ಡಿಸೆಂಬರ್ ತಿಂಗಳ ವಸ್ತುನಿಷ್ಟ ಮಾದರಿಯ ಬಹು ಆಯ್ಕೆಯ ಪ್ರಶ್ನೋತ್ತರಗಳು

Practice Questions (Current Affairs From This Magazine)

1) ಹೆಚ್ಐವಿ ಹರಡುವಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸೊಳ್ಳೆಯು ಈ ಹಿಂದೆ ಹೆಚ್ಐವಿ ಲಕ್ಷಣವುಳ್ಳ ವ್ಯಕ್ತಿಯನ್ನು ಕಚ್ಚಿದ್ದರೆ, ಆ ಸೊಳ್ಳೆಯ ಕಚ್ಚುವಿಕೆಯಿಂದ ಹೆಚ್ಐವಿ ಹರಡಬಹುದು.
  2. ಲೈಂಗಿಕವಾಗಿ ಹರಡುವ ಇತರ ಸೋಂಕುಗಳ (STIs) ಉಪಸ್ಥಿತಿಯಿಂದಾಗಿ ಹೆಚ್ಐವಿ ಹರಡುವ ಅಪಾಯವು ಹೆಚ್ಚಾಗಬಹುದು.
  3. ಹೆಚ್ಐವಿ -ಪಾಸಿಟಿವ್ ತಾಯಿಯು ಎದೆಹಾಲು ಉಣಿಸುವುದರಿಂದ ಶಿಶುವಿಗೆ ಹೆಚ್ಐವಿ ಹರಡಬಹುದು.

ಮೇಲಿನ ಎಷ್ಟು ಹೇಳಿಕೆ/ಗಳು ಸರಿಯಾಗಿವೆ?

  1. ಕೇವಲ ಒಂದು
  2. ಕೇವಲ ಎರಡು
  3. ಮೂರೂ
  4. ಯಾವುದೂ ಅಲ್ಲ

ಉತ್ತರ:- B

 

2) ಈ ಕೆಳಗಿನ ಹೆಚ್ಐವಿ /ಏಡ್ಸ್ ಸಂಬಂಧಿತ ಉಪಕ್ರಮಗಳನ್ನು ಅವುಗಳ ಸರಿಯಾದ ವಿವರಣೆಗಳೊಂದಿಗೆ ಹೊಂದಿಸಿರಿ:

ಪಟ್ಟಿ – I (ಹೆಚ್ಐವಿ /ಏಡ್ಸ್ ಸಂಬಂಧಿತ ಉಪಕ್ರಮ)

ಪಟ್ಟಿ – II (ವಿವರಣೆ)

a. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ 

1. ಸೋಂಕಿತ ತಾಯಿಯಿಂದ ಮಗುವಿಗೆ ಹೆಚ್ಐವಿ ಹರಡುವುದನ್ನು ತಡೆಯುತ್ತದೆ.

b. ಪಿಪಿಟಿಸಿಟಿ (PPTCT) ಕಾರ್ಯಕ್ರಮ

2. ART ನಿಲ್ಲಿಸಿದ ‘ಹೆಚ್ಐವಿ’ಯೊಂದಿಗೆ ಬದುಕುತ್ತಿರುವ ಜನರನ್ನು ಮರುಸಂಯೋಜಿಸುವುದು.

c. ಮಿಷನ್ ಸಂಪರ್ಕ್

3. ಹೆಚ್ಐವಿ ನಿಯಂತ್ರಿಸಲು ಮತ್ತು ಚಿಕಿತ್ಸೆ ನೀಡಲು ಇರುವ ರಾಷ್ಟ್ರೀಯ ಕಾರ್ಯಕ್ರಮ; ಕೇಂದ್ರ ವಲಯದ ಯೋಜನೆ.

d. ಪ್ರಾಜೆಕ್ಟ್ ಆಕ್ಸಿಲರೇಟ್

4. ಹೆಚ್ಐವಿ -ಪಾಸಿಟಿವ್ ವ್ಯಕ್ತಿಗಳ ವಿರುದ್ಧದ ತಾರತಮ್ಯವನ್ನು ನಿಷೇಧಿಸುತ್ತದೆ.

e. ಹೆಚ್ಐವಿ /ಏಡ್ಸ್ ಕಾಯಿದೆ, 2017

5. ಸೇಫ್ ಜಿಂದಗಿ ಪೋರ್ಟಲ್ ಮೂಲಕ ಆನ್‌ಲೈನ್ ಹೆಚ್ಐವಿ ಸೇವೆಗಳು.

ಸರಿಯಾದ ಆಯ್ಕೆಯನ್ನು ಆರಿಸಿ:

  1. a-1, b-2, c-3, d-4, e-5
  2. a-2, b-3, c-4, d-1, e-5
  3. a-3, b-1, c-2, d-5, e-4
  4. a-1, b-3, c-2, d-4, e-5

ಉತ್ತರ: C

 

3). ಈ ಕೆಳಗಿನ ಪರಮಾಣು ವಿದ್ಯುತ್ ಸ್ಥಾವರಗಳ ಜೋಡಿಗಳನ್ನು ಅವುಗಳ ರಾಜ್ಯಗಳೊಂದಿಗೆ (ಸ್ಥಳ) ಹೊಂದಿಸಿರಿ:

ಪರಮಾಣು ವಿದ್ಯುತ್ ಸ್ಥಾವರಗಳು

ರಾಜ್ಯಗಳು (ಸ್ಥಳ)

a. ತಾರಾಪುರ

ರಾಜಸ್ಥಾನ

b. ಕೂಡಂಕುಲಂ

ತಮಿಳುನಾಡು

c. ಕಾಕ್ರಪಾರ್

ಗುಜರಾತ್

d. ರಾವತ್‌ಭಾಟ

ಮಹಾರಾಷ್ಟ್ರ

ಮೇಲಿನ ಎಷ್ಟು ಜೋಡಿಗಳು ಸರಿಯಾಗಿವೆ?

ಸರಿಯಾದ ಆಯ್ಕೆಯನ್ನು ಆರಿಸಿ:

  1. ಕೇವಲ ಒಂದು
  2. ಕೇವಲ ಎರಡು
  3. ಮೂರೂ
  4. ಎಲ್ಲವೂ

ಉತ್ತರ:- B

 

4) ಎಲ್ಲೋರಾ ಗುಹೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಎಲ್ಲೋರಾದಲ್ಲಿನ ಹಿಂದೂ ಗುಹೆಗಳನ್ನು ಬೌದ್ಧ ಗುಹೆಗಳಿಗಿಂತ ಮೊದಲೇ ಕೆತ್ತಲಾಗಿದೆ.
  2. ಎಲ್ಲೋರಾದಲ್ಲಿನ ಜೈನ ಗುಹೆಗಳು ಈ ತಾಣದ ವಾಸ್ತುಶಿಲ್ಪದ ಅಭಿವೃದ್ಧಿಯ ಅಂತಿಮ ಹಂತಕ್ಕೆ ಸೇರಿವೆ.
  3. ಎಲ್ಲೋರಾದಲ್ಲಿನ ಬಹುಪಾಲು ಗುಹೆಗಳು ಹಿಂದೂ ಗುಹೆಗಳಾಗಿವೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

ಉತ್ತರ: C

 

5). ನಾಗಾಲ್ಯಾಂಡ್‌ನ ಹಾರ್ನ್‌ಬಿಲ್ ಉತ್ಸವಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ನಾಗಾ ಬುಡಕಟ್ಟುಗಳ ವಲಸೆ ಇತಿಹಾಸದ ಸ್ಮರಣಾರ್ಥವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ.
  2. ಇದನ್ನು ವಾರ್ಷಿಕವಾಗಿ ನಾಗಾಲ್ಯಾಂಡ್ ಸರ್ಕಾರ ಸ್ಥಾಪಿಸಿದ ಪಾರಂಪರಿಕ ಗ್ರಾಮವಾದ ಕಿಸಾಮಾದಲ್ಲಿ ನಡೆಸಲಾಗುತ್ತದೆ.
  3. ಈ ಉತ್ಸವವು ಕಾಕತಾಳೀಯವಾಗಿ ನಾಗಾಲ್ಯಾಂಡ್‌ನ ರಾಜ್ಯೋತ್ಸವ ದಿನದಂದೇ ಜರುಗಿತು.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: C

 

6). ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಯುನೆಸ್ಕೋದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಮಂಡಳಿಯಾಗಿದೆ.
  2. ಯುನೆಸ್ಕೋ ಸಾಮಾನ್ಯ ಸಮ್ಮೇಳನದಿಂದ ಇದರ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
  3. ಯುನೆಸ್ಕೋದ ಎಲ್ಲಾ ಸದಸ್ಯ ರಾಷ್ಟ್ರಗಳು ಕಾರ್ಯಕಾರಿ ಮಂಡಳಿಯ ಶಾಶ್ವತ ಸದಸ್ಯರಾಗಿರುತ್ತಾರೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

  1. 1 ಮಾತ್ರ 
  2. 2 ಮಾತ್ರ 
  3. 1 ಮತ್ತು 3 ಮಾತ್ರ 
  4. 2 ಮತ್ತು 3 ಮಾತ್ರ

ಉತ್ತರ: B

 

7). ಸಿಐಎಸ್‌ಎಫ್ ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸಿಐಎಸ್‌ಎಫ್ ಅನ್ನು ‘ಸಿಐಎಸ್‌ಎಫ್ ಕಾಯಿದೆ, 1968’ ರ ಅಡಿಯಲ್ಲಿ ಸ್ಥಾಪಿಸಲಾಯಿತು.
  2. ಇದು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  3. ಇದು ಬಾಹ್ಯಾಕಾಶ ಇಲಾಖೆ , ಪರಮಾಣು ಶಕ್ತಿ ಇಲಾಖೆ ಮುಂತಾದ ಕಾರ್ಯತಂತ್ರದ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

  1. 1 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: B

 

8). ಹಂಸ-3 ವಿಮಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಭಾರತದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಂಪೂರ್ಣ ಸಂಯೋಜಿತ ಲಘು ವಿಮಾನವಾಗಿದೆ.
  2. ಇದನ್ನು ಪ್ರಾಥಮಿಕವಾಗಿ ಮೂಲಭೂತ ಪೈಲಟ್ ತರಬೇತಿಗಾಗಿ CSIR-NAL ಅಭಿವೃದ್ಧಿಪಡಿಸಿದೆ.
  3. ಈ ವಿಮಾನವು ಸುಧಾರಿತ ಹಾರಾಟ ತರಬೇತಿಗಾಗಿ ಪೂರ್ಣ ಗ್ಲಾಸ್-ಕಾಕ್‌ಪಿಟ್ ಏವಿಯಾನಿಕ್ಸ್ ಅನ್ನು ಒಳಗೊಂಡಿದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

(a) 1 ಮತ್ತು 2 ಮಾತ್ರ 

(b) 2 ಮತ್ತು 3 ಮಾತ್ರ 

(c) 1 ಮತ್ತು 3 ಮಾತ್ರ 

(d) 1, 2 ಮತ್ತು 3

ಉತ್ತರ: A

 

9). “ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದ” (ITPGRFA) ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಅಡಿಯಲ್ಲಿ ಅಳವಡಿಸಿಕೊಳ್ಳಲಾದ ಕಾನೂನುಬದ್ಧವಾಗಿ ಬದ್ಧವಾಗಿರುವ ಒಪ್ಪಂದವಾಗಿದೆ.
  2. ಆಹಾರ ಮತ್ತು ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಸುಸ್ಥಿರವಾಗಿ ಬಳಸುವುದು ಇದರ ಗುರಿಯಾಗಿದೆ.
  3. ಇದು ಬಹುಪಕ್ಷೀಯ ವ್ಯವಸ್ಥೆಯ ಮೂಲಕ ನ್ಯಾಯಯುತ ಮತ್ತು ಸಮಾನ ಲಾಭ ಹಂಚಿಕೆಗೆ ಅವಕಾಶ ನೀಡುತ್ತದೆ.

ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: D

 

10). ಹಣಕಾಸು ಸೇರ್ಪಡೆಗಾಗಿನ ರಾಷ್ಟ್ರೀಯ ಕಾರ್ಯತಂತ್ರ (NSFI) 2025-30 ರ ಅನುಷ್ಠಾನದ ಮೇಲ್ವಿಚಾರಣೆಯಲ್ಲಿ ಯಾವ ಸಂಸ್ಥೆಯು ಸಮನ್ವಯದ ಪಾತ್ರವನ್ನು ವಹಿಸುತ್ತದೆ?

  1. ಹಣಕಾಸು ಸಚಿವಾಲಯ 
  2. ನೀತಿ ಆಯೋಗ 
  3. ಭಾರತೀಯ ರಿಸರ್ವ್ ಬ್ಯಾಂಕ್ 
  4. ಸೆಬಿ

ಉತ್ತರ: C

 

11). ಭಾರತ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶ (BWC) ದ ಕುರಿತು, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಭಾರತವು BWC ಗೆ ಸಹಿದಾರ ರಾಷ್ಟ್ರ ಮತ್ತು ಸದಸ್ಯ ರಾಷ್ಟ್ರವಾಗಿದೆ.
  2. ಅಸ್ತಿತ್ವದಲ್ಲಿರುವ ಜೈವಿಕ ಶಸ್ತ್ರಾಸ್ತ್ರಗಳ ದಾಸ್ತಾನುಗಳನ್ನು ನಾಶಪಡಿಸಲು ಭಾರತ ಬದ್ಧವಾಗಿದೆ.
  3. BWC ಅಡಿಯಲ್ಲಿ ಜೈವಿಕ ವಿಜ್ಞಾನದ ಶಾಂತಿಯುತ ಬಳಕೆಯನ್ನು ಭಾರತ ಬೆಂಬಲಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: B

 

12). ‘ಸಂಚಾರ್ ಸಾಥಿ’ ಯ ಈ ಕೆಳಗಿನ ವೈಶಿಷ್ಟ್ಯಗಳನ್ನು ಪರಿಗಣಿಸಿ:

  1. IMEI ಅಥವಾ ಬಾರ್‌ಕೋಡ್ ಸ್ಕ್ಯಾನಿಂಗ್ ಬಳಸಿ ಮೊಬೈಲ್ ಹ್ಯಾಂಡ್‌ಸೆಟ್‌ನ ನೈಜತೆಯನ್ನು ಪರಿಶೀಲಿಸುವುದು.
  2. ಭೌಗೋಳಿಕ ನಿಯತಾಂಕಗಳ ಆಧಾರದ ಮೇಲೆ ವೈರ್‌ಲೈನ್ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಗುರುತಿಸುವುದು.
  3. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಎಲ್ಲಾ ಸ್ಪ್ಯಾಮ್ ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವುದು.

ಈ ಮೇಲೆ ಪಟ್ಟಿ ಮಾಡಲಾದ ಯಾವ ವೈಶಿಷ್ಟ್ಯವು/ಗಳು ‘ಸಂಚಾರ್ ಸಾಥಿ’ ಅಡಿಯಲ್ಲಿ ನಿಜವಾಗಿ ಲಭ್ಯವಿವೆ?

  1. 1 ಮತ್ತು 2 ಮಾತ್ರ 
  2. 2 ಮತ್ತು 3 ಮಾತ್ರ 
  3. 1 ಮಾತ್ರ 
  4. 1, 2 ಮತ್ತು 3

ಉತ್ತರ: A

 

13). ‘ಪಿಎಂ ವಿಕಾಸ್’ ಯೋಜನೆಯು ಹಿಂದಿನ ಹಲವಾರು ಯೋಜನೆಗಳ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ. ಈ ಕೆಳಗಿನ ಯಾವ ಯೋಜನೆಗಳನ್ನು ‘ಪಿಎಂ ವಿಕಾಸ್’ ನಲ್ಲಿ ವಿಲೀನಗೊಳಿಸಲಾಗಿದೆ?

