ನಯೀ ಚೇತನಾ 4.0
ಸಾಮಾನ್ಯ ಅಧ್ಯಯನ-2/ ಆರೋಗ್ಯ ಮತ್ತು ಸಮಾಜ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವ್ರಾಜ್ ಸಿಂಗ್ ಚೌಹಾಣ್ ಅವರು “ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ”ವನ್ನು ಉತ್ತೇಜಿಸುವ ಉದ್ದೇಶದಿಂದ ‘ನಯಿ ಚೇತನಾ 4.0’ ಎಂಬ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ನಯೀ ಚೇತನಾ 4.0 ಅಭಿಯಾನದ ಬಗ್ಗೆ:
- ಆಯೋಜಕರು:- ಇದು ಒಂದು ತಿಂಗಳ ಕಾಲ ನಡೆಯುವ ಅಭಿಯಾನವಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ವತಿಯಿಂದ ಆಯೋಜಿಸಲ್ಪಟ್ಟಿದೆ.
- ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು
- ಧ್ಯೇಯೋದ್ದೇಶ:- ಗ್ರಾಮೀಣ ಭಾರತದಲ್ಲಿ ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಸಮುದಾಯದ ಕ್ರಿಯೆಯನ್ನು ಬಲಪಡಿಸುವುದು ಹಾಗೂ ಮಹಿಳೆಯರ ಸುರಕ್ಷತೆ, ಘನತೆ ಮತ್ತು ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು.
- ಮಹತ್ವ:- ಈ ಅಭಿಯಾನವು ಮಹಿಳೆಯರ ಸುರಕ್ಷಿತ ಸಂಚಾರವನ್ನು ಸಕ್ರಿಯಗೊಳಿಸುವುದು, ಅವರನ್ನು ಪ್ರಮುಖ ಆರ್ಥಿಕ ಕೊಡುಗೆದಾರರೆಂದು ಗುರುತಿಸುವುದು ಮತ್ತು ಹಂಚಿಕೆಯ ಸಮುದಾಯ ಜವಾಬ್ದಾರಿಯ ಮೂಲಕ ಸಂಭಾವನೆ ರಹಿತ ಶುಶ್ರೂಷಾ ಕೆಲಸಗಳನ್ನು ಪರಿಹರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
RISE ಉಪಕ್ರಮ
ಸಾಮಾನ್ಯ ಅಧ್ಯಯನ-3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಐಐಟಿ ಖರಗ್ಪುರ “ಇಂಪ್ಯಾಕ್ಟ್ RISE” (R-ಸಂಶೋಧನೆ, I-ನಾವೀನ್ಯತೆ, S-ಕೌಶಲ್ಯ ಮತ್ತು E-ಉದ್ಯಮಶೀಲತೆ) ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ.
RISE ಉಪಕ್ರಮದ ಬಗ್ಗೆ:
- ಧ್ಯೇಯೋದ್ದೇಶ:- ಈ ಉಪಕ್ರಮವು ಸಾಮಾಜಿಕ ಪರಿವರ್ತನೆಗಾಗಿ ಸುಸ್ಥಿರ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳ ಮೇಲೆ ಕೇಂದ್ರೀಕರಿಸುತ್ತದೆ.
- ನಾಲ್ಕು ಪ್ರಮುಖ ಆಧಾರಸ್ಥಂಭಗಳು:– ಈ ಯೋಜನೆಯು ಸಂಶೋಧನೆ, ನಾವೀನ್ಯತೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಎಂಬ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿದೆ.
- ಮಹತ್ವ:- ಇದು ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಭಾರತದ ಹವಾಮಾನ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಸಂಶೋಧನೆಯನ್ನು ಒಳಗೊಂಡಿರುತ್ತದೆ.



ನಿಮ್ಮದೊಂದು ಉತ್ತರ