ಅಭಿಧಮ್ಮ ದಿನ
ಸಾಮಾನ್ಯ ಅಧ್ಯಯನ -1/ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ (IBC), ಗೌತಮ ಬುದ್ಧ ವಿಶ್ವವಿದ್ಯಾಲಯ (GBU), ಅಂತರರಾಷ್ಟ್ರೀಯ ಬೌಧ್ ಶೋಧ ಸಂಸ್ಥಾನ ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಅಭಿಧಮ್ಮ ದಿನವನ್ನು ಆಚರಿಸಲಾಯಿತು.
ಅಭಿಧಮ್ಮ ದಿನದ ಕುರಿತು:
- ಇದು ಗೌತಮ ಬುದ್ಧನು ಅಭಿಧಮ್ಮ ಬೋಧನೆಗಳನ್ನು ನೀಡಿದ ನಂತರ ತಾವತಿಂಸ ಸ್ವರ್ಗದಿಂದ ಇಳಿದದ್ದನ್ನು ಸ್ಮರಿಸುತ್ತದೆ.
- ಬೌದ್ಧ ಸಂಪ್ರದಾಯದ ಪ್ರಕಾರ, ಬುದ್ಧನು ಜ್ಞಾನೋದಯವಾದ ನಂತರ, ತಾವತಿಂಸ ಸ್ವರ್ಗದಲ್ಲಿ ಮೂರು ತಿಂಗಳು ಕಳೆದನು. ಅವನು ತನ್ನ ತಾಯಿ ಮಾಯಾಳಿಗೆ ಅಭಿಧಮ್ಮವನ್ನು ಬೋಧಿಸಿದನು, ಅವಳು ತೀರಿಕೊಂಡು ಅಲ್ಲಿಯೇ ಪುನರ್ಜನ್ಮ ಪಡೆದಳು.
ಆಧುನಿಕ ಕಾಲದಲ್ಲಿ ಅಭಿಧಮ್ಮ ದಿನದ ಮಹತ್ವ:
- ಅಭಿಧಮ್ಮ ದಿನವು ಗಮನವಿಟ್ಟಿರುವಿಕೆ, ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ.
- ಕರುಣೆ ಮತ್ತು ಬುದ್ಧಿವಂತಿಕೆಯ ಅನ್ವೇಷಣೆ ಸೇರಿದಂತೆ ಬೌದ್ಧಧರ್ಮದ ಮೂಲ ಮೌಲ್ಯಗಳನ್ನು ಬಲಪಡಿಸುತ್ತದೆ .
- ಶಾಂತಿ ಮತ್ತು ಉದ್ದೇಶದ ಜೀವನವನ್ನು ನಡೆಸಲು ಬುದ್ಧನ ಬೋಧನೆಗಳೊಂದಿಗೆ ಸಂಪರ್ಕ ಸಾಧಿಸುವ ಮಹತ್ವವನ್ನು ಈ ಆಚರಣೆಯು ತೋರಿಸುತ್ತದೆ.
ಅತಿಚಂದ್ರ ಅಥವಾ ಅತಿ ಪೂರ್ಣ ಚಂದ್ರ (ಸೂಪರ್‌ಮೂನ್)
ಸಾಮಾನ್ಯ ಅಧ್ಯಯನ -1/ಭೂಗೋಳ ಶಾಸ್ತ್ರ

ಸಂದರ್ಭ:
- ಕೊಯ್ಲು ಚಂದ್ರ ಅಥವಾ ಪಕ್ಕುವ ಚಂದ್ರ (ಹಾರ್ವೆಸ್ಟ್ ಮೂನ್) ಎಂದೂ ಕರೆಯಲ್ಪಡುವ ಅತಿ ಪೂರ್ಣ ಚಂದ್ರನನ್ನು ಇತ್ತೀಚೆಗೆ ಗಮನಿಸಲಾಯಿತು.
ಅತಿ ಪೂರ್ಣ ಚಂದ್ರ (ಸೂಪರ್‌ಮೂನ್) ನ ಬಗ್ಗೆ:
- ಹುಣ್ಣಿಮೆ ಅಥವಾ ಅಮಾವಾಸ್ಯೆ ಚಂದ್ರನು ತನ್ನ ದೀರ್ಘವೃತ್ತದ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಹತ್ತಿರ ಬರುವ ಸಮಯಕ್ಕೆ ಹೊಂದಿಕೆಯಾದಾಗ (ಪೆರಿಜಿ ಎಂದು ಕರೆಯಲ್ಪಡುವ ಬಿಂದುವಿನಲ್ಲಿ) ಅತಿಚಂದ್ರ ಸಂಭವಿಸುತ್ತದೆ.