  1. ಸೀಖೋ ಔರ್ ಕಮಾವೋ 
  2. ನಯಿ ಮಂಜಿಲ್ 
  3. ಉಜ್ವಲ ಯೋಜನೆ 
  4. ಉಸ್ತಾದ್
  5. ಹಮಾರಿ ಧರೋಹರ್

ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:

  1. 1, 2, 4 ಮತ್ತು 5 ಮಾತ್ರ 
  2. 1, 3 ಮತ್ತು 4 ಮಾತ್ರ 
  3. 2, 3 ಮತ್ತು 5 ಮಾತ್ರ 
  4. 1, 2, 3, 4 ಮತ್ತು 5

ಉತ್ತರ: A

 

14). ‘ಪಿಎಂ ವಿಕಾಸ್’ ಯೋಜನೆಯ ಅಡಿಯಲ್ಲಿ ಗುರಿಪಡಿಸಲಾದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯಿದೆ ಅಡಿಯಲ್ಲಿ ಅಧಿಸೂಚಿಸಲಾದ ಅಲ್ಪಸಂಖ್ಯಾತರಿಗೆ ಈ ಯೋಜನೆಯು ಅನ್ವಯಿಸುತ್ತದೆ.
  2. ಭಾರತವು ರಾಷ್ಟ್ರೀಯ ಮಟ್ಟದಲ್ಲಿ ಆರು ಅಲ್ಪಸಂಖ್ಯಾತ ಸಮುದಾಯಗಳನ್ನು ಅಧಿಕೃತವಾಗಿ ಗುರುತಿಸುತ್ತದೆ.
  3. ಝೋರಾಸ್ಟ್ರಿಯನ್ನರನ್ನು (ಪಾರ್ಸಿಗಳು) ಕೌಶಲ್ಯ ಅಭಿವೃದ್ಧಿ ಘಟಕಗಳಿಂದ ಹೊರಗಿಡಲಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

  1. ಕೇವಲ ಒಂದು 
  2. ಕೇವಲ ಎರಡು 
  3. ಕೇವಲ ಮೂರು 
  4. ಯಾವುದೂ ಇಲ್ಲ

ಉತ್ತರ: B

 

15). “ಹೆರಾನ್ Mk II” ಮಾನವರಹಿತ ವೈಮಾನಿಕ ವಾಹನಕ್ಕೆ (UAV) ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದೆ.
  2. ಇದು UAV ಗಳ ಮಧ್ಯಮ-ಎತ್ತರದ ದೀರ್ಘ-ಸಹಿಷ್ಣುತೆ (MALE) ವರ್ಗಕ್ಕೆ ಸೇರಿದೆ.
  3. ಇದನ್ನು ಪ್ರಾಥಮಿಕವಾಗಿ ಅಲ್ಪ-ಶ್ರೇಣಿಯ ಯುದ್ಧತಂತ್ರದ ಯುದ್ಧಭೂಮಿ ಕಣ್ಗಾವಲಿಗಾಗಿ ವಿನ್ಯಾಸಗೊಳಿಸಲಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 2 ಮತ್ತು 3 ಮಾತ್ರ 
  3. 1 ಮಾತ್ರ 
  4. 1, 2 ಮತ್ತು 3

ಉತ್ತರ: A

 

16). IDPD 2025 ರ ಘೋಷವಾಕ್ಯವಾದ, “ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ವಿಕಲಚೇತನರನ್ನೂ ಒಳಗೊಂಡ ಸಮಾಜಗಳನ್ನು ಬೆಳೆಸುವುದು”, ಈ ಕೆಳಗಿನ ಯಾವ ವಿಧಾನವನ್ನು ನೇರವಾಗಿ ಪ್ರತಿಪಾದಿಸುತ್ತದೆ?

  1. ದತ್ತಿ ಆಧಾರಿತ ಕಲ್ಯಾಣ ಉಪಕ್ರಮಗಳ ವಿತರಣೆ 
  2. ಅಂಗವೈಕಲ್ಯದ ವೈದ್ಯಕೀಯ ಮಾದರಿ
  3. ಹಕ್ಕು ಆಧಾರಿತ ಮತ್ತು ಅಂತರ್ಗತ ಅಭಿವೃದ್ಧಿ ವಿಧಾನ 
  4. ಮೂಲಸೌಕರ್ಯ ಆಧಾರಿತ ನಗರಾಭಿವೃದ್ಧಿ

ಉತ್ತರ: C

 

17). “ಜಿಯೋ ಪಾರ್ಸಿ ಯೋಜನೆ” ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯಾ ಕಾಳಜಿಗಳನ್ನು ಪರಿಹರಿಸಲು ಇದನ್ನು 2013-14 ರಲ್ಲಿ ಪ್ರಾರಂಭಿಸಲಾಯಿತು.
  2. ವೈಜ್ಞಾನಿಕ ಶಿಷ್ಟಾಚಾರಗಳು ಮತ್ತು ರಚನಾತ್ಮಕ ಮಧ್ಯಸ್ಥಿಕೆಗಳ ಮೂಲಕ ಜನಸಂಖ್ಯೆಯ ಕುಸಿತವನ್ನು ಹಿಮ್ಮೆಟ್ಟಿಸುವ ಗುರಿಯನ್ನು ಇದು ಹೊಂದಿದೆ.
  3. ಇದು ಭಾರತದಲ್ಲಿ ಅಧಿಸೂಚಿಸಲಾದ ಎಲ್ಲಾ ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮಾತ್ರ
  4. 1, 2 ಮತ್ತು 3

ಉತ್ತರ: A

 

18). ‘ಜಲ ಜೀವನ್ ಮಿಷನ್’ನ ಹಣಕಾಸು ಮತ್ತು ಆಡಳಿತಾತ್ಮಕ ರಚನೆಯನ್ನು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ವಿವರಿಸುತ್ತದೆ?

  1. ಕೇಂದ್ರ ಸರ್ಕಾರದಿಂದ ಪ್ರತ್ಯೇಕವಾಗಿ ಅನುಷ್ಠಾನಗೊಳ್ಳುವ ಕೇಂದ್ರ ವಲಯದ ಯೋಜನೆ 
  2. ವೆಚ್ಚ-ಹಂಚಿಕೆಯೊಂದಿಗೆ ರಾಜ್ಯಗಳ ಮೂಲಕ ಜಾರಿಗೊಳಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆ
  3. ಹಣಕಾಸು ಆಯೋಗವು ಶಿಫಾರಸು ಮಾಡಿದ ಅನುದಾನ ಆಧಾರಿತ ಕಾರ್ಯಕ್ರಮ
  4. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಚಾಲಿತ ಉಪಕ್ರಮ

ಉತ್ತರ: B

 

19). ಬೆಸೆಲ್ -III ಮಾರ್ಗಸೂಚಿಗಳಿಂದ ಪಡೆದ ಮಾನದಂಡಗಳ ಆಧಾರದ ಮೇಲೆ, ಭಾರತೀಯ ರಿಸರ್ವ್ ಬ್ಯಾಂಕ್ ಭಾರತದಲ್ಲಿ D-SIB (ದೇಶೀಯವಾಗಿ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕುಗಳು) ಗಳನ್ನು ಗುರುತಿಸುತ್ತದೆ. ಇವು ಈ ಕೆಳಗಿನವುಗಳನ್ನು ಒಳಗೊಂಡಿವೆ:

  1. ಗಾತ್ರ (ಒಟ್ಟು ಆರ್ಥಿಕ ವ್ಯಾಪ್ತಿ)
  2. ಪರಸ್ಪರ ಸಂಪರ್ಕ
  3. ಸೇವೆಗಳ ಪರ್ಯಾಯತೆ
  4. ಲಾಭದಾಯಕತೆಯ ಕಾರ್ಯಕ್ಷಮತೆ

ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:

  1. 1, 2 ಮತ್ತು 3 ಮಾತ್ರ 
  2. 1, 3 ಮತ್ತು 4 ಮಾತ್ರ 
  3. 2 ಮತ್ತು 4 ಮಾತ್ರ 
  4. 1, 2, 3 ಮತ್ತು 4

ಉತ್ತರ: A

 

20). ಭಾರತೀಯ ಕಡಲ ಸಿದ್ಧಾಂತಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ಕಡಲ ವ್ಯಾಪಾರ ಮಾರ್ಗಗಳನ್ನು ಭದ್ರಪಡಿಸಿಕೊಳ್ಳಲು ಇದು ಭಾರತೀಯ ನೌಕಾಪಡೆಗೆ ಮೂಲಭೂತ ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.
  2. ಇದು ಕಡಲ ಕ್ಷೇತ್ರದಲ್ಲಿ, ವಿಶೇಷವಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯನ್ನು “ಪ್ರಥಮ ಪ್ರತಿಸ್ಪಂದಕ” ಎಂದು ಪರಿಕಲ್ಪಿಸುತ್ತದೆ.
  3. ಸಂಯೋಜಿತ ಥಿಯೇಟರ್ ಯೋಜನೆಯ ಭಾಗವಾಗಿ ಕಾರ್ಗಿಲ್ ಸಂಘರ್ಷದ ನಂತರ ಇದನ್ನು ಮೊದಲು ಬಿಡುಗಡೆ ಮಾಡಲಾಯಿತು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  1. 1 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 2 ಮಾತ್ರ
  4. 1, 2 ಮತ್ತು 3

ಉತ್ತರ: C

 

21). ರೋಹಿಂಗ್ಯಾ ಸಮುದಾಯಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇವರು ಪ್ರಧಾನವಾಗಿ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ವಾಸಿಸುವ ಜನಾಂಗೀಯ ಸಮುದಾಯಕ್ಕೆ ಸೇರಿದ್ದಾರೆ.
  2. ಮ್ಯಾನ್ಮಾರ್ ಸರ್ಕಾರವು ಇವರನ್ನು ಅಧಿಕೃತವಾಗಿ ಅಧಿಸೂಚಿಸಲಾದ ‘ಜನಾಂಗೀಯ ರಾಷ್ಟ್ರೀಯತೆಗಳಲ್ಲಿ’ ಒಂದೆಂದು ಗುರುತಿಸುತ್ತದೆ.
  3. ಇವರನ್ನು ಮ್ಯಾನ್ಮಾರ್‌ನಲ್ಲಿ ಬಹುಮಟ್ಟಿಗೆ ಅಕ್ರಮ ವಲಸಿಗರು ಮತ್ತು ವಿದೇಶಿ ನಿವಾಸಿಗರು ಎಂದು ವರ್ಗೀಕರಿಸಲಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

ಉತ್ತರ: A

 

22). ಐಬಿಸಿ (IBC) ಅಡಿಯಲ್ಲಿನ ನ್ಯಾಯ ನಿರ್ಣಯ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ಘಟಕ

ನ್ಯಾಯ ನಿರ್ಣಯ ಪ್ರಾಧಿಕಾರ 

1. ಕಂಪನಿಗಳು

ಸಾಲ ವಸೂಲಾತಿ ನ್ಯಾಯಮಂಡಳಿ (DRT)

2. ಎಲ್‌ಎಲ್‌ಪಿಗಳು (LLPs)

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)

3. ವ್ಯಕ್ತಿಗಳು

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)

4. ಪಾಲುದಾರಿಕೆ ಸಂಸ್ಥೆಗಳು

ಉಚ್ಚ ನ್ಯಾಯಾಲಯಗಳು 

ಮೇಲೆ ನೀಡಿರುವ ಜೋಡಿಗಳಲ್ಲಿ ಯಾವುದು/ಯಾವುವು ಸರಿಯಾಗಿ ಹೊಂದಾಣಿಕೆಯಾಗಿವೆ?

  1. 1 ಮತ್ತು 3 ಮಾತ್ರ
  2. 2 ಮಾತ್ರ
  3. 2 ಮತ್ತು 4 ಮಾತ್ರ
  4. 1, 2, 3 ಮತ್ತು 4

ಉತ್ತರ: B

 

23). ಪ್ರತಿಪಾದನೆ (A): GLP-1 ಚಿಕಿತ್ಸೆಗಳು ಚಯಾಪಚಯ ನಿಯಂತ್ರಣದಲ್ಲಿ ಒಳಗೊಂಡಿರುವ, ನೈಸರ್ಗಿಕವಾಗಿ ಉತ್ಪತ್ತಿಯಾಗುವ ಹಾರ್ಮೋನ್ ಅನ್ನು ಅನುಕರಿಸುತ್ತವೆ.

ಕಾರಣ (R): GLP-1 ಚಿಕಿತ್ಸೆಗಳು ಪ್ರಾಥಮಿಕವಾಗಿ ಮೂಲ ಚಯಾಪಚಯ ದರವನ್ನು ಹೆಚ್ಚಿಸುವ ಮೂಲಕ ತೂಕ ಇಳಿಕೆಯನ್ನು ಉತ್ತೇಜಿಸುತ್ತವೆ.

ಸರಿಯಾದ ಉತ್ತರವನ್ನು ಆರಿಸಿ:

  1. A ಮತ್ತು R ಎರಡೂ ಸರಿ, ಮತ್ತು R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ
  2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ
  3. A ಸರಿ, ಆದರೆ R ತಪ್ಪು
  4. A ತಪ್ಪು, ಆದರೆ R ಸರಿ

ಉತ್ತರ: C

 

24). ‘ಸಮಗ್ರ ಶಿಕ್ಷಣ’ ಅಭಿಯಾನದ ಅಡಿಯಲ್ಲಿ, ಈ ಕೆಳಗಿನ ಯಾವ ಕ್ರಮಗಳಿಗೆ/ಸೌಲಭ್ಯಗಳಿಗೆ ಸ್ಪಷ್ಟವಾಗಿ ಬೆಂಬಲ ನೀಡಲಾಗುತ್ತದೆ?

  1. ಸಂಯೋಜಿತ ಶಾಲಾ ಅನುದಾನಗಳು ಮತ್ತು ಗ್ರಂಥಾಲಯಗಳು.
  2. ಉಚಿತ ಸಮವಸ್ತ್ರಗಳು ಮತ್ತು ಪಠ್ಯಪುಸ್ತಕಗಳು.
  3. ಐಸಿಟಿ (ICT) ಉಪಕ್ರಮಗಳು ಮತ್ತು ಪರಿಹಾರಾತ್ಮಕ ಬೋಧನೆ. 
  4. ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ತರಬೇತಿ.

ಕೆಳಗಿನ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ:

  1. 1, 2 ಮತ್ತು 3 ಮಾತ್ರ 
  2. 2 ಮತ್ತು 4 ಮಾತ್ರ 
  3. 1 ಮತ್ತು 4 ಮಾತ್ರ 
  4. 1, 2, 3 ಮತ್ತು 4

ಉತ್ತರ: A

 

25). ಮಲೇರಿಯಾವನ್ನು ನಿಯಂತ್ರಿಸಲು ಮತ್ತು ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಈ ಕೆಳಗಿನ ಉಪಕ್ರಮಗಳನ್ನು ಪರಿಗಣಿಸಿ:

  1. ಮಲೇರಿಯಾಕ್ಕಾಗಿ ಜಾಗತಿಕ ತಾಂತ್ರಿಕ ಕಾರ್ಯತಂತ್ರ 2016–2030.
  2. E-2025 ಉಪಕ್ರಮ.
  3. ‘ಅಧಿಕ ಹೊರೆಯಿಂದ ಹೆಚ್ಚಿನ ಪರಿಣಾಮ’ (HBHI) ಉಪಕ್ರಮ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1, 2 ಮತ್ತು 3
  4. 1 ಮತ್ತು 3 ಮಾತ್ರ

ಉತ್ತರ: C

 

26). ‘ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ’ಗೆ ಈ ಕೆಳಗಿನ ಯಾವ ಅರ್ಹತಾ ಮಾನದಂಡಗಳು ಸರಿಯಾಗಿ ಅನ್ವಯಿಸುತ್ತವೆ?

