ಆಕ್ಟಿವಿಟಿ ಪಾಯಿಂಟ್ ಟ್ರ್ಯಾಕಿಂಗ್ ಸಿಸ್ಟಮ್ (APTS) ಮೊಬೈಲ್ ಅಪ್ಲಿಕೇಶನ್
ಇದೀಗ ಸುದ್ದಿಯಲ್ಲಿದೆ:
- ವಿದ್ಯಾರ್ಥಿಗಳು ಅಂಕಗಳಿಕೆಗಾಗಿ ಮಾಡುವ ವಂಚನೆಯನ್ನು ತಡೆಗಟ್ಟಲು, ಚಟುವಟಿಕೆಯ ಅಂಕಗಳನ್ನು ಮೇಲ್ವಿಚಾರಣೆ ಮಾಡುವ ಆ್ಯಪ್ ಅನ್ನು ವಿಶ್ವಶ್ವೇರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಾರಂಭಿಸಲಿದೆ.
‘APTS ಮೊಬೈಲ್ ಅಪ್ಲಿಕೇಶನ್’ ಬಗ್ಗೆ:
- ಅಭಿವೃದ್ಧಿಪಡಿಸಿದವರು:- ಇದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (VTU) ಅಭಿವೃದ್ಧಿಪಡಿಸಿದೆ.
- ಉದ್ದೇಶ:– ವಿದ್ಯಾರ್ಥಿಗಳು ಚಟುವಟಿಕೆ ಅಂಕಗಳನ್ನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸುವ ಅನೈತಿಕ ಅಭ್ಯಾಸವನ್ನು ತಡೆಯುವುದು, ಪಾರದರ್ಶಕತೆಯನ್ನು ಖಚಿತಪಡಿಸುವುದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನೈಜವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ‘ಆಕ್ಟಿವಿಟಿ ಪಾಯಿಂಟ್ ಟ್ರ್ಯಾಕಿಂಗ್ ಸಿಸ್ಟಮ್’ (APTS) ಮೊಬೈಲ್ ‘ಅಪ್ಲಿಕೇಶನ್’ನ ಉದ್ದೇಶವಾಗಿದೆ.
- ಗುರಿ ಗುಂಪು:– ಎಐಸಿಟಿಇ (AICTE) 2018-19 ರಿಂದ ಕಡ್ಡಾಯಗೊಳಿಸಿರುವಂತೆ, ಪದವಿಗೆ ಅರ್ಹತೆ ಪಡೆಯಲು ನಾಲ್ಕು ವರ್ಷಗಳ ಕೋರ್ಸ್‌ನಲ್ಲಿ ಕನಿಷ್ಠ 100ಕ್ಕೆ 75 ಚಟುವಟಿಕೆ ಅಂಕಗಳನ್ನು ಗಳಿಸಬೇಕಾದ ವಿಟಿಯು ಅಡಿಯಲ್ಲಿರುವ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ.
- ಕಾರ್ಯವಿಧಾನ:- ಈ ವ್ಯವಸ್ಥೆಯು ಕಡ್ಡಾಯ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ವಿದ್ಯಾರ್ಥಿಗಳು ತಾವು ಅನುಮೋದಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿ ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳನ್ನು ಇದರಲ್ಲಿ ಅಪ್‌ಲೋಡ್ ಮಾಡಬೇಕು.
- ಉದ್ದೇಶಗಳು:– ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಸಾಮರ್ಥ್ಯಗಳು, ಸಾಮಾಜಿಕ ಬದ್ಧತೆ, ಮೃದು ಕೌಶಲ್ಯಗಳು, ನಾಯಕತ್ವ ಗುಣಗಳು ಮತ್ತು ತಂಡಮನೋಭಾವವನ್ನು ಬೆಳೆಸಲು ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
- ಪ್ರಮುಖ ಚಟುವಟಿಕೆಗಳು:- ಅರ್ಹ ಚಟುವಟಿಕೆಗಳಲ್ಲಿ ಹಳ್ಳಿಯ ಆದಾಯ ಹೆಚ್ಚಳಕ್ಕೆ ವ್ಯಾಪಾರ ಪ್ರಸ್ತಾಪಗಳನ್ನು ಸಿದ್ಧಪಡಿಸುವುದು, ಸುಸ್ಥಿರ ನೀರು ನಿರ್ವಹಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಪ್ರವಾಸೋದ್ಯಮ ಅಥವಾ ಸೂಕ್ತ ತಂತ್ರಜ್ಞಾನಗಳನ್ನು ಉತ್ತೇಜಿಸುವುದು, ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಗ್ರಾಮೀಣ ಜನಸಂಖ್ಯೆಗೆ ಕೌಶಲ್ಯ ನೀಡುವುದು ಮತ್ತು ಶೇಕಡಾ 100 ರಷ್ಟು ಡಿಜಿಟಲೀಕರಿಸಿದ ಹಣದ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವುದು ಸೇರಿವೆ.



ನಿಮ್ಮದೊಂದು ಉತ್ತರ