ಇಸ್ರೋದ ಎಲ್ ವಿಎಂ 3 ರಾಕೆಟ್ ಮೂಲಕ ‘ಜಿ ಸ್ಯಾಟ್ -7 R’ ಉಪಗ್ರಹ ಉಡಾವಣೆ
ಸಾಮಾನ್ಯ ಅಧ್ಯಯನ – 3 / ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಭಾರತೀಯ ನೌಕಾಪಡೆಯ ಸುಧಾರಿತ ಸಂವಹನ ಉಪಗ್ರಹವಾದ ಜಿ ಸ್ಯಾಟ್ -7 R (CMS-03) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.
ಜಿ ಸ್ಯಾಟ್ -7 R ಉಪಗ್ರಹದ ಬಗ್ಗೆ:
- ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಉಪಗ್ರಹವಾಗಿದ್ದು, ಅಂದಾಜು 4,400 ಕೆ.ಜಿ ತೂಕವನ್ನು ಹೊಂದಿದೆ. ಇದು ಇಲ್ಲಿಯವರೆಗೆ ಭಾರತದಲ್ಲಿ ಉಡಾವಣೆಯಾದ ದೇಶದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದೆ.
- ಇದು 2013 ರಲ್ಲಿ ಉಡಾವಣೆಗೊಂಡಿದ್ದ ಮತ್ತು ಪ್ರಮುಖವಾಗಿ ಭಾರತೀಯ ನೌಕಾಪಡೆಗೆ ಮೀಸಲಾಗಿದ್ದ ಜಿ ಸ್ಯಾಟ್ -7 (ರುಕ್ಮಿಣಿ) ಉಪಗ್ರಹವನ್ನು ಬದಲಾಯಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಉಡಾವಣಾ ವಾಹನ: LVM3 (ತನ್ನ M5 ಕಾರ್ಯಾಚರಣೆಯಲ್ಲಿ).
- ಈ ಉಪಗ್ರಹವನ್ನು ಯಶಸ್ವಿಯಾಗಿ “ಭೂ ಹೊಂದಾಣಿಕೆ ವರ್ಗಾವಣೆ ಕಕ್ಷೆಗೆ” (GTO) ಸೇರಿಸಲಾಗಿದೆ.
ಲಕ್ನೋವನ್ನು ಯುನೆಸ್ಕೋದ ಪಾಕಶಾಸ್ತ್ರ (ಅನುಗುಣವಾದ ಆಹಾರ ಸಂಸ್ಕೃತಿ) ವಿಭಾಗದ ಸೃಜನಾತ್ಮಕ ನಗರವಾಗಿ ಘೋಷಿಸಲಾಗಿದೆ.
ಇತರೆ
ಇದೀಗ ಸುದ್ದಿಯಲ್ಲಿದೆ:
- ಲಕ್ನೋದ ಶ್ರೀಮಂತ ಮತ್ತು ವೈವಿಧ್ಯಮಯ ಅಡುಗೆ ಪರಂಪರೆಯನ್ನು, ವಿಶೇಷವಾಗಿ ಅದರ ಪ್ರಖ್ಯಾತ ‘ಅವಧಿ’ ಖಾದ್ಯಗಳನ್ನು ಗುರುತಿಸಿ, ಯುನೆಸ್ಕೋ ಲಕ್ನೋವನ್ನು ‘ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂದು ಘೋಷಿಸಿದೆ.
- ಹೈದರಾಬಾದ್ (2019) ನ ನಂತರ, ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಪಾಕಶಾಸ್ತ್ರ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರವಾದ ಭಾರತದ ಎರಡನೇ ನಗರ ಲಕ್ನೋ ಆಗಿದೆ.
ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ:
- ಶ್ರೀಮಂತ ಅಡುಗೆ ಸಂಪ್ರದಾಯಗಳು ಮತ್ತು ನವೀನ ಆಹಾರ ಸಂಸ್ಕೃತಿಗಳನ್ನು ಹೊಂದಿರುವ ನಗರಗಳನ್ನು ‘ಯುನೆಸ್ಕೋ ಪಾಕಶಾಸ್ತ್ರದ ಸೃಜನಾತ್ಮಕ ನಗರ’ ಎಂಬ ಹೆಸರಿನಡಿ ಗೌರವಿಸಲಾಗುತ್ತದೆ.
