ಪ್ರವಾಸಿ ಭಾರತೀಯ ದಿವಸ್ – 18ನೇ ಆವೃತ್ತಿ | ಪನ್ಖುಡಿ ಪೋರ್ಟಲ್ (PANKHUDI Portal) | ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ | ಸ್ಪೈನಾ ಬಿಫಿಡಾ (Spina Bifida) | ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ ಅಮೆರಿಕದ ನಿರ್ಗಮನ | ಕಡಲ ಆಮೆಗಳ ಸಂರಕ್ಷಣೆಗೆ ನೆರವಾಗುವ ಸ್ಯಾಟಲೈಟ್ ಟ್ಯಾಗಿಂಗ್

ಪ್ರವಾಸಿ ಭಾರತೀಯ ದಿವಸ್ – 18ನೇ ಆವೃತ್ತಿ

ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ: 

  • ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಎರಡು ವರ್ಷಗಳಿಗೊಮ್ಮೆ ಜನವರಿ 9 ರಂದು ಆಚರಿಸಲಾಗುತ್ತದೆ.

ಪ್ರವಾಸಿ ಭಾರತೀಯ ದಿವಸ್ (PBD) ನ ಬಗ್ಗೆ:

  • ಉದ್ದೇಶ:- ಇದು ಭಾರತೀಯ ಅನಿವಾಸಿಯರು ತಮ್ಮ ತಾಯ್ನಾಡಿಗೆ ನೀಡಿದ ಅಮೋಘ ಕೊಡುಗೆಗಳನ್ನು ಗೌರವಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ.
  • ಐತಿಹಾಸಿಕ ಹಿನ್ನೆಲೇ:- ಇದು 1915ರಲ್ಲಿ ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವನ್ನು ಸಂಕೇತಿಸುತ್ತದೆ.
  • ಆಯೋಜಿಸುವವರು:- ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸುತ್ತದೆ. 
  • ಇದು 2015ರಿಂದ ದ್ವೈವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ.

ಭಾರತೀಯ ಅನಿವಾಸಿ ಸಮುದಾಯದ ಬಗ್ಗೆ:

  • ವ್ಯಾಖ್ಯಾನ:- ಈ ಸಮುದಾಯವು, ತಮ್ಮ ಮೂಲವನ್ನು ಭಾರತಕ್ಕೆ ಸಂಪರ್ಕಿಸಬಹುದಾದವರು ಅಥವಾ ತಾತ್ಕಾಲಿಕವಾಗಿ ಇಲ್ಲವೇ ಶಾಶ್ವತವಾಗಿ ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ಒಳಗೊಂಡ ಜನರ ಗುಂಪು.
  • 2024ರ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಜಾಗತಿಕವಾಗಿ ಅನಿವಾಸಿ ಭಾರತೀಯ ಸಮುದಾಯದ ಸಂಖ್ಯೆ ಅಂದಾಜು 35.42 ದಶ ಲಕ್ಷ ಆಗಿದ್ದು, ಇದರಲ್ಲಿ 
  1. 15.85 ದಶ ಲಕ್ಷ ಅನಿವಾಸಿ ಭಾರತೀಯರು (NRIs) ಮತ್ತು 
  2. 19.57 ದಶ ಲಕ್ಷ ಭಾರತೀಯ ಮೂಲದ ವ್ಯಕ್ತಿಗಳು (PIOs) ಸೇರಿದ್ದಾರೆ.
  • ಭಾರತೀಯ ಅನಿವಾಸಿಗಳು ವಾಸಿಸುತ್ತಿರುವ ಪ್ರಮುಖ 5 ರಾಷ್ಟ್ರಗಳು:- 
  • ಅಮೆರಿಕ ಸಂಯುಕ್ತ ರಾಷ್ಟ್ರ (USA): 5.4 ದಶ ಲಕ್ಷ
  1. ಅರಬ್ ಸಂಯುಕ್ತ ಸಂಸ್ಥಾನ (UAE): 3.6 ದಶ ಲಕ್ಷ
  2. ಮಲೇಷ್ಯಾ: 2.9 ದಶ ಲಕ್ಷ
  3. ಕೆನಡಾ: 2.8 ದಶ ಲಕ್ಷ 
  4. ಸೌದಿ ಅರೇಬಿಯಾ: 2.4 ದಶ ಲಕ್ಷ
  • ವಿಶ್ವಸಂಸ್ಥೆಯ ಜಾಗತಿಕ ವಲಸೆ ವರದಿ, 2024ರ ಪ್ರಕಾರ, ಸುಮಾರು 18 ದಶ ಲಕ್ಷ ಜನರನ್ನು ಹೊಂದುವ ಮೂಲಕ, ಜಗತ್ತಿನಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ವಲಸಿಗರನ್ನು ಹೊಂದಿರುವ ಮೂಲ ದೇಶ ಭಾರತವಾಗಿದೆ.

