ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ
ಸಾಮಾನ್ಯ ಅಧ್ಯಯನ-1/ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಮತ್ತು ಭಾರತದ ಅತ್ಯಂತ ಪೂರ್ವದ ಹಳ್ಳಿಯಾದ ‘ಡಾಂಗ್’ ನಲ್ಲಿ, 2026ರ ಸಾಲಿನ ಭಾರತದ ಮೊದಲ ಸೂರ್ಯೋದಯವನ್ನು “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” (ಡ್ಯಾನ್ಸ್ ಆಫ್ ದಿ ಡಾನ್) ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.
“ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ”(ಡ್ಯಾನ್ಸ್ ಆಫ್ ದಿ ಡಾನ್)ದ ಬಗ್ಗೆ:
- “ಅಲೋ ಪ್ರಭಾತ್: ಬೆಳಗಿನ ಜಾವದ ನೃತ್ಯ” ಎಂಬ ಶೀರ್ಷಿಕೆಯ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಹೊಸ ವರ್ಷದ ಪ್ರಥಮ ಸೂರ್ಯೋದಯವನ್ನು ಸ್ವಾಗತಿಸಲಾಯಿತು.
- ಆಚರಿಸುವವರು:- ಈ ಆಚರಣೆಯನ್ನು ಪ್ರಮುಖವಾಗಿ ಸ್ಥಳೀಯ ‘ಮೇಯೋರ್’ ಮತ್ತು ‘ಮಿಶ್ಮಿ’ ಸಮುದಾಯಗಳು ನೆರವೇರಿಸಿದವು. ಈ ಸಮುದಾಯಗಳ ಸದಸ್ಯರು ತಮ್ಮ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಬಳಸಿಕೊಂಡು, ಪಾರಂಪರಿಕ ಮಂತ್ರ ಪಠಣಗಳು, ಹಾಡುಗಳು ಹಾಗೂ ಸ್ಥಳೀಯ ಲಯಗಳೊಂದಿಗೆ ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು.



ನಿಮ್ಮದೊಂದು ಉತ್ತರ