುತ್ತದೆ.
- ‘ಬ್ವಿಸಾಗು’ ಹಬ್ಬ ಬೋಡೋ ಸಮುದಾಯದ ಹೊಸ ವರ್ಷ:- ಈ ನೃತ್ಯವು ‘ಬ್ವಿಸಾಗು’ ಹಬ್ಬದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ಹಬ್ಬವು ಬೋಡೋ ಹೊಸ ವರ್ಷ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ.
ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI)
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತವು ‘ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ'(RNI)ವನ್ನು ಪರಿಚಯಿಸಿದೆ.
ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI):
- ರಾಷ್ಟ್ರೀಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಜಾಗತಿಕ ಮಾನದಂಡಗಳ ಚೌಕಟ್ಟು:- ಇದು ಕೇವಲ ಆರ್ಥಿಕ ಶಕ್ತಿಯ ಮೇಲಿದ್ದ ಗಮನವನ್ನು ನೈತಿಕ ಆಡಳಿತ, ಸುಸ್ಥಿರತೆ ಮತ್ತು ಜಾಗತಿಕ ಹೊಣೆಗಾರಿಕೆಯತ್ತ ಬದಲಾಯಿಸುತ್ತದೆ.
- ಈ ಸೂಚ್ಯಂಕವು ದೇಶಗಳನ್ನು 4 ಪ್ರಮುಖ ಆಯಾಮಗಳ ಅಡಿಯಲ್ಲಿ ಮೌಲ್ಯಮಾಪನ ಮಾಡುತ್ತದೆ. ಅವುಗಳೆಂದರೆ:-
- ನೈತಿಕ ಆಡಳಿತ,
- ಸಾಮಾಜಿಕ ಯೋಗಕ್ಷೇಮ,
- ಪರಿಸರ ಉಸ್ತುವಾರಿ,
- ಜಾಗತಿಕ ಹೊಣೆಗಾರಿಕೆ.
- ಅಭಿವೃದ್ಧಿಪಡಿಸಿದವರು:-
- ವರ್ಲ್ಡ್ ಇಂಟಲೆಕ್ಚುವಲ್ ಫೌಂಡೇಶನ್’ (WIF)
- ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU)
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಮುಂಬೈ (IIM-M)
- ಸಿಂಗಾಪುರ, ಸ್ವಿಟ್ಜರ್ಲೆಂಡ್ ಮತ್ತು ಡೆನ್ಮಾರ್ಕ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತವು ಜಾಗತಿಕವಾಗಿ 16ನೇ ಸ್ಥಾನದಲ್ಲಿದೆ.
ಪರಿಸರ ಸಂರಕ್ಷಣೆ ನಿಧಿ
ಭೂಗೋಳ ಮತ್ತು ಪರಿಸರ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸರ್ಕಾರವು ‘ಪರಿಸರ (ಸಂರಕ್ಷಣೆ) ನಿಧಿ’ಯ ಆಡಳಿತ ಮತ್ತು ಬಳಕೆಯನ್ನು ನಿಯಂತ್ರಿಸುವ ಸಮಗ್ರ ನಿಯಮಗಳನ್ನು ಅಧಿಕೃತವಾಗಿ ಅಧಿಸೂಚಿಸಿದೆ.
ಪರಿಸರ (ಸಂರಕ್ಷಣೆ) ನಿಧಿಯ ಬಗ್ಗೆ:
- ಪರಿಸರ (ಸಂರಕ್ಷಣೆ) ಕಾಯ್ದೆ, 1986:- ಪರಿಸರ (ಸಂರಕ್ಷಣೆ) ನಿಧಿಯು ಈ ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಮತ್ತು ಮೀಸಲಾದ ನಿಧಿಯಾಗಿದೆ.
- ಉದ್ದೇಶ:- ಪರಿಸರ ಉಲ್ಲಂಘನೆಗಳಿಂದ ಸಂಗ್ರಹವಾದ ಹಣಕಾಸಿನ ದಂಡವನ್ನು ಮಾಲಿನ್ಯ ನಿಯಂತ್ರಣ, ಮರುಸ್ಥಾಪನೆ, ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಬಳಸುವುದು.