ಅನಿವಾಸಿ ಸಮುದಾಯದ ಮಹತ್ವ:

  • ವಿದೇಶದಿಂದ $129.1 ಬಿಲಿಯನ್ ಹಣಕಾಸು ರವಾನೆ (Remittances): 2024ರಲ್ಲಿ, ಭಾರತವು ಅಂದಾಜು $129.1 ಬಿಲಿಯನ್ ಮೌಲ್ಯದ ಹಣವನ್ನು ಸ್ವೀಕರಿಸಿದ್ದು, ಇದು ಯಾವುದೇ ಒಂದು ವರ್ಷದಲ್ಲಿ ದೇಶವೊಂದು ಪಡೆದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ.
  • ಹಣಕಾಸು ರವಾನೆ 14.3% ರಷ್ಟಿದೆ:- 2025ರಲ್ಲಿ ಜಾಗತಿಕವಾಗಿ ರವಾನೆಯಾದ ಒಟ್ಟು ಹಣದಲ್ಲಿ ಭಾರತದ ಪಾಲು 14.3% ರಷ್ಟಿದ್ದು, ಇದು ಈ ಸಹಸ್ರಮಾನದ ಆರಂಭದಿಂದ ಯಾವುದೇ ದೇಶವು ಹೊಂದಿದ ಅತ್ಯಧಿಕ ಪಾಲಾಗಿದೆ.
  • ವಿದೇಶಿ ವಿನಿಮಯ ಮೀಸಲು:- ಅನಿವಾಸಿ ಭಾರತೀಯರು ದೇಶದ ವಿದೇಶಿ ವಿನಿಮಯ ಮೀಸಲು ಮತ್ತು ಗ್ರಾಮೀಣ ಕುಟುಂಬಗಳ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಾರೆ.
  • ಹೂಡಿಕೆ ಮತ್ತು ವ್ಯಾಪಾರ: ಅನಿವಾಸಿ ಭಾರತೀಯರು (NRIs) ಮತ್ತು ಭಾರತೀಯ ಮೂಲದ ವ್ಯಕ್ತಿಗಳು (PIOs) ಭಾರತೀಯ ರಿಯಲ್ ಎಸ್ಟೇಟ್, ನವೋದ್ಯಮಗಳು ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಾರೆ ಹಾಗೂ ಭಾರತ ಮತ್ತು ತಾವು ವಾಸಿಸುವ ದೇಶಗಳ ನಡುವೆ ವ್ಯಾಪಾರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.
  • ತಂತ್ರಜ್ಞಾನ ಮತ್ತು ಆವಿಷ್ಕಾರ: ಸಿಲಿಕಾನ್ ವ್ಯಾಲಿ, ಶೈಕ್ಷಣಿಕ ವಲಯ ಮತ್ತು ಜಾಗತಿಕ ಕಂಪನಿಗಳಲ್ಲಿರುವ ಭಾರತೀಯ ಮೂಲದ ಪರಿಣಿತರು ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ಹೊಸ ಆವಿಷ್ಕಾರಗಳಿಗೆ ಬೆಂಬಲ ನೀಡುವ ಮೂಲಕ ಕೊಡುಗೆ ನೀಡುತ್ತಿದ್ದಾರೆ.
  • ಸಾಂಸ್ಕೃತಿಕ ರಾಯಭಾರಿಗಳು:- ಅನಿವಾಸಿ ಸಮುದಾಯವು ಜಾಗತಿಕವಾಗಿ ಭಾರತೀಯ ಭಾಷೆಗಳು, ಯೋಗ, ಆಹಾರ ಪದ್ಧತಿ, ಸಿನಿಮಾ ಮತ್ತು ಹಬ್ಬಗಳನ್ನು ಉತ್ತೇಜಿಸುತ್ತದೆ.
  • ವಿದೇಶಾಂಗ ನೀತಿ ಪ್ರತಿಪಾದನೆ:- ಭಾರತೀಯ ಅನಿವಾಸಿ ಸಮುದಾಯಗಳು ತಾವು ನೆಲೆಸಿರುವ ರಾಷ್ಟ್ರಗಳಲ್ಲಿ ಭಾರತದ ಪರವಾಗಿ ವಿದೇಶಾಂಗ ನೀತಿಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ.
  • ನಾಗರಿಕ ರಾಜತಾಂತ್ರಿಕತೆ: ದ್ವಿಪಕ್ಷೀಯ ಉದ್ವಿಗ್ನತೆಗಳು ಅಥವಾ ಮಾಧ್ಯಮಗಳಲ್ಲಿ ನಕಾರಾತ್ಮಕ ವರದಿಗಳು ಕಂಡುಬಂದಾಗ, ಅನಿವಾಸಿ ಭಾರತೀಯ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ರಾಜತಾಂತ್ರಿಕ ಸಂಬಂಧಗಳನ್ನು ಸರಾಗಗೊಳಿಸಲು ಮತ್ತು ವಿಶ್ವಾಸವನ್ನು ಮರುಸ್ಥಾಪಿಸಲು ಭಾರತಕ್ಕೆ ನೆರವಾಗುತ್ತದೆ.
  • ಜಾಗತಿಕ ಮನ್ನಣೆ: ವಿವಿಧ ಕ್ಷೇತ್ರಗಳಲ್ಲಿ ಅನಿವಾಸಿ ಭಾರತೀಯರ ಸಾಧನೆಗಳು, ಭಾರತವನ್ನು ‘ಪ್ರತಿಭೆ ಮತ್ತು ಅವಕಾಶಗಳ ಕೇಂದ್ರ’ವನ್ನಾಗಿ ಬಿಂಬಿಸುತ್ತವೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಹೆಚ್ಚಿಸಲು ಕಾರಣವಾಗಿದೆ.

