ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್ (DHRUVA)
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಸಂವಹನ ಸಚಿವಾಲಯದ ಅಧೀನದಲ್ಲಿರುವ ಅಂಚೆ ಇಲಾಖೆಯು, ‘ಡಿಜಿಟಲ್ ಹಬ್ ಫಾರ್ ರೆಫರೆನ್ಸ್ ಅಂಡ್ ಯುನಿಕ್ ವರ್ಚುವಲ್ ಅಡ್ರೆಸ್’ (DHRUVA) ಎಂಬ ನೂತನ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.
ಧ್ರುವ (DHRUVA) ವ್ಯವಸ್ಥೆಯ ಬಗ್ಗೆ:
- ಇದು ಭೌತಿಕ ಸ್ಥಳಗಳ ಪರ್ಯಾಯ ವಿಳಾಸವಾಗಿ ಕಾರ್ಯನಿರ್ವಹಿಸುವ, ‘name@entity’ ಮಾದರಿಯ ಯುಪಿಐ ವಿಳಾಸಗಳನ್ನೇ ಹೋಲುವ ವರ್ಚುವಲ್ ವಿಳಾಸ ಲೇಬಲ್‌ಗಳನ್ನು ಸೃಷ್ಟಿಸುವ ಒಂದು ರಾಷ್ಟ್ರೀಯ ಚೌಕಟ್ಟಾಗಿದೆ.
- ಈ ವ್ಯವಸ್ಥೆಯನ್ನು ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ’ (DPI) ಉಪಕ್ರಮಗಳ ಒಂದು ಭಾಗವಾಗಿ ರೂಪಿಸಲಾಗಿದ್ದು, ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೂ ಇದು ಅವಕಾಶ ಕಲ್ಪಿಸುತ್ತದೆ.
ಟರ್ಕಿಯ “ಸ್ಟೋನ್ ಹಿಲ್ಸ್” ಯೋಜನೆ
ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಟರ್ಕಿಯ ಆಗ್ನೇಯ ಬೆಟ್ಟಗಳ ಪ್ರದೇಶಗಳಲ್ಲಿ ಕೈಗೊಳ್ಳಲಾದ ಪುರಾತತ್ವ ಸಂಶೋಧನೆಗಳು ಸುಮಾರು 11,000 ವರ್ಷಗಳ ಹಿಂದಿನ ಜೀವನಕ್ರಮವನ್ನು ಅನಾವರಣಗೊಳಿಸಿವೆ. ಇದು ಮಾನವ ಇತಿಹಾಸದಲ್ಲಿ ಆರಂಭಿಕ ವಸಾಹತು ಸಮುದಾಯಗಳು ಉದಯಿಸಿದ ಕಾಲಘಟ್ಟವನ್ನು ಪ್ರತಿಬಿಂಬಿಸುತ್ತದೆ.
“ಸ್ಟೋನ್ ಹಿಲ್ಸ್” (ಶಿಲಾ ಬೆಟ್ಟಗಳ) ಯೋಜನೆಯ ಬಗ್ಗೆ:
- ಪ್ರಾರಂಭ:- ಈ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು.
- ಒಳಗೊಳ್ಳುವಿಕೆ:- ಇದು ವಿಶ್ವದ ‘ನವಶಿಲಾಯುಗದ ರಾಜಧಾನಿ’ ಎಂದು ಕರೆಯಲ್ಪಟ್ಟ “ಸಾನ್ಲಿಯುರ್ಫಾ ಪ್ರಾಂತ್ಯ”ದ 12 ತಾಣಗಳನ್ನು ಒಳಗೊಂಡಿದೆ.
- ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ “ಗೋಬೆಕ್ಲಿ ಟೆಪೆ”ಯನ್ನು ಒಳಗೊಂಡಿದೆ. ಇದು ಉತ್ತರ ಮೆಸೊಪಟೇಮಯಾದಲ್ಲಿ ಪತ್ತೆಯಾದ ಅತ್ಯಂತ ಹಳೆಯ ಬೃಹತ್ ಶಿಲಾಯುಗದ ರಚನೆಯಾಗಿದೆ.
- ಭಾರತದಲ್ಲಿ ನವಶಿಲಾಯುಗದ ವಸಾಹತುಗಳು:- ವಾಯುವ್ಯ ಭಾಗ (ಕಾಶ್ಮೀರ), ದಕ್ಷಿಣ ಭಾಗ (ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ), ಈಶಾನ್ಯ ಭಾಗ (ಮೇಘಾಲಯ) ಮತ್ತು ಪೂರ್ವ ಭಾಗಗಳಲ್ಲಿ (ಬಿಹಾರ ಮತ್ತು ಒಡಿಶಾ) ಕಂಡುಬಂದಿವೆ.
- ಭಾರತದ ಕೆಲವು ಪ್ರಮುಖ ನವಶಿಲಾಯುಗದ ನೆಲೆಗಳೆಂದರೆ:- ಬುರ್ಜಾಹೋಮ್ (ಕಾಶ್ಮೀರ), ಗುಫ್ಕ್ರಾಲ್ (ಕಾಶ್ಮೀರ), ಚಿರಾಂಡ್ (ಬಿಹಾರ) ಮತ್ತು ಉತನೂರು (ಆಂಧ್ರಪ್ರದೇಶ).
ಶಿಲಾಯುಗದ ಬಗ್ಗೆ:
- ಇದು ಶಿಲಾ ಉಪಕರಣಗಳ ಬಳಕೆಯಿಂದ ಗುರುತಿಸಲ್ಪಟ್ಟ ಇತಿಹಾಸಪೂರ್ವ ಕಾಲವಾಗಿದ್ದು, ಇದನ್ನು ಮೂರು ಪ್ರಮುಖ ಕಾಲಘಟ್ಟಗಳಾಗಿ ವಿಂಗಡಿಸಲಾಗಿದೆ:
- ಹಳೆಯ (ಪ್ರಾಚೀನ) ಶಿಲಾಯುಗ
- ಮಧ್ಯ ಶಿಲಾಯುಗ
- ನವಶಿಲಾಯುಗ
- ಹಳೆಯ (ಪ್ರಾಚೀನ) ಶಿಲಾಯುಗ: ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರು
- ಇದು ಸುಮಾರು 26 ಲಕ್ಷ ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 10,000 ರವರೆಗೆ ಮುಂದುವರಿಯಿತು.
- ಈ ಕಾಲದ ಮಾನವರು ಬೇಟೆಗಾರರು ಮತ್ತು ಆಹಾರ ಸಂಗ್ರಹಕಾರರಾಗಿದ್ದರು. ಇವರು ಬೇಟೆ, ಮಾಂಸ ಕತ್ತರಿಸುವುದು ಮತ್ತು ಆಹಾರ ಸಂಸ್ಕರಣೆಗಾಗಿ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.
- ಮಧ್ಯ ಶಿಲಾಯುಗ: ಸಸ್ಯ ಹಾಗೂ ಪ್ರಾಣಿಗಳ ಸಾಕಾಣಿಕೆ
- ಈ ಕಾಲಘಟ್ಟವು ಕ್ರಿ.ಪೂ. 10,000 ರಿಂದ ಕ್ರಿ.ಪೂ. 5,000 ರ ನಡುವೆ ಸಂಭವಿಸಿದೆ (ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ).
- ಇದು ವಿಶಿಷ್ಟವಾದ ಸೂಕ್ಷ್ಮ ಶಿಲಾ ಉಪಕರಣಗಳ ಬಳಕೆ, ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಮತ್ತು ಸಸ್ಯ ಹಾಗೂ ಪ್ರಾಣಿಗಳ ಆರಂಭಿಕ ಸಾಕಾಣಿಕೆ/ ಪಳಗಿಸುವಿಕೆಯಿಂದ ಗುರುತಿಸಲ್ಪಟ್ಟಿದೆ.
- ನವಶಿಲಾಯುಗ: ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆ
- ಇದು ಸುಮಾರು ಕ್ರಿ.ಪೂ. 12,000 ವರ್ಷಗಳ ಹಿಂದೆ ಪ್ರಾರಂಭವಾಗಿ ಕ್ರಿ.ಪೂ. 4500 ರಿಂದ ಕ್ರಿ.ಪೂ. 2000 ರ ನಡುವಿನ ಅವಧಿಯಲ್ಲಿ ಕೊನೆಗೊಂಡಿತು.
- ಕೃಷಿ ಪದ್ಧತಿಯ ಅಳವಡಿಕೆ, ಪ್ರಾಣಿಗಳ ಸಾಕಣೆ ಮತ್ತು ಸ್ಥಿರ ಸಮುದಾಯಗಳಾಗಿ ನೆಲೆಸುವಿಕೆಯು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ.
- ಇದು ಕುಂಬಾರಿಕೆ, ನೇಯ್ಗೆ ಮತ್ತು ಜಟಿಲ ಸಾಮಾಜಿಕ ರಚನೆಗಳ ಅಭಿವೃದ್ಧಿಗೆ ನಾಂದಿ ಹಾಡಿತು.
- ಕೃಷಿಯು ಮಾನವ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು ಮತ್ತು ನಾಗರಿಕತೆಗಳ ಉದಯಕ್ಕೆ ದಾರಿ ಮಾಡಿಕೊಟ್ಟಿತು.



ನಿಮ್ಮದೊಂದು ಉತ್ತರ