‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’
ಇದೀಗ ಸುದ್ದಿಯಲ್ಲಿದೆ:
- ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರವು ‘ಡಿಜಿಟಲ್ ಪರಂಪರೆ ಪೋರ್ಟಲ್’ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
‘ಡಿಜಿಟಲ್ ಪರಂಪರೆ ಪೋರ್ಟಲ್’ ನ ಬಗ್ಗೆ:
- ಉದ್ದೇಶ:- ಏಕೀಕೃತ ‘ಕರ್ನಾಟಕ ಡಿಜಿಟಲ್ ಪರಂಪರೆ ಪೋರ್ಟಲ್’ ಸ್ಥಾಪಿಸುವ ಪ್ರಸ್ತಾವನೆಯ ಮೂಲಕ, ಡಿಜಿಟಲ್ ಪರಂಪರೆ ಸಂರಕ್ಷಣೆಯಲ್ಲಿ ಕರ್ನಾಟಕವನ್ನು ರಾಷ್ಟ್ರಮಟ್ಟದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ.
- ಪಾತ್ರ:- ಇದು ಹಸ್ತಪ್ರತಿಗಳು, ಅಪರೂಪದ ಮುದ್ರಿತ ಕೃತಿಗಳು, ಪತ್ರಾಗಾರ ದಾಖಲೆಗಳು ಮತ್ತು ಇತರ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಒಂದೇ ವೇದಿಕೆಯಡಿ ಸಂಯೋಜಿಸುವ ಕಾರ್ಯವಾಗಿ ನಿರ್ವಹಿಸಲಿದೆ.
- ಆರಂಭಿಸಿದವರು:– ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ (ORI) ಮತ್ತು ಕರ್ನಾಟಕ ರಾಜ್ಯ ದಾಖಲೆಗಳ/ಪತ್ರಾಗಾರ ಸಂಗ್ರಹಾಲಯ ಜಂಟಿಯಾಗಿ ಕೈಗೊಂಡಿವೆ.
- ಈ ಯೋಜನೆಯು ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ ಮಿಷನ್’ ಮತ್ತು ‘ರಾಷ್ಟ್ರೀಯ ಹಸ್ತಪ್ರತಿ ಮಿಷನ್’ನ ಗುರಿಗಳಿಗೆ ಪೂರಕವಾಗಿದೆ.
|
ನಿಮಗಿದು ತಿಳಿದಿದೆಯೇ?
|



ನಿಮ್ಮದೊಂದು ಉತ್ತರ