- ಚಂದ್ರನ ಕಕ್ಷೆಯು ಪರಿಪೂರ್ಣ ವೃತ್ತಕಾರವಲ್ಲದ ಕಾರಣ, ಭೂಮಿಯಿಂದ ಚಂದ್ರನ ದೂರವು ತಿಂಗಳು ಪೂರ್ತಿ ಸುಮಾರು 50,000 ಕಿ.ಮೀ.ಗಳಷ್ಟು ಬದಲಾಗುತ್ತದೆ.
- ಚಂದ್ರನು ತನ್ನ ಪೆರಿಜಿಯ ಬಳಿ ಮತ್ತು ಸೂರ್ಯನಿಗೆ ನೇರವಾಗಿ ಎದುರಾಗಿರುವಾಗ, ಹುಣ್ಣಿಮೆಯು ಅತ್ಯಂತ ದೂರದ ಬಿಂದುವಿನಲ್ಲಿರುವಾಗ ಕಾಣುವುದಕ್ಕಿಂತ ಸುಮಾರು 14% ದೊಡ್ಡದಾಗಿ ಮತ್ತು 30% ಪ್ರಕಾಶಮಾನವಾಗಿ ಗೋಚರಿಸುತ್ತದೆ, ಇದನ್ನೇ ಅತಿ ಚಂದ್ರ ಎನ್ನುತ್ತಾರೆ.
- ಸಾಂಸ್ಕೃತಿಕವಾಗಿ, ಅತಿ ಚಂದ್ರ ಬಹಳ ಹಿಂದಿನಿಂದಲೂ ಮಾನವ ಕಲ್ಪನೆಯನ್ನು ಸೆರೆಹಿಡಿದಿವೆ, ನಾಗರಿಕತೆಗಳಾದ್ಯಂತ ಜಾನಪದ ಮತ್ತು ಆಧ್ಯಾತ್ಮಿಕ ಆಚರಣೆಗಳನ್ನು ಪ್ರೇರೇಪಿಸುತ್ತವೆ.
- “ಸೂಪರ್ ಮೂನ್” ಎಂಬ ಪದವನ್ನು ಮೊದಲ ಬಾರಿಗೆ 1970ರ ದಶಕದಲ್ಲಿ ಜ್ಯೋತಿಷಿ ರಿಚರ್ಡ್ ನೊಲ್ಲೆ ಅವರು ಬಳಸಿದರು ಮತ್ತು ಈಗ ಅದು ಖಗೋಳಶಾಸ್ತ್ರ ಹಾಗೂ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದೆ.
ಮಾಸ್ಕೋ ಸ್ವರೂಪದ ಮಾತುಕತೆಗಳು
ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಭಾರತ, ಚೀನಾ, ಪಾಕಿಸ್ತಾನ ದೇಶಗಳು, 10 ರಾಷ್ಟ್ರಗಳ ಮಾಸ್ಕೋ ಸ್ವರೂಪ ಮಾತುಕತೆಯಲ್ಲಿ ಭಾಗವಹಿಸಿವೆ.
ಮಾಸ್ಕೋ ಸ್ವರೂಪದ ಮಾತುಕತೆಗಳ ಕುರಿತು:
- ಇದನ್ನು 2017 ರಲ್ಲಿ ಸ್ಥಾಪಿಸಲಾಗಿದೆ.
- ಉದ್ದೇಶ: – ಇದು ಅಫ್ಘಾನಿಸ್ತಾನ ಸಂಘರ್ಷವನ್ನು ಪರಿಹರಿಸಲು, ಸ್ಥಿರತೆಯನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಸಾಮರಸ್ಯವನ್ನು ಬೆಳೆಸಲು ಪ್ರಾದೇಶಿಕ ರಾಜತಾಂತ್ರಿಕ ಉಪಕ್ರಮವಾಗಿದೆ.
- ಮಹತ್ವ: – ಇದು ಪ್ರಾದೇಶಿಕ ದೇಶಗಳು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಸಮನ್ವಯ ಸಾಧಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
- ಸದಸ್ಯರು: – ಭಾರತ, ಅಫ್ಘಾನಿಸ್ತಾನ, ಚೀನಾ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್.
