‘ಆಭಾರ್’ ಆನ್ಲೈನ್ ಮಳಿಗೆ
ಸಾಮಾನ್ಯ ಅಧ್ಯಯನ – 3/ ಆರ್ಥಿಕತೆ
ಇದೀಗ ಸುದ್ಧಿಯಲ್ಲಿದೆ:
-
- ಭಾರತೀಯ ರೈಲ್ವೆಯು ಹೊಸ ‘ಆಭಾರ್’ ಆನ್ಲೈನ್ ಮಳಿಗೆಗೆ ಪ್ರೋತ್ಸಾಹ ಮತ್ತು ಸಹಾಯ ಒದಗಿಸುತ್ತಿದೆ.
- ಆಯೋಜಕರು:- ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM).
- ಉದ್ದೇಶ:- ಈ ಆನ್ಲೈನ್ ಮಳಿಗೆಯು ಪ್ರಧಾನವಾಗಿ ಈ ಕೆಳಗಿನ ವರ್ಗದ ತಯಾರಕರಿಂದ ಸಿದ್ಧಪಡಿಸಿದ ಉಡುಗೊರೆ ವಸ್ತುಗಳನ್ನು ಪ್ರದರ್ಶಿಸುತ್ತದೆ:
- ಸ್ಥಳೀಯ ಬುಡಕಟ್ಟು ಜನಾಂಗದವರು ಮತ್ತು ಕೈಮಗ್ಗ ನೇಕಾರರು.
- “ಒಂದು ಜಿಲ್ಲೆ ಒಂದು ಉತ್ಪನ್ನ” (ODOP) ಯೋಜನೆಯ ತಯಾರಕರು.
- ಭೌಗೋಳಿಕ ಸೂಚ್ಯಂಕ (GI) ಟ್ಯಾಗ್ ಹೊಂದಿರುವ ಉತ್ಪನ್ನಗಳ ತಯಾರಕರು.
- ಕೇಂದ್ರ ಗುಡಿ ಕೈಗಾರಿಕೆಗಳ ಮಳಿಗೆ (CCIE).
- ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC).
ಮಹತ್ವ:
- ಇದನ್ನು ‘ವೋಕಲ್ ಫಾರ್ ಲೋಕಲ್’ (‘ಸ್ಥಳೀಯ ಉತ್ಪನ್ನಗಳಿಗೆ ದನಿಯಾಗಿ’) ಅಭಿಯಾನದೊಂದಿಗೆ ಉತ್ತೇಜಿಸಲಾಗಿದೆ.
- ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಕುಶಲಕರ್ಮಿಗಳು, ಮಹಿಳಾ ನೇತೃತ್ವದ ಉದ್ದಿಮೆಗಳು ಹಾಗೂ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಇದರ ಪ್ರಮುಖ ಗುರಿಯಾಗಿದೆ.
|
ನಿಮಗಿದು ಗೊತ್ತೇ ?
|
ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025
ರಾಜಕೀಯ ಮತ್ತು ಆಡಳಿತ
ಇದೀಗ ಸುದ್ಧಿಯಲ್ಲಿದೆ:
- ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು “ವ್ಯಾಸ್-ನಾವ್ (VYAS –NAV), ವ್ಯಾಸ್-ಭಾರತ್ (VYAS – BHARAT) ಮತ್ತು ವ್ಯಾಸ್-ಸೂತ್ರ (VYAS- SUTRA)” ಆ್ಯಪ್ಗಳನ್ನು ಬಳಸುವ ಮೂಲಕ ‘ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025’ ಕ್ಕೆ ಚಾಲನೆ ನೀಡಿತು.
ಡಿಜಿಟಲ್ ಸಾಗರಿಕ ಮೀನುಗಾರಿಕೆ ಗಣತಿ, 2025 ರ ಬಗ್ಗೆ:
- ಡಿಜಿಟಲ್ ರಚನೆ:- ಈ ಡಿಜಿಟಲ್ ಪ್ರಕ್ರಿಯೆಯು ಐಸಿಎಆರ್-ಕೇಂದ್ರ ಸಾಗರಿಕ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ICAR-CMFRI) ಅಭಿವೃದ್ಧಿಪಡಿಸಿದ 3 ಬಹುಭಾಷಾ ಆಂಡ್ರಾಯ್ಡ್ ಅಪ್ಲಿಕೇಶನ್ಗಳ ಮೂಲಕ ಕಾರ್ಯನಿರ್ವಹಿಸುತ್ತದೆ:
- ವ್ಯಾಸ್-ನಾವ್ : ಇದನ್ನು ಮೀನುಗಾರಿಕಾ ಗ್ರಾಮಗಳು ಮತ್ತು ಬಂದರುಗಳ ದೃಢೀಕರಣಕ್ಕಾಗಿ ಬಳಸಲಾಗುತ್ತದೆ.
- ವ್ಯಾಸ್-ಭಾರತ್: ಇದನ್ನು ಕುಟುಂಬಗಳು ಮತ್ತು ಮೂಲಸೌಕರ್ಯಗಳ ಗಣತಿಗಾಗಿ ಬಳಸಲಾಗುತ್ತದೆ.
ವ್ಯಾಸ್-ಸೂತ್ರ : ಇದನ್ನು ದತ್ತಾಂಶ ಸಂಗ್ರಹಣೆಯ ನೈಜ ಸಮಯದ ಮೇಲ್ವಿಚಾರಣೆ ಮತ್ತು ಉಸ್ತುವಾರಿಗಾಗಿ ಬಳಸಲಾಗುತ್ತದೆ.
ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ
ಇತರೆ
ಇದೀಗ ಸುದ್ಧಿಯಲ್ಲಿದೆ:
- 2025ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು 1,466 ಸಿಬ್ಬಂದಿಗೆ ಪ್ರದಾನ ಮಾಡಲಾಗಿದೆ.
ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕದ ಬಗ್ಗೆ:
- ಸ್ಥಾಪನೆ: ಕೇಂದ್ರ ಗೃಹ ಸಚಿವಾಲಯ (MHA).
- ಗುರುತಿಸುವ ಪ್ರಮುಖ ಕ್ಷೇತ್ರಗಳು: ಇದು ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನ ಕ್ಷೇತ್ರಗಳಲ್ಲಿನ ಅತ್ಯುನ್ನತ ಸೇವೆಯನ್ನು ಗುರುತಿಸುತ್ತದೆ.
- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸ್ಮರಣಾರ್ಥ, ಪ್ರತಿ ವರ್ಷ ಅಕ್ಟೋಬರ್ 31 ರಂದು ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.
- ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಂತದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆಗಳು, ಗುಪ್ತಚರ ವಿಭಾಗಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (CAPFs), ಕೇಂದ್ರೀಯ ಪೊಲೀಸ್ ಸಂಸ್ಥೆಗಳು (CPOs) ಮತ್ತು ವಿಧಿ ವಿಜ್ಞಾನ ಘಟಕಗಳ ಸದಸ್ಯರಿಗೆ ಈ ಪದಕವನ್ನು ಪ್ರದಾನ ಮಾಡಲಾಗುತ್ತದೆ.



ನಿಮ್ಮದೊಂದು ಉತ್ತರ