ಇವ ನಮ್ಮವ ಇವ ನಮ್ಮವ ಮಸೂದೆ
ಇದೀಗ ಸುದ್ದಿಯಲ್ಲಿದೆ:
- ‘ಇವ ನಮ್ಮವ ಇವ ನಮ್ಮವ ಮಸೂದೆ’ಯನ್ನು ಮಾರ್ಚ್ 2026 ರಲ್ಲಿ ಕರ್ನಾಟಕ ರಾಜ್ಯ ಶಾಸಕಾಂಗವು ಅಂಗೀಕರಿಸಿದ್ದು, ಇದೊಂದು ಐತಿಹಾಸಿಕ ಶಾಸನವಾಗಿದೆ. ಇದನ್ನು ಅಧಿಕೃತವಾಗಿ ‘ಕರ್ನಾಟಕ ವಿವಾಹದ ಆಯ್ಕೆಯ ಸ್ವಾತಂತ್ರ್ಯ ಮತ್ತು ಮರ್ಯಾದೆ ಹಾಗೂ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಕಾಯ್ದೆ, 2026’ ಎಂದು ಕರೆಯಲಾಗುತ್ತದೆ.
ಇವ ನಮ್ಮವ ಇವ ನಮ್ಮವ ಮಸೂದೆಯ ಬಗ್ಗೆ:
- ಕಾರ್ಯಾದೇಶ:- “ಮರ್ಯಾದೆ ಹತ್ಯೆಗಳನ್ನು” ಸಂಪೂರ್ಣವಾಗಿ ತಡೆಗಟ್ಟುವುದು ಇದರ ಪ್ರಮುಖ ಗುರಿಯಾಗಿದೆ. ಅಲ್ಲದೆ, ಯಾವುದೇ ಕುಟುಂಬ, ಜಾತಿ ಅಥವಾ ಸಮುದಾಯದ ಮುಖಂಡರ ಹಸ್ತಕ್ಷೇಪವಿಲ್ಲದೆ ವಯಸ್ಕರು ತಮ್ಮ ಜೀವನ ಸಂಗಾತಿಯನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ರಕ್ಷಿಸಲು ಇದನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ.
ಈ ಮಸೂದೆಯ ಪ್ರಮುಖ ಲಕ್ಷಣಗಳು:
- ಆಯ್ಕೆಯ ಹಕ್ಕು:- ಪ್ರತಿಯೊಬ್ಬ ವಯಸ್ಕ ಪ್ರಜೆಯು ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ ಎಂದು ಈ ಮಸೂದೆ ಖಾತರಿಪಡಿಸುತ್ತದೆ. ಈ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕುಟುಂಬದ ಸದಸ್ಯರಿಗೆ, ಜಾತಿ ಗುಂಪಿಗೆ ಅಥವಾ ಸಮುದಾಯದ ಮುಖಂಡರಿಗೆ ಅಧಿಕಾರವಿಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ.
- ಅಪರಾಧಗಳ ವಿಸ್ತೃತ ವ್ಯಾಖ್ಯಾನ:- ಕೇವಲ ದೈಹಿಕ ಹಿಂಸೆಯನ್ನಷ್ಟೇ ಅಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ಮಾನಸಿಕ ಹಿಂಸೆ (ಉದಾಹರಣೆಗೆ: ಜೀವಂತ ವ್ಯಕ್ತಿಗಳಿಗೆ ಅಂತಿಮ ಸಂಸ್ಕಾರ ಮಾಡುವುದು) ಹಾಗೂ ಪ್ರೇಮಿಗಳನ್ನು ಬಲವಂತವಾಗಿ ಬೇರ್ಪಡಿಸುವಿಕೆಯನ್ನು ಸಹ ಈ ಕಾನೂನು ಅಪರಾಧವೆಂದು ಪರಿಗಣಿಸುತ್ತದೆ.
- ಇವ ನಮ್ಮವ ಜಿಲ್ಲಾ ಮಟ್ಟದ ವೇದಿಕೆ/ಸಮಿತಿ:- ಇಂತಹ ವಿವಾಹಗಳನ್ನು ನೆರವೇರಿಸಲು ಮತ್ತು ಆಪ್ತ ಸಮಾಲೋಚನೆ ಒದಗಿಸಲು ನಿವೃತ್ತ ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳನ್ನು ಈ ವೇದಿಕೆಯು ಒಳಗೊಂಡಿದೆ.
- ಪ್ರತಿ ಜಿಲ್ಲೆಗಳಲ್ಲಿ ಸುರಕ್ಷಿತ ಮನೆಗಳು ಮತ್ತು 24/7 ಸಹಾಯವಾಣಿಗಳು:- ಬೆದರಿಕೆ ಎದುರಿಸುತ್ತಿರುವ ಜೋಡಿಗಳಿಗಾಗಿ ಪ್ರತಿಯೊಂದು ಜಿಲ್ಲೆಯಲ್ಲೂ 24/7 ಸಹಾಯವಾಣಿಗಳನ್ನು ಮತ್ತು ರಾಜ್ಯ ಸರ್ಕಾರದ ಧನಸಹಾಯದೊಂದಿಗೆ ನಡೆಯುವ ಸುರಕ್ಷಿತ ಮನೆಗಳನ್ನು ಸ್ಥಾಪಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ.
- ತ್ವರಿತ ಸ್ಪಂದನೆ:- ದೂರು ಸ್ವೀಕರಿಸಿದ ಕೇವಲ 6 ಗಂಟೆಗಳ ಒಳಗೆ ಪೊಲೀಸರು ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕಡ್ಡಾಯವಾಗಿದೆ.
- ಸಂಜ್ಞೇಯ (Cognizable) ಮತ್ತು ಜಾಮೀನು ರಹಿತ ದಂಡನೆಗಳು:- ಮರ್ಯಾದಾ ಹತ್ಯೆಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅದೇ ರೀತಿ ಗಾಯಗೊಳಿಸುವ ಪ್ರಕರಣಗಳಲ್ಲಿ 2 ರಿಂದ 3 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ.



ನಿಮ್ಮದೊಂದು ಉತ್ತರ