- ಕಾರ್ಯ ನಿರ್ವಹಣೆ:- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಅಥವಾ ಕೇಂದ್ರ ಸರ್ಕಾರವು ಅಧಿಸೂಚಿಸಿದ ಯಾವುದೇ ಸಂಸ್ಥೆ.
- ಹಣ ಹಂಚಿಕೆ:- ದಂಡದ ಮೂಲಕ ಸಂಗ್ರಹವಾದ ಹಣದಲ್ಲಿ
- ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ‘ಸಂಚಿತ ನಿಧಿ’ಗೆ 75% ರಷ್ಟು ಹಣವನ್ನು ವರ್ಗಾಯಿಸಲಾಗುತ್ತದೆ ಮತ್ತು
- 25% ರಷ್ಟು ಹಣವನ್ನು ಕೇಂದ್ರ ಸರ್ಕಾರ ಉಳಿಸಿಕೊಳ್ಳುತ್ತದೆ.
- ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಪರಿಶೋಧಕ(CAG)ರು, ಈ ನಿಧಿಯ ಲೆಕ್ಕಪರಿಶೋಧನೆಯನ್ನು ನಡೆಸುತ್ತಾರೆ.
ಚಾಗೋಸ್ ದ್ವೀಪಗಳು
ಅಂತರರಾಷ್ಟ್ರೀಯ

ಇದೀಗ ಸುದ್ದಿಯಲ್ಲಿದೆ:
-
- ಯುನೈಟೆಡ್ ಕಿಂಗ್ಡಮ್ (ಯುಕೆ) ಸರ್ಕಾರವು ಚಾಗೋಸ್ ದ್ವೀಪಗಳನ್ನು ಮಾರಿಷಸ್ಗೆ ಹಸ್ತಾಂತರಿಸುವ ಮತ್ತು ಅದೇ ಸಮಯದಲ್ಲಿ ಕಾರ್ಯತಂತ್ರದ ಸೇನಾ ನೆಲೆಗಾಗಿ ಗುತ್ತಿಗೆಯನ್ನು ಉಳಿಸಿಕೊಳ್ಳುವ ತನ್ನ ಒಪ್ಪಂದವನ್ನು ಸಮರ್ಥಿಸಿಕೊಂಡಿದೆ. ಈ ಒಪ್ಪಂದದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಟೀಕೆಗಳು ವ್ಯಕ್ತವಾಗಿದ್ದವು.
- 2025 ರಲ್ಲಿ, ಯುನೈಟೆಡ್ ಕಿಂಗ್ಡಮ್ ವಿವಾದಾತ್ಮಕ ಮತ್ತು ಕಾರ್ಯತಂತ್ರದ ಚಾಗೋಸ್ ದ್ವೀಪಗಳ ಸಾರ್ವಭೌಮತ್ವವನ್ನು ಮಾರಿಷಸ್ಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಿತು.
ಚಾಗೋಸ್ ದ್ವೀಪಸಮೂಹಗಳ ಬಗ್ಗೆ:
- ಹಿಂದೂ ಮಹಾಸಾಗರದಲ್ಲಿವೆ:- ಮಾರಿಷಸ್ನ ಮುಖ್ಯ ದ್ವೀಪದ ಈಶಾನ್ಯಕ್ಕೆ ಸುಮಾರು 1,600 ಕಿ.ಮೀ ದೂರದಲ್ಲಿರುವ 60 ಕ್ಕೂ ಹೆಚ್ಚು ಕಡಿಮೆ ಎತ್ತರದ ದ್ವೀಪಗಳನ್ನು ಒಳಗೊಂಡಿದೆ.
- 1965 ರಲ್ಲಿ ಮಾರಿಷಸ್ನಿಂದ ಪ್ರತ್ಯೇಕವಾಯಿತು:- ಮಾರಿಷಸ್ ಇನ್ನೂ ಬ್ರಿಟಿಷ್ ವಸಾಹತುವಾಗಿದ್ದಾಗ, ಇದನ್ನು ಮಾರಿಷಸ್ನಿಂದ ಬೇರ್ಪಡಿಸಲಾಯಿತು.