  1. ಭಾರತೀಯ ಪ್ರಜೆಯಾಗಿರಬೇಕು.
  2. ವಯಸ್ಸು 21–24 ವರ್ಷಗಳ ನಡುವೆ ಇರಬೇಕು.
  3. ಪೂರ್ಣಾವಧಿ ಉದ್ಯೋಗದಲ್ಲಿರಬಾರದು ಅಥವಾ ಪೂರ್ಣಾವಧಿ ಶಿಕ್ಷಣದಲ್ಲಿ ತೊಡಗಿರಬಾರದು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2 ಮತ್ತು 3
  2. 1 ಮತ್ತು 3 ಮಾತ್ರ
  3. 1 ಮತ್ತು 2 ಮಾತ್ರ
  4. 2 ಮತ್ತು 3 ಮಾತ್ರ

ಉತ್ತರ: A

 

27). ನುಮಾಲಿಘರ್ ರಿಫೈನರಿ ಲಿಮಿಟೆಡ್ (NRL) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. NRL ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿರುವ ಪೆಟ್ರೋಲಿಯಂ ಸಂಸ್ಕರಣಾಗಾರವಾಗಿದೆ.
  2. NRL ಗೆ ಇತ್ತೀಚೆಗೆ ನವರತ್ನ ಸ್ಥಾನಮಾನ ನೀಡಲಾಗಿದ್ದು, ಇದು ಈ ಮಾನ್ಯತೆ ಪಡೆದ 27ನೇ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ  (PSU) ವಾಗಿದೆ.
  3. ನವರತ್ನ ಸ್ಥಾನಮಾನವು ಸಾರ್ವಜನಿಕ ವಲಯದ ಉದ್ಯಮಗಳಿಗೆ, ಸರ್ಕಾರದ ಪೂರ್ವಾನುಮತಿಯಿಲ್ಲದೆ ನೇರವಾಗಿ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು (Listing) ಅವಕಾಶ ನೀಡುತ್ತದೆ. 

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 2 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 1 ಮಾತ್ರ
  4. 1, 2 ಮತ್ತು 3

ಉತ್ತರ: B

 

28). ಮಹಾರತ್ನ ಸಾರ್ವಜನಿಕ ವಲಯದ ಉದ್ಯಮಗಳಿಗೆ  (PSUs) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಮಹಾರತ್ನಕ್ಕೆ ಅರ್ಹರಾಗುವ ಮೊದಲು ನವರತ್ನ ಸ್ಥಾನಮಾನವನ್ನು ಹೊಂದಿರಬೇಕು.
  2. ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರಬೇಕು ಮತ್ತು ಕನಿಷ್ಠ ಷೇರುದಾರರ ನಿಯಮಗಳನ್ನು ಅನುಸರಿಸಿರಬೇಕು.
  3. ಕಳೆದ ಮೂರು ವರ್ಷಗಳಲ್ಲಿ ಸರಾಸರಿ ವಾರ್ಷಿಕ ನಿವ್ವಳ ಲಾಭವು ₹5,000 ಕೋಟಿಗೂ ಅಧಿಕವಾಗಿರಬೇಕು.
  4. ಎಲ್ಲಾ ಮಹಾರತ್ನ ‘ಪಿಎಸ್‌ಯು’ಗಳಿಗೆ ಕಾರ್ಯಕ್ಷಮತೆಯ ಪರಿಶೀಲನೆಯಿಲ್ಲದೆ ಜಾಗತಿಕ ಕಾರ್ಯಾಚರಣೆಗಳ ಸವಲತ್ತುಗಳನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2 ಮತ್ತು 3 ಮಾತ್ರ
  2. 1, 3 ಮತ್ತು 4 ಮಾತ್ರ
  3. 2, 3 ಮತ್ತು 4 ಮಾತ್ರ
  4. 1, 2, 3 ಮತ್ತು 4

ಉತ್ತರ: A

 

29). “ಆಹಾರ ಮತ್ತು ಕೃಷಿಗಾಗಿ ವಿಶ್ವದ ಭೂಮಿ ಮತ್ತು ಜಲ ಸಂಪನ್ಮೂಲಗಳ ಸ್ಥಿತಿಗತಿ” (SOLAW) ವರದಿಯನ್ನು ಈ ಕೆಳಗಿನ ಯಾವ ಸಂಸ್ಥೆಯು ಪ್ರಕಟಿಸುತ್ತದೆ?

  1. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ
  2. ವಿಶ್ವ ಬ್ಯಾಂಕ್
  3. ಆಹಾರ ಮತ್ತು ಕೃಷಿ ಸಂಸ್ಥೆ
  4. ವಿಶ್ವ ಆರೋಗ್ಯ ಸಂಸ್ಥೆ

ಉತ್ತರ: C

 

30). ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ:

  1. ಚಂಪಾರಣ್ ಸತ್ಯಾಗ್ರಹದಲ್ಲಿ (1917) ಸಕ್ರಿಯವಾಗಿ ಭಾಗವಹಿಸಿದ್ದು.
  2. ಪಾಟ್ನಾದ ನಖಾಸ್ ಹೊಂಡದ ಬಳಿ, ಬಿಹಾರದ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದ್ದು.
  3. ತಮ್ಮ ಕಾನೂನು ವೃತ್ತಿಯನ್ನು ತ್ಯಜಿಸಿದ ನಂತರ, ಪಾಟ್ನಾದಲ್ಲಿ ನ್ಯಾಷನಲ್ ಕಾಲೇಜನ್ನು ಸ್ಥಾಪಿಸಿದ್ದು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ (ತಪ್ಪಾಗಿವೆ)?

  1. ಕೇವಲ ಒಂದು
  2. ಕೇವಲ ಎರಡು
  3. ಕೇವಲ ಮೂರು
  4. ಯಾವುದೂ ಇಲ್ಲ 

ಉತ್ತರ: D

 

31). ಈ ಕೆಳಗಿನವುಗಳಲ್ಲಿ ‘ಪ್ರಧಾನ ಮಂತ್ರಿ ಜಿ-ವನ್’ ಯೋಜನೆಯ ಉದ್ದೇಶಗಳು ಯಾವುವು?

  1. ಜೈವಿಕ ರಾಶಿಯನ್ನು ಬಳಸಿಕೊಂಡು 2ಜಿ ಎಥೆನಾಲ್ ಯೋಜನೆಗಳನ್ನು ಉತ್ತೇಜಿಸುವುದು.
  2. ಎಥೆನಾಲ್ ಮಿಶ್ರಣ ಕಾರ್ಯಕ್ರಮದ (EBP) ಗುರಿಗಳನ್ನು ಸಾಧಿಸುವುದು.
  3. ಕೃಷಿಯ ಮೇಲಿನ ರೈತರ ಆದಾಯದ ಅವಲಂಬನೆಯನ್ನು ಕಡಿಮೆ ಮಾಡುವುದು.
  4. ನಿವ್ವಳ ಶೂನ್ಯ ಹೊರಸೂಸುವಿಕೆಯಂತಹ ಪರಿಸರ ಸಂಬಂಧಿತ ಗುರಿಗಳಿಗೆ ಕೊಡುಗೆ ನೀಡುವುದು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2 ಮತ್ತು 4 ಮಾತ್ರ 
  2. 1 ಮತ್ತು 3 ಮಾತ್ರ 
  3. 2, 3 ಮತ್ತು 4 ಮಾತ್ರ 
  4. 1, 2, 3 ಮತ್ತು 4

ಉತ್ತರ: A

 

32). ಈ ಕೆಳಗಿನ ಜೈವಿಕ ಇಂಧನ ವಿಧಗಳು ಮತ್ತು ಅವುಗಳ ಮೂಲ ವಸ್ತುಗಳನ್ನು ಪರಿಗಣಿಸಿ:

ಜೈವಿಕ ಇಂಧನ ವಿಧ

ಮೂಲ ವಸ್ತು 

1. 1G ಎಥೆನಾಲ್

a. ಬೆಳೆ ತ್ಯಾಜ್ಯಗಳು ಮತ್ತು ಖಾದ್ಯವಲ್ಲದ (ಅಖಾದ್ಯ)  ಜೈವಿಕ ರಾಶಿ.

2. 2G ಎಥೆನಾಲ್

b. ಸಾವಯವ ತ್ಯಾಜ್ಯ ಮತ್ತು ಜಾನುವಾರು ಸಗಣಿ.

3. ಜೈವಿಕ ಅನಿಲ/ಬಯೋ-ಸಿಎನ್‌ಜಿ

c. ಕಾಕಂಬಿ ಮತ್ತು ಕಬ್ಬಿನ ರಸ.

ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿದೆ?

  1. 1–a, 2–b, 3–c
  2. 1–c, 2–a, 3–b
  3. 1–c, 2–b, 3–a
  4. 1–b, 2–c, 3–a

ಉತ್ತರ: B 

 

33). ಭಾರತದಲ್ಲಿ ರಣಹದ್ದುಗಳಿಗೆ ಎದುರಾಗಿರುವ ಈ ಕೆಳಗಿನ ಬೆದರಿಕೆಗಳನ್ನು ಪರಿಗಣಿಸಿ:

  1. ಪಶುವೈದ್ಯಕೀಯ ಔಷಧ ‘ಡೈಕ್ಲೋಫೆನಾಕ್’ ಬಳಕೆ.
  2. ಆರ್ಗನೋಕ್ಲೋರಿನ್‌ಗಳು, ಪಿಸಿಬಿಗಳು ಮತ್ತು ಭಾರ ಲೋಹಗಳಂತಹ ಕೀಟನಾಶಕಗಳು.
  3. ವಿದ್ಯುತ್ ಸ್ಪರ್ಶ , ಆವಾಸಸ್ಥಾನಗಳ ನಷ್ಟ ಮತ್ತು ಆಹಾರದ ಕೊರತೆ.

ರಣಹದ್ದುಗಳ ಸಂತತಿಯ ಕುಸಿತಕ್ಕೆ ಕಾರಣವಾಗಿರುವ ಸರಿಯಾದ ಬೆದರಿಕೆಗಳು ಮೇಲೆ ನೀಡಿರುವವುಗಳಲ್ಲಿ ಯಾವುವು?

  1. 1 ಮತ್ತು 2 ಮಾತ್ರ 
  2. 1 ಮತ್ತು 3 ಮಾತ್ರ 
  3. 1, 2 ಮತ್ತು 3 
  4. 2 ಮತ್ತು 3 ಮಾತ್ರ

ಉತ್ತರ: C

 

34). ಭಾರತದಲ್ಲಿ ಕುಷ್ಠರೋಗಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಭಾರತವು ಜಾಗತಿಕ ಕುಷ್ಠರೋಗ ಪ್ರಕರಣಗಳಲ್ಲಿ ಸುಮಾರು 57% ರಷ್ಟನ್ನು ವರದಿ ಮಾಡುತ್ತದೆ.
  2. ಅತಿ ಹೆಚ್ಚು ಹರಡುವಿಕೆ ಇರುವ ರಾಜ್ಯಗಳಲ್ಲಿ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿವೆ.
  3. ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು 2024 ರಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡಿದ ಮೊದಲ ದೇಶವೆಂದು ಘೋಷಿಸಿತು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 2 ಮತ್ತು 3 ಮಾತ್ರ 
  2. 1 ಮತ್ತು 2 ಮಾತ್ರ 
  3. 1 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: B

 

35). ಈ ಕೆಳಗಿನವುಗಳಲ್ಲಿ ಉಸಿರಾಡಬಹುದಾದ ಮೈಕ್ರೋಪ್ಲಾಸ್ಟಿಕ್ಸ್‌ಗಳು (iMPs) ದೇಹವನ್ನು ಪ್ರವೇಶಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಯಾವುವು?

  1. ಉಸಿರಾಟದ ಕಾಯಿಲೆಗಳು
  2. ಹಾರ್ಮೋನುಗಳ ಮತ್ತು ನರವೈಜ್ಞಾನಿಕ ಕಾಯಿಲೆಗಳು.
  3. ಕ್ಯಾನ್ಸರ್ ಅಪಾಯ ಹೆಚ್ಚಳ.
  4. ವೈರಲ್ ಸೋಂಕುಗಳಿಗೆ ರೋಗನಿರೋಧಕ ಶಕ್ತಿ. 

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2 ಮತ್ತು 3 ಮಾತ್ರ 
  2. 2, 3 ಮತ್ತು 4 ಮಾತ್ರ 
  3. 1 ಮತ್ತು 4 ಮಾತ್ರ 
  4. 1, 2, 3 ಮತ್ತು 4

ಉತ್ತರ: A

 

36). ಯಾವ ಗುಣಲಕ್ಷಣಗಳ ಸಂಯೋಜನೆಯು ಒಂದು ಪ್ರಭೇದವನ್ನು ‘ಆಕ್ರಮಣಕಾರಿ’ಯಾಗುವಂತೆ ಮಾಡುವ ಸಾಧ್ಯತೆಯಿದೆ?

  1. ತ್ವರಿತ ಸಂತಾನೋತ್ಪತ್ತಿ
  2. ವಿಶಾಲವಾದ ಆಹಾರ ವ್ಯಾಪ್ತಿ
  3. ಪರಿಸರದ  ಏರಿಳಿತಗಳಿಗೆ ಹೆಚ್ಚಿನ ಸಂವೇದನೆ.
  4. ಹೆಚ್ಚಿನ ಪ್ರಸರಣ ಸಾಮರ್ಥ್ಯ. 

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2 ಮತ್ತು 4 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2, 3 ಮತ್ತು 4

ಉತ್ತರ: A

 

37). ‘ವಿಶ್ವ ಮಣ್ಣಿನ ದಿನ’ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ಪ್ರತಿ ವರ್ಷ ಡಿಸೆಂಬರ್ 5 ರಂದು ಆಚರಿಸಲಾಗುತ್ತದೆ.
  2. ಇದನ್ನು ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟ (IUSS) ವು ಆಚರಿಸುತ್ತದೆ.
  3. 2025 ರ ಘೋಷವಾಕ್ಯ  “ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು” ಎಂಬುದಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 1 ಮತ್ತು 3 ಮಾತ್ರ 
  3. 2 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: D

 

38). ಕೂನೋ ವನ್ಯಜೀವಿ ಧಾಮವು ಈ ಕೆಳಗಿನ ಯಾವುದಕ್ಕೆ ಪ್ರಮುಖವಾಗಿದೆ?