ಧ್ರುವೀಯ ರೇಷ್ಮೆ ರಸ್ತೆ (ಪೋಲಾರ್ ಸಿಲ್ಕ್ ರೋಡ)
ಸಾಮಾನ್ಯ ಅಧ್ಯಯನ -2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:
- ಚೀನಾದ ಹಡಗು “ಇಸ್ತಾಂಬುಲ್ ಸೇತುವೆ” 18 ದಿನಗಳಲ್ಲಿ ಚೀನಾದ ನಿಂಗ್ಬೋ-ಝೌಶನ್ ನಿಂದ ಯುನೈಟೆಡ್ ಕಿಂಗ್ಡಮ್ ನ ಫೆಲಿಕ್ಸ್‌ಟೋವ್ ಗೆ ಆರ್ಕ್ಟಿಕ್ ಸಾಗರದ ಮೂಲಕ ಪ್ರಯಾಣಿಸಿದ ಮೊದಲ ವಾಣಿಜ್ಯ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು, ಇದು ಪೋಲಾರ್ ಸಿಲ್ಕ್ ರೋಡನ ಕಾರ್ಯಾಚರಣೆಯ ಪ್ರಾರಂಭವನ್ನು ಸೂಚಿಸುತ್ತದೆ.
ಪೋಲಾರ್ ಸಿಲ್ಕ್ ರೋಡನ ಬಗ್ಗೆ:
- ಇದು ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮ (BRI) ದ ಒಂದು ಭಾಗವಾಗಿದ್ದು, ಇದನ್ನು ಆರ್ಕ್ಟಿಕ್ ಮಹಾಸಾಗರದ ಮೂಲಕ “ನೀಲಿ ಆರ್ಥಿಕ ಮಾರ್ಗಪಥ (ಕಾರಿಡಾರ್)” ಎಂದು ಕಲ್ಪಿಸಲಾಗಿದೆ.
- ಇದು ರಷ್ಯಾದ ಕರಾವಳಿಯುದ್ದಕ್ಕೂ ಉತ್ತರ ಸಮುದ್ರ ಮಾರ್ಗ (NSR) ಗಳ ಮೂಲಕ ಪೂರ್ವ ಏಷ್ಯಾ, ಉತ್ತರ ಅಮೆರಿಕಾ ಮತ್ತು ಪಶ್ಚಿಮ ಯುರೋಪ್ ಅನ್ನು ಸಂಪರ್ಕಿಸುವ ಸಂಚಾರಯೋಗ್ಯ ಆರ್ಕ್ಟಿಕ್ ಸಮುದ್ರ ಮಾರ್ಗಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ.
- ಮಹತ್ವ: – ಇದು ಏಷ್ಯಾ ಮತ್ತು ಯುರೋಪ್ ನಡುವೆ ಹಡಗುಗಳಿಗೆ ಹೊಸ ಕಾರಿಡಾರ್ ಅನ್ನು ಸ್ಥಾಪಿಸುತ್ತದೆ – ಇದು ಸೂಯೆಜ್ ಕಾಲುವೆ ಮಾರ್ಗಕ್ಕಿಂತ ಕಡಿಮೆ ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿಯಾಗಿದೆ.
ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮ (BRI)
ಒನ್ ಬೆಲ್ಟ್ ಒನ್ ರೋಡ್ (OBOR)
- ಇದು ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿ ಹರಡಿರುವ ಬಹು ದೇಶಗಳ ನಡುವಿನ ಸಂಪರ್ಕ ಮತ್ತು ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ. OBOR ಸುಮಾರು 78 ದೇಶಗಳನ್ನು ವ್ಯಾಪಿಸಿದೆ.
- 2013 ರಲ್ಲಿ ಘೋಷಿಸಲಾದ ಈ ಯೋಜನೆಯು ರಸ್ತೆಮಾರ್ಗಗಳು, ರೈಲ್ವೆಗಳು, ಸಮುದ್ರ ಬಂದರುಗಳು, ವಿದ್ಯುತ್ ಗ್ರಿಡ್‌ಗಳು, ತೈಲ ಮತ್ತು ಅನಿಲ ಪೈಪ್‌ಲೈನ್‌ಗಳು ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳ ಜಾಲಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ.
OBOR ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ:
- ಸಿಲ್ಕ್ ರೋಡ್ ಎಕನಾಮಿಕ್ ಬೆಲ್ಟ್ (ರೇಷ್ಮೆ ರಸ್ತೆ ಆರ್ಥಿಕ ಪಟ್ಟಿ): – ಇದು ಭೂ-ಆಧಾರಿತವಾಗಿದ್ದು, ಚೀನಾವನ್ನು ಮಧ್ಯ ಏಷ್ಯಾ, ಪೂರ್ವ ಯುರೋಪ್ ಮತ್ತು ಪಶ್ಚಿಮ ಯುರೋಪ್‌ನೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ.
- 21 ನೇ ಶತಮಾನದ ಮಾರಿಟೈಮ್ ಸಿಲ್ಕ್ ರೋಡ್ (ಕಡಲ ರೇಷ್ಮೆ ರಸ್ತೆ ): – ಇದು ಸಮುದ್ರ ಆಧಾರಿತವಾಗಿದ್ದು, ಚೀನಾದ ದಕ್ಷಿಣ ಕರಾವಳಿಯನ್ನು ಮೆಡಿಟರೇನಿಯನ್, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಮಧ್ಯ ಏಷ್ಯಾಕ್ಕೆ ಸಂಪರ್ಕಿಸುವ ನಿರೀಕ್ಷೆಯಿದೆ.
ಹೇಚಿ-VI ಕಾರ್ಯಾಚರಣೆ
ಸಾಮಾನ್ಯ ಅಧ್ಯಯನ -2/ಅಂತರರಾಷ್ಟ್ರೀಯ ಸಂಸ್ಥೆಗಳು; (ಸಾಮಾನ್ಯ ಅಧ್ಯಯನ-3/ಸೈಬರ್ ಭದ್ರತೆ)
ಸಂದರ್ಭ:
ಇಂಟರ್‌ಪೋಲ್‌ನ ಹೇಚಿ (HAECHI)-VI ಕಾರ್ಯಾಚರಣೆಯ ಭಾಗವಾಗಿ ಕೇಂದ್ರೀಯ ತನಿಖಾ ದಳ (CBI) ಎಂಟು ಆರೋಪಿಗಳನ್ನು ಬಂಧಿಸಿದ್ದು, 45 ಶಂಕಿತರನ್ನು ಗುರುತಿಸಿದೆ.
ಹೇಚಿ-VI ಕಾರ್ಯಾಚರಣೆಯ ಬಗ್ಗೆ:
- ಈ ಕಾರ್ಯಾಚರಣೆಯು ಏಳು ವರ್ಗಗಳ ಅಪರಾಧಗಳ ಮೇಲೆ ಕೇಂದ್ರೀಕರಿಸಿದೆ:
- ಸೈಬರ್-ಸಕ್ರಿಯಗೊಳಿಸಿದ ಆರ್ಥಿಕ ಅಪರಾಧ,
- ನಕಲಿ ಧ್ವನಿ ಸಂದೇಶ (ವಾಯ್ಸ್ ಫಿಶಿಂಗ್),
- ಪ್ರೀತಿ ಮತ್ತು ಪ್ರಣಯ ವಂಚನೆಗಳು,
- ಆನ್‌ಲೈನ್ ಲೈಂಗಿಕ ಕಿರುಕುಳ,
- ಹೂಡಿಕೆ ವಂಚನೆ,
- ಅಕ್ರಮ ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ಹಣ ವರ್ಗಾವಣೆ,
- ವ್ಯವಹಾರಿಕಾ ಇ-ಮೇಲ್ ರಾಜಿ,
- ಇ-ಕಾಮರ್ಸ್ ವಂಚನೆ.
- ಆನ್‌ಲೈನ್ ವಂಚನೆ ಹಾಗೂ ಹಣ ವರ್ಗಾವಣೆ ಚಟುವಟಿಕೆಗಳನ್ನು ಪತ್ತೆಹಚ್ಚಲು ಮತ್ತು ಅಡ್ಡಿಪಡಿಸಲು ತನಿಖಾಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರು, 68,000 ಕ್ಕೂ ಹೆಚ್ಚು ಸಂಬಂಧಿತ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದರು ಮತ್ತು ಸುಮಾರು 400 ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳನ್ನು ಸ್ಥಗಿತಗೊಳಿಸಿದರು.
ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆ (INTERPOL) ಯ ಬಗ್ಗೆ:
- ಇದು 1923 ರಲ್ಲಿ ಸ್ಥಾಪನೆಯಾದ ಅಂತರ ಸರ್ಕಾರಿ ಸಂಸ್ಥೆಯಾಗಿದೆ.
- ಉದ್ದೇಶ: – ಸುಮಾರು 195 ದೇಶಗಳಲ್ಲಿ ವಿಶ್ವದಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸುವುದು.
- ಪ್ರಧಾನ ಕಚೇರಿ: – ಲಿಯಾನ್, ಫ್ರಾನ್ಸ್
ಇಂಟರ್‌ಪೋಲ್ ಹೊರಡಿಸಿದ ವಿವಿಧ ರೀತಿಯ ಸೂಚನೆಗಳು (ನೋಟೀಸ್):
- ವಿಶ್ವದಾದ್ಯಂತ ಪೊಲೀಸ್ ಸಹಕಾರ ಮತ್ತು ಅಪರಾಧ ನಿಯಂತ್ರಣವನ್ನು ಸುಗಮಗೊಳಿಸಲು ಇಂಟರ್‌ಪೋಲ್ ವಿವಿಧ ಸೂಚನೆಗಳನ್ನು ನೀಡುತ್ತದೆ.
- ರೆಡ್ ನೋಟಿಸ್( ಕೆಂಪು ಸೂಚನೆ)
- ಒಬ್ಬ ವ್ಯಕ್ತಿಯ ಬಂಧನಕ್ಕೆ ಇದನ್ನು ನೀಡಲಾಗುತ್ತದೆ.
- ಆ ವ್ಯಕ್ತಿಯು ಅಂತರರಾಷ್ಟ್ರೀಯ ನ್ಯಾಯಮಂಡಳಿಯ ಬೇಕಾಗಿದ್ದಾರೆ ಪಟ್ಟಿಯಲ್ಲಿ ಅಥವಾ ನ್ಯಾಯಾಂಗ ವ್ಯಾಪ್ತಿಯಲ್ಲಿದ್ದಾರೆ.
- ಗ್ರೀನ್ ನೋಟೀಸ್ (ಹಸಿರು ಸೂಚನೆ)
- ವ್ಯಕ್ತಿಯ ಅಪರಾಧ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಲು ಇದನ್ನು ನೀಡಲಾಗುತ್ತದೆ .
- ವ್ಯಕ್ತಿಯು ಸಾರ್ವಜನಿಕ ಸುರಕ್ಷತೆಗೆ ಸಂಭಾವ್ಯ ಬೆದರಿಕೆ ಎಂದು ಪರಿಗಣಿಸಿದರೆ ಇದನ್ನು ನೀಡಲಾಗುತ್ತದೆ.
- ಬ್ಲೂ ನೋಟೀಸ್ (ನೀಲಿ ಸೂಚನೆ)
- ಒಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆಯಲು ಇದನ್ನು ನೀಡಲಾಗುತ್ತದೆ .
- ಎಲ್ಲೋ ನೋಟೀಸ್ (ಹಳದಿ ಸೂಚನೆ)
- ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು. ಒಬ್ಬ ವ್ಯಕ್ತಿಯು ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದಾಗಲೂ ಇದನ್ನು ನೀಡಲಾಗುತ್ತದೆ.
- ಬ್ಲಾಕ್ ನೋಟೀಸ್ (ಕಪ್ಪು ಸೂಚನೆ)
- ಗುರುತಿಸಲಾಗದ ದೇಹಗಳ ಬಗ್ಗೆ ಮಾಹಿತಿ ಪಡೆಯಲು.
- ಆರೆಂಜ್ ನೋಟೀಸ್ (ಕಿತ್ತಳೆ ಸೂಚನೆ)
- ಆಸ್ತಿ ಅಥವಾ ವ್ಯಕ್ತಿಗೆ ಸನ್ನಿಹಿತ ಬೆದರಿಕೆ ಅಥವಾ ಅಪಾಯವನ್ನು ಪ್ರಕ್ರಿಯೆಗೊಳಿಸಲು ಇದನ್ನು ನೀಡಲಾಗುತ್ತದೆ .
- ಪರ್ಪಲ್ ನೋಟೀಸ್ (ನೇರಳೆ ಸೂಚನೆ)
- ಕಾರ್ಯವಿಧಾನಗಳು, ಸಾಧನಗಳು ಅಥವಾ ಅಡಗುತಾಣಗಳ ಬಗ್ಗೆ ಮಾಹಿತಿಯನ್ನು ಒದಗಿಸಲು.
ಕೇಂದ್ರೀಯ ತನಿಖಾ ದಳ (CBI) ದ ಬಗ್ಗೆ:
- ಇದನ್ನು 1963 ರಲ್ಲಿ ಗೃಹ ಸಚಿವಾಲಯದ ನಿರ್ಣಯದ ಮೂಲಕ ಸ್ಥಾಪಿಸಲಾಯಿತು.
- ಇದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಆಡಳಿತಾತ್ಮಕ ನಿಯಂತ್ರಣದಲ್ಲಿ ಬರುತ್ತದೆ.
- ಇದನ್ನು ಸಂತಾನಂ ಸಮಿತಿಯ ಶಿಫಾರಸಿನ ಮೇರೆಗೆ ಸ್ಥಾಪಿಸಲಾಯಿತು.
- ಸಿಬಿಐ ಒಂದು ಶಾಸನಬದ್ಧ ಸಂಸ್ಥೆಯಲ್ಲ. ಇದು ತನ್ನ ಅಧಿಕಾರವನ್ನು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (DSPE) ಕಾಯ್ದೆ, 1946 ರಿಂದ ಪಡೆದುಕೊಂಡಿದೆ.
ಕೇಂದ್ರೀಯ ತನಿಖಾ ದಳ (CBI) ದ ಕಾರ್ಯಗಳು:
- ಇದು ಕೇಂದ್ರ ಸರ್ಕಾರದ ಪ್ರಮುಖ ತನಿಖಾ ಸಂಸ್ಥೆಯಾಗಿದೆ.
- ಇದು ಕೇಂದ್ರ ಜಾಗೃತ ಆಯೋಗ ಮತ್ತು ಲೋಕಪಾಲ್‌ಗೆ ಸಹಾಯವನ್ನು ಒದಗಿಸುತ್ತದೆ.
- ಇದು ಭಾರತದಲ್ಲಿನ ನೋಡಲ್ ಪೊಲೀಸ್ ಸಂಸ್ಥೆಯಾಗಿದ್ದು, ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ಪರವಾಗಿ ತನಿಖೆಗಳನ್ನು ಸಂಘಟಿಸುತ್ತದೆ.
ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮೇರು ಯೋಜನೆ
ಸಾಮಾನ್ಯ ಅಧ್ಯಯನ 3/ಮೂಲಸೌಕರ್ಯ
ಸಂದರ್ಭ:
- ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮೇರು ಯೋಜನೆಯ ಅಡಿಯಲ್ಲಿ ನಾಲ್ಕು ಬಹು-ಜಾಡೀಕರಣ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
- ಈ ಯೋಜನೆಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢದಾದ್ಯಂತ ವ್ಯಾಪಿಸಿವೆ, ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 894 ಕಿ.ಮೀ.ಗಳನ್ನು ಸೇರಿಸುತ್ತವೆ.
ಪ್ರಧಾನಮಂತ್ರಿ ಗತಿಶಕ್ತಿಯ ಬಗ್ಗೆ:
- 2021 ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
- ಉದ್ದೇಶ: – ದೇಶದ ಮೂಲಸೌಕರ್ಯವನ್ನು ಹೆಚ್ಚಿಸುವುದು ಮತ್ತು ವಿವಿಧ ವಲಯಗಳಲ್ಲಿ ತಡೆರಹಿತ ಸಂಪರ್ಕವನ್ನು ಉತ್ತೇಜಿಸುವುದು.
- ಮಹತ್ವ: – ಇದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಒಂದು ಪರಿವರ್ತಕ ವಿಧಾನವಾಗಿದ್ದು, ಇದು ಏಳು ಎಂಜಿನ್‌ಗಳಿಂದ ನಡೆಸಲ್ಪಡುತ್ತದೆ – ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಾಮೂಹಿಕ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ.
- ಅನುಷ್ಠಾನ: – ಪ್ರಧಾನಮಂತ್ರಿ ಗತಿ ಶಕ್ತಿಯು ಭಾರತ ಮಾಲಾ, ಸಾಗರಮಾಲಾ, ಒಳನಾಡಿನ ಜಲಮಾರ್ಗಗಳು, ಒಣ/ಭೂ ಬಂದರುಗಳು, ಉಡಾನ್ ಮುಂತಾದ ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯ ಯೋಜನೆಗಳನ್ನು ಸಂಯೋಜಿಸುತ್ತದೆ.



ನಿಮ್ಮದೊಂದು ಉತ್ತರ