- ಬ್ರಿಟನ್ ಈ ದ್ವೀಪಗಳನ್ನು 3 ದಶಲಕ್ಷ ಪೌಂಡ್ಗಳಿಗೆ ಖರೀದಿಸಿತು:- ಆದರೆ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆಯುವ ಒಪ್ಪಂದದ ಭಾಗವಾಗಿ, ಕಾನೂನುಬಾಹಿರವಾಗಿ ಇವುಗಳನ್ನು ಬಿಟ್ಟುಕೊಡುವಂತೆ ತಮ್ಮನ್ನು ಒತ್ತಾಯಿಸಲಾಯಿತು ಎಂದು ಮಾರಿಷಸ್ ವಾದಿಸುತ್ತಿದೆ.
- 1960 ರ ದಶಕದಲ್ಲಿ ಬ್ರಿಟನ್ ‘ಡಿಯಾಗೋ ಗಾರ್ಸಿಯಾ’ ದ್ವೀಪದಲ್ಲಿ ಸೇನಾ ನೆಲೆಯನ್ನು ನಿರ್ಮಿಸಲು ಅಮೆರಿಕಾಕ್ಕೆ ಆಹ್ವಾನ:- ‘ಡಿಯಾಗೋ ಗಾರ್ಸಿಯಾ’, ಚಾಗೋಸ್ ದ್ವೀಪಸಮೂಹಗಳಲ್ಲಿ ಅತಿದೊಡ್ಡದಾದ ದ್ವೀಪವಾಗಿದೆ ಮತ್ತು ಅಲ್ಲಿನ ಸಾವಿರಾರು ಜನರನ್ನು ಅವರ ಮನೆಗಳಿಂದ ತೆರವುಗೊಳಿಸಿತು.
- 1980 ರ ದಶಕದಿಂದಲೂ, ಮಾರಿಷಸ್ ಚಾಗೋಸ್ ದ್ವೀಪಗಳ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಿದೆ.
- ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪು:- 2019 ರಲ್ಲಿ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1968 ರಲ್ಲಿ ಸ್ವಾತಂತ್ರ್ಯದ ಸಮಯದಲ್ಲಿ ಮಾರಿಷಸ್ನ ‘ವಸಾಹತುಶಾಹಿ ವಿಮೋಚನೆ’ ಅಪೂರ್ಣವಾಗಿದೆ ಎಂದು ತೀರ್ಪು ನೀಡಿತು ಮತ್ತು ಯುನೈಟೆಡ್ ಕಿಂಗ್ಡಮ್ ಆದಷ್ಟು ಬೇಗ ದ್ವೀಪಗಳ ಆಡಳಿತವನ್ನು ಕೊನೆಗೊಳಿಸಬೇಕು ಎಂದು ಸಲಹೆ ನೀಡಿತು.
ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಸ್ಥಾಪನಾ ದಿನ
ರಾಜ್ಯಶಾಸ್ತ್ರ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಭಾರತದ ರಾಷ್ಟ್ರಪತಿಗಳು ಮೇಘಾಲಯ, ತ್ರಿಪುರಾ ಮತ್ತು ಮಣಿಪುರ ಜನತೆಗೆ ಅವರ ರಾಜ್ಯಗಳ ಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.
- ‘ಈಶಾನ್ಯ ಪ್ರದೇಶಗಳ (ಪುನರ್ರಚನೆ) ಕಾಯ್ದೆ, 1971’ ಜಾರಿಗೆ ಬಂದ ನಂತರ, ಜನವರಿ 21, 1972 ರಂದು ಮಣಿಪುರ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಸಂಪೂರ್ಣವಾಗಿ ರಾಜ್ಯಗಳ ಸ್ಥಾನಮಾನವನ್ನು ನೀಡಲಾಯಿತು.
ಐತಿಹಾಸಿಕ ಹಿನ್ನೆಲೆ:
- ಮಣಿಪುರ:- ಒಂದು ರಾಜ ಸಂಸ್ಥಾನವಾಗಿದ್ದ ಮಣಿಪುರವು, 1949 ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು. ರಾಜ್ಯ ಸ್ಥಾನಮಾನ ಪಡೆಯುವ ಮೊದಲು, ಇದು 1956 ರಿಂದ ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಿತ್ತು.