  1. ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಏಷ್ಯಾಟಿಕ್ ಸಿಂಹಗಳ ಮರುಪರಿಚಯ.
  2. ಭಾರತದಲ್ಲಿ ಚೀತಾಗಳಿಗೆ ಆವಾಸಸ್ಥಾನ.
  3. ಜೌಗು ಪ್ರದೇಶದ ಪಕ್ಷಿ ಸಂರಕ್ಷಣೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 2 ಮತ್ತು 3 ಮಾತ್ರ 
  3. 1 ಮತ್ತು 3 ಮಾತ್ರ 
  4. 1, 2 ಮತ್ತು 3

ಉತ್ತರ: D

 

39). ಚೀತಾ ಪ್ರಾಣಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ವಿಶ್ವದ ಅತ್ಯಂತ ವೇಗವಾಗಿ ಓಡುವ ಸಸ್ತನಿಯಾಗಿದೆ.
  2. ಚೀತಾಗಳು ಇತರ ದೊಡ್ಡ ಬೆಕ್ಕುಗಳಂತೆ ಘರ್ಜಿಸಬಲ್ಲ ಸಾಮರ್ಥ್ಯವನ್ನು ಹೊಂದಿವೆ. 
  3. 1952 ರಲ್ಲಿ ಭಾರತದಲ್ಲಿ ಅಳಿದುಹೋದ ಏಕೈಕ ದೊಡ್ಡ ಮಾಂಸಾಹಾರಿ ಪ್ರಾಣಿ ಇದಾಗಿದೆ.
  4. ಏಷ್ಯಾಟಿಕ್ ಚೀತಾಗಳನ್ನು ‘ಗಂಭೀರವಾಗಿ ಅಳಿವಿನಂಚಿನಲ್ಲಿರುವ’ (CR) ಪ್ರಭೇದ ಎಂದು ವರ್ಗೀಕರಿಸಲಾಗಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1 ಮತ್ತು 2 ಮಾತ್ರ 
  2. 1, 3 ಮತ್ತು 4 ಮಾತ್ರ 
  3. 1, 2 ಮತ್ತು 3 ಮಾತ್ರ 
  4. 1, 2 ಮತ್ತು 4 ಮಾತ್ರ

ಉತ್ತರ: B

 

40). ಬೌದ್ಧಧರ್ಮದಲ್ಲಿ “ಪರಿನಿರ್ವಾಣ”  ಎಂಬ ಪದವು ಪ್ರಾಥಮಿಕವಾಗಿ ಏನನ್ನು ಸೂಚಿಸುತ್ತದೆ?

  1. ಜೀವಿತಾವಧಿಯಲ್ಲಿ ಮರುಹುಟ್ಟಿನ ಚಕ್ರದಿಂದ ವಿಮೋಚನೆ. 
  2. ಮರಣಾನಂತರದ ಬಿಡುಗಡೆ ಅಥವಾ ವಿಮೋಚನೆ
  3. ಜೀವಂತವಾಗಿರುವಾಗಲೇ ಜ್ಞಾನೋದಯ ಪಡೆಯುವುದು. 
  4. ಮರಣಾನಂತರ ಬುದ್ಧನ ಆರಾಧನೆ.

ಉತ್ತರ: B

 

41). ಈ ಕೆಳಗಿನ ಯಾವ ಸಂಸ್ಥೆಯನ್ನು 1923 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದರು?

  1. ಸ್ವತಂತ್ರ ಕಾರ್ಮಿಕ ಪಕ್ಷ (ಇಂಡಿಪೆಂಡೆಂಟ್ ಲೇಬರ್ ಪಾರ್ಟಿ)
  2. ಪರಿಶಿಷ್ಟ ಜಾತಿಗಳ ಒಕ್ಕೂಟ (ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್)
  3. ಬಹಿಷ್ಕೃತ ಹಿತಕಾರಿಣಿ ಸಭೆ
  4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಉತ್ತರ: C

 

42). 1932 ರ ಪೂನಾ ಒಪ್ಪಂದವು ಈ ಕೆಳಗಿನ ಯಾವ ಫಲಿತಾಂಶಕ್ಕೆ ಕಾರಣವಾಯಿತು?

  1. ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದು. 
  2. ಶೋಷಿತ ವರ್ಗಗಳಿಗೆ ‘ಪ್ರತ್ಯೇಕ ಮತಕ್ಷೇತ್ರಗಳನ್ನು’ ಒದಗಿಸುವುದು. 
  3. ಪ್ರಾಂತೀಯ ಶಾಸಕಾಂಗಗಳಲ್ಲಿ, ಶೋಷಿತ ವರ್ಗಗಳಿಗೆ ಮೀಸಲಿಟ್ಟ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳ. 
  4. ಕೇವಲ ಕೇಂದ್ರ ಶಾಸಕಾಂಗದಲ್ಲಿ ಮೀಸಲಾತಿ ನೀಡುವುದು, ಆದರೆ ಪ್ರಾಂತೀಯ ಶಾಸಕಾಂಗಗಳಲ್ಲಿ ಅಲ್ಲ.

ಉತ್ತರ: C

 

43). ಈ ಕೆಳಗಿನ ಜಲ ಸಂರಕ್ಷಣಾ ಯೋಜನೆಗಳನ್ನು ಅವುಗಳ ಉದ್ದೇಶಗಳೊಂದಿಗೆ ಹೊಂದಿಸಿ:

ಯೋಜನೆ

ಉದ್ದೇಶ

a. ಜಲ ಶಕ್ತಿ ಅಭಿಯಾನ

1. ಪ್ರತಿ ಜಿಲ್ಲೆಗೆ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪುನರುಜ್ಜೀವನಗೊಳಿಸುವುದು.

b. ಅಮೃತ್ ಸರೋವರ್ ಮಿಷನ್

2. ನಿರ್ಣಾಯಕ ಪ್ರದೇಶಗಳಲ್ಲಿ ಅಂತರ್ಜಲ ನಿರ್ವಹಣೆಯನ್ನು ಸುಧಾರಿಸುವುದು.

c. ರಾಷ್ಟ್ರೀಯ ಜಲಧರ ನಕ್ಷೆ ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM)

3. ಸುಸ್ಥಿರ ಬಳಕೆಗಾಗಿ ಜಲಚರಗಳನ್ನು ಗುರುತಿಸುವುದು ಮತ್ತು ಅಧ್ಯಯನ ಮಾಡುವುದು.

d. ಅಟಲ್ ಭೂಜಲ್ ಯೋಜನೆ

4. ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಮಾಡುವುದು.

ನೀಡಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಹೊಂದಾಣಿಕೆಯನ್ನುಆಯ್ಕೆಮಾಡಿ ?

ಆಯ್ಕೆಗಳು:

  1. a-4, b-1, c-3, d-2
  2. a-1, b-4, c-2, d-3
  3. a-3, b-2, c-4, d-1
  4. a-2, b-3, c-1, d-4

ಉತ್ತರ: A

 

44). ಈ ಕೆಳಗಿನ ಮಿಲಿಟರಿ ಸಮರಾಭ್ಯಾಸಗಳನ್ನು ಅವುಗಳ ಸಂಬಂಧಿತ ದೇಶಗಳು ಅಥವಾ ಸ್ವರೂಪದೊಂದಿಗೆ  ಹೊಂದಿಸಿ:

ಸಮರಾಭ್ಯಾಸ

ಪಾಲುದಾರ ದೇಶ 

a. ಹರಿಮಾವು ಶಕ್ತಿ 

1. ಭಾರತ ಮತ್ತು ಮಲೇಷ್ಯಾ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸ.

b. ಯುದ್ಧ ಅಭ್ಯಾಸ

2. ಭಾರತ-ಯುಎಸ್‌ಎ ಜಂಟಿ ಮಿಲಿಟರಿ ಸಮರಾಭ್ಯಾಸ.

c. ವಜ್ರ ಪ್ರಹಾರ್ 

3. ಭಾರತ-ಯುಎಸ್‌ಎ ವಿಶೇಷ ಪಡೆಗಳ ಸಮರಾಭ್ಯಾಸ.

d. ಇಂದ್ರ

4. ಭಾರತ-ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ.

ಮೇಲಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?

ಆಯ್ಕೆಗಳು:

  1. A-1, B-2, C-3, D-4
  2. A-2, B-3, C-1, D-4
  3. A-1, B-3, C-2, D-4
  4. A-4, B-2, C-3, D-1

ಉತ್ತರ: A

 

45). ತಂತ್ರಜ್ಞಾನ ಅಭಿವೃದ್ಧಿ ನಿಧಿ (TDF) ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಡಿಆರ್‌ಡಿಒ ಅನುಷ್ಠಾನಗೊಳಿಸುತ್ತಿದೆ.
  2. ಇದು ಕೇವಲ ದೊಡ್ಡ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ಮಾತ್ರ ಬೆಂಬಲಿಸುತ್ತದೆ.
  3. ಈ ಯೋಜನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಭಾಗವಾಗಿದೆ.
  4. ಅನುದಾನದ ಮೂಲಕ ದೇಶೀಯ ರಕ್ಷಣಾ ಮತ್ತು ದ್ವಂದ್ವ-ಬಳಕೆಯ/ದ್ವಿ-ಬಳಕೆಯ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?

  1. 1, 2, ಮತ್ತು 3 ಮಾತ್ರ
  2. 1, 3, ಮತ್ತು 4 ಮಾತ್ರ
  3. 2, 3, ಮತ್ತು 4 ಮಾತ್ರ
  4. 1, 2, 3, ಮತ್ತು 4

ಉತ್ತರ: B

 

46). ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಹಾಡು ನಿರ್ಣಾಯಕ ಪಾತ್ರ ವಹಿಸಿದೆ. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. ಇದನ್ನು ಮೊಟ್ಟಮೊದಲ ಬಾರಿಗೆ 1896ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು.
  2. 1905ರ ಸ್ವದೇಶಿ ಚಳುವಳಿಯ ಸಮಯದಲ್ಲಿ, ಇದು ನಾಗರಿಕ ಪ್ರತಿರೋಧದ ಗೀತೆಯಾಯಿತು.
  3. ವಂದೇ ಮಾತರಂ ಅನ್ನು ಘೋಷಣೆಯಾಗಿ ಮೊದಲ ಬಾರೊಗೆ ರಾಜಕೀಯವಾಗಿ 1907 ರಲ್ಲಿ ಬಳಸಲಾಯಿತು. 

ಸರಿಯಾದ ಹೇಳಿಕೆಯನ್ನು ಆರಿಸಿ:

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 3 ಮಾತ್ರ
  4. 1, 2, ಮತ್ತು 3

 

47). “ಪ್ರಿಹ್ ವಿಹಾರ್ ದೇವಾಲಯ”ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಕಾಂಬೋಡಿಯಾ-ಥೈಲ್ಯಾಂಡ್ ಗಡಿಯಲ್ಲಿರುವ 11-12ನೇ ಶತಮಾನದ ಖಮೇರ್ ದೇವಾಲಯವಾಗಿದೆ.
  2. ಅಂತರರಾಷ್ಟ್ರೀಯ ನ್ಯಾಯಾಲಯವು 1962ರಲ್ಲಿ ಈ ದೇವಾಲಯದ ಸಾರ್ವಭೌಮತ್ವವನ್ನು ಕಾಂಬೋಡಿಯಾಕ್ಕೆ ನೀಡಿತು.
  3. ಈ ವಿವಾದವು 21ನೇ ಶತಮಾನದಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ಸಾಂದರ್ಭಿಕವಾಗಿ ಸಶಸ್ತ್ರ ಘರ್ಷಣೆಗಳಿಗೆ ಕಾರಣವಾಗಿದೆ.
  4. ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 2, ಮತ್ತು 3 ಮಾತ್ರ
  2. 1, 3, ಮತ್ತು 4 ಮಾತ್ರ
  3. 1, 2, 3, ಮತ್ತು 4
  4. 2 ಮತ್ತು 4 ಮಾತ್ರ

 

48). IMF ವರದಿ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳು: ಅಂತರ ಕಾರ್ಯಸಾಧ್ಯತೆಯ ಮೌಲ್ಯ” ಮುಖ್ಯವಾಗಿ ಯಾವುದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ?

  1. ಕ್ರಿಪ್ಟೋಕರೆನ್ಸಿ ಮೈನಿಂಗ್
  2. ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಅಂತರಕಾರ್ಯಸಾಧ್ಯತೆ
  3. ನಗದು ಆಧಾರಿತ ವಹಿವಾಟುಗಳು
  4. ವ್ಯಾಪಾರ ಹಣಕಾಸು ಸುಧಾರಣೆಗಳು

 

49). ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (NPCI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. NPCI ಭಾರತದಲ್ಲಿನ ಚಿಲ್ಲರೆ ಪಾವತಿ ವ್ಯವಸ್ಥೆಗಳಿಗೆ ಒಂದು ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
  2. ಇದನ್ನು ಕೇವಲ ಭಾರತ ಸರ್ಕಾರವೊಂದೇ ಸ್ಥಾಪಿಸಿದೆ.
  3. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007ರ ನಿಬಂಧನೆಗಳ ಅಡಿಯಲ್ಲಿ NPCI ಅನ್ನು ಸ್ಥಾಪಿಸಲಾಯಿತು.
  4. ರೂಪೇ ಮತ್ತು ಭೀಮ್ ಅಪ್ಲಿಕೇಶನ್‌ಗಳು NPCI ಅಭಿವೃದ್ಧಿಪಡಿಸಿದ ಉತ್ಪನ್ನಗಳಲ್ಲಿ ಸೇರಿವೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 1, 3, ಮತ್ತು 4 ಮಾತ್ರ
  3. 2 ಮತ್ತು 4 ಮಾತ್ರ
  4. 1, 2, 3, ಮತ್ತು 4

 

50). ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟವು ಈ ಕೆಳಗಿನ ಯಾವ ಪ್ರಭೇದಗಳನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ?

  1. ಹುಲಿ
  2. ಹಿಮ ಚಿರತೆ
  3. ಜಾಗ್ವಾರ್
  4. ಪೂಮಾ
  5. ಲಿಂಕ್ಸ್

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1, 2, 3, ಮತ್ತು 4 ಮಾತ್ರ
  2. 1, 2, 3, ಮತ್ತು 5 ಮಾತ್ರ
  3. 2, 3, 4, ಮತ್ತು 5 ಮಾತ್ರ
  4. 1, 3, 4, ಮತ್ತು 5 ಮಾತ್ರ

 

51). ವೇದಾರಣ್ಯಂ ಉಪ್ಪಿನ ಸತ್ಯಾಗ್ರಹವು (1930) ಐತಿಹಾಸಿಕವಾಗಿ ಮಹತ್ವದ್ದಾಗಿದೆ.  ಏಕೆಂದರೆ__________

  1. ಇದು ಬ್ರಿಟಿಷ್ ಭಾರತದಲ್ಲಿ ಸಂಘಟಿಸಲಾದ ಮೊಟ್ಟಮೊದಲ ಉಪ್ಪಿನ ಸತ್ಯಾಗ್ರಹವಾಗಿದೆ.
  2. ಇದನ್ನು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಿ. ರಾಜಗೋಪಾಲಾಚಾರಿ ಅವರು ಮುನ್ನಡೆಸಿದರು.
  3. ಇದನ್ನು ಮಹಾತ್ಮ ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾನಾಂತರವಾಗಿ ನಡೆಸಲಾಯಿತು.
  4. ಇದು ದಕ್ಷಿಣ ಭಾರತದಲ್ಲಿ ನಾಗರಿಕ ಅಸಹಕಾರ ಚಳುವಳಿಯ ಆರಂಭವನ್ನು ಸೂಚಿಸಿತು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 2 ಮತ್ತು 3 ಮಾತ್ರ
  2. 1, 2, ಮತ್ತು 3 ಮಾತ್ರ
  3. 2, 3 ಮತ್ತು 4 ಮಾತ್ರ
  4. 1 ಮತ್ತು 4 ಮಾತ್ರ

 

52). ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಅಡಿಯಲ್ಲಿ ಈ ಕೆಳಗಿನ ಯಾವ ವರ್ಗದ ಆಸ್ತಿಗಳನ್ನು ಸೇರಿಸಲಾಗಿದೆ?