- ಈ ಮನ್ನಣೆಯು ‘ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ’ದ ಭಾಗವಾಗಿದೆ.
ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲದ (UCCN) ಬಗ್ಗೆ:
- ಪ್ರಾರಂಭ: 2004 ರಲ್ಲಿ.
- ಉದ್ದೇಶ: ಸುಸ್ಥಿರ ನಗರ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಂಸ್ಕೃತಿಕ ಚೈತನ್ಯಕ್ಕಾಗಿ ಸೃಜನಶೀಲತೆಯಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ.
- ಪ್ರಸ್ತುತ, ಈ ಜಾಲವು 8 ಸೃಜನಾತ್ಮಕ ಕ್ಷೇತ್ರಗಳನ್ನು ಒಳಗೊಂಡಿದೆ – ಕರಕುಶಲ ಮತ್ತು ಜಾನಪದ ಕಲೆಗಳು, ಮಾಧ್ಯಮ ಕಲೆಗಳು, ಚಲನಚಿತ್ರ, ವಿನ್ಯಾಸ , ಪಾಕಶಾಸ್ತ್ರ ಸಾಹಿತ್ಯ ಮತ್ತು ಸಂಗೀತ.
- ಇವುಗಳ ಜೊತೆಗೆ 2025ರಲ್ಲಿ UCCN ಗೆ ‘ವಾಸ್ತುಶಿಲ್ಪ’ ವನ್ನು ಎಂಟನೇ ಸೃಜನಾತ್ಮಕ ಕ್ಷೇತ್ರವಾಗಿ ಸೇರಿಸಲಾಯಿತು.
- ಈ ಮೂಲಕ ಲಕ್ನೋ 100 ಕ್ಕೂಅಧಿಕ ದೇಶಗಳಾದ್ಯಂತ ಇರುವ 408 ನಗರಗಳ ಜಾಗತಿಕ ಜಾಲವನ್ನು ಸೇರಿಕೊಂಡಿದೆ.
ನಿಫಾ ವೈರಸ್
ಸಾಮಾನ್ಯ ಅಧ್ಯಯನ – 2 / ಆರೋಗ್ಯ – ಸಾಮಾನ್ಯ ಅಧ್ಯಯನ – 3 / ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:
ನಿಫಾ ವೈರಾಣು ಕಾಯಿಲೆಯ ವಿರುದ್ಧ “ಏಕಕೋಶೀಯ (ಮೊನೋಕ್ಲೋನಲ್) ಪ್ರತಿಕಾಯಗಳ” (mAbs) ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ICMR) ಉತ್ತೇಜಿಸುತ್ತಿದೆ.
ನಿಫಾ ವೈರಾಣುವಿನ ಬಗ್ಗೆ:
- ನಿಫಾ ಒಂದು ಪ್ರಾಣಿಜನ್ಯ ರೋಗವಾಗಿದೆ. ಇದರರ್ಥ ಇದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತದೆ.
- ಮೊದಲು ಪತ್ತೆಯಾಗಿದ್ದು: ಮನುಷ್ಯರಲ್ಲಿ ನಿಫಾ ವೈರಸ್‌ನ ಮೊದಲ ಹರಡುವಿಕೆಯು ಮಲೇಷ್ಯಾ (1998) ಮತ್ತು ಸಿಂಗಾಪುರಗಳಲ್ಲಿ (1999) ವರದಿಯಾಯಿತು.
- ಮೂಲ ಆಶ್ರಯದಾತ: ಸಾಮಾನ್ಯವಾಗಿ ತೊಗಲು ಬಾವಲಿ (‘ಫ್ಲೈಯಿಂಗ್ ಫಾಕ್ಸ್’) ಎಂದು ಕರೆಯಲ್ಪಡುವ ಹಣ್ಣು ತಿನ್ನುವ ಬಾವಲಿಗಳು ಈ ವೈರಸ್‌ನ ನೈಸರ್ಗಿಕ ಆಶ್ರಯದಾತಗಳಾಗಿವೆ.
- ಹಣ್ಣು ತಿನ್ನುವ ಬಾವಲಿಗಳಿಂದ ಹಂದಿಗಳಿಗೆ, ನಾಯಿಗಳಿಗೆ, ಬೆಕ್ಕುಗಳಿಗೆ, ಮೇಕೆಗಳಿಗೆ, ಕುದುರೆಗಳಿಗೆ ಮತ್ತು ಕುರಿಗಳಂತಹ ಇತರ ಪ್ರಾಣಿಗಳಿಗೆ ಈ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ.
- ರೋಗಲಕ್ಷಣಗಳು: ಜ್ವರ, ತಲೆನೋವು, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಮತ್ತು ವಾಂತಿ. ಗಂಭೀರ ಪ್ರಕರಣಗಳಲ್ಲಿ, ದಿಗ್ಭ್ರಮೆ , ಅರೆ ನಿದ್ರಾವಸ್ಥೆ, ಸೆಳವು (seizures), ಮೆದುಳಿನ ಉರಿಯೂತ (ಎನ್ಸೆಫಾಲಿಟಿಸ್) ಸಂಭವಿಸಬಹುದು ಮತ್ತು ಇದು ಕೋಮಾ ಹಂತಕ್ಕೂ ತಲುಪಿ ಸಾವಿಗೆ ಕಾರಣವಾಗಬಹುದು.
- ಹರಡುವಿಕೆ : ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದ ಮೂಲಕ ಇದು ನೇರವಾಗಿ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡಬಹುದು. ಬಾವಲಿಗಳು ಸಾಮಾನ್ಯವಾಗಿ ವಾಸಿಸುವ ಮರಗಳನ್ನು ಏರುವ ಜನರಲ್ಲಿಯೂ ಸೋಂಕು ಕಂಡುಬಂದಿರುವ ಕೆಲವು ಪ್ರಕರಣಗಳು ವರದಿಯಾಗಿವೆ.
ರಷ್ಯಾದ ‘ಡೂಮ್ಸ್‌ಡೇ ಕ್ಷಿಪಣಿ’
ಸಾಮಾನ್ಯ ಅಧ್ಯಯನ – 3 / ರಕ್ಷಣೆ

ಇದೀಗ ಸುದ್ದಿಯಲ್ಲಿದೆ:
- ರಷ್ಯಾ ತನ್ನ ಅತ್ಯಾಧುನಿಕ ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆ “ಖಬರೋವ್ಸ್ಕ್” ಗೆ ಚಾಲನೆ ನೀಡಿದೆ. ಇದು ನೀರಿನೊಳಗೆ ಸಂಚರಿಸುವ ಪರಮಾಣು ಶಕ್ತಿ ಡ್ರೋನ್ ‘ಡೂಮ್ಸ್‌ಡೇ ಕ್ಷಿಪಣಿ’ಯನ್ನು ಹೊತ್ತೊಯ್ಯಲು ವಿನ್ಯಾಸಗೊಳಿಸಲಾಗಿದೆ.
‘ಡೂಮ್ಸ್‌ಡೇ ಕ್ಷಿಪಣಿ’ ಯ ಬಗ್ಗೆ:
- ಇದನ್ನು “ಪೊಸಿಡಾನ್” ಎಂದೂ ಕರೆಯಲಾಗುತ್ತದೆ.
- ಇದು ಪ್ರಸ್ತುತ ಬಳಕೆಯಲ್ಲಿರುವ ಜಲಾಂತರ್ಗಾಮಿ ನೌಕೆ ಮತ್ತು ‘ಟಾರ್ಪಿಡೊ’ಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
- ಇದು ಸಮುದ್ರದ ಅತ್ಯಂತ ಆಳದಲ್ಲಿ ಮತ್ತು ಖಂಡಾಂತರದ ದೂರದವರೆಗೆ ಕಾರ್ಯಾಚರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇದನ್ನು ಪತ್ತೆಹಚ್ಚಿ ತಡೆಹಿಡಿಯುವುದು ಕಷ್ಟಸಾಧ್ಯವಾಗಿದೆ.
- ಇದು ಖಂಡಾಂತರ ಪ್ರಯಾಣದ ಸಾಮರ್ಥ್ಯ ಮತ್ತು ಅಪಾರ ವಿನಾಶವನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದೆ.
- ಪರಮಾಣು ಶಕ್ತಿಯ ಮೂಲವನ್ನು ಹೊಂದಿರುವುದರಿಂದ, ಇದು ದೀರ್ಘ ದೂರದವರೆಗೆ ನೀರಿನ ಆಳದಲ್ಲಿ ಚಲಿಸಬಲ್ಲದು.
- ಇದು ಕರಾವಳಿಯ ಗುರಿಗಳನ್ನು ತಲುಪಬಲ್ಲದು ಮತ್ತು ಕಾರ್ಯತಂತ್ರದ ಪ್ರತಿರೋಧಕವಾಗಿ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ.
ನೌಕರರ ನೋಂದಣಿ ಯೋಜನೆ, 2025
ಸಾಮಾನ್ಯ ಅಧ್ಯಯನ – 3 / ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಸರ್ಕಾರವು ‘ನೌಕರರ ನೋಂದಣಿ ಯೋಜನೆ 2025’ಕ್ಕೆ ಚಾಲನೆ ನೀಡಿದೆ. ನೌಕರರನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ (EPFO) ಅಡಿಯಲ್ಲಿ ಸ್ವಯಂಪ್ರೇರಿತವಾಗಿ ನೋಂದಾಯಿಸುವುದು ಇದರ ಉದ್ದೇಶವಾಗಿದೆ.
ನೌಕರರ ನೋಂದಣಿ ಯೋಜನೆ, 2025 ರ ಬಗ್ಗೆ:
- ಇದನ್ನು ‘ನೌಕರರ ಭವಿಷ್ಯ ನಿಧಿ ಸಂಘಟನೆ’ಯ 73 ನೇ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಸಚಿವರು ಉದ್ಘಾಟಿಸಿದರು.
- ಅರ್ಹ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಲು ಮತ್ತು ನೋಂದಾಯಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವುದು ಇದರ ಗುರಿಯಾಗಿದೆ.
- ಜುಲೈ 1, 2017 ಮತ್ತು ಅಕ್ಟೋಬರ್ 31, 2025 ರ ನಡುವೆ ಸಂಸ್ಥೆಗೆ ಸೇರಿದ, ಆದರೆ ಯಾವುದೇ ಕಾರಣಕ್ಕಾಗಿ ‘ನೌಕರರ ಭವಿಷ್ಯ ನಿಧಿ’ (EPF) ಅಡಿಯಲ್ಲಿ ನೋಂದಾಯಿಸಲ್ಪಡದ ಕೆಲಸಗಾರರನ್ನು ಉದ್ಯೋಗದಾತರು ಈ ಯೋಜನೆಯಡಿ ನೋಂದಾಯಿಸಬಹುದು.
- ಮಹತ್ವ: ಈ ಯೋಜನೆಯು ಉದ್ಯೋಗದಾತರಿಗೆ ಭಾರಿ ದಂಡಗಳು ಅಥವಾ ಕಾನೂನು ಕ್ರಮಗಳ ಭಯವಿಲ್ಲದೆ ತಮ್ಮ ಉದ್ಯೋಗಿಗಳನ್ನು ಸಕ್ರಮಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಯ ಬಗ್ಗೆ:
- ಇದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
- ಸ್ಥಾಪನೆ: ನೌಕರರ ಭವಿಷ್ಯ ನಿಧಿ ಮತ್ತು ಇತರೆ ನಿಬಂಧನೆಗಳ ಕಾಯಿದೆ , 1952 ರ ಅಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ.
- ಉದ್ದೇಶಗಳು:
- ನಿವೃತ್ತಿಯ ನಂತರ ನೌಕರರ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣವನ್ನು ಖಚಿತಪಡಿಸುವುದು.
- ನೌಕರರಲ್ಲಿ ಸ್ವಯಂಪ್ರೇರಿತ ಉಳಿತಾಯವನ್ನು ಉತ್ತೇಜಿಸುವುದು.
- ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ಯೋಜನೆಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.
ರೌಮಾರಿ-ದೊಂಡುವಾ ಜೌಗು ಸಂಕೀರ್ಣ
ಸಾಮಾನ್ಯ ಅಧ್ಯಯನ – 3 / ಪರಿಸರ ಅಧ್ಯಯನ
ಇದೀಗ ಸುದ್ದಿಯಲ್ಲಿದೆ:
- ಅಸ್ಸಾಂನ ರೌಮಾರಿ ಮತ್ತು ದೊಂಡುವಾ ಜೌಗು ಪ್ರದೇಶಗಳನ್ನು ‘ರಾಮ್ಸರ್ ತಾಣ’ವನ್ನಾಗಿ ಘೋಷಿಸಲು ಪ್ರಸ್ತಾಪ ಸಲ್ಲಿಸುವ ನಿಟ್ಟಿನಲ್ಲಿ, ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂರಕ್ಷಣಾ ಗುಂಪುಗಳ ತಜ್ಞರು ಪರಸ್ಪರ ಸಹಕರಿಸುತ್ತಿದ್ದಾರೆ.
ರೌಮಾರಿ-ದೊಂಡುವಾ ಜೌಗು ಸಂಕೀರ್ಣದ ಬಗ್ಗೆ:
- ಸ್ಥಳ : ಇದು ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ‘ಲಾವೊಖೋವಾ ವನ್ಯಜೀವಿ ಅಭಯಾರಣ್ಯ’ದ ವ್ಯಾಪ್ತಿಯಲ್ಲಿದೆ.
- ಲಾವೊಖೋವಾ ಮತ್ತು ಅದಕ್ಕೇ ಹತ್ತಿಕೊಂಡಿರುವ ಬುರಾಚಾಪೋರಿ ವನ್ಯಜೀವಿ ಅಭಯಾರಣ್ಯಗಳು, ಕಾಜಿರಂಗ ಹುಲಿ ಸಂರಕ್ಷಿತ ಪ್ರದೇಶ ಮತ್ತು ಒರಾಂಗ್ ರಾಷ್ಟ್ರೀಯ ಉದ್ಯಾನವನಗಳ (ಕಾಜಿರಂಗ-ಒರಾಂಗ್ ಭೂದೃಶ್ಯ) ನಡುವೆ ಸಂಚರಿಸುವ ವನ್ಯಜೀವಿಗಳಿಗೆ ಪ್ರಮುಖ ‘ಸಂಪರ್ಕ ಮಾರ್ಗ’ಗಳಾಗಿ ಕಾರ್ಯನಿರ್ವಹಿಸುತ್ತವೆ.
- ಇದು ಜಾಗತಿಕವಾಗಿ ಅಪಾಯಕ್ಕೊಳಗಾದ ‘ಗಂಟು ಕೊಕ್ಕಿನ ಬಾತುಕೋಳಿ’, ಕಪ್ಪು ಕುತ್ತಿಗೆಯ ಕೊಕ್ಕರೆ ಮತ್ತು ಕೆಂಗಂದು ಬಾತುಕೋಳಿಗಳಂತಹ ಪ್ರಭೇದಗಳು ಸೇರಿದಂತೆ, ವಾರ್ಷಿಕವಾಗಿ ಸುಮಾರು 120 ಪ್ರಭೇದಗಳ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡುತ್ತದೆ.
- ಈ ಸಂಕೀರ್ಣವು ಈಶಾನ್ಯ ಭಾರತದ ಏಕೈಕ ಎರಡು ರಾಮ್ಸರ್ ತಾಣಗಳಾದ ಅಸ್ಸಾಂನ ‘ದೀಪೋರ್ ಬೀಲ್’ ಮತ್ತು ಮಣಿಪುರದ ‘ಲೋಕ್ಟಕ್ ಸರೋವರ’ಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ದಾಖಲಿಸಿದೆ.
ರಾಮ್ಸರ್ ಸಮಾವೇಶದ ಬಗ್ಗೆ
- ರಾಮ್ಸರ್ ಸಮಾವೇಶದ ಅಡಿಯಲ್ಲಿ ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶವನ್ನು ‘ರಾಮ್ಸರ್ ತಾಣ’ ಎಂದು ಗುರುತಿಸಲಾಗುತ್ತದೆ.
- ಅಂತರರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಜೌಗು ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಮ್ಸರ್ ಸಮಾವೇಶವು ಒಂದು ಪ್ರಮುಖ ಅಂತರ-ಸರ್ಕಾರಿ ಒಪ್ಪಂದವಾಗಿದೆ.
- ಈ ಒಪ್ಪಂದಕ್ಕೆ ಇರಾನ್‌ನ ರಾಮ್ಸರ್‌ನಲ್ಲಿ ಫೆಬ್ರವರಿ 2, 1971 ರಂದು ಸಹಿ ಹಾಕಲಾಯಿತು ಮತ್ತು ಇದು 1975 ರಲ್ಲಿ ಜಾರಿಗೆ ಬಂದಿತು.
- ಭಾರತವು 1982 ರಲ್ಲಿ ರಾಮ್ಸರ್ ಸಮಾವೇಶಕ್ಕೆ ಸಹಿ ಹಾಕುವ ಮೂಲಕ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು.



ನಿಮ್ಮದೊಂದು ಉತ್ತರ