ಎಂ-ವಾಹನ್ (mVahan) ಫಿಟ್‌ನೆಸ್ ಆ್ಯಪ್
ಇದೀಗ ಸುದ್ದಿಯಲ್ಲಿದೆ:
- ರಾಜ್ಯದಲ್ಲಿ ನೋಂದಾಯಿತವಾಗಿರುವ ಮತ್ತು ಕಾರ್ಯಾಚರಣೆ ನಡೆಸುತ್ತಿರುವ ವಾಣಿಜ್ಯ ವಾಹನಗಳಿಗೆ ಯೋಗ್ಯತಾ ಪ್ರಮಾಣಪತ್ರಗಳನ್ನು (FC) ನೀಡುವುದರಲ್ಲಿ ಆಗುವ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ, ಕರ್ನಾಟಕ ಸಾರಿಗೆ ಇಲಾಖೆಯು ಜಿಯೋ-ಫೆನ್ಸಿಂಗ್ ಆಧಾರಿತ ಎಂ-ವಾಹನ್ (mVahan) ಫಿಟ್‌ನೆಸ್ ಮೊಬೈಲ್ ಆ್ಯಪ್ ಅನ್ನು ಎಲ್ಲಾ 66 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಪ್ರಾರಂಭಿಸಿದೆ.
ಎಂ-ಪರಿವಾಹನ್ (mParivahan) ಫಿಟ್‌ನೆಸ್ ಆ್ಯಪ್:
- ಇದನ್ನು “ವಾಹನ್ ಆ್ಯಪ್” ಎಂತಲೂ ಕರೆಯಲಾಗುತ್ತದೆ.
- ಇದು ವಾಹನ ಮತ್ತು ಚಾಲಕ ಸೇವೆಗಳಿಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ.
- ಹಿಂದೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡಿ ಪಡೆಯಬೇಕಾಗಿದ್ದ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಇದು ಸುಲಭ ವೇದಿಕೆಯನ್ನು ಒದಗಿಸುತ್ತದೆ.
ಈ ಆ್ಯಪ್ ನ ಪ್ರಮುಖ ಲಕ್ಷಣಗಳು:
- ಡಿಜಿಟಲ್ ದಾಖಲೆಗಳು:- ನಾಗರಿಕರು ತಮ್ಮ ಫೋನ್‌ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರ (RC) ಮತ್ತು ಚಾಲನಾ ಪರವಾನಗಿಯ (DL) ಕಾನೂನುಬದ್ಧ ವರ್ಚುವಲ್ ಆವೃತ್ತಿಗಳನ್ನು ಸುಲಭವಾಗಿ ರಚಿಸಬಹುದು ಹಾಗೂ ಕೊಂಡೊಯ್ಯಬಹುದು.
- ವಾಹನ ಹುಡುಕಾಟ:- ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಲೀಕರ ಹೆಸರು, ವಾಹನದ ವಯಸ್ಸು, ಇಂಧನದ ಪ್ರಕಾರ, ವಿಮೆಯ ಮಾನ್ಯತೆ ಮತ್ತು ಫಿಟ್‌ನೆಸ್ ಸ್ಥಿತಿಯಂತಹ ವಿವರಗಳನ್ನು ತಕ್ಷಣವೇ ಪಡೆಯಬಹುದಾಗಿದೆ.
- ಚಲನ್ ಸ್ಥಿತಿ:- ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು (eChallans) ನೇರವಾಗಿ ಆ್ಯಪ್ ಮೂಲಕ ಪರಿಶೀಲಿಸಬಹುದು ಮತ್ತು ಪಾವತಿಸಬಹುದು.
ಸುರಕ್ಷತೆ ಮತ್ತು ಪರಿಶೀಲನೆ:- ಹಳೆಯ ವಾಹನಗಳನ್ನು ಖರೀದಿಸುವ ಮೊದಲು ಅವುಗಳ ವಿವರಗಳನ್ನು ಪರಿಶೀಲಿಸಲು ಅಥವಾ ಅಪಘಾತ ಮತ್ತು ಕಳ್ಳತನದ ಸಂದರ್ಭಗಳಲ್ಲಿ ವಾಹನಗಳನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ.



ನಿಮ್ಮದೊಂದು ಉತ್ತರ