ಪನ್ಖುಡಿ ಪೋರ್ಟಲ್ (PANKHUDI Portal)

ಸಾಮಾನ್ಯ ಅಧ್ಯಯನ-1/ ಮಹಿಳಾ ಸಬಲೀಕರಣ

ಇದೀಗ ಸುದ್ದಿಯಲ್ಲಿದೆ:

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು “ಪನ್ಖುಡಿ ಪೋರ್ಟಲ್” (PANKHUDI Portal) ಅನ್ನು ಲೋಕಾರ್ಪಣೆ ಮಾಡಿದೆ.

‘ಪನ್ಖುಡಿ ಪೋರ್ಟಲ್’ ನ ಬಗ್ಗೆ:

  • ಇದೊಂದು ಸಮಗ್ರ ಕಾಪೋರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಮತ್ತು ಪಾಲುದಾರಿಕೆ ಸೌಲಭ್ಯವನ್ನು ಸುಗಮಗೊಳಿಸುವ ಡಿಜಿಟಲ್ ಪೋರ್ಟಲ್ ಆಗಿದೆ.
  • ಉದ್ದೇಶ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮಗಳಲ್ಲಿ ಪಾಲುದಾರರ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಸಮನ್ವಯತೆಯನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿದೆ.
  • ಸಚಿವಾಲಯ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಪ್ರಮುಖ ಲಕ್ಷಣಗಳು:

  • ಒಂದೇ ಕಿಟಕಿಯ ಡಿಜಿಟಲ್ ವೇದಿಕೆ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಅನಿವಾಸಿ ಭಾರತೀಯರು (NRIs), ಸರ್ಕಾರೇತರ ಸಂಸ್ಥೆಗಳು (NGOs), ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ದಾನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ “ಒಂದೇ ಕಿಟಕಿಯ ಡಿಜಿಟಲ್ ವೇದಿಕೆ”ಯಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
  • ಸಚಿವಾಲಯದ ಪ್ರಮುಖ ಯೋಜನೆಗಳಿಗೆ ಬೆಂಬಲ:- ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0, ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿಯ ಅನುಷ್ಠಾನವನ್ನು ಒಂದು ವ್ಯವಸ್ಥಿತ ಮತ್ತು ಪಾರದರ್ಶಕ ಡಿಜಿಟಲ್ ವ್ಯವಸ್ಥೆಯ ಮೂಲಕ ಬೆಂಬಲಿಸುತ್ತದೆ ಮತ್ತು ಬಲಪಡಿಸುತ್ತದೆ.

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಉಪಕ್ರಮಗಳ ಬಗ್ಗೆ:

  • ಸಮಗ್ರ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮ:- ಇದು ಅಪೌಷ್ಟಿಕತೆಯನ್ನು ತಡೆಗಟ್ಟಲು ಮತ್ತು ಬಾಲ್ಯದ ಆರಂಭಿಕ ಬೆಳವಣಿಗೆಯನ್ನು ಸುಧಾರಿಸಲು ಕೇಂದ್ರೀಕರಿಸಿದ ಕಾರ್ಯಕ್ರಮವಾಗಿದೆ.
  • ಫಲಾನುಭವಿಗಳು:- 
  1. ಮಕ್ಕಳು (0–6 ವರ್ಷ), 
  2. ಕಿಶೋರಿಯರು (14–18 ವರ್ಷ)
  3. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು.

ಮಿಷನ್ ವಾತ್ಸಲ್ಯ ಉಪಕ್ರಮದ ಬಗ್ಗೆ:

  • ಇದು ಮಕ್ಕಳ ಸಂರಕ್ಷಣೆ ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿರುವ ಮಕ್ಕಳ ಕಲ್ಯಾಣದ ಮೇಲೆ ಕೇಂದ್ರೀಕರಿಸುತ್ತದೆ. 
  • ಧ್ಯೇಯವಾಕ್ಯ:- “ಯಾವುದೇ ಮಗು ಹಿಂದೆ ಉಳಿಯಬಾರದು”.
  • ಉದ್ದೇಶಗಳು:- ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ಮತ್ತು ಪೋಕ್ಸೊ ಕಾಯ್ದೆ, 2012 ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದಾಯಕ ಬಾಲ್ಯವನ್ನು ಖಚಿತಪಡಿಸುವುದು.

ಮಿಷನ್ ಶಕ್ತಿ ಉಪಕ್ರಮದ ಬಗ್ಗೆ:

  • ಇದು ಮಹಿಳೆಯರ ಸುರಕ್ಷತೆ, ರಕ್ಷಣೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಮೀಸಲಾದ ಒಂದು ಪ್ರಮುಖ ಯೋಜನೆಯಾಗಿದೆ. ಇದನ್ನು 2 ಉಪ- ಯೋಜನೆಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ,
  1. ಸಂಬಲ್ (ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ)
  2. ಸಾಮರ್ಥ್ಯ (ಮಹಿಳೆಯರ ಸಬಲೀಕರಣ)
  1. ಸಂಬಲ್ (ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ):
  • “ಸಖಿ” – ಒಂದೇ ಸ್ಥಳದಲ್ಲೇ ಎಲ್ಲಾ ಸೇವೆಗಳನ್ನು ಒದಗಿಸುವ ಕೇಂದ್ರಗಳು (OSC):- ಹಿಂಸೆಗೆ ಒಳಗಾದ ಸಂತ್ರಸ್ತೆಯರಿಗೆ ಸಮಗ್ರ ಬೆಂಬಲ ನೀಡುವುದು.
  • ಮಹಿಳಾ ಸಹಾಯವಾಣಿ (181):- 24/7 ತುರ್ತು ನೆರವು ಒದಗಿಸುವುದು.
  • “ಬೇಟಿ ಬಚಾವೋ ಬೇಟಿ ಪಢಾವೋ” (BBBP):- ಲಿಂಗ ಆಧಾರಿತ ಭ್ರೂಣ ಹತ್ಯೆ ತಡೆಗಟ್ಟುವಿಕೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು. 
  • ನಾರಿ ಅದಾಲತ್:- ಸಮುದಾಯ ಮಟ್ಟದ ಪರ್ಯಾಯ ವಿವಾದ ಪರಿಹಾರ ವೇದಿಕೆಗಳು.
  1. ಸಾಮರ್ಥ್ಯ (ಮಹಿಳೆಯರ ಸಬಲೀಕರಣ):
  • “ಶಕ್ತಿ ಸದನ”:- ಪುನರ್ವಸತಿ ಕೇಂದ್ರಗಳು (ಹಿಂದಿನ ಸ್ವಧಾರ್ ಗೃಹ ಮತ್ತು ಉಜ್ವಲ ಯೋಜನೆಗಳನ್ನು ವಿಲೀನಗೊಳಿಸಿ ರಚಿಸಲಾಗಿದೆ).
  • “ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ” (PMMVY): ಇದು ಹೆರಿಗೆ ಸೌಲಭ್ಯ ಯೋಜನೆಯಾಗಿದೆ.
  • ಮಹಿಳಾ ಸಬಲೀಕರಣ ಕೇಂದ್ರ (HEW):- ಇವು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ನೆರವಾಗುವ ಕೇಂದ್ರಗಳಾಗಿವೆ.

ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ

ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ರಷ್ಯಾದ ತೈಲ ಅಥವಾ ಯುರೇನಿಯಂ ಅನ್ನು ಉದ್ದೇಶಪೂರ್ವಕವಾಗಿ ಖರೀದಿಸುವ ರಾಷ್ಟ್ರಗಳ ಮೇಲೆ 500% ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕದ ಅಧ್ಯಕ್ಷರಿಗೆ ಅಧಿಕಾರ ನೀಡುವ ‘ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆ’ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅನುಮೋದನೆ ನೀಡಿದ್ದಾರೆ.

ಗ್ರಹಾಂ-ಬ್ಲೂಮೆಂತಾಲ್ ನಿರ್ಬಂಧಗಳ ಮಸೂದೆಯ ಬಗ್ಗೆ:

  • ಉದ್ದೇಶ:- ಚೀನಾ, ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಅಗ್ಗದ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಮಾಡಲು, ಈ ಮಸೂದೆಯು ಅಮೆರಿಕಕ್ಕೆ ಆ ದೇಶಗಳ ವಿರುದ್ಧ ಅಪಾರವಾದ ಹಿಡಿತವನ್ನು ಒದಗಿಸುತ್ತದೆ.
  • ಹಿನ್ನೆಲೇ:- 2018ರಲ್ಲಿ, ಹಿಂದಿನ ಟ್ರಂಪ್ ಆಡಳಿತದ ಇದೇ ರೀತಿಯ ಒತ್ತಡದ ಪರಿಣಾಮವಾಗಿ, ಭಾರತವು ಇರಾನ್ ಮತ್ತು ವೆನೆಜುವೆಲಾದಿಂದ ತನ್ನ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. 

ಭಾರತದ ಮೇಲಿನ ಸುಂಕಗಳು: 

  • 50% ರಷ್ಟು ಅಧಿಕ ಸುಂಕ:- ಅಮೆರಿಕ ಸಂಯುಕ್ತ ರಾಷ್ಟ್ರವು ಭಾರತದ ಸರಕುಗಳ ಮೇಲೆ 50% ರಷ್ಟು ಅಧಿಕ ಸುಂಕಗಳನ್ನು ವಿಧಿಸಿದೆ.
  • ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದರ ಪರಿಣಾಮವಾಗಿ, ಈ ಸುಂಕವು ಇದರ ಒಂದು ಭಾಗವಾಗಿದೆ.

