ಪಂಡಿತ ಚನ್ನುಲಾಲ್ ಮಿಶ್ರಾ | ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS) | ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳು | H125 ಹೆಲಿಕಾಪ್ಟರ್‌ಗಳು | ಲಡಾಖ್ ನ ಪ್ರತಿನಿಧಿಗಳು 371 ನೇ ವಿಧಿಯ ನಿಯಮಗಳನ್ನು ನೀಡಿದರು | ಕೇಂದ್ರ ಲೋಕಸೇವಾ ಆಯೋಗ (UPSC) ಕ್ಕೇ 100 ವರ್ಷಗಳು: ಅರ್ಹತಾಪ್ರಧಾನತೆಯ ರಕ್ಷಕ (ಕಾವಲುಗಾರ)

ಪಂಡಿತ ಚನ್ನುಲಾಲ್ ಮಿಶ್ರಾ

ಸುದ್ದಿಯಲ್ಲಿರುವ ವ್ಯಕ್ತಿ

ಸಂದರ್ಭ:

  • ಪದ್ಮವಿಭೂಷಣ ಪಂಡಿತ ಚನ್ನುಲಾಲ್ ಮಿಶ್ರಾ ಜಿ ಅವರ ನಿಧನದಿಂದ ಪ್ರಧಾನಮಂತ್ರಿ ಅವರು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ .

ಪಂಡಿತ ಚನ್ನುಲಾಲ್ ಮಿಶ್ರಾ (1936–2025) ಅವರ ಕುರಿತು:

  • ಜನನ: ಆಗಸ್ಟ್ 3, 1936 ರಂದು ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಜನಿಸಿದರು.
  • ಅವರು ಪ್ರಸಿದ್ಧ ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿದ್ದರು.
  • ಖಯಾಲ್, ಕಿರಾಣಾ ಘರಾನಾ, ಥುಮ್ರಿ, ದಾದ್ರಾ ಮತ್ತು ಭಜನೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
  • ಪ್ರಮುಖ ಗೌರವಗಳು: ಪದ್ಮಭೂಷಣ (2010), ಪದ್ಮವಿಭೂಷಣ (2020), ಸಂಗೀತ ನಾಟಕ ಅಕಾಡೆಮಿ ಶಿಷ್ಯವೇತನ (ಫೆಲೋಶಿಪ್).
  • ಪರಂಪರೆ: ಅವರು ರಿಯಾಜ್‌ನಲ್ಲಿ ಕಠಿಣ ಶಿಸ್ತು ಮತ್ತು ನಿಖರತೆಗೆ ಆಳವಾದ ಭಕ್ತಿಗೆ ಹೆಸರುವಾಸಿಯಾಗಿದ್ದಾರೆ.

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS)

ಸಾಮಾನ್ಯ ಅಧ್ಯಯನ-2/ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚೆಗೆ, ಪೋಲೆಂಡ್ €4.7 ಬಿಲಿಯನ್ ಯುರೋ ಹೂಡಿಕೆಯೊಂದಿಗೆ ನ್ಯಾಟೋದ ನಳಿಕೆ ಮಾರ್ಗ (ಪೈಪ್‌ಲೈನ್) ವ್ಯವಸ್ಥೆ (NPS) ಗೆ ಸೇರುವ ಯೋಜನೆಯನ್ನು ಘೋಷಿಸಿತು.

ನ್ಯಾಟೋದ ನಳಿಕೆ ಮಾರ್ಗ ವ್ಯವಸ್ಥೆ/ NATO Pipeline System (NPS):

  • ಉದ್ದೇಶ:- ಇದನ್ನು ಶೀತಲ ಸಮರದ ಸಮಯದಲ್ಲಿ ಸ್ಥಾಪಿಸಲಾಯಿತು. ಇದು ಆಧುನಿಕ ನಮ್ಯತೆಯೊಂದಿಗೆ ನ್ಯಾಟೋ ಪಡೆಗಳಿಗೆ ಇಂಧನ ಮತ್ತು ಜಿಗಿಯ ಎಣ್ಣೆ (ಲೂಬ್ರಿಕಂಟ್‌) ಗಳನ್ನು ಪೂರೈಸುತ್ತದೆ.
  • 12 ದೇಶಗಳಲ್ಲಿ ಸುಮಾರು 10,000 ಕಿ.ಮೀ.ಗಳಷ್ಟು ವ್ಯಾಪಿಸಿದೆ, 4.1 ಮಿಲಿಯನ್ ಘನ ಮೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ ಮತ್ತು ಡಿಪೋಗಳು, ವಾಯುನೆಲೆಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾಗಾರಗಳು ಮತ್ತು ಸಾರಿಗೆ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಯ ಬಗ್ಗೆ:

  • ಉತ್ತರ ಅಟ್ಲಾಂಟಿಕ್ ಮೈತ್ರಿ, ಎಂತಲು ಕರೆಯಲ್ಪಡುವ ನ್ಯಾಟೋ, ಒಂದು ಅಂತರಸರ್ಕಾರಿ ಸೇನಾ ಮೈತ್ರಿಕೂಟವಾಗಿದೆ.
  • ಪ್ರಧಾನ ಕಚೇರಿ:- ಬ್ರಸೆಲ್ಸ್, ಬೆಲ್ಜಿಯಂ
  • ಹಿನ್ನೆಲೆ:- ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟದ ದಾಳಿಯ ವಿರುದ್ಧ ಸಾಮೂಹಿಕ ಭದ್ರತೆಯನ್ನು ಒದಗಿಸಲು 1949 ರಲ್ಲಿ ವಾಷಿಂಗ್ಟನ್, ಡಿಸಿಯಲ್ಲಿ ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ (ವಾಷಿಂಗ್ಟನ್ ಒಪ್ಪಂದ) ಸಹಿ ಹಾಕುವ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕದ 12 ದೇಶಗಳು ಇದನ್ನು ಸ್ಥಾಪಿಸಿದವು.
  • ಸಾಮೂಹಿಕ ರಕ್ಷಣೆ:- ವಿಧಿ 5 ರ ಪ್ರಕಾರ, ನ್ಯಾಟೋ ಸಂಸ್ಥೆ ಸಾಮೂಹಿಕ ರಕ್ಷಣೆಯ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಇಲ್ಲಿ ಯಾವುದೇ ನ್ಯಾಟೋ ಸದಸ್ಯರ ಮೇಲಿನ ದಾಳಿಯನ್ನು ಎಲ್ಲಾ ನ್ಯಾಟೋ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ, 2001 ರಲ್ಲಿ ಅಮೇರಿಕಾದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆಯಾಗಿ ವಿಧಿ  5 ಅನ್ನು ಒಮ್ಮೆ ಮಾತ್ರ ಬಳಸಲಾಗಿದೆ.
  • ಸದಸ್ಯ ರಾಷ್ಟ್ರಗಳು:- ಇದು 32 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸ್ವೀಡನ್ 32 ನೇ ಸದಸ್ಯ ರಾಷ್ಟ್ರವಾಯಿತು.

ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳು

ಸಾಮಾನ್ಯ ಅಧ್ಯಯನ-3/ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ:

  • 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ (PMDDKY) ಯ ಅಡಿಯಲ್ಲಿ 100 ಮಹತ್ವಾಕಾಂಕ್ಷೆಯ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರವು ಘೋಷಿಸಿತು.
  • ಉತ್ತರ ಪ್ರದೇಶ 12 ಜಿಲ್ಲೆಗಳೊಂದಿಗೆ ಮೂoಚೂಣೆಯಲ್ಲಿದ್ದರೆ, ಮಹಾರಾಷ್ಟ್ರ (9), ಮಧ್ಯಪ್ರದೇಶ ಮತ್ತು ರಾಜಸ್ಥಾನ (ತಲಾ 8) ಮತ್ತು ಬಿಹಾರ (7) ನಂತರದ ಸ್ಥಾನಗಳಲ್ಲಿವೆ.

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ಬಗ್ಗೆ:

  • ಈ ಯೋಜನೆಯನ್ನು 2025 ರಲ್ಲಿ ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಯಿತು.

ಪ್ರಮುಖ ಗಮನಾರ್ಹ ಕ್ಷೇತ್ರಗಳು: 

  • ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
  • ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸುವುದು.
  • ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆಯನ್ನು ವಿಸ್ತರಿಸುವುದು.
  • ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು.
  • ದೀರ್ಘಾವಧಿ ಮತ್ತು ಅಲ್ಪಾವಧಿಯ ಕೃಷಿ ಸಾಲವನ್ನು ಸುಗಮಗೊಳಿಸುವುದು.

ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮವನ್ನು ನಿರ್ಮಿಸುವುದು:

  • ಉದ್ದೇಶ:- ಕೃಷಿಯಲ್ಲಿನ ಕಡಿಮೆ ಉದ್ಯೋಗವನ್ನು ಪರಿಹರಿಸಲು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗಿದೆ.
  • ಪ್ರಮುಖ ಗಮನಾರ್ಹ ಕ್ಷೇತ್ರಗಳು:- ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಕೌಶಲ್ಯ, ಹೂಡಿಕೆ ಮತ್ತು ತಂತ್ರಜ್ಞಾನ. ಸುಧಾರಿತ ಉತ್ಪಾದಕತೆ ಮತ್ತು ಗೋದಾಮಿನೊಂದಿಗೆ ಕೃಷಿಯನ್ನು ಆಧುನೀಕರಿಸುವುದು. 
  • ಗುರುತು ಪಡಿಸಿದ ಫಲಾನುಭವಿಗಳು : ಗ್ರಾಮೀಣ ಮಹಿಳೆಯರು, ಯುವ ರೈತರು, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಭೂಹೀನ ಕುಟುಂಬಗಳು.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮ (ADP) ದ ಬಗ್ಗೆ:

  • ಇದನ್ನು, 2018 ರಲ್ಲಿ ಪ್ರಾರಂಭಿಸಲಾಯಿತು.
  • ಉದ್ದೇಶ:- ಇದು ದೇಶದ 112 ಸಾಮಾಜಿಕ-ಆರ್ಥಿಕವಾಗಿ ಅಭಿವೃದ್ಧಿಯಾಗದ ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
  • ಅನುಷ್ಠಾನ ಸಂಸ್ಥೆ:- ನೀತಿ ಆಯೋಗ

H125 ಹೆಲಿಕಾಪ್ಟರ್‌ಗಳು

ಸಾಮಾನ್ಯ ಅಧ್ಯಯನ -3 / ರಕ್ಷಣಾ ವ್ಯವಸ್ಥೆ

ಸಂದರ್ಭ:

  • ಭಾರತದಲ್ಲಿ ನಿರ್ಮಿಸಲಾದ H125 ಯುಟಿಲಿಟಿ (ಉಪಯುಕ್ತತೆ) ಹೆಲಿಕಾಪ್ಟರ್‌ಗಾಗಿ ಅಂತಿಮ ಜೋಡಣೆ ಮಾರ್ಗವನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜೊತೆ ಪಾಲುದಾರಿಕೆಯಲ್ಲಿ ಏರ್‌ಬಸ್ ಹೆಲಿಕಾಪ್ಟರ್‌ಗಳು ಕರ್ನಾಟಕದ ವೇಮಗಲ್‌ನಲ್ಲಿ ಸ್ಥಾಪಿಸಲಾಗುತ್ತಿದೆ.

H125 ಹೆಲಿಕಾಪ್ಟರ್‌ಗಳ ಬಗ್ಗೆ:

  • ಏರ್‌ಬಸ್ H125 ಒಂದು ಹಗುರವಾದ, ಏಕ-ಎಂಜಿನ್ ಹೊಂದಿರುವ ಉಪಯುಕ್ತತಾ ಹೆಲಿಕಾಪ್ಟರ್ ಆಗಿದೆ.
  • ಹೆಚ್ಚಿನ ಎತ್ತರ ಮತ್ತು ಹೆಚ್ಚಿನ ತಾಪಮಾನದ ಪರಿಸ್ಥಿತಿಗಳಲ್ಲಿ ಬಹುಮುಖತೆ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ .
  • H125 ಅನ್ನು ಹಿಂದೆ ಯೂರೋಕಾಪ್ಟರ್ AS350 ಎಂದು ಕರೆಯಲಾಗುತ್ತಿತ್ತು.
  • ತುರ್ತು ವೈದ್ಯಕೀಯ ಸೇವೆಗಳು, ಪ್ರವಾಸೋದ್ಯಮ, ವಿಪತ್ತು ನಿರ್ವಹಣೆ ಮತ್ತು ಕಾನೂನು ಜಾರಿ ಮುಂತಾದ ನಾಗರಿಕ ಅಗತ್ಯಗಳನ್ನು ಪೂರೈಸುತ್ತದೆ ,
  • ಇದರ ಸೇನಾ ಆವೃತ್ತಿ (H125M) ಭಾರತದ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ಹಿಮಾಲಯದಂತಹ ಎತ್ತರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದೆ.