  1. ಹಕ್ಕು ಪಡೆಯದ ವಿಮಾ ಮೊತ್ತ
  2. ಪಾವತಿಸದ ಲಾಭಾಂಶಗಳು
  3. ನಿಷ್ಕ್ರಿಯ ಕ್ರಿಪ್ಟೋಕರೆನ್ಸಿ ವಾಲೆಟ್‌ಗಳು
  4. ಹಕ್ಕು ಪಡೆಯದ ಬ್ಯಾಂಕ್ ಠೇವಣಿಗಳು

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1, 2 ಮತ್ತು 4 ಮಾತ್ರ
  2. 1 ಮತ್ತು 3 ಮಾತ್ರ
  3. 2, 3 ಮತ್ತು 4 ಮಾತ್ರ
  4. 1, 2, 3 ಮತ್ತು 4

 

53). ಇತ್ತೀಚೆಗೆ ಸುದ್ದಿಯಲ್ಲಿದ್ದ ಮೆಫೆಡ್ರೋನ್ ಅನ್ನು ಈ ಕೆಳಗಿನಂತೆ ಅತ್ಯಂತ ಸೂಕ್ತವಾಗಿ ವಿವರಿಸಬಹುದು:

  1. ಅಫೀಮು ಗಸಗಸೆಯಿಂದ ಪಡೆದ ನೈಸರ್ಗಿಕ ಮೂಲದ ಮಾದಕ ದ್ರವ್ಯ.
  2. ‘ಹೊಸ ಮನೋಕ್ರಿಯಾತ್ಮಕ ವಸ್ತು’ ಎಂದು ವರ್ಗೀಕರಿಸಲಾದ ಸಂಶ್ಲೇಷಿತ ಉತ್ತೇಜಕ.
  3. ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯಡಿ ನಿಯಂತ್ರಿಸಲ್ಪಡುವ ವೈದ್ಯರು ನೀಡುವ ಮನೋವೈದ್ಯಕೀಯ ಔಷಧ.
  4. ನೋವು ನಿರ್ವಹಣೆಯಲ್ಲಿ ಬಳಸಲಾಗುವ ಅರೆ-ಸಂಶ್ಲೇಷಿತ ಓಪಿಯಾಡ್.

 

54). ಸುದ್ದಿಯಲ್ಲಿರುವ ‘ಯೆಲ್ಲೋ ಲೈನ್’ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಅಂತರರಾಷ್ಟ್ರೀಯ ಕಾನೂನಿನಡಿ ಮಾನ್ಯತೆ ಪಡೆದ ಶಾಶ್ವತ ಅಂತರರಾಷ್ಟ್ರೀಯ ಗಡಿಯಾಗಿದೆ.
  2. ಈ ರೇಖೆಯ ಪೂರ್ವದ ಪ್ರದೇಶಗಳು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯ ನೇರ ನಿಯಂತ್ರಣದಲ್ಲಿವೆ.
  3. ಈ ಗುರುತು ಸಂಪೂರ್ಣವಾಗಿ ಗಾಜಾ-ಇಸ್ರೇಲ್ ಗಡಿಯುದ್ದಕ್ಕೂ ಅಸ್ತಿತ್ವದಲ್ಲಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 2 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

 

55). ಪ್ರತಿಪಾದನೆ (A): ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಕೃಷಿಯು ಪ್ರಮುಖವಾಗಿ ನೀರಾವರಿಯ ಮೇಲೆ ಅವಲಂಬಿತವಾಗಿದೆ.

ಕಾರಣ (R): ಈ ಪ್ರದೇಶಗಳು ಭತ್ತದ ಬೇಸಾಯಕ್ಕೆ ಅಗತ್ಯವಿರುವ ಗರಿಷ್ಠ ಪ್ರಮಾಣಕ್ಕಿಂತ ಕಡಿಮೆ ಮಳೆಯನ್ನು ಪಡೆಯುತ್ತವೆ.

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
  2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
  3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
  4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

 

56). ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:

ಇಂಟರ್ಪೋಲ್ ನೋಟಿಸ್ 

ಪ್ರಾಥಮಿಕ ಉದ್ದೇಶ

1. ರೆಡ್ ನೋಟಿಸ್ 

ವಿಚಾರಣೆ ಎದುರಿಸಲು ಅಥವಾ ಶಿಕ್ಷೆ ಅನುಭವಿಸಲು ಬೇಕಾದ ವ್ಯಕ್ತಿಯ ಬಂಧನವನ್ನು ಕೋರುವುದು.

2. ಯೆಲ್ಲೋ ನೋಟಿಸ್ 

ಶಂಕಿತರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.

3. ಬ್ಲೂ ನೋಟಿಸ್ 

ನಾಪತ್ತೆಯಾದ ವ್ಯಕ್ತಿಗಳನ್ನು, ಪ್ರಮುಖವಾಗಿ ಅಪ್ರಾಪ್ತರನ್ನು ಪತ್ತೆಹಚ್ಚುವುದು.

4. ಬ್ಲ್ಯಾಕ್ ನೋಟಿಸ್ 

ಗುರುತಿಸಲಾಗದ ಶವಗಳ ಬಗ್ಗೆ ಮಾಹಿತಿ ಕೋರುವುದು.

ಮೇಲಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿದೆ/ಗಿವೆ?

  1. 2 ಮತ್ತು 3 ಮಾತ್ರ
  2. 1, 3 ಮತ್ತು 4 ಮಾತ್ರ
  3. 1 ಮತ್ತು 4 ಮಾತ್ರ
  4. 1, 2, 3 ಮತ್ತು 4

 

57). ಸರ್ದಾರ್ ಪಟೇಲ್ ಅವರು ಭಾಗಿಯಾಗಿದ್ದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಈ ಕೆಳಗಿನ ಘಟನೆಗಳನ್ನು ಪರಿಗಣಿಸಿ:

  1. ಕ್ವಿಟ್ ಇಂಡಿಯಾ ಚಳುವಳಿ
  2. ಬಾರ್ಡೋಲಿ ಸತ್ಯಾಗ್ರಹ
  3. ಖೇಡಾ ಸತ್ಯಾಗ್ರಹ
  4. ಉಪ್ಪಿನ ಸತ್ಯಾಗ್ರಹ

ಇವುಗಳ ಸರಿಯಾದ ಕಾಲಾನುಕ್ರಮ ಯಾವುದು?

  1. 3 – 2 – 4 – 1
  2. 3 – 4 – 2 – 1
  3. 2 – 3 – 4 – 1
  4. 3 – 2 – 1 – 4

 

58). ಕಾಡೆಮ್ಮೆ ಕೊಂಬು (ಹಾರ್ನ್) ಮರಿಯಾ ನೃತ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ಬಸ್ತಾರ್‌ನ ಮರಿಯಾ ಬುಡಕಟ್ಟು ಜನಾಂಗದ ಪುರುಷರು ಮಾತ್ರ ಪ್ರದರ್ಶಿಸುತ್ತಾರೆ.
  2. ಪುರುಷ ನರ್ತಕರು ಕಾಡೆಮ್ಮೆ ಕೊಂಬುಗಳು, ಗರಿಗಳು ಮತ್ತು ಪ್ರಕಾಶಮಾನವಾದ ಬಟ್ಟೆಯ ಪಟ್ಟಿಗಳಿಂದ ಅಲಂಕರಿಸಲ್ಪಟ್ಟ ಕೊಂಬಿನ ಆಕಾರದ ಶಿರಸ್ತ್ರಾಣವನ್ನು ಧರಿಸುತ್ತಾರೆ.
  3. ಈ ನೃತ್ಯದ ಜೊತೆಗೆ ಬುಧದೇವ ಮತ್ತು ದಂತೇಶ್ವರಿ ಮೈ ಅಂತಹ ದೇವತೆಗಳನ್ನು ಆವಾಹಿಸುವ ಆಚರಣೆಯ ಮಂತ್ರಗಳನ್ನು ಪಠಿಸಲಾಗುತ್ತದೆ.

ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳಲ್ಲಿ ಸರಿಯಾಗಿವೆ?

  1. ಕೇವಲ ಒಂದು ಹೇಳಿಕೆ ಮಾತ್ರ
  2. ಕೇವಲ ಎರಡು ಹೇಳಿಕೆಗಳು ಮಾತ್ರ
  3. ಎಲ್ಲಾ ಮೂರು ಹೇಳಿಕೆಗಳು
  4. ಮೇಲಿನ ಯಾವುದೂ ಅಲ್ಲ

 

59). ಭಾರತದಲ್ಲಿನ ಭೌಗೋಳಿಕ ಸೂಚಕಗಳಿಗೆ (GI) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಭಾರತದಲ್ಲಿ ಭೌಗೋಳಿಕ ಸೂಚಕ ನೋಂದಣಿಯನ್ನು ‘ಸರಕುಗಳ ಭೌಗೋಳಿಕ ಸೂಚಕಗಳು (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999’ ರ ಮೂಲಕ ನಿಯಂತ್ರಿಸಲಾಗುತ್ತದೆ.
  2. ಉತ್ಪನ್ನದ ಜಿಐ ನೋಂದಣಿಯು ಆ ನೋಂದಾಯಿತ ಉತ್ಪನ್ನಕ್ಕೆ ವಿಶೇಷ ಮಾರುಕಟ್ಟೆ ಹಕ್ಕುಗಳನ್ನು ಒದಗಿಸುತ್ತದೆ.
  3. ಭಾರತದಲ್ಲಿ ಜಿಐ ಮಾನ್ಯತೆ ಪಡೆದ ಮೊದಲ ಉತ್ಪನ್ನ ‘ಪೊಂದೂರು ಖಾದಿ’ ಆಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 1 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3  

 

60). ಮಹಾ ಕ್ರೈಮ್‌ ಓಎಸ್ (MahaCrimeOS) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಮೈಕ್ರೋಸಾಫ್ಟ್ ಮತ್ತು ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿದ ಎಐ ಆಧಾರಿತ ಪೊಲೀಸ್ ಉಪಕ್ರಮವಾಗಿದೆ.
  2. ಇದು ‘ಮಾರ್ವೆಲ್’ (MARVEL – ವರ್ಧಿತ ಕಾನೂನು ಜಾರಿಗಾಗಿ ಮಹಾರಾಷ್ಟ್ರ ಸಂಶೋಧನೆ ಮತ್ತು ಕಣ್ಗಾವಲು ವ್ಯವಸ್ಥೆ) ಯೋಜನೆಯಡಿ ಕಾರ್ಯನಿರ್ವಹಿಸುತ್ತದೆ.
  3. ಮಹಾಕ್ರೈಮ್‌ ಓಎಸ್  ಕೇವಲ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಕಣ್ಗಾವಲು ಸಾಧನವಾಗಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 2 ಮಾತ್ರ
  4. 1, 2 ಮತ್ತು 3

 

61). “ಲೂನಾರ್‌ಕ್ರೀಟ್” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?

  1. ಮಂಗಳ ಗ್ರಹದ ಮಣ್ಣನ್ನು ಬಳಸಿ ತಯಾರಿಸಿದ ಒಂದು ರೀತಿಯ ಕಾಂಕ್ರೀಟ್.
  2. ಚಂದ್ರನ ಮೇಲಿನ  ಮಣ್ಣನ್ನು ಬಳಸಿ ತಯಾರಿಸಿದ ಒಂದು ರೀತಿಯ ಕಾಂಕ್ರೀಟ್.
  3. ನಿರ್ಮಾಣ ಕಾರ್ಯಗಳಿಗಾಗಿ ಅಭಿವೃದ್ಧಿಪಡಿಸಲಾದ ಚಂದ್ರನ ರೋವರ್.
  4. ಬಾಹ್ಯಾಕಾಶ ನೌಕೆಗಳಿಗಾಗಿ ಬಳಸುವ ಬಾಹ್ಯಾಕಾಶ-ದರ್ಜೆಯ ಅಂಟಿಕೊಳ್ಳುವ ದ್ರವ್ಯ.

 

62). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ರಮ್ಮನ್, ಕುಡಿಯಟ್ಟಂ ಮತ್ತು ಮುಡಿಯೆಟ್ಟು ಧಾರ್ಮಿಕ ನಾಟಕ ಪ್ರಕಾರಗಳಾಗಿವೆ.
  2. ಛೌ ನೃತ್ಯ, ಕಾಲ್ಬೇಲಿಯಾ ಮತ್ತು ಸಂಕೀರ್ತನಾ ಧಾರ್ಮಿಕ ನೃತ್ಯ ಪ್ರಕಾರಗಳಾಗಿವೆ.
  3. ಯೋಗ, ನವ್ರೋಜ್ ಮತ್ತು ದೀಪಾವಳಿ ಹಬ್ಬ ಅಥವಾ ಆಚರಣೆ ಆಧಾರಿತ ಪರಂಪರೆಯ ಅಂಶಗಳಾಗಿವೆ.

ಮೇಲಿನ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?

  1. ಕೇವಲ 1
  2. ಕೇವಲ 2
  3. ಕೇವಲ 3
  4. ಎಲ್ಲಾ ಹೇಳಿಕೆಗಳು ಸರಿಯಾಗಿವೆ

 

63). “ವಿಶ್ವ ಅಸಮಾನತೆ ವರದಿ”ಯ ಪ್ರಕಾರ, ಕಾರ್ಮಿಕ ಬಲದ ಭಾಗವಹಿಸುವಿಕೆಯಲ್ಲಿ ಭಾರತದ ಲಿಂಗ ಅಸಮಾನತೆಯನ್ನು ಈ ಕೆಳಗಿನ ಯಾವುದರ ಮೂಲಕ ಪ್ರಮುಖವಾಗಿ ಗುರುತಿಸಲಾಗಿದೆ?

  1. ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಸುಮಾರು 35% ರಷ್ಟಿದೆ ಮತ್ತು ಸ್ಥಿರವಾಗಿ ಹೆಚ್ಚುತ್ತಿದೆ.
  2. ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಅತ್ಯಂತ ಕಡಿಮೆ ಇದ್ದು, 15.7% ರಷ್ಟು ಸ್ಥಗಿತಗೊಂಡಿದೆ.
  3. ಪುರುಷ ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ದರಗಳು ಬಹುತೇಕ ಸಮಾನವಾಗಿವೆ.
  4. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯು ಪುರುಷರಿಗಿಂತ ಹೆಚ್ಚಿದೆ.

 

64). ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (UNEP) ಪ್ರಕಟಿಸುವ “ಜಾಗತಿಕ ಪರಿಸರ ದೃಷ್ಟಿಕೋನ” (GEO-7) ವರದಿಯ ಪ್ರಕಾರ, ಜಾಗತಿಕ ಆರೋಗ್ಯದ ಮೇಲಾಗುವ ಪರಿಣಾಮಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

  1. ವಾಯು ಮಾಲಿನ್ಯವೊಂದರಿಂದಲೇ ವಾರ್ಷಿಕವಾಗಿ ಲಕ್ಷಾಂತರ ಅಕಾಲಿಕ ಮರಣಗಳು ಸಂಭವಿಸುತ್ತಿವೆ.
  2. ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಮಣ್ಣು ಮತ್ತು ನೀರಿನ ಮಾಲಿನ್ಯವು ಅತ್ಯಲ್ಪವಾಗಿದೆ.
  3. ತಂತ್ರಜ್ಞಾನದ ಕಾರಣದಿಂದಾಗಿ ಮಾಲಿನ್ಯ ಸಂಬಂಧಿತ ಸಾವುಗಳು ಕಡಿಮೆಯಾಗುತ್ತಿವೆ.
  4. ಮಾಲಿನ್ಯವು ಜಾಗತಿಕವಾಗಿ 1 ಬಿಲಿಯನ್‌ಗಿಂತಲೂ ಕಡಿಮೆ ಜನರ ಮೇಲೆ ಪರಿಣಾಮ ಬೀರುತ್ತದೆ.