ಭಾರತದ ನಿಲುವು:

  • ರಾಷ್ಟ್ರೀಯ ಹಿತಾಸಕ್ತಿ:- ರಷ್ಯಾದಿಂದ ತೈಲವನ್ನು ಖರೀದಿಸುವ ನಿರ್ಧಾರವು ‘ರಾಷ್ಟ್ರೀಯ ಹಿತಾಸಕ್ತಿ’ಯನ್ನು ಆಧರಿಸಿದೆ ಎಂದು ಭಾರತ ಪ್ರತಿಪಾದಿಸಿದೆ.
  • ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ತನ್ನ ಜನರಿಗೆ ಕೈಗೆಟುಕುವ ದರದಲ್ಲಿ ಇಂಧನವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಸ್ಪೈನಾ ಬಿಫಿಡಾ (Spina Bifida)

ಸಾಮಾನ್ಯ ಅಧ್ಯಯನ-2/ ಆರೋಗ್ಯ

ಇದೀಗ ಸುದ್ದಿಯಲ್ಲಿದೆ:

  • ಫೋಲಿಕ್ ಆಮ್ಲದ ಪೂರಕ ಸೇವನೆಯ ಮೂಲಕ ‘ಸ್ಪೈನಾ ಬಿಫಿಡಾ’ ದೋಷವನ್ನು ತಡೆಗಟ್ಟಲು, ಹಲವು ರಾಷ್ಟ್ರಗಳು ರಾಷ್ಟ್ರೀಯ ಜಾಗೃತಿ ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.

‘ಸ್ಪೈನಾ ಬಿಫಿಡಾ’ ದೋಷದ ಬಗ್ಗೆ:

  • ಬೆನ್ನುಹುರಿಯ ಒಂದು ಜನ್ಮಜಾತ ದೋಷ:- ಕಾರಣ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ನರ ಕೊಳವೆ ಸರಿಯಾಗಿ ಮುಚ್ಚಲ್ಪಡದಿರುವುದರಿಂದ ಉಂಟಾಗುವ ದೋಷವಾಗಿದೆ.
  • ದೈಹಿಕ ವೈಫಲ್ಯ:- ಈ ದೋಷವು ಪಾದಗಳ ಸೌಮ್ಯ ದೌರ್ಬಲ್ಯದಿಂದ ಹಿಡಿದು, ದೇಹದ ಕೆಳಭಾಗದ ಅಂಗಗಳ ಸಂಪೂರ್ಣ ಪಾರ್ಶ್ವವಾಯುವಿನವರೆಗೆ ವಿವಿಧ ಹಂತದ ದೈಹಿಕ ವೈಫಲ್ಯಗಳಿಗೆ ಕಾರಣವಾಗಬಹುದು.
  • ಪರಿಣಾಮ:- ಇದರಿಂದ ಬಳಲುವ ಅನೇಕ ಮಕ್ಕಳು ಹೈಡ್ರೋಸೆಫಾಲಸ್ (ಮೆದುಳಿನಲ್ಲಿ ದ್ರವ ತುಂಬಿಕೊಳ್ಳುವುದು), ಮಲ ಮತ್ತು ಮೂತ್ರ ವಿಸರ್ಜನೆಯ ಮೇಲಿನ ನಿಯಂತ್ರಣ ಕಳೆದುಕೊಳ್ಳುವಿಕೆ ಮತ್ತು ವಕ್ರಪಾದ (ಕ್ಲಬ್‌ಫೂಟ್‌) ದಂತಹ  ಮೂಳೆ ಸಂಬಂಧಿತ ವಿರೂಪಗಳ ಸಮಸ್ಯೆಗಳನ್ನು ಎದುರಿಸುತ್ತಾರೆ.

ತಡೆಗಟ್ಟುವಿಕೆಯಲ್ಲಿ ಫೋಲಿಕ್ ಆಮ್ಲದ ಪಾತ್ರ:

  • 70% ಕ್ಕೂ ಹೆಚ್ಚು ಸ್ಪೈನಾ ಬಿಫಿಡಾ ಪ್ರಕರಣಗಳನ್ನು ತಡೆಗಟ್ಟಬಹುದು:- ಗರ್ಭಧಾರಣೆಗೂ ಮುನ್ನ ಮತ್ತು ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಫೋಲಿಕ್ ಆಮ್ಲವನ್ನು ಸೇವಿಸುವುದರಿಂದ 70% ಕ್ಕೂ ಹೆಚ್ಚು ಸ್ಪೈನಾ ಬಿಫಿಡಾ ಪ್ರಕರಣಗಳನ್ನು ತಡೆಗಟ್ಟಬಹುದು.
  • ‘ಬಿ-ಕಾಂಪ್ಲೆಕ್ಸ್’ ಜೀವಸತ್ವ:- ಫೋಲಿಕ್ ಆಮ್ಲವು ‘ಬಿ-ಕಾಂಪ್ಲೆಕ್ಸ್’ ಗುಂಪಿಗೆ ಸೇರಿದ ಜೀವಸತ್ವವಾಗಿದ್ದು, ಭ್ರೂಣದಲ್ಲಿ ನರ ಕೊಳವೆಯ ಬೆಳವಣಿಗೆಗೆ ಇದು ಅತ್ಯಗತ್ಯವಾಗಿದೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ ಅಮೆರಿಕದ ನಿರ್ಗಮನ

ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಅಮೆರಿಕ ಸಂಯುಕ್ತ ರಾಷ್ಟ್ರವು ಅಂತರರಾಷ್ಟ್ರೀಯ ಸೌರ ಒಕ್ಕೂಟದಿಂದ (ISA) ನಿರ್ಗಮಿಸುವುದಾಗಿ ಘೋಷಿಸಿದೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA)ದ ಬಗ್ಗೆ:

  • ಭಾರತದ ನೇತೃತ್ವದ ಉಪಕ್ರಮ:- ಇದನ್ನು ನವೆಂಬರ್ 30, 2015 ರಂದು ಪ್ಯಾರಿಸ್‌ನಲ್ಲಿ ಭಾರತದ ಪ್ರಧಾನ ಮಂತ್ರಿಗಳು ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ ಉದ್ಘಾಟಿಸಿದರು/ಸ್ಥಾಪಿಸಿದರು.
  • ಸೌರಶಕ್ತಿ ಹೇರಳ ರಾಷ್ಟ್ರಗಳು:- ಇದು ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಸಂಪೂರ್ಣವಾಗಿ ಅಥವಾ ಭಾಗಶಃ ನೆಲೆಗೊಂಡಿರುವ, ಸೌರ ಸಂಪನ್ಮೂಲವು ಹೇರಳವಾಗಿರುವ 124 ರಾಷ್ಟ್ರಗಳನ್ನು ಒಳಗೊಂಡಿರುವ ಒಂದು ಉಪಕ್ರಮವಾಗಿದೆ.
  • ಉದ್ದೇಶ:- ಸದಸ್ಯ ರಾಷ್ಟ್ರಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವಲ್ಲಿ ಎದುರಾಗುವ ಪ್ರಮುಖ ಸಾಮಾನ್ಯ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸುವುದು.
  • ಕೇಂದ್ರ ಕಚೇರಿ:- ಗುರುಗ್ರಾಮದಲ್ಲಿರುವ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE)
  • ಸದಸ್ಯತ್ವ:- ISAಯ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿ ಮತ್ತು ಅದನ್ನು ದೃಢೀಕರಿಸಿದ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ.
  • ಪ್ರಸ್ತುತ, 120 ದೇಶಗಳು ISA ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿವೆ.

ಕಡಲ ಆಮೆಗಳ ಸಂರಕ್ಷಣೆಗೆ ನೆರವಾಗುವ ಸ್ಯಾಟಲೈಟ್ ಟ್ಯಾಗಿಂಗ್

ಸಾಮಾನ್ಯ ಅಧ್ಯಯನ-3/ ಸುದ್ದಿಯಲ್ಲಿರುವ ಪ್ರಭೇದಗಳು

ಇದೀಗ ಸುದ್ದಿಯಲ್ಲಿದೆ:

  • ಸಂರಕ್ಷಣಾ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ಎರಡು ವರ್ಷಗಳ (2025–27) ದೂರಮಾಪನ (ಟೆಲಿಮೆಟ್ರಿ) ಅಧ್ಯಯನದ ಭಾಗವಾಗಿ, ಚೆನ್ನೈ ಕರಾವಳಿಯಲ್ಲಿ ಮೊಟ್ಟೆಯಿಡುವ “ಆಲಿವ್ ರಿಡ್ಲಿ ಕಡಲ ಆಮೆ”ಗಳಿಗೆ ಇದೇ ಮೊದಲ ಬಾರಿಗೆ ಸ್ಯಾಟಲೈಟ್ ಟ್ಯಾಗ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ.
  • ಇದು ಪ್ರಮುಖ ತಾಣಗಳಲ್ಲಿ ಆಮೆಗಳ ಚಲನವಲನಗಳು, ಮೊಟ್ಟೆಯಿಡುವ ವರ್ತನೆ, ವಲಸೆ ಮಾರ್ಗಗಳು ಮತ್ತು ಮೀನುಗಾರಿಕೆ ಚಟುವಟಿಕೆಗಳೊಂದಿಗಿನ ಅವುಗಳ ಅಂತರಕ್ರಿಯೆಗಳನ್ನು ಪತ್ತೆಹಚ್ಚುತ್ತದೆ.

