ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯಿಂದ ವಿಶೇಷ ಆಹಾರ ಅಭಿವೃದ್ಧಿ
ಇದೀಗ ಸುದ್ದಿಯಲ್ಲಿದೆ:
- ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು (CFTRI) ಪ್ರಸ್ತುತ ಸುಧಾರಿತ ಆಹಾರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ.
- ಇವುಗಳಲ್ಲಿ ಗಗನಯಾತ್ರಿಗಳಿಗಾಗಿ ಬಾಹ್ಯಾಕಾಶ ಆಹಾರ, ಕ್ರೀಡಾಪಟುಗಳ ದೈಹಿಕ ಸಹಿಷ್ಣುತೆ ವರ್ಧಿಸುವ ಕ್ರೀಡಾ ಆಹಾರ ಮತ್ತು ಹಿರಿಯ ನಾಗರಿಕರಿಗಾಗಿ ಪೌಷ್ಟಿಕಾಂಶಯುಕ್ತ ವೃದ್ಧಾಪ್ಯದ ಆಹಾರಗಳನ್ನು ಅಭಿವೃದ್ಧಿಪಡಿಸುವುದು ಸೇರಿದೆ.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI)ಯ ಬಗ್ಗೆ:
- ಅಂಗಸಂಸ್ಥೆ:- ಇದು ನವದೆಹಲಿಯಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (CSIR) ಒಂದು ಅಂಗಸಂಸ್ಥೆ ಸಂಶೋಧನಾಲಯವಾಗಿದೆ.
- ಸ್ಥಳ:- ಇದು ಕರ್ನಾಟಕದ ಮೈಸೂರಿನಲ್ಲಿದೆ.
- ಸ್ಥಾಪನೆ:- ಈ ಸಂಸ್ಥೆಯು 21 ಅಕ್ಟೋಬರ್ 1950 ರಂದು ಸ್ಥಾಪನೆಯಾಯಿತು.
- ಧ್ಯೇಯೋದ್ದೇಶ:- ಇದು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯ ಮುಂಚೂಣಿ ಕೇಂದ್ರವಾಗಿದೆ.



ನಿಮ್ಮದೊಂದು ಉತ್ತರ