ತಪ್ಪು ಮಾಹಿತಿ ಮತ್ತು ದ್ವೇಷ ಭಾಷಣ ತಡೆಗೆ ಎಐ (AI) ಆಧಾರಿತ ತಂತ್ರಾಂಶ
ಇದೀಗ ಸುದ್ದಿಯಲ್ಲಿದೆ:
- ಡಿಜಿಟಲ್ ವೇದಿಕೆಗಳಲ್ಲಿ ದ್ವೇಷ ಭಾಷಣ, ಡೀಪ್‌ಫೇಕ್ ಮತ್ತು ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸುಧಾರಿತ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಾಂಶವನ್ನು ಅಳವಡಿಸಲು ಕರ್ನಾಟಕ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು:
- ಯೋಜನಾ ವೆಚ್ಚ:- ಈ ಉಪಕ್ರಮವನ್ನು ಅಂದಾಜು ₹67.26 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು.
- ಪ್ರಾಥಮಿಕ ಉದ್ದೇಶ:- ದುರುದ್ದೇಶಪೂರಿತ ನಿರೂಪಣೆಗಳು, ಉದ್ದೇಶಪೂರ್ವಕ ಸುಳ್ಳು ಮಾಹಿತಿ ಮತ್ತು ವಿಷಯಾಧಾರಿತ ತಿರುಚುವಿಕೆಗಳನ್ನು ಪತ್ತೆಹಚ್ಚುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಭದ್ರತೆಯನ್ನು ಸುದೃಢಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ..



ನಿಮ್ಮದೊಂದು ಉತ್ತರ