ಆಲಿವ್ ರಿಡ್ಲಿ ಆಮೆಗಳ (ಲೆಪಿಡೊಚೆಲಿಸ್ ಒಲಿವಾಸಿಯಾ) ಬಗ್ಗೆ:

  • ಅತ್ಯಂತ ಚಿಕ್ಕದಾದ ಮತ್ತು ಅತ್ಯಂತ ಹೆಚ್ಚು ಸಂಖ್ಯೆ:- ಇವು ವಿಶ್ವದ ಎಲ್ಲಾ ಕಡಲ ಆಮೆಗಳ ಪೈಕಿ ಅತ್ಯಂತ ಚಿಕ್ಕದಾದ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಆಮೆಗಳಾಗಿವೆ.
  • ಈ ಹೆಸರು ಬರಲು ಕಾರಣ:- ತಮ್ಮ ಹೃದಯದ ಆಕಾರದ ಚಿಪ್ಪಿನ ಆಲಿವ್ ಹಸಿರು ಬಣ್ಣದಿಂದಾಗಿ ಇವುಗಳಿಗೆ ಈ ಹೆಸರು ಬಂದಿದೆ.
  • ಹಂಚಿಕೆ:- ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಬೆಚ್ಚಗಿನ ನೀರಿನಲ್ಲಿ ವಾಸಿಸುತ್ತವೆ.
  • ಮಾಂಸಾಹಾರಿಗಳು:- ಮುಖ್ಯವಾಗಿ ಜೆಲ್ಲಿ ಮೀನು, ಸೀಗಡಿ ಇತ್ಯಾದಿಗಳನ್ನು ಸೇವಿಸುತ್ತವೆ.
  • ‘ಅರಿಬಾಡ’:- ಸಾವಿರಾರು ಹೆಣ್ಣು ಆಮೆಗಳು ಮೊಟ್ಟೆಯಿಡಲು ಒಂದೇ ಕಡಲತೀರದಲ್ಲಿ ಒಟ್ಟಿಗೆ ಸೇರುವ ‘ಅರಿಬಾಡ’ ಎಂದು ಕರೆಯಲ್ಪಡುವ ವಿಶಿಷ್ಟ ಸಾಮೂಹಿಕ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಈ ಆಮೆಗಳು ಹೆಸರುವಾಸಿಯಾಗಿವೆ.
  • ಭಾರತದಲ್ಲಿರುವ ಪ್ರಮುಖ ಮೊಟ್ಟೆಯಿಡುವ ತಾಣಗಳು:- 
  • ಋಷಿಕುಲ್ಯ ರೂಕರಿ ಕರಾವಳಿ (ಒಡಿಶಾ),
  • ಗಹಿರ್ಮಾತಾ ಕಡಲತೀರ (ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನ) 
  • ದೇಬಿ ನದಿಯ ಮುಖಜ ಭೂಮಿ.
  • ಒಡಿಶಾ ರಾಜ್ಯವು ಆಲಿವ್ ರಿಡ್ಲಿ ಆಮೆಗಳ ವಿಶ್ವದ ಅತಿದೊಡ್ಡ ಸಾಮೂಹಿಕ ಮೊಟ್ಟೆಯಿಡುವ ತಾಣವಾಗಿದೆ.
  • ಸಂರಕ್ಷಣಾ ಸ್ಥಾನಮಾನ:
    • IUCN ಕೆಂಪು ಪಟ್ಟಿ: ದುರ್ಬಲ (VU)
    • CITES: ಅನುಸೂಚಿ I

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts