ಎಚ್‌ಪಿವಿ ಲಸಿಕೆ
ಸಾಮಾನ್ಯ ಅಧ್ಯಯನ-2/ ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಬೃಹತ್ ಜನಸಂಖ್ಯೆ ಆಧಾರಿತ ಅಧ್ಯಯನವೊಂದರ ಪ್ರಕಾರ, ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯ ಹೆಚ್ಚಿನ ವ್ಯಾಪ್ತಿಯು, ಲಸಿಕೆ ಪಡೆಯದ ಮಹಿಳೆಯರಲ್ಲೂ ಸಹ ‘ಕ್ಯಾನ್ಸರ್-ಪೂರ್ವ ಗರ್ಭಕಂಠದ ಗಾಯಗಳನ್ನು’ ಕಡಿಮೆ ಮಾಡಬಲ್ಲದು ಎಂದು ತೋರಿಸಿದೆ. ಇದು ಬಲವಾದ ‘ಸಾಮೂಹಿಕ ರೋಗನಿರೋಧಕ ಶಕ್ತಿಯ’ ಪರಿಣಾಮವನ್ನು ಎತ್ತಿ ತೋರಿಸುತ್ತದೆ.
ಗರ್ಭಕಂಠದ ಕ್ಯಾನ್ಸರ್ (Cervical Cancer)ನ ಬಗ್ಗೆ:
- ಗರ್ಭಕಂಠದ ಕ್ಯಾನ್ಸರ್ ಮಹಿಳೆಯ ಗರ್ಭಕಂಠದಲ್ಲಿ (ಯೋನಿಯಿಂದ ಗರ್ಭಾಶಯಕ್ಕೆ ಇರುವ ಪ್ರವೇಶ ದ್ವಾರ) ಬೆಳೆಯುತ್ತದೆ.
- ಲೈಂಗಿಕ ಸಂಪರ್ಕದ ಮೂಲಕ ಹರಡುವಿಕೆ:- ಬಹುತೇಕ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (99%) ‘ಅಪಾಯಕಾರಿ ಹ್ಯೂಮನ್ ಪ್ಯಾಪಿಲೋಮವೈರಸ್’ (HPV) ಸೋಂಕಿನೊಂದಿಗೆ ಸಂಪರ್ಕ ಹೊಂದಿವೆ. ಇದು ಲೈಂಗಿಕ ಸಂಪರ್ಕದ ಮೂಲಕ ಹರಡುವ ಅತ್ಯಂತ ಸಾಮಾನ್ಯವಾದ ವೈರಸ್ ಆಗಿದೆ.
- 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್:- ಇದು ವಿಶ್ವದಾದ್ಯಂತ ಮಹಿಳೆಯರಲ್ಲಿ ಕಂಡುಬರುವ 4ನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.
- ಭಾರತದಲ್ಲಿ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್:- ಮಹಿಳೆಯರಲ್ಲಿ ಕಂಡುಬರುವ 2ನೇ ಅತ್ಯಂತ ಸಾಮಾನ್ಯ ವಿಧದ ಕ್ಯಾನ್ಸರ್ ಇದಾಗಿದೆ.
- ಚಿಕಿತ್ಸೆ ನೀಡಬಹುದು:- ರೋಗವನ್ನು ಮೊದಲೇ ಪತ್ತೆಹಚ್ಚಿ ಪರಿಣಾಮಕಾರಿಯಾಗಿ ನಿರ್ವಹಿಸಿದರೆ, ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾದ ಕ್ಯಾನ್ಸರ್ ರೂಪಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದಾಗಿದೆ.
- ‘ಗಾರ್ಡಾಸಿಲ್’ ಮತ್ತು ‘ಸರ್ವವ್ಯಾಕ್’ ಲಸಿಕೆಗಳು:- ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ವಿರುದ್ಧ ಪ್ರಸ್ತುತ ದೇಶದಲ್ಲಿ ಎರಡು ಲಸಿಕೆಗಳು ಲಭ್ಯವಿವೆ. ಅವುಗಳೆಂದರೆ,
- ಮೆರ್ಕ್ ಅಭಿವೃದ್ಧಿ ಪಡಿಸಿದ ‘ಗಾರ್ಡಾಸಿಲ್’
- ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿದ ‘ಸರ್ವವ್ಯಾಕ್’.



ನಿಮ್ಮದೊಂದು ಉತ್ತರ