 

65). ಅಸ್ಸಾಂ ಚಳುವಳಿ (1979–1985)ಯ ಬಗ್ಗೆ ಈ ಕೆಳಗಿನವುಗಳನ್ನು ಪರಿಗಣಿಸಿ:

  1. ಇದನ್ನು ಅಸ್ಸಾಂ ವಿದ್ಯಾರ್ಥಿ ಸಂಘ (ASU) ಮತ್ತು ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್ (AAGSP) ಮುನ್ನಡೆಸಿದ್ದವು.
  2. ಇದು 1985 ರಲ್ಲಿ “ಅಸ್ಸಾಂ ಒಪ್ಪಂದ”ಕ್ಕೆ ಸಹಿ ಹಾಕುವ ಮೂಲಕ ಅಂತ್ಯಗೊಂಡಿತು.
  3. ಅಸ್ಸಾಂ ಒಪ್ಪಂದವು ಭಾರತದಿಂದ ಅಸ್ಸಾಂಗೆ ಸ್ವಾತಂತ್ರ್ಯ ನೀಡುವುದನ್ನು ಗುರಿಯಾಗಿರಿಸಿಕೊಂಡಿತ್ತು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

66). ಏಶಿಯನ್ ಅಭಿವೃದ್ಧಿ ಬ್ಯಾಂಕ್ (ADB)ನ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

  1. ಇದು ಕೇವಲ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳನ್ನು ಮಾತ್ರ ಒಳಗೊಂಡಿದೆ.
  2. ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (UNESCAP)ದ ಸದಸ್ಯರ ಪೈಕಿ ಸುಮಾರು ಮೂರನೇ ಎರಡರಷ್ಟು ರಾಷ್ಟ್ರಗಳು ‘ಎಡಿಬಿ’ಯಲ್ಲಿ ಭಾಗವಹಿಸುತ್ತವೆ.
  3. ಈ ಪ್ರದೇಶದ ಹೊರಗಿನ ಅಭಿವೃದ್ಧಿ ಹೊಂದಿದ ದಾನಿ ರಾಷ್ಟ್ರಗಳು ಸಹ ಇದರ ಸದಸ್ಯರಾಗಿದ್ದಾರೆ.

ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿಲ್ಲ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮಾತ್ರ
  4. 1, 2 ಮತ್ತು 3

 

67). ಪ್ರತಿಪಾದನೆ (A): ಹವಳದ ಅಂಗಾಂಶಗಳಿಂದ ಝೂಕ್ಸಾಂಥೆಲೆ ಪಾಚಿಗಳು ಹೊರಹಾಕಲ್ಪಡುವುದರಿಂದ ಹವಳದ ವಿವರ್ಣವಾಗುವಿಕೆ/ವರ್ಣನಾಶನ ಸಂಭವಿಸುತ್ತದೆ.

ಕಾರಣ (R): ಹವಳದ ಪಾಲಿಪ್‌ಗಳು ಒತ್ತಡದ ಸಮಯದಲ್ಲಿ ವಿಷಕಾರಿ ಅಂಶಗಳನ್ನು ಉತ್ಪಾದಿಸುತ್ತವೆ, ಇದು ಪಾಚಿಗಳನ್ನು ಹೊರಹೋಗುವಂತೆ ಒತ್ತಾಯಿಸುತ್ತದೆ.

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
  2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
  3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
  4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

 

68). ಪಶ್ಚಿಮದ ಟ್ರಾಗೋಪನ್ ಪಕ್ಷಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಹಿಮಾಚಲ ಪ್ರದೇಶದ ರಾಜ್ಯ ಪಕ್ಷಿಯಾಗಿದೆ.
  2. ಈ ಪ್ರಭೇದವು ಹಿಮಾಲಯದಾದ್ಯಂತ ವಿಶಾಲವಾದ ಮತ್ತು ನಿರಂತರವಾದ ಆವಾಸಸ್ಥಾನಗಳಲ್ಲಿ ಬದುಕುಳಿಯುತ್ತದೆ.
  3. ಐಯುಸಿಎನ್ ಕೆಂಪು ಪಟ್ಟಿಯು ಇದನ್ನು ‘ದುರ್ಬಲ’ ಎಂದು ವರ್ಗೀಕರಿಸಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 2 ಮಾತ್ರ
  4. 1, 2 ಮತ್ತು 3 ಎಲ್ಲವೂ

 

69). “ಶಾಂತಿ ಮಸೂದೆ” (SHANTI Bill) ಅಡಿಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯ ಬಗ್ಗೆ ಈ ಕೆಳಗಿನವುಗಳನ್ನು ಪರಿಗಣಿಸಿ:

  1. ಖಾಸಗಿ ಕಂಪನಿಗಳು ಪರಮಾಣು ಖನಿಜಗಳ ಪರಿಶೋಧನೆಯಲ್ಲಿ ಭಾಗವಹಿಸಬಹುದು.
  2. ಖಾಸಗಿ ಕಂಪನಿಗಳು ಪರಮಾಣು ಉಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸಬಹುದು.
  3. ಖಾಸಗಿ ಕಂಪನಿಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಬಹುದು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

70). ದಕುಮ್ ಬಂದರು ಈ ಕೆಳಗಿನ ಯಾವ ಸ್ಥಳದಲ್ಲಿದೆ?

  1. ಒಮನ್‌ನ ಉತ್ತರ ಕರಾವಳಿ, ಪರ್ಷಿಯನ್ ಕೊಲ್ಲಿಗೆ ಎದುರಾಗಿ.
  2. ಒಮನ್‌ನ ಆಗ್ನೇಯ ಕರಾವಳಿ, ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಎದುರಾಗಿ.
  3. ಒಮನ್‌ನ ನೈಋತ್ಯ ಕರಾವಳಿ, ಕೆಂಪು ಸಮುದ್ರದ ಸಮೀಪ.
  4. ಒಮನ್‌ನ ಈಶಾನ್ಯ ಕರಾವಳಿ, ಒಮನ್ ಕೊಲ್ಲಿಯ ಸಮೀಪ.

 

71). ಪ್ರತಿಪಾದನೆ (A): ಪ್ಯಾಕ್ಸ್ ಸಿಲಿಕಾ ಉಪಕ್ರಮವು ಜಾಗತಿಕ ತಂತ್ರಜ್ಞಾನ ವಲಯಕ್ಕೆ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ.

ಕಾರಣ (R): ಸಿಲಿಕಾನ್ ಸೆಮಿಕಂಡಕ್ಟರ್ ತಯಾರಿಕೆ ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್‌ಗೆ ಅಗತ್ಯವಾದ ಒಂದು ನಿರ್ಣಾಯಕ ಕಚ್ಚಾ ವಸ್ತುವಾಗಿದೆ.

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. A ಮತ್ತು R ಎರಡೂ ಸರಿ, ಹಾಗೂ R ಎಂಬುದು A ಗೆ ಸರಿಯಾದ ವಿವರಣೆಯಾಗಿದೆ.
  2. A ಮತ್ತು R ಎರಡೂ ಸರಿ, ಆದರೆ R ಎಂಬುದು A ಗೆ ಸರಿಯಾದ ವಿವರಣೆಯಲ್ಲ.
  3. A ಸರಿಯಾಗಿದೆ, ಆದರೆ R ತಪ್ಪಾಗಿದೆ.
  4. A ತಪ್ಪಾಗಿದೆ, ಆದರೆ R ಸರಿಯಾಗಿದೆ.

 

72). ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (PMGKP) ವಿಮಾ ಯೋಜನೆಯಡಿ ಈ ಕೆಳಗಿನ ಯಾವ ಅಪಾಯಗಳನ್ನು ಒಳಗೊಳ್ಳಲಾಗಿದೆ?

  1. ಕೆಲಸದ ಸ್ಥಳದಲ್ಲಿ ಅಪಘಾತಗಳಿಂದ ಸಂಭವಿಸುವ ಸಾವು.
  2. ಯಾವುದೇ ಸಾಂಕ್ರಾಮಿಕ ಕಾಯಿಲೆಯಿಂದ ಸಂಭವಿಸುವ ಸಾವು.
  3. ಕೇವಲ ಕೋವಿಡ್-19 ಸೋಂಕಿನಿಂದ ಸಂಭವಿಸುವ ಸಾವು ಮಾತ್ರ.
  4. ಮೇಲಿನ ಎಲ್ಲವೂ.

 

73). ಮಖಾನಾ (Euryale ferox) ಕುರಿತಾದ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. ಇದು ನೈದಿಲೆ (Water lily) ಕುಟುಂಬಕ್ಕೆ (Nymphaeaceae) ಸೇರಿದೆ.
  2. ಇದು ಸಂಪೂರ್ಣ ಸಾವಯವ ಧಾನ್ಯವಲ್ಲದ ಆಹಾರವಾಗಿದ್ದು, ಮುಖ್ಯವಾಗಿ ಭಾರತ, ಕೊರಿಯಾ, ಜಪಾನ್ ಮತ್ತು ಪೂರ್ವ ರಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ.
  3. ಇದಕ್ಕೆ 15-25°C ತಾಪಮಾನದ ವ್ಯಾಪ್ತಿ ಮತ್ತು 100 ಸೆಂ.ಮೀ ಗಿಂತ ಕಡಿಮೆ ವಾರ್ಷಿಕ ಮಳೆಯ ಅಗತ್ಯವಿದೆ.
  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

74). “ಪ್ರಾಜೆಕ್ಟ್ ಸನ್‌ಕ್ಯಾಚರ್” ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಉಪಗ್ರಹ ಸಮೂಹಗಳನ್ನು ಬಳಸಿಕೊಂಡು ಬಾಹ್ಯಾಕಾಶ ಆಧಾರಿತ, ಸೌರಶಕ್ತಿ ಚಾಲಿತ ಮತ್ತು ಎಐ-ಕೇಂದ್ರಿತ ದತ್ತಾಂಶ ಕೇಂದ್ರಗಳನ್ನು ನಿರ್ಮಿಸುವ ಗೂಗಲ್‌ನ ಉಪಕ್ರಮವಾಗಿದೆ.
  2. ಇದು ಭೂಮಿ, ನೀರು ಮತ್ತು ತಂಪಾಗಿಸುವ ವ್ಯವಸ್ಥೆಗಳಂತಹ ಭೂಮಿಯ ಮೇಲಿನ ಮೂಲಸೌಕರ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
  3. ಇದು ಚಂದ್ರನ ಸೌರಶಕ್ತಿಯನ್ನು ಬಳಸಿಕೊಳ್ಳಲು ಚಂದ್ರನ ಮೇಲೆ ದತ್ತಾಂಶ ಕೇಂದ್ರಗಳನ್ನು ಸ್ಥಾಪಿಸುವುದನ್ನು ಒಳಗೊಂಡಿದೆ.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

75). ಯುಎನ್‌ಇಪಿ ನೀಡುವ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ “ಚಾಂಪಿಯನ್ಸ್ ಆಫ್ ದಿ ಅರ್ಥ್” ಪ್ರಶಸ್ತಿಯನ್ನು ಪಡೆದ ಭಾರತೀಯರು ಯಾರು?

  1. ಮಾಧವ್ ಗಾಡ್ಗೀಳ್
  2. ನರೇಂದ್ರ ಮೋದಿ
  3. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  4. ಅಫ್ರೋಜ್ ಶಾ
  5. ಸುಪ್ರಿಯಾ ಸಾಹು

ಮೇಲಿನವರಲ್ಲಿ ಎಷ್ಟು ಜನರು/ಸಂಸ್ಥೆಗಳು ಸರಿಯಾಗಿವೆ?

  1. 4
  2. 3
  3. 5
  4. 2

 

76). ಈ ಕೆಳಗಿನ ಯಾವ ದೇಶವು ಒಮಾನ್ ಕೊಲ್ಲಿಯ ಉದ್ದಕ್ಕೂ ಕರಾವಳಿಯನ್ನು ಹೊಂದಿಲ್ಲ?

  1. ಇರಾನ್
  2. ಯುನೈಟೆಡ್ ಅರಬ್ ಎಮಿರೇಟ್ಸ್
  3. ಒಮಾನ್
  4. ಸೌದಿ ಅರೇಬಿಯಾ

 

77). ನೈಲ್ ನದಿಯ ಪ್ರಮುಖ ಉಪನದಿಯಾದ ಬ್ಲೂ ನೈಲ್ ಎಲ್ಲಿ ಉಗಮಿಸುತ್ತದೆ?

  1. ವಿಕ್ಟೋರಿಯಾ ಸರೋವರ
  2. ಆಲ್ಬರ್ಟ್ ಸರೋವರ
  3. ಟಾನಾ ಸರೋವರ
  4. ತುರ್ಕಾನಾ ಸರೋವರ

 

78). ಈ ಕೆಳಗಿನ ಜೋಡಿಗಳಲ್ಲಿ ಎಷ್ಟು ಸರಿಯಾಗಿ ಹೊಂದಿಕೆಯಾಗಿವೆ?

ಯೋಜನೆ / ಉಪಕ್ರಮ

ಗುರಿ / ಉದ್ದೇಶ

1. ಅಸ್ಪೈರ್ (ASPIRE) ಯೋಜನೆ

ಸೂಕ್ಷ್ಮ ಉದ್ಯಮಗಳಿಗೆ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಇನ್ಕ್ಯುಬೇಷನ್ ಪ್ರೋತ್ಸಾಹಿಸುವುದು.

2. PMEGP

ಸೂಕ್ಷ್ಮ ಉದ್ಯಮಗಳ ಮೂಲಕ ಸ್ವಯಂ ಉದ್ಯೋಗಕ್ಕಾಗಿ ಸಾಲ-ಸಂಯೋಜಿತ ಸಬ್ಸಿಡಿ ನೀಡುವುದು.

3. ಸ್ಟಾರ್ಟ್ ಅಪ್ ಇಂಡಿಯಾ

ಸರ್ಕಾರಿ ವಲಯದಲ್ಲಿ ನೇರ ಕೂಲಿ ಉದ್ಯೋಗ ಒದಗಿಸುವುದು.

4. ಯಶಸ್ವಿನಿ ಅಭಿಯಾನ

ಔಪಚಾರಿಕೀಕರಣ, ಸಾಲದ ಲಭ್ಯತೆ ಮತ್ತು ಮಾರ್ಗದರ್ಶನದ ಬಗ್ಗೆ ಅರಿವು ಮೂಡಿಸುವ ಮೂಲಕ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವುದು.

ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. ಕೇವಲ ಒಂದು ಜೋಡಿ
  2. ಕೇವಲ ಎರಡು ಜೋಡಿಗಳು
  3. ಕೇವಲ ಮೂರು ಜೋಡಿಗಳು
  4. ಎಲ್ಲವೂ ಸರಿಯಾಗಿ ಹೊಂದಿಕೆಯಾಗಿವೆ

 

79). ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಸರಕು ಮತ್ತು ದ್ವಿಪಕ್ಷೀಯ ವ್ಯಾಪಾರ ಬಾಕಿಗಳೆರಡೂ ಋಣಾತ್ಮಕವಾಗಿದ್ದಾಗಲೂ ಸೇವಾ ವ್ಯಾಪಾರದಲ್ಲಿ ಹೆಚ್ಚುವರಿ ಅಸ್ತಿತ್ವದಲ್ಲಿರಬಹುದು.
  2. ಸರಕು ವ್ಯಾಪಾರ ಕೊರತೆಯ ಕಡಿತವು ಸ್ವಯಂಚಾಲಿತವಾಗಿ ಚಾಲ್ತಿ ಖಾತೆ ಕೊರತೆಯ ಕಡಿತಕ್ಕೆ ಕಾರಣವಾಗುತ್ತದೆ.
  3. ದ್ವಿಪಕ್ಷೀಯ ವ್ಯಾಪಾರ ಕೊರತೆಯು ವ್ಯಾಪಾರ ನೀತಿ, ಕರೆನ್ಸಿ ಮೌಲ್ಯಮಾಪನ ಮತ್ತು ಬೇಡಿಕೆಯ ಮಾದರಿಗಳಿಂದ ಪ್ರಭಾವಿತವಾಗಿರುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

80). “ಜಿಗಿಯುವ ವಂಶವಾಹಿ” ಎಂಬ ಪದವು ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ?