ಲಡಾಖ್ ನ ಪ್ರತಿನಿಧಿಗಳು 371 ನೇ ವಿಧಿಯ ನಿಯಮಗಳನ್ನು ನೀಡಿದರು

ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ

ಸಂದರ್ಭ:

  • ಲಡಾಖ್‌ನ ಎರಡು ಪ್ರಮುಖ ಸಾಮಾಜಿಕ-ರಾಜಕೀಯ ಸಂಘ/ಸಂಸ್ಥೆಗಳಾದ ಲೆಹ್ ಸರ್ವೋಚ್ಚ ಸಂಸ್ಥೆ  (LAB) ಮತ್ತು ಕಾರ್ಗಿಲ್ ಪ್ರಜಾತಾಂತ್ರಿಕ ಮೈತ್ರಿ (KDA) ಗಳು ಪೂರ್ಣ ರಾಜ್ಯದ ಸ್ಥಾನಮಾನ ಮತ್ತು ಆರನೇ ಅನುಸೂಚಿಯ ಕುರಿತು ಗೃಹ ವ್ಯವಹಾರಗಳ ಸಚಿವಾಲಯ (MHA) ದ ಜೊತೆ ಮಾತುಕತೆಗಳನ್ನು ಪುನರಾರಂಭಿಸಲು ನಿರ್ಧರಿಸಿದವು. 
  • ಆರನೇ ಅನುಸೂಚಿಯ ಸ್ಥಾನಮಾನಕ್ಕೆ ಸಂಭಾವ್ಯ ಪರ್ಯಾಯವಾಗಿ ಸಂವಿಧಾನದ 371 ನೇ ವಿಧಿಯ ಅಡಿಯಲ್ಲಿ ವಿಶೇಷ ನಿಬಂಧನೆಗಳನ್ನು ಕೇಂದ್ರವು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.

ಹಿನ್ನೆಲೆ:

  • ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಯಿತು. ಲಡಾಖ್ ವಿಧಾನ ಸಭೆಯಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ಉಳಿದಿದೆ.
  • ಲಡಾಖ್‌ನ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ಲಡಾಖ್‌ನ ಹಲವಾರು ರಾಜಕೀಯ ಗುಂಪುಗಳು ಲಡಾಖ್‌ನ ಭೂಮಿ, ಉದ್ಯೋಗ ಮತ್ತು ಸಾಂಸ್ಕೃತಿಕ ಗುರುತನ್ನು ಆರನೇ ಅನುಸೂಚಿಯ ಅಡಿಯಲ್ಲಿ ರಕ್ಷಿಸಬೇಕೆಂದು ಒತ್ತಾಯಿಸುತ್ತಿವೆ.
  • 2019 ರಲ್ಲಿ, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ಲಡಾಖ್ ಅನ್ನು ಆರನೇ ಅನುಸೂಚಿಯ ಅಡಿಯಲ್ಲಿ ಸೇರಿಸಲು ಶಿಫಾರಸು ಮಾಡಿತು.

ಸಂವಿಧಾನದ ಆರನೇ ಅನುಸೂಚಿಯ ಬಗ್ಗೆ:

  • ಸಂವಿಧಾನದ ವಿಧಿ 244 ರ ಅಡಿಯಲ್ಲಿ ಆರನೇ ಅನುಸೂಚಿಯು ಸ್ವಾಯತ್ತ ಆಡಳಿತ ವಿಭಾಗಗಳ ರಚನೆಗೆ ಅವಕಾಶ ನೀಡುತ್ತದೆ – ಸ್ವಾಯತ್ತ ಜಿಲ್ಲಾ ಮಂಡಳಿಗಳು (ADCs), ಇವುಗಳಿಗೆ ರಾಜ್ಯದೊಳಗೆ ಕೆಲವು ಶಾಸಕಾಂಗ, ನ್ಯಾಯಾಂಗ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುತ್ತವೆ.
  • ಈ ಅನುಸೂಚಿಯು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲಿನ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಒಳಗೊಂಡಿದೆ.
  • ಈ ಅನುಸೂಚಿಯು ಸ್ವಾಯತ್ತ ಪ್ರಾದೇಶಿಕ ಮಂಡಳಿ (ARC) ಮತ್ತು ಸ್ವಾಯತ್ತ ಜಿಲ್ಲಾ ಮಂಡಳಿ (ADC) ಗಳಿಗೆ ಭೂ ಕಂದಾಯವನ್ನು ಸಂಗ್ರಹಿಸುವ, ತೆರಿಗೆಗಳನ್ನು ವಿಧಿಸುವ, ಹಣ ಸಾಲ ಮತ್ತು ವ್ಯಾಪಾರವನ್ನು ನಿಯಂತ್ರಿಸುವ, ತಮ್ಮ ಪ್ರದೇಶಗಳಲ್ಲಿ ಖನಿಜಗಳನ್ನು ಹೊರತೆಗೆಯಲು ಪರವಾನಗಿಗಳು ಅಥವಾ ಗುತ್ತಿಗೆಗಳಿಂದ ರಾಯಧನವನ್ನು ಸಂಗ್ರಹಿಸುವ ಮತ್ತು ಶಾಲೆಗಳು, ಮಾರುಕಟ್ಟೆಗಳು ಮತ್ತು ರಸ್ತೆಗಳಂತಹ ಸಾರ್ವಜನಿಕ ಸೌಲಭ್ಯಗಳನ್ನು ಸ್ಥಾಪಿಸುವ ಅಧಿಕಾರವನ್ನು ನೀಡುತ್ತದೆ.

