ಕರ್ನಾಟಕವು ಭಾರತದ ಸೇವಾ ರಫ್ತು ಕ್ಷೇತ್ರದ ಶಕ್ತಿಕೇಂದ್ರ- ಬೆಂಗಳೂರು ಇದರ ಪ್ರಧಾನ ಚಾಲಕ ಶಕ್ತಿ
ಇದೀಗ ಸುದ್ದಿಯಲ್ಲಿದೆ:
- 2024-25ನೇ ಸಾಲಿನ ಭಾರತದ ಸೇವಾ ರಫ್ತು ವಲಯದಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದು, $78.64 ಶತಕೋಟಿ ಕೊಡುಗೆ ನೀಡುವ ಮೂಲಕ ದೇಶದ ಒಟ್ಟು ಸೇವಾ ರಫ್ತಿನಲ್ಲಿ ಸುಮಾರು 35% ರಷ್ಟು ಪಾಲನ್ನು ಹೊಂದಿದೆ.
- ಕರ್ನಾಟಕದ ರಫ್ತು ಸುಗಮಗೊಳಿಸುವ ಘಟಕವಾದ “ವಿಶ್ವೇಶ್ವರಯ್ಯ ವ್ಯಾಪಾರ ಪ್ರೋತ್ಸಾಹಕ ಕೇಂದ್ರ” (VTPC)ದ ಪ್ರಕಾರ, 2021–22 ರ ಆರ್ಥಿಕ ವರ್ಷದಲ್ಲಿ ಕರ್ನಾಟಕವು ಭಾರತದ ಸೇವಾ ರಫ್ತುಗಳಲ್ಲಿ 41% ರಷ್ಟು ಕೊಡುಗೆ ನೀಡಿದ್ದು, ಇದರ ಮೌಲ್ಯ $254.4 ಶತಕೋಟಿಗಳಷ್ಟಿತ್ತು.
- ಕರ್ನಾಟಕ ರಾಜ್ಯದ ಆರ್ಥಿಕತೆಯು ಪ್ರಧಾನವಾಗಿ ಸೇವಾ ವಲಯದ ಮೇಲೆ ಅವಲಂಬಿತವಾಗಿದೆ. ‘ಕರ್ನಾಟಕ ಆರ್ಥಿಕ ಸಮೀಕ್ಷೆ, 2024-25’ರ ವರದಿಯ ಅನ್ವಯ, ರಾಜ್ಯದ ಒಟ್ಟು ಮೌಲ್ಯವರ್ಧನೆಯಲ್ಲಿ (GSVA) ಸೇವಾ ವಲಯದ ಪಾಲು 68.1% ರಷ್ಟಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಏಕೈಕ ಅತಿದೊಡ್ಡ ಕೊಡುಗೆ ನೀಡುವ ಜಿಲ್ಲೆಯಾಗಿ ಹೊರಹೊಮ್ಮಿದೆ.



ನಿಮ್ಮದೊಂದು ಉತ್ತರ