- ತ್ರಿಪುರಾ:- ಇದೂ ಕೂಡ ಒಂದು ರಾಜ ಸಂಸ್ಥಾನವಾಗಿತ್ತು ಮತ್ತು 1949 ರಲ್ಲಿ ಭಾರತೀಯ ಒಕ್ಕೂಟಕ್ಕೆ ಸೇರಿತು. ಮಣಿಪುರದಂತೆಯೇ, 1972 ರಲ್ಲಿ ಪೂರ್ಣ ರಾಜ್ಯವಾಗುವ ಮೊದಲು ಇದು 1956 ರಿಂದ ಕೇಂದ್ರಾಡಳಿತ ಪ್ರದೇಶವಾಗಿತ್ತು.
- ಮೇಘಾಲಯ:- ಮೂಲತಃ ಅಸ್ಸಾಂನ ಭಾಗವಾಗಿದ್ದ ಇದನ್ನು, 1970 ರಲ್ಲಿ ಅಸ್ಸಾಂ ರಾಜ್ಯದೊಳಗೆ ಮೊದಲು ಸ್ವಾಯತ್ತ ರಾಜ್ಯವನ್ನಾಗಿ ಮಾಡಲಾಯಿತು. ನಂತರ ಅದರ ವಿಶಿಷ್ಟ ಬುಡಕಟ್ಟು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಗುರುತಿಸಲು, 1972 ರಲ್ಲಿ ಇದನ್ನು ಪ್ರತ್ಯೇಕ ರಾಜ್ಯವನ್ನಾಗಿ ರೂಪಿಸಲಾಯಿತು.
ಒಂದು ನಿಲ್ದಾಣ ಒಂದು ಉತ್ಪನ್ನ (OSOP)
ಸರ್ಕಾರಿ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಭಾರತೀಯ ರೈಲ್ವೆಯ ‘ಒಂದು ನಿಲ್ದಾಣ ಒಂದು ಉತ್ಪನ್ನ’ (OSOP) ಯೋಜನೆಯನ್ನು 2,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಿದೆ. ಇದರಿಂದ 1.32 ಲಕ್ಷ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಿದೆ.
ಒಂದು ನಿಲ್ದಾಣ ಒಂದು ಉತ್ಪನ್ನ’ (OSOP) ಯೋಜನೆಯ ಬಗ್ಗೆ:
- ಪ್ರಾರಂಭ:- 2022
- ಉದ್ದೇಶ:- ಭಾರತದ ವಿಶಾಲವಾದ ರೈಲ್ವೆ ಜಾಲವನ್ನು ಬಳಸಿಕೊಂಡು ಸ್ಥಳೀಯ, ಸ್ವದೇಶಿ ಮತ್ತು ವಿಶೇಷ ಉತ್ಪನ್ನಗಳನ್ನು ಉತ್ತೇಜಿಸುವುದು.
- ವಿಶಿಷ್ಟತೆ:- ರೈಲ್ವೆ ಸಚಿವಾಲಯವು OSOP ಮಳಿಗೆಗಳನ್ನು ನೋಡಲು ಕಲಾತ್ಮಕವಾಗಿ ಏಕರೂಪವಾಗಿ ಕಾಣುವಂತೆ, ಆದರೆ ಸ್ಥಳೀಯವಾಗಿ ವಿಶಿಷ್ಟವಾಗಿರುವಂತೆ ವಿನ್ಯಾಸಗೊಳಿಸಿದೆ.
- ರಾಷ್ಟ್ರೀಯ ವಿನ್ಯಾಸ ಸಂಸ್ಥೆ (NID) ವಿನ್ಯಾಸಗೊಳಿಸಿದೆ:- ಪ್ರಯಾಣಿಕರಿಗೆ ಉಪಯುಕ್ತ ಮತ್ತು ಆಕರ್ಷಕವಾಗಿರಲು, ಈ ಮಳಿಗೆಗಳನ್ನು ಸಾಮಾನ್ಯವಾಗಿ NID ವಿನ್ಯಾಸಗೊಳಿಸಿದೆ.
- ಪಿಎಂ ಗತಿ ಶಕ್ತಿ ರಾಷ್ಟ್ರೀಯ ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಮುಖ ಭಾಗವಾಗಿದೆ. ಇದು ತಡೆರಹಿತ ಬಹು-ಮಾದರಿ ಸಂಪರ್ಕವನ್ನು ಒದಗಿಸುವ ಮತ್ತು ಸ್ಥಳೀಯ ಸರಕುಗಳ ಸಾಗಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಐರೋಪ್ಯ ಒಕ್ಕೂಟದ ‘ಬಲವಂತ-ವಿರೋಧಿ ಸಾಧನ’ (Anti-coercion Instrument)
ಅಂತರರಾಷ್ಟ್ರೀಯ
ಇದೀಗ ಸುದ್ದಿಯಲ್ಲಿದೆ:
- ಗ್ರೀನ್ಲ್ಯಾಂಡ್ಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷರು ಸುಂಕದ ಬೆದರಿಕೆಗಳನ್ನು ಹಾಕಿದ ನಂತರ, ಫ್ರಾನ್ಸ್ ಅಧ್ಯಕ್ಷರು ಐರೋಪ್ಯ ಒಕ್ಕೂಟದ (EU) ‘ಬಲವಂತ-ವಿರೋಧಿ ಸಾಧನ’ವನ್ನು ಸಕ್ರಿಯಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಐರೋಪ್ಯ ಒಕ್ಕೂಟದ ‘ಬಲವಂತ-ವಿರೋಧಿ ಸಾಧನ’ದ ಬಗ್ಗೆ:
- ವ್ಯಾಪಾರ ಸಾಧನವಾಗಿದೆ:- ಐರೋಪ್ಯ ಒಕ್ಕೂಟವು ಇದನ್ನು 2023 ರಲ್ಲಿ ಅಂಗೀಕರಿಸಿತ್ತು, ಆದರೆ ಇದುವರೆಗೂ ಇದನ್ನು ಬಳಸಿಲ್ಲ.
- ಉದ್ದೇಶ:- ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರವೊಂದರ ಮೇಲೆ ಒತ್ತಡ ಹೇರಲು ಯಾವುದೇ ದೇಶವು ‘ವ್ಯಾಪಾರ ಅಸ್ತ್ರಗಳನ್ನು’ ಬಳಸಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದು ಇದರ ಉದ್ದೇಶವಾಗಿದೆ.
ಕ್ರಮಗಳು:
- ಆಮದು ಮತ್ತು ರಫ್ತು ನಿರ್ಬಂಧ:- ಈ ವ್ಯವಸ್ಥೆಯು, ತನ್ನ ‘ಏಕ ಮಾರುಕಟ್ಟೆಯಲ್ಲಿ’ ಸರಕು ಮತ್ತು ಸೇವೆಗಳ ಮೇಲೆ ಆಮದು ಮತ್ತು ರಫ್ತು ನಿರ್ಬಂಧಗಳಂತಹ ಕ್ರಮಗಳನ್ನು ತೆಗೆದುಕೊಳ್ಳಲು ಐರೋಪ್ಯ ಒಕ್ಕೂಟಕ್ಕೆ ಅವಕಾಶ ನೀಡುತ್ತದೆ.
- ಅಮೆರಿಕದ ಕಂಪನಿಗಳ ಪ್ರವೇಶದ ಮಿತಿ:- ಇದು ಯುರೋಪಿನಲ್ಲಿ ಸಾರ್ವಜನಿಕ ಖರೀದಿ ಗುತ್ತಿಗೆಗಳನ್ನು ಪಡೆಯದಂತೆ ಅಮೆರಿಕದ ಕಂಪನಿಗಳ ಪ್ರವೇಶವನ್ನು ಮಿತಿಗೊಳಿಸುತ್ತದೆ.



ನಿಮ್ಮದೊಂದು ಉತ್ತರ