  1. ಜೀವಕೋಶ ವಿಭಜನೆಯ ಸಮಯದಲ್ಲಿ ಮಾತ್ರ ರೂಪಾಂತರಗೊಳ್ಳುವ ವಂಶವಾಹಿಗಳು.
  2. ಜೀನೋಮ್‌ನೊಳಗೆ ತಮ್ಮ ಸ್ಥಾನವನ್ನು ಬದಲಾಯಿಸಬಲ್ಲ ಡಿಎನ್ಎ ಅನುಕ್ರಮಗಳು.
  3. ಜೀವಕೋಶಗಳ ನಡುವೆ ಚಲಿಸುವ ಆರ್‌ಎನ್‌ಎ ಅಣುಗಳು.
  4. ವರ್ಣತಂತು ಪ್ರತ್ಯೇಕತೆಯಲ್ಲಿ ಭಾಗವಹಿಸುವ ಪ್ರೋಟೀನ್‌ಗಳು.

 

81). ಎಹೆಚ್-64ಇ ಅಪಾಚೆ ದಾಳಿ ಹೆಲಿಕಾಪ್ಟರ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು ವಿಶ್ವದ ಅತ್ಯಂತ ಸುಧಾರಿತ ವಿವಿಧೋದ್ದೇಶ ಸಮರ ಹೆಲಿಕಾಪ್ಟರ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
  2. ಇದು ಸರ್ವ-ಹವಾಮಾನ ಮತ್ತು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
  3. ಎಹೆಚ್-64ಇ ಅಪಾಚೆಗಾಗಿ 2020 ರಲ್ಲಿ ಅಮೆರಿಕದೊಂದಿಗೆ ಭಾರತದ ಒಪ್ಪಂದವು ಸರ್ಕಾರದಿಂದ ಸರ್ಕಾರದ ಒಪ್ಪಂದದ ಅಡಿಯಲ್ಲಿ ಸಹಿ ಹಾಕಲ್ಪಟ್ಟಿತು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 3 ಮಾತ್ರ
  4. 1, 2 ಮತ್ತು 3

 

82). ವಿಕಸಿತ ಭಾರತ – ರೋಜಗಾರ್/ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ, 2025 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005 ಅನ್ನು ಬದಲಾಯಿಸುತ್ತದೆ.
  2. ಇದು ಗ್ರಾಮೀಣ ಉದ್ಯೋಗ ಚೌಕಟ್ಟನ್ನು ‘ಬೇಡಿಕೆ-ಆಧಾರಿತ’ದಿಂದ ‘ಪೂರೈಕೆ-ಆಧಾರಿತ’ಕ್ಕೆ ಬದಲಾಯಿಸುತ್ತದೆ.
  3. ಇದು ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ.
  4. ಈ ಯೋಜನೆಯನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು. ಇದರ ನಿಧಿ ಹಂಚಿಕೆಯ ಅನುಪಾತವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪವಾಗಿರುತ್ತದೆ.

ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

  1. ಕೇವಲ ಒಂದು ಹೇಳಿಕೆ ಮಾತ್ರ
  2. ಕೇವಲ ಎರಡು ಹೇಳಿಕೆಗಳು ಮಾತ್ರ
  3. ಕೇವಲ ಮೂರು ಹೇಳಿಕೆಗಳು ಮಾತ್ರ
  4. ಎಲ್ಲಾ ಹೇಳಿಕೆಗಳು ಸರಿಯಾಗಿವೆ

 

83). ಮುಖ್ಯ ಮಾಹಿತಿ ಆಯುಕ್ತರನ್ನು ನೇಮಿಸುವ ಆಯ್ಕೆ ಸಮಿತಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಪ್ರಧಾನಮಂತ್ರಿಯವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
  2. ಲೋಕಸಭೆಯ ವಿರೋಧ ಪಕ್ಷದ ನಾಯಕರು ಸಮಿತಿಯ ಸದಸ್ಯರಾಗಿರುತ್ತಾರೆ.
  3. ಭಾರತದ ಮುಖ್ಯ ನ್ಯಾಯಾಧೀಶರು ಸಹ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

 

84). ಈ ಕೆಳಗಿನವುಗಳನ್ನು ಹೊಂದಿಸಿ:

ಜಲಮೂಲ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಪರಿಸರ ವೈಶಿಷ್ಟ್ಯ

a. ಸಿಲಿಸೇರ್ ಸರೋವರ 

1. ರಾಜಸ್ಥಾನ

P. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಮೀಪದಲ್ಲಿದೆ.

b. ಕೊಪ್ರಾ ಜಲಾಶಯ 

2. ಛತ್ತೀಸ್‌ಗಢ

Q. ರಾಜ್ಯದ ಮೊದಲ ರಾಮ್ಸರ್ ತಾಣ.

c. ಲೋಕ್ಟಕ್ ಸರೋವರ 

3. ಮಣಿಪುರ

R. ತೇಲುವ ಫುಮ್ಡಿಗಳು (ಜೌಗು ಪ್ರದೇಶ).

ಸರಿಯಾದ ಉತ್ತರವನ್ನು ಆರಿಸಿ:

  1. a-1-P, b-2-Q, c-3-R
  2. a-1-Q, b-2-P, c-3-R
  3. a-1-P, b-2-R, c-3-Q
  4. a-1-R, b-2-P, c-3-Q

 

85). ಪೆರುಂಬಿಡುಗು ಮುತ್ತರೈಯರ್ ಅವರ ಧಾರ್ಮಿಕ ಮತ್ತು ಸಾಂಸ್ಕೃತಿಕ ನೀತಿಗಳ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಅವರು ಹಿಂದೂ ದೇವಾಲಯಗಳನ್ನು ಪೋಷಿಸಿದರು ಮತ್ತು ಶೈವ ಹಾಗೂ ವೈಷ್ಣವ ಧರ್ಮಗಳ ಪುನರುತ್ಥಾನಕ್ಕೆ ಕೊಡುಗೆ ನೀಡಿದರು.
  2. ಅವರ ಆಳ್ವಿಕೆಯ ಕಾಲದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವದ ನಡುವೆಯೂ ಹಿಂದೂ ಧರ್ಮವು ಪುನರುಜ್ಜೀವನಗೊಂಡಿತು.
  3. ಅವರು ಪಲ್ಲವರ ಸಾರ್ವಭೌಮತ್ವದ ಅಡಿಯಲ್ಲಿ ಜೈನ ಧರ್ಮವನ್ನು ರಾಜ್ಯ ಧರ್ಮವಾಗಿ ಪ್ರೋತ್ಸಾಹಿಸಿದರು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

 

86). ಜೋರ್ಡಾನ್ ದೇಶದ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಜೋರ್ಡಾನ್ ಪಶ್ಚಿಮ ಏಷ್ಯಾದ ಲೆವಂಟ್ ಪ್ರದೇಶದ ಭಾಗವಾಗಿದೆ.
  2. ಕೆಂಪು ಸಮುದ್ರದಲ್ಲಿನ ಒಂದು ಸಣ್ಣ ಕರಾವಳಿಯನ್ನು ಹೊರತುಪಡಿಸಿ ಇದು ಸಂಪೂರ್ಣವಾಗಿ ಭೂಬಂಧಿತ(ಭೂಆವೃತ) ರಾಷ್ಟ್ರವಾಗಿದೆ.
  3. ಭೂಮಿಯ ಅತ್ಯಂತ ತಗ್ಗು ಪ್ರದೇಶವಾದ ಮೃತ ಸಮುದ್ರವು (Dead Sea) ಜೋರ್ಡಾನ್ ಮತ್ತು ಪ್ಯಾಲೆಸ್ಟೈನ್ ನಡುವೆ ಇದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 1 ಮತ್ತು 2 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3

 

87). ವಿಶ್ವಸಂಸ್ಥೆಯ ನಾಗರಿಕತೆಗಳ ಒಕ್ಕೂಟ (UNAOC)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇದನ್ನು 2005 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದನ್ನು ಟರ್ಕಿ ಹಾಗೂ ಸ್ಪೇನ್ ರಾಷ್ಟ್ರಗಳು ಆರಂಭಿಸಿದ್ದವು.
  2. ಇದರ ಸಚಿವಾಲಯವು ಜಿನೀವಾದಲ್ಲಿದೆ.
  3. ಧ್ರುವೀಕರಣ, ಉಗ್ರವಾದ, ಪರಕೀಯ ದ್ವೇಷ ಮತ್ತು ದ್ವೇಷ ಭಾಷಣವನ್ನು ಎದುರಿಸುವ ಮೂಲಕ ಅಂತರ-ಸಾಂಸ್ಕೃತಿಕ ಮತ್ತು ಅಂತರ-ಧಾರ್ಮಿಕ ಸಂಬಂಧಗಳನ್ನು ಸುಧಾರಿಸುವುದು ಇದರ ಕಾರ್ಯವಾಗಿದೆ.
  4. ಪರಸ್ಪರ ತಿಳುವಳಿಕೆ, ಒಳಗೊಳ್ಳುವಿಕೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಿಲಿಟರಿ ಮತ್ತು ಆರ್ಥಿಕ ನೆರವು ನೀಡುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 3 ಮಾತ್ರ
  2. 2 ಮತ್ತು 4 ಮಾತ್ರ
  3. 3 ಮತ್ತು 4 ಮಾತ್ರ
  4. 1 ಮತ್ತು 4 ಮಾತ್ರ

 

88). ಈ ಕೆಳಗಿನವುಗಳಲ್ಲಿ ಯಾವುವು ರಾಷ್ಟ್ರೀಯ ರಕ್ತ ವರ್ಗಾವಣೆ ಮಸೂದೆ, 2025 ರ ನಿಬಂಧನೆಗಳಾಗಿವೆ?

  1. ದೇಶದಾದ್ಯಂತದ ಎಲ್ಲಾ ರಕ್ತ ಕೇಂದ್ರಗಳ ಕಡ್ಡಾಯ ನೋಂದಣಿ.
  2. ಅಸುರಕ್ಷಿತ, ಅನೈತಿಕ ಅಥವಾ ನಿಯಮಗಳನ್ನು ಪಾಲಿಸದ ಆಚರಣೆಗಳಿಗೆ ಕಠಿಣ ದಂಡ ವಿಧಿಸುವಿಕೆ.
  3. ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು.
  4. ವಾಣಿಜ್ಯ ರಕ್ತದ ಬ್ಯಾಂಕ್‌ಗಳಿಗೆ ತಮ್ಮದೇ ಆದ ಬೆಲೆಯನ್ನು ನಿಗದಿಪಡಿಸಲು ಅಧಿಕಾರ ನೀಡುವುದು.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1, 3 ಮತ್ತು 4 ಮಾತ್ರ
  2. 2 ಮತ್ತು  4 ಮಾತ್ರ
  3. 1, 2 ಮತ್ತು 3 ಮಾತ್ರ
  4. 1, 2, 3 ಮತ್ತು 4

 

89). ಧ್ರುವ್ 64 (DHRUV64) ಎಂದರೆ ಏನು?

  1. ಇಸ್ರೋ ಉಡಾವಣೆ ಮಾಡಿದ ಒಂದು ಉಪಗ್ರಹ.
  2. ಸಿ-ಡಾಕ್ (C-DAC) ಅಭಿವೃದ್ಧಿಪಡಿಸಿದ ಸಾಮಾನ್ಯ ಬಳಕೆಯ ಮೈಕ್ರೋಪ್ರೊಸೆಸರ್.
  3. ಭಾರತದ ಹೊಸ ಕ್ಷಿಪಣಿ ವ್ಯವಸ್ಥೆ.
  4. ಒಂದು ಬಾಹ್ಯಾಕಾಶ ದೂರದರ್ಶಕ

 

90). 2025 ರ ರಾಷ್ಟ್ರೀಯ ಇಂಧನ ಸಂರಕ್ಷಣೆ ಪ್ರಶಸ್ತಿಗಳಿಗೆ (NECA) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL), ರಾಜ್ಯ ಇಂಧನ ದಕ್ಷತೆ ಸಾಧನೆ ಪ್ರಶಸ್ತಿ (SDA ಗ್ರೂಪ್-1) ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.
  2. ಇದನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಅಡಿಯಲ್ಲಿ ಇಂಧನ ದಕ್ಷತೆ ಬ್ಯೂರೋ (BEE) ಸ್ಥಾಪಿಸಿದೆ.
  3. ರಾಜ್ಯಗಳು, ಉದ್ಯಮಗಳು ಮತ್ತು ಸಂಸ್ಥೆಗಳ ನಡುವೆ ಇಂಧನ ದಕ್ಷತೆ ಮತ್ತು ಸಂರಕ್ಷಣೆಯಲ್ಲಿನ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
  4. ಇದನ್ನು ಕೇವಲ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ನೀಡಲಾಗುತ್ತದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 4 ಮಾತ್ರ
  3. 1 ಮತ್ತು 3 ಮಾತ್ರ
  4. 1, 2 ಮತ್ತು 4

 

91). ಅಂತರರಾಷ್ಟ್ರೀಯ ಬದ್ಧತೆಗಳಿಗೆ ಸಂಬಂಧಿಸಿದಂತೆ, “ಅರಾವಳಿ ಹಸಿರು ಗೋಡೆ ಯೋಜನೆ”ಯು ಭಾರತದ ಈ ಕೆಳಗಿನ ಯಾವ ಒಪ್ಪಂದಗಳ ಅಡಿಯಲ್ಲಿನ ಜವಾಬ್ದಾರಿಗಳಿಗೆ ಕೊಡುಗೆ ನೀಡುತ್ತದೆ?

  1. ಮರುಭೂಮೀಕರಣ ತಡೆಗಟ್ಟುವ ವಿಶ್ವಸಂಸ್ಥೆಯ ಸಮಾವೇಶ (UNCCD).
  2. ಜೈವಿಕ ವೈವಿಧ್ಯತೆಯ ಸಮಾವೇಶ (CBD).
  3. ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCCC).
  4. ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯವರ್ಗಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ (CITES).

ಈ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1, 2 ಮತ್ತು 3 ಮಾತ್ರ
  2. 2, 3 ಮತ್ತು 4 ಮಾತ್ರ
  3. 1, 3 ಮತ್ತು 4 ಮಾತ್ರ
  4. 1, 2, 3 ಮತ್ತು 4

 

92). “ಕೋಪನ್‌ಹೆಗನ್ ಘೋಷಣೆ”ಯು ಯಾವುದರ ಮೇಲೆ ಕೇಂದ್ರೀಕರಿಸುತ್ತದೆ?

  1. ವೃತ್ತಿಪರ ಲೀಗ್‌ಗಳನ್ನು ಉತ್ತೇಜಿಸುವುದು.
  2. ಕ್ರೀಡೆಯಲ್ಲಿ ಉದ್ದೀಪನಾ ಮದ್ದು ಸೇವನೆ (ಡೋಪಿಂಗ್) ವಿರೋಧಿ ಕ್ರಮಗಳು 
  3. ಕ್ರೀಡಾ ಒಕ್ಕೂಟಗಳ ಖಾಸಗೀಕರಣ.
  4. ಅಂತರರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು.

 

93). ಪಾಮಿರ್ ಪರ್ವತಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಇಂಡಿಯನ್ ಮತ್ತು ಯುರೇಷಿಯನ್ ಭೂಫಲಕಗಳ ಘರ್ಷಣೆಯಿಂದ ಪಾಮಿರ್ ಪರ್ವತಗಳು ರೂಪುಗೊಂಡಿವೆ.
  2. ಇವುಗಳನ್ನು “ವಿಶ್ವದ ಚಾವಣಿ” ಎಂದೂ ಕರೆಯಲಾಗುತ್ತದೆ.
  3. ಈ ಪರ್ವತ ಶ್ರೇಣಿಯು ಸಂಪೂರ್ಣವಾಗಿ ತಜಕಿಸ್ತಾನ್ ದೇಶದ ವ್ಯಾಪ್ತಿಯಲ್ಲಿದೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಗಿವೆ?

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮತ್ತು 3 ಮಾತ್ರ
  4. 1, 2 ಮತ್ತು 3

 

94). ಭಾರತವು “ಸೀಹಾಕ್ ಹೆಲಿಕಾಪ್ಟರ್‌ಗಳನ್ನು” ಯಾವ ದೇಶದಿಂದ ಸ್ವಾಧೀನಪಡಿಸಿಕೊಂಡಿದೆ?

  1. ರಷ್ಯಾ
  2. ಅಮೆರಿಕ ಸಂಯುಕ್ತ ಸಂಸ್ಥಾನ
  3. ಯುನೈಟೆಡ್ ಕಿಂಗ್‌ಡಮ್
  4. ಫ್ರಾನ್ಸ್

 

95). ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  1. ಶೌರ್ಯ ಪ್ರಶಸ್ತಿಗಳನ್ನು ವರ್ಷಕ್ಕೆ ಎರಡು ಬಾರಿ, ಅಂದರೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
  2. ಯುದ್ಧಕಾಲದ ಪ್ರಶಸ್ತಿಗಳನ್ನು ರಕ್ಷಣಾ ಸಚಿವಾಲಯವು ಘೋಷಿಸಿದರೆ, ಶಾಂತಿಕಾಲದ ಪ್ರಶಸ್ತಿಗಳನ್ನು ಗೃಹ ಸಚಿವಾಲಯವು ಘೋಷಿಸುತ್ತದೆ.
  3. ಪರಮ ವೀರ ಚಕ್ರವನ್ನು ಮರಣೋತ್ತರವಾಗಿ ನೀಡಬಹುದು, ಆದರೆ ಅಶೋಕ ಚಕ್ರವನ್ನು ಹಾಗೆ ನೀಡಲು ಸಾಧ್ಯವಿಲ್ಲ.

ಈ  ಕೆಳಗಿನ ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆರಿಸಿ:

  1. 1 ಮತ್ತು 2 ಮಾತ್ರ
  2. 2 ಮತ್ತು 3 ಮಾತ್ರ
  3. 1 ಮಾತ್ರ
  4. 1, 2 ಮತ್ತು 3

 

96). ಈ ಕೆಳಗಿನ ಕಾಯ್ದೆಗಳನ್ನು ಅವುಗಳ ಪ್ರಾಥಮಿಕ ಉದ್ದೇಶಗಳೊಂದಿಗೆ ಹೊಂದಿಸಿ:

ಕಾಯ್ದೆಗಳು

ಪ್ರಾಥಮಿಕ ಉದ್ದೇಶಗಳು

a. ಅನೈತಿಕ ವ್ಯಾಪಾರ (ತಡೆಗಟ್ಟುವಿಕೆ) ಕಾಯ್ದೆ, 1956

1. ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವುದು ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ನಿಯಂತ್ರಿಸುವುದು.

b. ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986

2. ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯನ್ನು ತಡೆಗಟ್ಟುವುದು.

c. ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, 1976

3. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದು.

d. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (POCSO) ಕಾಯ್ದೆ, 2012

4. ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಮತ್ತು ಪುನರ್ವಸತಿ ಒದಗಿಸುವುದು.

ಆಯ್ಕೆಗಳು:

  1. a- 2, b- 1, c- 4, d- 3
  2. a- 4, b- 3, c- 1, d- 2
  3. a- 1, b- 2, c- 3, d- 4
  4. a- 3, b- 1, c- 2, d- 4

 

97). ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಯೋಜನೆಯು ಯುವಕರಿಗೆ ನಾಲ್ಕು ವರ್ಷಗಳ ಕಾಲ ‘ಅಗ್ನಿವೀರರಾಗಿ’ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ.
  2. ನಾಲ್ಕು ವರ್ಷಗಳ ನಂತರ, ಎಲ್ಲಾ ಅಗ್ನಿವೀರರನ್ನು ಸ್ವಯಂಚಾಲಿತವಾಗಿ ನಿಯಮಿತ ಸೇವೆಗೆ ನೇಮಿಸಿಕೊಳ್ಳಲಾಗುತ್ತದೆ.
  3. ಅಧಿಕಾರಿ ದರ್ಜೆಗಿಂತ ಕೆಳಗಿನ ಸಿಬ್ಬಂದಿಗಳು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
  4. ಕೌಶಲ್ಯ ಪ್ರಮಾಣಪತ್ರಗಳು ಮತ್ತು ಬ್ರಿಡ್ಜ್ ಕೋರ್ಸ್‌ಗಳ ಸೌಲಭ್ಯ, ಸರ್ಕಾರಿ ಉದ್ಯೋಗಗಳಲ್ಲಿ ಕಡ್ಡಾಯ ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ವೃತ್ತಿಪರ ತರಬೇತಿಗೆ ಬೆಂಬಲವನ್ನು ಈ ಯೋಜನೆಯಡಿ ನೀಡಲಾಗುತ್ತದೆ.

ಈ ಮೇಲಿನವುಗಳಲ್ಲಿ ಎಷ್ಟು ಹೇಳಿಕೆಗಳು ಸರಿಯಾಗಿಲ್ಲ?

  1. ಕೇವಲ ಒಂದು
  2. ಕೇವಲ ಎರಡು
  3. ಕೇವಲ ಮೂರು
  4. ಎಲ್ಲವೂ ಸರಿಯಾಗಿವೆ

 

98). ‘ಇಂಡಿ ನಿಂಬೆ’ಯಂತಹ ಭೌಗೋಳಿಕ ಸೂಚಕ (GI) ಮಾನ್ಯತೆ ಹೊಂದಿದ ಕೃಷಿ ಉತ್ಪನ್ನಗಳ ಪ್ರಚಾರ, ಬ್ರ್ಯಾಂಡಿಂಗ್ ಮತ್ತು ರಫ್ತಿಗೆ ಈ ಕೆಳಗಿನ ಯಾವ ಸಂಸ್ಥೆಯು ಬೆಂಬಲ ನೀಡುತ್ತದೆ?

  1. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)
  2. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)
  3. ನಬಾರ್ಡ್ (NABARD)
  4. ರಾಷ್ಟ್ರೀಯ ತೋಟಗಾರಿಕೆ ಮಂಡಳಿ

 

99). ಆರ್ಕ್ಟಿಕ್ ಟಂಡ್ರಾವು ಈ ಕೆಳಗಿನ ಯಾವ ಪ್ರದೇಶಗಳಲ್ಲಿ ಕಂಡುಬರುತ್ತದೆ?

  1. ಅಲಾಸ್ಕಾ, ಕೆನಡಾ, ಗ್ರೀನ್ಲ್ಯಾಂಡ್, ಸೈಬೀರಿಯಾ
  2. ಅಲಾಸ್ಕಾ, ಅಂಟಾರ್ಟಿಕಾ, ಗ್ರೀನ್ಲ್ಯಾಂಡ್, ಸೈಬೀರಿಯಾ
  3. ಅಲಾಸ್ಕಾ, ಕೆನಡಾ, ಗ್ರೀನ್ಲ್ಯಾಂಡ್, ಅಂಟಾರ್ಟಿಕಾ
  4. ಅಲಾಸ್ಕಾ, ಕೆನಡಾ, ಅಂಟಾರ್ಟಿಕಾ, ಸೈಬೀರಿಯಾ

 

100). ಬಂದರು ಭದ್ರತಾ ಬ್ಯೂರೋಗೆ (ಬ್ಯೂರೋ ಆಫ್ ಪೋರ್ಟ್ ಸೆಕ್ಯುರಿಟಿ ) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಬಂದರು ಭದ್ರತಾ ಬ್ಯೂರೋವನ್ನು  ವ್ಯಾಪಾರಿ ಹಡಗುಸಾಗಣೆ (ಮರ್ಚೆಂಟ್ ಶಿಪ್ಪಿಂಗ್) ಕಾಯ್ದೆ, 2025 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
  2. ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  3. ಇದನ್ನು ಐಪಿಎಸ್ ಅಧಿಕಾರಿ ದರ್ಜೆಯ ಮಹಾನಿರ್ದೇಶಕರು ಮುನ್ನಡೆಸುತ್ತಾರೆ.

ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

  1. 1 ಮತ್ತು 2 ಮಾತ್ರ
  2. 1 ಮತ್ತು 3 ಮಾತ್ರ
  3. 2 ಮತ್ತು 3 ಮಾತ್ರ
  4. 1, 2 ಮತ್ತು 3 ಎಲ್ಲವೂ

 

101). ಪೋರ್ಚುಗೀಸ್ ಆಳ್ವಿಕೆಯಿಂದ ಈ ಕೆಳಗಿನ ಯಾವ ಪ್ರದೇಶಗಳನ್ನು ವಿಮೋಚನೆಗೊಳಿಸಲು ‘ಆಪರೇಷನ್ ವಿಜಯ್’ (1961) ಅನ್ನು ಪ್ರಾರಂಭಿಸಲಾಯಿತು?

  1. ಗೋವಾ, ದಮನ್ ಮತ್ತು ದಿಯು
  2. ಗೋವಾ ಮಾತ್ರ
  3. ದಮನ್ ಮತ್ತು ದಿಯು ಮಾತ್ರ
  4. ಪಾಂಡಿಚೇರಿ ಮತ್ತು ಗೋವಾ

 

102). ‘ಭದ್ರತಾ ಪತ್ರಗಳ ಮಾರುಕಟ್ಟೆ ಸಂಹಿತೆ ಮಸೂದೆ, 2025’  ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:

  1. ಈ ಮಸೂದೆಯು ಭದ್ರತಾ ಪತ್ರಗಳ ಒಪ್ಪಂದಗಳು (ನಿಯಂತ್ರಣ) ಕಾಯ್ದೆ, 1956, ಭಾರತೀಯ ಭದ್ರತಾ ಪತ್ರಗಳ ಮತ್ತು ವಿನಿಮಯ ಮಂಡಳಿ (SEBI) ಕಾಯ್ದೆ, 1992.ಠೇವಣಿ ಕಾಯ್ದೆ, 1996  ಗಳನ್ನೂ ಕ್ರೂಢೀಕರಿಸುವ ಗುರಿಯನ್ನು ಹೊಂದಿದೆ.
  2. ಸೆಬಿ ಮಂಡಳಿಯ ಸದಸ್ಯ ಬಲವನ್ನು ಅಧ್ಯಕ್ಷರು ಸೇರಿದಂತೆ 9 ರಿಂದ 15 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
  3. ಹೊಸ ಮಸೂದೆಯ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸೆಬಿಯ ಅಧ್ಯಕ್ಷರನ್ನು ನೇಮಕ ಮಾಡುತ್ತದೆ.

    ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

    A. 2 ಮತ್ತು 3 ಮಾತ್ರ
    B. 1 ಮತ್ತು 3 ಮಾತ್ರ
    C. 1 ಮತ್ತು 2 ಮಾತ್ರ
    D. 1, 2 ಮತ್ತು 3

103). ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಮಾಲೀಕತ್ವದ ಮಾದರಿಯು ಈ ಕೆಳಗಿನಂತಿದೆ:

  1. ಭಾರತ ಸರ್ಕಾರ 50%, ರಾಜ್ಯ ಸರ್ಕಾರ 25%, ಪ್ರಾಯೋಜಕ ಬ್ಯಾಂಕ್ 25%.
  2. ಭಾರತ ಸರ್ಕಾರ 50%, ರಾಜ್ಯ ಸರ್ಕಾರ 15%, ಪ್ರಾಯೋಜಕ ಬ್ಯಾಂಕ್ 35%.
  3. ಭಾರತ ಸರ್ಕಾರ 60%, ರಾಜ್ಯ ಸರ್ಕಾರ 20%, ಪ್ರಾಯೋಜಕ ಬ್ಯಾಂಕ್ 20%.
  4. ಭಾರತ ಸರ್ಕಾರ 40%, ರಾಜ್ಯ ಸರ್ಕಾರ 30%, ಪ್ರಾಯೋಜಕ ಬ್ಯಾಂಕ್ 30%.

 

104). ಮೋನಾಜೈಟ್  ಹೊರತಾಗಿ, ಭಾರತದ ಕರಾವಳಿ ತೀರದ ಮರಳಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಖನಿಜಗಳು ಯಾವುವು?

 

  1. ಇಲ್ಮೆನೈಟ್, ರೂಟೈಲ್, ಜಿರ್ಕಾನ್, ಗಾರ್ನೆಟ್, ಸಿಲ್ಲಿಮನೈಟ್.
  2. ತಾಮ್ರ, ಬಾಕ್ಸೈಟ್, ಕ್ರೋಮೈಟ್, ಸೀಸ.
  3. ಕಬ್ಬಿಣದ ಅದಿರು, ಮ್ಯಾಂಗನೀಸ್, ಚಿನ್ನ, ಬೆಳ್ಳಿ.
  4. ಕಲ್ಲಿದ್ದಲು, ಸುಣ್ಣದ ಕಲ್ಲು, ಡೊಲೊಮೈಟ್, ಫೆಲ್ಡ್‌ಸ್ಪಾರ್.

 

105). ರಾಟ್ಲೆ ಜಲವಿದ್ಯುತ್ ಯೋಜನೆಯನ್ನು ಯಾವ ನದಿಯ ಮೇಲೆ ನಿರ್ಮಿಸಲಾಗುತ್ತದೆ?

  1. ಝೀಲಂ
  2. ಚೆನಾಬ್
  3. ರಾವಿ
  4. ಸಿಂಧೂ

 

106). ‘ರೆಸ್ಪಾಂಡ್ ಬ್ಯಾಸ್ಕೆಟ್ 2025’  ಈ ಕೆಳಗಿನ ಯಾವ ಸಂಸ್ಥೆಯ ಉಪಕ್ರಮವಾಗಿದೆ?

  1. ಡಿ ಆರ್ ಡಿ ಒ 
  2. ಇಸ್ರೋ 
  3. ನೀತಿ ಆಯೋಗ
  4. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

 

ಅಭ್ಯಾಸ ಪ್ರಶ್ನೋತ್ತರಗಳು 

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ: 

ಉತ್ತರಗಳು 

1) B

2) C

3) B

4) C

5) C

6) B

7) B

8) A

9) D

10) C

11) B

12) A

13) A

14) B

15) A

16) C

17) A

18) B

19) A

20) C

21) A

22) B

23) C

24) A

25) C

26) A

27) B

28) A

29) C

30) D

31) A

32) B

33) C

34) B

35) A

36) A

37) D

38) D

39) B

40) B

41) C

42) C

43) A

44) A

45) B

46) A

47) C

48) B

49) B

50) A

51) C

52) A

53) B

54) A

55) A

56) C

57) B

58) B

59) A

60) C

61) B

62) D

63) B

64) A

65) B

66) C

67) C

68) A

69) B

70) B

71) A

72) C

73) A

74) B

75) C

76) D

77) C

78) B

79) A

80) B

81) D

82) B

83) A

84) A

85) A

86) B

87) A

88) C

89) B

90) C

91) A

92) B

93) A

94) B

95) C

96) A

97) B

98) B

99) A

100) B

101) A

102) C

103) B

104) A

105) B

106) B

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts