ಇಂಗಾಲ ಸೆರೆಹಿಡಿಯುವಿಕೆಗೆ ಉತ್ತೇಜನ : ಕೇಂದ್ರ ಮುಂಗಡಪತ್ರ, 2026-27
ಪರಿಸರ
ಇದೀಗ ಸುದ್ದಿಯಲ್ಲಿದೆ:
- 2026–27ರ ಕೇಂದ್ರ ಮುಂಗಡಪತ್ರವು ಭಾರತದ ಹವಾಮಾನ ಸ್ಥಿತ್ಯಂತರವನ್ನು ಬೆಂಬಲಿಸಲು, ‘ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ’ಗೆ (CCUS) ಐದು ವರ್ಷಗಳ ಅವಧಿಗೆ ₹20,000 ಕೋಟಿಗಳ ಉತ್ತೇಜನವನ್ನು ಘೋಷಿಸಿದೆ.
ಇಂಗಾಲದ ಸೆರೆಹಿಡಿಯುವಿಕೆ, ಬಳಕೆ ಮತ್ತು ಶೇಖರಣೆ (CCUS)ಯ ಬಗ್ಗೆ:
- CCUS ಎಂಬುದು ಕೈಗಾರಿಕಾ ಪ್ರಕ್ರಿಯೆಗಳು ಮತ್ತು ವಿದ್ಯುತ್ ಉತ್ಪಾದನೆಯಿಂದ ಉಂಟಾಗುವ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯುವ ತಂತ್ರಜ್ಞಾನಗಳನ್ನು ಉಲ್ಲೇಖಿಸುತ್ತದೆ.
- ಸೆರೆಹಿಡಿದ CO₂ ಅನ್ನು ಭೂಗರ್ಭದ ರಚನೆಗಳಲ್ಲಿ ಶೇಖರಿಸಿಡಲಾಗುತ್ತದೆ ಅಥವಾ ರಾಸಾಯನಿಕಗಳು, ಇಂಧನಗಳು ಅಥವಾ ನಿರ್ಮಾಣ ಸಾಮಗ್ರಿಗಳಂತಹ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
- CCUS ಭಾರತದ ಈ ಕೆಳಗಿನ ಬದ್ಧತೆಗಳನ್ನು ಬೆಂಬಲಿಸುತ್ತದೆ:
- 2070ರ ವೇಳೆಗೆ ‘ನಿವ್ವಳ ಶೂನ್ಯ ಹೊರಸೂಸುವಿಕೆ’ಯನ್ನು ಸಾಧಿಸುವುದು.
- ಉಕ್ಕು, ಅಲ್ಯೂಮಿನಿಯಂ, ಸಿಮೆಂಟ್ ಮತ್ತು ರಸಗೊಬ್ಬರಗಳಂತಹ ಕೈಗಾರಿಕೆಗಳಿಂದಾಗುವ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು.
- ಈ ಕೈಗಾರಿಕೆಗಳು ತಮ್ಮ ಉತ್ಪಾದನಾ ಪ್ರಕ್ರಿಯೆಗಳನ್ನು ಇಂಗಾಲ ಮುಕ್ತಗೊಳಿಸಿದರೆ, ಅವು ‘ಇಂಗಾಲದ ಗಡಿ ಹೊಂದಾಣಿಕೆ ವ್ಯವಸ್ಥೆ‘(CBAM)ಯ ಅಡಿಯಲ್ಲಿನ ತೆರಿಗೆ ಹೊರೆಯಿಂದ ಪಾರಾಗಬಹುದು.
ಭಾರತದ ಹೊರಸೂಸುವಿಕೆ ಕಡಿತದ ಬದ್ಧತೆಗಳು:
- ಭಾರತವು ‘ಲೈಫ್ ಮಿಷನ್’ (LiFE – ಪರಿಸರಕ್ಕಾಗಿ ಜೀವನಶೈಲಿ) ಅನ್ನು ಪ್ರಾರಂಭಿಸಿದೆ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ತನ್ನ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು’ (NDCs) ನವೀಕರಿಸಿದೆ.
- ಭಾರತವು, ತನ್ನ ನವೀಕೃತ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ’ (NDCs), 2022ರ ಅಡಿಯಲ್ಲಿ ಈ ಕೆಳಗಿನ ಪ್ರತಿಜ್ಞೆಗಳನ್ನು ಮಾಡಿದೆ:
- 2005ರ ಮಟ್ಟಕ್ಕೆ ಹೋಲಿಸಿದರೆ, 2030ರ ವೇಳೆಗೆ ಹೊರಸೂಸುವಿಕೆಯ ತೀವ್ರತೆಯನ್ನು (ಜಿಡಿಪಿಯ ಪ್ರತಿ ಘಟಕಕ್ಕೆ CO₂ ಪ್ರಮಾಣ) 45% ರಷ್ಟು ಕಡಿಮೆ ಮಾಡುವುದು.
- 2030ರ ವೇಳೆಗೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 50% ರಷ್ಟು ಪಾಲು ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಬರುವಂತೆ ಮಾಡುವುದು.
- ಅರಣ್ಯ ಮತ್ತು ಮರಗಳ ಹೊದಿಕೆಯನ್ನು ಹೆಚ್ಚಿಸುವ ಮೂಲಕ 2.5 ರಿಂದ 3 ಬಿಲಿಯನ್ ಟನ್ ಗಳಷ್ಟು CO₂ ಸಮಾನಾಂತರ (GtCO₂e) ‘ಇಂಗಾಲದ ಶೇಖರಣಾ ತಾಣ'(ಕಾರ್ಬನ್ ಸಿಂಕ್)ವನ್ನು ಸೃಷ್ಟಿಸುವುದು.
ಥೈಪೂಸಂ (Thaipusam)
ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಪವಿತ್ರ ಥೈಪೂಸಂ ಹಬ್ಬದ ಶುಭಾಶಯಗಳನ್ನು ಕೋರಿದರು.
ಥೈಪೂಸಂ ಹಬ್ಬದ ಬಗ್ಗೆ:
- ‘ಥೈಪೂಸಂ’ ಎಂಬ ಹೆಸರು ‘ಥೈ’ (ತಮಿಳು ಮಾಸ) ಮತ್ತು ‘ಪೂಸಂ’ (ಹಬ್ಬದ ಸಮಯದಲ್ಲಿ ಅತ್ಯುನ್ನತ ಹಂತದಲ್ಲಿರುವ ನಕ್ಷತ್ರ) ಎಂಬ ಪದಗಳ ಸಂಯೋಜನೆಯಾಗಿದೆ.
- ಇದನ್ನು ತಮಿಳು ಮಾಸವಾದ ‘ಥೈ’ನಲ್ಲಿ ಬರುವ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
- ಇದು ಯುದ್ಧ, ವಿಜಯ ಮತ್ತು ಜ್ಞಾನದ ಹಿಂದೂ ದೇವರಾದ ಮುರುಗನ್ (ಕಾರ್ತಿಕೇಯ ಎಂತಲೂ ಕರೆಯಲ್ಪಡುವ) ದೇವರ ಗೌರವಾರ್ಥ ಆಚರಿಸಲಾಗುವ ಹಿಂದೂ ಹಬ್ಬವಾಗಿದೆ. ಇದೇ ಸಮಯದಲ್ಲಿ, ಇದು ಧೈರ್ಯ, ದೃಢನಿಶ್ಚಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವೂ ಆಗಿದೆ.
- ತಮಿಳು ಸಮುದಾಯ ವ್ಯಾಪಕವಾಗಿ ಆಚರಿಸುತ್ತದೆ:- ಇದನ್ನು ತಮಿಳುನಾಡು ಸೇರಿದಂತೆ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ, ವಿಶೇಷವಾಗಿ ಶ್ರೀಲಂಕಾ, ಸಿಂಗಾಪುರ ಮತ್ತು ಮಲೇಷ್ಯಾಗಳಲ್ಲಿರುವ ಆಚರಿಸುತ್ತದೆ.
ಭಾರತ – ಅಮೆರಿಕ ವ್ಯಾಪಾರ ಒಪ್ಪಂದ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತ ಮತ್ತು ಅಮೆರಿಕ (ಯುಎಸ್) ದೇಶಗಳು ನೂತನ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದು, ಇದು ಸುಂಕಗಳನ್ನು ಕಡಿಮೆ ಮಾಡಿದೆ ಮತ್ತು ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿದೆ.
ಹಿನ್ನೆಲೆ:
- 2025 ರ ಆಗಸ್ಟ್‌ನಲ್ಲಿ, ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಅಮೆರಿಕವು ಶೇ 50 ರಷ್ಟು (ಶೇ 25 ರಷ್ಟು ಪರಸ್ಪರ ಸುಂಕ + ಶೇ 25 ರಷ್ಟು ಹೆಚ್ಚುವರಿ ಸುಂಕ) ಸುಂಕವನ್ನು ವಿಧಿಸಿತ್ತು.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ:
- 25% ರಿಂದ 18% ಕ್ಕೆ ಸುಂಕ ಕಡಿತ:- ಭಾರತದ ಸರಕುಗಳ ಮೇಲಿನ ಅಮೆರಿಕದ ಪರಸ್ಪರ ಸುಂಕಗಳನ್ನು (reciprocal tariffs) 25% ರಿಂದ 18% ಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಕಡಿಮೆ ಮಾಡಲಾಗಿದೆ.
- ಈ ಹಿಂದೆ ವಿಧಿಸಲಾಗಿದ್ದ 25% ರಷ್ಟು ಹೆಚ್ಚುವರಿ ಸುಂಕವನ್ನು ಹಿಂಪಡೆಯಲಾಗಿದೆ.
- ವ್ಯಾಪಕ ಬದ್ಧತೆಗಳ ಕುರಿತು ಅಮೆರಿಕದ ಪ್ರತಿಪಾದನೆ:- ಅಮೆರಿಕದ ಸರಕುಗಳಿಗೆ ಶೂನ್ಯ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳ ನಿವಾರಣೆಯನ್ನು ಈ ಒಪ್ಪಂದ ಒಳಗೊಂಡಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಅಲ್ಲದೆ, ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮುಂತಾದ ವಲಯಗಳಲ್ಲಿ $500 ಬಿಲಿಯನ್‌ಗೂ ಹೆಚ್ಚು ಮೌಲ್ಯದ ಅಮೆರಿಕದ ಉತ್ಪನ್ನಗಳನ್ನು ಖರೀದಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದೆ.
- ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕಗಳು ಮತ್ತು ಸುಂಕೇತರ ತಡೆಗಳನ್ನು ಹಂತ-ಹಂತವಾಗಿ ಕಡಿಮೆ ಮಾಡಲಿದೆ.
ಒಪ್ಪಂದದ ಮಹತ್ವ:
- ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುತ್ತದೆ:- ಜಾಗತಿಕ ಭೂರಾಜಕೀಯ ಪಲ್ಲಟಗಳ ನಡುವೆ, ವಿಶೇಷವಾಗಿ ಚೀನಾಕ್ಕೆ ಸಂಬಂಧಿಸಿದಂತೆ, ಇದು ಬಲಪಡಿಸುತ್ತದೆ.
- ಚೀನಾದ ಪ್ರಾಬಲ್ಯವನ್ನು ಎದುರಿಸಲು ಇದು ಸಹಾಯಕ:- ವಿಶೇಷವಾಗಿ, ಜಾಗತಿಕ ವ್ಯಾಪಾರ ಮತ್ತು ತಯಾರಿಕಾ ವಲಯದಲ್ಲಿ ಸಹಾಯಕವಾಗಿದೆ.
- ರಫ್ತು ಸ್ಪರ್ಧಾತ್ಮಕತೆ ಮತ್ತು ಹೂಡಿಕೆ:- ಕಡಿಮೆ ಸುಂಕಗಳು ಭಾರತೀಯ ರಫ್ತುದಾರರಿಗೆ (ರೈತರು, MSMEಗಳು ಮತ್ತು ಉದ್ಯಮಿಗಳು) ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತವೆ ಮತ್ತು ಹೂಡಿಕೆಯನ್ನು ಆಕರ್ಷಿಸುತ್ತವೆ.
- ಇದು ಜಗತ್ತಿಗಾಗಿ ‘ಭಾರತದಲ್ಲಿ ತಯಾರಿಸಿ, ವಿನ್ಯಾಸಗೊಳಿಸಿ ಮತ್ತು ಆವಿಷ್ಕರಿಸಿ’ ಎಂಬ ಧ್ಯೇಯಕ್ಕೆ ಬೆಂಬಲ ನೀಡಲಿದೆ.
- ತೈಲ ಆಮದನ್ನು ವೈವಿಧ್ಯಮಯಗೊಳಿಸುವುದು:- ಇದರಿಂದ ರಷ್ಯಾದ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಬಹುದು, ಆದರೂ ಇದು ಹೆಚ್ಚಿನ ವೆಚ್ಚದಾಯಕವಾಗಬಹುದು.
- ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸಲು ಸಹಾಯ:- ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆ ಇದು ಸಹಾಯ ಮಾಡುತ್ತದೆ.
- ಇದು ಅಮೆರಿಕ ನೇತೃತ್ವದ ವ್ಯಾಪಾರ ಮತ್ತು ಭದ್ರತಾ ಚೌಕಟ್ಟುಗಳಲ್ಲಿ ಭಾರತವನ್ನು ಒಂದು ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ರೂಪಿಸಲಿದೆ.
ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ
ಸರ್ಕಾರಿ ನೀತಿ ಮತ್ತು ಹಸ್ತಕ್ಷೇಪ
ಇದೀಗ ಸುದ್ದಿಯಲ್ಲಿದೆ:
- ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವು (DAY-NRLM) ಒಂದು ಹೊಸ ಹಂತಕ್ಕೆ ಪರಿವರ್ತನೆಗೊಳ್ಳುತ್ತಿದ್ದು, ಇದನ್ನು ಸಾಮಾನ್ಯವಾಗಿ ‘NRLM 2.0’ ಎಂದು ಕರೆಯಲಾಗುತ್ತದೆ. “ಇದು ಮುಂದಿನ 5 ವರ್ಷಗಳ ಅವಧಿಗೆ (2026-27 ರಿಂದ 2030-31) ಸಜ್ಜುಗೊಳ್ಳುತ್ತಿದೆ.
ದೀನದಯಾಳ ಅಂತ್ಯೋದಯ ಯೋಜನೆಯ ಬಗ್ಗೆ:
- 2010 ರಲ್ಲಿ ಪ್ರಾರಂಭ:- ಹಿಂದಿನ “ಸ್ವರ್ಣಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ”ಯನ್ನು (SGSY) ಪುನರ್‌ರಚಿಸುವ ಮೂಲಕ ಇದನ್ನು ಪ್ರಾರಂಭಿಸಲಾಯಿತು.
- 2016 ರಲ್ಲಿ ಮರುನಾಮಕರಣ:- ಈ ಉಪಕ್ರಮವನ್ನು ‘ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ’ (DAY-NRLM) ಎಂದು ಮರುನಾಮಕರಣ ಮಾಡಲಾಯಿತು.
- ಹಣಕಾಸು:- ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಉದ್ದೇಶ:- ಸ್ವಯಂ ಉದ್ಯೋಗ ಮತ್ತು ಕೌಶಲ್ಯಯುತ ವೇತನ ಉದ್ಯೋಗಗಳ ಮೂಲಕ ಗ್ರಾಮೀಣ ಬಡತನವನ್ನು ತಗ್ಗಿಸುವುದು.
- ಮಹಿಳಾ ಕೇಂದ್ರಿತ ಮಾದರಿ:- ಈ ಅಭಿಯಾನವು ಸ್ವಸಹಾಯ ಸಂಘಗಳು (SHGs) ಮತ್ತು ಒಕ್ಕೂಟಗಳ ಮೂಲಕ ಮಹಿಳೆಯರಿಗೆ ಸಾಲಸೌಲಭ್ಯ, ಮಾರುಕಟ್ಟೆಗಳು ಮತ್ತು ತಂತ್ರಜ್ಞಾನದ ಸಂಪರ್ಕವನ್ನು ಕಲ್ಪಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.



ನಿಮ್ಮದೊಂದು ಉತ್ತರ