ಸಂವಿಧಾನದ ವಿಧಿ 371 ನೇ ಅಡಿಯಲ್ಲಿ ನೀಡಲಾಗುವ ಸಂರಕ್ಷಣೆಗಳು:

  • ಸಂವಿಧಾನದ ವಿಧಿ 371 ಮತ್ತು 371-A ಯಿಂದ 371-J ವರೆಗಿನ ವಿಧಿಗಳು ನಿರ್ದಿಷ್ಟ ರಾಜ್ಯಗಳಿಗೆ “ವಿಶೇಷ ನಿಬಂಧನೆಗಳನ್ನು” ಒದಗಿಸುತ್ತವೆ, ಆಗಾಗ್ಗೆ ಕೆಲವು ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳಿಗೆ ಪ್ರಾತಿನಿಧ್ಯವನ್ನು ನೀಡುತ್ತವೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಸ್ತಕ್ಷೇಪವಿಲ್ಲದೆ ಈ ಗುಂಪುಗಳು ತಮ್ಮ ವ್ಯವಹಾರಗಳ ಮೇಲೆ ಸ್ವಾಯತ್ತತೆಯನ್ನು ಚಲಾಯಿಸಲು ಅನುವು ಮಾಡಿಕೊಡುತ್ತವೆ.
  • 371 ನೇ ವಿಧಿಯ ಅಡಿಯಲ್ಲಿನ ವಿಶೇಷ ನಿಬಂಧನೆಗಳು ಲಡಾಖ್‌ನ ಸ್ಥಳೀಯ ಜನರಿಗೆ ಸಂರಕ್ಷಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.

ಕೇಂದ್ರ ಲೋಕಸೇವಾ ಆಯೋಗ (UPSC) ಕ್ಕೇ 100 ವರ್ಷಗಳು: ಅರ್ಹತಾಪ್ರಧಾನತೆಯ ರಕ್ಷಕ (ಕಾವಲುಗಾರ)

ಸಾಮಾನ್ಯ ಅಧ್ಯಯನ-2/ರಾಜಕೀಯ ಮತ್ತು ಆಡಳಿತ

ಸಂದರ್ಭ:

  • ಕೇಂದ್ರ ಲೋಕಸೇವಾ ಆಯೋಗ (UPSC) ವು ಅಕ್ಟೋಬರ್ 1 ರಂದು ಸ್ಥಾಪನೆಯಾಗಿ ಶತಮಾನ ಪೂರೈಸುತ್ತಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) ದ ಬಗ್ಗೆ:

  • ಸ್ಥಾಪನೆ:- 1919 ರ ಭಾರತ ಸರ್ಕಾರ ಕಾಯ್ದೆಯು ಮೊದಲು ಅಂತಹ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು ಮತ್ತು 1924 ರ ಲೀ ಆಯೋಗದ ಶಿಫಾರಸುಗಳನ್ನು ಅನುಸರಿಸಿ ಅಕ್ಟೋಬರ್‌ 1926 ರಲ್ಲಿ ಲೋಕಸೇವಾ ಆಯೋಗವನ್ನು ಸ್ಥಾಪಿಸಲಾಯಿತು.
  • ನಂತರ 1937 ರಲ್ಲಿ “ಸಂಘೀಯ (ಫೆಡರಲ್) ಲೋಕಸೇವಾ ಆಯೋಗ” ಎಂದು ಹೆಸರಿಸಲಾಯಿತು, ಇದನ್ನು ಜನವರಿ 26, 1950 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸುವುದರೊಂದಿಗೆ ಕೇಂದ್ರ ಲೋಕ ಸೇವಾ ಆಯೋಗ ಎಂದು ಮರುನಾಮಕರಣ ಮಾಡಲಾಯಿತು.
  • ಕಾರ್ಯಗಳು:- ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಇತರ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ.
  • ಸದಸ್ಯರ ಸಂಖ್ಯೆ:- ಅಧ್ಯಕ್ಷರ ಹೊರತಾಗಿ, ಇದು ಗರಿಷ್ಠ 10 ಸದಸ್ಯರನ್ನು ಹೊಂದಿರಬಹುದು.
  • ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರನ್ನು ಆರು ವರ್ಷಗಳ ಅವಧಿಗೆ ಅಥವಾ 65 ವರ್ಷ ವಯಸ್ಸಾಗುವವರೆಗೆ ನೇಮಿಸಲಾಗುತ್ತದೆ, ಎಲ್ಲಾ ಸದಸ್ಯರಿಗೂ ಒಂದೇ ಅವಧಿ ಇರುತ್ತದೆ.
  • ಮರು ನೇಮಕಾತಿ:- ಯುಪಿಎಸ್‌ಸಿ ಅಧ್ಯಕ್ಷರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ, ಆದರೆ ಎಲ್ಲಾ ಸದಸ್ಯರು ಯುಪಿಎಸ್‌ಸಿ ಅಥವಾ ಯಾವುದೇ ರಾಜ್ಯದ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಮರು ನೇಮಕಾತಿಗೆ ಅರ್ಹರಾಗಿರುತ್ತಾರೆ.
  • ತೆಗೆದುಹಾಕುವಿಕೆ (ವಿಧಿ 317): ರಾಷ್ಟ್ರಪತಿಗಳಿಂದ ಈ ಕೆಳಕಂಡ ಕಾರಣಗಳಿಗೆ ತೆಗೆದುಹಾಕಬಹುದು:
    1. ದುರ್ವರ್ತನೆಯ ಆಧಾರದ ಮೇಲೆ.
  • ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಉಲ್ಲೇಖ ಮಾಡುತ್ತಾರೆ.
  1. ದುರ್ವರ್ತನೆ ದೃಢೀಕರಿಸುವ ವರದಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕು.
  2. ಯಾವಾಗ ಸುಪ್ರೀಂ ಕೋರ್ಟ್ ವಿಚಾರಣೆಯಿಲ್ಲದೆ ಸದಸ್ಯರನ್ನು ತೆಗೆದುಹಾಕಬಹುದು:ದಿವಾಳಿ ಎಂದು ತೀರ್ಪು ನೀಡಿದ್ದರೆ, ಕಚೇರಿ ಕರ್ತವ್ಯಗಳ ಹೊರಗೆ ಸಂಬಳ ಪಡೆಯುವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ, ಮಾನಸಿಕ ಅಥವಾ ದೈಹಿಕ ದೌರ್ಬಲ್ಯದಿಂದಾಗಿ ಅನರ್ಹನಾಗಿದ್ದರೆ.

ನಾಗರಿಕ ಸೇವಾ ದಿನದ ಬಗ್ಗೆ:

  • ಪ್ರತಿ ವರ್ಷ ಏಪ್ರಿಲ್ 21 ರಂದು ನಾಗರಿಕ ಸೇವಾ ದಿನವನ್ನು ಆಚರಿಸಲಾಗುತ್ತದೆ.  
  • ಕಾರಣ:- 1947 ರಲ್ಲಿ ನವದೆಹಲಿಯ ಮೆಟ್‌ಕಾಲ್ಫ್ ಹೌಸ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮೊದಲ ಬ್ಯಾಚ್ ನಾಗರಿಕ ಸೇವಕರನ್ನುದ್ದೇಶಿಸಿ ಮಾತನಾಡಿದ ದಿನದ ಸ್ಮರಣಾರ್ಥ.
  • ನಾಗರಿಕ ಸೇವಕರನ್ನು “ಭಾರತದ ಉಕ್ಕಿನ ಚೌಕಟ್ಟು” ಎಂದು ಕರೆದ ಅವರು, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts